DIPR NEWS - 05-11-2025

5 views
Skip to first unread message

PRESS NEWS

unread,
Nov 5, 2025, 7:32:11 AM (yesterday) Nov 5
to Venkat Singh, Gurunath Kadabur, suddimool...@gmail.com, Sudhindra Nadig, Cheluva Raju, krushika mitra, Sudheendra Srirangaraju, srika...@rediffmail.com, Alaganchi Mahadevegowda Suresh, N B Hombal, Daily Salar, pan...@rediffmail.com, Kpn Desk, hameed...@rediffmail.com, PTI Bangalore, Vijay Kumar, Nagesh Polali, kalyani kulkarni, chidambar kulkarni, narendr...@rediffmail.com, Suresh Brm, rakesh prakash, Anil Kumar, asad.m...@timesgroup.com, sunil....@timesgroup.com, Kushala Satyanarayana, arunw...@gmail.com, krish...@gmail.com, Dibyangshu Sarkar, muke...@gmail.com, Soma Shekar, Hiriyannaiah T R, Raju kondaguli, Anantha Subramanyamk, Mysore Harish, ar...@ap.org, sanj...@gmail.com, gadekal nagaraja, ramu...@hotmail.com, a.vee...@gmail.com, Rajashekhar Sriramoju, nagp...@yahoo.com, Sharath Srivatsa, Bhaskar Hegde, edit...@yahoo.com, ne...@manipalmedia.com, samkar...@rediffmail.com, feed...@thatskannada.com, sahana maji, praj...@rediffmail.com, nanjund...@gmail.com, Anantharam Sanklapur, Umesha Koligere, Vishwanath Karnic, fakir...@gmail.com, Srusti Prabha, Srinivasa Prasad, ne...@manipalpress.com, feat...@manipalmedia.com, E sanje News, mrinf...@gmail.com, edi...@deccanherald.co.in, ma...@ndtv.com, sundhar...@yahoo.com, srajen...@hotmail.com, Doordarshan Chandananews, Shrumsha Gangadhar, pradeep kumar, sivana...@mm.co.in, United News of India - Bangalore UNI, hunasavadi srikanth, Jagadeesh Nv, Niranjan Kaggere, parmesh...@yahoo.co.in, Mahesh Kulkarni, A .SURESH, mkm...@gmail.com, M.A. Kulkarni, ne...@ndtv.com, rajuma...@gmail.com, suryanarayana apprameya, abdulh...@gmail.com, Jagadish Nagathan, shiva shankar, Mathrubhumi BL, Yamini P, Guru Prasad, Sunil Sirasangi, prasanna b k, Jaipal Sharma, amjad hussain, Bhuvanavarthe Kannada, Tulasirtk Rtk, Narasimha Raju, Saakshath Suddi, Suresh Bhat, Vaartha Bharathi B'lore, garudadwajacta, Pratap r dev, Shidlu Patrike Shidlu, MOHAMED YOUNUS, shyam s, coo...@maalaimalar.com, Gara Shrinivas, kolara...@yahoo.in, Harish dhandu.l, Pavan Hiremath, priyapathrike priya, Satish T M, Suddigiduga Dinapatrike, Srinivasa S, prasa...@gmail.com, suresh kumar, thinagaravelu kavidasan, DeccanHerald Prajavani, Anand Bakshi, suresha_...@rediffmail.com, Shankar S, voice jlr, sudarshan channangihalli, Anantha Krishnan M., Ramesh D K, Muthumani Nannan, Muthumani Nannan, vidhikarn...@gmail.com, Anil Basur, sanjes...@gmai.com, R.T.VITTAL Murthy, Henjerappa Gangadharaiah, shrinivas Soorgond, ARVIND WALI, harish dasappa, T V links, pooja prasanna, Shamsheer Yousaf, yat...@prajavani.co.in, prathima mysore, Girish Babu, Balasubramanyam K.R., Nandini Chandrashekar, Kiran Haniyadka, pandu...@rediffmail.com, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani kannadigaru@yahoo.com, vaarthe@gmail.com, eemunjanedailykannada@yahoo.com, <kannadigaru@yahoo.com>,, gurulingaswamy_holimath@yahoo.com newsblr@vijayavani.in, cbaru6 <cbaru6@gmail.com>, chidanand patel <patel.risk@gmail.com>,, Rakesh Kombra <rakesh.km@abp.in>, <ininewsflash@gmail.com>,, Nudi Bharathi <nudibharathi@gmail.com>,, Rajasthan Patrika <blgrpatrika@gmail.com>,, -rajendra -naruka <rajendra.naruka@epatrika.com>,, samaj veer <samajveer@gmail.com>,, Manjunatha Babu <tcmbabu@gmail.com>,, rajaram k <rajaramsiliconcity@gmail.com>, <passgirish@gmail.com>,, M.M. Joshi <karnatakphotos@gmail.com>,, SM KHAN khan <4mtv21@gmail.com>,, sagayraj@gmail.com,, vaiga j <vaiga16@gmail.com>,, Varthabhavan Udupi <varthabhavanaudupi@gmail.com>,, RAJ KANNADA <inputrajnews@gmail.com>,, Sandeep Moudgal <sandeep.moudgal@gmail.com>,, The Hindu Invitations <invite.thehindu@gmail.com>,, Ashwini Ashwini <ashwinioorja@gmail.com>,, NGR NG Ramesh <ngr.ramesh213@gmail.com>,, Sheshdri Samaga <samaga.sheshadri@gmail.com>,, Raghavendra Bhat <rythmraghu@gmail.com>,, Abdul Razak <ajabdulrazak@gmail.com>,, aj_bng@yahoo.co.in <aj_bng@yahoo.co.in>,, afshan yasmeen <afshanyasmeen@gmail.com>,, anusha.ravi@timesgroup.com,, ravindrabhat@prajavani.co.in,, khajane@gmail.com,, Bageshree Subbanna <bageshree.subbanna@gmail.com>,, Information Department <varthasoudhabengaluru@gmail.com>,, vikhar.sayeed@thehindu.co.in,, Vikhar Ahmed Sayeed <vikhar.sayeed@gmail.com>,, Sampath Kumar <ycsampathkumar@gmail.com>,, Dr Mamatha Hegde <hegde2004mamatha@gmail.com>,, gpshetty74@yahoo.com,, Daraneesh Bookanakere <darani2287@gmail.com>,, srikanthswmy@yahoo.com,, ks somanna <kssomanna275@gmail.com>,, Ravikumar B.G. <bgrkum@gmail.com>,, Arvind Last <raichurvani@gmail.com>,, Shivanna Shivanna <nammashiva@gmail.com>,, GOPAL R <phalithamsha@gmail.com>,, Janardhan Jani <janabgjana8@gmail.com>,, Naheed Ataulla <naheed.ataulla@gmail.com>,, lingarajubnc@gmail.com, nekaaravani@gmail.com, Dakshin Bharat Rashtramat Daily <news@dakshinbharat.com>,, suresh pattan Suresh <pattansuresh@gmail.com>,, Raveesh Raveesha <raveeshahs@gmail.com>,, senthil nathan <senthu.news@gmail.com>,, Vilas Melagiri <vilasmelagiri@gmail.com>, bang08@yahoo.com, Jani janardhan bk <janardhanbk@gmail.com>,, basava raju <basawraju1956@gmail.com>,, Roshan Baig <ministerforiih@gmail.com>,, k s ksnagaraj <ksnagarajbgm@gmail.com>,, naveen ammembala <nammembala@gmail.com>,, pramoda shastri <pramodashastri@gmail.com>,, Shankar Pagoji <spagoji@gmail.com>,, basurani@gmail.com,, hemanth kumar <khemanth999@gmail.com>,, Manjunatha C <manjumdb@gmail.com>,, Sitaram Shasthri <sastryaloor@gmail.com>,, Shivashankar H.P <cineshiv@gmail.com>,, Arun bangalore ananthmurthy <arunroopa73@gmail.com>,, yasir.mushtaq@newsnation.in,, Alvin Mendonca <alvinm20@gmail.com>,, Azmathulla Shariff <azmathulla35@gmail.com>,, harihar times <hariharatimes@gmail.com>,, Ashok Shamanna <timesmobiletv@gmail.com>,, rajendra m S <merajendra@gmail.com>,, jaibheemagade.daily bangalore, Kolar MURALI, Suddimoola Raichur, Dineshamin Mattu, Ravinarayana Gunaje, Naveen Soorinje, prabhakar prabhakar, Ashwini YS, Vinay Madhava Gowda, Ahmed Khan, HARRY D'SOUZA, Maheswara Reddy, rajesh chatla, rajeshr...@prajavani.co.in, kp PUTTASWAMAIAH, diprv...@gmail.com, Dhyan Poonacha, mani ms, nisar hameed, kala bandhu, M Siddaraju, cdm siddu, Jadiyappa Gedlagatti, Jayaprakash Narayana, swamy swamy, davanagere...@gmail.com, varthaprabh...@gmail.com, Samyukta Karnataka, ayub khan, muniraj raju, Hariprakash Konemane, Vrl Daily, p18news...@nw18.com, inpu...@gmail.com, editorpu...@gmail.com, Vijay J R, Manohar Yadavatti, Manohar Yadavatti, Chandan K Gowda, Shivakumar S R, rajendra m S, Ramesh Hirejambur, Divyashree V R, mandyavartha, mandyaandolana andolanamandya, somu 9772, kannambadi kannambadi, monibt09 monibt09, Nudi Bharathi, SHIVA YOGI SK, sanje impu, shashi suddisangharsha, somu keragodu, star of mandya, U M Mahesh, Information Department, To: mandyavartha@googlegroups.com, newstoportal@gmail.com, abburprakash@gmail.com, mandyaandolana@gmail.com, somu9772@gmail.com, heggademandya@gmail.com, kannambadik@gmail.com, knravimandya@gmail.com, kolalu@rediffmail.com, mandyamaathu@yahoo.com, mandyatvlive@gmail.com, monibt09@gmail.com, moni_mdy@rediffmail.com, mp.sk@rediffmail.com, navisona@gmail.com, nudibharathi@gmail.com, pouravani@gmail.com, press.sk@gmail.com, ranakahalep@gmail.com, ravi_lalipalya@rediffmail.com, sanjeimpu@gmail.com, sanjesamachara.mdy@gmail.com, shashisuddisangharsha@gmail.com, kemmugilu@gmail.com, starofmandya@gmail.com, udayakala_mandya@yahoo.co.in, ummahesh@gmail.com, varthasoudhabengaluru@gmail.com, vkmandya@gmail.com, naikempi@gmail.com, voice@mysoorumithra.com, lingarajudl@gmail.com, balakrishnajm@gmail.com, shimshaprabha@gmail.com, mysorevar, Manjunath Public tv, Lingaraju Dl, balu krishna, shimshaprabha, hindubl...@thehindu.co.in, Murali T, TarakaRamu Pogiri, aall rounder, Ramesha Doddapura, lokmatn...@gmail.com, Keshava Murthy M, Nandidurga Balu, Jinu Kumar Jena, lingaraju d, Lingaraju D, edlben...@dinamalar.in, meena nagaraju, Dinakaran 2009, Shantha Kumar, pib bng, c...@ibcworldnews.com, Ramesh Yalagachina, Samaga Sheshadri, Naveen Menezes, gurunath...@thehindu.co.in, Shivakumar Menasinakai, Vishwanatha t h, Kishore Saggare, bevarah...@gmail.com, kuchangi prasanna, venkat...@gmail.com, surajut...@gmail.com, srika...@kannadaprabha.in, shreekanth gowdasandra, S.Narayanaswamy, Sheshu .M, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, Naveenkumar Kn, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, shashidhar singh, Bharathi Rcc, Dasharath Sawoor, mailto: kkarnataki@indiatimes.com, cksivanandan@journalist.com, mayas@ndtv.com, orientalnews@hotmail.com, vbbangalore@yahoo.co.in, akramhasan@yahoo.com, airbangalore@yahoo.com, bglphoto@thehindu.co.in, vskarnic@gmail.com, sundharreporter@yahoo.com, srajendran16@hotmail.com, bangalore.bias@gmail.com, janabandade@yahoo.co.in, sreejavn@aol.in, sreejavn@gmail.com, dt_bangalore@hotmail.com, manohar@namasthe.in, chandananews@gmail.com, shrumshagangaa@gmail.com, dnssbc_vijay@yahoo.com, eshanyatimes@yahoo.co.in, maapala@gmail.com, varthasoudhabengaluru@googlegroups.com, sivanandanck@mm.co.in, reporter202020@yahoo.co.in, vishukumarnr@gmail.com, unibangalore@gmail.com, uniblr@dataone.in, dinakaranblr@gmail.com, paramesh@asianetworld.tv, parmeshkerekeri@gmail.com, aleem.aleem2010@gmail.com, hunasavadisrikanth@gmail.com, srikanthhunasavadi@, Aleem M., PRESS NEWS, Manu Aiyappa, Haaiminchu Marvel, Sudhir Raina, beng...@youth4jobs.org, mu...@youthjobs.org, keerthi prasad, Manju C.R, Ravi Sisodia, ani...@rediffmail.com, Shantha Thammaiah, shrinath joshi, JEEVAN M, VARTHE JANAPADA, Suresha H L, DAMARUGA, Azmathulla Shariff, saral...@gmail.com, rudresha honnenahalli, Prakash C, Kumaran P, kuma...@timesgroup.com, Narayanan Venkatesan, prasad hegde, Gururaj Br, Sathya Shodha, in...@satyashodha.in, Prem Shekhar, Dhananjay Tk, Melbin Mathew, lakshmi...@suvarnanews.in, suj...@suvarnanews.in, Pressandnews Bangalore, Padmanabha Rao, Prasanna Kumar S, udayakala...@gmail.com, udayakala daily, karnatak...@gmail.com, kerekeriveerappa parmesh, Poornima Ravi, Srikanth Bhat, ಸಪ್ತಸ್ವರ TV, vino...@hindutamil.co.in, Ra Vinoth, Shivanand Tagadur, udaya...@gmail.com, T.K.MALAGOND EDITOR IN CHIEF, Vasudevrao Desai, SAMPATH KUMAR Y C, samayami...@gmail.com, kannada...@gmail.com, Supreetha Hebbar, kannada Kannada, smitha R, lankeshpat...@gmail.com, indiannewsa...@gmail.com, kiran k.n Kiran, mahanthesh kumar, rnu...@gmail.com, manjunath n, mohamed...@gmail.com, Venu Krishna, Ranjith H Ashwath, KAVERI TV, Kumara Raitha, fortunemed...@gmail.com, prasad rao, mayurak...@gmail.com, Bhagya Prakash, bengalu...@gmail.com, Arvind Last, Benki Belaku Raichur, K.R. Renu, ay...@indiangrapevine.com, hima...@indiangrapevine.com, bvenka...@yahoo.co.in, bvenkatsingh, chandrav...@gmail.com, henjar...@gmail.com, sanath...@indianexpress.com, UMA MEDIA CONSULTING UMC, Vilas Melagiri, Lakshman C.K, munjane...@gmail.com, Sridhara V, E RAVI, RAMALINGAPPA B.K, karnataka...@gmail.com, Gopika Mallesh, J Nagabhushan, palike...@gmail.com, prabhu natekar, ume...@htdigital.in, munjan...@gmail.com, munjan...@yahoo.in, munjanee...@gmail.com, pras...@vrlmedia.com, christin mathew philip, somash...@etvbharat.com, Somashekar kavachoor, Aparna As, kkpsv...@gmail.com, Antharagange DailyNewsPaper, Gummata Nagari Daily Newspaper BIJAPUR, Md Irfan Shaikh, nagar...@gmail.com, samyukt...@gmail.com, newsageh...@gmail.com, ESHANYA TIMES, vipnews...@gmail.com, Devitha cs16, punya vathi, khale...@prajavani.co.in, balakr...@prajavani.co.in, nel...@gmail.com, Manjunat Gvt, hkne...@gmail.com, harish kumar, Manjesha U, musanje...@gmail.com, newsofpol...@gamil.com, shrisha...@gmail.com, SANATH DESAI, yashas...@gmail.com, vinayak bhat, natara...@gmail.com, Nagesh Kn, Nandini .N, Dr. Indukant Dixit, indukan...@pti.in, hdnews...@gmail.com, Devalapalli N Girish Reddy, Raghuraj press reporter Journalist, Shodhavani News, dharidee...@gmail.com, mallam...@gmail.com, ashoka kote, karanja...@yahoo.com, Parvateesha Bilidaale, Bukanakere Manjunatha, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, Rakesh N S <rakesh.ans@gmail.com>, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani <janatavani@mac.com>, eemunjanedailykannada@gmail.com, kannadigaru@yahoo.com, msvaarthe@gmail.com, eemunjanedailykannada@yahoo.com, newsblr@vijayavani.in,, lokes...@gmail.com, siddamma jamadar, arvin...@gmail.com, dasaratha raman, suresh....@gmail.com, tamil5...@gmail.com, kalyana...@gmail.com, kkg...@gmail.com, N.MUNIYAPPA Kolar, Bhagyalakshmi Srinivasa, yuva...@gmail.com, Ramachandra Swamy, prasarbha...@gmail.com, abdul akram haq, deva sampathkumar, bharath...@gmail.com, venkat polali, mahesh somanna, sagar...@live.com, prajapa...@gmail.com, R Manjunath Kere Manju, Abdul Razak, kampi...@gmail.com, udayadhw...@gmail.com, janaraj...@gmail.com, samyuta...@gmail.com, maarda...@gmail.com, new...@bevarahani.com, prathini...@gmail.com, udayaka...@gamil.com, THEDAILY NEWS, anilsi...@gmail.com, Karunakara G, asho...@prasarbharati.gov.in, asho...@yahoo.co.in, avinash mr, n.ashw...@gmail.com, media man, mnwal...@gmail.com, Mohan Handrangi, Govind Gowda, mardhan...@gmail.com, anudinas...@gmail.com, ramanaga...@gmail.com, vijayakoogu, sanc...@gmail.com, Natesh Rajanna, kolara...@gmail.com, Poornima basavarajapura gowdaiah

