DIPR NEWS - 24-10-2025

7 views
Skip to first unread message

PRESS NEWS

unread,
Oct 24, 2025, 7:56:35 AM (11 days ago) Oct 24
to Venkat Singh, Gurunath Kadabur, suddimool...@gmail.com, Sudhindra Nadig, Cheluva Raju, krushika mitra, Sudheendra Srirangaraju, srika...@rediffmail.com, Alaganchi Mahadevegowda Suresh, N B Hombal, Daily Salar, pan...@rediffmail.com, Kpn Desk, hameed...@rediffmail.com, PTI Bangalore, Vijay Kumar, Nagesh Polali, kalyani kulkarni, chidambar kulkarni, narendr...@rediffmail.com, Suresh Brm, rakesh prakash, Anil Kumar, asad.m...@timesgroup.com, sunil....@timesgroup.com, Kushala Satyanarayana, arunw...@gmail.com, krish...@gmail.com, Dibyangshu Sarkar, muke...@gmail.com, Soma Shekar, Hiriyannaiah T R, Raju kondaguli, Anantha Subramanyamk, Mysore Harish, ar...@ap.org, sanj...@gmail.com, gadekal nagaraja, ramu...@hotmail.com, a.vee...@gmail.com, Rajashekhar Sriramoju, nagp...@yahoo.com, Sharath Srivatsa, Bhaskar Hegde, edit...@yahoo.com, ne...@manipalmedia.com, samkar...@rediffmail.com, feed...@thatskannada.com, sahana maji, praj...@rediffmail.com, nanjund...@gmail.com, Anantharam Sanklapur, Umesha Koligere, Vishwanath Karnic, fakir...@gmail.com, Srusti Prabha, Srinivasa Prasad, ne...@manipalpress.com, feat...@manipalmedia.com, E sanje News, mrinf...@gmail.com, edi...@deccanherald.co.in, ma...@ndtv.com, sundhar...@yahoo.com, srajen...@hotmail.com, Doordarshan Chandananews, Shrumsha Gangadhar, pradeep kumar, sivana...@mm.co.in, United News of India - Bangalore UNI, hunasavadi srikanth, Jagadeesh Nv, Niranjan Kaggere, parmesh...@yahoo.co.in, Mahesh Kulkarni, A .SURESH, mkm...@gmail.com, M.A. Kulkarni, ne...@ndtv.com, rajuma...@gmail.com, suryanarayana apprameya, abdulh...@gmail.com, Jagadish Nagathan, shiva shankar, Mathrubhumi BL, Yamini P, Guru Prasad, Sunil Sirasangi, prasanna b k, Jaipal Sharma, amjad hussain, Bhuvanavarthe Kannada, Tulasirtk Rtk, Narasimha Raju, Saakshath Suddi, Suresh Bhat, Vaartha Bharathi B'lore, garudadwajacta, Pratap r dev, Shidlu Patrike Shidlu, MOHAMED YOUNUS, shyam s, coo...@maalaimalar.com, Gara Shrinivas, kolara...@yahoo.in, Harish dhandu.l, Pavan Hiremath, priyapathrike priya, Satish T M, Suddigiduga Dinapatrike, Srinivasa S, prasa...@gmail.com, suresh kumar, Vishwanat Bhagavat, ramesh gacchinamane, thinagaravelu kavidasan, DeccanHerald Prajavani, Anand Bakshi, suresha_...@rediffmail.com, Shankar S, voice jlr, sudarshan channangihalli, Anantha Krishnan M., Ramesh D K, Muthumani Nannan, Muthumani Nannan, vidhikarn...@gmail.com, Anil Basur, sanjes...@gmai.com, R.T.VITTAL Murthy, hgangad...@gmail.com, shrinivas Soorgond, ARVIND WALI, harish dasappa, T V links, pooja prasanna, Shamsheer Yousaf, yat...@prajavani.co.in, prathima mysore, Girish Babu, Balasubramanyam K.R., Nandini Chandrashekar, Kiran Haniyadka, pandu...