ಮಾಧ್ಯಮ ಆಮಂತ್ರಣ
MEDIA INVITE
1.ಸಿಆರ್ ಪಿಎಫ್ ಕೇರಳ ಮತ್ತ ಕರ್ನಾಟಕ ವಲಯ, ಯಲಹಂಕ, ಬೆಂಗಳೂರು, ಅಖಿಲ ಭಾರತ ಪೊಲೀಸ್ ಕ್ರೀಡಾ ಸಂಸ್ಥೆ ಸಂಯುಕ್ತಾಶ್ರದಲ್ಲಿ ವಲಯ ಬಿ 2ನೇ ಅಖಿಲ ಭಾರತ ಪೊಲೀಸ್ ಕ್ರಿಕೆಟ್ ಕ್ರೀಡಾಕೂಟ-2026 ಉದ್ಘಾಟನಾ ಸಮಾರಂಭ:ಮುಖ್ಯ ಅತಿಥಿ:
ಡಾ.ವಿಪುಲ್ ಕುಮಾರ್, ಐಪಿಎಸ್
ಐಜಿಪಿ, ಸಿಆರ್‍ಪಿಎಫ್, ಕೇರಳ ಮತ್ತು ಕರ್ನಾಟಕ ವಲಯ
ದಿನಾಂಕ: 28-01-2026, ಬುಧವಾರ
ಸಮಯ : ಬೆಳಿಗ್ಗೆ 10.00 ಗಂಟೆಗೆ
ಸ್ಥಳ: ತ್ರೀ ಓವಲ್ಸ್, ಕೆಎಸ್‍ಸಿಎ ಕ್ರೀಡಾಂಗಣ, ಆಲೂರು, ಬೆಂಗಳೂರು.
ಪತ್ರಿಕಾ ಪ್ರಕಟಣೆ
PRESS RELEASE17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೇದಿಕೆ ಸಜ್ಜು
ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ):
ಬೆಂಗಳೂರಿನ ಸಿನಿಮಾ ಪ್ರೇಮಿಗಳು ಕುತೂಹಲ ಮತ್ತು ನಿರೀಕ್ಷೆಯಿಂದ ಕಾಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಅವತರಣಿಕೆಗೆ ವೇದಿಕೆ ಸಜ್ಜಾಗಿದ್ದು, ಜನವರಿ 29 ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್‍ನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉಪಸ್ಥಿತರಿರಲಿದ್ದಾರೆ. ಚಿತ್ರೋತ್ಸವದ ರಾಯಭಾರಿ ಬಹುಭಾμÁ ನಟ ಪ್ರಕಾಶ್ ರಾಜ್ ಮತ್ತು ನಟಿ ರುಕ್ಮಿಣಿ ವಸಂತ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಉಪಸ್ಥಿತರಿರಲಿದ್ದಾರೆ.
ಸಂಜೆ 5.30ಕ್ಕೆ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಆರು ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ರಾತ್ರಿ 8ಕ್ಕೆ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ನೆದರ್‍ಲ್ಯಾಂಡ್ ದೇಶದ ‘ಫೋರ್ಟ್ ಬ್ಯಾಗೇಜ್’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ.
ಜನವರಿ 30 ರಿಂದ ಫೆಬ್ರವರಿ 06ರವರೆಗೂ, ಈ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕøತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ‘ಬೆಂಗಳೂರಿನಲ್ಲಿ ಜಗತ್ತು’ ಎನ್ನುವ ಶೀರ್ಷಿಕೆಯಡಿ ಪ್ರದರ್ಶನಗೊಳ್ಳಲಿವೆ. ಈ ಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅμÉ್ಟೀ ಸಾಕೆ’ ಎಂಬ ಸಾಲಿನೊಂದಿಗೆ ‘ಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಇದಲ್ಲದೆ ಈ ಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ, ಚಿತ್ರ ಭಾರತಿ (ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ), ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ಫಿಪ್ರೆಸ್ಕಿ - ವಿಮರ್ಶಕರ ವಾರ, ಜೀವನ ಕಥನ ಆಧಾರಿತ ಚಿತ್ರಗಳು, ದೇಶ ಕೇಂದ್ರಿತ ವಿಶೇಷ: ಫೋಲೆಂಡ್, ಭಾರತೀಯ ಉಪಭಾμÁ ಚಲನಚಿತ್ರಗಳು, ಪುನರಾವಲೋಕನ ಮುಂತಾದ ವಿಭಾಗಗಳಡಿ ಹಲವು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಕನ್ನಡದ ಮೇರು ನಟ ಪದ್ಮಭೂಷಣ ಡಾ. ರಾಜಕುಮಾರ್ ಅಭಿನಯದ ಐದು ಮಹತ್ವದ ಕನ್ನಡ ಚಲನಚಿತ್ರಗಳ ಪ್ರದರ್ಶನ, ಪೆÇೀಲೆಂಡಿನ ಪ್ರಖ್ಯಾತ ನಿರ್ದೇಶಕ ಆಂದ್ರೆ ವಾಜ್ದಾ ಅವರ ನಿರ್ದೇಶನದ ಏಳು ಪೋಲಿμï ಚಲನಚಿತ್ರಗಳ ಪ್ರದರ್ಶನ, ಖ್ಯಾತ ಅಭಿನೇತ್ರಿ ಸ್ಮಿತಾ ಪಾಟೀಲ್ ಅವರ ಹೆಸರಾಂತ ಚಲನಚಿತ್ರಗಳ ಪ್ರದರ್ಶನ, ಥಾಯ್ಲೆಂಡಿನ ಖ್ಯಾತ ನಿರ್ದೇಶಕ ಅಚಿತಪಾಂಗ್ ವೀರಸೆಥಕುಲ್ ಅವರ ನಾಲ್ಕು ಪ್ರಮುಖ ಚಲನಚಿತ್ರಗಳ ಪ್ರದರ್ಶನ, ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಜನಮನ್ನಣೆ ಪಡೆದ ಸಮಕಾಲೀನ ಭಾರತೀಯ ಚಲನಚಿತ್ರಗಳ ಪ್ರದರ್ಶನ, ಸಂರಕ್ಷಿಸಲ್ಪಟ್ಟ ಮಹತ್ವದ ಭಾರತೀಯ ಚಲನಚಿತ್ರಗಳ ಪ್ರದರ್ಶನ ಕೂಡಾ ನಡೆಯಲಿದೆ.
ಚಿತ್ರೋತ್ಸವ ನಡೆಯುವ ಎಂಟು ದಿನಗಳ ಕಾಲ ಪ್ರತೀ ದಿನ ಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ ‘ನಾವು ಮತ್ತು ನಮ್ಮ ಸಿನಿಮಾ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಮಿಕ್ಕಂತೆ ಖ್ಯಾತ ಸಂಕಲನಕಾರರಾದ ಶ್ರೀಕರ್ ಪ್ರಸಾದ್ ಅವರಿಂದ ‘ಚಲನಚಿತ್ರದ ಸಂಕಲನದ ಮಹತ್ವ’, ನಿರ್ದೇಶಕ ಮತ್ತು ಸಂಕಲನಕಾರ ಮಹೇಶ್ ನಾರಾಯಣನ್ ಅವರಿಂದ ‘ಸಮಕಾಲೀನ ಚಲನಚಿತ್ರ ಕಥನ ನಿರೂಪಣೆ ಮತ್ತು ಶೈಲಿ’, ಹೆಸರಾಂತ ಧ್ವನಿ ವಿನ್ಯಾಸಕರಾದ ಬಿಶ್ವದೀಪ್ ಚಟರ್ಜಿ ಅವರಿಂದ ‘ದೃಶ್ಯಾತೀತ ಧ್ವನಿ- ಆಡಿಯೋಗ್ರಫಿಯ ಕಲೆ’, ಅನುರಾಗ್ ಕಶ್ಯಪ್‍ರವರಿಂದ ‘ಸಾಂಪ್ರದಾಯಿಕ ಕಲ್ಪನೆಗಳಾಚೆಗಿನ ಚಲನಚಿತ್ರ ಕಥನಗಾರಿಕೆ’ ಕುರಿತ ಉಪನ್ಯಾಸ ನಡೆಯಲಿದೆ.
ಹೆಸರಾಂತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಕುರಿತು ವಾರ್ಷಿಕ ಸ್ಮಾರಕ ಉಪನ್ಯಾಸ ನಡೆಯಲಿದ್ದು, ‘ಲೆನ್ಸ್‍ಗಳ ಆಯ್ಕೆ, ಬೆಳಕಿನ ವಿನ್ಯಾಸ ಮತ್ತು ಛಾಯಾಗ್ರಹಣ ಕಲೆ’ ಕುರಿತು ಮಾತುಕತೆ ನಡೆಯಲಿದ್ದು, ಹಿರಿಯ ಛಾಯಾಗ್ರಾಹಕರಾದ ಜಿ.ಎಸ್. ಭಾಸ್ಕರ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಡಾ. ಗಿರೀಶ್ ಕಾಸರವಳ್ಳಿ, ಡಾ. ಸಾಧು ಕೋಕಿಲ, ಡಾ. ಜಯಮಾಲ ಹಾಗೂ ಇತರರೊಂದಿಗೆ ಕಳೆದ ನಾಲ್ಕು ದಶಕಗಳ ಕನ್ನಡ ಸಿನಿಮಾ ಬಗ್ಗೆ ಸಂವಾದ, ಗಿರೀಶ್ ಕಾಸರವಳ್ಳಿ ಅವರಿಂದ ‘ಚಲನಚಿತ್ರ ಕಥನಗಳಲ್ಲಿ ನಮ್ಮತನ ಮತ್ತು ನೈಜತೆʼ ಕುರಿತ ಉಪನ್ಯಾಸ ನಡೆಯಲಿದೆ. ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಚಿತ್ರೋತ್ಸವದ ಧ್ಯೇಯವಾಕ್ಯ ಕೇಂದ್ರಿತ ಸಂವಾದ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಪ್ರತಿಷ್ಠಿತ ಚಿತ್ರೋತ್ಸವವು ಜನವರಿ 29ರಿಂದ ಫೆಬ್ರವರಿ 06ರವರೆಗೂ ನಡೆಯಲಿದ್ದು, ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಅಲ್ಲದೆ, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರಗಳು ಪ್ರದರ್ಶನವಾಗಲಿವೆ.
ಪದ್ಮ ಪ್ರಶಸ್ತಿ ಗೌರವಕ್ಕೆ ಆಯ್ಕೆಯಾಗಿರುವ ಸಾಧಕರುಗಳಿಗೆ ವಿಧಾನಸಭೆಯಲ್ಲಿ ಅಭಿನಂದನೆ- ಯು.ಟಿ. ಖಾದರ್ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
77ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರುಗಳನ್ನು ಪದ್ಮ ಪುರಸ್ಕಾರಕ್ಕೆ ಹಾಗೂ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿರುವ ರಾಜ್ಯದ ಎಲ್ಲಾ ಸಾಧಕರಿಗೆ ಸದನದ ಪರವಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಅಭಿನಂದನೆಗಳನ್ನು ಸಲ್ಲಿಸಿದರು.
ಸಾಧಕರ ಪೈಕಿ ರಾಜ್ಯದ ಅಕ್ಷರ ಬ್ರಹ್ಮ ಎಂದೇ ಖ್ಯಾತರಾಗಿರುವ ಕನ್ನಡ, ಸಂಸ್ಕøತ, ತೆಲುಗು ಮತ್ತು ಪ್ರಾಕೃತ ಭಾμÉಗಳಲ್ಲಿ 1300ಕ್ಕೂ ಹೆಚ್ಚು ಅವಧಾನಗಳನ್ನು ಪ್ರದರ್ಶಿಸಿ, 24 ಗಂಟೆ ನಿರಂತರವಾಗಿ ಕಾವ್ಯ ರಚಿಸುವ ಮೂಲಕ ದಾಖಲೆ ನಿರ್ಮಿಸಿರುವ ಶತವಧಾನಿ ಡಾ. ಆರ್. ಗಣೇಶ್ ಅವರಿಗೆ ಪದ್ಮಭೂಷಣ, ಸ್ವತಃ ಹಿಮೋಫಿಲಿಯಾ ಖಾಯಿಲೆಗೆ ತುತ್ತಾಗಿ, ಈ ರೀತಿಯ ರೋಗಿಗಳಿಗೆ ನೆರವಾಗಲು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸ್ಥಾಪಿಸಿದ ವೈದ್ಯ ಡಾ. ಸುರೇಶ್ ಹನಗವಾಡಿ, ಕೆ.ಎಲ್.ಇ ಸೊಸೈಟಿಯನ್ನು ಸ್ಥಾಪಿಸಿ, ನಾಡಿನ ಜನತೆಗೆ ಶಿಕ್ಷಣ ಹಾಗೂ ರೋಗಿಗಳಿಗೆ ವಿಶ್ವದರ್ಜೆ ಚಿಕಿತ್ಸೆ ಸಿಗುವಂತೆ ಮಾಡಿದ ಡಾ. ಪ್ರಭಾಕರ ಕೋರೆ, ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅಂಕೇಗೌಡ, ನಿರ್ಗತಿಕ ಮಹಿಳೆಯರ ಸಬಲೀಕರಣ ಮತ್ತು ಮಕ್ಕಳ ಸೇವೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಸಿ ಸದ್ದಿಲ್ಲದೆ ಸೇವೆ ಸಲ್ಲಿಸಿರುವ ಡಾ. ಎಸ್.ಜಿ. ಸುಶೀಲಮ್ಮ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಪ್ರಸಾರ ಭಾರತಿಯ ಮಾಜಿ ಸಿಇಒ ಶಶಿಶೇಖರ್ ವೆಂಪತಿ, ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ವಿಜ್ಞಾನಿ ಶ್ರೀಮತಿ ಶುಭಾ ವೆಂಕಟೇಶ್ ಅಯ್ಯಂಗಾರ್ ಅವರುಗಳಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಹಾಗೂ ಪ್ರೆಶರ್ ಕುಕ್ಕರ್ ಬ್ಲಾಸ್ಟ್ ಆಗದಿರಲು ಸೇಫ್ಟಿವಾಲ್ ಅಭಿವೃದ್ಧಿ ಪಡಿಸುವಲ್ಲಿ ಮಹೋನ್ನತ ಸಾಧನೆಗೈದ ಖ್ಯಾತ ಕೈಗಾರಿಕೋದ್ಯಮಿ ದಿವಂಗತ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅಲ್ಲದೇ, ಅನನ್ಯ ಸೇವೆ ಸಲ್ಲಿಸಿದ್ದಕ್ಕೆ ಕುಂದು ಕೊರತೆ ಹಾಗೂ ಮಾನವ ಹಕ್ಕುಗಳ ವಿಭಾಗದ ಎಡಿಜಿಪಿ ದೇವಜ್ಯೋತಿ ರೇ, ಬೆಂಗಳೂರಿನ ಹಲಸೂರು ಉಪ ವಿಭಾಗದ ಎಸಿಪಿ ಟಿ. ರಂಗಪ್ಪ ಅವರುಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕವನ್ನು ಘೋಷಣೆ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ದೊಡ್ಡಬಳ್ಳಾಪುರ ನಗರದವರೆಗೂ ಮೆಟ್ರೋ ಯೋಜನೆ- ಸಿಎಂಪಿ ನವೀಕರಣದ ನಂತರ ಮುಂದಿನ ಕ್ರಮ- ಸಚಿವ ಕೃಷ್ಣಬೈರೇಗೌಡಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
ಮೆಟ್ರೋ ಯೋಜನೆಯ ಹಂತ -2 ಎ ನ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂವರೆಗೆ ಮತ್ತು ಹಂತ ಬಿ ನ ಕೆ.ಆರ್.ಪುರಂ-ಹೆಬ್ಬಾಳ-ಯಲಹಂಕ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರವು ಅನುಮೋದನೆ ನೀಡಿದೆ. ಸದರಿ ಮೆಟ್ರೋ ಹಂತ-2 ಎ ಮತ್ತು 2ಬಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸದರಿ ಯೋಜನೆಯಡಿಯಲ್ಲಿ ದೊಡ್ಡಬಳ್ಳಾಪುರ ನಗರದವರೆಗೂ ಮೆಟ್ರೋ ಯೋಜನೆ ವಿಸ್ತರಿಸುವ ಪ್ರಸ್ತಾವನೆ ಇರುವುದಿಲ್ಲ ಎಂದು ಕಂದಾಯ ಸಚಿವರು ಹೇಳಿದರು.
ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಧೀರಜ್ ಮುನಿರಾಜು ಇವರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ವ್ಯವಸ್ಥೆಯನ್ನು ಯೋಜಿಸಲು ಸಮಗ್ರ ಚಲನಶೀಲತೆ ಯೋಜನೆ ಪೂರ್ವಾಪೇಕ್ಷಿತವಾಗಿದೆ. ಸಿಎಂಪಿ 2020ರಲ್ಲಿ ದೊಡ್ಡಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಇರುವುದಿಲ್ಲ. ಭವಿಷ್ಯದ ಮೆಟ್ರೋ ರೈಲು ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಯಲಹಂಕ-ರಾಜಾನುಕುಂಟೆ-ದೊಡ್ಡಬಳ್ಳಾಪುರ ಸೇರಿದಂತೆ ಸುಮಾರು 26 ಕಿಮೀಗಳ ಮೆಟ್ರೋ ಕಾರಿಡಾರ್ ಗಳನ್ನು ತಾತ್ಕಾಲಿಕ ಮಾಸ್ಟರ್ ಪ್ಲಾನ್ ಗಳಲ್ಲಿ ಗುರುತಿಸಲಾಗಿದೆ. ದೊಡ್ಡಬಳ್ಳಾಪುರಕ್ಕೆ ಮೆಟ್ರೋ ಕಲ್ಪಿಸುವ ಯೋಜನೆ ಚರ್ಚೆಯಲ್ಲಿದ್ದು ಸಮಗ್ರ ಚಲನಶೀಲತೆ ಯೋಜನೆ ಪರಿಷ್ಕರಣೆಯ ಸರ್ಕಾರದ ಪರಿಶೀಲನೆಯಲ್ಲಿದ್ದು, ಅಒP ನವೀಕರಣದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ರಮ ಮದ್ಯ ತಯಾರಿಕೆ ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ- ಗೃಹಸಚಿವ ಡಾ: ಜಿ ಪರಮೇಶ್ವರ್ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಲು ಇಲಾಖಾಧಿಕಾರಿಗಳು ವಲಯ ವ್ಯಾಪ್ತಿಯ ರೂಟ್ ಗಳಲ್ಲಿ ನಿರಂತರವಾಗಿ ಗಸ್ತು ನಡೆಸಿ, ಸದರಿ ಗಸ್ತಿನ ಸಮಯದಲ್ಲಿ ಮತ್ತು ಸಾರ್ವಜನಿಕರಿಂದ ವಿಶೇಷವಾಗಿ ಮಹಿಳೆ/ಮಹಿಳಾ ಸಂಘಗಳಿಂದ ದೂರು ಸ್ವೀಕೃತವಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ, ಅಕ್ರಮಗಳು ಕಂಡುಬಂದಲ್ಲಿ ಅಬಕಾರಿ ಕಾಯ್ದೆ ಮತ್ತು ನಿಯಮಗಳನುಸಾರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಇಂದು ವಿಧಾನಸಭಾ ಪ್ರಶ್ನೋತ್ತರ ವೇಳೆಯಲ್ಲಿ ರಾಯಭಾಗ ಕ್ಷೇತ್ರದ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಇವರ ಪ್ರಶ್ನೆಗೆ ಉತ್ತರಿಸಿದರು. ರಾಯಭಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದವರ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ 357 ದಾಳಿಗಳನ್ನು ನಡೆಸಿ, 18 ಜಾಮೀನಿಯವಲ್ಲದ ಪ್ರಕರಣಗಳನ್ನು ಹಾಗೂ ಜಾಮೀನಿಯ ದಂಡ ವಿಧಿಸಬಹುದಾದದ ಕಲಂ 15ಎ ರ ಒಟ್ಟು 295 ಪ್ರಕರಣಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ದಾಖಲಿಸಲಾಗಿರುತ್ತದೆ. ಇದೇ ಅವಧಿಯಲ್ಲಿ 322 ಆರೋಪಿತರನ್ನು ದಸ್ತಗಿರಿಗೊಳಪಡಿಸಿ, ಒಟ್ಟು 370 ಲೀಟರ್ ಮದ್ಯ ಮತ್ತು 07 ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದರು.
ರಾಜಾನುಕುಂಟೆ ಮಾರ್ಗವಾಗಿ ಎಂ.ವಿ.ಸೋಲಾರ್ (ದೇವನಹಳ್ಳಿ ರಸ್ತೆ)ವರೆಗಿನ 21.38 ಕಿಮೀ ರಸ್ತೆ ಚತುಷ್ಪಥ ರಸ್ತೆ ಅಭಿವೃಧ್ಧಿ ಕಾಮಗಾರಿ ಶೀಘ್ರದಲ್ಲಿ ಪೂರ್ಣ- ಸಚಿವ ಕೃಷ್ಣಬೈರೇಗೌಡ
ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಮಧುರೆಯಿಂದ ರರಾಜಾನುಕುಂಟೆ ಮಾರ್ಗವಾಗಿ ಎಂ.ವಿ.ಸೋಲಾರ್ (ದೇವನಹಳ್ಳಿ ರಸ್ತೆ)ವರೆಗಿನ 21.38 ಕಿಮೀ ಉದ್ದದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃಧ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಸದರಿ ರಸ್ತೆಯ ಮರುಪಂಕ್ತೀಕರಣ ಕುರಿತು ಯಾವುದೇ ಪ್ರಸ್ತಾವನೆ ಇರುವುದಿಲ್ಲ ಎಂದು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ ಎಸ್.ಆರ್. ಇವರ ಪ್ರಶ್ನಗೆ ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ಸುತ್ತಲಿನ ಪ್ರದೇಶಗಳಾದ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಘಡಿ, ನೆಲಮಂಗಲ ಪಟ್ಟಣ/ನಗರಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಮತ್ತು ಭವಿಷ್ಯದಲ್ಲಿ ವಾಹನ ದಟ್ಟಣೆಯಾಘದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ 2007ರಲ್ಲಿ ಮದ್ಯಂತರ ವರ್ತುಲ ರಸ್ತೆಯನ್ನು ನಿರ್ಮಿಸಲು ಅಧಿಸೂಚನೆ ಹೊರಡಿಸಲಾಗಿರುತ್ತದೆ. ಈ ರಸ್ತೆ ಪಂಕ್ತಿಕರಣಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿ ಮರುನಿಗದಿಗೊಳಿಸಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಪರಿಷ್ಕøತ ಅಧಿಸೂಚನೆಯನ್ನು ದಿನಾಂಕ: 16-03-2023ರಂದು ಹೊರಡಿಸಲಾಗಿರುತ್ತದೆ ಎಂದರು.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಯೋಜನಾ ದೃಷ್ಟಿಯಿಂದ ಮಧ್ಯಂತರ ವರ್ತುಲ ರಸ್ತೆಯನ್ನು ನಿರ್ಮಿಸುವುದು ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಕಾಮಗಾರಿಯ ಪ್ರಗತಿ ಬಗ್ಗೆ ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ವಿವರಿಸಿದರು.
ಮಟ್ಕಾ, ಜೂಜು, ಅಕ್ರಮ ಮರಳುಗಾರಿಕೆ, ಕಳ್ಳತನದಂತಹ ಅಕ್ರಮ ದಂದೆಯನ್ನು ತಡೆಗಟ್ಟಲು ಕಠಿಣ ಕ್ರಮ- ಗೃಹಸಚಿವ ಡಾ:ಜಿ. ಪರಮೇಶ್ವರ್ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
ರಾಯಚೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿ ಮಟ್ಕಾ, ಜೂಜು, ಅಕ್ರಮ ಮರಳುಗಾರಿಕೆ ಕಳ್ಳತನದಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರವು ಸಿಪಿಐ ರವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೇಮಕ ಮಾಡಿ ವಿಶೇಷ ತಂಡವನ್ನು ರಚನೆ ಮಾಡಿದ್ದು, ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿಯನ್ನು ಪಡೆದು ದಾಳಿ ಮಾಡಿ ಕಾನೂನು ಕ್ರಮ ವಹಿಸಲಾಗುತ್ತಿದೆ. ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳಿಗೆ ಬೀಟ್ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯವರು ತಮ್ಮ ತಮ್ಮ ಬೀಟ್ ನಲ್ಲಿ ನಡೆಯುವ ಮಟ್ಕಾ, ದಂಧೆ ಹಾಗೂ ಇಸ್ಪೀಟ್, ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಮಾಹಿತಿ ನೀಡುತ್ತಿದ್ದು ದಾಳಿ ಮಾಡಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ವಿಧಾನಭೆಯಲ್ಲಿ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಹಾಗೂ ಸ್ವತಂ ತಮಗೆ ರಕ್ಷಣೆ ನೀಡಬೇಕೆಂದು ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದರು. ಗೃಹ ಸಚಿವರ ಡಾ: ಜಿ. ಪರಮೇಶ್ವರ್ ಅವರು ಈ ವಿಷಯವು ಕೇವಲ ದೇವದುರ್ಗಕ್ಕೆ ಸೀಮಿತವಾಗಿರದೆ ಇಡೀ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಸದರಿ ವಿಷಯವನ್ನು ಗಮನಿಸಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರ ಹಲವು ಕಾನೂನು ಕ್ರಮಗಳನ್ನು ತೆಗೆದುಕೊಂಡಿದೆ. ಮರಳು ದಂದೆಯು ಮೈನ್ಸ್ ಅಂಡ್ ಜುವಾಲಜಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ಆ ಇಲಾಖೆಯ ಜವಾಬ್ದಾರಿಯಾಗಿದೆ. ಇಲಾಖೆಯ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸಮಿತಿಯು ಈ ವಿಷಯದ ಬಗ್ಗೆ ದೂರುಗಳು ದಾಖಲಾದಲ್ಲಿ ಕೇಸ್ ರಿಜಿಸ್ಟರ್ ಮಾಡಿ ಕಾನೂನಿನ ರೀತ್ಯ ಕ್ರಮ ವಹಿಸಬೇಕಾಗಿದೆ. ಈಗಾಗಲೇ ಟಾಸ್ಕ್ ಪೋರ್ಸ್ ನ್ನು ರಚಿಸಿ, ಅಲ್ಲಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ ಸ್ಯಾಂಡ್ ಟಾಸ್ಕ್ ಪೋರ್ಸ್ ನ್ನು ಸಹ ರಚನೆ ಮಾಡಿದೆ ಎಂದು ಗೃಹ ಸಚಿವ ಉತ್ತರಿಸಿದರು.
ರಾಯಚೂರು ಜಿಲ್ಲೆಯಲ್ಲಿ 2025ರ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55ರನ್ವಯ ಗಡಿಪಾರು ಮಾಡುವ ಬಗ್ಗೆ 28 ಪ್ರಕರಣಗಳು ಸಕ್ಷಮ ಪ್ರಾಧಿಕಾರವು ಗಡಿಪಾರು ಆದೇಶವನ್ನು ಹೊರಡಿಸಿದೆ, ಉಳಿದ 18 ಪ್ರಕರಣಗಳು ಪರಿಶೀಲನೆಯಲ್ಲಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆಯ ಶಾಸಕರಿಗೆ ರಕ್ಷಣೆ – ಗೃಹ ಸಚಿವ ಡಾ: ಜಿ.ಪರಮೇಶ್ವರ್
ದೇವದುರ್ಗ ಶಾಸಕಿ ಕರೆಮ್ಮ ಅವರು ಅಕ್ರಮ ಮರಳುಗಾರಿಕೆ ವಿರುದ್ದ ದನಿ ಎತ್ತಿದಕ್ಕೆ ನಿರಂತರ ಬೆದರಿಕೆಗಳು ಬರುತ್ತಿದ್ದು, ನನಗೆ ರಕ್ಷಣೆ ನೀಡಬೇಕೆಂದು ಪ್ರಸ್ತಾಪಿಸಿದರು, ದೇವದುರ್ಗದ ಕ್ಷೇತ್ರದ ಶಾಸಕರಿಗೆ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಕಾನೂನಾತ್ಮಕ ಕೆಲಸ ಮಾಡುತ್ತಿದೆ. ಇದು ಸಾಮಾನ್ಯ ವಿಷಯವಲ್ಲ ಕೇವಲ ದೇವದುರ್ಗ ಶಾಸಕರಿಗೆ ಮಾತ್ರವಲ್ಲದೇ ಎಲ್ಲಾ ಶಾಸಕರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಬ್ದಾರಿಯಾಗಿರುತ್ತದೆ..ಈ ಬಗ್ಗೆ ವಿಶೇಷವಾಗಿ ಚರ್ಚಿಸಿ ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ವಿಧಾನಸಭೆಯಲ್ಲಿ ಗೃಹ ಸಚಿವರ ಡಾ: ಜಿ. ಪರಮೇಶ್ವರ ಹೇಳಿದರು.
ಹಿಪ್ಪರಗಿ ಬ್ಯಾರೇಜಿಗೆ ಅವಶ್ಯವಿರುವ ನೀರನ್ನು ಪಡೆಯಲು ಕ್ರಮ- ಕಂದಾಯ ಸಚಿವ ಕೃಷ್ಣಬೈರೇಗೌಡಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
ಜಿಲ್ಲಾಧಿಕಾರಿಗಳು, ಬೆಳಗಾವಿ ಇವರ ಆದೇಶ 10-01-2026ರಂತೆ ಬೇಸಿಗೆ ಕಾಲ ಮುಕ್ತಾಯವಾಗುವವರೆಗೆ ಹಿಪ್ಪರಗಿ ಬ್ಯಾರೇಜ್‍ನಲ್ಲಿ ಲಭ್ಯವಾಗುವ ನೀರಿನ ಸಂಗ್ರಹಣೆಯ ಪ್ರಮಾಣದಲ್ಲಿ ಸಮರ್ಪಕ ಹಾಗೂ ನಿಯಂತ್ರಿತ ಬಳಕೆ ಸಾಧಿಸಿ, ನೀರು ಪೆÇೀಲಾಗುವುದನ್ನು ತಡೆಗಟ್ಟಲು ಕ್ರಮ ವಹಿಸಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಗೂ ರೈತರ ಬೆಳೆ ಸಂರಕ್ಷಿಸಲು ನೀರನ್ನು ಪೂರೈಸಲಾಗುವುದು. ಹಿಪ್ಪರಗಿ ಬ್ಯಾರೇಜಿನಲ್ಲಿ ಪ್ರಸ್ತುತ ಒಳ ಹರಿವಯ ಸುಮಾರು 450 ಕ್ಯೂಸೆಕ್ಸ್ ನಷ್ಟಿದ್ದು, ಇದರಿಂದ ಸಹ ಬ್ಯಾರೇಜಿನಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಸಂಗ್ರಹಣೆ ಸಾಧ್ಯವಾಗಲಿದೆ ಎಂದು ಕಂದಾಯ ಸಚಿವರ ಕೃμÉ್ಣೀ ಬೈರೇಗೌಡ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಇವರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ ನ ಗೇಟ್ ನಂ.22ರ ಸರ್ವಿಸ್ ಗೇಟ್ ನ ಮೇಲಿನಿಂದ 2ನೇ ಎಲಿಮೆಂಟ್ ನೀರಿನ ಒತ್ತಡಕ್ಕೆ ಕಿತ್ತುಹೋಗಿರುತ್ತದೆ. ಹಾನಿಯಾದ ಗೇಟ್ ಸಂಖ್ಯೆ 22ರಲ್ಲಿ ಹೊಸದಾಗಿ ಗೇಟ್ ಅಳವಡಿಸಲು ದಿ: 12-01-2026ರಂದು ರೂ.140.00ಲಕ್ಷಗಳ ಅನುಮೋದನೆಯನ್ನು ನೀಡಲಾಗಿದ್ದು ದಿನಾಂಕ: 17-01-2026ರಂದು ಸದರಿ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಇನ್ನುಳಿದ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃಧ್ಧಿ ಯೋಜನೆಯಲ್ಲಿ ಹಂತ-1 ಮತ್ತು ಹಂತ 2 ಮತ್ತು 3ರ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಮಹಾರಾಷ್ಟ್ರದ ವಾರಣಾ ಅಥವಾ ಕೊಯ್ನಾ ಜಲಾಶಯಗಳಿಂದ ಕೃμÁ್ಣ ನದಿ ಪಾತ್ರದಲ್ಲಿ ಹಿಪ್ಪರಗಿ ಬ್ಯಾರೇಜಿಗೆ ಅವಶ್ಯವಿರುವ ನೀರನ್ನು ಪಡೆಯಲು ಸಹ ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ವಿಧಾನಸಭೆಯಲ್ಲಿ ಉತ್ತರ ನೀಡಿದರು.
ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರದ ಅಗತ್ಯ ಕ್ರಮ- ಗೃಹ ಸಚಿವ ಡಾ: ಜಿ. ಪರಮೇಶ್ವರ್
ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ) :
ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಕಳೆದ ಸಾಲಿಗೆ ಹೋಲಿಸಿದ್ದಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿರುತ್ತವೆ. ಮೈಸೂರು ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಗಡಿ ಭಾಗಗಳ್ಲಿ ಚೆಕ್ ಪೆÇೀಸ್ಟ್ ಗಳನ್ನು ರಚಿಸಲಾಗಿದ್ದು, ಚೆಕ್ ಪೆÇೀಸ್ಟ್ ಗಳಲ್ಲಿ ಸರದಿಯಂತೆ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಶಸ್ತಾಸ್ತ್ರ ನಿಯೋಜಿಸಿ ಯಾವುದೇ ಕಾನೂನು ಬಾಹಿರ/ಅಪರಾಧ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತ ಕ್ರಮಗಳನ್ನುಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ನಂಜನಗೂಡು ಶಾಸಕ ದರ್ಶನ್ ಧೃವನಾರಾಯಣ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು ಜಿಲ್ಲೆಯಲ್ಲಿ ರಾತ್ರಿ ಹಾಗೂ ಹಗಲು ಗಸ್ತುಗಳನ್ನು ನಿರಂತರವಾಗ ನಿರ್ವಹಿಸಿ ಯಾವುದೇ ಅಪರಾಧ ಚಟುವಟಿಕೆಗಳನು ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಲಾಗಿರುತ್ತದೆ. ಮಾನಿರ್ಂಗ್ ಬೀಟ್ ಮತ್ತು ಫೂಟ್ ಪೆಟ್ರೋಲಿಂಗ್ ಗಸ್ತುಗಳನ್ನು ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ವಹಿಸಲಾಗಿರುತ್ತದೆ. ಪಬ್ಲಿಕ್ ಸೇಪ್ಟಿ ಕಾಯ್ದೆಯಡಿಯಲ್ಲಿ ಒಟ್ಟು 3221 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದುರು. ಅಪರಾಧ ಪ್ರಕರಣಗಳ ಭಾಗಿಯಾದ ಹಿಂದಿನ ಪ್ರಕರಣಗಳ ಆರೋಪಿತರ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಪರಮೇಶ್ವರ್ ಉತ್ತರಿಸಿದರು.
ಹೊಸ ಯೋಜನೆ-ಮನೆಮನೆಗೆ ಪೆÇಲೀಸ್-ಡಾ: ಜಿ. ಪರಮೇಶ್ವರ್
ಗೃಹ ಇಲಾಖೆ ಹೊಸ ಯೋಜನೆಯಾದ ಮನೆ-ಮನೆಗೆ ಪೆÇಲೀಸ್ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುμÁ್ಠನಗೊಳಿಸಿದ್ದು, ಸದರಿ ಕಾರ್ಯಕ್ರಮದ ಅಡಿಯಲ್ಲಿ ಭೇಟಿ ನೀಡುವ ಅಧಿಕಾರಿ ಮತ್ತು ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಅವರಿಗೆ ಇಲಾಖೆಯಿಂದ ಪೂರೈಕೆಯಾದ ಸಿ.ಯು.ಜಿ ಮೊಬೈಲ್ ನಂಬರ್ ಗಳನ್ನು ನೀಡಿದ್ದು ಯಾವುದೇ ಕುಂದು ಕೊರತೆಗಳು ಇದ್ದಲ್ಲಿ 112 ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲಾಗಿರತ್ತದೆ ಎಂದು ಹೇಳಿದರು.
ಡ್ರಗ್ ಮಾಫಿಯಾ ಮಟ್ಟ ಹಾಕಲು ಕ್ರಮ:
ಮೈಸೂರು ಜಿಲ್ಲೆಯಲ್ಲಿ ಡ್ರಗ್ ಮಾಫಿಯಾವನ್ನು ಪಟ್ಟ ಹಾಕಲು ಕೇಂದ್ರ ಗೃಹ ಸಚಿವಾಲಯದ ಆದೇಶದನ್ವಯ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾರ್ಕೋ ಸಮನ್ವಯ ಸಮಿತಿಯನ್ನು ರಚಿಸಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಇನ್ನೂ ಹಲವಾರು ಇಲಾಖೆಗಳನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿದ್ದು, ಮಾದಕ ಪದಾರ್ಥಗಳ ಉತ್ಪಾದನೆ, ಸಾಗಾಟ, ಮಾರಾಟ, ವಿತರಣೆ ಹಾಗೂ ಇದರ ದುರ್ಬಳಕೆಯನ್ನು ತಡೆಗಟ್ಟುವಲ್ಲಿ ಎಲ್ಲಾ ಇಲಾಖೆಗಿಂದ ಮಾಹಿತಿ ವಿನಿಮಯ ಮಾಡಿಕೊಂಡು ಅಪರಾಧ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.
ಚಿಕ್ಕನಾಯಕನಹಳ್ಳಿ ಪಟ್ಟಣ ಒಳ ಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ - ಸಚಿವ ಬಿ.ಎಸ್. ಸುರೇಶ್ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಒಳಚರಂಡಿ ಯೋಜನೆಯ ರೂ 5542.00 ಲಕ್ಷಗಳ ಅಂದಾಜಿಗೆ ದಿನಾಂಕ: 18-10-2019 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಸದರಿ ಕಾಮಗಾರಿಯನ್ನು ಮೆ. ಕೆ. ಗೌಡ ಮತ್ತು ಕಂಪನಿ ಬೆಂಗಳೂರು ಜಂಟಿ ಉದ್ಯಮ ಮೆ. ಶ್ರೀ ಶುಭ ಸೇಲ್ಸ್ ಇಂಜಿನಿಯರ್ ಅಂಡ್ ಕಂಟ್ರಾಕ್ಟರ್ಸ್ ಅವರಿಗೆ ದಿನಾಂಕ: 13-07-2022 ರಂದು ರೂ 4182.00 ಲಕ್ಷಗಳಿಗೆ ವಹಿಸಲಾಗಿದೆ. ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು 24 ತಿಂಗಳುಗಳ ಕಾಲಾವಧಿಯನ್ನು ನೀಡಲಾಗಿರುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ರಮೇಶ್‍ಬಾಬು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕನಾಯಕನಹಳ್ಳಿ ಪಟ್ಟಣದ ಒಳಚರಂಡಿ ಯೋಜನೆಯಡಿ 4 ಸಂಖ್ಯೆ ಮಲಿನ ನೀರು ಸಂಸ್ಕರಣಾ ಘಟಕವನ್ನು ಮತ್ತು 3 ಸಂಖ್ಯೆ ವೆಟ್ ವೆಲ್ ಘಟಕವನ್ನು ನಿರ್ಮಿಸಲು ಅವಕಶ ಕಲ್ಪಿಸಲಾಗಿದೆ. ಮಲಿನ ನೀರು ಸಂಸ್ಕರಣಾ ಘಟಕಗಳು ಮತ್ತು ವೆಟ್‍ವೆಲ್ ಘಟಕಗಳನ್ನು ನಿರ್ಮಿಸಲು ಅವಶ್ಯವಿರುವ ಖಾಸಗಿ ಜಮೀನುಗಳನ್ನು ಸ್ಥಳೀಯ ಸಂಸ್ಥೆಯ ವತಿಯಿಂದ ಭೂಸ್ವಾಧೀನಪಡಿಸಿಕೊಂಡು ಮಂಡಳಿಗೆ ಹಸ್ತಾಂತರಿಸುವಲ್ಲಿ ವಿಳಂಬವಾಗಿದ್ದು, ವಲಯ 4ರಲ್ಲಿ ಅಗಸರಹೊಳೆ ಬಳಿ 2.00 ದಶಲಕ್ಷ ಲೀಟರ್ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ ಹಾಗೂ 8.00 ಮೀ ವ್ಯಾಸದ ವೆಟ್‍ವೆಲ್ ಘಟಕ ನಿರ್ಮಿಸಲು ಚಿಕ್ಕನಾಯಕನಹಳ್ಳಿ ಗ್ರಾಮದ ಸರ್ವೆ ನಂ. 7/1 ರಲ್ಲಿ 15 ಗುಂಟೆ, ಸರ್ವೆ ನಂ. 7/2 ರಲ್ಲಿ 27 ಗುಂಟೆ ಸರ್ವೆ ನಂ. 8/4 ರಲ್ಲಿ 16 ಗುಂಟೆ ಸರ್ವೆ ನಂ. 83/2 ರಲ್ಲಿ 6 ಗುಂಟೆ ಜಮೀನನ್ನು ಪರಸ್ಪರÀ ಒಪ್ಪಂದದ ಆಧಾರದಲ್ಲಿ ಖಾಸಗಿ ಜಮೀನಿನ ಭೂ ಸ್ವಾಧೀನ ವೆಚ್ಚ ಪಾವತಿಸಿಕೊಂಡು ಮುಖ್ಯಾಧಿಕಾರಿಗಳು ಪುರಸಭೆ, ಚಿಕ್ಕನಾಯಕನಹಳ್ಳಿ ಅವರು 02-01-2024ರಂದು (ಗುತ್ತಿಗೆ ದಿನಾಂಕದಿಂದ 1 ವರ್ಷ 9 ತಿಂಗಳುಗಳ ನಂತರ) ಮಂಡಳಿಗೆ ಹಸ್ತಾಂತರಿಸಿರುತ್ತಾರೆ ಎಂದು ತಿಳಿಸಿದರು.
ಸದರಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಸಬಾ ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸರ್ವೆ ನಂ. 5/5 ಎಫ್ ರಲ್ಲಿ 10 ಗುಂಟೆ ಜಮೀನನ್ನು ಪರಸ್ಪರ ಒಪ್ಪಂದದ ಆಧಾರದಲ್ಲಿ ಜಮೀನಿನ ಭೂ ಸ್ವಾಧೀನ ವೆಚ್ಚ ಪಾವತಿಸಿಕೊಂಡು ಮುಖ್ಯಾಧಿಕಾರಿಗಳು ಪುರಸಭೆ ಚಿಕ್ಕನಾಯಕನಹಳ್ಳಿ ಅವರು ದಿನಾಂಕ: 25-06-2024ರಂದು (ಗುತ್ತಿಗೆ ದಿನಾಂಕದಿಂದ 1 ವರ್ಷ 11 ತಿಂಗಳ ನಂತರರ) ಮಂಡಳಿಗೆ ಹಸ್ತಾಂತರಿಸಿರುತ್ತಾರೆ.
ವಲಯ-6 ರಲ್ಲಿ, ಜೋಗಿಹಳ್ಳಿ ಹತ್ತಿರ ನಿರ್ಮಿಸಲು ಉದ್ದೇಶಿಸಿರುವ 6.00 ಮೀ ವ್ಯಾಸದ ವೆಟ್‍ವೆಲ್ ಘಟಕವನ್ನು ನಿರ್ಮಿಸಲು ಅವಶ್ಯವಿರುವ ಜಾಗವನ್ನು ಮುಖ್ಯಾಧಿಕಾರಿಗಳು, ಪುರಸಭೆ, ಚಿಕ್ಕನಾಯಕನಹಳ್ಳಿ ರವರು ದಿನಾಂಕ: 02-09-2025 ರಂದು (ಗುತ್ತಿಗೆ ದಿನಾಂಕದಿಂದ 3 ವರ್ಷ 2 ತಿಂಗಳುಗಳ ನಂತರ) ಮಂಡಳಿಗೆ ಹಸ್ತಾಂತರಿಸಿರುತ್ತಾರೆ.
ವಲಯ-2 ರ ಕುರುಬರಹಳ್ಳಿ ಹತ್ತಿರ 110 ಕೆ.ಎಲ್.ಡಿ ಮತ್ತು ವಲಯ-3 ರ ಕೇದಿಗೆಹಳ್ಳಿ ಹತ್ತಿರ 715 ಕೆ.ಎಲ್.ಡಿ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ ಚಿಕ್ಕನಾಯಕನಹಳ್ಳಿ ತಾಲ್ಲೂಕು, ಕುರುಬರಹಳ್ಳಿ ಗ್ರಾಮದ ಸರ್ವೆ ನಂ.35/1ಎ ರಲ್ಲಿ 2 ಗುಂಟೆ ಸರ್ವೆ ನಂ.35/8 ರಲ್ಲಿ 1 ಗುಂಟೆ, ಸರ್ವೆ ನಂ.35/9 ರಲ್ಲಿ 1 ಗುಂಟೆ ಮತ್ತು ಕೇದಿಗೆಹಳ್ಳಿ ಗ್ರಾಮದ ಸರ್ವೆ ನಂ.22 ರಲ್ಲಿ 15 ಗುಂಟೆ ಒಟ್ಟು 19 ಗುಂಟೆ ಜಮೀನಿನಲ್ಲಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿದೆ, 19(1) ಅಧಿಸೂಚನೆ ಅನುಮೋದನೆ ಹಂತದಲ್ಲಿರುತ್ತದೆ. ಕಾಮಗಾರಿ ಸ್ಥಳ ಇದುವರೆವಿಗೂ ಲಭ್ಯವಿರುವುದಿಲ್ಲ.
ವಲಯ-1 ರ ಮಾರುತಿ ನಗರದಲ್ಲಿ 100 ಕೆ.ಎಲ್.ಡಿ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ ಮುಖ್ಯಾಧಿಕಾರಿಗಳು, ಪುರಸಭೆ, ಚಿಕ್ಕನಾಯಕನಹಳ್ಳಿ ರವರು ದಿನಾಂಕ: 12-10-2023 ರಲ್ಲಿ ಹಸ್ತಾಂತರಿಸಿರುವ ಜಮೀನಿನಲ್ಲಿ ಕಾಮಗಾರಿ ಪ್ರಾರಂಭಿಸಲು ಸ್ಥಳೀಯ ನಾಗರೀಕರು ಆಕ್ಷೇಪಿಸಿರುತ್ತಾರೆ ಹಾಗೂ ಈ ಸ್ಥಳದಲ್ಲಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಸ್ಥಳದ ಅಭಾವವಿರುತ್ತದೆ. ಈ ಬಗ್ಗೆ ಸದರಿ ಸ್ಥಳದಲ್ಲಿ ಮಲಿನ ನೀರು ಮೆಷಿನ್ ಹೋಲ್ ಪಂಪಿಂಗ್ ಸ್ಟೇಷನ್ ನಿರ್ಮಿಸಲು ಹಾಗೂ ಮಲಿನ ನೀರನ್ನು 2.6ಎಂ.ಎಲ್.ಡಿ ಮಲಿನ ನೀರು ಸಂಸ್ಕರಣಾ ಘಟಕಕ್ಕೆ ಪಂಪು ಮಾಡಲು ವಿನ್ಯಾಸ ಮತ್ತು ನಕ್ಷೆಯನ್ನು ಸಲ್ಲಿಸಲು ಮುಖ್ಯ ಅಭಿಯಂತರರು(ಬೆಂ), ಕನನೀಸ ಮತ್ತು ಒಚ ಮಂಡಳಿ, ಬೆಂಗಳೂರು ರವರು ದಿನಾಂಕ 11-12-2025 ರಂದು ನಡೆದ ಕಾಮಗಾರಿ ಪರಿವೀಕ್ಷಣೆಯ ಸಮಯದಲ್ಲಿ ತೀರ್ಮಾನಿಸಿದಂತೆ ಮೆಷಿನ್ ಹೋಲ್ ಪಂಪಿಂಗ್ ಸ್ಟೇಷನ್ ಗೆ ವಿನ್ಯಾಸ ಮತ್ತು ನಕ್ಷೆಯನ್ನು ಗುತ್ತಿಗೆದಾರರು ಸಲ್ಲಿಸಿದ್ದು ಅನುಮೋದನೆಯ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಕಾಮಗಾರಿ ನಿರ್ವಹಿಸಲು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ 150 ಎ ಗಳಲ್ಲಿ ಒಳಚರಂಡಿ ಕೊಳವೆಗಳನ್ನು ಅಳವಡಿಸಿ ಮೆಷಿನ್‍ಹೋಲ್ ಗಳನ್ನು ನಿರ್ಮಿಸಲು ಅನುಮತಿ ದೊರೆಯುವಲ್ಲಿ ವಿಳಂಬವಾಗಿರುತ್ತದೆ.
ಲೋಕೋಪಯೋಗಿ ರಸ್ತೆಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಅನುಮತಿ ನೀಡಲು ಮಂಡಳಿಯನ್ನು ದಿನಾಂಕ:12-03-2024 ಹಾಗೂ ದಿನಾಂಕ:13-06-2024 ರಲ್ಲಿ ಕೋರಲಾಗಿದೆ. ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ವಿಭಾಗ, ತುಮಕೂರು ರವರು ದಿನಾಂಕ 29-10-2025 ಮತ್ತು ದಿನಾಂಕ: 29-10-2025 ರಲ್ಲಿ ಅನುಮತಿ ನೀಡಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ 150 ಎ ಪಕ್ಕದಲ್ಲಿ ಒಳಚರಂಡಿ ಕೊಳವೆಗಳನ್ನು ಅಳವಡಿಸಿ ಮೆಷಿನ್‍ಹೋಲ್ ಗಳನ್ನು ನಿರ್ಮಿಸಲು ಅನುಮತಿ ನೀಡಲು ಮಂಡಳಿ ದಿನಾಂಕ:28-10-2024 ರಂದು ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಬೆಳ್ಳೂರು ಕ್ರಾಸ್ ರವರಿಗೆ ಕೋರಲಾಗಿದೆ. ದಿನಾಂಕ:17-12-2024 ರಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಬೆಳ್ಳೂರು ಕ್ರಾಸ್ ರವರು ಜಂಟಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಸದರಿಯವರು ಕೋರಿರುವಂತೆ ನಕ್ಷೆಗಳನ್ನು ಮಂಡಳಿಯು ದಿನಾಂಕ:18-01-2025 ರಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಬೆಳ್ಳೂರು ಕ್ರಾಸ್ ರವರಿಗೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅನುಮತಿ ನೀಡಿರುವುದಿಲ್ಲ.
ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಪುರಸಭೆ ವ್ಯಾಪ್ತಿಯ 10 ಕಡೆಗಳಲ್ಲಿ ಒಟ್ಟು ಸುಮಾರು 1.15 ಕಿಮೀ ಉದ್ದಕ್ಕೆ ಸ್ಥಳದ ತಕರಾರುಗಳು ಇರುವುದರಿಂದ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಸದರಿ ಆರ್.ಒ.ಡಬ್ಲ್ಯೂ ಸಮಸ್ಯೆಗಳನ್ನು ಬಗೆಹರಿಸಿಕೊಡಲು ಚಿಕ್ಕನಾಯಕನಹಳ್ಳಿ ರವರಿಗೆ ಮನವಿ ಮಾಡಲಾಗಿದೆ.
ಇದುವರೆಗೂ ಗುತ್ತಿಗೆದಾರರಿಂದಾಗಿರುವ ಕಾಮಗಾರಿ ವಿಳಂಭಕ್ಕೆ ವಿಭಾಗ ಮತ್ತು ಉಪವಿಭಾಗ ಕಛೇರಿಗಳಿಂದ ನೋಟೀಸ್ ನೀಡಲಾಗಿರುತ್ತದೆ ಹಾಗೂ ಗುತ್ತಿಗೆದಾರರೊಂದಿಗೆ ವಿಭಾಗ ಕಛೇರಿಯಲ್ಲಿ ಪರಿಶೀಲನಾ ಪ್ರಗತಿ ನಡೆಸಲಾಗಿರುತ್ತದೆ. ಗುತ್ತಿಗೆದಾರರಿಂದಾಗಿರುವ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ಬಿಲ್ಲುಗಳಲ್ಲಿ ರೂ.25.00 ಲಕ್ಷಗಳನ್ನು ತಡೆಹಿಡಿಯಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ, ಚಿಕ್ಕನಾಯಕನಹಳ್ಳಿ ಪಟ್ಟಣದ ಒಳಚರಂಡಿ ಕಾಮಗಾರಿಗಳನ್ನು ದಿನಾಂಕ:12-07-2026 ರೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಈ ಯೋಜನೆಯಡಿ ವಿವಿಧ ಘಟಕಗಳಿಗೆ ಅವಶ್ಯವಿರುವ ಜಮೀನನ್ನು ಹಸ್ತಾಂತರಿಸುವಲ್ಲಿ ಆಗಿರುವ ವಿಳಂಬದಿಂದಾಗಿ ಮತ್ತು ಇತರ ವಿಳಂಬಗಳನ್ನು ಪರಿಗಣಿಸಿ ಮಾರ್ಪಾಡಿತ ವರ್ಕ್ ಪ್ರೋಗ್ರಾಂ ಅನ್ನು ಅನುಮೋದಿಸಿಕೊಂಡು ಅದರನ್ವಯ ಪ್ರತಿ ತಿಂಗಳು ಗುತ್ತಿಗೆದಾರರಿಂದ ಕಾಮಗಾರಿಯ ಪ್ರಗತಿಯ ವಿವರಗಳನ್ನು ಪಡೆದು ಮಂಡಳಿಯ ನಿಗಧಿತ ನಮೂನೆ ಕೆ.ಡಬ್ಲ್ಯೂಬಿ ಎಫ್ - 52ನಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗುತ್ತಿದೆ.
ಪ್ರಸ್ತುತ ಕಾಮಗಾರಿಯಡಿ ಶೇಕಡಿ 70 ರಷ್ಟು ಭೌತಿಕ ಪ್ರಗತಿ ಹಾಗೂ ಶೇಕಡ 45 ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಹಾಗೂ ಬಾಕಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಯೋಜನೆಯನ್ನು ಜುಲೈ 2026ಕ್ಕೆ ಪೂರ್ಣಗೊಳಿಸಿ ಚಾಲನೆಗೊಳಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ ಯಾವುದೇ ಪುರಸಭೆಗಳಲ್ಲಿ ಟೆಂಡರ್ ಕರೆಯುವುದು ಬಾಕಿ ಇರುವುದಿಲ್ಲ - ಪೌರಾಡಳಿತ ಸಚಿವ ರಹೀಂ ಖಾನ್ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ಮೈಸೂರು ಜಿಲ್ಲೆಯ ಯಾವುದೇ ಪುರಸಭೆಗಳಲ್ಲಿ ಟೆಂಡರ್ ಕರೆಯುವುದು ಬಾಕಿ ಇರುವುದಿಲ್ಲ ಹಾಗೂ ಟೆಂಡರ್ ಪ್ರಕ್ರಿಯೆಗಳಲ್ಲಿ ಯಾವುದೇ ವಿಳಂಬವಾಗಿರುವುದಿಲ್ಲ ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ 4 ರಡಿ ಅನುದಾನ ಬಿಡುಗಡೆ ಮಾಡಲಾಗಿದೆ ಹಾಗೂ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ನಿಗಧಿಪಡಿಸಲಾದ ಕಾಲಾವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆ – ಅಪಾರ್ಟ್‍ಮೆಂಟ್ ಪ್ಲಾಟ್‍ಗಳ ಆಸ್ತಿ ತೆರಿಗೆ ಸಂಗ್ರಹಿಸಿ ದುರುಪಯೋಗ ಮಾಡಿಕೊಂಡಿರುವವರ ವಿರುದ್ದ ಕಾನೂನಾತ್ಮಕ ಕ್ರಮ ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿನ ವಾರ್ಡ್ ಸಂ. 19 ರಲ್ಲಿನ ಅಪಾರ್ಟ್‍ಮೆಂಟ್ ಪ್ಲಾಟ್‍ಗಳ ಆಸ್ತಿ ತೆರಿಗೆಯಲ್ಲಿ ಕರ ಸಂಗ್ರಹಿಸಿ ಪಾಲಿಕೆಯ ಖಾತೆಗೆ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವ ಅಧಿಕಾರಿ ಮತ್ತು ನೌಕರರುಗಳ ವಿರುದ್ಧ ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಕಛೇರಿ-1ರ - ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ:18/19 ರ - ವ್ಯಾಪ್ತಿಯ ಅನಂತಪುರ ರಸ್ತೆಯ ಹತ್ತಿರವಿರುವ ಅಪಾರ್ಟ್‍ಮೆಂಟ್ ಒಂದರಲ್ಲಿ ಸುಮಾರು 35 ಪ್ಲಾಟ್ ಗಳಿಗೆ ನಮೂನೆ-2ನ್ನು ನೀಡಿರುವುದು ಕಂಡುಬಂದಿರುತ್ತದೆ. ಆದರೆ, ನಮೂನೆ-2ನ್ನು ನೀಡಲು ತೆರಿಗೆಯ ಮೊತ್ತ ರೂ.2.80,179/- ಗಳನ್ನು ಮಾಲೀಕರಿಂದ ಸಂಗ್ರಹಿಸಿ, ಪಾಲಿಕೆಯ ಖಾತೆಗೆ ಜಮಾ ಮಾಡದೇ ತೆರಿಗೆಯ ಮೊತ್ತವನ್ನು ದುರುಪಯೋಗ ಮಾಡಿಕೊಳ್ಳುವುದಲ್ಲದೇ ಬಳ್ಳಾರಿ ಒನ್ ರಸೀದಿಗಳನ್ನು ಕೊಟ್ಟಿ (ನಕಲು) ದಾಖಲೆಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ತೆರಿಗೆ ಮೊತ್ತವನ್ನು ಪಾಲಿಕೆಯ ಖಾತೆಗೆ ಪಾವತಿಸದೇ ಇರುವ ಕಾರಣ, ಸದರಿ ಮೊತ್ತದ ಜೊತೆಗೆ ಶೇ.18%ರಷ್ಟು ಬಡ್ಡಿಯೊಂದಿಗೆ ಪಾಲಿಕೆಯ ಹಿಂದುರುಗಿಸಿಕೊಂಡು ಕರ್ತವ್ಯ ನಿರ್ಲಕ್ಷ್ಯ ತೋರಿರುವ ಎನ್. ವೀರೇಶ್ ಕುಮಾರ್, ಸಹಾಯಕ ಕಂದಾಯ ಅಧಿಕಾರಿ, ಮನೋಹರ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕೆ. ದೊಡ್ಡಬಸಪ್ಪ ದ್ವಿತೀಯ ದರ್ಜೆ ಸಹಾಯಕರು ರವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ-110 ಮೇರೆಗೆ ಶಿಸ್ತು ಕ್ರಮ ಜರುಗಿಸಲು ಉದ್ದೇಶಿಸಲಾಗಿದ್ದು ದೋμÁರೋಪಣಾ ಪಟ್ಟಿಯನ್ನು ಜಾರಿ ಮಾಡಿ ಆಪಾದನೆಗಳ ಬಗ್ಗೆ, ಲಿಖಿತ ಸಮಜಾಯಿಷಿ ಯಾವುದಾದರೂ ಇದ್ದಲ್ಲಿ ಮನವಿ ಸಲ್ಲಿಸುವಂತೆ ದಿನಾಂಕ:26.03.2025ರಂದು ನೋಟಿಸ್ ನೀಡಲಾಗಿರುತ್ತದೆ.
ಸದರಿ ನೋಟಿಸ್‍ಗೆ ಆರೋಪಿತ ನೌಕರರಾದ ಎನ್.ವೀರೇಶ್ ಕುಮಾರ್ ಸಹಾಯಕ ಕಂದಾಯಾಧಿಕಾರಿ ರವರು ಮನೋಹರ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ದಿನಾಂಕ 08.04.2025 ರಂದು ಮತ್ತು ಕೆ.ದೊಡ್ಡಬಸಪ್ಪ ದ್ವಿತೀಯ ದರ್ಜೆ ಸಹಾಯಕರು, ರವರು ದಿನಾಂಕ:11.04.2025ರಂದು ಲಿಖಿತ ಉತ್ತರವನ್ನು ಸಲ್ಲಿಸಿದ್ದು ಆರೋಪಗಳನ್ನು ನಿರಾಕರಿಸಿ ದೋಷಾರೋಪಣಾ ಪಟ್ಟಿಯಿಂದ ಕೈಬಿಡುವಂತೆ ಕೋರಿರುತ್ತಾರೆ.
ಸಮಜಾಯಿಷಿಯು ಒಪ್ಪಲರ್ಹವಲ್ಲದ ಕಾರಣ, ಗ್ರೂಪ್ 'ಸಿ ಮತ್ತು ಡಿ" ವೃಂದದ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವು ಮಹಾನಗರಪಾಲಿಕೆ ಆಯುಕ್ತರಿಗೆ ಪ್ರತ್ಯಾಯೋಜನೆಯಾಗಿರುವುದರಿಂದ, ಸದರಿಯವರುಗಳ ವಿರುದ್ಧದ ಆರೋಪಗಳ ಕುರಿತು ಜಂಟಿ ವಿಚಾರಣೆಯನ್ನು ನಡೆಸಲು ಉದ್ದೇಶಿಸಿ, ಆಯುಕ್ತರು, ಬಳ್ಳಾರಿ ಮಹಾನಗರ ಪಾಲಿಕೆ ರವರು ದಿನಾಂಕ 31.05.20250 ನಿವೃತ್ತ ನ್ಯಾಯಾಧೀಶರಾದ ಈಶ್ವರ್ ಜಂತ್ಲಿ ದಾವಣಗೆರೆ, ಇವರನ್ನು ವಿಚಾರಣಾಧಿಕಾರಿಗಳನ್ನಾಗಿ ಹಾಗೂ ಈ ಹಿಂದಿನ ಸಾಂಖ್ಯಿಕ ಅಧಿಕಾರಿಗಳಾದ ರಮೇಶ್, ಸಹಾಯಕ ನಿರ್ದೇಶಕರು ರವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿರುತ್ತದೆ. ಅಲ್ಲದೆ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಗಾಂಧಿ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 0135/2024ರನ್ವಯ ಪ್ರಕರಣ ದಾಖಲಿಸಲಾಗಿರುತ್ತದೆ.
ಪ್ರಸ್ತುತ ಇಲಾಖಾ ವಿಚಾರಣೆಯು ವಿಚಾರಣೆ ಹಂತದಲ್ಲಿದ್ದು ಈವರೆಗೂ ವಿಚಾರಣಾಧಿಕಾರಿಗಳು ಒಟ್ಟು 06 ಸಭೆಗಳನ್ನು ನಡೆಸಿರುತ್ತಾರೆ. ಅಂತಿಮ ವಿಚಾರಣಾ ವರದಿ ಇನ್ನೂ ಸ್ವೀಕೃತವಾಗಿರುವುದಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ತೊಡಕುಂಟಾಗುತ್ತಿರುವುದರಿಂದ ಹಾಗೂ ಗ್ರೂಪ್ 'ಸಿ' ವೃಂದದ ನೌಕರರ ಶಿಸ್ತು ಪ್ರಾಧಿಕಾರವು ಸಂಬಂಧಿಸಿದ ಪಾಲಿಕೆಯ ಆಯುಕ್ತರಾಗಿರುವುದರಿಂದ, ಹಣ ದುರುಪಯೋಗ ಮಾಡಿರುವ ಸಿಬ್ಬಂದಿಗಳನ್ನು ಅವರು ಕಾರ್ಯನಿರ್ವಹಿಸುತ್ತಿದ್ದ ವಲಯ ಕಛೇರಿಯನ್ನು ಹೊರತುಪಡಿಸಿ ಪಾಲಿಕೆಯ ಇತರೆ ವಲಯ ಕಛೇರಿಯಲ್ಲಿ ಪುನರ್ ಸ್ಥಾಪಿಸಲಾಗಿರುತ್ತದೆ.
ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಭಾಗಿಯಾದ ಸಿಬ್ಬಂದಿಗಳ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿರುತ್ತದೆ. ಹಣ ದುರುಪಯೋಗಪಡಿಸಿಕೊಂಡ ಅಧಿಕಾರಿ/ನೌಕರರನ್ನು ಅಮಾನತ್ತುಗೊಳಿಸಿ ನಿಯಮಗಳಂತೆ 06 ತಿಂಗಳೊಳಗಾಗಿ ಪುನರ್ ಸ್ಥಾಪಿಸಲಾಗಿರುತ್ತದೆ.
ಸದರಿಯವರ ವಿರುದ್ಧ ನಿವೃತ್ತ ವಿಚಾರಣಾ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ. ಆದೇಶಿಸಲಾಗಿದ್ದು, ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.
ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಇವರನ್ನು ಒಳಗೊಂಡ ಪ್ರಾಥಮಿಕ ತನಿಖಾ ಸಮಿತಿಯನ್ನು ರಚಿಸಿದ್ದು ದಿನಾಂಕ:10.12.2024 ರಂದು ಸಮಿತಿಯು ನೀಡಿದ ವರದಿಯಲ್ಲಿ ದಿನಾಂಕ:11.11.2024 ರಂದು ಪುನಃ ತೆರಿಗೆಯನ್ನು ಪಾವತಿಸಿ, ತೆರಿಗೆ ರಸೀದಿಗಳನ್ನು ಮಾಲೀಕರಿಗೆ ಸಲ್ಲಿಸಿರುವುದಾಗಿ ತಿಳಿಸಲಾಗಿರುತ್ತದೆ.
ಪಾಲಿಕೆಗೆ ತಡವಾಗಿ ಪಾವತಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದರಿಂದ, ಬಡ್ಡಿ ಸಮೇತ ವಸೂಲಿಗೆ ಕ್ರಮವಹಿಸಲಾಗುವುದು ಹಾಗೂ ಇಲಾಖಾ ವಿಚಾರಣೆಯ ಅಂತಿಮ ವರದಿ ಸ್ವೀಕೃತವಾದ ನಂತರ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು - ಸಚಿವ ರಹೀಂಖಾನ್ ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಹಚ್ಚಿನ ವಿದ್ಯಾಭ್ಯಾಸ ಕೈಗೊಳ್ಳಲು ಹಣ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಿವಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಖಾಯಂ/ನೇರಪಾವತಿ/ದಿನಗೂಲಿ ಸೇರಿ 8380 ಹಾಗೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ 10,368 ಒಟ್ಟು 18,748 ಜನ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರದ ಆದೇಶದ ದಿನಾಂಕ: 07-08-2017ರ ರೀತ್ಯಾ ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, ಹಾಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ - ಪೌರಕಾರ್ಮಿಕರನ್ನು ಅಗತ್ಯಕ್ಕೆ ಅನುಗುಣವಾಗಿ, ನೇರಪಾವತಿ - ಮೂಲಕ ಕೆಲಸಕ್ಕೆ ತೆಗೆದುಕೊಂಡು ನಗರಸ್ಥಳೀಯ ಸಂಸ್ಥೆಗಳಿಂದ ಸಂಭಾವನೆಯನ್ನು ನೀಡಲು ಆದೇಶಿಸಲಾಗಿರುತ್ತದೆ. ಅದರಂತೆ ಪ್ರಸ್ತುತ ನಗರಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ/ನೇರಪಾವತಿ/ದಿನಗೂಲಿ/ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ.
