ಸರಹದ್ದಿನ ಮುಳ್ಳುತಂತಿ.....

1 view
Skip to first unread message

Raghu Venkatachalaiah

unread,
May 2, 2013, 2:30:34 PM5/2/13
to Aditya Prakash, Anjan Kumar, B.A. Padmanayan, Bhushan, chitra lakshman, Ganesh R, Gowri MK, MR. O K Ganesh Babu, ksm vctc, Mahesh Shet, Mahesh Shet, Uma Rao, Nazeer Udin, S.TANTRY, kiran wali, vija...@googlegroups.com
ಸರಹದ್ದಿನ ಮುಳ್ಳುತಂತಿ.....

ಸರಬ್ ಜಿತ್ ಒಂದು ಹೆಸರು. ಈಗ ಉಸಿರಿಲ್ಲದ ಹೆಸರು. ಭಾರತ-ಪಾಕಿಸ್ಥಾನದ ರಾಜತಾಂತ್ರಿಕ ವಲಯದಲ್ಲಿ ಚಲಾವಣೆಯಲ್ಲಿದ್ದ ಈ ಹೆಸರಿನ ಕಡತ ನಾಳೆ ಅಂತಿಮವಾಗಿ ಮುಚ್ಚಿಹೋಗಲಿದೆ. ರಾಜಕಾರಣ ಗೊತ್ತಿಲ್ಲದ ಜನಸಾಮಾನ್ಯರನ್ನು ಸರಹದ್ದಿನ ಮುಳ್ಳುತಂತಿ ಒತ್ತಿ ನೋಯಿಸುವುದು ಹೀಗೆ.

ಅದು ಹೆಸರಲ್ಲ, ರಾಜತಾಂತ್ರಿಕ ಚೌಕಾಶಿಗಳ ಲೆಕ್ಕಾಚಾರವಲ್ಲ, ಗೋಸುಂಬೆ ರಾಜಕಾರಣಿಗಳ ಮತಕಾರಕವೂ ಅಲ್ಲ.
ಅದೊಂದು ಜೀವಂತ ವ್ಯಕ್ತಿ! ಹೌದು! ಸರಬ್ ಜಿತ್ ಒಬ್ಬ ಸೋದರ, ಒಬ್ಬ ಮಗ, ಒಬ್ಬ ಪತಿ, ಒಬ್ಬ ತಂದೆ. ಅವನು ಬೇಹುಗಾರನೊ ಅಲ್ಲವೊ, ಮುಗ್ಧನೊ ಅಲ್ಲವೊ..ಇವೆಲ್ಲ ತರ್ಕ, ವಾದ, ಪೂರ್ವೋತ್ತರ ಪಕ್ಷಗಳ ಚಕಮಕಿಗೆ ಹತ್ತಿಯುಂಡೆ ಅಷ್ಟೆ. ನಿಜದಲ್ಲಿ ಅವನೊಬ್ಬ ಸಂವೇದನಗಳಿಗೆ ಪಕ್ಕಾದ ಮನುಷ್ಯ. ಮನುಷ್ಯತ್ವ ಇದ್ದವರು ಇದನ್ನು ಒಪ್ಪುತ್ತಾರೆ.

ಕೊನೆಗೂ ಅವನನ್ನು ಕೊಂದರು. ತಮ್ಮ ಸಂಪ್ರದಾಯದಂತೆ ಇಟ್ಟಿಗೆ ಕಲ್ಲುಗಳಿಂದ ಹೊಡೆದು ಕೊಂದರು. ನಾಳೆ ನಮ್ಮ ಸಂಪ್ರದಾಯದಂತೆ ಎಲ್ಲ ಪಕ್ಷಧುರೀಣರ ಕಣ್ಣೀರಿನೊಂದಿಗೆ, ಸಕಲ ‘ಸರ್ಕಾರೀ ಮರ್ಯಾದೆ’ಗಳೊಂದಿಗೆ ಅವನ ಅಂತ್ಯಸಂಸ್ಕಾರ...

ಸತ್ತದ್ದು ಸರಬ್ ಜಿತ್ ಒಬ್ಬನೇ ಅಲ್ಲ, ನಮ್ಮೊಳಗೂ ಒಬ್ಬ ಸರಬ್ ಜಿತ್ ಇದ್ದಾನೆ. ನಮ್ಮೊಳಗಿನ ಅವನ ಭಾಗ ನಾಳೆ ಮಣ್ಣಾಗಲಿದೆ.

ನಾನವನ ಊರಿಗೆ ಹೋಗಲಾರೆ, ಆದರೆ ಮಧ್ಯಾಹ್ನ ಉಪವಾಸವಿದ್ದು ಅವನಿಗಾಗಿ ನಾಲ್ಕು ಹನಿ ಕಣ್ಣೀರು ಹನಿಸುತ್ತೇನೆ, ನಾನು ನಂಬುವ ದೇವರ ಮುಂದೆ ದೇವರ ದೀಪ ಬೆಳಗುತ್ತೇನೆ, ಅವನ ಮನೆಯ ಕತ್ತಲು ಕರಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಇಪ್ಪತ್ಮೂರು ವರ್ಷದ ಸೆರೆವಾಸದಿಂದ ಅವನನ್ನು ಬಿಡಿಸಲಾರದವರು ಅಂತಿಮವಾಗಿ ಬಿಡುಗಡೆಗೊಂಡವನಿಗೆ ನೀಡಬಹುದಾದ ಕನಿಷ್ಠ ಗೌರವ ಇದು.

Reply all
Reply to author
Forward
0 new messages