ಮತಾಂಧತೆ

0 views
Skip to first unread message

Raghu Venkatachalaiah

unread,
Feb 5, 2013, 1:17:07 PM2/5/13
to Ganesh R, Anjan Kumar, Goutham V Atreya, Bhushan, Ramesha Chinnappa, suryaprak...@gmail.com, vija...@googlegroups.com
ಪ್ರಶ್ನೆ ಮಾಡುವುದನ್ನು ಸಹಿಸದ ಸರ್ಕಾರ ಸರ್ಕಾರವಲ್ಲ ಸರ್ವಾಧಿಕಾರ; ಪ್ರಶ್ನೆ ಮಾಡುವುದನ್ನು ಸಹಿಸದ ಮತ ನಂಬಿಕೆಯಲ್ಲ ಮತಾಂಧತೆ.

       *                            *                             *                                  *                                 *

ಪ್ರತಿಯೊಂದು ಧರ್ಮವೂ ಒಂದು ಸುಶ್ರಾವ್ಯ ಗಾಯನ. ತನ್ನೊಳಗೂ ಹೊರಗೂ ಒಂದೇ ಅನಂತ ಶಕ್ತಿಯ ಇರವನ್ನು ಕಂಡು ಆನಂದದಿಂದ ಹೊಮ್ಮುವ ಗಾಯನ. ವಿಜ್ಞಾನವಾಗಲಿ ಧರ್ಮವಾಗಲಿ ವಿಸ್ಮಯದಿಂದ ಆರಂಭಗೊಂಡು ಮುಗುಳ್ನಗೆಯಲ್ಲಿ ಪರ್ಯವಸಾನ ಹೊಂದುತ್ತದೆ. ಹೀಗೆ ಅನುಭವಿಸುವ ಆನಂದವನ್ನು ಸಂತರು ಹಂಚಿಕೊಂಡದ್ದು ಗಾನದ ಮೂಲಕ, ಸಂಗೀತದ ಮೂಲಕ. ಸಂತ ಫ್ರಾನ್ಸಿಸ್ ಗಳಿಗೆಗೊಮ್ಮೆ ಹಾಡುತ್ತಿದ್ದ, ಅವನಿಗೆ ಪ್ರತಿಯೊಂದು ಜೀವಿಯು, ಪ್ರತಿಯೊಂದು ವಸ್ತುವು ಪ್ರಿಯ ಕ್ರಿಸ್ತನ ನೆನಪು ತರುತ್ತಿತ್ತು. ಸೂಫಿಸಂತರು ಈ ನೆಲದವರೇ.  ಕರ್ನಾಟಕದವನೇ ಆದ ಷರೀಫಜ್ಜ ಹಾಡಿ ಕುಣಿದದ್ದು ನೆನ್ನೆ ಮೊನ್ನೆ. ದಾಸರ ಪದಗಳಿಗೆ ಇಂದಿಗೂ ಗೆಜ್ಜೆಕಟ್ಟುತ್ತೇವೆ. ಇಂತಹ ನಾಡಿನಲ್ಲಿ, ಈ ದೇಶದಲ್ಲಿ ನಾಲ್ಕು ಮಂದಿ ಹೆಣ್ಣುಮಕ್ಕಳು ಹಾಡಿಕೊಂಡದ್ದು ತಪ್ಪು ಎನ್ನುವವರನ್ನು ಏನೆನ್ನಬೇಕು? ಹೈಕಳು ಆಡಿಕೊಂಡು, ಹಾಡಿಕೊಂಡು ಖುಷಿಯಿಂದ ಓಡಾಡುವುದನ್ನು ಸಹಿಸದ ಇವರೆಂಥವರು? ಇಲ್ಲಿರುವಾಗ ಎಲ್ಲರಂತೆ ಬದುಕಬೇಕು, ಇಲ್ಲವೇ ಅಂತಹ ‘ಆದರ್ಶ’ ನೆಲಕ್ಕೆ ವಲಸೆ ಹೋಗಬೇಕು. ಇಲ್ಲಿದ್ದು ಅಲ್ಲಿನ ಕಾನೂನು ಪಾಲಿಸಿ ಎಂದರೆ ಸರ್ಕಾರವೇ ಇಂತಹವರನ್ನು ಬಂಧಿಸಿ ಮಕ್ಕಳು ಹಾಡುವ ಹಕ್ಕನ್ನು ಉಳಿಸಬೇಕು. ಅಂದ ಹಾಗೆ......ನಮ್ಮ ಸಂವಿಧಾನದಲ್ಲಿ ಹಾಡುವ ಹಕ್ಕಿದೆ ಎಂದು ಹೇಳಿದ್ದಾರೆಯೆ ಅಥವಾ ಅದಕ್ಕೂ ನ್ಯಾಯಾಲಯದ ಮೊರೆಹೋಗಬೇಕೆ?

ರಘು ವಿ.
೫ ಫೆಬ್ರವರಿ ೨೦೧೩



Reply all
Reply to author
Forward
0 new messages