DIPR NEWS - 23-07-2025

8 views
Skip to first unread message

PRESS NEWS

unread,
Jul 23, 2025, 8:39:19 AMJul 23
to Venkat Singh, suddimool...@gmail.com, Sudhindra Nadig, Cheluva Raju, krushika mitra, Sudheendra Srirangaraju, srika...@rediffmail.com, Alaganchi Mahadevegowda Suresh, N B Hombal, Daily Salar, pan...@rediffmail.com, Kpn Desk, hameed...@rediffmail.com, PTI Bangalore, Vijay Kumar, Nagesh Polali, kalyani kulkarni, chidambar kulkarni, narendr...@rediffmail.com, Suresh Brm, rakesh prakash, Anil Kumar, asad.m...@timesgroup.com, sunil....@timesgroup.com, Kushala Satyanarayana, arunw...@gmail.com, krish...@gmail.com, Dibyangshu Sarkar, muke...@gmail.com, Soma Shekar, Hiriyannaiah T R, Raju kondaguli, Anantha Subramanyamk, Mysore Harish, ar...@ap.org, sanj...@gmail.com, gadekal nagaraja, ramu...@hotmail.com, a.vee...@gmail.com, Rajashekhar Sriramoju, nagp...@yahoo.com, Sharath Srivatsa, Bhaskar Hegde, edit...@yahoo.com, ne...@manipalmedia.com, samkar...@rediffmail.com, feed...@thatskannada.com, sahana maji, praj...@rediffmail.com, nanjund...@gmail.com, Anantharam Sanklapur, Umesha Koligere, Vishwanath Karnic, fakir...@gmail.com, Srusti Prabha, Srinivasa Prasad, ne...@manipalpress.com, feat...@manipalmedia.com, E sanje News, mrinf...@gmail.com, edi...@deccanherald.co.in, ma...@ndtv.com, sundhar...@yahoo.com, srajen...@hotmail.com, Doordarshan Chandananews, Shrumsha Gangadhar, pradeep kumar, sivana...@mm.co.in, United News of India - Bangalore UNI, hunasavadi srikanth, Jagadeesh Nv, Niranjan Kaggere, parmesh...@yahoo.co.in, Mahesh Kulkarni, A .SURESH, mkm...@gmail.com, M.A. Kulkarni, ne...@ndtv.com, rajuma...@gmail.com, suryanarayana apprameya, abdulh...@gmail.com, Jagadish Nagathan, shiva shankar, Mathrubhumi BL, Yamini P, Guru Prasad, Sunil Sirasangi, prasanna b k, Jaipal Sharma, amjad hussain, Bhuvanavarthe Kannada, Tulasirtk Rtk, Narasimha Raju, Saakshath Suddi, Suresh Bhat, Vaartha Bharathi B'lore, garudadwajacta, Pratap r dev, Shidlu Patrike Shidlu, MOHAMED YOUNUS, shyam s, coo...@maalaimalar.com, Gara Shrinivas, kolara...@yahoo.in, Harish dhandu.l, Pavan Hiremath, priyapathrike priya, Satish T M, Suddigiduga Dinapatrike, Srinivasa S, prasa...@gmail.com, suresh kumar, Vishwanat Bhagavat, ramesh gacchinamane, thinagaravelu kavidasan, DeccanHerald Prajavani, Anand Bakshi, suresha_...@rediffmail.com, Shankar S, voice jlr, sudarshan channangihalli, Anantha Krishnan M., Ramesh D K, Muthumani Nannan, Muthumani Nannan, vidhikarn...@gmail.com, Anil Basur, sanjes...@gmai.com, R.T.VITTAL Murthy, hgangad...@gmail.com, shrinivas Soorgond, ARVIND WALI, harish dasappa, T V links, pooja prasanna, Shamsheer Yousaf, yat...@prajavani.co.in, prathima mysore, Girish Babu, Balasubramanyam K.R., Nandini Chandrashekar, Kiran Haniyadka, pandu...@rediffmail.com, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani kannadigaru@yahoo.com, vaarthe@gmail.com, eemunjanedailykannada@yahoo.com, <kannadigaru@yahoo.com>,, gurulingaswamy_holimath@yahoo.com newsblr@vijayavani.in, cbaru6 <cbaru6@gmail.com>, chidanand patel <patel.risk@gmail.com>,, Rakesh Kombra <rakesh.km@abp.in>, <ininewsflash@gmail.com>,, Nudi Bharathi <nudibharathi@gmail.com>,, Rajasthan Patrika <blgrpatrika@gmail.com>,, -rajendra -naruka <rajendra.naruka@epatrika.com>,, samaj veer <samajveer@gmail.com>,, Manjunatha Babu <tcmbabu@gmail.com>,, rajaram k <rajaramsiliconcity@gmail.com>, <passgirish@gmail.com>,, M.M. Joshi <karnatakphotos@gmail.com>,, SM KHAN khan <4mtv21@gmail.com>,, sagayraj@gmail.com,, vaiga j <vaiga16@gmail.com>,, Varthabhavan Udupi <varthabhavanaudupi@gmail.com>,, RAJ KANNADA <inputrajnews@gmail.com>,, Sandeep Moudgal <sandeep.moudgal@gmail.com>,, The Hindu Invitations <invite.thehindu@gmail.com>,, Ashwini Ashwini <ashwinioorja@gmail.com>,, NGR NG Ramesh <ngr.ramesh213@gmail.com>,, Sheshdri Samaga <samaga.sheshadri@gmail.com>,, Raghavendra Bhat <rythmraghu@gmail.com>,, Abdul Razak <ajabdulrazak@gmail.com>,, aj_bng@yahoo.co.in <aj_bng@yahoo.co.in>,, afshan yasmeen <afshanyasmeen@gmail.com>,, anusha.ravi@timesgroup.com,, ravindrabhat@prajavani.co.in,, khajane@gmail.com,, Bageshree Subbanna <bageshree.subbanna@gmail.com>,, Information Department <varthasoudhabengaluru@gmail.com>,, vikhar.sayeed@thehindu.co.in,, Vikhar Ahmed Sayeed <vikhar.sayeed@gmail.com>,, Sampath Kumar <ycsampathkumar@gmail.com>,, Dr Mamatha Hegde <hegde2004mamatha@gmail.com>,, gpshetty74@yahoo.com,, Daraneesh Bookanakere <darani2287@gmail.com>,, srikanthswmy@yahoo.com,, ks somanna <kssomanna275@gmail.com>,, Ravikumar B.G. <bgrkum@gmail.com>,, Arvind Last <raichurvani@gmail.com>,, Shivanna Shivanna <nammashiva@gmail.com>,, GOPAL R <phalithamsha@gmail.com>,, Janardhan Jani <janabgjana8@gmail.com>,, Naheed Ataulla <naheed.ataulla@gmail.com>,, lingarajubnc@gmail.com, nekaaravani@gmail.com, Dakshin Bharat Rashtramat Daily <news@dakshinbharat.com>,, suresh pattan Suresh <pattansuresh@gmail.com>,, Raveesh Raveesha <raveeshahs@gmail.com>,, senthil nathan <senthu.news@gmail.com>,, Vilas Melagiri <vilasmelagiri@gmail.com>, bang08@yahoo.com, Jani janardhan bk <janardhanbk@gmail.com>,, basava raju <basawraju1956@gmail.com>,, Roshan Baig <ministerforiih@gmail.com>,, k s ksnagaraj <ksnagarajbgm@gmail.com>,, naveen ammembala <nammembala@gmail.com>,, pramoda shastri <pramodashastri@gmail.com>,, Shankar Pagoji <spagoji@gmail.com>,, basurani@gmail.com,, hemanth kumar <khemanth999@gmail.com>,, Manjunatha C <manjumdb@gmail.com>,, Sitaram Shasthri <sastryaloor@gmail.com>,, Shivashankar H.P <cineshiv@gmail.com>,, Arun bangalore ananthmurthy <arunroopa73@gmail.com>,, yasir.mushtaq@newsnation.in,, Alvin Mendonca <alvinm20@gmail.com>,, Azmathulla Shariff <azmathulla35@gmail.com>,, harihar times <hariharatimes@gmail.com>,, Ashok Shamanna <timesmobiletv@gmail.com>,, rajendra m S <merajendra@gmail.com>,, jaibheemagade.daily bangalore, Kolar MURALI, Suddimoola Raichur, Dineshamin Mattu, Ravinarayana Gunaje, Naveen Soorinje, prabhakar prabhakar, Ashwini YS, Vinay Madhava Gowda, Ahmed Khan, HARRY D'SOUZA, Maheswara Reddy, rajesh chatla, rajeshr...@prajavani.co.in, kp PUTTASWAMAIAH, diprv...@gmail.com, Dhyan Poonacha, mani ms, nisar hameed, kala bandhu, M Siddaraju, cdm siddu, Jadiyappa Gedlagatti, Jayaprakash Narayana, swamy swamy, davanagere...@gmail.com, varthaprabh...@gmail.com, Samyukta Karnataka, htm...@gmail.com, muniraj raju, Hariprakash Konemane, Vrl Daily, p18news...@nw18.com, inpu...@gmail.com, editorpu...@gmail.com, Vijay J R, Manohar Yadavatti, Manohar Yadavatti, Chandan K Gowda, Shivakumar S R, rajendra m S, Ramesh Hirejambur, Divyashree V R, mandyavartha, mandyaandolana andolanamandya, somu 9772, kannambadi kannambadi, monibt09 monibt09, Nudi Bharathi, SHIVA YOGI SK, sanje impu, shashi suddisangharsha, somu keragodu, star of mandya, U M Mahesh, Information Department, To: mandyavartha@googlegroups.com, newstoportal@gmail.com, abburprakash@gmail.com, mandyaandolana@gmail.com, somu9772@gmail.com, heggademandya@gmail.com, kannambadik@gmail.com, knravimandya@gmail.com, kolalu@rediffmail.com, mandyamaathu@yahoo.com, mandyatvlive@gmail.com, monibt09@gmail.com, moni_mdy@rediffmail.com, mp.sk@rediffmail.com, navisona@gmail.com, nudibharathi@gmail.com, pouravani@gmail.com, press.sk@gmail.com, ranakahalep@gmail.com, ravi_lalipalya@rediffmail.com, sanjeimpu@gmail.com, sanjesamachara.mdy@gmail.com, shashisuddisangharsha@gmail.com, kemmugilu@gmail.com, starofmandya@gmail.com, udayakala_mandya@yahoo.co.in, ummahesh@gmail.com, varthasoudhabengaluru@gmail.com, vkmandya@gmail.com, naikempi@gmail.com, voice@mysoorumithra.com, lingarajudl@gmail.com, balakrishnajm@gmail.com, shimshaprabha@gmail.com, mysorevar, Manjunath Public tv, Lingaraju Dl, balu krishna, shimshaprabha, hindubl...@thehindu.co.in, Murali T, TarakaRamu Pogiri, aall rounder, Ramesha Doddapura, lokmatn...@gmail.com, Keshava Murthy M, Nandidurga Balu, Jinu Kumar Jena, lingaraju d, Lingaraju D, edlben...@dinamalar.in, meena nagaraju, Dinakaran 2009, Shantha Kumar, pib bng, c...@ibcworldnews.com, Ramesh Yalagachina, Samaga Sheshadri, Naveen Menezes, gurunath...@thehindu.co.in, Shivakumar Menasinakai, Vishwanatha t h, Kishore Saggare, bevarah...@gmail.com, kuchangi prasanna, venkat...@gmail.com, surajut...@gmail.com, srika...@kannadaprabha.in, shreekanth gowdasandra, S.Narayanaswamy, Sheshu .M, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, Naveenkumar Kn, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, shashidhar singh, Bharathi Rcc, Dasharath Sawoor, mailto: kkarnataki@indiatimes.com, cksivanandan@journalist.com, mayas@ndtv.com, orientalnews@hotmail.com, vbbangalore@yahoo.co.in, akramhasan@yahoo.com, airbangalore@yahoo.com, bglphoto@thehindu.co.in, vskarnic@gmail.com, sundharreporter@yahoo.com, srajendran16@hotmail.com, bangalore.bias@gmail.com, janabandade@yahoo.co.in, sreejavn@aol.in, sreejavn@gmail.com, dt_bangalore@hotmail.com, manohar@namasthe.in, chandananews@gmail.com, shrumshagangaa@gmail.com, dnssbc_vijay@yahoo.com, eshanyatimes@yahoo.co.in, maapala@gmail.com, varthasoudhabengaluru@googlegroups.com, sivanandanck@mm.co.in, reporter202020@yahoo.co.in, vishukumarnr@gmail.com, unibangalore@gmail.com, uniblr@dataone.in, dinakaranblr@gmail.com, paramesh@asianetworld.tv, parmeshkerekeri@gmail.com, aleem.aleem2010@gmail.com, hunasavadisrikanth@gmail.com, srikanthhunasavadi@, Aleem M., PRESS NEWS, Manu Aiyappa, Haaiminchu Marvel, Sudhir Raina, beng...@youth4jobs.org, mu...@youthjobs.org, keerthi prasad, Manju C.R, Ravi Sisodia, ani...@rediffmail.com, Shantha Thammaiah, shrinath joshi, JEEVAN M, VARTHE JANAPADA, Suresha H L, DAMARUGA, Azmathulla Shariff, saral...@gmail.com, rudresha honnenahalli, Prakash C, Kumaran P, kuma...@timesgroup.com, Narayanan Venkatesan, prasad hegde, Gururaj Br, Sathya Shodha, in...@satyashodha.in, Prem Shekhar, Dhananjay Tk, Melbin Mathew, lakshmi...@suvarnanews.in, suj...@suvarnanews.in, Pressandnews Bangalore, Padmanabha Rao, Prasanna Kumar S, udayakala...@gmail.com, udayakala daily, karnatak...@gmail.com, kerekeriveerappa parmesh, Poornima Ravi, Srikanth Bhat, ಸಪ್ತಸ್ವರ TV, vino...@hindutamil.co.in, Ra Vinoth, Shivanand Tagadur, udaya...@gmail.com, T.K.MALAGOND EDITOR IN CHIEF, Vasudevrao Desai, SAMPATH KUMAR Y C, samayami...@gmail.com, kannada...@gmail.com, Supreetha Hebbar, kannada Kannada, smitha R, lankeshpat...@gmail.com, indiannewsa...@gmail.com, kiran k.n Kiran, mahanthesh kumar, rnu...@gmail.com, manjunath n, mohamed...@gmail.com, sanje...@gmail.com, Ranjith H Ashwath, KAVERI TV, Kumara Raitha, fortunemed...@gmail.com, prasad rao, mayurak...@gmail.com, Bhagya Prakash, bengalu...@gmail.com, Arvind Last, Benki Belaku Raichur, K.R. Renu, ay...@indiangrapevine.com, hima...@indiangrapevine.com, bvenka...@yahoo.co.in, bvenkatsingh, chandrav...@gmail.com, henjar...@gmail.com, sanath...@indianexpress.com, UMA MEDIA CONSULTING UMC, Vilas Melagiri, Lakshman C.K, munjane...@gmail.com, Sridhara V, E RAVI, RAMALINGAPPA B.K, karnataka...@gmail.com, Gopika Mallesh, J Nagabhushan, palike...@gmail.com, prabhu natekar, ume...@htdigital.in, munjan...@gmail.com, munjan...@yahoo.in, munjanee...@gmail.com, pras...@vrlmedia.com, christin mathew philip, somash...@etvbharat.com, Somashekar kavachoor, Aparna As, kkpsv...@gmail.com, Antharagange DailyNewsPaper, Gummata Nagari Daily Newspaper BIJAPUR, Md Irfan Shaikh, nagar...@gmail.com, samyukt...@gmail.com, newsageh...@gmail.com, ESHANYA TIMES, vipnews...@gmail.com, Devitha cs16, punya vathi, khale...@prajavani.co.in, balakr...@prajavani.co.in, nel...@gmail.com, Manjunat Gvt, hkne...@gmail.com, harish kumar, Manjesha U, musanje...@gmail.com, newsofpol...@gamil.com, shrisha...@gmail.com, SANATH DESAI, yashas...@gmail.com, vinayak bhat, natara...@gmail.com, Nagesh Kn, Nandini .N, Dr. Indukant Dixit, indukan...@pti.in, hdnews...@gmail.com, Devalapalli N Girish Reddy, Raghuraj press reporter Journalist, Shodhavani News, dharidee...@gmail.com, mallam...@gmail.com, ashoka kote, karanja...@yahoo.com, Parvateesha Bilidaale, Bukanakere Manjunatha, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, Rakesh N S <rakesh.ans@gmail.com>, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani <janatavani@mac.com>, eemunjanedailykannada@gmail.com, kannadigaru@yahoo.com, msvaarthe@gmail.com, eemunjanedailykannada@yahoo.com, newsblr@vijayavani.in,, lokes...@gmail.com, siddamma jamadar, arvin...@gmail.com, dasaratha raman, suresh....@gmail.com, tamil5...@gmail.com, kalyana...@gmail.com, kkg...@gmail.com, N.MUNIYAPPA Kolar, Bhagyalakshmi Srinivasa, yuva...@gmail.com, Ramachandra Swamy, prasarbha...@gmail.com, abdul akram haq, deva sampathkumar, bharath...@gmail.com, venkat polali, mahesh somanna, sagar...@live.com, prajapa...@gmail.com, R Manjunath Kere Manju, Abdul Razak, kampi...@gmail.com, udayadhw...@gmail.com, janaraj...@gmail.com, samyuta...@gmail.com, maarda...@gmail.com, new...@bevarahani.com, prathini...@gmail.com, udayaka...@gamil.com, THEDAILY NEWS, anilsi...@gmail.com, Karunakara G, asho...@prasarbharati.gov.in, asho...@yahoo.co.in, avinash mr, n.ashw...@gmail.com, media man, mnwal...@gmail.com, Mohan Handrangi, Govind Gowda, mardhan...@gmail.com