 SIR

PLEASE FIND ATTACHED STATE NEWS :

ಪತ್ರಿಕಾ ಪ್ರಕಟಣೆ
PRESS NOTE


ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾದಿsಸಲು ಸರ್ಕಾರಕ್ಕೆ ನೆರವಾಗಿರುವ ಗ್ಯಾರಂಟಿ ಯೋಜನೆಗಳು


ಬೆಂಗಳೂರು, ನವೆಂಬರ್ 4 (ಕರ್ನಾಟಕ ವಾರ್ತೆ):

ವಿಶ್ವ ಸಂಸ್ಥೆಯು ಗೊತ್ತು ಮಾಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ನೆರವಾಗಿವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.

ಅವರು ಇಂದು ಹೋಟೆಲ್ ತಾಜ್‍ನ ಟ್ರಿನಿಟಿ ಸಭಾಂಗಣದಲ್ಲಿ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಐದು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಖಾತರಿ (ಗ್ಯಾರಂಟಿ) ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಾತ್ಮಕ ಕುರಿತು ಕೈಗೊಂಡಿರುವ ಅಧ್ಯಯನಗಳ ಫಲಿತಾಂಶಗಳನ್ನು ಮತ್ತು ಕಾರ್ಯನೀತಿ ಸಲಹೆಗಳನ್ನು ಭಾಗೀದಾರ (Stakeholders) ಸರ್ಕಾರಿ ಇಲಾಖೆಗಳೊಂದಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರೊಂದಿಗೆ ಹಂಚಿಕೊಳ್ಳಲು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ನಾವು ಕೈಗೊಳ್ಳುವ ಜನಗಣತಿ ಹಾಗೂ ಇತರೆ ಅಧ್ಯಯನಗಳನ್ನು ಪರಿಶೀಲಿಸಿದಾಗ ಸಂವಿಧಾನದಲ್ಲಿ ಹೇಳಲಾಗಿರುವ ಹಕ್ಕು ಹಾಗೂ ಗುರಿಗಳನ್ನು ನಾವು ಇನ್ನೂ ಸಾಧಿಸಬೇಕಾಗಿದೆ. ಬಡತನ ನಿರ್ಮೂಲನೆ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮೊದಲನೆಯದಾಗಿದ್ದು, ಕರ್ನಾಟಕ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ತಲಾ ಆದಾಯ ಹೊಂದಿರುವ ರಾಜ್ಯವಾಗಿದೆ. ಇದು ಸಾಧ್ಯವಾಗಿರುವುದು ಗ್ಯಾರಂಟಿ ಯೋಜನೆಗಳಿಂದ ಎಂದರು.

ಹಸಿವು ಮುಕ್ತ, ಪೌಷ್ಟಿಕ ಆಹಾರ ಕೂಡ ಸುಸ್ಥಿರ ಅಭಿವೃದ್ಧಿಯ ಗುರಿಗಳಾಗಿದ್ದು, ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಯೋಜನೆಗಳ ಸಂಯೋಜನೆಯಿಂದ ರಾಜ್ಯದ ಅಪೌಷ್ಟಿಕತೆ ಮಟ್ಟ ಸುಧಾರಿಸಿದೆ. ಯುವನಿಧಿ ಮೂಲಕ ಗುಣಮಟ್ಟದ ಶಿಕ್ಷಣವನ್ನು ಅರ್ಥಪೂರ್ಣವಾಗಿದೆ. ಕೌಶಲ್ಯ ತರಬೇತಿ ಹಾಗೂ ಹಣಕಾಸಿನ ನೆರವು ಒದಗಿಸುವ ಮೂಲಕ ಶೇಕಡ ನೂರರಷ್ಟು ಉದ್ಯೋಗವನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದರು.

ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಲಿಂಗ ಸಮಾನತೆಯೂ ಒಂದಾಗಿದೆ. ಸರ್ಕಾರ ಮಹಿಳಾ ಆಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿರುವ ಕಾರಣ ಎರಡು ವರ್ಷಗಳಲ್ಲಿ ಮಹಿಳಾ ಸಹಭಾಗಿತ್ವ 37% ಗೆ ಏರಿಕೆಯಾಗಿದೆ. ಮಹಿಳೆಯರಿಗೆ ಹೊಣೆಗಾರಿಕೆ ಹಾಗೂ ಸಂಪನ್ಮೂಲಗಳನ್ನು ಒದಗಿಸಿದರೆ ಇಡೀ ಕುಟುಂಬ ಹಾಗೂ ಸಮಾಜವನ್ನು ನಿಭಾಯಿಸುತ್ತಾರೆ ಎನ್ನುವುದನ್ನು ಇದು ರುಜುವಾತು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಅನುμÁ್ಠನಗೊಂಡಿವೆ ಎಂಬುದನ್ನು ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಸಂಶೋಧನೆಗಳ ವರದಿಯು ತಿಳಿಸಿದೆ ಎಂದರು.

ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಿದ ಚೆನ್ನೈನ ಎಂ.ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಗಳಾಗಿ ಮಾಡುತ್ತದೆ ಎಂಬುದು ಸುಳ್ಳು. ಈ ಯೋಜನೆಗಳಿಂದ ಬರುತ್ತಿರುವ ಹಣವನ್ನು ಜನರು ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ಕಾಪಾಡಿಕೊಳ್ಳಲು, ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬಳಸುತ್ತಿರುವುದು ಸಮೀಕ್ಷೆಯಿಂದ ಸಾಭೀತಾಗಿದೆ. ಶಕ್ತಿ ಯೋಜನೆಯು ಸರ್ಕಾರವು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿರುವುದನ್ನು ತೋರಿಸುತ್ತದೆ. ಅನ್ನ ಭಾಗ್ಯವು ಬಡಜನರ ಹಸಿವನ್ನು ನಿವಾರಿಸಿದೆ. ಯುವನಿಧಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಜೊತೆಗೆ ಉದ್ಯೋಗವನ್ನು ಅರಸಲು ನೆರವಾಗುತ್ತಿದೆ.

ಸಾರ್ವಜನಿಕರ ಮುಂದೆ ಸಂಶೋಧನೆಗಳನ್ನು ಹಂಚಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ನಡೆ ಪಾರದರ್ಶಕತೆ, ಕಲಿಕೆ ಹಾಗೂ ಉತ್ತರದಾಯಿತ್ವದೆಡೆಗೆ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ. ಸಂಶೋಧನೆಗಳು ವರದಿಗಳಾಗಿ ಉಳಿಯದೇ ಜನರನ್ನು ತಲುಪುವುದು ಮುಖ್ಯ ಎಂದರು.

ಒಟ್ಟಿನಲ್ಲಿ ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರವು ಗ್ರಾಮೀಣ ಭಾಗದ ರೈತ ಮಹಿಳೆಯರು ಕೃಷಿಯಲ್ಲಿ ಬಳಸಲು ಅನುಕೂಲವಾಗುವಂತಹ ಯಂತ್ರೋಪಕರಣಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ಈಗಿರುವ ಬಹುಪಾಲು ಕೃಷಿ ಯಂತ್ರೋಪಕರಣಗಳು ಪುರುಷ ರೈತರು ಬಳಸುವಂತಿವೆ. ರೈತರು ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅತಿಯಾಗಿ ಔಷಧಗಳನ್ನು ಸಿಂಪಡಣೆ ಮಾಡುತ್ತಿರುವುದರಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತಿರುವುದರಿಂದ ಕೃಷಿ ವಿಶ್ವವಿದ್ಯಾನಿಲಯಗಳು ಅವರಿಗೆ ಸರಿಯಾದ ಮಾರ್ಗದರ್ಶ ನ ನೀಡುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಇನ್ನೂ ನಾಲ್ಕು ವರ್ಷಗಳು ಬಾಕಿ ಇದ್ದರೂ ಬಹುತೇಕ ದೇಶಗಳು ಇವುಗಳನ್ನು ತಲುಪುವಲ್ಲಿ ಹಿಂದುಳಿದಿವೆ. ಶೇ 30 ರಷ್ಟು ಸೂಚಕಗಳನ್ನು ಮಾತ್ರ ತಲುಪಿವೆ ಎಂದರು.
ಕೋವಿಡ್ ನಂತರದಲ್ಲಿ ಹವಾಮಾನ ಬದಲಾವಣೆ, ಆಹಾರ ಮತ್ತು ಪೌಷ್ಟಿಕತೆ, ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆಯಾಗಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮಾನವನ ಹಸ್ತಕ್ಷೇಪದಿಂದ ಜಾಗತಿಕ ತಾಪಮಾನ 2.5% ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ ಕುಮಾರ್ ಸಿಂಗ್ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುμÁ್ಠನದ ಉಪಾಧ್ಯಕ್ಷರುಗಳಾದ ಮೆಹರೂಜ್ ಖಾನ್, ಪುμÁ್ಪ ಅಮರನಾಥ್, ದಿನೇಶ್ ಗೂಳಿಗೌಡ ಅವರು ಹಾಜರಿದ್ದರು.

ಬೆಳಿಗ್ಗೆ ಸರ್ಕಾರದ ಖಾತರಿ ಯೋಜನೆಗಳ ಅನುಷ್ಠಾನÀದಲ್ಲಿ ಇ-ಆಡಳಿತದ ಪಾತ್ರ ಎಂಬ ವಿಷಯದಲ್ಲಿ ನಡೆದ ತಾಂತ್ರಿಕ ಅಧಿವೇಶನದಲ್ಲಿ ಜಿ.ಐ.ಎಫ್.ಟಿ ಯ ನಿರ್ದೇಶಕರಾದ ಡಾ. ಕೆ.ಜೆ.ಜೋಸೆಫ್ ಅವರು ಮಧ್ಯಾಹ್ನ ಜರುಗಿದ ತಾಂತ್ರಿಕ ಅಧಿವೇಶನದಲ್ಲಿ ಸರ್ಕಾರದ ಐದು ಖಾತರಿ ಯೋಜನೆಗಳ ಪರಿಣಾಮಾತ್ಮಕ ಮೌಲ್ಯಮಾಪನ ವಿಷಯ ಮುಂಬೈನ ಎಕ್ಸ್.ಕೆ.ಡಿ.ಆರ್ ಫೋರಂನ ಡಾ.ಸೂಸನ್ ಥಾಮಸ್, ಲಂಡನ್ ನ ಕಿಂಗ್ಸ್ ಕಾಲೇಜ್ ನ ಡಾ.ಪ್ರಭಾ ಕೋಟೀಸ್ವರನ್, ಲೋಕ್ ನೀತಿ-ಸಿ.ಎಸ್.ಡಿ.ಎಸ್ & ಇಂಡಸ್ ಆಕ್ಷನ್ ನ ತಾರ ಕೃಷ್ಣಸ್ವಾಮಿ ಅವರು ಭಾಗವಹಿಸಿದ್ದರು.

ಶಕ್ತಿ ಯೋಜನೆಯ ಪರಿಣಾಮಾತ್ಮಕ ಮೌಲ್ಯಮಾಪನ ಎಂಬ ವಿಷಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಅಬ್ದುಲ್ ರವೂಫ್ ಪಿಂಚಾರಿ, ಜಸ್ಟ್ ಜಾಬ್ಸ್ ನೆಟ್ ವಕ್ರ್ಸ್ ನ ಡಾ.ಸಬೀನಾ ದಿವಾನ್ ಮತ್ತು ಡಾ. ಶಿಪ್ರ ನಿಗಮ್, ಅಜೀಂ ಪ್ರೇಮ್ ಜಿ. ವಿಶ್ವವಿದ್ಯಾಲಯದ ಡಾ. ಅರ್ಜುನ್ ಜಯದೇವ್ ಉಪಸ್ಥಿತರಿದ್ದರು.
ಇನ್ನು ಸಂಜೆ ನಡೆದ ತಜ್ಞರ ಚರ್ಚೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಟಿ.ಎಂ ವಿಜಯ ಬಾಸ್ಕರ್, ಎನ್‍ಐಎಎಸ್‍ನ ಪ್ರಾಧ್ಯಾಪಕರಾದ ಡಾ. ನರೇಂದ್ರ ಪಾಣಿ, ಡಿ.ಬಿ.ಪಿ.ಎಸ್ ನ ನಿರ್ದೇಶಕರಾದ ಡಾ.ನಿವೇದಿತಾ ಮೆನನ್, ಐ.ಎಸ್.ಇ.ಸಿ ಯ ಪ್ರಾಧ್ಯಾಪಕರಾದ ಡಾ. ಕಲಾ ಎಸ್. ಶ್ರೀಧರ್, ಜಿ.ಐ.ಎಫ್ ನ ಮಾಜಿ ನಿರ್ದೇಶಕರಾದ ಡಾ.ಡಿ.ನಾರಾಯಣ ಭಾಗವಹಿಸಿದ್ದರು.

ಬೆಳಗ್ಗಿನಿಂದ ಸಂಜೆ ತನಕ ಜರುಗಿದ ಈ ಕಾರ್ಯಗಾರದಲ್ಲಿ ಖಾತರಿ ಯೋಜನೆಗಳ ಭಾಗೀದಾರ (Stakeholders) ರಾದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರುಗಳು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.

