ಅಂಗುಲ ಹುಳುವಿನ ಪರಕಾಯಪ್ರವೇಶ - ಎ ಕೆ ರಾಮಾನುಜನ್

3,343 views
Skip to first unread message

Harish Amur

unread,
Oct 21, 2010, 11:19:06 AM10/21/10
to ಸಹಸ್ಪಂದನ
ಅಂಗುಲ ಹುಳುವಿನ ಪರಕಾಯಪ್ರವೇಶ
ಎ ಕೆ ರಾಮಾನುಜನ್
ಸಂಕಲನ: ಹೊಕ್ಕುಳಲ್ಲಿ ಹೂವಿಲ್ಲ

ಅಮೇರಿಕದಲ್ಲಿ ಕೇಳಿದ ಮಕ್ಕಳ ಕತೆ ಒಂದರಲ್ಲಿ
                                                            ಒಂದು ದಿನ
                  ಗುಬ್ಬಚ್ಚಿ ಬೇರೆಲ್ಲೋ ನೋಡುತ್ತಿದ್ದಾಗ
                  ಅಂಗುಲದ ಹುಳ ಕಣ್ಣಿಗೆ ಬಿತ್ತು.

ಒಂದಂಗುಲದ ಹುಳ-
ಹಸಿಮೈ ಹಸಿರು,
ಮೂಗು ಕೆಂಪು ಮೂಗುತಿ.
                                        ಮುಖ ಒತ್ತಿ

ಬೆನ್ನೆಳೆದು
                        ಮಾ
               ಕ                 ನಾ
                                            ಗಿ ಮೈ ಮಡಿಸಿ
ಮೈಯುದ್ದದ ಹೆಜ್ಜೆ ಇಟ್ಟು ಇಟ್ಟು
ನೆಲ ಅಳೆದು ಸುರಿದು ಅಂಗುಲ ಅಂಗುಲ ಅಂಗುಲ
ಸದ್ದಿಲ್ಲದೆ ಗುರುತಿಲ್ಲದೆ ಹೆಸರಿಲ್ಲದೆ ಮುಲ ಮುಲ ಮುಲ
ಹೋಗುವ ಹುಳು
ಅಂಗುಲದ ಹುಳು.

                            ನೋಡಿತು ಗುಬ್ಬಚ್ಚಿ, ಅದಕ್ಕೆ ಹಸಿವು
ಬೇರೆ, ಇನ್ನೇನು ಕೊಕ್ಕಿನಲ್ಲಿ ಕೊಕ್ಕಿ ಎತ್ತಿ
ನುಂಗಬೇಕು,

ಆಗ ಹುಳ,
                "ತಿಂದು ಬಿಡಬೇಡಿ-
                  ನಾನು ಅಂಗುಲದ ಹುಳ, ಉಪಕಾರಿ.
                  ಪ್ರಪಂಚ ಅಳೆಯುವ ಹುಳ."
                                                                 ಎಂದಿತು.

"ಹಾಗೋ? ಹಾಗಿದ್ದರೆ
ನನ್ನ ಬಾಲ
ಅಳಿ," ಎಂದು ಬಾಲ ತೋರಿಸಿತು ಗುಬ್ಬಚ್ಚಿ.

"ಅದಕ್ಕೇನಂತೆ? ಇದೋ ಅಳೆದೆ.
ಒಂದು ಎರಡು ಮೂರು ನಾಲ್ಕು ಐದು
ಐದಂಗುಲ ನಿಮ್ಮ ಬಾಲ."

"ನೋಡಿದೆಯಾ? ಗೊತ್ತೇ ಇರಲಿಲ್ಲ.
ನನ್ನ ಬಾಲ 
ಐದಂಗುಲ! ಐದು, ಒಂದಲ್ಲ ಎರಡಲ್ಲ
ಮೂರಲ್ಲ ನಾಲ್ಕಲ್ಲ, ಐದು!"

ಎಂದಿದ್ದೇ ಅಳೆಸಿಕೊಂಡ ಗುಬ್ಬಚ್ಚಿ ಏನು ಮಾಡಿತು,
ಹುಳ ಎತ್ತಿ ಹೆಗಲ
ಮೇಲೆ ಕೂರಿಸಿಕೊಂಡು ಮಿಕ್ಕ ಹಕ್ಕಿಗಳ ಹತ್ತಿರ ಹಾರಿಹೋಯಿತು.
ಅವಕ್ಕೆಲ್ಲ ಅಳೆಯುವುದು ಬೇಕಾದಷ್ಟಿತ್ತು.