 SIR

PLEASE FIND ATTACHED STATE NEWS :

ಪತ್ರಿಕಾ ಪ್ರಕಟಣೆ
PRESS RELEASE

ಬೆಂಗಳೂರಿನ ಕೆರೆಗಳ ಕರೆಗೆ ಮಿಡಿದ ಸ್ಥಾಯಿ ಸಮಿತಿ

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಒಂದಾನೊಂದು ಕಾಲದಲ್ಲಿ ಬೆಂಗಳೂರು ಸುತ್ತ-ಮುತ್ತಲಿನ ಗ್ರಾಮಗಳ ಜೀವಜಲವಾಗಿದ್ದ ಕೆರೆಗಳು ಇಂದು ನಗರ ಬೆಳೆದಂತೆಲ್ಲ ಮಾನವನ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿವೆ. ಒಂದಿಷ್ಟು ಕೆರೆಗಳಂತು ಸತ್ತು ಕೊಳೆತು ನಾರುತ್ತಿರುವ ವಾಸನೆ ಸುತ್ತಲಿನ ಒಂದಿಷ್ಟು ಕಿಮೀ ವರೆಗೆ ವ್ಯಾಪಿಸಿದೆ.

ಮಾನವರ ವಾಸನೆಗೆ ಕೆರೆಗಳು ಸಂಕುಚಿತಗೊಂಡವೊ ಅಥವಾ ಕೆರೆಯ ವಾಸನೆಗೆ ಮಾನವ ಸಂಕುಚಿತಗೊಂಡನೊ ಎಂಬ ಗೊಂದಲದೊಳಗೆ ಕೆರೆಗಳಿದ್ದ ಸುಳಿವುಗಳ ನಾಮಾವಶೇಷ ಮಾಡುವ ಮಾನವನ ದುರಾಸೆಗೆ ಕೆರೆ ಹಾಗೂ ಮಾನವರ ಬದುಕು ಅನಾರೋಗ್ಯಕ್ಕಿಡಾಗಿದೆ.