ಆರ್ಥಿಕ ಇಲಾಖೆಯ ಕಾರ್ಯದರ್ಶಿ ಗಳಾದ ಡಾ. ವಿಶಾಲ್ ಆರ್ ಅವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು:
ಕಿಂಗ್ಸ್ ಕಾಲೇಜ್ ಲಂಡನ್ ಅವರು ಮಾಡಿರುವ ಸಮೀಕ್ಷೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಶೇಕಡಾ 99.8ರಷ್ಟು ಫಲಾನುಭವಿಗಳು ತಮಗೆ ಸರ್ಕಾರ ನೀಡುತ್ತಿರುವ ಮಾಸಿಕ ರೂ 2000 ನಗದು ಸಂಪೂರ್ಣವಾಗಿ ಬರುತ್ತಿದೆ ಎಂದಿದ್ದಾರೆ. ಶೇಕಡಾ 78ರಷ್ಟು ಫಲಾನುಭವಿಗಳು ಹಣ ಒಂದು ಅಥವಾ ಅದಕ್ಕಿಂತ ಹೆಚ್ಚು ತಿಂಗಳಷ್ಟು ವಿಳಂಬವಾಗಿ ಬರುತ್ತಿದೆ ಎಂದಿದ್ದಾರೆ. ಹಾಗೆಯೇ ಶೇಕಡಾ 99ರಷ್ಟು ಫಲಾನುಭವಿಗಳು ತಮಗೆ ಬರುವ ಹಣವನ್ನು ಖರ್ಚು ಮಾಡುವ ಅಧಿಕಾರ ತಮಗೇ ಇದೆ ಎಂದಿದ್ದಾರೆ.

ಗೃಹಲಕ್ಷ್ಮಿ ಹಣವನ್ನು ಹೆಚ್ಚಿನ ಫಲಾನುಭವಿಗಳು ಆಹಾರ (78%), ಕುಟುಂಬ ನಿರ್ವಹಣೆ ವೆಚ್ಚಗಳು (54%), ಔಷಧಿಗಳು (48%) ಹಾಗೂ ಮಕ್ಕಳ ಶಿಕ್ಷಣ ವೆಚ್ಚಗಳಿಗೆ (28%) ಬಳಸುತ್ತಿರುವುದು ಕಂಡುಬಂದಿದೆ.
ಫಲಾನುಭವಿ ಮಹಿಳೆಯರಲ್ಲಿ ಯೋಜನೆ ಜಾರಿಯ ನಂತರ ಬ್ಯಾಂಕ್ ಖಾತೆ ಹೊಂದಿದವರ ಸಂಖ್ಯೆ ಶೇಕಡಾ 8ರಷ್ಟು ಜಾಸ್ತಿಯಾಗಿದೆ. ಹಾಗೆಯೇ, ತಮ್ಮ ಬ್ಯಾಂಕ್ ಖಾತೆಯನ್ನು ತಾವೇ ನಿರ್ವಹಿಸುತ್ತಿರುವವರ ಸಂಖ್ಯೆ ಶೇಕಡಾ 15ರಷ್ಟು ಹೆಚ್ಚಳವಾಗಿದೆ.

ಅನ್ನಭಾಗ್ಯ ಯೋಜನೆ:
ಶೇಕಡಾ 95ರಷ್ಟು ಫಲಾನುಭವಿ ಮಹಿಳೆಯರು ನಗದು ರೂಪದಲ್ಲಿ ಹಣ ನೀಡುವುದಕ್ಕಿಂತ ಆಹಾರ ಧಾನ್ಯದ ರೂಪದಲ್ಲೇ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿರಾ ಕಿಟ್ ನೀಡುವ ಸರ್ಕಾರದ ಇತ್ತೀಚಿನ ನಿರ್ಧಾರ ಸೂಕ್ತ ಎಂದಿದ್ದಾರೆ.

ಗೃಹ ಜ್ಯೋತಿ ಯೋಜನೆ:
ಶೇಕಡಾ 89ರಷ್ಟು ಫಲಾನುಭವಿಗಳು ಯೋಜನೆಯಿಂದಾಗಿ ವಿದ್ಯುತ್ ಬಿಲ್ ಗಾಗಿ ಪಾವತಿಸುತ್ತಿದ್ದ ಹಣ ಉಳಿತಾಯವಾಗುತ್ತಿದೆ ಎಂದಿದ್ದಾರೆ. ಶೇಕಡಾ 94ರಷ್ಟು ಫಲಾನುಭವಿಗಳು ಉಳಿತಾಯದ ಹಣವನ್ನು ಕುಟುಂಬ ನಿರ್ವಹಣೆ ವೆಚ್ಚಕ್ಕಾಗಿ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.

ಶಕ್ತಿ ಯೋಜನೆ:
ಶಕ್ತಿ ಉಚಿತ ಬಸ್ ಸೇವೆ ಯೋಜನೆಯಿಂದಾಗಿ ಶೇಕಡಾ 43.1ರಷ್ಟು ಮಹಿಳೆಯರಿಗೆ ಹಣದ ಉಳಿತಾಯ ಸಾಧ್ಯವಾಗಿದೆ. ಹೀಗೆ ಉಳಿದ ಹಣವನ್ನು ಮುಖ್ಯವಾಗಿ ಕುಟುಂಬ ನಿರ್ವಹಣೆ ವೆಚ್ಚ ಹಾಗೂ ಮಕ್ಕಳಿಗಾಗಿ ಬಳಸುತ್ತಿದ್ದಾರೆ.

ಶೇಕಡಾ 98.7ರಷ್ಟು ಮಹಿಳೆಯರು ಯೋಜನೆಯು ಪ್ರಯಾಣ ನಿರ್ಧಾರಕ್ಕೆ ಸಂಬಂಧಿಸಿದ ತಮ್ಮ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ ಎಂದಿದ್ದಾರೆ. ಶೇಕಡಾ 92.9ರಷ್ಟು ಮಹಿಳೆಯರು ಪ್ರಯಾಣಕ್ಕಾಗಿ ಕುಟುಂಬದ ಮೇಲಿನ ಅವಲಂಬನೆಯ ತಗ್ಗಿದೆ ಎಂದಿದ್ದಾರೆ.

ಶೇಕಡಾ 61.1ರಷ್ಟು ಮಹಿಳೆಯರು ಉದ್ಯೋಗಕ್ಕಾಗಿ ಮುಂಚೆಗಿಂತ ಈಗ ಹೆಚ್ಚು ಬಾರಿ ಪ್ರಯಾಣಿಸುತ್ತಿರುವುದಾಗಿ, ಶೇಕಡಾ 59ರಷ್ಟು ಮಹಿಳೆಯರು ಉದ್ಯೋಗಕ್ಕಾಗಿ ಹೆಚ್ಚು ದೂರ ಪ್ರಯಾಣಿಸುತ್ತಿರುವುದಾಗಿ ಹಾಗೂ ಶೇ 18.4ರಷ್ಟು ಮಹಿಳೆಯರು ಹೊಸ ಸ್ಥಳಗಳಿಗೆ ಹಾಗೂ ವಿವಿಧ ಉದ್ಯೋಗ ಸ್ಥಳಗಳಿಗಾಗಿ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹಾಗೆಯೇ ಶೇಕಡಾ 10.5ರಷ್ಟು ಮಹಿಳೆಯರು ಶಕ್ತಿ ಯೋಜನೆ ಜಾರಿಯಾದ ನಂತರ ಉದ್ಯೋಗಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ಉದ್ಯೋಗಕ್ಕಾಗಿ ಜಿಲ್ಲಾ ವ್ಯಾಪ್ತಿಯ ಹೊರಗಿನ ತಾಲ್ಲೂಕುಗಳಿಗೆ ತೆರಳುತ್ತಿರುವವರ ಮಹಿಳೆಯರ ಪ್ರಮಾಣವು ಶೇಕಡಾ 14.2ರಿಂದ ಶೇಕಡಾ 24.3ಕ್ಕೆ ಹೆಚ್ಚಾಗಿದೆ. ಹೊರಗಿನ ಜಿಲ್ಲೆಗಳಿಗೆ ತೆರಳುತ್ತಿರುವವರ ಪ್ರಮಾಣವು ಶೇಕಡಾ 6.7ರಿಂದ ಶೇಕಡಾ 8.4ಕ್ಕೆ ಏರಿಕೆಯಾಗಿದೆ.

ಲೋಕನೀತಿ-ಸಿಎಸ್ ಡಿಎಸ್ ಮತ್ತು ಇಂಡಸ್ ಆಕ್ಷನ್ ಸಹಭಾಗಿತ್ವದಲ್ಲಿ ತಾರಾ ಕೃಷ್ಣಸ್ವಾಮಿ ಅವರು ನಡೆಸಿದ ಅಧ್ಯಯನದ ಪ್ರಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಉಳಿತಾಯವಾಗುತ್ತಿರುವ ಹಣವನ್ನು ಶೇಕಡಾ 85 ರಿಂದ 91ರಷ್ಟು ಮಂದಿ ಪೌಷ್ಟಿಕ ಆಹಾರಗಳು ಹಾಗೂ ಕುಟುಂಬ ಸದಸ್ಯರ ಆರೋಗ್ಯ ಸೇವೆಗಳಿಗಾಗಿ ಬಳಸುತ್ತಿರುವುದಾಗಿ ಹೇಳಿದ್ದಾರೆ ಶಕ್ತಿ ಯೋಜನೆಯಿಂದಾಗಿ ಶೇಕಡಾ 75ರಷ್ಟು ಫಲಾನುಭವಿ ಮಹಿಳೆಯರಿಗೆ ವಾರಕ್ಕೆ ರೂ 500ರವರೆಗೆ ಉಳಿತಾಯವಾಗುತ್ತಿದ್ದರೆ, ಗೃಹ ಜ್ಯೋತಿಯಿಂದ ಶೇಕಡಾ 74 ರಷ್ಟು ಕುಟುಂಬಗಳಿಗೆ ತಿಂಗಳಿಗೆ ರೂ 500ರವರೆಗೆ ಉಳಿತಾಯವಾಗುತ್ತಿದೆ.

ಆರೋಗ್ಯಸೇವೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯು ಸುಧಾರಣೆಗೊಂಡಿದ್ದು, ಉಳಿತಾಯವಾಗುತ್ತಿರುವ ಹಣವನ್ನು ಹಾಲು, ತರಕಾರಿ, ಮೊಟ್ಟೆ, ಮಾಂಸ ಕೊಳ್ಳಲು ಬಳಸಲು ಸಾಧ್ಯವಾಗುತ್ತಿದೆ ಎಂದಿದ್ದಾರೆ. ಶೇಕಡಾ 88 ರಷ್ಟು ಫಲಾನುಭವಿಗಳು ಈಗ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಊಟ ಸೇವಿಸಲು ಸಾಧ್ಯವಾಗುತ್ತಿದೆ ಹಾಗೂ ಆಹಾರ ಪ್ರಮಾಣ ಕೊರತೆಯಾಗುವ ಆತಂಕವೂ ದೂರವಾಗಿದೆ ಎಂದಿದ್ದಾರೆ.