ರಾಜ್ಯದ ಮಹಾನಗರ ಪಾಲಿಕೆ (ಜಿ.ಬಿ.ಎ. ಹೊರತುಪಡಿಸಿ), ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿಗಳಲ್ಲಿ 12790 ಖಾಯಂ ಹಾಗೂ ನೇರನೇಮಕಾತಿ / ದಿನಗೂಲಿಯಡಿ 5958 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಖಾಯಂ ಪೌರಸೇವಾ ನೌಕರರಿಗೆ ಸರ್ಕಾರದ ಆದೇಶಾನುಸಾರ ಕಾಲಕಾಲಕ್ಕನುಗುಣವಾಗಿ ಹಾಗೂ ವೇತನ ಆಯೋಗದ ಆದೇಶದಂತೆ ಬದಲಾಗುವ ವೇತನದಂತೆಯೇ ಖಾಯಂ ಪೌರಕಾರ್ಮಿಕರಿಗೂ ಸಹ ವೇತನ ಪಾವತಿಸಲಾಗುತ್ತಿದೆ.
ಇನ್ನುಳಿದಂತೆ ಪೌರಕಾರ್ಮಿಕರ ಮಕ್ಕಳ ಹೆಚಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ತೆಂಗು ಬೆಳೆಗೆ ವಿಮೆ - ಕೇಂದ್ರಕ್ಕೆ ಮನವಿ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ತೆಂಗಿನ ಬೆಳೆ ಹಾನಿಗೆ ವಿಮೆ ಜಾರಿ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ತುಮಕೂರು ಜಿಲ್ಲೆಯಲ್ಲಿ 1.79 ಲಕ್ಷ ಹೆಕ್ಟೇರ್‍ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ 8,817 ಹೆಕ್ಟೇರ್ ಪ್ರದೇಶದಲ್ಲಿ ಕೆಂಪುಮೂತಿಹುಳ ಮತ್ತು 22,071 - ಹೆಕ್ಟೇರ್ ಪ್ರದೇಶದಲ್ಲಿ ಅಣಬೆ ರೋಗಕ್ಕೆ ತುತ್ತಾಗಿರುವುದಾಗಿ ಅಂದಾಜಿಸಲಾಗಿದೆ. ಇವುಗಳ ನಿಯಂತ್ರಣಕ್ಕೆ ತೆಂಗಿನ ತೋಟಗಳ ಪುನ:ಶ್ಚೇತನ, ಮರುನಾಟಿ ಮತ್ತು ನಿರ್ವಹಣೆಯಿಂದ ತೆಂಗಿನ ಮರಗಳು ಸದೃಡಗೊಂಡು ರೋಗ / ಕೀಟ ನಿರೋಧಕ ಶಕ್ತಿ ಬೆಳಸಿಕೊಳ್ಳುತ್ತವೆ ಅದುದರಿಂದ ಈ ಚಟುವಟಿಕೆಗಳಿಗಾಗಿ ಪ್ರತಿ ಫಲಾನುಭವಿಗೆ ಒಂದು ಹೆಕ್ಟೇರ್ ವರೆಗೆ ರೂ. 54,000/-ಗಳನ್ನು ಎರಡು ವರ್ಷದ ಅವಧಿಗೆ ಸಹಾಯಧನ ನೀಡಲಾಗುತ್ತಿದೆ. ಮೊದಲನೇ ವರ್ಷ ರೂ.45,250/-ಗಳನ್ನು ಹಾಗೂ ಎರಡನೇ ವರ್ಷದ ನಿರ್ವಹಣೆಗೆ ರೂ.8,750/ ಗಳ ಸಹಾಯಧನವನ್ನು ನೀಡಲಾಗುತ್ತಿದೆ.
ಮೊದಲನೇ ವರ್ಷದಲ್ಲಿ ರೋಗ / ಕೀಟ ಬಾಧಿತ, ಒಣಗಿದ ಮರ ತೆಗೆಯಲು, ಹೊಸ ತೆಂಗಿನ ಗಿಡ ನೆಡಲು, ನಿರ್ವಹಣೆಗಾಗಿ ಪೋಷಕಂಶಗಳು, ಬೇವಿನ ಹಿಂಡಿ, ಹಸಿರಿಲೆ ಗೊಬ್ಬರದ ಬೀಜಗಳು, ಸಸ್ಯಸಂರಕ್ಷಣ ಔಷಧಿಗಳನ್ನು ನೀಡಲು 4571 ರೈತರಿಗೆ 2423 ಹೆಕ್ಟೇರ್ ಪ್ರದೇಶಕ್ಕಾಗಿ ರೂ.951 ಲಕ್ಷಗಳ ಸಹಾಯಧನ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 1084 ರೈತರಿಗೆ 591 ಹೆಕ್ಟೇರ್ ಪ್ರದೇಶದಲ್ಲಿ ರೂ. 187.17 ಲಕ್ಷಗಳ ಸಹಾಯಧನ ನೀಡಲಾಗಿದೆ. ಈ ಪ್ರದೇಶದ ಎರಡನೇ ವರ್ಷದ ನಿರ್ವಹಣೆಗಾಗಿ ರೂ.186.04 ಲಕ್ಷಗಳನ್ನು ವಿನಿಯೋಗಿಸಲಾಗಿದೆ.
ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆ ಹಾಗೂ ನಿರ್ವಹಣೆಗಾಗಿ ಒಂದು ಹೆಕ್ಟೇರ್‍ಗೆ ರೂ. 35,000/- ಗಳಂತೆ 2 ವರ್ಷಗಳ ಅವಧಿಗೆ ಮೊದಲನೇ ವರ್ಷ ರೂ.17500/- ಗಳು ಮತ್ತು ಎರಡನೇ ವರ್ಷದಲ್ಲಿ ರೂ.17500/- ಗಳಂತೆ ಸಹಾಯಧನ ನೀಡಲಾಗುತ್ತಿದೆ. ರೋಗ ಮತ್ತು ಕೀಟಬಾಧಿತ ತಾಕುಗಳನ್ನು ಗುಚ್ಛಗಳಲ್ಲಿ ಆಯ್ಕೆ ಮಾಡಿ ಸಹಾಯಧನ ನೀಡಲಾಗಿರುತ್ತದೆ. ಮೊದಲನೇ ವರ್ಷದ ಕಾರ್ಯಕ್ರಮದಡಿ 41185 ರೈತರಿಗೆ 28420 ಹೆಕ್ಟೇರ್ ಪ್ರದೇಶದಲ್ಲಿ ರೂ. 5000 ಲಕ್ಷಗಳ ಸಹಾಯಧನ ಒದಗಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 15338 ರೈತರಿಗೆ 9840 ಹೆಕ್ಟೇರ್ ಪ್ರದೇಶದಲ್ಲಿ ರೂ. 1829.87 ಲಕ್ಷಗಳ ಸಹಾಯಧನ ನೀಡಲಾಗಿದೆ. ಈ ಪ್ರದೇಶದ ಎರಡನೇ ವರ್ಷದ ನಿರ್ವಹಣೆಗಾಗಿ ರೂ.4973.45 ಲಕ್ಷಗಳ ಅನುದಾನ ವಿನಿಯೋಗಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 12312 ರೈತರಿಗೆ 8362 ಹೆಕ್ಟೇರ್ ಪ್ರದೇಶದಲ್ಲಿ ರೂ. 1385 ಲಕ್ಷಗಳ ಸಹಾಯಧನ ನೀಡಲಾಗಿದೆ.
ತೆಂಗು ಬೆಳೆಯಲ್ಲಿ ಕಂಡು ಬರುವ ಕಪ್ಪು ತಲೆಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಕೀಟನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 140.00 ಲಕ್ಷಗಳ ಅನುದಾನ ನಿಗದಿಯಾಗಿದ್ದು, ತುಮಕೂರು ಜಿಲ್ಲೆಗೆ 21.00 ಲಕ್ಷಗಳನ್ನು ನೀಡಲಾಗಿದೆ.
ತೆಂಗು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಸ್ಯ ಸಂರಕ್ಷಣಾ ಔಷಧಿಗಳಿಗೆ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಪ್ರತಿ ಹೆಕ್ಟೇರಿಗೆ ತಗಲುವ ರೂ. 10000/-ಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಂತೆ ರೂ.9000/- ಗಳ ಸಹಾಯಧನ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಶೇ.75ರಂತೆ ರೂ.7500ಗಳ ಸಹಾಯಧನ ನೀಡಲಾಗುತ್ತಿದೆ.
ತೆಂಗು ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಮಗ್ರ ರೋಗ / ಕೀಟಗಳ ಹಾಗೂ ಪೆÇೀಷಕಾಂಶಗಳ ನಿರ್ವಹಣೆಗಾಗಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೂ.5000/- ಗಳಲ್ಲಿ ಪ್ರತಿ ಹೆಕ್ಟೇರ್ ಗೆ ತಗಲುವ ವೆಚ್ಚದ ಶೇ.30ರಂತೆ ಪ್ರತಿ ಹೆಕ್ಟೇರಿಗೆ ರೂ.1500 ದರದಲ್ಲಿ 2 ಹೆಕ್ಟೇರ್ ವರೆಗೆ ರೂ.3000/-ಸಹಾಯಧನ ನೀಡಲಾಗುತ್ತಿದೆ.
ದಿನಾಂಕ: 31-07-2025 ಹಾಗೂ 01.08.2025 ರಂದು ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್ ಕಾಸರಗೋಡು, ತೋಟಗಾರಿಕೆ ವಿಶ್ವ ವಿದ್ಯಾನಿಲಯ ತಜ್ಞರು, ಸಿ.ಬಿ.ಡಿ ಅಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳಿಂದ ತೆಂಗು ಬೆಳೆಯಲ್ಲಿ ಕಂಡು ಬರುವ ರೋಗ / ಕೀಟಗಳಿಗೆ ಹಾನಿಗೊಳಗಾದ ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ರೈತರ ತಾಕುಗಳಲ್ಲಿ 12 ಪ್ರಾತ್ಯಕ್ಷತೆ / 85 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 12500 ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ವತಿಯಿಂದ ರಚಿಸಿರುವ ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿದ್ದು, ದಿನಾಂಕ:11.11.2025 ರಂದು ನಿರ್ದೇಶಕರು, ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್, ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ರವರ ಉಪಸ್ಥತಿಯಲ್ಲಿ ನಡೆದ ಸಭೆಯಲ್ಲಿ ಇಲಾಖಾ ಅನುμÁ್ಠನಾಧಿಕಾರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕಪ್ಪುತಲೆ ಹುಳುವಿನ ನಿಯಂತ್ರಣಕ್ಕೆ ತಾಕುಗಳ ನೈರ್ಮಲ್ಯಗೊಳಿಸುವುದು, ಬಾಧಿತ ಮರದ ಎಲೆ, ಕಾಂಡ ಕತ್ತರಿಸಿ ನಾಶಪಡಿಸುವುದು, ಪರೋಪ ಜೀವಿಗಳ ಉತ್ಪಾದನೆ ಮಾಡಿ ವಿತರಿಸುವುದು, ಪರೋಪ ಜೀವಿಗಳ ಉತ್ಪಾದನೆಗೆ ಪ್ರಯೋಗಶಾಲೆಗಳ ನಿರ್ಮಾಣ ಹಾಗೂ ಬಾಧೆಯ ನಿಯಂತ್ರಣಕ್ಕೆ ಬೇವಿನ ಎಣ್ಣೆ, ಐಸೇರಿಯಾ ಜೈವಿಕ ಶಿಲೀಂದ್ರ ಕೀಟನಾಶಕ/ಸಿಂಪ್ಲಿಸಿಲಿಯಂ ಯನ್ನು ಸಿಂಪಡಿಸುವುದು.
ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಬೇವಿನಹಿಂಡಿ, ಜೈವಿಕ ಗೊಬ್ಬರಗಳು, ಟ್ರೈಕೊಡರ್ಮಾ, ಮಣ್ಣು ಸುಧಾರಕಗಳು ಹಾಗೂ ಪೊಟ್ಯಾಶ್ ಗೊಬ್ಬರವನ್ನು ನೀಡಲು, ಈ ಕೀಟಗಳ ನಿಯಂತ್ರಣಕ್ಕೆ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡು ಹಾಗೂ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋ ಉನ್ನತಿಕರಣಗೊಳಿಸುವುದು. ಬಿಳಿನೊಣ ಬೆಂಗಳೂರುಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು, ಸೇರಿದಂತೆ ಸಮಗ್ರ ಕೀಟ/ಪೋಷಕಾಂಶಗಳ ನಿರ್ವಹಣೆಗೆ ತುಮಕೂರು ಜಿಲ್ಲೆ ಸೇರಿದಂತೆ ಪ್ರಮುಖ ತೆಂಗು ಬೆಳೆಯುವ ಜಿಲ್ಲೆಗಳಿಗೆ ರೂ. 791.05 ಕೋಟಿಗಳ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್, ಕಾಸರಗೋಡು ರವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ಶೈತ್ಯಾಗರ ಘಟಕಗಳ ನಿರ್ಮಿಸಲು ಉತ್ತೇಜನ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ತೋಟಗಾರಿಕಾ ಬೆಳೆಗಳು ಬೇಗನೆ ಹಾಳಾಗುವುದನ್ನು ತಪ್ಪಿಸಲು ಶೈತ್ಯಾಗಾರ ಘಟಕಗಳನ್ನು ನಿರ್ಮಿಸಲು ಉತ್ತೇಜನ ನೀಡಲಾಗುತ್ತಿದೆ. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ 11 ಶೈತ್ಯಾಗಾರ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಇಂದು ವಿಧನ ಪರಿಷತ್ತಿನ ಪ್ರಶ್ನೋತ್ರ ಕಲಾಪದ ವೇಳೆ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ತೋಟಗಾರಿಕೆ ಬೆಳೆಗಳು ಬೇಗನೆ ಹಾಳಾಗುವುದನ್ನು ತಡೆಯಲು ಶೈತ್ಯಾಗಾರ ಘಟಕಗಳನ್ನು ಹೆಚ್ಚಿಸಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಮಿಷನ್ ರಾಷ್ಟ್ರೀಯ ತೋಟಗಾರಿಕೆ ಯೋಜನೆಯಡಿ ರೈತರು/ಉದ್ದಿಮೆದಾರರು/ ರೈತ ಉತ್ಪಾದಕ ಸಂಸ್ಥೆಗಳಿಗೆ ಶೈತ್ಯಾಗಾರ/ಕೋಲ್ಡ್ ಸ್ಟೋರೆಜ್ ಘಟಕ ನಿರ್ಮಿಸಲು ಉತ್ತೇಜನ ನೀಡಲಾಗುತ್ತಿದೆ.
ಏಕ ಉತ್ಪನ್ನದ ಶೇಖರಣೆಗೆ (ಟೈಪ್-1) ನಿರ್ಮಿಸಲಾಗುವ ಶೀತಲಗೃಹದ ಘಟಕ ವೆಚ್ಚ ಪ್ರತಿ ಮೆಟ್ರಿಕ್ ಟನ್‍ಗೆ ರೂ. 9,600/- ಗಳಾಗಿದ್ದು, ಇದರಲ್ಲಿ ಶೇ.35 ರಷ್ಟು ಅಂದರೆ ಪ್ರತಿ ರೂ. 3,360/- ಸಹಾಯಧನ ನೀಡಲಾಗುವುದು. ಬಹು ಉತ್ಪನ್ನದ ಶೇಖರಣೆಗೆ (ಟೈಪ್ -2) ನಿರ್ಮಿಸಲಾಗುವ ಶೀತಲ ಗೃಹದ ಘಟಕ ವೆಚ್ಚ ಪ್ರತಿ ಮೆಟ್ರಿಕ್ ಟನ್ ಗೆ ರೂ.12,000/- ಗಳಾಗಿದ್ದು, ಇದರಲ್ಲಿ ಶೇ.35 ರಷ್ಟು ಅಂದರೆ ಪ್ರತಿ ಮೆಟ್ರಿಕ್ ಟನ್ ಗೆ ರೂ.4,200/- ಸಹಾಯಧನ ನೀಡಲಾಗುವುದು. ಕನಿಷ್ಠ 500 ಮೆಟ್ರಿಕ್ ಟನ್ ನಿಂದ ಗರಿಷ್ಠ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಶೈತ್ಯಾಗಾರ ನಿರ್ಮಿಸಬಹುದು. ಈ ವರ್ಷ 11 ಶೈತ್ಯಾಗಾರ ಘಟಕಗಳಿಗೆ ಅನುಮೋದನೆ ನೀಡಲಾಗಿದೆ.
