ಮರೆಯಲಾರೆ ನಿನ್ನ ನೀರೆ

73 views
Skip to first unread message

ಶರತ್ ಕೊಟ್ಟದಮನೆ

unread,
Mar 20, 2008, 11:16:43 AM3/20/08
to ವೀರಕನ್ನಡಿಗ
ಮರೆಯಲಾರೆ ನಿನ್ನ ನೀರೆ
ಮರೆಯಲಾರೆ ಜನ್ಮಕೆ
ಮರೆತು ಹೇಗೆ ಬಾಳಬಹುದೆ
ಆತ್ಮ ಮರೆತು ಅನ್ನಕೆ?

ದೂರವಾದರೇನು ನೀನು
ದೂರ ತಾನೆ ಸೂರ್ಯನು?
ಭಾವನೆಯಲಿ ಕೂಡುವೆ ನೀ
ಕಿರಣದಂತೆ ನನ್ನನು

ಯಾರು ಜರಿದರೇನು ನೀನೆ
ಸಾರ ನನ್ನ ಜೀವಕೆ
ಕನಸಿನಲೆಯ ಏರಿ ಬಂದು
ಉಣಿಸನೀವೆ ಆತ್ಮಕೆ

ಮೇಲೆಯಾಚೆ ಮೌನ ನಿಂತು
ದೈವದಂತೆ ಕಾಯುವೆ
ಬೆಳಕಾದೆಯೆ ಇಲ್ಲಿ ಒಳಗೆ
ನಾನು ನೀನು ಬೇರೆಯೆ?

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.
Reply all
Reply to author
Forward
0 new messages