ಶೇಕಡಾ 83ರಷ್ಟು ಮಹಿಳೆಯರು ವೈದ್ಯರು, ಆಸ್ಪತ್ರೆಗಳು, ತಪಾಸಣೆಗಳು ಹಾಗೂ ಔಷಧಿಗಳನ್ನು ಪಡೆಯಲು ಅನುಕೂಲವಾಗಿದೆ ಎಂದಿದ್ದಾರೆ. ಶೇಕಡಾ 43ರಷ್ಟು ಮಹಿಳೆಯರು ಹೀಟರ್, ಮಿಕ್ಸಿ, ಫ್ರಿಜ್ ನಂತಹ ಉಪಕರಣಗಳನ್ನು ಹೊಸದಾಗಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯು ಮಹಿಳೆಯರ ಉದ್ಯೋಗ ಹಾಗೂ ಆದಾಯಕ್ಕೆ ಉತ್ತೇಜನ ನೀಡಿದಂತಾಗಿದೆ. ಕಡಿಮೆ-ಆಧಾಯದ ಮಹಿಳೆಯರಲ್ಲಿ ಸರಾಸರಿ ಶೇಕಡಾ 19ರಷ್ಟು ಮಂದಿ ಹೊಸ ಉದ್ಯೋಗ ಪಡೆಯಲು ಸಾಧ್ಯವಾಗಿದೆ ಹಾಗೂ ಉತ್ತಮ ವೇತನಕ್ಕಾಗಿ ಬೇರೊಂದು ಜಿಲ್ಲೆಗೆ ಹೋಗಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಎಕ್ಸ್.ಕೆ.ಡಿ.ಆರ್. ಫೋರಂ ಅಧ್ಯಯನದಲ್ಲಿ 2024ರ ಅಂಕಿಅಂಶದ ಪ್ರಕಾರ, ಈ ಎಲ್ಲಾ ಯೋಜನೆಗಳಿಂದಾಗಿ, ಸರ್ಕಾರದಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ರೂ 2425 ಪಾವತಿಯಾಗುತ್ತಿದೆ. ಯೋಜನೆ ಜಾರಿಗೆ ಮುನ್ನ 2023ರಲ್ಲಿ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ರೂ 170 ಪಾವತಿಯಾಗುತ್ತಿತ್ತು.

ಸರ್ಕಾರದಿಂದ ಯಾವುದಾದರೊಂದು ಯೋಜನೆಯ ಹಣ ಪಡೆಯುವ ಕುಟುಂಬಗಳ ಸಂಖ್ಯೆ 2022ರಲ್ಲಿ ರಾಜ್ಯದಲ್ಲಿ ಶೇಕಡಾ 9.3ರಷ್ಟು ಇತ್ತು. ಆದರೆ ಗ್ಯಾರಂಟಿ ಯೋಜನೆ ಜಾರಿಗೊಂಡ ನಂತರ ಶೇಕಡಾ 72.7ಕ್ಕೆ ಹೆಚ್ಚಾಗಿದೆ. ಅನ್ಯಭಾಗ್ಯ ಯೋಜನೆ ಜಾರಿಗೊಂಡ ನಂತರ ಕುಟುಂಬಗಳು ಆಹಾರಕ್ಕಾಗಿ ಮಾಡುವ ವೆಚ್ಚವು ತಗ್ಗಿದೆ. ಗೃಹಜ್ಯೋತಿ ಯೋಜನೆಯಿಂದಾಗಿ ರಾಜ್ಯದ ಶೇಕಡಾ 63.1ರಷ್ಟು ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಲಭ್ಯವಾಗುತ್ತಿದೆ.

ಅಜೀಂ ಪ್ರೇಮ್ ಜಿ ವಿಶ್ವ ವಿದ್ಯಾಲಯದ ಅಧ್ಯಯನದ ಪ್ರಕಾರ ಗ್ಯಾರಂಟಿ ಯೋಜನೆ ಜಾರಿಗೊಂಡ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮಹಿಳೆಯರು ಹಾಗೂ ಪುರುಷ ಪ್ರಯಾಣಿಕರ ಅನುಪಾತವು 60:40 ರಷ್ಟಿದೆ. ಇದು ಮಹಿಳೆಯರಿಗೆ ಸಾರ್ವಜನಿಕ ಸಂಚಾರದ ಲಭ್ಯತೆ ಹೆಚ್ಚಾಗಿರುವುದುನ್ನು ಸೂಚಿಸುತ್ತದೆ.

ಜಸ್ಟ್ ಜಾಬ್ಸ್ ನೆಟ್ ವರ್ಕ್ ಸಮೀಕ್ಷೆಯ ಪ್ರಕಾರ ಗ್ಯಾರಂಟಿ ಯೋಜನೆಯು ಅತ್ಯಂತ ದುರ್ಬಲ ವರ್ಗದ ಮಹಿಳೆಯರಿಗೆ ಹೆಚ್ಚಿನ ಮಟ್ಟದಲ್ಲಿ ಸಬಲೀಕರಣಕ್ಕೆ ಹಾಗೂ ಸಂಚಾರ ಅನುಕೂಲಗಳನ್ನು ಉಂಟುಮಾಡಿದೆ.
ಮುಖ್ಯವಾಗಿ ಕಡಿಮೆ ಆದಾಯವಿರುವವರು, ಅಸಂಘಟಿತ ವಲಯದ ಕೆಲಸಗಾರರು ಹಾಗೂ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರು ಅಧಿಕ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬಗಳ ನಿರ್ವಹಣಾ ವೆಚ್ಚವು ಕಡಿಮೆಯಾಗಿದೆ. ಮಹಿಳೆಯರು ಉದ್ಯೋಗ ಬಿಡುತ್ತಿರುವ ಪ್ರಮಾಣ ಕಡಿಮೆಯಾಗಿದೆ.

ನವೆಂಬರ್ 07 ರಂದು “ಆಚಾರ್ಯತ್ರಯರ ಜಯಂತ್ಯುತ್ಸವ”- ಅಸಗೋಡು ಜಯಸಿಂಹ

ಬೆಂಗಳೂರು, ನವೆಂಬರ್ 11 (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ “ಆಚಾರ್ಯತ್ರಯರ ಜಯಂತ್ಯುತ್ಸವ” ಕಾರ್ಯಕ್ರಮವನ್ನು ನವೆಂಬರ್ 07 ರಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ   ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ತಿಳಿಸಿದರು.

ಇಂದು ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು, ಪ್ರತಿ ವರ್ಷ ಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಚಾರ್ಯ ಮತ್ತು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು "ಆಚಾರ್ಯತ್ರಯರ ಜಯಂತಿ” ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವು  ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ನೆರವೇರಿಸುವರು.  ಅಧ್ಯಕ್ಷತೆಯನ್ನು  ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ವಹಿಸುವರು. ಚಾಣಕ್ಯ ತರಬೇತಿ ಯೋಜನೆಗೆ ಶಾಸಕರು ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ವಿಧಾನಪರಿಷತ್ ಮಾಜಿ ಶಾಸಕರಾದ ಯು.ಬಿ.ವೆಂಕಟೇಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉಪಸ್ಥಿತರಿರುವರು.

ಕಾರ್ಯಕ್ರಮದ ಅಂಗವಾಗಿ ಆದಿಗುರು ಶ್ರೀ ಶಂಕರಾಚಾರ್ಯರ ಕುರಿತು ಸಾಹಿತಿಗಳಾದ ಡಾ. ಬೆಳವಾಡಿ ಮಂಜುನಾಥರವರು, ಭಕ್ತಿ ಮಾರ್ಗದ  ಪ್ರವರ್ತಕರಾದ ಶ್ರೀ ರಾಮಾನುಜಾಚಾರ್ಯರ ಕುರಿತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮುಖ್ಯಸ್ಥರಾದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್  ಹಾಗೂ ಸಂಗೀತ ಮತ್ತು ಭಕ್ತಿಮಾರ್ಗದ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರ ಕುರಿತು ನಿವೃತ್ತ ಪಾಂಶುಪಾಲರು ಹಾಗೂ ಪ್ರಸಿದ್ಧ ವಿದ್ವಾಂಸರಾದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ರವರು ಉಪನ್ಯಾಸ ನೀಡಲಿದ್ದಾರೆ. ಅಂದು ಬೆಳಿಗ್ಗೆ 9.30 ರಿಂದ 10.30ರ ವರೆಗೆ ವಿದುಷಿ ಮೇಘ ಶಿವಕುಮಾರ್ ಅವರಿಂದ “ದಾಸವಾಣಿ ಗಾಯನ” ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

“ಆಚಾರ್ಯತ್ರಯರ ಜಯಂತಿ' ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ  ಬ್ರಾಹ್ಮಣ ಸಮುದಾಯದ  ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.  