ಪ್ರಸಕ್ತ ವರ್ಷದಲ್ಲಿ ಹನಿ ನೀರಾವರಿ ಸೌಲಭ್ಯ ಪಡೆದಿರುವ ಎಲ್ಲಾ ರೈತರಿಗೆ ಕೇಂದ್ರ ಪಾಲು ಹಾಗೂ ರಾಜ್ಯ ಕಡ್ಡಾಯ ಪಾಲಿನ ಅನುದಾನವನ್ನು ನೀಡಲಾಗಿದೆ. ಹೆಚ್ಚುವರಿ ರಾಜ್ಯ ಪಾಲಿನ (ಟಾಪ್ ಅಫ್) ಅನುದಾನವು ಬಿಡುಗಡೆಗೆ ಬಾಕಿ ಇದೆ. ಈ ಕುರಿತಂತೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
2024-25ನೇ ಸಾಲಿನಿಂದ ಹನಿ ನೀರಾವರಿ ಯೋಜನೆಯಡಿ 7 ವರ್ಷದ ನಂತರ ಅದೇ ಜಮೀನಿಗೆ ಸಹಾಯಧನವನ್ನು ಒದಗಿಸಲು ಅನುಮತಿಸಲಾಗಿದೆ. ಹೀಗಾಗಿ ಹೆಚ್ಚಿನ ರೈತರಿಂದ ಅರ್ಜಿಗಳು ಬಂದಿದ್ದು ಜೇಷ್ಠತಾ ಆಧಾರದ ಮೇಲೆ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಅಲ್ಲದೇ ಹೆಚ್ಚುವರಿಯಾಗಿ ರೂ 62.00 ಕೋಟಿ ಅನುದಾನವನ್ನು ತೋಟಗಾರಿಕೆ ಇಲಾಖೆಗೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಪ್ರತಿ ಹನಿಗೆ ಅಧಿಕ ಬೆಳ ಕಾರ್ಯಕ್ರಮದಡಿ 2024-25ನೇ ಸಾಲಿನವರೆಗೂ ಬಿಡುಗಡೆಗೆ ಬಾಕಿ ಇರುವ ರಾಜ್ಯ ಹೆಚ್ಚುವರಿ ಪಾಲಿನ ಅನುದಾನ ರೂ.9729.55 ಲಕ್ಷಗಳು ಹಾಗೂ 2025-26ನೇ ಸಾಲಿನ ಮೊದಲನೇ ಮತ್ತು ಎರಡನೇ ಕಂತಿನಲ್ಲಿ ತೋಟಗಾರಿಕೆ ಇಲಾಖೆಗೆ ಹಂಚಿಕೆಯಾದ ಮೊತ್ತಕ್ಕನುಗುಣವಾಗಿ ಬಿಡುಗಡೆಯಾಗಬೇಕಾಗಿರುವ ರಾಜ್ಯ ಹೆಚ್ಚುವರಿ ಪಾಲಿನ (ಟಾಪ್‍ಅಫ್ 35%) ಅನುದಾನ ರೂ. 16321.00 ಲಕ್ಷಗಳು ಸೇರಿದಂತೆ ಒಟ್ಟಾರೆ ರೂ.26050.00 ಲಕ್ಷಗಳನ್ನು ಪಿಎಂ-ಆರ್‍ಕೆವಿವೈ-ಪಿಡಿಎಂಸಿ ಯೋಜನೆಯಡಿ ಹೆಚ್ಚುವರಿಯಾಗಿ ಒದಗಿಸಿ ಬಿಡುಗಡೆಗೊಳಿಸಬೇಕಾಗಿರುತ್ತದೆ. ಸದರಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಿ ಬಿಡುಗಡೆಗೊಳಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ : ಪರಿಹಾರಕ್ಕೆ ಅಗತ್ಯ ಕ್ರಮ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಎಲೆ ಚುಕ್ಕಿ ಕೀಟ ಭಾದೆ ಎದುರಾಗಿದ್ದು, ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಇಂದು ವಿಧನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್. ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ಅಡಿಕೆ ಬೆಳೆಯ ಎಲೆ ಚುಕ್ಕಿ ರೋಗ ನಿಯಂತ್ರಿಸಲು ತೋಟಗಾರಿಕೆ ಇಳಾಖೆಯಿಂದ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
2025-26 ನೇ ಸಾಲಿನಲ್ಲಿ ಎಂಡಿ.ಎಚ್. ಮಾರ್ಗಸೂಚಿಯನ್ವಯ ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯ “ಸ್ಪೆಷಲ್ ಇನ್‍ವೆನ್‍ಷನ್ಸ್” ಕಾರ್ಯಕ್ರಮದಡಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗದ ನಿಯಂತ್ರಣ ಕಾರ್ಯಕ್ರಮದಡಿ ಸಮಗ್ರ ರೋಗ / ಕೀಟಗಳ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರಿಗೆ ತಗಲುವ ರೂ 5000/- ಗಳಲ್ಲಿ ಶೇ.30 ರಂತೆ ಪ್ರತಿ ಹೆಕ್ಟೇರಿಗೆ ರೂ. 1500/- ದರದಲ್ಲಿ 2 ಹೆಕ್ಟೇರ್ ರವರೆಗೆ ರೂ. 3000/- ಗಳ ಸಹಾಯಧನ ನೀಡಲಾಗುತ್ತಿದೆ. ಈ ಬಾಬ್ತು ರೂ. 860.65 ಲಕ್ಷಗಳ ಅನುದಾನ ನಿಗದಿಯಾಗಿದೆ. ಈವರೆಗೂ 14115 ರೈತರಿಗೆ ರೂ. 452.61 ಲಕ್ಷಗಳ ಸಹಾಯಧನ ನೀಡಲಾಗಿರುತ್ತದೆ. ಕಾರ್ಯಕ್ರಮ ಪ್ರಗತಿಯಲ್ಲಿರುತ್ತದೆ.
ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಬೆಳೆವಿಮೆ ಯೋಜನೆಯಡಿ ಆಧಾರಿತ ಅಡಿಕೆ ಬೆಳೆಯು ಅಧಿಸೂಚಿತವಾಗಿದ್ದು, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮಾ ಪರಿಹಾರವನ್ನು ಒದಗಿಸಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ಹಾಗೂ ಕೊಳೆ ರೋಗಗಳ ಕ್ರಮಗಳ ಅಳವಡಿಕೆ (ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು), ಸಸ್ಯ ಸಂರಕ್ಷಣಾ ಕ್ರಮಗಳು ಹಾಗೂ ಪೋಷಕಾಂಶಗಳ ಸಮಗ್ರ ನಿರ್ವಹಣೆಗೆ ಸಹಾಯಧನಕ್ಕಾಗಿ ಒಟ್ಟಾರೆ ರೂ. 57776.33 ಲಕ್ಷಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಎಂಡಿ.ಎಚ್ ಮಾರ್ಗಸೂಚಿಯನ್ವಯ ಶೇಕಡ 30 ರಷ್ಟು ಸಹಾಯಧನದಂತೆ ಒಟ್ಟು ರೂ. 17332.90 ಲಕ್ಷಗಳನ್ನು (ಕೇಂದ್ರ ಪಾಲು ರೂ. 10399.74 ಲಕ್ಷಗಳು ಹಾಗೂ ರಾಜ್ಯ ಪಾಲು ರೂ.6933.14 ಲಕ್ಷಗಳು) ಕೋರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಕೈಪಿಡಿ, ಕರಪತ್ರಗಳು ಮತ್ತಿತರೆ ಸಮೂಹ ಮಾಧ್ಯಮಗಳ ಮೂಲಕ ಅಡಿಕೆ ತೋಟಗಳ ಪೆÇೀಷಕಾಂಶ ನಿರ್ವಹಣೆ, ಬಸಿ ಕಾಲುವೆಗಳನ್ನು ಮಾಡುವುದು, ಹಸಿರೆಲೆ ಗೊಬ್ಬರದ ಬಳಕೆ ಹಾಗೂ ರಸ ಗೊಬ್ಬರಗಳ ಪೂರೈಕೆಗಳ ಕುರಿತು ಕೈಪಿಡಿ, ಕರಪತ್ರಗಳು ಮತ್ತಿತರ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಹಾಗೂ ತರಬೇತಿ / ಕಾರ್ಯಾಗಾರಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಜಾರಿಗೊಳಿಸಲಾಗುವುದು – ಜವಳಿ ಸಚಿವ ಶಿವಾನಂದ ಎಸ್. ಪಾಟೀಲಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ 2025-30 ನ್ನು ಜಾರಿಗೊಳಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಜವಳಿ ಕ್ಷೇತ್ರವನ್ನು ಉತ್ತೇಜಿಸಲು ಹೊಸ ನೀತಿಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು 2024-29ರ ಅವಧಿಗೆ 10,000 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.
2024-25ನೇ ಸಾಲಿನ ಆಯವ್ಯಯ ಕಂಡಿಕೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ದಿನಾಂಕ:15.04.2024 ರನ್ವಯ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ
ನೂತನ ಜವಳಿ ನೀತಿಯನ್ನು ಅನುμÁ್ಠನಗೊಳಿಸಲು ಉನ್ನತಮಟ್ಟದ ತಜ್ಞರ ಸಮಿತಿಯು ದಿನಾಂಕ: 01.08.2024 ರಂದು ಸಭೆ ಸೇರಿ ಹೊಸ ಜವಳಿ ನೀತಿ ತಯಾರಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಿದ್ದು ಅದರನ್ವಯ, ಕರಡು ಜವಳಿ ನೀತಿ ತಯಾರಿಸಲು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರನ್ನು ನೇಮಕ ಮಾಡಲಾಗಿರುತ್ತದೆ ಕರಡು ನೀತಿಯನ್ನು ಸಿದ್ಧಪಡಿಸಲು ಅಗತ್ಯ ಕ್ರಮವಹಿಸಲಾಗಿರುತ್ತದೆ.
ಕರಡು ಹೊಸ ಜವಳು ಪಾಲಿಸಿ ಕೈಗೊಳ್ಳಲು ಸಲಹೆಗಾರರೊಬ್ಬರನ್ನು ನೇಮಿಸಲು ಪ್ರೊಕ್ಯೂರ್‍ಮೆಂಟ್ ಟೆಂಡರ್‍ನ್ನು ಆಹ್ವಾನಿಸಲಾಗಿರುತ್ತದೆ.
ಸಲಹೆಗಾರನ್ನಾಗಿ ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರನ್ನು ಆಯ್ಕೆ ಮಾಡಿ ದಿನಾಂಕ:19.10.2024 ರಂದು ಲೆಟರ್ ಆಪ್ ಅವಾರ್ಡ್ ನೀಡಲಾಗಿರುತ್ತದೆ.
ದಿನಾಂಕ:21.02.2025 ರಂದು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರು ಕರಡು ಜವಳಿ ನೀತಿ ಪ್ರತಿಯನ್ನು ಇ-ಮೇಲ್ ಮುಖಾಂತರ ಸಲ್ಲಿಸಿರುತ್ತಾರೆ.
ದಿನಾಂಕ:24.02.2025 ಹಾಗೂ ದಿನಾಂಕ:27.02.2025 ರಂದು ಅಪರ ನಿರ್ದೇಶಕರು ಹಾಗೂ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಇವರ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಅಗತ್ಯ ಸಲಹೆ ಮತ್ತು ಬದಲಾವಣೆ ಮಾಡಲು ಸೂಚಿಸಲಾಗಿರುತ್ತದೆ.
ಅದರನ್ವಯ, ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರು ದಿನಾಂಕ:06.03.2025 ಮತ್ತು ದಿನಾಂಕ:17.03.2025 ರಂದು ಬದಲಾವಣೆ ಹಾಗೂ ಸಲಹೆಗಳನ್ನು ಅಳವಡಿಸಿ ಇ-ಮೇಲ್ ಮುಖಾಂತರ ಸಲ್ಲಿಸಿರುತ್ತಾರೆ. ಮತ್ತೊಮ್ಮೆ ಪರಿಶೀಲಿಸಿದ್ದು ಬದಲಾವಣೆಗಳನ್ನು ಅಳವಡಿಸಿ ದಿನಾಂಕ:25.04.2025 ರಂದು ಪರಿಷ್ಕøತ ಕರಡು ಜವಳಿ ನೀತಿಯನ್ನು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರು ಸಲ್ಲಿಸಿರುತ್ತಾರೆ. ಸದರಿ ಕರಡು ಜವಳಿ ನೀತಿಯನ್ನು ಅನುಮೋದನೆಗಾಗಿ ದಿನಾಂಕ:13.05.2025 ರಂದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.
ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್, ಅವರು ಜವಳಿ ನೀತಿಯನ್ನು ರೂಪಿಸಲು ಅಗತ್ಯ ಸಲಹೆಗಳನ್ನು ಪಡೆಯುವ ಸಲುವಾಗಿ ವಲಯಮಟ್ಟದ ಸ್ಟೇಕ್ ಹೋಲ್ಡರ್ಸ್ ಸಭೆಯನ್ನು ದಿನಾಂಕ:20.11.2024 ರಂದು ದಕ್ಷಿಣ ವಲಯ ಮತ್ತು ಪೂರ್ವ ವಲಯ ಉದ್ದಿಮೆದಾರರೊಂದಿಗೆ ಬೆಂಗಳೂರಿನಲ್ಲಿ ಹಾಗೂ ದಿನಾಂಕ:22.11.2024 ರಂದು ಪಶ್ಚಿಮ ವಲಯ ಮತ್ತು ಉತ್ತರ ವಲಯ ಉದ್ಧಿಮೆದಾರರೊಂದಿಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುತ್ತಾರೆ.
ದಿನಾಂಕ:03.01.2025 ರಂದು ಸರ್ಕಾರದ ಕಾರ್ಯದರ್ಶಿ (ಎಂ.ಎಸ್.ಎಂ.ಇ & ಗಣಿ), ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ ರವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಉದ್ಯಮದಾರರೊಂದಿಗೆ ಸ್ಟೇಕ್ ಹೋಲ್ಡರ್ಸ್ ಸಭೆಯನ್ನು ಆಯೋಜಿಸಲಾಗಿರುತ್ತದೆ.
ಸದರಿ ಸಭೆಗಳಲ್ಲಿ ಅನೇಕ ನೇಕಾರರು/ಉದ್ದಿಮೆದಾರರು ಭಾಗವಹಿಸಿದ್ದು, ಉತ್ತಮ ಸಲಹೆ/ಸೂಚನೆಗಳನ್ನು ನೀಡಿದ್ದು ಅವುಗಳನ್ನು ಕರಡು ಜವಳಿ ನೀತಿಯಲ್ಲಿ ಅಳವಡಿಸಿ, ಜವಳಿ ಕ್ಷೇತ್ರ ಹಾಗೂ ನೇಕಾರಿಕೆ ಅಭಿವೃದ್ಧಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು, ಉದ್ಯಮಿ ಸ್ನೇಹಿ ಕರಡು ನೂತನ ಜವಳಿ ನೀತಿ 2025-30 ಅನ್ನು ದಿನಾಂಕ:21.02.2025 ರಂದು ಸಿದ್ಧಪಡಿಸಿ ಸಲ್ಲಿಸಿರುತ್ತಾರೆ.
ದಿನಾಂಕ:24.02.2025 ಹಾಗೂ ದಿನಾಂಕ:27.02.2025 ರಂದು ಅಪರ ನಿರ್ದೇಶಕರು ಹಾಗೂ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಇವರ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಅಗತ್ಯ ಸಲಹೆ ಮತ್ತು ಬದಲಾವಣೆ ಮಾಡಲು ಸೂಚಿಸಲಾಗಿರುತ್ತದೆ.
ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ಅಳವಡಿಸಿ, ದಿನಾಂಕ:06.03.2025 ರಂದು ಕರಡು ನೂತನ ಜವಳಿ ಮತ್ತು ಸಿದ್ದ ಉಡುವು ನೀತಿ 2025-30 ನ್ನು ಸಲ್ಲಿಸಿರುತ್ತಾರೆ. ಜವಳಿ ಆಯುಕ್ತರು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರೊಂದಿಗೆ ಚರ್ಚಿಸಿ ಕಲವು ಅಂಶಗಳನ್ನು ಅಳವಡಿಸುವಂತೆ ಸೂಚಿಸಿರುತ್ತಾರೆ.
