ಆ ಕಂಗಳಾ ಬೆಳದಿಂಗಳಾ

2 views
Skip to first unread message

ಶರತ್ ಕೊಟ್ಟದಮನೆ

unread,
Feb 13, 2008, 11:00:45 PM2/13/08
to ವೀರಕನ್ನಡಿಗ
ಆ ಕಂಗಳಾ ಬೆಳದಿಂಗಳಾ
ನೆನಪಿಂದು ಮೂಡಿದೇ..
ಮರೆಯಾದ ಆ ಕಿರುನಗೆಯನ್ನು ನೆನೆದು
ಮನನೊಂದು ಹಾಡಿದೇ..

ಆ ಊರು ಆ ಬೀದಿ ಆ ಮನೆ
ಆ ಮನೆಯಾ ಹಿತ್ತಿಲೂ
ಆ ಬೇಲಿ ಆ ಪೊದೆ ಆ ಮರ
ಆ ಕವಿದಾ ಕತ್ತಲೂ..
ಗುಟ್ಟಾಗಿ ಪ್ರತಿ ಸಂಜೆ ನನಗಾಗಿ ಅಲ್ಲಿ
ಕಾಯುತ್ತಿತ್ತು ಒಂದು ಜೀವಾ
ಸಿಹಿ ಮಾತಿನಿಂದಾ ಸವಿ ಸನಿಹದಿಂದಾ
ಕಳೆಯುತ್ತಿತ್ತು ಎಲ್ಲ ನೋವ

ಕಿಣಿ ಕಿಣಿ ಬಳೆಗಳಾ ಮೆಲು ನಾದ
ಮೂಗುತಿಯಾ ಮಿರುಗೂ
ತುರುಬಿನ ಮಲ್ಲಿಗೆ ನರುಗಂಪೂ
ನಾಚಿಕೆಯಾ ಸೆರಗೂ
ಆ ಸ್ಪರ್ಶ ಆ ಹರ್ಷ ರೊಮಾಂಚನಾ
ಆ ನಗೆ ಬೆಳದಿಂಗಳೂ..
ಕನಸಂತೆ ಕರಗಿ ವಾಸ್ತವತೆ ಎರಗಿ
ಈಗಿಲ್ಲೀ ಬಿರು ಬಿಸಿಲೂ

ಆ ಕಂಗಳಾ ಬೆಳದಿಂಗಳಾ
ನೆನಪಿಂದು ಮೂಡಿದೇ..
ಮರೆಯಾದ ಆ ಕಿರುನಗೆಯನ್ನು ನೆನೆದು
ಮನನೊಂದು ಹಾಡಿದೇ..
Reply all
Reply to author
Forward
0 new messages