ಇಂತಹ ಕೆರೆಗಳ ನವ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ ರಾಜ್ಯ ಸರ್ಕಾರ ರಚಿಸಿರುವ ಸ್ಥಾಯಿ ಸಮಿತಿಯು ಇಂದು ನಗರದ ಹೊರ ವಲಯದ ವಿವಿಧ ಕೆರೆಗಳಿಗೆ ಬೇಟಿ ನೀಡಿ ವೀಕ್ಷಣೆ ನೆಡೆಸಿತು.

ಬೆಂಗಳೂರು ನಗರದ ಸಂರಕ್ಷಿತ ಕೆರೆಗಳು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆ ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಪರಿವೀಕ್ಷಣಾ ಭೇಟಿ ತಂಡವು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಸಭೆ ಸೇರಿ ಇಂದು ಭೇಟಿ ನೀಡಬೇಕಾದ ಕೆರೆಗಳ ಸ್ಥಿತಿಗತಿ ಕುರಿತು ಪೂರ್ವಭಾವಿ ಸಭೆ ನೆಡೆಸಿ ನಂತರ ಕೆರೆಗಳ ವೀಕ್ಷಣೆಗೆ ತೆರಳಿತು.

ಶಿವಾಜಿ ನಗರದ ಶಾಸಕರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಆದ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರಾದ ಹಾಗೂ ಶಾಸಕರುಗಳಾದ ರವಿಸುಬ್ರಹ್ಮಣ್ಯ, ಹರೀಶ್ ಪೂಂಜ, ವೆಂಕಟಶಿವಾ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಗೋವಿಂದರಾಜು ಮತ್ತು ಶ್ರೀಮತಿ ಶಶಿಕಲಾ ಜೊಲ್ಲೆ ಅವರನ್ನೊಳಗೊಂಡ ತಂಡ ಮೊದಲು ಭೇಟಿ ನೀಡಿದ್ದು ಮೇಡಹಳ್ಳಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ, ಅಲ್ಲಿನ ವಾಸ್ತವಾಂಶವನ್ನು ಪರಿಶೀಲಿಸಿ ಈಗಾಗಲೇ 9.5 ಕಿ.ಮೀ. ಫೆನ್ಸಿಂಗ್ ಹಾಕಲಾಗಿದೆ, ಇನ್ನೂ 4.5 ಕಿ.ಮೀ. ಬಾಕಿ ಇರುವ ಕಾರಣಕ್ಕಾಗಿ ಸ್ಥಳದಲ್ಲಿದ್ದ ಸಂಬಂಧಿತ ಅಧಿಕಾರಿಗಳಿಗೆ ಕೆರೆಗೆ 10 ದಿನದ ಒಳಗಾಗಿ ಪೆÇಲೀಸ್ ನೆರವು ಪಡೆದು ಮಾಕಿರ್ಂಗ್ ಮಾಡಿ ಬೇಲಿ ಹಾಕುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕೆಂದು ಗಡುವು ವಿಧಿಸಿದರು.

ಕೆರೆಗೆ ಹೊಂದಿಕೊಂಡಂತಿರುವ ಖಾಸಗಿ ಲೇಔಟ್ ನವರು ಕೆರೆ ಜಾಗವನ್ನೆ ರಸ್ತೆಯನ್ನಾಗಿ ಮಾಡಿಕೊಂಡಿರುವ ಕುರಿತು ವಿವರ ಕೇಳಿದ ಅಧ್ಯಕ್ಷರು ಶೀಘ್ರದಲ್ಲಿ ಬಿಡಿಎ ನೊಂದಿಗೆ ಚರ್ಚಿಸಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಕೆರೆಯ ಹತ್ತಿರವಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಮಿಸಿರುವ ಎಲೆ ಮಲ್ಲಪ್ಪ ಚೆಟ್ಟಿಕೆರೆ ಸಮೀಪದ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸಹ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿ ತೆರವು ಹಾಗೂ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಹೆಚ್ಚಿನ ಸಾಮಥ್ರ್ಯದ ನವೀಕರಣ ಕೈಗೊಳ್ಳಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಎರಡನೆಯದಾಗಿ ವರ್ತೂರು ಕೆರೆಗೆ ಭೇಟಿ ನೀಡಿದ ತಂಡಕ್ಕೆ ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಂಡಿರುವ ಬಗ್ಗೆ ಹಾಗೂ ಕೆರೆ ಸುತ್ತ ಬಂದೋಬಸ್ತ್ ಮಾಡಲಾಗಿದೆ, ಕೇವಲ ಮಳೆ ನೀರು ಕೆರೆಗೆ ಬರುವಂತೆ ಕ್ರಮವಹಿಸಲಾಗಿದೆ, ಯಾವುದೇ ಒತ್ತುವರಿ ಇರುವುದಿಲ್ಲ, ಬಿಬಿಎಂಪಿ ಗೆ ಕೆರೆ ನಿರ್ವಹಣೆಯನ್ನು ವರ್ಗಾಯಿಸುವ ಬಗ್ಗೆ ಮಾತುಕತೆ ನಡೆದಿದ್ದು ಶೀಘ್ರದಲ್ಲಿ ವರ್ಗಾಯಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೆರೆಯ ಸುತ್ತಲಿನ ಸ್ವಚ್ಛತೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು ಬಿಡಿಎ, ಬಿಬಿಎಂಪಿ, ಕಂದಾಯ ಹಾಗೂ ಕೆರೆಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಳಗೊಂಡ ಸಭೆಯನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲು ಮತ್ತು ಉತ್ತಮ ಗುಣಮಟ್ಟದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಮಾಡುವ ಬಗ್ಗೆ ಕ್ರಮವಹಿಸಬೇಕೆಂದು ಬಿಡಿಎ ಮುಖ್ಯ ಇಂಜಿನಿಯರ್ ಡಾ.ಶಾಂತರಾಜಣ್ಣ ಅವರಿಗೆ ಸೂಚಿಸಿದರು.

ಕೆರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ತಲೆ ಎತ್ತಿರುವ ಸಾವಿರಾರು ಅಪಾರ್ಟ್ ಮೆಂಟ್ ಗಳು ಬಳಸಿ ಬಿಡುವ ನೀರು ಯಾವ ಪ್ರಮಾಣದಲ್ಲಿ ಶುದ್ದಿಕರಿಸಲಾಗುತ್ತಿದೆ ಹಾಗೂ ಎಲ್ಲಿಗೆ ಬಿಡುತ್ತಿದ್ದಾರೆ ಎನ್ನುವ ಕುರಿತು ಸಂಬಂಧಿಸಿದ ಇಲಾಖೆಗಳು ಕಾಲ-ಕಾಲಕ್ಕೆ ಪರಿಶೀಲಿಸಬೇಕು ಎಂದರು.

ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಕೆರೆಯ ಪರಿಸ್ಥಿತಿ ಕುರಿತು ಅಭಿಪ್ರಾಯ ಪಡೆದ ಸಮಿತಿಯು ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.

ನೂರಾರು ಕೋಟಿ ಪ್ರತಿ ವರ್ಷ ಸರ್ಕಾರದಿಂದ ಖರ್ಚು ಮಾಡಿದರು ಸಹ ಬೆಂಗಳೂರಿನ ಕೆರೆಗಳ ಸ್ಥಿತಿ ಬದಲಾಗದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಮೂರನೆಯದಾಗಿ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಅದರ ವಿಶಾಲತೆಗೆ ಮಾರು ಹೋದ ಅಧ್ಯಕ್ಷರು ನಗರದ ನಡುವೆ ಇರುವ ವಿಶಾಲವಾದ ಕೆರೆ ಬೆಂಗಳೂರಿನ ಆಸ್ತಿ, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಒಳ ಹರಿವು ಮಾಹಿತಿ ಪಡೆದು ವೈಜ್ಞಾನಿಕವಾಗಿ ನೀರಿನ ಸ್ವಚ್ಛತೆ ಕಾಪಾಡುವ ಹಾಗೂ ಇತರೇ ಸಮಸ್ಯೆಗಳನ್ನು ಗುರುತಿಸಿ ಶೀಘ್ರಿದಲ್ಲಿ ಪರಿಹಾರ ಕಂಡುಕೊಳ್ಳಬೇಕು ಹಾಗೂ ಕೆರೆಯನ್ನು ಅಭಿವೃದ್ಧಿಪಡಿಸಬೇಕು.

ಹೆಚ್ಚಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಗೆ ಇಲಾಖೆ ವತಿಯಿಂದ ಬೇಡಿಕೆಯ ಕಡತ ಸಲ್ಲಿಸಬೇಕು, ಈಗಾಗಲೇ ಶೇ. 80 ಹೂಳು ಎತ್ತಲಾಗಿದೆ, ಬಿಡಿಎ ನಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳು ಮುಂದಿನ ವರ್ಷದೊಳಗೆ ಮುಗಿಸಬೇಕು, ಬಿಬಿಎಂಪಿ ಹಾಗೂ ಬೆಂಗಳೂರು ಜಲ ಮಂಡಳಿಯಿಂದ ಕೆರೆ ಒತ್ತುವರಿಯಾಗದಂತೆ ಹಾಗೂ ತ್ಯಾಜ್ಯ ಸುರಿಯದಂತೆ ನಿಗಾವಹಿಸಬೇಕೆಂದರು.


ನಾಲ್ಕನೆಯದಾಗಿ ಅಗರ ಕೆರೆಗೆ ಭೇಟಿ ನೀಡಿದ ತಂಡ ಕೆರೆಯ ಅಭಿವೃದ್ಧಿ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರ ಒತ್ತಾಯದ ಮೇರೆಗೆ ಅಗರ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಸಹ ವೀಕ್ಷೀಸಿದರು.
ಎರಡು ವಿಶೇಷ ಬಿ ಎಮ್ ಟಿ ಸಿ ಬಸ್ ಗಳಲ್ಲಿ ತೆರಳಿದ್ದ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಬಿಬಿಎಂ ಪಿ ವಿಶೇಷ ಆಯುಕ್ತರಾದ ಕರಿಗೌಡ, ಸಣ್ಣ ನೀರಾವರಿ ಜಂಟಿ ಕಾರ್ಯದರ್ಶಿ ಪವಿತ್ರ ಅವರು ಉಪಸ್ಥಿತರಿದ್ದರು.

ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕೆ ಆದಿ ಕರ್ಮಯೋಗಿ ಅಭಿಯಾನ ಸಹಕಾರಿ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಬದಲಾವಣೆ ತರುವ ಪ್ರಯತ್ನವನ್ನು ಆದಿ ಕರ್ಮಯೋಗಿ ಅಭಿಯಾನದಿಂದ ಸಾಕಾರಗೊಳಿಸಲಿದ್ದೇವೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳಾದ ವಿಭು ನಾಯರ್ ತಿಳಿಸಿದರು.

ಅವರು ಇಂದು ಖಾಸಗಿ ಹೋಟೆಲ್‍ನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಕರ್ನಾಟಕ ಬುಡಕಟ್ಟು ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಆದಿ ಕರ್ಮಯೋಗಿ ಅಭಿಯಾನದ ರಾಷ್ಟ್ರೀಯ ಪ್ರತಿಕ್ರಿಯಾಶೀಲ ಆಡಳಿತ ಮಿಷನ್ ರಾಜ್ಯ ಪ್ರಕ್ರಿಯೆ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿದರು.

ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಿ, ಅವರಿಗೆ ರಾಜ್ಯ, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಆದಿ ಕರ್ಮಯೋಗಿ ಅಭಿಯಾನದ ಮೂಲಕ ಇವರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಬುಡಕಟ್ಟು ಪ್ರದೇಶದಲ್ಲಿ ಕೆಲಸ ನಿರ್ವಹಿಸುವವರು ತ್ವರಿತಗತಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಬೇಕು. ಇದರಿಂದ ಸಮಾಜ ಪರಿವರ್ತನೆಯ ಜೊತೆಗೆ ದೇಶದ ಅಭಿವೃದ್ಧಿ ಸಹ ಸಾಧ್ಯವಾಗುತ್ತದೆ.

ಈ ಅಭಿಯಾನದಡಿ ಬುಡಕಟ್ಟು ಕಲ್ಯಾಣ ಜೊತೆಗೆ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮಾಸ್ಟರ್ ಟ್ರೈನರ್‍ಗಳಿಂದ ತರಬೇತಿ ಪಡೆದುಕೊಂಡು ಇದರ ಪ್ರತಿಫಲದೊಂದಿಗೆ ಜಿಲ್ಲಾ, ಗ್ರಾಮೀಣ ಬ್ಲಾಕ್ ಹಂತದಲ್ಲೂ ತಮ್ಮ ಸೇವೆಯನ್ನು ನೀಡುವ ಸಾಮಥ್ರ್ಯ ಹೊಂದಬಲ್ಲವರಾಗಿರುತ್ತಾರೆ. ಇದರಿಂದ ವಸತಿ ಮುಂತಾದ ಯೋಜನೆಗಳು ಪರಿಶಿಷ್ಟ ಜಾತಿ/ಪಂಗಡದ ಅರ್ಹರಿಗೆ ಸಿಗುವಂತಾಗುತ್ತದೆ. ಅಲ್ಲದೆ ಸಾಮಾಜಿಕ ಬದಲಾವಣೆಗೆ ಸಹ ಬುನಾದಿ ಹಾಕುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬುಡಕಟ್ಟು ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ರಂದೀಪ್ ಡಿ, ಸರ್ಕಾರದ ಯೋಜನೆಯನ್ನು ಅರ್ಹರಿಗೆ ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಆಡಳಿತದಲ್ಲಿ ಚುರುಕು ಹಾಗೂ ಕ್ರಿಯಾಶೀಲತೆ ತರಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಆಡಳಿತದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯದ ಏಳು ಜಿಲ್ಲೆಗಳ ಬುಡಕಟ್ಟು ಕಲ್ಯಾಣ ಇಲಾಖೆ ಸೇರಿದಂತೆ ಇತರ ಪ್ರಮುಖ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಆಡಳಿತ, ವ್ಯಕ್ತಿ ವಿಕಸನ, ಕಾರ್ಯತಂತ್ರ, ಸಾಮಥ್ರ್ಯ ನಿರ್ಮಾಣ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಅವರು ಮುಂದೆ ತಮ್ಮ ಕಾರ್ಯ ವೈಖರಿಯಲ್ಲಿ ಹಲವು ಬದಲಾವಣೆಗಳನ್ನು ತರಲು ಸಮರ್ಥರಾಗುತ್ತಾರೆ. ಪಿಎಂ ಜನ್‍ಧನ್, ದರ್ತಿ ಅಭಿಯಾನ್ ಮುಂತಾದ ಕೇಂದ್ರ ಸರ್ಕಾರದ ಯೋಜನೆಗಳೂ ಸಹ ಜನರನ್ನು ತಲುಪುವುದಕ್ಕೆ ಇದು ಸಹಕಾರಿಯಾಗಿದೆ. ಇದರಿಂದ ವಿಕಸಿತ ಭಾರತದ ಪರಿಕಲ್ಪನೆಯು ನನಸಾಗಲಿದೆ ಎಂದರು.

ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕರಾದ ಯೋಗೀಶ್ ಮಾತನಾಡಿ, ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳನ್ನು ಗುರುತಿಸಲಾಗಿದ್ದು ಇವರಿಗೆ ವಿದ್ಯಾರ್ಥಿವೇತನ, ಶಿಕ್ಷಣ, ವಸತಿಶಾಲೆ, ವಸತಿ ಹಾಗೂ ಇನ್ನಿತರ ಯೋಜನೆಗಳನ್ನು ತಲುಪಿಸುವುದು ಸರ್ಕಾರದ ಹೊಣೆಯಾಗಿದೆ. ವಿಧವಾ ವಿವಾಹ, ಅಂತರಜಾತೀಯ ವಿವಾಹಗಳಿಗೆ ಸಹ ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 119 ಆಶ್ರಮ ಶಾಲೆಗಳಿದ್ದು, ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಬುಡಕಟ್ಟು ಕಲ್ಯಾಣ ಇಲಾಖೆ ಜೊತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮುಂತಾದ ಇಲಾಖೆಗಳು ಜೊತೆಗೂಡಿದರೆ, ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತದೆ. ಈ ನಿಟ್ಟಿನಲ್ಲಿ ಆದಿ ಕರ್ಮಯೋಗಿ ಅಭಿಯಾನದಡಿ ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕೆ ಆಡಳಿತ ಮುಂತಾದ ವಿಷಯಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ 4 ದಿನಗಳ ತರಬೇತಿಯನ್ನು ಇದೇ ಜುಲೈ 23 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕಲಬುರಗಿ, ಬಳ್ಳಾರಿ, ಕೊಪ್ಪಳ, ದಾವಣಗೆರೆ, ರಾಯಚೂರು ಉತ್ತರಕನ್ನಡ ಹಾಗೂ ತುಮಕೂರು ಜಿಲ್ಲೆಗಳನ್ನು ಆಯ್ದ ಆಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾಸ್ಟರ್ ಟ್ರೈನರ್‍ಗಳು ಹಾಗೂ ವಿವಿಧ ಜಿಲ್ಲೆಗಳ ಶಿಬಿರಾರ್ಥಿಗಳು ಹಾಜರಿದ್ದರು.

ರಾಜ್ಯಪಾಲರನ್ನು ಭೇಟಿ ಮಾಡಿದ ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರ ನಿಯೋಗ

ಬೆಂಗಳೂರು, 23 ಜುಲೈ, (ಕರ್ನಾಟಕ ವಾರ್ತೆ) :

ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರುಗಳ ಪ್ರತಿನಿಧಿ ಮಂಡಳಿಯು ಇಂದು ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.

ಈ ಸಂದರ್ಭದಲ್ಲಿ, ಮಂಡಳಿಯ ಸದಸ್ಯರು ರಾಜ್ಯಪಾಲರೊಂದಿಗೆ ಕರ್ನಾಟಕ ಮತ್ತು ಬೆಂಗಳೂರು ನಗರ ಹಾಗೂ ಇಲ್ಲಿನ ವ್ಯಾಪಾರ, ಸಂಸ್ಕøತಿ ಮತ್ತು ಪರಂಪರೆ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು. ಅವರು ಕರ್ನಾಟಕದ ತಾಂತ್ರಿಕ ಅಭಿವೃದ್ಧಿ ಮತ್ತು ಬೆಂಗಳೂರಿನ ಐಟಿ ಹಬ್ ಸ್ಥಾನಮಾನವನ್ನು ಮೆಚ್ಚಿಕೊಂಡರು.

ರಾಜ್ಯಪಾಲರು ಮಂಡಳಿಗೆ ಆತ್ಮೀಯವಾಗಿ ಸ್ವಾಗತಿಸಿ, ನಿಯೋಗವು ಕರ್ನಾಟಕ ಹಾಗೂ ಬೆಂಗಳೂರಿಗೆ ಆಗಮಿಸಿದಕ್ಕಾಗಿ ಅಭಿನಂದಿಸಿ, ಕರ್ನಾಟಕ ಹಾಗೂ ಬೆಂಗಳೂರು ಭಾರತದ ತಾಂತ್ರಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಕುರಿತು ತಿಳಿಸಿದರು.

ಈ ಭೇಟಿಯು, ಭಾರತೀಯ ಸಾಂಸ್ಕøತಿಕ ಸಂಬಂಧ ಮಂಡಳಿ ಅವರ ವತಿಯಿಂದ ಆಯೋಜಿಸಲಾದ ಪ್ರವಾಸದ ಭಾಗವಾಗಿದ್ದು, ಶ್ರೀಲಂಕಾದ ಯುವ ರಾಜಕೀಯ ನಾಯಕರಿಗೆ ಭಾರತದ ಸಂಸ್ಕøತಿ, ಪ್ರಜಾಪ್ರಭುತ್ವ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಸಮಗ್ರ ಅರಿವು ನೀಡುವ ಉದ್ದೇಶ ಹೊಂದಿದೆ.

