ನಿನ್ನ ಕಿರು ನಗೆಯೊಂದು ಸಾಲದೇ

3 views
Skip to first unread message

ಶರತ್ ಕೊಟ್ಟದಮನೆ

unread,
Feb 14, 2008, 7:31:10 PM2/14/08
to ವೀರಕನ್ನಡಿಗ
ನಿನ್ನ ಕಿರು ನಗೆಯೊಂದು ಸಾಲದೇ
ಓ ನಲ್ಲೆ ಈ ಬಾಳು ಬೆಳಕಾಗಲು
ನಿನ್ನ ಬಿರು ನುಡಿಯೊಂದು ಸಾಲದೇ
ಕ್ಷಣದಲ್ಲಿ ಆವರಿಸಲೂ ಕತ್ತಲೂ

ನಿನ್ನ ನಿಟ್ಟುಸಿರೊಂದು ಸಾಲದೇ
ಬಾಳಲ್ಲಿ ಚಂಡಮಾರುತಾ ಏಳಲೂ
ನಿನ್ನ ಕಣ್ಣಿನ ಒಂದು ಕಿರುಸನ್ನೆ ಸಾಲದೇ
ಜಗವನ್ನೆ ನಾ ಆಳಲೂ

ಹುಬ್ಬುಗಳ ನೀನು ಗಂಟಿಕ್ಕಿದರೇ ಸಾಲದೇ
ಕಾರ್ಮೋಡಗಳು ಕೂಡಲು
ಬಳಿಬಂದು ನೀ ಎದೆಯಪ್ಪಿದರೇ ಸಾಲದೇ
ಧೋ ಎಂದು ಮಳೆ ಸುರಿಯಲೂ

ನಿನ್ನ ಕಣ್ಣಿನ ಒಂದು ಉರಿನೋಟ ಸಾಲದೇ
ಧಗಧಗಿಸಲೂ ಜೀವನಾ
ನಿನ್ನ ತುಟಿಗಳ ಒಂದು ಸವಿಮುತ್ತು ಸಾಲದೇ
ಹೊಮ್ಮಲು ಹೊಸ ಚೇತನಾ
Reply all
Reply to author
Forward
0 new messages