                                                ಹುಳದ ಅಳತೆ
ಯ ಜೀವನ ಶುರುವಾಯಿತು:
                                           ಅದು ಹಂಸದ ಕತ್ತಳೆಯಿತು.
                                           ಜಪಾನೀ ಹಾಲಕ್ಕಿಯ ಮೂಗಳೆಯಿತು.
                                           ಅಮೇರಿಕನ್ ಕೊಕ್ಕರೆಯ ಎತ್ತಿದ ಕಾಲ-
              ಳೆಯಿತು. ಯಾವುದೋ ಕಿತ್ತಳೆ
              ಬಣ್ಣದ ಪಕ್ಷಿ, "ನನ್ನ ನಾಲ-
              ಗೆ ಅಳಿ" ಅಂದಾಗ ಹೆದರಿ
                                                      "ನಿನ್ನ ನಾಲಗೆಗೆ
              ಹುಳ ಬೀಳ" ಎಂದು ಒಳಗೊಳಗೆ ಶಪಿಸಿ
              ಬೆವತು, ಗಂಟಲು ಮೊದಲು ಮಾಡಿ ನಾಲಗೆ
              ಯ ತೊಟ್ಟಿಕ್ಕುವ ತುದಿ
              ವರೆಗೂ ಅವಸರವಸರವಾಗಿ ಅಂಗುಲ ಅಂಗುಲ ಅಂಗುಲ
              ಅಳೆದು ಬದುಕಿಕೊಂಡಿತು ಹುಳ.

ಹೀಗೆ ಪೆಲಿಕನ್ ಕೊಕ್ಕು.
ನವಿಲಿನ ಗರಿ. ಮರುಕುಟಕದ
ಕಿರೀಟದ ಪಟ್ಟೆ. ಮುದಿಗೂಬೆ
ಯ ಗರಿ ಉದುರಿದ ಹೊಟ್ಟೆ. ಎಷ್ಟೋ ಹೆಸರಿ
ಲ್ಲದ ಪುಕ್ಕ, ಪುಸ್ತಕ ಹೆಸರಿನ ವಿಜಾತಿ ಶುಕ ಪಿಕ
ಗಳ ಎದೆ, ಮುಖ,
                            ನೆಲದವರಾರೂ ಕಾಣದ
ಪಕ್ಷಿಯೋನಿ ಪಕ್ಷಿಲಿಂಗ,
ನಾಚಿಕೆ ಇಲ್ಲದ ನಾಚಿಕೆ ಅಂಗ
                                         ಎಲ್ಲ ಹೊಕ್ಕು ನೋಡಿ
ಪರಕಾಯ ಪ್ರವೇಶ ಮಾಡಿ
                                          ಅಳೆದು ಅಳೆದು
ಕೂಡಿ ಕಳೆದು ಸುಸ್ತಾಯಿತು ಪಾಪ
ಷಂಡ ಹುಳು.

                                           ಒಂದು ದಿನ
ಅಲ್ಲಿಗೆ ಕೋಗಿಲೆ ಬಂತು.
                                           "ಏ ನನ್ನ ಹಾಡೆ
ಷ್ಟುದ್ದ? ಅಳೆದು ಹೇಳು" ಎಂತು.
                                            ಅಂಗುಲದ ಹುಳ ಬೆಚ್ಚಿ,
"ಬಾಲ ಅಳೆಯುತ್ತೇನೆ, ಮೂಗು ಮೂತಿ ಕಾಲು ಕೈ
ಏನು ಬೇಕೋ ಹೇಳಿ ಅಳೆಯುತ್ತೇನೆ. ಸಂಕೋಚ
ವಿಲ್ಲದೆ ಹೇಳಿ, ಏನು ಬೇಕಾದರೂ ತೋರಿಸಿ, ಸಾಷ್ಟಾಂಗ ಬಿದ್ದು
ಅಳೆಯುತ್ತೇನೆ. ಆದರೆ, ಹಾಡು? ಅದು
ಅಳೆಯುವುದಕ್ಕೆ ಬರುವುದಿಲ್ಲ." ಎಂದಿತು.

