ಕರ್ನಾಟಕದ ಇತಿಹಾಸದಲಿ

6 views
Skip to first unread message

ಶರತ್ ಕೊಟ್ಟದಮನೆ

unread,
Feb 13, 2008, 11:15:35 PM2/13/08
to ವೀರಕನ್ನಡಿಗ
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು

ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲು ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು

ಕರ್ನಾಟಕದ ....

ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ

ಕಲಿಗಳ ನಾಡು ಕಲಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ

ಕನ್ನಡ ಬಾವುಟ ಹಾರಿಸಿದ
ಮಧುರೆವರೆಗು ರಾಜ್ಯವ ಅರಳಿಸಿದ
ಕರ್ನಾಟಕದ ಇತಿಹಾಸದಲ್ಲಿ

ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ

ಭುವನೇಶ್ವರಿಯ ತವರೂರಿದೆ
ಯತಿಗಳ ದಾಸರ ನೆಲೆ ನಾಡಿಲ್ಲೆ
ಪಾವನ ಮಣ್ಣಿದು ಹಂಪೆಯದು
ಯುಗ ಯುಗ ಅಳಿಯದ ಕೀರ್ತಿ ಇದು

ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಕೀರ್ತಿ ಎಂದೆಂದು ಬಾಳಲಿ
Reply all
Reply to author
Forward
0 new messages