@rediffmail.com, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani kannadigaru@yahoo.com, vaarthe@gmail.com, eemunjanedailykannada@yahoo.com, <kannadigaru@yahoo.com>,, gurulingaswamy_holimath@yahoo.com newsblr@vijayavani.in, cbaru6 <cbaru6@gmail.com>, chidanand patel <patel.risk@gmail.com>,, Rakesh Kombra <rakesh.km@abp.in>, <ininewsflash@gmail.com>,, Nudi Bharathi <nudibharathi@gmail.com>,, Rajasthan Patrika <blgrpatrika@gmail.com>,, -rajendra -naruka <rajendra.naruka@epatrika.com>,, samaj veer <samajveer@gmail.com>,, Manjunatha Babu <tcmbabu@gmail.com>,, rajaram k <rajaramsiliconcity@gmail.com>, <passgirish@gmail.com>,, M.M. Joshi <karnatakphotos@gmail.com>,, SM KHAN khan <4mtv21@gmail.com>,, sagayraj@gmail.com,, vaiga j <vaiga16@gmail.com>,, Varthabhavan Udupi <varthabhavanaudupi@gmail.com>,, RAJ KANNADA <inputrajnews@gmail.com>,, Sandeep Moudgal <sandeep.moudgal@gmail.com>,, The Hindu Invitations <invite.thehindu@gmail.com>,, Ashwini Ashwini <ashwinioorja@gmail.com>,, NGR NG Ramesh <ngr.ramesh213@gmail.com>,, Sheshdri Samaga <samaga.sheshadri@gmail.com>,, Raghavendra Bhat <rythmraghu@gmail.com>,, Abdul Razak <ajabdulrazak@gmail.com>,, aj_bng@yahoo.co.in <aj_bng@yahoo.co.in>,, afshan yasmeen <afshanyasmeen@gmail.com>,, anusha.ravi@timesgroup.com,, ravindrabhat@prajavani.co.in,, khajane@gmail.com,, Bageshree Subbanna <bageshree.subbanna@gmail.com>,, Information Department <varthasoudhabengaluru@gmail.com>,, vikhar.sayeed@thehindu.co.in,, Vikhar Ahmed Sayeed <vikhar.sayeed@gmail.com>,, Sampath Kumar <ycsampathkumar@gmail.com>,, Dr Mamatha Hegde <hegde2004mamatha@gmail.com>,, gpshetty74@yahoo.com,, Daraneesh Bookanakere <darani2287@gmail.com>,, srikanthswmy@yahoo.com,, ks somanna <kssomanna275@gmail.com>,, Ravikumar B.G. <bgrkum@gmail.com>,, Arvind Last <raichurvani@gmail.com>,, Shivanna Shivanna <nammashiva@gmail.com>,, GOPAL R <phalithamsha@gmail.com>,, Janardhan Jani <janabgjana8@gmail.com>,, Naheed Ataulla <naheed.ataulla@gmail.com>,, lingarajubnc@gmail.com, nekaaravani@gmail.com, Dakshin Bharat Rashtramat Daily <news@dakshinbharat.com>,, suresh pattan Suresh <pattansuresh@gmail.com>,, Raveesh Raveesha <raveeshahs@gmail.com>,, senthil nathan <senthu.news@gmail.com>,, Vilas Melagiri <vilasmelagiri@gmail.com>, bang08@yahoo.com, Jani janardhan bk <janardhanbk@gmail.com>,, basava raju <basawraju1956@gmail.com>,, Roshan Baig <ministerforiih@gmail.com>,, k s ksnagaraj <ksnagarajbgm@gmail.com>,, naveen ammembala <nammembala@gmail.com>,, pramoda shastri <pramodashastri@gmail.com>,, Shankar Pagoji <spagoji@gmail.com>,, basurani@gmail.com,, hemanth kumar <khemanth999@gmail.com>,, Manjunatha C <manjumdb@gmail.com>,, Sitaram Shasthri <sastryaloor@gmail.com>,, Shivashankar H.P <cineshiv@gmail.com>,, Arun bangalore ananthmurthy <arunroopa73@gmail.com>,, yasir.mushtaq@newsnation.in,, Alvin Mendonca <alvinm20@gmail.com>,, Azmathulla Shariff <azmathulla35@gmail.com>,, harihar times <hariharatimes@gmail.com>,, Ashok Shamanna <timesmobiletv@gmail.com>,, rajendra m S <merajendra@gmail.com>,, jaibheemagade.daily bangalore, Kolar MURALI, Suddimoola Raichur, Dineshamin Mattu, Ravinarayana Gunaje, Naveen Soorinje, prabhakar prabhakar, Ashwini YS, Vinay Madhava Gowda, Ahmed Khan, HARRY D'SOUZA, Maheswara Reddy, rajesh chatla, rajeshr...