"ಅಳೆಯುತ್ತೀಯೋ? ಗಬಕಾಯಿಸಲೋ?
ಚಂಡಾಲ!" ಎಂದು ಚಕಮಕ ಕೊಕ್ಕು ಮಸೆಯಿತು ಕೋಗಿಲೆ.

"ಹಾಗೆ ಕೋಪ ಮಾಡಿಕೊಳ್ಳಬೇಡಿ.
ಆಗಲಿ. ಅಳೆಯುತ್ತೇನೆ. ನೀವು ಹಾಡಿ," ಎಂದು
ಒಪ್ಪಿಕೊಂಡಿತು ಹುಳ, ಮೈಯೆಲ್ಲ ನಾಡಿ ಡವಡವ ಬಡಿದು.
ಕೋಗಿಲೆ ಕೆಮ್ಮಿ ಕ್ಯಾಕರಿಸಿ
ಕಫ ಉಗಿದು
                    ಮೂಗೆತ್ತಿ
ಆಕಾಶದವಕಾಶದಲ್ಲಿ ದನಿ ಎತ್ತಿ ಹಾಡಿತು.

ಕೋಗಿಲೆ ಹಾಡಿತು :
ಹುಳ ಅಳೆಯಿತು,
                             ಅಂಗುಲ ಅಂಗುಲ ಅಂಗುಲ
ಮುಖವೊತ್ತಿ ಮೈಯೆತ್ತಿ ಹತ್ತಿ ಇಳಿದು ಹೊಳೆದು ಸುಳಿದು ಒತ್ತಿ ಎತ್ತಿ
ಉಂಗುರ ಗುಂಗುರು ಉಂಗುರದೊಳಗೇ ತೂರಿ ತೂರಿ ಅಪ್ಪಿ ತಪ್ಪಿ
ಅಂಗುಲ ಅಂಗುಲ ಅಂಗುಲ ಅಳೆಯಿತು.
                                                       ಅಳೆದು ಅಳೆದು
ಮರಗಿಡದ ಕಾಡ ನಡುವೆ ಹಾಡು ಮುಗಿಯುವುದರೊಳಗೆ ಸದ್ದಿಲ್ಲದೆ
ಗುರುತಿಲ್ಲದೆ

                  ಹೆಸರಿಲ್ಲದೆ

                                 ಕಣ್ಮರೆಯಾಯಿತು.

geetha keshav

unread,
Oct 21, 2010, 11:39:32 PM10/21/10
to sahasp...@googlegroups.com
ನಮಸ್ಕಾರ ಹರೀಶ್.

ಹ ಹ್ಹ ಹ್ಹಾ......ಬಹಳ ಚೆನ್ನಾಗಿದೆ.

2010/10/21 Harish Amur <haris...@gmail.com>
--
You received this message because you are subscribed to the Google Groups "ಸಹಸ್ಪಂದನ" group.
To post to this group, send email to sahasp...@googlegroups.com.
To unsubscribe from this group, send email to sahaspandana...@googlegroups.com.
For more options, visit this group at http://groups.google.com/group/sahaspandana?hl=kn.

Guru Prasad

unread,
Oct 25, 2010, 2:12:34 AM10/25/10
to sahasp...@googlegroups.com

ಗೆಳೆಯರೇ ನಮಸ್ಕಾರ..

ಎ. ಕೆ. ರಾಮಾನುಜನ್ ನೆನಪಿನ ಸಂಪುಟದಲ್ಲಿ (ಸಂಪಾದಕ: ಟಿ.ಪಿ. ಅಶೋಕ) ಪಿ. ಶ್ರೀನಿವಾಸ ರಾವ್ ಅವರು "ವೈವಿಧ್ಯಮಯ ವ್ಯಕ್ತಿತ್ವ - ಅನನ್ಯ ಪ್ರತಿಭೆ" ಎಂಬ ಲೇಖನದಲ್ಲಿ ’ಅಂಗುಲ ಹುಳುವಿನ ಪರಕಾಯ ಪ್ರವೇಶ"ದ ಬಗ್ಗೆ ಕೆಲವು ಸಾಲುಗಳನ್ನು ಬರೆಯುತ್ತಾವೆ. ಆ ಸಾಲುಗಳನ್ನೇ ನಾನಿಲ್ಲಿ ನಕಲಿಸಿದ್ದೇನೆ. ಓದಿಲ್ಲದೇ ಇದ್ದವರಿಗೆ ಉಪಯೋಗವಾಗಬಹುದೇನೋ!