Sri Lankan Young Political Leaders' Delegation Calls on Governor of Karnataka


Bengaluru, July 23, (Karnataka Information):

A 25-member delegation of Young Political Leaders (YPLD) from Sri Lanka met the Hon’ble Governor of Karnataka, Shri Thaawar chand Gehlot, at Raj Bhavan today.

During the interaction, the delegates exchanged pleasantries with the Hon’ble Governor and expressed their appreciation for Karnataka’s rich cultural heritage, economic progress, and Bengaluru’s dynamic growth as a global IT hub. They also shared their keen interest in the state's traditions, trade, and developmental model.

Welcoming the delegation, the Hon’ble Governor lauded the efforts of the Indian Council for Cultural Relations (ICCR) in fostering international goodwill and people-to-people connections. He expressed happiness at Karnataka and Bengaluru being a part of the cultural and political exposure tour and highlighted the state’s leadership in technology, innovation, and education.

ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ


ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದಲ್ಲಿ  2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ  ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ವಿಶ್ವವಿದ್ಯಾಲಯದ ವೆಬ್‍ಸೈಟ್  www.uvce.karnataka.gov.in ನಿಂದ ಡೌನ್ಲೋಡ್ ಮಾಡಿಕೊಂಡು ಸಂಬಂಧಿತ ದಾಖಲೆಗಳ ಪ್ರತಿಗಳೊಂದಿಗೆ  ಕುಲಸಚಿವರು, ಯುವಿಸಿಇ, ಕೆ.ಆರ್ ವೃತ್ತ, ಬೆಂಗಳೂರು- 560 001 ರವರಿಗೆ ಜುಲೈ 30 ರೊಳಗೆ  ಸಲ್ಲಿಸುವುದು. ನಿಗಧಿತ ದಿನಾಂಕದ ನಂತರ ಸ್ವೀಕರಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕುಲಸಚಿವರ/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರ ಕಛೇರಿಯನ್ನು ಸಂಪರ್ಕಿಸಬಹುದು. ವಿಶ್ವವಿದ್ಯಾಲಯವು ಯಾವುದೇ ಅತಿಥಿ ಅಧ್ಯಾಪಕರನ್ನು ನೇಮಿಸಿಕೊಳ್ಳದಿರುವ ಹಕ್ಕನ್ನು ಕಾಯ್ದಿರಿಸಿದೆ. ಸಂದರ್ಶನದ ದಿನಾಂಕವನ್ನು ವೆಬ್‍ಸೈಟ್‍ನಲ್ಲಿ ತಿಳಿಸಲಾಗುತ್ತದೆ ಅಥವಾ ಅರ್ಹ ಅಭ್ಯರ್ಥಿಗಳಿಗೆ ನೇರವಾಗಿ ತಿಳಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Inviting applications from the suitable candidates for engaging to the post of Guest Faculty

Bengaluru, July 23 (Karnataka Information):

The applications are invited for engaging Guest Faculty in the Departments of Electronics & Communication Engineering and Computer Science & Engineering from the eligible candidates to the  University of Visvesvaraya College of Engineering, K. R. Circle, Bengaluru, for the academic year 2025-26.

The details are available in the website vide www.uvce.karnataka.gov.in. The interested candidates having Master's Degree/Ph.D in the respective subjects under the said Departmental studies as per AICTE rules are requested to submit their applications in the prescribed Form by downloading from the website, along with copy of the relevant documents to the Office of the Registrar, UVCE, K. R. Circle, Bangalore - 560 001, on or before 30.07.2025.

 For any information they may contact at the Office of the Registrar/ Chairperson of the ECE and CSE Departmental Studies.

Applications received after the last date shall not be considered. The University reserves the right to not to engage any Guest Faculty. The date of interview will be notified either on the website  or  will be intimated directly to the short listed candidates only.  

ಜುಲೈ 25ರಂದು ಬೆಂಗಳೂರು  ಜಲಮಂಡಳಿ:ನೇರ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು, ಜುಲೈ 23, (ಕರ್ನಾಟಕ ವಾರ್ತೆ):

ಬೆಂಗಳೂರು ಜಲಮಂಡಳಿಯ ವತಿಯಿಂದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಜುಲೈ 25ರಂದು  ಶುಕ್ರವಾರ ಬೆಳಿಗ್ಗೆ 09:30 ರಿಂದ 10:30 ರವರೆಗೆ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾರ್ವಜನಿಕರು ತಮ್ಮ ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.

ಸಾರ್ವಜನಿಕರು ದೂರವಾಣಿ ಸಂಖ್ಯೆ; 080-22945119 ಮತ್ತು 080-22229639 ನ್ನು ಸಂಪರ್ಕಿಸಬಹುದಾಗಿದೆ. ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಲು ಕೋರಲಾಗಿದೆ.

ಸಾರ್ವಜನಿಕರು ಈ  ನೇರ ಫೆÇೀನ್-ಇನ್ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಿದೆ.

ವಿದೇಶಿ ಭಾμÁ ಕಲಿಕೆಯಲ್ಲಿ ನವೀನ ಬೋಧನಾ ವಿಧಾನಗಳು ಕುರಿತ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾμÁ ಕೇಂದ್ರವು ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ”ವಿದೇಶಿ ಭಾμÁ ಕಲಿಕೆಯಲ್ಲಿ ನವೀನ ಬೋಧನಾ ವಿಧಾನಗಳು” ಕುರಿತ ವಿಚಾರ ಸಂಕಿರಣವನ್ನು ಹಾಗೂ ಭಾμÁ ಅಧ್ಯಯನದೊಂದಿಗೆ ಸಂಬಂಧಿಸಿದ ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು 2025ರ ಜುಲೈ 24 ರಂದು ಬೆಳಿಗ್ಗೆ 11:30ಕ್ಕೆ ಹೊಸ ಅಕಾಡೆಮಿ ಬ್ಲಾಕ್‍ನಲ್ಲಿ ಆಯೋಜಿಸಿದೆ.

ಕಾರ್ಯಕ್ರಮವನ್ನು ಪ್ರೊ. ಎಸ್.ಆರ್. ನಿರಂಜನ್, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ಮಾಜಿಕುಲಪತಿಗಳು, ಗುಲ್ಬರ್ಗಾ ವಿಶ್ವವಿದ್ಯಾನಿಲಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪೆÇ್ರ. ಲಿಂಗರಾಜ್ ಗಾಂಧಿ, ಮಾಜಿ ಕುಲಪತಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆÇ್ರ. ಕೆ.ಆರ್. ಜಲಜಾ, ಕುಲಪತಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಪ್ರೊ. ರಾಮೇಶ್, ರಿಜಿಸ್ಟ್ರಾರ್, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಹಾಗೂ ಶ್ರೀಮತಿ ವಿಜಯಲಕ್ಷ್ಮಿ,  ಹಣಕಾಸು ಅಧಿಕಾರಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಉಪಸ್ಥಿತರಿರಲಿದ್ದಾರೆ.

ಭಾμÁ ಶಿಕ್ಷಣದ ಕ್ಷೇತ್ರದಲ್ಲಿ ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಜಾಗತಿಕ ಭಾμÁ ಕೇಂದ್ರ ಆಯೋಜಿಸುತ್ತಿದೆ. ಇದು ವಿದೇಶಿ ಭಾμÁ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆಯಾಗಿ ಪರಿಗಣಿಸಲಾಗಿದೆ.

ಡಾ. ಜ್ಯೋತಿ ವೆಂಕಟೇಶ್, ಡಿ. ಎನ್., ಕಲಾ ವಿಭಾಗ ಮತ್ತು ನಿರ್ದೇಶಕಿ, ಜಾಗತಿಕ ಭಾμÁ ಕೇಂದ್ರ,
ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಅವರು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

Symposium on Innovative Teaching Methods in Foreign Language Learning & Book Launch

Bengaluru, July 23 (Karnataka Information):

As part of its 40th-year celebrations, the Centre for Global Language, Bengaluru City University, is organising a Symposium on “Innovative Teaching Methods in Foreign Language Learning”, scheduled to be held on 24th July 2025 at 11:30 AM at the New Academic Block.

The event will also witness the launch of a new publication related to language learning, marking a significant contribution to the field of foreign language education.

The programme will be inaugurated by Prof. S.R. Niranjan, Vice-Chairman, Karnataka State Higher Education Council and former Vice Chancellor, Gulbarga University. The Chief Guest for the occasion will be Prof. Lingaraj Gandhi, former Vice Chancellor, Bengaluru City University.

The programme will be presided over by Prof. K.R. Jalaja, Acting Vice Chancellor, Bengaluru City University.

Guests of Honour for the programme will be Prof. Ramesh, Registrar, Bengaluru City University and Smt. Vijayalakshmi, Finance Officer, Bengaluru City University.

This initiative reflects the Centre's commitment to academic excellence, innovation, and global engagement in the field of language education.

This event is organised by Dr. Jyoti Venkatesh D.N.,Faculty of Arts and Director, Centre for Global Language, Bengaluru City University.


ವೀರಗಲ್ಲು ಲೋಕಾರ್ಪಣೆ ಹಾಗೂ “ಕಾರ್ಗಿಲ್ ವಿಜಯ ದಿವಸ್” ಸಮಾರೋಪ ಸಮಾರಂಭ

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶನಾಲಯದ ವತಿಯಿಂದ  ವೀರಗಲ್ಲು ಲೋಕಾರ್ಪಣೆ ಹಾಗೂ 'ಕಾರ್ಗಿಲ್ ವಿಜಯ ದಿವಸ್' ಸಮಾರೋಪ ಸಮಾರಂಭವನ್ನು 2025 ನೇ ಜುಲೈ 26 ರಂದು ಬೆಳಿಗ್ಗೆ 09:30 ಗಂಟೆಗೆ ಬೆಂಗಳೂರಿನ ಚೌಡಯ್ಯ ರಸ್ತೆಯಲ್ಲಿರುವ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದ ಹತ್ತಿರವಿರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಆಚರಿಸಲಾಗುವುದು.