ಅದರಂತೆ, ಸದರಿ ಸಂಸ್ಥೆಯವರು ಸೂಚಿಸಲಾಗಿರುವ ಅಂಶಗಳನ್ನು ಅಳವಡಿಸಿ. ದಿನಾಂಕ:25.04.2025 ರಂದು ಕರಡು ನೂತನ ಜವಳಿ ಮತ್ತು ಸಿದ್ಧ ಉಡುವು ನೀತಿ 2025-30ನ್ನು ಸಲ್ಲಿಸಿರುತ್ತಾರೆ. ದಿನಾಂಕ:31.05.2025, ದಿನಾಂಕ:21.06.2025 ಹಾಗೂ ದಿನಾಂಕ:04.07.2025 ರಂದು ಸರ್ಕಾರದ ಕಾರ್ಯದರ್ಶಿ (ಎಂ.ಎಸ್.ಎಂ.ಇ & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ರವರು ಕರಡು ನೂತನ ಜವಳಿ ಮತ್ತು ಸಿದ್ಧ ಉಡುವು ನೀತಿ 2025-30ನ್ನು ಪರಿಶೀಲಿಸಿದ್ದು, ಕೆಲವು ಅಂಶಗಳನ್ನು ಅಳವಡಿಸುವಂತೆ ಸೂಚಿಸಿರುತ್ತಾರೆ.
ಅದರಂತೆ, ಸದರಿ ಸಂಸ್ಥೆಯವರು ಸೂಚಿಸಲಾಗಿರುವ ಅಂಶಗಳನ್ನು ಅಳವಡಿಸಿ ಜವಳಿ ಮತ್ತು ಸಿದ್ದ ಉಡುವು ನೀತಿ 2025-30ನ್ನು ಸಲ್ಲಿಸಿರುತ್ತಾರೆ.
ಸಿದ್ದಪಡಿಸಿದ ಕರಡು ನೂತನ ಜವಳಿ ನೀತಿ 2025-30ನ್ನು ದಿನಾಂಕ: 31-07-2025, ದಿನಾಂಕ: 12-09-2025 ಹಾಗೂ ದಿನಾಂಕ: 19-01-2026 ರಂದು ಮಾನ್ಯ ಜವಳಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಂಡಿಸಲಾಗಿದ್ದು ಜವಳಿ ಕ್ಷೇತ್ರದ ಉದ್ದಿಮೆದಾರರರು, ನೇಕಾರರು ಹಾಗೂ ನೇಕಾರರ ಸಾಂದ್ರತೆಯಿರುವ ಪ್ರದೇಶದ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದುಕೊಂಡು ಕರಡು ನೂತನ ಜವಳಿ ಮತ್ತು ಸಿದ್ದ ಉಡುವು ನೀತಿ 2026-31ನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನುμÁ್ಠನಗೊಳಿಸಲಾಗುವುದು ಎಂದು ತಿಳಿಸಿದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶ – 2025ಕ್ಕೆ ರೂ 100.69 ಕೋಟಿ ವೆಚ್ಚ – ಸಚಿವ ಎಂಬಿ ಪಾಟೀಲ್ ಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ) :
ಇನ್ವೆಸ್ಟ್ ಕರ್ನಾಟಕ-2025 ಸಮಾವೇಶಕ್ಕಾಗಿ ಒಟ್ಟು ರೂ. 100.69 ಕೋಟಿ ವೆಚ್ಚವಾಗಿರುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯೆ ಡಾ. ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಇನ್ವೆಸ್ಟ್ ಕರ್ನಾಟಕ-2022 ಸಮಾವೇಶಕ್ಕಾಗಿ ಒಟ್ಟು ರೂ. 74.99 ಕೋಟಿ ವೆಚ್ಚವಾಗಿರುತ್ತದೆ. ಇನ್ವೆಸ್ಟ್ ಕರ್ನಾಟಕ-2025 ರ ಸಮಾವೇಶದಲ್ಲಿ ಸರ್ಕಾರವು 98 ಕಂಪನಿಗಳೊಂದಿಗೆ ಒಟ್ಟು ರೂ.6,23,970/- ಕೋಟಿ ಬಂಡವಾಳ ಹೂಡಲು ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ ಎಂದು ತಿಳಿಸಿದರು.
ಬಂಡವಾಳ ಹೂಡುವ ಕಂಪನಿಗಳಿಗೆ ಕೈಗಾರಿಕಾ ನೀತಿ 2025-30, ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27 ಹಾಗೂ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ರನ್ವಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಲು ಹಾಗೂ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸಲು ಏಕ ಗವಾಕ್ಷಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಹಾಗೂ ಇತರ ಸಂಬಂಧಿಸಿದ ಇಲಾಖೆಗಳ ಸೇವೆಗಳನ್ನು ಸಂಯೋಜಿಸಲಾಗಿದೆ. ಹೊಸ ಏಕ ಗವಾಕ್ಷಿ ವ್ಯವಸ್ಥೆಯು ರಾಜ್ಯದಲ್ಲಿ ಹೂಡಿಕೆಗಳನ್ನು ಸುಗಮಗೊಳಿಸಲು ಮತ್ತು ತ್ವರಿತಗೊಳಿಸಲು ವ್ಯವಸ್ಥಿತ ಮತ್ತು ಡಿಜಿಟಲ್ ಪ್ರಥಮ ವಿಧಾನ ಒದಗಿಸಿದೆ ಮತ್ತು ಎಲ್ಲಾ ಕೈಗಾರಿಕೆ ಚಟುವಟಿಕೆ ಸಂಬಂಧಿತ ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಂದೇ ಕಡೆ ಎಲ್ಲಾ ಅನುಮೋದನೆಗಳು/ಮಂಜೂರಾತಿ/ನಿರಾಕ್ಷೇಪಣೆಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಒಡಂಬಡಿಕೆಗಳಿಗೆ ಸಹಿ ಮಾಡಲಾದ ಕಂಪನಿಗಳಿಂದ ಸುಮಾರು 2,20,051 ಜನರಿಗೆ ಉದ್ಯೋಗ ನಿರೀಕ್ಷಿಸಲಾಗಿದೆ.
ಈ ಹಿಂದೆ ನಡೆದಂತಹ 'ಇನ್ವೆಸ್ಟ್ ಕರ್ನಾಟಕ-2022 ರ 5 ಸಮಾವೇಶದಲ್ಲಿ ಉದ್ಯಮ ಪ್ರಾರಂಭಿಸಲು 57 ಕಂಪನಿಗಳೊಂದಿಗೆ ಒಟ್ಟು ರೂ 5,41,369 ಕೋಟಿ ಬಂಡವಾಳ ಹೂಡಲು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಈ ಪೈಕಿ 20 ಯೋಜನೆಗಳಿಗೆ – ರಾಜ್ಯಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ / ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಅನುಮೋದನ ನೀಡಲಾಗಿದೆ. ಇವುಗಳಿಂದ ರೂ.2,01,167/- ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಹಾಗೂ 70,740 ಉದ್ಯೋಗ ಸೃಜನೆಯಾಗಲಿದೆ.
ಇವುಗಳಲ್ಲಿ 2 ಅನುμÁ್ಠನಗೊಂಡಿದ್ದು, ರೂ.4,093/- ಕೋಟಿ ಬಂಡವಾಳ ಹೂಡಿಕೆಯಾಗಿದೆ ಮತ್ತು 1,415 ಉದ್ಯೋಗ ಸೃಜನೆಯಾಗಿದೆ. ಬಾಕಿ ಯೋಜನೆಗಳು ಅನುμÁ್ಠನದ ಹಂತದಲ್ಲಿರುತ್ತವೆ. ಇವುಗಳೆಲ್ಲಾ ಬೃಹತ್ ಯೋಜನೆಗಳಾಗಿರುವುದರಿಂದ ಅನುμÁ್ಠನಕ್ಕೆ ಕನಿಷ್ಠ 3 ರಿಂದ 5 ವರ್ಷಗಳು ಬೇಕಾಗುತ್ತದೆ.
ಫೆಬ್ರವರಿ 2025 ರಂದು ಜರುಗಿದ ಜಾಗತಿಕ ಬಂಡವಾಳ = ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಗೆ, ಮೆ. ಜೆಎಸ್‍ಡಬ್ಲ್ಯೂ ಗ್ರೀನ್ ಫೀಲ್ಡ್ ಪೋರ್ಟ್ - ಖೇಣಿಯಲ್ಲಿ ಬಂದರು ಸ್ಥಾಪಿಸಲು ಘೋಷಣೆ ಮಾಡಿರುತ್ತದೆ. ಈ ಯೋಜನೆಗೆ ಸುಮಾರು ರೂ.4,453/- ಕೋಟಿ ಬಂಡವಾಳ ಹೂಡಲಿದ್ದು ಅಂದಾಜು 460 ಎಕರೆ ಭೂಮಿಯ ಅಗತ್ಯವಿರುತ್ತದೆ. ಈ ಭೂಮಿಯು ಲಭ್ಯವಿದ್ದಲ್ಲಿ ಕೆ.ಐ.ಎ.ಡಿ.ಬಿ ಯಿಂದ ನಿಯಮಾನುಸಾರ ಸ್ವಾಧೀನಪಡಿಸಲಾಗುತ್ತದೆ.
ಮಂಡಳಿಯಿಂದ ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲ್ಲೂಕು, ಬಲಕುಂದಿ ಗ್ರಾಮದಲ್ಲಿ 94.03 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿದ್ದು ನಿವೇಶನಗಳು ಹಂಚಿಕೆಗೆ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪಿಸಲು ಖಾಸಗಿ ಕಂಪನಿಗಳು ಮುಂದೆ ಬಂದಲ್ಲಿ, ಅಂತಹ ಯೋಜನೆಗಳಿಗೆ ಭೂಮಿಯನ್ನು ನಿಯಮಾನುಸಾರ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕಲಿಕೆಯಿಂದ ಗಳಿಕೆಗೆ ಸೇತುವೆ ನಿರ್ಮಿಸಬೇಕು: ಮುಕ್ತ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ಸಲಹೆ
ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ ಉದ್ಘಾಟನೆ
ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ):
ಅಭಿವೃದ್ಧಿ ಹೊಂದಿದ ಭಾರತವು ಪದವಿಗಳ ಸಂಖ್ಯೆಯಿಂದ ಮಾತ್ರವಲ್ಲ, ಕೌಶಲ್ಯ, ನಾವೀನ್ಯತೆ ಮತ್ತು ಉದ್ಯಮಶೀಲತೆಯಿಂದ ನಿರ್ಮಿಸಲ್ಪಡುತ್ತದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ವತಿಯಿಂದ "ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮುಕ್ತ ಮತ್ತು ದೂರಶಿಕ್ಷಣ: ಮುಕ್ತ ವಿಶ್ವವಿದ್ಯಾಲಯ ವಿಧಾನ" ವಿಷಯ ಕುರಿತ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳ ಸಮ್ಮೇಳನವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಇಂದಿನ ಯುಗವು ಜ್ಞಾನದ ಜೊತೆಗೆ ಕೌಶಲ್ಯಗಳ ಯುಗವಾಗಿದೆ. ಮುಕ್ತ ವಿಶ್ವವಿದ್ಯಾಲಯಗಳ ದೃಷ್ಟಿಕೋನವು ಸ್ಪಷ್ಟವಾಗಿರಬೇಕು: ಕಲಿಕೆಯಿಂದ ಗಳಿಕೆಗೆ ಸೇತುವೆಯನ್ನು ನಿರ್ಮಿಸುವುದು. ಕೌಶಲ್ಯ ಆಧಾರಿತ ಕೋರ್ಸ್‍ಗಳು, ಉದ್ಯಮ-ಜೋಡಿತ ಪ್ರಮಾಣೀಕರಣಗಳು, ಸೂಕ್ಷ್ಮ-ರುಜುವಾತುಗಳು, ಅಪ್ರೆಂಟಿಸ್‍ಶಿಪ್‍ಗಳು ಮತ್ತು ಕ್ರೆಡಿಟ್ ಬ್ಯಾಂಕ್‍ಗಳಂತಹ ಉಪಕ್ರಮಗಳು ಯುವಕರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುತ್ತದೆ ಮತ್ತು ಸ್ವಾವಲಂಬಿ ಭಾರತವನ್ನು ಸಬಲಗೊಳಿಸುತ್ತದೆ ಎಂದರು.
ಪ್ರಸ್ತುತ ಭಾರತವು ಅಮೃತ ಕಾಲ (ಅಮೃತ ಯುಗ)ವನ್ನು ಪ್ರವೇಶಿಸಿದೆ, ಅಲ್ಲಿ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಬದ್ಧತೆಯು ಆರ್ಥಿಕ ಬೆಳವಣಿಗೆ, ಸಾಮಾಜಿಕ ಸೇರ್ಪಡೆ, ಜ್ಞಾನಾಧಾರಿತ ಅಭಿವೃದ್ಧಿ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಮುಕ್ತ ಮತ್ತು ದೂರಶಿಕ್ಷಣ, ಆನ್‍ಲೈನ್ ಶಿಕ್ಷಣ ಮತ್ತು ಮುಕ್ತ ವಿಶ್ವವಿದ್ಯಾಲಯಗಳು ಈ ಬದ್ಧತೆಯನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಶಿಕ್ಷಣವು ಯಾವುದೇ ರಾಷ್ಟ್ರದ ಆತ್ಮವಾಗಿದೆ. ಭಾರತದಂತಹ ವಿಶಾಲ, ವೈವಿಧ್ಯಮಯ ಮತ್ತು ಯುವ ದೇಶದಲ್ಲಿ, ಪ್ರವೇಶ, ಗುಣಮಟ್ಟ ಮತ್ತು ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳುವುದು ಏಕಕಾಲದಲ್ಲಿ ಗಮನಾರ್ಹ ಸವಾಲನ್ನು ಒಡ್ಡುತ್ತದೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗಳು, ಅವುಗಳ ಮಿತಿಗಳಿಂದಾಗಿ, ಪ್ರತಿಯೊಬ್ಬ ಇಚ್ಛಾಶಕ್ತಿಯುಳ್ಳ ಕಲಿಯುವವರನ್ನು ತಲುಪಲು ವಿಫಲವಾಗುತ್ತವೆ. ಈ ಸಂದರ್ಭದಲ್ಲಿ, ಮುಕ್ತ ಮತ್ತು ದೂರಶಿಕ್ಷಣ ಮತ್ತು ಆನ್‍ಲೈನ್ ಕಲಿಕೆಯು ಪ್ರಬಲ ಸಾಧನಗಳಾಗಿವೆ, ಅದು ಕಲಿಕೆಗೆ ಪ್ರಜಾಸತ್ತಾತ್ಮಕ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ, ಅಲ್ಲಿ ವಯಸ್ಸು, ಸ್ಥಳ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆ ಅಡೆತಡೆಗಳಾಗಿರುವುದಿಲ್ಲ ಎಂದು ಅವರು ತಿಳಿಸಿದರು.