_____________

ರಾಮಾನುಜನ್ನರ ಮೊದಲನೇ ಕನ್ನಡ ಕವನಸಂಕಲನ, ಹೊಕ್ಕುಳಲ್ಲಿ ಹೂವಿಲ್ಲ (೧೯೬೯). ಇದರಲ್ಲಿ ಪ್ರಕಟವಾಗಿರುವ "ಅಂಗುಲ ಹುಳುವಿನ ಪರಕಾಯ ಪ್ರವೇಶ" ಒಳ್ಳೆಯ ಕವನವಷ್ಟೇ ಅಲ್ಲ, ವಸ್ತು ಮತ್ತು ತಂತ್ರದ ದೃಷ್ಟಿಯಿಂದ ಈ ಕವಿಯನ್ನು ಪ್ರತಿನಿಧಿಸುತ್ತದೆ. ಈ ಪದ್ಯದ ಈ ಕೆಳಗಿನ ಕೆಲವು ಸಾಲುಗಳನ್ನು ಓದಿದರಷ್ಟೇ ಸಾಲದು. ನೋಡಲೂ ಬೇಕೆ:

 

"ಅಮೇರಿಕದಲ್ಲಿ

ಕೇಳಿದ ಮಕ್ಕಳ ಕತೆ ಒಂದರಲ್ಲಿ

                                     ಒಂದು

ದಿನ

           ಗುಬ್ಬಚ್ಚಿ

ಬೇರೆಲ್ಲೋ ನೋಡುತ್ತಿದ್ದಾಗ

                  ಅಂಗುಲದ

ಹುಳ ಕಣ್ಣಿಗೆ ಬಿತ್ತು

                           ಒಂದಂಗುಲದ

ಹುಳ

                               ಹಸಿಮೈ

ಹಸಿರು,

                     ಮೂಗು

ಕೆಂಪು ಮೂಗುತಿ.

                                    ಮುಖ

ಒತ್ತಿ

                                    ಬೆನ್ನೆಳೆದು

                                   ಮಾ

                        ಕ

                         ನಾ

                              ಗಿ

ಮೈ ಮಡಿಸಿ."

 

ಇದು ಹೀಗೇ ಪ್ರಿಂಟಾಗಿರುವುದು. ಇಲ್ಲಿ ರಾಮಾನುಜನ್ನರ ಮುಖ್ಯ ಕಾವ್ಯಾಸ್ತ್ರಗಳೆಲ್ಲ ಇವೆ. ಗಿಡ್ಡ, ಉದ್ದ, ಸಾಮಾನ್ಯ ಇತ್ಯಾದಿ ಸಾಲುಗಳು. ಸ್ಪಷ್ಟ, ನಿಖರವಾದ ಚಿತ್ರಗಳು, ಕತೆ ಹೇಳುವ ಮಾತಾಡುವ ಶೈಲಿ, ಪದ ವಿಭಜನೆ, ಒಂದಕ್ಷರದ ಸಾಲು, ಎರಡಕ್ಷರದ ಇನ್ನೊಂದು , ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಅರ್ಥಕ್ಕೋಸ್ಕರ ಕುಪ್ಪಳಿಸಬೇಕಾದ ಅಗತ್ಯ. ಓದುಗ ಓದುವ ರೀತಿಯನ್ನು ಪದ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಅಗತ್ಯ. (ಇದನ್ನು ಅಭ್ಯಾಸಮಾಡಬೇಕಾಗಬಹುದು). ಜನ ಕ್ಷುಲ್ಲಕವೆಂದು ಉದಾಸೀನ ತೋರಿಸುವಂಥ ಸಣ್ಣ ವಸ್ತು. ಮಹಾ ರಾಜಕೀಯವಲ್ಲ. ಆಧ್ಯಾತ್ಮವಲ್ಲ. ಈ ಪದ್ಯದಲ್ಲಿ ಇರುವುದು ಏನು ಎನ್ನುವುದು ಎಷ್ಟು ಮುಖ್ಯವೋ, ರಾಮಾನುಜನ್ ಏನೇನು ಬಿಟ್ಟುಬಿಟ್ಟಿದ್ದಾರೆ ಎನ್ನುವುದೂ ಅಷ್ಟೇ ಮುಖ್ಯ ಎನ್ನಿಸುವುದು. ಇದೆಲ್ಲಾ ಪಕ್ಕಾ ರಾಮಾನುಜನ್.