ನ್ಯಾಯಾಂಗ ಕ್ಷೇತ್ರದಿಂದ ಬಿ.ವಿ.  ಆಚಾರ್ಯ, ಆಯುರ್ವೇದ ಕ್ಷೇತ್ರದಿಂದ  ಡಾ. ಎನ್. ಅನಂತರಾಮನ್, ವೈದ್ಯಕೀಯ ಕ್ಷೇತ್ರದಿಂದ ಡಾ. ಶ್ರೀನಾಥ, ವೇದ ಸಾಹಿತ್ಯ ಕ್ಷೇತ್ರದಿಂದ ಆರ್.ವಿ. ಜಾಗೀರ್ ದಾರ್, ವಾಯುಯಾನ ಉದ್ಯಮ ಕ್ಷೇತ್ರದಿಂದ ಕ್ಯಾಪ್ಟನ್ ಗೋಪಿನಾಥ್, ಸಂಗೀತ ಕ್ಷೇತ್ರದಿಂದ ವಿದ್ಯಾನ್ ಬಿ.ಕೆ. ಅನಂತರಾವ್, ಪತ್ರಿಕೋದ್ಯಮ ಕ್ಷೇತ್ರದಿಂದ ರಘುತ್ತೋಮ್ ಕೊಪ್ಪರ್, ಗಮಕ ಕ್ಷೇತ್ರದಿಂದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ದಾಸ ಸಾಹಿತ್ಯ ಕ್ಷೇತ್ರದಿಂದ ಶ್ರೀಮತಿ ತ್ರಿವೇಣಿ ಬಾಯಿ ಎನ್ ಆಶ್ರೀತ್, ಕನ್ನಡದಲ್ಲಿ ಗಣಕ ವಿಜ್ಞಾನ ಕ್ಷೇತ್ರದಿಂದ ಜಿ.ಎನ್.ನರಸಿಂಹಮೂರ್ತಿ ನಾರಾಯಣ, ಸಹಕಾರ ಕ್ಷೇತ್ರದಿಂದ  ರಾಘವ ವಿಷ್ಣು ಬಾಳೇರಿ ಮತ್ತು ಆನುವಾದ ಕ್ಷೇತ್ರದಿಂದ ಬಿ.ಎಸ್.ಜಯಪ್ರಕಾಶ್ ನಾರಾಯಣ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ಯುವಕ-ಯುವತಿಯರು ನಾಗರಿಕ ಸೇವೆಗಳಾದ ಐ.ಎ.ಎಸ್., ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಆಡಳಿತ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತರಬೇತಿಗಾಗಿ ಗರಿಷ್ಠ  ಒಂದು ಲಕ್ಷ ರೂ.ಗಳ ಸಹಾಯಧನ ನೀಡುವ ಚಾಣಕ್ಯ ಆಡಳಿತ ತರಬೇತಿ ಯೋಜನೆಗೆ ಚಾಲನೆ ನೀಡಲಾಗುವುದು ಹಾಗೂ ಬ್ರಾಹ್ಮಣ ಸಮುದಾಯದಲ್ಲಿ ಉದ್ಯಮಶೀಲತೆ ವೃದ್ಧಿಸುವಂತೆ ಮಾಡಲು 2025-26ನೇ ಸಾಲಿನಿಂದ ನೂತನವಾಗಿ ವಿಪ್ರ ಸ್ವ ಉದ್ಯಮ  ನೇರ ಸಾಲ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದ್ದು, ಫಲಾನುಭವಿಗಳಿಗೆ ಅಂದು ಸಾಂಕೇತಿಕವಾಗಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಪ್ರಸ್ತುತ ಸರ್ಕಾರವು ಮಂಡಳಿಯ ಎಲ್ಲ ಕಾರ್ಯಚಟುವಟಿಕೆಗಳಿಗೆ ಬೇಕಾದ ಅನುದಾನ ನೀಡುತ್ತಿದೆ. ಮಂಡಳಿಯು ನಿರಂತರವಾಗಿ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಸಮಸ್ತ ಬ್ರಾಹ್ಮಣ ಸಮುದಾಯದ ಪರವಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕೆ. ದೀಪಶ್ರೀ, ನಿರ್ದೇಶಕರಾದ ಪಿ.ಎಂ.ಮಾಲತೇಶ್ ಹಾಗೂ ಶ್ರೀನಿವಾಸಮೂರ್ತಿ, ವೆಂಕೋಬರಾವ್ ಉಪಸ್ಥಿತರಿದ್ದರು.

ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು, ನವೆಂಬರ್ 05 (ಕರ್ನಾಟಕ ವಾರ್ತೆ):

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು 2025-26ನೇ ಸಾಲಿನಲ್ಲಿ ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆ/ ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್.ಡಿ. ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ.) “ವಿಜ್ಞಾನ ಮತ್ತು ಇಂಜಿನಿಯರಿಂಗ್‍ನಲ್ಲಿ ಪಿಹೆಚ್.ಡಿ. ಸಂಶೋಧನೆಗೆ ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನ ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಅನುμÁ್ಠನಗೊಳಿಸುತ್ತಿದೆ.

ಆನ್‍ಲೈನ್ ಮೂಲಕ ಅರ್ಜಿಗಳನ್ನು ಡಿಸೆಂಬರ್ 05, 2025 ಸಂಜೆ 5.00 ಗಂಟೆ ಒಳಗಾಗಿ ಸಲ್ಲಿಸಬೇಕು.    
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಜಾಲತಾಣ ಲಿಂಕ್ http://ksteps.karnataka.gov.in ಮೂಲಕ ಭೇಟಿ ನೀಡಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Karnataka DST-Ph.D.  Fellowship for Research Students in Science and Engineering
Bengaluru, November 05 (Karnataka Information):
The Department of Science and Technology (DST), Govt. of Karnataka is implementing the “Karnataka DST-Ph.D. Fellowship for Research Students in Science and Engineering” programme through Karnataka Science and Technology Promotion Society (KSTePS).

Online applications are invited from eligible research scholars, who have already registered for Ph.D. in Science or Engineering at recognized University/ Institution/ College in Karnataka for availing fellowship under the program during the FY 2025-26.

The last date for the submission of online application is on or before 5th December 2025,  5.00 pm.

For more details and for the link to submit the application, login to http://ksteps.karnataka.gov.in.


ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ನಿರ್ವಹಣೆ ಮುಖ್ಯ - ಕುಲಪತಿ ಡಾ. ವಿಷ್ಣುವರ್ಧನ

ಬೆಂಗಳೂರು, ನವೆಂಬರ್ 05 (ಕರ್ನಾಟಕ ವಾರ್ತೆ):

ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ನಿರ್ವಹಣೆ ಮುಖ್ಯ.  ಇತ್ತೀಚೆಗೆ ಬೆಳೆಗಳಲ್ಲಿ ತ್ಯಾಜ್ಯ  ಹೆಚ್ಚಾಗಿದ್ದು ಅದರ ನಿರ್ವಹಣೆಯ ಬಗ್ಗೆ ಸರಿಯಾಗಿ ಚರ್ಚಿಸಿ ರೈತರಿಗೆ ತಿಳಿಸಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿಷ್ಣುವರ್ಧನ ಹೇಳಿದರು.

ಬಾಗಲಕೋಟ, ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದ ಆವರಣದಲ್ಲಿ ಮೂರು ದಿನಗಳವರೆಗೆ ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಮೇತಿ (ಉತ್ತರ) ವಿಸ್ತರಣಾ ನಿರ್ದೇಶನಾಲಯ ಹಾಗೂ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರ ಸಹಯೋಗದೊಂದಿಗೆ ಕೃμÉೂೀನ್ನತಿ ಕೃಷಿ ವಿಸ್ತರಣೆ ಉಪ ಅಭಿಯಾನ (ಆತ್ಮ) ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ  ಕೊಯ್ಲೋತ್ತರ  ತಂತ್ರಜ್ಞಾನ ಕುರಿತು ಉತ್ತರ ಕರ್ನಾಟಕದ 14 ಜಿಲ್ಲೆಗಳ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಅತ್ಮ ಸಿಬ್ಬಂದಿಗಳಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೆಕೆಂಡರಿ ಅಗ್ರಿಕಲ್ಚರಲ್‍ಗೆ ಹೆಚ್ಚಿನ ಆದ್ಯತೆ ನೀಡಿ  ಸಬ್ಸಿಡಿ ಮತ್ತು ಅನುದಾನ ಕೊಡುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಶೀತಗೃಹ ಮತ್ತು ಸಂಸ್ಕರಣಾ ಘಟಕಗಳನ್ನು ಉಪಯೋಗಿಸಿಕೊಂಡು ಬೆಳೆಗಳನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳುವುದರ ಜೊತೆಗೆ ಉತ್ಪನ್ನಗಳಲ್ಲಿ ಬರುವ ತ್ಯಾಜ್ಯ ಕಡಿಮೆ ಮಾಡಲು ಸೂಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೆಂಕಟೇಶಲು ಮಾತನಾಡುತ್ತಾ, ನಮ್ಮ ಜ್ಞಾನ ಮತ್ತು  ತಂತ್ರಜ್ಞಾನಗಳ ಮೂಲಕ ರೈತರಿಗೆ ಮಾಹಿತಿಯನ್ನು ತಲುಪಿಸುವ ಕೆಲಸವಾಗಬೇಕು. ಬೆಳೆಯು ಕಚ್ಚಾ ವಸ್ತುವಿನಿಂದ ಹಿಡಿದು ಗ್ರಾಹಕರು ಸೇರುವವರೆಗೂ ಅದರ ಸಂಸ್ಕರಣೆ ಉತ್ತಮವಾದರೆ ಒಳ್ಳೆಯ ರೀತಿಯ ಸ್ಪಂದನೆ ದೊರೆಯುತ್ತದೆ. ಬೆಳೆಗಳ ಗುಣಮಟ್ಟ ಕಾಪಾಡುವುದರಿಂದ ವಿತರಣೆಯ ಪ್ರಮಾಣ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು  ಉಪಸ್ಥಿತರಿದ್ದರು.
ಡಾ.ದೀಪಾ ತೇರದಾಳ ಕಾರ್ಯಕ್ರಮವನ್ನು  ನಿರೂಪಿಸಿದರು. ಡಾ.ರುದ್ರೇಶ ಡಿ ಎಲ್. ಗಣ್ಯರನ್ನು ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯ ಧಾರವಾಡದ ಪ್ರಾಧ್ಯಾಪಕರು ಹಾಗೂ ಸಮಿತಿ ಸಂಯೋಜಕರಾದ ಎಸ್.ಎನ್ ಜಾಧವ ಪ್ರಾಸ್ತಾವಿಕ ಮಾತನಾಡಿದರು. ಉಪ ನಿರ್ದೇಶಕರಾದ  ಡಾ.ಗೀತಾ ಲೋಳಸೂರಮಠ ಕಾರ್ಯಕ್ರಮವನ್ನು ವಂದಿಸಿದರು.

ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಸಂಗ್ರಹಣಾ ಪ್ರದರ್ಶನ - ಬೆಂಗಳೂರು ಪೆಕ್ಸ್-2025
ವಿಶೇಷ ಅಂಚೆ ಲಕೋಟೆ ಬಿಡುಗಡೆ


ಬೆಂಗಳೂರು, ನವೆಂಬರ್ 05 (ಕರ್ನಾಟಕ ವಾರ್ತೆ):

ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಸಂಗ್ರಹಣಾ ಪ್ರದರ್ಶನದ - ಬೆಂಗಳೂರು ಪೆಕ್ಸ್-2025 ಕಾರ್ಯಕ್ರಮದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಅಂಚೆ ಇಲಾಖೆ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿತು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯ ಸೇನ್ ಮಾತನಾಡಿ, ಇತ್ತೀಚೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್ ದೇಶದ ಹಿಮೆಜಿ ಸೆಂಟ್ರಲ್ ಪಾರ್ಕ್ - ಸಫಾರಿ ಪಾರ್ಕ್‍ಗೆ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಏಷ್ಯನ್ ಆನೆಗಳಾದ – ಸುರೇಶ್ (8), ಗೌರಿ (9), ಶೃತಿ (7) ಮತ್ತು ತುಳಸಿ (5) ಇವುಗಳನ್ನು ಸ್ಥಳಾಂತರಿಸಲಾಗಿದ್ದು, ಇದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ನಿರ್ವಹಣೆಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದ್ದು, ಭಾರತ-ಜಪಾನ್ ನಡುವಿನ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದೆ. ಈ ವಿಶೇಷ ಲಕೋಟೆಯನ್ನು ಬೆಂಗಳೂರು ಪೆಕ್ಸ್-2025 ರ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.