ಸಮಾರಂಭದಲ್ಲಿ ಪಾಲ್ಗೊಳ್ಳುವ ಮಾಜಿ ಸೈನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಭಾಗವಹಿಸಬಹುದಾಗಿದೆ. ವಾಹನಗಳನ್ನು ನೆಹರು ತಾರಾಲಯದ ಕಾಂಪೌಂಡ್ ಒಳಗೆ ನಿಲ್ಲಿಸಲು ವ್ಯವಸ್ಥೆ ಕಲ್ಲಿಸಲಾಗಿದೆ ಮತ್ತು ನೆಹರು ತಾರಾಲಯದ ಎದುರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಗೇಟ್ ಬಳಿ ಆಸನಗಳು ವ್ಯವಸ್ಥೆಯ ಮಾರ್ಗಸೂಚಿಯಿದ್ದು, ಅದರನ್ವಯ ಆಸನಗಳನ್ನು ಗ್ರಹಣ ಮಾಡಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶನಾಲಯದ ಪ್ರಭಾರ ನಿರ್ದೇಶಕರಾದ ಎಂ.ಎಸ್.ಲೋಲಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 26 ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ “ರೈತ ಸಂತೆ”


ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವತಿಯಿಂದ ಜುಲೈ 26 ರಂದು ಬೆಳಿಗ್ಗೆ 7.00 ರಿಂದ 4.00 ಗಂಟೆಯವರಿಗೆ ಜಿ.ಕೆ.ವಿಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರದಲ್ಲಿ “ರೈತ ಸಂತೆ”ಯನ್ನು ಆಯೋಜಿಸಿದೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ನಡೆಸುವ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ “ರೈತ ಸಂತೆ” ಎಲ್ಲಾ ಜನ ಸಮೂಹದ ಆಕರ್ಷಣೆಗೆ ಒಳಾಗಾಗಿದ್ದು ಈ ಬಾರಿ ರೈತ ಸಂತೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಹಲವಾರು ವಿನೂತನ ವಿಷಯಗಳಿಗೆ ಸಾಕ್ಷಿಯಾಗಲಿದೆ.

ಈ ಭಾರಿ ರೈತ ಸಂತೆಯ ವಿಶೇಷತೆಗಳು - ಸಗಣಿಯಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳು (ಹಣತೆಗಳು, ಗೋಡೆಗೆ ನೇತಾಕುವ ಕಲಂಕಾರಿಕೆ, ಮೊಬೈಲ್ ಸ್ಟಾಡ್, ಗಣೇಷ ಮೂರ್ತಿಗಳು ಇನ್ನೂ ಮುಂತಾದವು), ಗುಣಮಟ್ಟದ ರಾಜಮುಡಿ ಅಕ್ಕಿ, ತಜಾ ಅಣಬೆ, ಆರೋಗ್ಯಯುತ ಹಣ್ಣು ತರಕಾರಿಗಳ ಪಾನಿಯ ಮಿಶ್ರಣಗಳು (ಟೊಮ್ಯಾಟೊ, ಬೀಟ್‍ರೂಟ್, ಸೌತೇಕಾಯಿ, ನೇರಳೆ ಹಣ್ಣು ಇನ್ನೂ ಮುಂತಾದವು) ಹಾಗೂ ಅಲಂಕಾರಿಕ ಮೀನು ಮರಿಗಳು.

ಇದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ತೋಟಗಾರಿಕೆ: ಮಾವು, ಹಲಸು ಹಣ್ಣುಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ: ಜೈವಿಕ ಕೀಟನಾಶಕಗಳು, ಕರಕುಶಲ ವಸ್ಥುಗಳು: ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ – ಉತ್ಪನ್ನಗಳು,  ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು, ಪಶು ಸಂಗೋಪನೆ, ಕೃಷಿ ಪ್ರಕಟಣೆಗಳು, ವಿಶ್ವವಿದ್ಯಾನಿಲಯದ ಬಗ್ಗೆ ಮಾಹಿತಿ, ತಾರಸಿ ಕೈತೋಟ/ನಗರ ತೋಟಗಾರಿಕೆ ಇನ್ನು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿರುತ್ತದೆ. ಸಾರ್ವಜನಿಕರು ಮತ್ತು ರೈತರು ಈ ವಿನೂತನ ಸಂತೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಗಯಾನ ದೇಶದಲ್ಲಿ ಮೃತಪಟ್ಟ ಅನಿವಾಸಿ ಭಾರತೀಯನ ಮೃತ ದೇಹವನ್ನು ಭಾರತಕ್ಕೆ, ಕರೆತರಲು ಕರ್ನಾಟಕ ಸರ್ಕಾರದ ವತಿಯಿಂದ ಆರ್ಥಿಕ ಸಹಾಯ

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿಯಾದ ಪಿ.ಬಿ ಗಿರೀಶ ಬಾಬು ಪಾಲೆ ರವರು ದಕ್ಷಿಣ ಅಮೆರಿಕಾದ ಗಯಾನಾ ದೇಶದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಸ್ಮಾಫ್ ನರ್ಸ್ ಆಗಿ ಸುಮಾರು ಎರಡು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ದಿನಾಂಕ: 03.07.2025 ರಂದು ಅನಾರೋಗ್ಯ ಕಾರಣದಿಂದ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇವರು ಬಹು ಅನಿಯಮಿತ ರಕ್ತಸ್ರಾವದ ಹೃದಯಘಾತದಿಂದ ದಿನಾಂಕ:14.07.2025 ರಂದು ಸಾವನ್ನಪ್ಪಿರುತ್ತಾರೆ. ಆನಂತರ ಅನಿವಾಸಿ ಭಾರತೀಯ ಸಮಿತಿಯು ಆಸ್ಪತ್ರೆ ಹಾಗು ಭಾರತೀಯ ರಾಯಭಾರಿ ಕಛೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪಿ.ಬಿ ಗಿರೀಶ ಬಾಬು ಪಾಲೆ ರವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರುವ ಕಾರ್ಯವನ್ನು ಪ್ರಾರಂಭಿಸಿತು.

ಮೃತನ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು ರೂ. 12,00,000 ಗಳಾಗಬಹುದೆಂದು ರಾಯಭಾರಿ ಕಛೇರಿ ತಿಳಿಸಿದ್ದು ಶ್ರೀಮತಿ ಜಾನಕಿ. ಕೆ.ಎನ್. W/o ಪಿ.ಬಿ ಗಿರೀ ಶ ಬಾಬು ಪಾಲೆ, ರವರು ತಮಗೆ 2 ವರ್ಷದ ಒಬ್ಬ ಮಗನಿದ್ದು, ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರದ ವತಿಯಿಂದ ಸಹಾಯಕ್ಕಾಗಿ ಈ ಕಛೇರಿಗೆ ಮನವಿ ಸಲ್ಲಿಸಿದ್ದರು. ಅದರಂತೆ, ಅನಿವಾಸಿ ಭಾರತೀಯ ಸಮಿತಿಯಿಂದ ಪಿ.ಬಿ ಗಿರೀಶ ಬಾಬು ರವರ ಮೃತ ದೇಹವನ್ನು ಭಾರತಕ್ಕೆ ಕರೆತರಲು ತಗಲುವ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಧನ ಸಹಾಯ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಕೋರಲಾಗಿತ್ತು.

 ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರದ ವತಿಯಿಂದ ರೂ 3,60,000/- ಗಳನ್ನು ಮಂಜೂರು ಮಾಡಿರುತ್ತಾರೆ. ಉಳಿಕೆ ಹಣವನ್ನು ಪಿ.ಬಿ ಗಿರೀಶ ಬಾಬು ಪಾಲೆ ರವರು ಕೆಲಸ ಮಾಡುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆಯವರು ಭರಿಸುತ್ತಿದ್ದು, ಗಯಾನದಲ್ಲಿರುವ ಭಾರತೀಯ ರಾಯಭಾರಿ ಕಛೇರಿ ಹಾಗೂ ನವದೆಹಲಿಯಲ್ಲಿರುವ ನಿವಾಸಿ ಆಯುಕ್ತರು ಮೃತದೇಹವನ್ನು ಭಾರತಕ್ಕೆ ತರುವುದನ್ನು ಸಂಯೋಜಿಸುತ್ತಿದ್ದು ಶೀಘ್ರವೇ ಇವರ ಮೃತದೇಹವನ್ನು ಭಾರತಕ್ಕೆ ತರಲಾಗುವುದೆಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಸರ್ಕಾರವು ಮಹಾದಾಯಿ ಯೋಜನೆಗೆ ಅನುಮೋದನೆ ನೀಡದಿರುವುದು ಕರ್ನಾಟಕಕ್ಕೆ ಆಘಾತ ತಂದಿದೆ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):

ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಪ್ರಮೋದ ಸಾವಂತರವರು ಕೇಂದ್ರ ಸರ್ಕಾರವು ಮಹಾದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲವೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾದ ಭೂಪೇಂದ್ರ ಯಾದವರವರು ತಮಗೆ ತಿಳಿಸಿದ್ದಾರೆಂದು ಗೋವಾ ವಿಧಾನಸಭೆಯಲ್ಲಿ ಅಧಿಕೃತ ಹೇಳಿಕೆ ನೀಡಿರುವುದು ಕರ್ನಾಟಕಕ್ಕೆ ಆಘಾತ ತಂದಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ ತಿಳಿಸಿದ್ದಾರೆ.