 

ಅಮೆರಿಕದ ಕವಿ ಇ.ಇ. ಕಮಿಂಗ್ಸ್ ನೆನಪಿಗೆ ತರುವ ಈ ಕೆಳಗಿನ ಸಾಲುಗಳನ್ನು ಓದುಗರು ತಮ್ಮ ಮನಸ್ಸಿನಲ್ಲಿ ಸಾದಾ ಕನ್ನಡ ಸ್ವರೂಪಕ್ಕೆ ತಿರುಗಿಸಿಕೊಳ್ಳಬೇಕು.

      ಮಾ

"ಕ            ನಾ ಗಿ ಮೈಮಡಿಸಿ".

"ಕಮಾನಾಗಿ ಮೈಮಡಿಸಿ" - ಕಮಾನಿನಂತೆಯೇ ಕಾಣುವ ಸಾಲುಗಲನ್ನು ಈ ರೀತಿ ಮತ್ತೆ ಬರೆದಾಗ ಅರ್ಥವಾಗುತ್ತದೆ. ಕವನದಲ್ಲಿ ಮುಂದೆ, ಈ ಅಂಗುಲ ಹುಳು, ತನ್ನನ್ನು ತಿನ್ನುವ ಬೇಟೆಗಾರ ಪ್ರಾಣಿ ಪಕ್ಷಿಗಳಿಂದ, ತಾನು ಅಳೆಯುವ ಕೆಲಸ ಮಾಡುವವನು ಎಂದು ಉಪಾಯ ಉಪಯೋಗಿಸಿ, ತನ್ನ ಜೀವ ಉಳಿಸಿಕೊಂಡು, ಯಾರು ಯಾವುದನ್ನು ಅಳೆಯಲು ಕರೆದರೂ ಹೋಗಿ ಅಳೆಯುತ್ತದೆ. ಈ ಅಳೆಯುವಿಕೆ ರಾಮಾನುಜನ್ನರ ಕಲ್ಪನೆಯನ್ನು ಕೆರಳಿಸುವುದರಿಂದ ಪದ್ಯ ನಮ್ಮನ್ನು ಅನೇಕ ಸೋಜಿಗ ಸ್ಥಳಗಳಿಗೆ ಕರೆದೊಯ್ಯುತ್ತದೆ.

 

"ನೆಲದವರಾರೂ

ಕಾಣದ

ಪಕ್ಷಿಯೋನಿ

ಪಕ್ಷಿಲಿಂಗ,

ನಾಚಿಕೆ

ಇಲ್ಲದ ನಾಚಿಕೆ ಅಂಗ

ಎಲ್ಲ

ಹೊಕ್ಕು ನೋಡಿ

ಪರಕಾಯ

ಪ್ರವೇಶ ಮಾಡಿ

ಅಳೆದು

ಅಳೆದು

ಕೂಡಿ

ಕಳೆದು ಸುಸ್ತಾಯಿತು ಪಾಪ

ಷಂಡ

ಹುಳು."

 

ರಾಮಾನುಜನ್ನರ ಕಲ್ಪನೆ ನಮ್ಮನ್ನು ರಂಜಿಸುತ್ತದೆ. ಪದ್ಯದ ವ್ಯಾಪ್ತಿ ಬೆಳೆಸುತ್ತದೆ. ಕೊನೆಗೆ ಒಂದು ಕೋಗಿಲೆ ಅಂಗುಲ ಹುಳುವನ್ನು ಹೆದರಿಸಿ ತನ್ನ ಹಾಡನ್ನು ಅಳೆಯಲು ಆಜ್ಞಾಪಿಸುತ್ತದೆ. ಪದ್ಯಕ್ಕೆ ಮತ್ತು ಅಂಗುಲ ಹುಳಕ್ಕೆ ಬರುವ ಕೊನೆ ಹೀಗೆ:

 

ಅಂಗುಲ

ಅಂಗುಲ ಅಂಗುಲ ಅಳೆಯಿತು.

ಅಳೆದು

ಅಳೆದು

ಮರಗಿಡದ

ಕಾಡ ನಡುವೆ ಹಾಡು

ಮುಗಿಯುವುದರೊಳಗೆ

ಸದ್ದಿಲ್ಲದೆ

ಗುರುತಿಲ್ಲದೆ

ಹೆಸರಿಲ್ಲದೆ

ಕಣ್ಮರೆಯಾಯಿತು

.

