ಮಂಕುತಿಮ್ಮ

68 views
Skip to first unread message

ಶರತ್ ಕೊಟ್ಟದಮನೆ

unread,
Mar 5, 2008, 8:40:15 AM3/5/08
to ವೀರಕನ್ನಡಿಗ
ಹೊರಗೆ ಲೋಕಾಸಕ್ತಿ,ಒಳಗೆ ಸಕಲ ವಿರಕ್ತಿ.
ಹೊರಗೆ ಕಾರ್ಯಧ್ಯಾನ,ಒಳಗೆ ಅದರ ಉದಾಸೀನ.
ಹೊರಗೆ ಸಂಸಾರ ಭಾರ,ಒಳಗೆ ಅದರ ತತ್ಸಾರ
ವರ ಯೋಗ ಮಾರ್ಗವಿದು - ಮಂಕತಿಮ್ಮ.

ಎರಡು ಕೋಣೆಯ ಮಾಡು ಎದೆಯ ಆಲಯದೊಳಗೆ
ಹೊರ ಕೋಣೆಯ ಒಳಗೆ ಲೋಗರಾಟವನಾಡು
ವಿರಮಿಸೊಬ್ಬನೆ ನೀನು ಒಳಮನೆಯ ಶಾಂತಿಯಲಿ
ವರ ಯೋಗ ಸೂತ್ರವಿದು - ಮಂಕತಿಮ್ಮ.

ಏನು ಜೀವನಾರ್ಥ? ಏನು ಪ್ರಪಂಚಾರ್ಥ ?
ಏನು ಜೀವ ಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದು ಏನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದರೊಟ್ಟು ಹೆಸರೆ?
ಕಾವಿನೋರ್ವ್ನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು? - ಮಂಕುತಿಮ್ಮ

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು!
ಬಗೆದು ಬಿಡಿಸುವರಾರು ಸೋಜಿಗವನಿದನು?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು?
ಬಗೆ ಬಗೆಯ ಜೀವಗತಿ - ಮಂಕುತಿಮ್ಮ

ಬದುಕಿಗಾರ್ ನಾಯಕರು, ಏಕನೊ ಅನೇಕರೊ?
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ?
ಕುದುರುವುದೆಂತು ಈಯವ್ಯವಸ್ಥೆಯ ಪಾಡು?
ಅದಿಗುದಿಯೆ ಗತಿಯೇನು? - ಮಂಕುತಿಮ್ಮ

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?
ಭ್ರಮಿಪುದೇನಾಗಾಗ ಕರ್ತೃವಿನ ಮನಸು?
ಮಮತೆಯುಳ್ಳವನಾತನಾದೋಡೀ ಜೀವಗಳು
ಶ್ರಮಪಡುವುವೇಕಿಂತು? - ಮಂಕುತಿಮ್ಮ

ಶರತ್ ಕೊಟ್ಟದಮನೆ

unread,
Mar 6, 2008, 8:47:17 AM3/6/08
to ವೀರಕನ್ನಡಿಗ
ಮಾನವರೋ ದಾನವರೋ ಭೂಮಾತೆಯನ್ನು ತಣಿಸೆ
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ?
ಏನು ಹಗೆ! ಏನು ಧಗೆ! ಏನು ಹೊಗೆ? ಯೀ ಧರಣಿ
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ

ಒಂದೆ ಗಗನವ ಕಾಣುತೊಂದೆ ನೆಲವನು ತುಲಿಯು
ತೊಂದೆ ಧ್ಯಾನವನುಣ್ಣುತೊಂದೆ ನೀರ್ಗುರ್ಡಿದು
ಒಂದೆ ಗಾಳಿಯನುಸಿರ್ವ ನರಜಾತಿಯೋಳಗೆಂತು
ಬಂದುದೀ ವೈಷಮ್ಯ ? - ಮಂಕುತಿಮ್ಮ

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು?
ಚಂಡಚತುರೋಪಾಯದಿಂದಲೇನಹುದು?
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು
ಅಂಡಲೆತವಿದೇಕೇನೋ? - ಮಂಕುತಿಮ್ಮ

ಶರತ್ ಕೊಟ್ಟದಮನೆ

unread,
Mar 13, 2008, 9:43:29 AM3/13/08
to ವೀರಕನ್ನಡಿಗ
ಅನುಭವದ ಪಾಲೊಳು ವಿಚಾರಮಂಥನವಾಗೆ ।
ಜನಿಯಿಕುಂ ಜ್ಞಾನನವನೀತವದೆ ಸುಖದಂ ।।
ಗಿಣಿಯೋದು ಪುಸ್ತಕಜ್ಞಾನ ನಿನ್ನನುಭವವೆ ।
ನಿನಗೆ ಧರುಮದ ದೀಪ ಮಂಕುತಿಮ್ಮ ।।

ಅರಿ ಮಿತ್ರ ಸತಿ ಪುತ್ರ ಬಂಧು ಬಳಗವದೆಲ್ಲ ।
ಕರುಮದವತಾರಗಳೊ ಋಣಲತೆಯ ಚಿಗುರೋ ।।
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ।
ವುರಿಮಾರಿಯಾದೀತೋ ಮಂಕುತಿಮ್ಮ ।।

ಇಂದು ಮದುವೆಯ ಹಬ್ಬ ನಾಳೆ ವೈಕುಂಠ ತಿಥಿ ।
ಇಂದು ಮೃಷ್ಟಾನ್ನ ಸುಖ ನಾಳೆ ಭಿಕ್ಷಾನ್ನ ।।
ಇಂದು ಬರಿಯುಪವಾಸ ನಾಳೆ ಪಾರಣೆಯಿಂತು ।
ಸಂದಿರುವುದನ್ನಋಣ ಮಂಕುತಿಮ್ಮ ।।

ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ।
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ।।
ಮರಳಿ ಕೊರಗಾಡುವುದು ಕೆರಳುವುದು ನರಳುವುದು ।
ಇರವಿದೇನೊಣರಗಳೆ ಮಂಕುತಿಮ್ಮ ।।

ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ ।
ಮಾನವಂ ಪ್ರಣಯದೊಳೊ ವೀರ ವಿಜಯದೊಳೊ ।।
ಏನೋ ಎಂತೋ ಸಮಾಧಾನಗಳನರಸುತಿಹ ।
ನಾನಂದವಾತ್ಮಗುಣ ಮಂಕುತಿಮ್ಮ ।।

ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು ।
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ।।
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ ।
ಜಸವು ಜನಜೀವನಕೆ ಮಂಕುತಿಮ್ಮ ।।
Reply all
Reply to author
Forward
0 new messages