ಮಂಕುತಿಮ್ಮ

2 views
Skip to first unread message

ಶರತ್ ಕೊಟ್ಟದಮನೆ

unread,
Mar 18, 2008, 9:53:52 AM3/18/08
to ವೀರಕನ್ನಡಿಗ
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ ।
ಜೀವನ ಪರೀಕ್ಷೆ ಬಂದಿದಿರು ನಿಲುವನಕ ।।
ಭಾವಮರ್ಮಂಗಳೇಳುವವಾಗ ತಳದಿಂದ ।
ದೇವರೇ ಗತಿಯಾಗ ಮಂಕುತಿಮ್ಮ ।।

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ।
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ।।
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ ।
ಬಿಡಿಗಾಸು ಹೂವಳಗೆ ಮಂಕುತಿಮ್ಮ ।।

ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ ಋತವ ಬಿಡದಿರಲಿ ।।
ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ ।
ಅತಿ ಬೇಡವೆಲ್ಲಿಯುಂ ಮಂಕುತಿಮ್ಮ ।।
Reply all
Reply to author
Forward
0 new messages