ಬೆಂಗಳೂರು ಪಶ್ಚಿಮ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಮತಿ ಸೂರ್ಯ .ಯು, ಬೆಂಗಳೂರು ದಕ್ಷಿಣ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಗಜೇಂದ್ರ ಕುಮಾರ್ ಮೀನಾ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಶಾಂತ್ ಪಿ.ಕೆ.ಎಂ ಉಪಸ್ಥಿತರಿದ್ದರು.

District Level Stamp Collection Exhibition - Bangalore PEX-2025
Bannerghatta Biological Park releases special postal cover

Bengaluru, November 05 (Karnataka Information):

Bannerughatta Biological Park, in association with the Department of Posts, released a special postal cover during the District Level Philatelic Exhibition – Bengaluru Pex-2025, held on November 4–5, 2025.
The special cover commemorates a remarkable event - the transfer of four Asian elephants, Suresh (8), Gauri (9), Shruti (7), and Tulsi (5), from Bannerughatta Biological Park, Bengaluru to Himeji Central Park - Safari Park, Japan, under the Animal Exchange Programme. This exchange marks a significant milestone in the field of animal husbandry and wildlife management, further strengthening the global wildlife conservation partnership between India and Japan.

The release ceremony was graced by Smt. Surya U., IPOS, Senior Superintendent of Post Offices, Bengaluru West Division, Mr. Gajendra Kumar Meena, IPOS, Senior Superintendent of Post Offices, Bengaluru South Division, Dr. Prashanth P.K.M., IFS, Managing Director, Karnataka Soaps and Detergents Limited and A.V. Surya Sen, IFS, Executive Director, Bannerughatta Biological Park, Bengaluru.

ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ

 ಬೆಂಗಳೂರು, ನವೆಂಬರ್ 05 (ಕರ್ನಾಟಕ ವಾರ್ತೆ):

ನವದೆಹಲಿಯಲ್ಲಿಂದು ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಸೌಹಾಧರ್Àಯುತವಾಗಿ ಭೇಟಿ ಮಾಡಿದರು.  
ಇದೇ ವೇಳೆ ಜಿಎಸ್‍ಟಿ ಬೆಲೆ ಇಳಿಕೆಯ ಮಹತ್ವದ ನಿರ್ಧಾರ ಕೈಗೊಂಡು ದೇಶದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
 
ಕಳೆದ ಸೆಪ್ಟೆಂಬರ್ 22 ರಿಂದಲೇ ಜಿಎಸ್‍ಟಿ ಬೆಲೆ ಇಳಿಕೆಯ ನಿರ್ಧಾರ ಜಾರಿಗೆ ಬಂದಿದ್ದು, ಶೇ.90 ರಷ್ಟು ಸಾಮಗ್ರಿಗಳ ಬೆಲೆ ಇಳಿಕೆಯಾಗಿದೆ. ಇದು ದೇಶದ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ಮಟ್ಟದ ಹೆಚ್ಚಳದ ಜೊತೆಗೆ ಉಳಿತಾಯಕ್ಕೂ ಕಾರಣವಾಗಿದೆ. ಅಲ್ಲದೆ ದೇಶದ ಆರ್ಥಿಕ ಪ್ರಗತಿಗೂ ಶಕ್ತಿ ನೀಡಿದೆ. ತುಮಕೂರಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಜನತೆ ಜಿಎಸ್‍ಟಿ ಬೆಲೆ ಇಳಿಕೆ ನಿರ್ಧಾರದ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದರು.

ತಾಂತ್ರಿಕ ಮತ್ತು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು/ ಹುಬ್ಬಳ್ಳಿ, ನವೆಂಬರ್ 05 (ಕರ್ನಾಟಕ ವಾರ್ತೆ) :

ಪ್ರಸ್ತುತ ಡಿಜಿಟಲ್ ಕ್ರಾಂತಿ, ಕೃತಕ ಬುದ್ಧಿಮತ್ತೆ, ಸೈಬರ್ ಕಾನೂನು, ದತ್ತಾಂಶ ರಕ್ಷಣೆ ಮತ್ತು ಅಂತರರಾಷ್ಟ್ರೀಯ ನ್ಯಾಯ ಕ್ಷೇತ್ರಗಳಲ್ಲಿ ತ್ವರಿತ ಬದಲಾವಣೆಗಳು ನಡೆಯುತ್ತಿವೆ. ಆದ್ದರಿಂದ, ನಮ್ಮ ಕಾನೂನು ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಾನೂನುಗಳಲ್ಲಿ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಸಮಕಾಲೀನ ತಾಂತ್ರಿಕ ಮತ್ತು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವುದು ಅತ್ಯಗತ್ಯವಾಗಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನ್ಯಾಯದ ಪ್ರವೇಶವು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ತಂತ್ರಜ್ಞಾನವು ಅದನ್ನು ಸಬಲೀಕರಣಗೊಳಿಸುವ ಸಾಧನವಾಗಿದೆ. ಇ-ಕೋರ್ಟ್‍ಗಳು, ಆನ್‍ಲೈನ್ ಕಾನೂನು ನೆರವು ಮತ್ತು ಡಿಜಿಟಲ್ ಕಾನೂನು ಶಿಕ್ಷಣದಂತಹ ಉಪಕ್ರಮಗಳು ಈ ದಿಕ್ಕಿನಲ್ಲಿ ಮೈಲಿಗಲ್ಲುಗಳಾಗಿವೆ. ಈ ನಾವೀನ್ಯತೆಗಳಲ್ಲಿ ಕಾನೂನು ವಿದ್ಯಾರ್ಥಿಗಳು ಸಕ್ರಿಯ ಪಾತ್ರ ವಹಿಸಬೇಕು ಮತ್ತು ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಲಭವಾಗಿಸಬೇಕು ಎಂದು ಕರೆ ನೀಡಿದರು.

ಡಾ. ಭೀಮರಾವ್ ಅಂಬೇಡ್ಕರ್ ಅವರ ಕಾನೂನಿನ ವಿಧಾನವು ಆಳವಾದ, ಪ್ರಾಯೋಗಿಕ ಮತ್ತು ಮಾನವೀಯವಾಗಿತ್ತು. ಅವರು ಕಾನೂನನ್ನು ಸಾಮಾಜಿಕ ಬದಲಾವಣೆಗೆ ಪ್ರಾಥಮಿಕ ಸಾಧನವೆಂದು ಪರಿಗಣಿಸಿದರು. ಕಾನೂನು ಎಲ್ಲರಿಗೂ ಸಮಾನವಾಗಿದ್ದಾಗ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶಗಳನ್ನು ಹೊಂದಿರುವಾಗ ಮಾತ್ರ ನ್ಯಾಯಯುತ ಸಮಾಜ ಸಾಧ್ಯ ಎಂದು ಅವರು ನಂಬಿದ್ದರು. ಭಾರತೀಯ ಸಂವಿಧಾನದ ಮೂಲಕ, ಅವರು ಕಾನೂನನ್ನು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆದರ್ಶಗಳಿಗೆ ಜೋಡಿಸಿದರು ಎಂದರು.

ಕಾನೂನು ಕೇವಲ ನಿಯಮಗಳ ಸಂಗ್ರಹವಲ್ಲ, ನ್ಯಾಯ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ಸಾಧನ ಎಂದು ಅಂಬೇಡ್ಕರ್ ನಂಬಿದ್ದರು. ಸಮಾಜವು ಅದನ್ನು ನೈತಿಕವಾಗಿ ಸ್ವೀಕರಿಸಿದಾಗ ಮಾತ್ರ ಕಾನೂನು ಪರಿಣಾಮಕಾರಿಯಾಗುತ್ತದೆ. ಆದ್ದರಿಂದ, ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ದಲಿತರ ಉನ್ನತಿ ಮತ್ತು ಕಾನೂನಿನ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳ ಸ್ಥಾಪನೆಯ ಮಹತ್ವವವನ್ನು ಒತ್ತಿ ಹೇಳಿದ್ದರು” ಎಂದು ರಾಜ್ಯಪಾಲರು ತಿಳಿಸಿದರು.

ಕಾನೂನು ಸಮಾಜದ ಆತ್ಮ. ಇದು ಸಮಾಜವನ್ನು ಶಿಸ್ತುಬದ್ಧ, ಸಮತೋಲಿತ ಮತ್ತು ನ್ಯಾಯಯುತವಾಗಿಡುವ ಮಾರ್ಗದರ್ಶಿ ಶಕ್ತಿಯಾಗಿದೆ. ನಮ್ಮ ಸಂವಿಧಾನ ತಯಾರಕರು ಕಾನೂನನ್ನು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಾಧನವೆಂದು ಪರಿಗಣಿಸಿದ್ದಾರೆ. ಕಾನೂನು ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಪಡೆದುಕೊಳ್ಳುವುದದರ ಜೊತೆಗೆ ಸಮಕಾಲೀನ ತಾಂತ್ರಿಕ ಮತ್ತು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಂಡು, ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.

ಪ್ರಿಯ ವಿದ್ಯಾರ್ಥಿಗಳೇ, ಕಾನೂನಿನಲ್ಲಿ ಯಶಸ್ಸು ಜ್ಞಾನ ಮತ್ತು ತಾರ್ಕಿಕತೆಯ ಮೇಲೆ ಮಾತ್ರವಲ್ಲ, ಸೂಕ್ಷ್ಮತೆ ಮತ್ತು ನೈತಿಕತೆಯ ಮೇಲೂ ಅವಲಂಬಿತವಾಗಿದೆ. ಒಂದು ಪ್ರಕರಣವನ್ನು ಮಂಡಿಸುವಾಗ, ಯಾರೊಬ್ಬರ ಹಕ್ಕುಗಳನ್ನು ರಕ್ಷಿಸಲು ನಿಂತಾಗ, ನಿಮ್ಮ ಆಂತರಿಕ ನ್ಯಾಯ ಪ್ರಜ್ಞೆಯು ನಿಮ್ಮ ಶ್ರೇಷ್ಠ ಮಾರ್ಗದರ್ಶಿಯಾಗಿರುತ್ತದೆ. ಕಾನೂನು ತಜ್ಞರು ಕೇವಲ ಪ್ರಕರಣಗಳನ್ನು ದಾವೆ ಹೂಡುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಡಬೇಕು; ಅವರು ನ್ಯಾಯ, ಶಿಸ್ತು ಮತ್ತು ಸಮಾಜದಲ್ಲಿ ನಂಬಿಕೆಗೆ ಅಡಿಪಾಯ ಹಾಕುತ್ತಾರೆ. ಸಮಾಜದ ಸುಧಾರಣೆಗಾಗಿ, ದುರ್ಬಲರ ಮತ್ತು ವಂಚಿತರ ಹಕ್ಕುಗಳನ್ನು ರಕ್ಷಿಸಲು ಮತ್ತು ಎಲ್ಲರಿಗೂ ನ್ಯಾಯವನ್ನು ಲಭ್ಯವಾಗುವಂತೆ ಮಾಡಲು ಕೊಡುಗೆ ನೀಡಲು ನಿಮ್ಮ ಜ್ಞಾನವನ್ನು ಬಳಸಬೇಕೆಂದು ಸಮಾಜವು ನಿರೀಕ್ಷಿಸುತ್ತದೆ ಎಂದು ಕಿವಿಮಾತು ಹೇಳಿದರು.