ಅವರು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ ಜಲವಿವಾದವು ಅಂತರರಾಜ್ಯ ಜಲವಿವಾದದ ಕಾಯ್ದೆಯನ್ವಯ ಒಂದು ನ್ಯಾಯಾಧೀಕರಣ ರಚನೆಯಾಗಿ ಅದು ಅಂತಿಮ ತೀರ್ಪು ನೀಡಿ, ಆ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್ನಲ್ಲಿ ಪ್ರಕಟಣೆಯಾಗಿ ನ್ಯಾಯಾಧೀಕರಣದ ತೀರ್ಪು ಜಾರಿಗೆ ಬಂದಿದೆ.

ಕರ್ನಾಟಕವು ಕಳಸಾ-ಬಂಡೂರಿ ಯೋಜನೆಗೆ 7.56 ಟಿ.ಎಮ್.ಸಿ ಅಡಿ ನೀರನ್ನು ಮಲಪ್ರಭಾ ಕಣಿವೆಗೆ ತಿರುಗಿಸಿಕೊಳ್ಳಲು ತನ್ನ ಕೋರಿಕೆ ಸಲ್ಲಿಸಿತ್ತು. ಇದರಲ್ಲಿ 3.90 ಟಿ.ಎಮ್.ಸಿ ನೀರನ್ನು ಕರ್ನಾಟಕದ ಪಾಲಿಗೆ ಹಂಚಿಕೆ ಮಾಡಿದೆ. ಅಂತರ್ ಕಣಿವೆ ತಿರುಗಿಸುವಿಕೆಯನ್ನು ಕರ್ನಾಟಕದ ಕಡೆಯಿಂದ ಮಾಡಿಕೊಳ್ಳಲು ನ್ಯಾಯಾಧೀಕರಣ ಒಪ್ಪಿದೆ.

ಈ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕರ್ನಾಟಕ ಮಂಜೂರಿಗಾಗಿ/ತೀರುವಳಿಗಾಗಿ (ಅಟeಚಿಡಿಚಿಟಿಛಿe) ಅರ್ಜಿ ಸಲ್ಲಿಸಿತ್ತು. 10.6 ಹೆಕ್ಟೇರ್ ಅರಣ್ಯ ಭೂಮಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಕಾಯ್ದಿಟ್ಟ ಪ್ರದೇಶದಲ್ಲಿ ಬರುತ್ತದೆ ಎಂದು ಗೋವಾ ಆಕ್ಷೇಪಿಸಲು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ದಿನಾಂಕ: 23.01.2024 ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಿದೆ.

ಇದಾದ ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದೆ 77ನೇ, 79ನೇ ಮತ್ತು 80ನೇ ಸಭೆಗಳಲ್ಲಿ ಈ ವಿಷಯವನ್ನು ನಿರ್ಣಯ ಮಾಡದೇ ವೃಥಾ ಕಾಲಹರಣ ಮುಂದೂಡುತ್ತಾ ಬಂದಿದೆ. ಸರ್ವೋಚ್ಛ ನ್ಯಾಯಾಲಯವು ಕರ್ನಾಟಕದ ಮಹಾದಾಯಿ ತಡೆಹಿಡಿಯಬೇಕೆಂಬುವ ಯಾವುದೇ ಆದೇಶ ನೀಡಿಲ್ಲ. ಯೋಜನೆಗೆ ದಿನಾಂಕ: 29.12.2022 ರಂದು ಕೇಂದ್ರ ಜಲ ಆಯೋಗವು ಕಳಸಾ ಮತ್ತು ಬಂಡೋರಿ ಯೋಜನೆಗಳ ಪರಿಷ್ಕøತ ವಿವರವಾದ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದೆ.

ದಿನಾಂಕ: 19.04.2023 ರಂದು ಸರ್ವೋಚ್ಚ ನ್ಯಾಯಾಲಯವು ಗೋವಾದ ಮೂಲದಾವೆಯ ಮೇಲಿನ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿ, ಕಳಸಾ ಯೋಜನೆಗೆ ತಡೆಯೊಡ್ಡುವಂತೆ ಕರ್ನಾಟಕದ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿದ್ದ ಗೋವಾದ ಪ್ರಾರ್ಥನೆಯನ್ನು ವಜಾ ಮಾಡಿದೆ.

ನ್ಯಾಯಾಂಗದ ಯಾವುದೇ ಅಡೆತಡೆ ಇಲ್ಲಿದಿದ್ದರೂ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಾ ಕರ್ನಾಟಕದ ನ್ಯಾಯಯುತವಾದ ಮತ್ತು ಕಾನೂನುಬದ್ಧವಾದ ಹಾಗೂ ಸಂವಿಧಾನಾತ್ಮಕ ರಕ್ಷಣೆ ಹೊಂದಿರುವ ಯೋಜನೆಗಳನ್ನು ಅನುμÁ್ಠನ ಮಾಡುವಲ್ಲಿ ವೃಥಾ ಅಡ್ಡಿ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಅನ್ಯಾಯಗೊಳಿಸಿದಂತಾಗಿದೆ.

ನ್ಯಾಯಾಂಗದಿಂದ ಯಾವುದೇ ಅಡೆತಡೆಯಿಲ್ಲದ ಯೋಜನೆಗಳನ್ನು ಮತ್ತು ಕಾನೂನು ಬದ್ಧವಾಗಿ ಅಂತರ್ರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನ್ಯಾಯಾಧೀಕರಣದಿಂದ ಇತ್ಯರ್ಥಗೊಂಡಿರುವ ಯೋಜನೆಗಳನ್ನು ಅನುμÁ್ಠನಗೊಳಿಸಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ತಾನು ನೀಡಬೇಕಾದ ಮಂಜೂರಾತಿಗಳನ್ನು ತಕ್ಷಣ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಉತ್ತರ ಕರ್ನಾಟಕ ಜನರ ಹಾಗೂ ರೈತರ ಹಿತ ಗಮನಿಸಿ, ಕೇಂದ್ರ ಸರ್ಕಾರ ತಕ್ಷಣ ಅನುಮತಿ ನೀಡಲು ಒತ್ತಾಯಿಸುವೆ ಎಂದು ಸಚಿವರು ತಿಳಿಸಿದ್ದಾರೆ.


ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ - ಮಾಧ್ಯಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು, ಜುಲೈ 23, (ಕರ್ನಾಟಕ ವಾರ್ತೆ):

ವ್ಯಾಪಾರಿಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ.

ʻಜಿಎಸ್ಟಿ ನೊಟೀಸ್ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ

ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು. ಜಿಎಸ್ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಯುಪಿಐ ಅಡಿ ರೂ. 40ಲಕ್ಷಕ್ಕೂ ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್ಟಿ ನೊಟೀಸ್ ನೀಡಲಾಗಿದೆ. ಆರಂಭದಲ್ಲಿ ಜಿಎಸ್ಟಿ ನೊಂದಣಿ ಮಾಡುವಂತೆ ನೋಟಿಸ್ ನೀಡಲಾಗಿತ್ತು.

ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು.

ನೊಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದರು.

ಯುಪಿಐ ವಹಿವಾಟು ಕೈಬಿಟ್ಟರೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕೇವಲ 9ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ.

ವ್ಯಾಪಾರ ವಹಿವಾಟುಗಳನ್ನು ಕಾನೂನು ಬದ್ಧವಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ.

ಜಿಎಸ್ಟಿ ತೆರಿಗೆಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಈ ತೆರಿಗೆ ಸಂಗ್ರಹದಲ್ಲಿ ಶೇ.50ರಷ್ಟನ್ನು ರಾಜ್ಯಕ್ಕೆ ನೀಡಲಾಗುತ್ತದೆ. ದೇಶದಲ್ಲೇ ಕರ್ನಾಟಕ ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಸರ್ಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಿಗೂ ತೊಂದರೆಯಾಗದಂತೆ ಖಾತ್ರಿಪಡಿಸಲಾಗುವುದು. ವ್ಯಾಪಾರಿಗಳಿಗೆ ನೆರವು ನೀಡಲು ಈಗಲೇ ಸಹಾಯವಾಣಿ ಇದ್ದು, ಇದನ್ನು ಪರಿಣಾಮಕಾರಿಯಾಗಿಸಬೇಕು.

ವ್ಯಾಪಾರ ವಹಿವಾಟು ಬಗ್ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ ಎಂದು ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾಗಿ ನಡೆಸಲು ನಿರ್ಧರಿಸಿದ್ದ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಕೈಬಿಡಲಾಗುವುದು ಎಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದರು.

Karnataka Chief Minister Siddaramaiah Addresses GST Notice Concerns in Trade Union Meeting

Bengaluru, July 23, (Karnataka Information):
Karnataka Chief Minister Siddaramaiah chaired a meeting with representatives of various trade unions today to discuss concerns over GST notices issued to small traders for non-payment of taxes. The meeting addressed grievances and proposed solutions to support small businesses.

Trade union representatives, including the Federation of Karnataka Chambers of Commerce and Industry (FKCCI), raised concerns about confusion among small traders regarding GST notices, which often include loan amounts and personal transactions. They urged the government to allow traders to directly resolve issues with the Commercial Tax Department without intermediaries and to provide sufficient time to settle dues. Suggestions included launching a dedicated helpline and conducting awareness programs to clarify GST regulations. They also requested a one-time waiver of old tax arrears.

The Chief Minister clarified that notices were issued only to traders with UPI transactions exceeding Rs. 40 lakh, initially to prompt GST registration. He assured that no taxes would be collected from traders dealing in exempt goods like milk, vegetables, meat, and fruits, but those liable under the law must comply. He announced that old tax arrears would not be pursued , provided all such traders register under the GST and start paying the GST in the future.

The government emphasized its commitment to supporting small traders and ensuring lawful business operations. It will provide assistance for timely tax payments and enhance the existing helpline for better accessibility. The state, which ranks second in India for GST collection, shares 50% of the revenue with the central government, as decided by the GST Council chaired by the Union Finance Minister.

The government assured transparent operations and help the traders in every possible way legally. Trade bodies confirmed they have not supported any bandhs and agreed to withdraw planned protests following the Chief Minister’s assurances. The government reiterated its focus on empowering small traders and boosting purchasing power through various programs.