ಭಾರತವು 18 ಮುಕ್ತ ವಿಶ್ವವಿದ್ಯಾಲಯಗಳಿಗೆ ನೆಲೆಯಾಗಿದೆ ಎಂಬುದು ಅಪಾರ ಹೆಮ್ಮೆಯ ವಿಷಯವಾಗಿದೆ, ಇದು ವಿಶ್ವದ ಅತಿದೊಡ್ಡ ಔಆಐ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಸಾಮೂಹಿಕ ಶಕ್ತಿಯು ಶಿಕ್ಷಣದ ಭವಿಷ್ಯವನ್ನು ಮರು ವ್ಯಾಖ್ಯಾನಿಸುವುದು, ಶಿಕ್ಷಣವನ್ನು ರಾಷ್ಟ್ರೀಯ ಆದ್ಯತೆಗಳೊಂದಿಗೆ ಜೋಡಿಸುವುದು ಮತ್ತು ಉದಯೋನ್ಮುಖ ಜಾಗತಿಕ ಮತ್ತು ತಾಂತ್ರಿಕ ಸವಾಲುಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವುದು ಎಂಬ ದೊಡ್ಡ ಜವಾಬ್ದಾರಿಯನ್ನು ಸಹ ತರುತ್ತದೆ. ಸಮ್ಮೇಳನದ ವಿಷಯವು ರಾಷ್ಟ್ರ ನಿರ್ಮಾಣದಲ್ಲಿ ಮುಕ್ತ ವಿಶ್ವವಿದ್ಯಾಲಯಗಳ ದೃಷ್ಟಿಕೋನವನ್ನು ಸೂಕ್ತವಾಗಿ ಒತ್ತಿಹೇಳುತ್ತದೆ. ಭಾರತ ಜ್ಞಾನಾಧಾರಿತ ಆರ್ಥಿಕತೆಯತ್ತ ಸಾಗುತ್ತಿದ್ದಂತೆ, ಮುಕ್ತ ವಿಶ್ವವಿದ್ಯಾಲಯಗಳು ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸುವುದನ್ನು ಮೀರಿ ನಾವೀನ್ಯತೆ-ಚಾಲಿತ, ಗುಣಮಟ್ಟ-ಕೇಂದ್ರಿತ ಮತ್ತು ಕಲಿಯುವವರ-ಕೇಂದ್ರಿತ ಸಂಸ್ಥೆಗಳಾಗಬೇಕು. ತಂತ್ರಜ್ಞಾನ-ಶಕ್ತಗೊಂಡ ಕಲಿಕೆ, ಕೃತಕ ಬುದ್ಧಿಮತ್ತೆ, ವರ್ಚುವಲ್ ಪ್ರಯೋಗಾಲಯಗಳು, ಡಿಜಿಟಲ್ ವಿಷಯ ಭಂಡಾರಗಳು ಮತ್ತು ಡೇಟಾ-ಚಾಲಿತ ಕಲಿಯುವವರ ಬೆಂಬಲ ವ್ಯವಸ್ಥೆಗಳು ಇನ್ನು ಮುಂದೆ ಆಯ್ಕೆಗಳಲ್ಲ, ಬದಲಿಗೆ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವು ಸಾಕಾರಗೊಳ್ಳುತ್ತದೆ. ಈ ವಿಚಾರದಲ್ಲಿ ವಿಶ್ವವಿದ್ಯಾನಿಲಯಗಳನ್ನು ಪ್ರಮುಖ ಕೊಡುಗೆ ನೀಡುತ್ತಿವೆ. ಡಿಜಿಟಲ್ ತಂತ್ರಜ್ಞಾನವು ಮುಕ್ತ ಮತ್ತು ದೂರ ಶಿಕ್ಷಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳು, ವರ್ಚುವಲ್ ಲ್ಯಾಬ್‍ಗಳು, ಕೃತಕ ಬುದ್ಧಿಮತ್ತೆ, ಕಲಿಕಾ ವಿಶ್ಲೇಷಣೆ ಮತ್ತು ಬಹುಭಾμÁ ವಿಷಯಗಳ ಮೂಲಕ ಗುಣಮಟ್ಟದ ಶಿಕ್ಷಣವು ಪ್ರತಿ ಮನೆಗೂ ತಲುಪುತ್ತಿದೆ. ಮುಕ್ತ ವಿಶ್ವವಿದ್ಯಾಲಯಗಳು ಕಲಿಕೆಯ ಅನುಭವವನ್ನು ಉತ್ಕøಷ್ಟಗೊಳಿಸಲು, ಪರಸ್ಪರ ಕ್ರಿಯೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಬೇಕು, ಮಾರ್ಗದರ್ಶನ ಮತ್ತು ವೈಯಕ್ತಿಕ ಮಾರ್ಗದರ್ಶನಕ್ಕೆ ಆದ್ಯತೆ ನೀಡಿ ಎಂದು ರಾಜ್ಯಪಾಲರು ಕರೆ ನೀಡಿದರು.
ಹೊಸ ಶಿಕ್ಷಣ ನೀತಿ 2020 ಶಿಕ್ಷಣವನ್ನು ನಮ್ಯ, ಅಂತರ್ಗತ ಮತ್ತು ಬಹುಶಿಸ್ತೀಯವಾಗಿಸಲು ಸ್ಪಷ್ಟ ಮಾರ್ಗಸೂಚಿಯನ್ನು ಒದಗಿಸುತ್ತದೆ. ಮುಕ್ತ ವಿಶ್ವವಿದ್ಯಾಲಯಗಳಿಗೆ ಇದು ಒಂದು ಐತಿಹಾಸಿಕ ಅವಕಾಶ. ಬಹು ಪ್ರವೇಶ ಮತ್ತು ಬಹು ನಿರ್ಗಮನ, ಶೈಕ್ಷಣಿಕ ಕ್ರೆಡಿಟ್ ಬ್ಯಾಂಕ್ ಮತ್ತು ಆಜೀವ ಕಲಿಕೆಯ ಪರಿಕಲ್ಪನೆಗಳು ಮುಕ್ತ ಮತ್ತು ದೂರ ಶಿಕ್ಷಣಕ್ಕೆ ಅಂತರ್ಗತವಾಗಿ ಸಂಬಂಧ ಹೊಂದಿವೆ. ಪಠ್ಯಕ್ರಮ, ಮೌಲ್ಯಮಾಪನ ಮತ್ತು ಶಿಕ್ಷಕರ ತರಬೇತಿಯಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಗುಣಮಟ್ಟವು ರಾಜಿಯಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಭಾರತೀಯ ಭಾμÉಗಳಲ್ಲಿ ಗುಣಮಟ್ಟದ ವಿಷಯದ ಅಭಿವೃದ್ಧಿಗೆ ನಾನು ಒತ್ತು ನೀಡಲು ಬಯಸುತ್ತೇನೆ. ಅಭಿವೃದ್ಧಿ ಹೊಂದಿದ ಭಾರತದ ಶಿಕ್ಷಣ ವ್ಯವಸ್ಥೆಯು ಅದರ ಬೇರುಗಳಲ್ಲಿ ಬೇರೂರಿರಬೇಕು, ಅಲ್ಲಿ ಭಾರತೀಯ ಜ್ಞಾನ ಸಂಪ್ರದಾಯಗಳು, ಸ್ಥಳೀಯ ಸಂದರ್ಭ ಮತ್ತು ಜಾಗತಿಕ ದೃಷ್ಟಿಕೋನದ ಸುಂದರ ಮಿಶ್ರಣವಿದೆ. ಅನುವಾದ, ಸ್ಥಳೀಕರಣ ಮತ್ತು ಸಾಂಸ್ಕøತಿಕ ಸಂವೇದನೆಯ ಮೂಲಕ ಶಿಕ್ಷಣವನ್ನು ಪ್ರವೇಶಿಸುವಂತೆ ಮಾಡುವ ಮೂಲಕ ಮುಕ್ತ ವಿಶ್ವವಿದ್ಯಾಲಯಗಳು ಈ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತಕ್ಕೆ ಸೇರ್ಪಡೆಯೇ ಪ್ರಮುಖ ಅಂಶ. ಮುಕ್ತ ಮತ್ತು ದೂರಶಿಕ್ಷಣದ ಮೂಲಕ ಮಹಿಳಾ ಶಿಕ್ಷಣ, ಅಂಗವಿಕಲರಿಗೆ ಸುಲಭವಾಗಿ ಶಿಕ್ಷಣ ನೀಡುವುದು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸಾಮಾಜಿಕ ನ್ಯಾಯದ ಕಡೆಗೆ ಕಾಂಕ್ರೀಟ್ ಹೆಜ್ಜೆಗಳಾಗಿವೆ. ಡಿಜಿಟಲ್ ಅಂತರವನ್ನು ನಿವಾರಿಸಲು ಹೈಬ್ರಿಡ್ ಮಾದರಿಗಳು, ಸಮುದಾಯ ಕಲಿಕಾ ಕೇಂದ್ರಗಳು ಮತ್ತು ಆಫ್‍ಲೈನ್ ಮತ್ತು ಆನ್‍ಲೈನ್ ಕಲಿಕೆಯ ಸಮತೋಲನ ಅತ್ಯಗತ್ಯ. ಕೈಗಾರಿಕೆ, ಸರ್ಕಾರ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ತ್ರಿಪಕ್ಷೀಯ ಸಹಯೋಗದ ಅಗತ್ಯವಾಗಿದೆ. ಮುಕ್ತ ವಿಶ್ವವಿದ್ಯಾಲಯಗಳು ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಮತ್ತು ಇಂಟರ್ನ್‍ಶಿಪ್ ಮತ್ತು ನಿಯೋಜನೆಗಳನ್ನು ಬಲಪಡಿಸಲು ಉದ್ಯಮದೊಂದಿಗೆ ಸಹಕರಿಸಿದರೆ, ಶಿಕ್ಷಣವು ರಾಷ್ಟ್ರೀಯ ಉತ್ಪಾದಕತೆಗೆ ನೇರವಾಗಿ ಸಂಬಂಧ ಹೊಂದಿರುತ್ತದೆ. ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ದಾರಿ - ಅಲ್ಲಿ ಶಿಕ್ಷಣವನ್ನು ನೀತಿಯಿಂದಲ್ಲ ಆದರೆ ಫಲಿತಾಂಶಗಳಿಂದ ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿ ಪ್ರೊಫೆಸರ್ ಗಣೇಶನ್ ಕಣ್ಣಬಿರನ್, ಕುಲಪತಿಗಳಾದ ಪ್ರೊಫೆಸರ್ ಶರಣಪ್ಪ ವಿ ಹಲಸೆ, ವಿವಿಧ ವಿಶ್ವವಿದ್ಯಾನಿಲಯದ ಕುಲಪತಿಗಳು, ಕರಾಮುವಿ ಪರವಾಗಿ ಕುಲಸಚಿವ ಪ್ರೊ. ಎಸ್.ಕೆ. ನವೀನ್‍ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ. ಆನಂದಕುಮಾರ್, ಅಧ್ಯಯನ ಕೇಂದ್ರದ ಡೀನ್ ಡಾ. ಎನ್.ಆರ್. ಚಂದ್ರೇಗೌಡ, ಶೈಕ್ಷಣಿಕ ಡೀನ್ ಪ್ರೊ. ರಮಾನಾಥಂನಾಯ್ಡು, ಹಣಕಾಸು ಅಧಿಕಾರಿ ಪ್ರೊ. ಎಸ್. ನಿರಂಜನ್ ರಾಜ್, ಪ್ರೊ. ಸಿ. ಮಹದೇವಮೂರ್ತಿ, ಡಾ. ಡಿ.ಎಂ. ಮಹೇಶ್, ಡಾ. ಎನ್.ಜಿ. ರಾಜು, ಡಾ. ಎಂ.ಎಸ್. ರಮಾನಂದ, ಡಾ. ಶಂಕರನಾರಾಣಪ್ಪ, ಡಾ. ಸಿ.ಎಸ್. ಮಂಜುನಾಥ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಹೆಚ್.ಐ.ವಿ/ಏಡ್ಸ್ ಸೊಂಕಿತ/ಭಾದಿತರು ಓಂಬಡ್ಸ್‍ಮನ್ ರವರೊಂದಿಗೆ ನೇರವಾಗಿ ಸಂವಾದ
ದೂರವಾಣಿಗೆ ಕರೆ ಮಾಡಿ ದೂರು ದಾಖಲಿಸಿ ಪರಿಹಾರ ಕಂಡುಕಂಡುಕೊಳ್ಳಿಬೆಂಗಳೂರು, ಜನವರಿ 27, (ಕರ್ನಾಟಕ ವಾರ್ತೆ):
ಹೆಚ್.ಐ.ವಿ/ಏಡ್ಸ್ ಸೊಂಕಿತ/ಭಾದಿತರು ಓಂಬಡ್ಸ್‍ಮನ್ ರವರೊಂದಿಗೆ ನೇರವಾಗಿ ಸಂವಾದ ನಡೆಸಲು 2026ನೇ ಜನವರಿ 29 ರ ಗುರುವಾರ ಬೆಳಿಗ್ಗೆ 10.00 ಗಂಟೆಯಿಂದ 02.00 ಗಂಟೆವರೆಗೆ ಮತ್ತು 03.00 ಗಂಟೆಯಿಂದ 05.00 ಗಂಟೆಯ ವರೆಗೆ ನೇರ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್.ಐ.ವಿ ಭಾದಿತ/ ಸೊಂಕಿತರು ಕರೆ ಮಾಡಿ ಅವರ ದೂರು ದುಮ್ಮಾನಗಳ ಬಗ್ಗೆ ನೇರವಾಗಿ ಓಂಬಡ್ಸ್‍ಮನ್ ರವರೊಂದಿಗೆ ಸಂವಾದ ಮಾಡಲು ಇದೊಂದು ಸುವರ್ಣ ಅವಕಾಶ ಕಲ್ಪಿಸಲಾಗಿದ್ದು, ಬಾದಿತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು.
ಹೆಚ್.ಐ.ವಿ/ಏಡ್ಸ್ ಸೊಂಕಿತರು ಮತ್ತು ಭಾದಿತರು, ಸರ್ಕಾರಿ /ಖಾಸಗಿ ಕಚೇರಿ ಮತ್ತು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದೇ ಇರುವವರು, ತಮ್ಮ ಮನೆಯಲ್ಲಿ/ ನೆರೆಹೊರೆಯವರಿಂದ ತಾರತಮ್ಯಕ್ಕೆ ಒಳಗಾದವರು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ವಿಧ್ಯಾರ್ಥಿಗಳು ಹಾಗೂ ತಾರತಮ್ಯಕ್ಕೆ ಒಳಗಾದ ಸಾರ್ವಜನಿಕರು ಸಂವಾದ ನಡೆಸಲು ದೂರವಾಣಿ ಸಂಖ್ಯೆ 080-23295442 ಅಥವಾ ಮೊಬೈಲ್ ದೂರವಾಣಿ ಸಂಖ್ಯೆ 9449846954 ಕರೆ ಮಾಡಿ ತಮ್ಮ ದೂರು ದಾಖಲಿಸಿ ನ್ಯಾಯ ಪಡೆಯಬಹುದು.
ಹೆಚ್.ಐ.ವಿ ಕಾಯ್ದೆ-2017 ರ ಪ್ರಕಾರ ಸಂವಾದಿತರ ಕರೆಗಳನ್ನು ಹಾಗೂ ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರವೇನ್ಷನ್ ಸೊಸೈಟಿಯ ಒಂಬುಡ್ಸ್ ಮನ್ ಶ್ರೀಮತಿ ಗಂಗೂಬಾಯಿ ರಮೇಶ ಮಾನಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಬೆಂಗಳೂರು ಭೇಟಿ ಬಗ್ಗೆ “ದಿ ಹಿಂದು” ಆಂಗ್ಲ ಪತ್ರಿಕೆಯಲ್ಲಿ ವರದಿ ಪ್ರಕಟ: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸ್ಪಷ್ಟನೆಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ):
ಜರ್ಮನ್ ದೇಶದ ಗೌರವಾನ್ವಿತ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರು 2026 ನೇ ಜನವರಿ 13 ರಂದು ಬೆಂಗಳೂರಿಗೆ ಸೌಜನ್ಯ ಭೇಟಿ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಭೇಟಿಗೆ ಅವಕಾಶ ಕಲ್ಪಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅವರಿಂದ 2026 ನೇ ಜನವರಿ 05 ರಂದು ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಯವರನ್ನು ಹಾಗೂ ನವದೆಹಲಿಯ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿನ ರಾಯಬಾರಿ ಕಚೇರಿ ಅಧಿಕಾರಿಗಳನ್ನು ಕೋರಲಾಗಿತ್ತು.
ಸರ್ಕಾರದ ಕಾರ್ಯದರ್ಶಿಗಳು 2026 ರ ಜನವರಿ 05 ರಂದು ಬರೆದಿರುವ ಪತ್ರಕ್ಕೆ ನವದೆಹಲಿಯ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿನ ರಾಯಭಾರಿ ಕಚೇರಿ ಅಧಿಕಾರಿಗಳು 2026 ರ ಜನವರಿ 08 ರ ಪತ್ರದಲ್ಲಿ ಗೌರವಾನ್ವಿತ ಚಾನ್ಸಲರ್ ಅವರು ಬೆಂಗಳೂರು ಭೇಟಿಯು ಕೇವಲ 3.5 ಗಂಟೆಗಳು ಮಾತ್ರ ಆಗಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳ ಭೇಟಿಗೆ ಸಮಯಾವಕಾಶದ ಕೊರತೆಯಾಗಿರುತ್ತದೆ ತಿಳಿಸಿರುತ್ತಾರೆ.
ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಮ್ಮ ಇ-ಮೇಲ್ ಸಂದೇಶದಲ್ಲಿ The Distinguished guests may be recieved and seen off by minister (Protocol) (name nominated by the chief minister)ಎಂದು ನಿರ್ದೇಶಿಸಿರುತ್ತದೆ.
ಅದರಂತೆ, ಮಾನ್ಯ ಮುಖ್ಯಮಂತ್ರಿ ಅವರು ಭಾರೀ ಮತ್ತು ಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಮತ್ತು ಅವರ ನಿಯೋಗವನ್ನು ಬರಮಾಡಿಕೊಳ್ಳಲು ಹಾಗೂ ಬೀಳ್ಕೊಡಲು ಉಪಸ್ಥಿತರಿರಬೇಕೆಂದು ಸಚಿವರನ್ನು ನೇಮಿಸಿ ಆದೇಶಿಸಿರುವಂತೆ ಮಾನ್ಯ ಸಚಿವರು, ಗೌರವಾನ್ವಿತ ಚಾನ್ಸಲರ್ ಅವರನ್ನು ಮುಖ್ಯಮಂತ್ರಿಗಳ ಪರವಾಗಿ ಬರಮಾಡಿಕೊಂಡು ಹಾಗೂ ಬೀಳ್ಕೊಟ್ಟಿರುತ್ತಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
No. 17, BHAGAWAN MAHAVEER ROAD,