ನಮ್ಮ ಋಷಿಮುನಿಗಳು ಮತ್ತು ಸಂತರು ನೀಡಿದ "ಸರ್ವೇ ಭವಂತು ಸುಖಿನಃ" ಎಂಬ ಸಂದೇಶವು ಇಂದಿಗೂ ಕಾನೂನಿನ ಮನೋಭಾವದ ಅಡಿಪಾಯವಾಗಿ ಉಳಿದಿದೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯು ಅದರ ಪ್ರಾಚೀನ ಮೂಲದ ಹೊರತಾಗಿಯೂ, ಇನ್ನೂ ಅತ್ಯುತ್ತಮವಾಗಿದೆ ಎಂದು ತಿಳಿದಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಶ್ರೀಮಂತರು ಮತ್ತು ಬಡವರು ಸೇರಿದಂತೆ ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಮ್ಮ ನ್ಯಾಯದ ತತ್ವವು "ನ್ಯಾಯ ವಿಳಂಬ ಅನ್ಯಾಯ" ಎಂದು ಹೇಳುತ್ತದೆ. ವಿಳಂಬವಾದ ನ್ಯಾಯವು ಸಮಾಜ ಮತ್ತು ನ್ಯಾಯ ವ್ಯವಸ್ಥೆ ಎರಡಕ್ಕೂ ಗಂಭೀರ ಸವಾಲನ್ನು ಒಡ್ಡುತ್ತದೆ. ಜನರಿಗೆ ತ್ವರಿತ, ಸುಲಭವಾಗಿ ಸಿಗುವ ಮತ್ತು ಕೈಗೆಟುಕುವ ನ್ಯಾಯವನ್ನು ಒದಗಿಸಲು ನಾವು ಸಕ್ರಿಯವಾಗಿ ಶ್ರಮಿಸಬೇಕು. ನಾವು ಹಾಗೆ ಮಾಡುವಲ್ಲಿ ಯಶಸ್ವಿಯಾದರೆ, ನಮ್ಮ ನ್ಯಾಯಾಂಗ ವ್ಯವಸ್ಥೆಯು ಇನ್ನಷ್ಟು ಬಲಗೊಳ್ಳುತ್ತದೆ. ಇದು ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಈ 7ನೇ ಘಟಿಕೋತ್ಸವವು ಕಳೆದ ಒಂದೂವರೆ ದಶಕದಲ್ಲಿ ಕಾನೂನು ಕ್ಷೇತ್ರದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ನಿರಂತರ ಪ್ರಗತಿ, ಸಂಶೋಧನೆ ಮತ್ತು ಸಾಮಾಜಿಕ ಸೇವೆಯಲ್ಲಿ ಗುರಿತಿಸಿಕೊಂಡಿದೆ. ಸಹಯೋಗದ ಸಂಶೋಧನೆ ಮತ್ತು ಸಾಮಥ್ರ್ಯವರ್ಧನೆ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ಮತ್ತು ಕಾನೂನು ಶಿಕ್ಷಣ ಮತ್ತು ಜಾಗತಿಕ ಸಹಕಾರದ ಮೂಲಕ ಶಾಂತಿ ಮತ್ತು ಸಾಮರಸ್ಯದ ಸಂಸ್ಕøತಿಯನ್ನು ಜಂಟಿಯಾಗಿ ಉತ್ತೇಜಿಸುವಲ್ಲಿ ವಿಶ್ವವಿದ್ಯಾಲಯವು ಶ್ಲಾಘನೀಯ ಕೆಲಸ ಮಾಡಿದೆ ಎಂದು ರಾಜ್ಯಪಾಲರು ಶ್ಲಾಘಿಸಿದರು.
ಘಟಿಕೋತ್ಸವದಲ್ಲಿ ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮತ್ತು ಹಿರಿಯ ವಕೀಲರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಮತ್ತು ಹಿರಿಯ ವಕೀಲರಾದ ವಿ.ಸುಧೀಶ್ ಪೈ ಅವರಿಗೆ ಗೌರವ ಪದವಿಗಳನ್ನು ಪ್ರದಾನ ಮಾಡಲಾಗಿದೆ. ಈ ಇಬ್ಬರು ಸಾಧಕರಿಗೆ ಅಭಿನಂದಿಸುತ್ತಾ, ಅವರುಗಳು ಸಮಾಜ, ಸಾರ್ವಜನಿಕರು, ನ್ಯಾಯ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಬೇಕು ಎಂದು ಮನವಿ ಮಾಡಿದರು.

ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ರಾಜ್ಯಪಾಲರು, ಪ್ರಿಯ ವಿದ್ಯಾರ್ಥಿಗಳೇ, ಗಂಭೀರ ಮತ್ತು ಜವಾಬ್ದಾರಿಯುತ ಕಾನೂನು ಕ್ಷೇತ್ರವನ್ನು ನಿಮ್ಮ ಜೀವನ ಮಾರ್ಗವಾಗಿ ಆರಿಸಿಕೊಂಡಿದ್ದೀರಿ. ನ್ಯಾಯ, ಸಮಾನತೆ ಮತ್ತು ಸಂವಿಧಾನದ ಆದರ್ಶಗಳನ್ನು ರಕ್ಷಿಸುವ ಹೊರೆ ಈಗ ನಿಮ್ಮ ಹೆಗಲ ಮೇಲೆ ಇದೆ. ನೀವು ನ್ಯಾಯಾಲಯಗಳು, ಆಡಳಿತಾತ್ಮಕ ಹುದ್ದೆಗಳು ಅಥವಾ ಯಾವುದೇ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ನೀವು ಸತ್ಯ, ನ್ಯಾಯ ಮತ್ತು ನೈತಿಕತೆಯ ಅತ್ಯುನ್ನತ ಮಾನದಂಡಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ.ಪಾಟೀಲ್, ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ಡಾ.ಸಿ.ಬಸವರಾಜು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Law Students Must Stay Ahead of Global Technological and Social Challenges: Karnataka Governor

 Bengaluru, Hubli, 05 November (Karnataka Information):

The world is witnessing rapid changes in the fields of digital revolution, artificial intelligence, cyber law, data protection and international justice. In this context, it is vital for law students to not only gain proficiency in traditional legal studies, but also to understand contemporary technological and global challenges,” said Shri Thaawarchand Gehlot, Hon’ble Governor of Karnataka.
 
He was delivering the presidential address at the 7th Convocation of Karnataka State Law University, Hubli, today.

 The Governor emphasised that access to justice is the fundamental right of every citizen, and modern technology plays a crucial role in advancing this objective. “Initiatives such as e-courts, online legal aid and digital legal education are significant steps in making the justice system transparent, efficient and accessible. Law students must actively engage with these innovations to strengthen the justice delivery system,” he said.

Recalling Dr.B.R.Ambedkar’s vision, the Governor stated that Ambedkar viewed law as a powerful instrument for social transformation. “Dr.Ambedkar linked law with the core constitutional ideals of equality, liberty and fraternity. He believed that law must protect human rights and uphold social justice. A law becomes meaningful only when it gains moral acceptance in society,” he noted.

The Governor urged students to uphold sensitivity, responsibility and ethics in their professional journey. “Legal expertise is not limited to argument and interpretation. When you defend rights or present a case, your inner sense of justice will be your true guide. Society looks to legal professionals to uphold fairness, protect the weak and ensure that justice reaches all,” he advised.

 Highlighting the value of timely justice, the Governor remarked, “Our ancient ideal ‘Sarve Bhavantu Sukhinah’ forms the foundation of India’s judicial philosophy. While our judicial system is committed to justice for all, delayed justice poses a serious challenge. Ensuring speedy, accessible and affordable justice must be our collective effort to strengthen public faith in the judiciary.”

 Praising the progress of Karnataka State Law University over the past decade and a half, he noted its contributions to academic excellence, research, social engagement and international collaboration. “The University’s partnerships with national and global institutions for research and capacity building, and its role in promoting peace and harmony through legal education, are commendable,” he said.

On this occasion, honorary degrees were conferred upon Hon’ble Governor of Andhra Pradesh Shri S. Abdul Nazeer and Senior Advocate Shri V. Sudheesh Pai. Extending his congratulations, the Governor urged them to continue serving the cause of justice and public welfare.

Congratulating the graduating students, he said, “You have chosen a noble and responsible field. The responsibility of upholding the ideals of justice, equality and the Constitution now rests with you. Whether in courts, administration or public service, uphold truth, fairness and moral integrity at all times.
 
The ceremony was attended by Retired Supreme Court Justice Dr. Shivaraj V. Patil, Vice Chancellor Prof. Dr. C. Basavaraju, faculty members, students and dignitaries.

THANKS




DIRECTOR,
DEPARTMENT OF INFORMATION AND PUBLIC RELATIONS,
GOVERNMENT OF KARNATAKA,
VARTHA SOUDHA,
No. 17, BHAGAWAN MAHAVEER ROAD, 
BENGALURU - 560 001

TELEPHONE : 080-2202 8032, 080-2202 8034, 080-2202 8037

FAX No 080-2202 8041, 080-2286 3794


ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ (2).jpg
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ - ಪತ್ರಿಕಾಗೋಷ್ಠಿ (2).jpg
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ - ಪತ್ರಿಕಾಗೋಷ್ಠಿ (1).jpg
DIPR NEWS - 05-11-2025.pdf
DIPR NEWS - 05-11-2025.docx
DR Shalini Rajaneesh (3).jpg
DR Shalini Rajaneesh (4).jpg
DR Shalini Rajaneesh (5).jpg
DR Shalini Rajaneesh (1).jpg
DR Shalini Rajaneesh (2).jpg
Governor (2).jpeg
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ (3).jpg
Governor (3).jpeg
Governor (4).jpeg
Governor (1).jpeg
Bannerghatta Biological Park releases special postal cover (2).jpeg
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ (4).jpg
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ (1).jpg
Bannerghatta Biological Park releases special postal cover (3).jpeg
Bannerghatta Biological Park releases special postal cover (4).jpeg
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ.jpeg
Bannerghatta Biological Park releases special postal cover (1).jpeg
Reply all
Reply to author
Forward
0 new messages