ನೆರೆಮನೆ ದೋಸೆಗೆ ಕಾಯಿಹಾಲು ಕಾಸಿ ಕಾದು ಕೂತವರ ಕಥೆ.....!!

4 views
Skip to first unread message

Raghu Venkatachalaiah

unread,
Oct 5, 2012, 7:15:45 AM10/5/12
to Aditya Prakash, Anjan Kumar N., Ganesh R, MR. O K Ganesh Babu, chandramohan s, Venu Gopala, lokesh kayarga, Mahesh Shet, Malliga Rani, neelum...@gmail.com, Rohit Patil, pandurang galagali, tvvenk...@yahoo.com, Usha Ravindra Kavaloor, vija...@googlegroups.com
ನೆರೆಮನೆ ದೋಸೆಗೆ ಕಾಯಿಹಾಲು ಕಾಸಿ ಕಾದು ಕೂತವರ ಕಥೆ.....!!

ಭಾರತವೆಂಬೀ ದೇಶದೊಳ್ ಮನಮೋಹನನೆಂಬ ಪ್ರಧಾನಿಯುಂ ಆಳುತ್ತಿರೆ ಸೋನಿಯಾ ಎಂಬ ಮಹಿಳೆ ಅವನ ಮನವಂ ನಿಯಂತ್ರಿಸುತ್ತಿರೆ ಇತ್ತ ಕರುನಾಟಕದೊಳ್ ಎಡ್ಡಿಯುಂ ಎಡವಟ್ಟು ಮಾಡಿಕೊಂಡು ಕುರ್ಚಿಗಾಗಿ ಕನವರಿಸುತ್ತಿರೆ ಗೌಡರುಂ ಘರ್ಜಿಸುತ್ತಿರೆ ಶೆಟ್ಟರುಂ ಕುರ್ಚಿಯಂ ಅಲಂಕರಿಸಿರೆ ಅತ್ತತ್ತ ಆಳುತೂಕದ ಜೈಲಲಿತೆಯೆಂಬ ಹಿರಿಯ ಮುತ್ತೈದೆ ಬುಲೆಟ್ ಪ್ರೂಫ್ ಸೆರಗೊಡ್ಡಿ ಕಾವೇರಿ ನೀರನಮ್ ಬೇಡಿದಳ್.  ಕರುಣಾನಿಧಿಯುಂ ಕರಿಯ ಕನ್ನಡಕದ ಹಿನ್ನೆಲೆಯಿಂ ದಿಟ್ಟಿಸಿ ನೋಡಿ ಇದೇ ಸುಸಮಯವೆಂದರಿತು ಮನಮೋಹನನಿಗೆ ಒಳಶುಂಠಿಯಂ ನೀಡಿದನ್. ನೋವ ತಡೆಯದೆ ಮನಮೋಹನಂ ಹ ಹ ಹ ಎಂದು ಒಂಭತ್ತು ಬಾರಿ ಕೂಗಿರೆ ತಮಿಳರ್ ಪಾರಡಾ ಪಾರ್ ಒಂಬೋದು ಟಿಎಂಸಿ ತಣ್ಣಿ ಕುಡುತ್ತವಿಟ್ಟಾರ್ ಎಂದು ಬೊಬ್ಬಿರಿಸಿರೆ ಶೆಟ್ಟರ್ ಪಲ್ಕಿರಿದು ಹೊರನಡೆದರ್. ಪಕ್ಷಪಾತದಿಂ ಭಾಜಪದ ಒಳಜಗಳದಿಂ ಕಾವೇರಿ ಕೇಸು ಹಳ್ಳವಂ ಹಿಡಿದು ನೀರು ತಮಿಳುನಾಡು ಪಾಲಾಗಿರೆ ಕರುನಾಡ ಕೃಷಿಕರ್ ಕಂಗೆಟ್ಟು ಕೆರಪಿಡಿದು ಜನನಾಯಕರಂ ಬರಮಾಡಿಕೊಳ್ಳುತ್ತಿರೆ ಅತ್ತ ಕಾವೇರಿಯಂ ಆಶ್ರಯಿಸಿ ಸಹಸ್ರಾರು ಎಕರೆ ಭತ್ತಮಂ ಬೆಳೆದು ಕೇಕೆ ಹಾಕಿದರ್ ತಮಿಳ್ ಕೃಷಿಕರ್.  ಇಂತಪ್ಪ ನೆರೆಮನೆ ದೋಸೆಗೆ ಕಾಯಿಹಾಲು ಕಾಸಿ ಕಾದು ಕೂತವರ ಕಥೆಯಂ ಪೇಳ್ದವರ್ ಕೇಳ್ದವರ್ ಈ ಜನ್ಮದಲ್ಲಿಯೇ ದೋಸೆಯಂ ಕಾಯಿಪಾಲಂ ಪಡೆದು ಕೃತಾರ್ಥರಾಗುವರ್ ಎಂಬಲ್ಲಿಗೆ ಕಥೆಯುಂ ಪೂರ್ಣಗೊಳ್ವುದು.

Raghu V. 5/10/2012
Reply all
Reply to author
Forward
0 new messages