ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ

0 views
Skip to first unread message

sharath.k...@gmail.com

unread,
Feb 13, 2008, 9:54:53 AM2/13/08
to Veerakannadiga
ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ
ಬನ್ನಿ ನೋಡೋಣ ಶಕ್ತಿ ಎದುರಾಳಿಯ ಕೈಯಲಿ

ಒಂದಕ್ಷರ ಮಾತಿಲ್ಲ ಯಾರೊಬ್ಬರ ಬಾಯಲಿ
ಮೌನವು ಆವರಿಸಿದೆ ಪ್ರತಿಯೊಬ್ಬರ ಮೊಗದಲಿ
ನನ್ನ ನಿನಗರ್ಪಿಸುವೆ ತಾಯೇ ನಿನ್ನ ಅಡಿಯಲಿ
ನಿನ್ನ ಶಕ್ತಿಯ ಚರ್ಚೆ ನೆಡೆದಿದೆ ಎದುರಾಳಿಯ ಅಂಗಳದಲಿ
ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ

ಕಾಲ ಬಂದೊಡನೆ ನಿನಗೆ ಹೇಳುವೆ, ಓ ಮುಗಿಲೇ
ನಮ್ಮೆದೆಯಲಿ ಏನಿದೆಯೆಂದು ಈಗ ಹೇಗೆ ನಾ ಹೇಳಲಿ
ಸೆಳೆದಿದೆ ನಮ್ಮೆಲ್ಲೆರನು ನಿನ್ನ ಮೇಲಿನ ಪ್ರೀತಿಯು
ತುಂಬಿದೆ ಎದೆಯಲಿ ಬಲಿಯಾಗುವ ಹೆಬ್ಬಯಕೆಯು
ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ

ಶಸ್ತ್ರ ಹಿಡಿದು ನಿಂತಿದ್ದಾನೆ ವೈರಿ ನಮ್ಮೆದುರಿಗೆ
ರೋಶದಿಂದ ಕುದಿಯುತಿದೆ ನಮ್ಮೆಲ್ಲರ ಗುಂಡಿಗೆ
ರಕ್ತದ ಹೊಳೆ ಹರಿಸುವ ದೇಶವಿದೆ ಸಂಕದಲಿ
ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ

ಸಂಘರ್ಷದ ಕೈಯನ್ನು ತುಂಡರಿಸದಾವ ಕತ್ತಿಯು
ಮೇಲೆತ್ತಿದ ಈ ಎದೆಯ ತಗ್ಗಿಸದಾವ ಆತಂಕವು
ಬೆಳಗಿದೆ ಸ್ವಾತ್ರಂತ್ರದ ಜ್ಯೋತಿ ನಮ್ಮಂತರಂಗದಲಿ
ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ

ಮನೆಯಿಂದ ಬಂದಿದ್ದೀವಿ ನಾವು ಬೆನ್ನ ಹಿಂದೆಯೆ ಸಾವಿದೆ
ಬನ್ನಿ ಮುನ್ನುಗ್ಗೋಣ ನಾವು ಕಣ್ಣ ಮುಂದೆಯೆ ಗುರಿಯಿದೆ
ಪ್ರಾಣವೇ ಅತಿಥಿಯು ಸಾವಿನ ನಮ್ಮ ಅರಮನೆಯಲಿ
ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ

ಎದುರಿಗೆ ನಿಂತು ಕೇಳುತ್ತಿರುವನು ವೈರಿ ಮತ್ತೆ ಮತ್ತೆ
ಸ್ವಾತ್ರಂತ್ರದ ಅಸೆಯು ನಿಮ್ಮೆಲ್ಲಾರಿಗಾದರು ಇದೆಯೇ?
ಎದೆಯಲ್ಲಿ ಬಿರುಗಾಳಿ ನರಗಳಲ್ಲಿ ಕ್ರಾಂತಿಯು ತುಂಬಿದೆ
ವೈರಿಯ ತೀರಿಸುವೆವು ನಾವು ತಡೆಯಲಾದೀತೆ ನಮ್ಮನ್ನು?
ದೇಹವದು ದೇಹವೇ ಅದರ ರಕ್ತದಲ್ಲಿ ರೋಶವಿಲ್ಲದಿದ್ದರು
ಕಡಲಲೆಯ ಗೆಲ್ಲಬಹುದೇ ಕಡಲ ದಡದಲ್ಲಿ ಕೂತು ?

ಕ್ರಾಂತಿಯ ಮೊಳಕೆಯೊಡೆದಿದೆ ನಮ್ಮೆದೆಯಲಿ
ಬನ್ನಿ ನೋಡೋಣ ಶಕ್ತಿ ಎದುರಾಳಿಯ ಕೈಯಲಿ

ಶರತ್ ಕೊಟ್ಟದಮನೆ

unread,
Feb 13, 2008, 11:04:22 PM2/13/08
to ವೀರಕನ್ನಡಿಗ
ಈ ಹಾಡು "Sarforoshi ki Tamanna" ಹಿಂದಿಯಲ್ಲಿ ಇದೆ. ಅದನ್ನ ಕನ್ನಡಕ್ಕೆ ಅನುವಾದ
ಮಾಡಿದೆ.....
ಎಲ್ಲಾದರು ತಿದ್ದ ಬೇಕಿದ್ದಲ್ಲಿ... ದಯವಿಟ್ಟು ತಿಳಿಸಿ...
Reply all
Reply to author
Forward
0 new messages