ಮಾವು ಖರೀದಿ ಮಿತಿ 200 ಕ್ವಿಂಟಾಲ್‍ಗೆ ವಿಸ್ತರಣೆ

ಬೆಂಗಳೂರು, ಜು 23, (ಕರ್ನಾಟಕ ವಾರ್ತೆ):

ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ದಾವಿಸಿರುವ ಸರ್ಕಾರ ಈ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿ ಬೆಂಬಲ ಬೆಲೆಯೊಂದಿಗೆ ಪ್ರತಿ ಎಕರೆಗೆ 40 ಕ್ವಿಂಟಾಲ್‍ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಾಲ್‍ವರೆಗೆ ಮಿತಿಗೊಳಿಸಿ ಖರೀದಿಸಲು ಆದೇಶ ಹೊರಡಿಸಿದೆ.

ಈ ಆದೇಶವು ಸದರಿ ಯೋಜನೆಯಡಿ ಈಗಾಗಲೇ ನೋಂದಾಯಿಸಿರುವ ರೈತರಿಗೂ ಸಹ ಅನ್ವಯವಾಗಲಿದೆ. ಪ್ರತಿ ಕೆ.ಜಿ.ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಲಾ 2 ರೂಪಾಯಿಗಳಂತೆ ಒಟ್ಟು 4 ರೂಪಾಯಿ ಬೆಂಬಲ ಬೆಲೆಯೊಂದಿಗೆ ಮಾವು ಖರೀದಿಗೆ ದಿ:25-06-2025ರಂದು ಆದೇಶ ಹೊರಡಿಸಲಾಗಿತ್ತು.

ಈ ಆದೇಶದನ್ವಯ ಪ್ರತಿ ಎಕರೆಗೆ 20 ಕ್ವಿಂಟಾಲ್‍ನಂತೆ ಗರಿಷ್ಟ 5 ಎಕರೆಗೆ 100 ಕ್ವಿಂಟಾಲ್‍ವರೆಗೆ ಮಿತಿಗೊಳಿಸಲಾಗಿತ್ತು ಇದೀಗ ಮಾರ್ಪಾಡು ಆದೇಶದಲ್ಲಿ ಈ ಮಿತಿಯನ್ನು 200 ಕ್ವಿಂಟಾಲ್‍ಗೆ ವಿಸ್ತರಿಸಲಾಗಿದೆ.

ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಖರೀದಿ ಮಿತಿ ವಿಸ್ತರಣೆ ಕುರಿತಂತೆ ಪತ್ರ ಬರೆದು ಕೇಂದ್ರಕ್ಕೂ ಮನವಿ ಮಾಡಿದ್ದು, ಖರೀದಿ ಕೇಂದ್ರಗಳಲ್ಲಿ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.

 2025-26 ನೇ ಸಾಲಿನ ಲಲಿತಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 23, (ಕರ್ನಾಟಕ ವಾರ್ತೆ):

ಕರ್ನಾಟಕ ಲಲಿತಕಲಾ ಅಕಾಡೆಮಿಯು 2025ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಚಿತ್ರಕಲೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಪ್ರತಿ ಪ್ರಕಾರದಲ್ಲಿ ತೀರ್ಪುಗಾರರು ಆಯ್ಕೆ ಮಾಡುವ 01 ಪುಸ್ತಕಕ್ಕೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಪುಸ್ತಕಗಳು 2024 ಜನವರಿ 01 ರಿಂದ 2024ರ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಪುಸ್ತಕಗಳಾಗಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ 2024 ಎಂದು ಮುದ್ರಿತವಾಗಿರಬೇಕು.

2024ನೇ ಸಾಲಿನ ಚಿತ್ರಕಲೆಗೆ ಸಂಬಂಧಿಸಿದ ಪ್ರಕಟಿತ ಅತ್ಯುತ್ತಮ ಪುಸ್ತಕಕ್ಕೆ ಬಹುಮಾನದ ಮೊತ್ತ ರೂ. 25,000/- ಗಳನ್ನು ನೀಡಲಾಗುವುದು.

ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕವು ಪುನರ್ ಮುದ್ರಣವಾಗಿರಬಾರದು, ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿರಬೇಕು. ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಯಾವುದೇ ತರಗತಿಗಳಿಗೆ ಹಾಗೂ ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿರಬಾರದು.

ಪುಸ್ತಕವು ಲೇಖಕರ ಸ್ವಂತ ರಚನೆಯಾಗಿರಬೇಕು. ಸಂಪಾದಿತ ಕೃತಿಯಾಗಿರಬಾರದು. ಹಾಗೂ ಪುಸ್ತಕವನ್ನು 2025ನೇ ಆಗಸ್ಟ್ 30 ರ ಒಳಗಾಗಿ ಅಕಾಡೆಮಿಗೆ ತಲುಪಿಸಬೇಕು.

ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರಿಗೆ ಈ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಪರಿಗಣಿಸಲು ಕನಿಷ್ಠ 03 ಜನ ಲೇಖಕರು ಸ್ಪರ್ಧೆಯಲ್ಲಿ ಭಾಗವಹಿಸಬೇಕು.

ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಪುಸ್ತಕಗಳನ್ನು ಅದೇ ಪ್ರಕಾರದಲ್ಲಿ ಮತ್ತೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

ವಿವಿಧ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ. ಇತರೆ ಎಲ್ಲಾ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇನ್ನೂ ಮುಂತಾದ ಅನುದಾನ ಸಂಸ್ಥೆಗಳಿಂದ ಅನುದಾನ ಪಡೆದು ತಾವೇ ಪ್ರಕಟಿಸಿದ ಅಥವಾ ಅಂತಹ ಸಂಸ್ಥೆಗಳಿಂದ ಬರೆಸಿ ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ.

ಲಲಿತಕಲೆಗೆ ಸಂಬಂಧಪಟ್ಟ ಸಾಂಪ್ರದಾಯಿಕ, ಸಮಕಾಲೀನ, ಚಿತ್ರ. ಭಿತ್ತಿ ಚಿತ್ರಕಲೆ, ಗ್ರಾಫಿಕ್ಸ್ ಯಾವುದೇ ಪ್ರಕಾರದ ಲಲಿತಕಲೆಗೆ ಸಂಬಂಧಪಟ್ಟದ್ದಾಗಿರಬೇಕು. ಶೈಕ್ಷಣಿಕ ಅಧ್ಯಯನಕ್ಕಾಗಿ ಪಿ.ಹೆಚ್.ಡಿ. ಡಿ.ಲಿಟ್, ಪ್ರಬಂಧ ಅಥವಾ ಅಧ್ಯಯನಕ್ಕಾಗಿ ಮಾಡಿದಂತಹ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ.

ಕೃತಿ, ಪುಸ್ತಕವು ಕನಿಷ್ಠ 100 ಪುಟಗಳಿಗೂ ಹೆಚ್ಚಿನ ಪುಟಗಳನ್ನು ಹೊಂದಿರತಕ್ಕದ್ದು. ಒಬ್ಬ ಲೇಖಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿ ಬಹುಮಾನ ಪಡೆದ ನಂತರ ಆ ಲೇಖಕರು ಮತ್ತೆ 2 ವರ್ಷಗಳವರೆಗೆ ಅಕಾಡೆಮಿಯಿಂದ ಬಹುಮಾನ ಪಡೆಯುವಂತಿಲ್ಲ.

ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ಲೇಖಕರು ತಾವು ಕಳುಹಿಸುವ ಪುಸ್ತಕದ 4 ಪ್ರತಿಗಳನ್ನು ಉಚಿತವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಕಡ್ಡಾಯವಾಗಿ ನೀಡಬೇಕು. ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಕನ್ನಡ ಭಾμÉಯ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ತೀರ್ಪುಗಾರರು ಆಯ್ಕೆ ಮಾಡಿದ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವುದು.

ಅಕಾಡೆಮಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ವೀಕೃತವಾದ ಪುಸ್ತಕಗಳನ್ನು 03 ಮಂದಿ ವಿಷಯ ತಜ್ಞರಿಗೆ ಕಳುಹಿಸಿಕೊಟ್ಟು, ಅವರು ಶಿಫಾರಸ್ಸು ಮಾಡಿದ ಪುಸ್ತಕಗಳನ್ನು ಅಕಾಡೆಮಿಯ ಸಭೆಯಲ್ಲಿ ಮಂಡಿಸಿ. ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಕಾಡೆಮಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು 2025ನೇ ಆಗಸ್ಟ್ 30 ರ ಒಳಗಾಗಿ (ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲಿಸಬಹುದಾಗಿದೆ.

ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-580 002 ಇವರಿಗೆ ಕಳುಹಿಸಿ ಕೊಡಬೇಕು. ಹಾಗೂ ಪುಸ್ತಕದ ಮೇಲೆ ಮತ್ತು ಪುಸ್ತಕದ ಶೀರ್ಷಿಕೆ ಪುಟದಲ್ಲಿ ಯಾವ ಚಿತ್ರಕಲಾ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು ಎಂದು ಲಲಿತ ಕಲೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


THANKS




DIRECTOR,
DEPARTMENT OF INFORMATION AND PUBLIC RELATIONS,
GOVERNMENT OF KARNATAKA,
VARTHA SOUDHA,
No. 17, BHAGAWAN MAHAVEER ROAD, 
BENGALURU - 560 001

TELEPHONE : 080-2202 8032, 080-2202 8034, 080-2202 8037

FAX No 080-2202 8041, 080-2286 3794


Tribal Welfare Dept (2).jpg
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ (1).jpg
DIPR NEWS - 23-07-2025.docx
DIPR NEWS - 23-07-2025.pdf
Governor.jpg
Sasya Santhe (2).jpg
Tribal Welfare Dept (1).jpg
Sasya Santhe (1).jpg
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ (4).jpg
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ (2).jpg
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ (3).jpg
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ (5).jpg
Reply all
Reply to author
Forward
0 new messages