 

ಪ್ರತಿಮೆಗಳನ್ನು ಯಥೇಚ್ಛವಾಗಿ ಉಪಯೋಗಿಸುವ ಈ ಕವನ ನಮ್ಮನ್ನು ಅಂಗುಲ ಅಳೆಯುವ ಅಂಗುಲ ಹುಳುವನ್ನು, ಅದರ ಅಲೆದಾಟ, ಪರದಾಟವನ್ನು ಹಾಗೂ ಅದರ ಅಂತರ್ಧಾನವನ್ನು ಅನೇಕ ರೀತಿ ಅರ್ಥೈಸಲು ಪ್ರೇರಿಪಿಸುತ್ತದೆ. ಪರದೇಶವಾಸಿ, ಸೃಜನಶೀಲ ಸಾಹಿತಿಯೊಬ್ಬನ ಅಲ್ಲಿ ಇಲ್ಲಿಯ ಬದುಕಿಗೆ ಈ ಕವನ ಒಂದು ಸಂಕೇತವೆಂದು ಪರಿಗಣಿಸಬಹುದೇ? "ಹೆಸರಿಲ್ಲದೆ" ಎನ್ನುವುದನ್ನು ಬಿಟ್ಟುಬಿಟ್ಟರೆ - ರಾಮಾನುಜನ್ ಬೇಕಾದಷ್ಟು ಹೆಸರು ಮಾಡಿದರು ಅದಕ್ಕೆ- ಅಂಗುಲ ಹುಳುವಿನ ಹಾಗೇ ಅಂಗುಲದಿಂದ ಹಿಡಿದು ಸಾವಿರಾರು ಮೈಲು ಪಯಣ ಮಾಡಿದ, ಅನ್ವೇಷಿಸಿದ ರಾಮಾನುಜನ್, ಇನ್ನೂ ಸಾಧನೆ ನಡೆಸುತ್ತಿರುವಾಗಲೇ, ಅಂಗುಲದ ಹುಳುವಿನ ಹಾಗೆಯೇ "ಮರಗಿಡದ ಕಾಡ ನಡುವೆ" "ಕಣ್ಮರೆಯಾದರು" ಎನ್ನಬಹುದೇ? ಕೋಗಿಲೆಯ ಹಾಡನ್ನು ಅಳೆಯಲು ಬೇಕಾದ ಅಮರತ್ವ ಯಾರಿಗೆ ತಾನೇ ಸಾಧ್ಯ?

____________



2010/10/21 Harish Amur <haris...@gmail.com>
--

Shashidhara A R

unread,
Oct 26, 2010, 12:16:10 AM10/26/10
to sahasp...@googlegroups.com
Bahala sogasaagide, Kavana haagoo vishleshane,
Guru Prasad avarige Dhanyavaadagalu
 
Inti
Shashidhara
  


     
    ಗೆಳೆಯರೇ ನಮಸ್ಕಾರ..
    *

     
    ಎ. ಕೆ. ರಾಮಾನುಜನ್ ನೆನಪಿನ ಸಂಪುಟದಲ್ಲಿ (ಸಂಪಾದಕ: ಟಿ.ಪಿ. ಅಶೋಕ) ಪಿ. ಶ್ರೀನಿವಾಸ ರಾವ್
    ಅವರು "ವೈವಿಧ್ಯಮಯ ವ್ಯಕ್ತಿತ್ವ - ಅನನ್ಯ ಪ್ರತಿಭೆ" ಎಂಬ ಲೇಖನದಲ್ಲಿ ’ಅಂಗುಲ ಹುಳುವಿನ
    ಪರಕಾಯ ಪ್ರವೇಶ"ದ ಬಗ್ಗೆ ಕೆಲವು ಸಾಲುಗಳನ್ನು ಬರೆಯುತ್ತಾವೆ. ಆ ಸಾಲುಗಳನ್ನೇ ನಾನಿಲ್ಲಿ
    ನಕಲಿಸಿದ್ದೇನೆ. ಓದಿಲ್ಲದೇ ಇದ್ದವರಿಗೆ ಉಪಯೋಗವಾಗಬಹುದೇನೋ!
    *

    --
    Reply all
    Reply to author
    Forward
    0 new messages