@prajavani.co.in, kp PUTTASWAMAIAH, diprv...@gmail.com, Dhyan Poonacha, mani ms, nisar hameed, kala bandhu, M Siddaraju, cdm siddu, Jadiyappa Gedlagatti, Jayaprakash Narayana, swamy swamy, davanagere...@gmail.com, varthaprabh...@gmail.com, Samyukta Karnataka, ayub khan, muniraj raju, Hariprakash Konemane, Vrl Daily, p18news...@nw18.com, inpu...@gmail.com, editorpu...@gmail.com, Vijay J R, Manohar Yadavatti, Manohar Yadavatti, Chandan K Gowda, Shivakumar S R, rajendra m S, Ramesh Hirejambur, Divyashree V R, mandyavartha, mandyaandolana andolanamandya, somu 9772, kannambadi kannambadi, monibt09 monibt09, Nudi Bharathi, SHIVA YOGI SK, sanje impu, shashi suddisangharsha, somu keragodu, star of mandya, U M Mahesh, Information Department, To: mandyavartha@googlegroups.com, newstoportal@gmail.com, abburprakash@gmail.com, mandyaandolana@gmail.com, somu9772@gmail.com, heggademandya@gmail.com, kannambadik@gmail.com, knravimandya@gmail.com, kolalu@rediffmail.com, mandyamaathu@yahoo.com, mandyatvlive@gmail.com, monibt09@gmail.com, moni_mdy@rediffmail.com, mp.sk@rediffmail.com, navisona@gmail.com, nudibharathi@gmail.com, pouravani@gmail.com, press.sk@gmail.com, ranakahalep@gmail.com, ravi_lalipalya@rediffmail.com, sanjeimpu@gmail.com, sanjesamachara.mdy@gmail.com, shashisuddisangharsha@gmail.com, kemmugilu@gmail.com, starofmandya@gmail.com, udayakala_mandya@yahoo.co.in, ummahesh@gmail.com, varthasoudhabengaluru@gmail.com, vkmandya@gmail.com, naikempi@gmail.com, voice@mysoorumithra.com, lingarajudl@gmail.com, balakrishnajm@gmail.com, shimshaprabha@gmail.com, mysorevar, Manjunath Public tv, Lingaraju Dl, balu krishna, shimshaprabha, hindubl...@thehindu.co.in, Murali T, TarakaRamu Pogiri, aall rounder, Ramesha Doddapura, lokmatn...@gmail.com, Keshava Murthy M, Nandidurga Balu, Jinu Kumar Jena, lingaraju d, Lingaraju D, edlben...@dinamalar.in, meena nagaraju, Dinakaran 2009, Shantha Kumar, pib bng, c...@ibcworldnews.com, Ramesh Yalagachina, Samaga Sheshadri, Naveen Menezes, gurunath...@thehindu.co.in, Shivakumar Menasinakai, Vishwanatha t h, Kishore Saggare, bevarah...@gmail.com, kuchangi prasanna, venkat...@gmail.com, surajut...@gmail.com, srika...@kannadaprabha.in, shreekanth gowdasandra, S.Narayanaswamy, Sheshu .M, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, Naveenkumar Kn, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, shashidhar singh, Bharathi Rcc, Dasharath Sawoor, mailto: kkarnataki@indiatimes.com, cksivanandan@journalist.com, mayas@ndtv.com, orientalnews@hotmail.com, vbbangalore@yahoo.co.in, akramhasan@yahoo.com, airbangalore@yahoo.com, bglphoto@thehindu.co.in, vskarnic@gmail.com, sundharreporter@yahoo.com, srajendran16@hotmail.com, bangalore.bias@gmail.com, janabandade@yahoo.co.in, sreejavn@aol.in, sreejavn@gmail.com, dt_bangalore@hotmail.com, manohar@namasthe.in, chandananews@gmail.com, shrumshagangaa@gmail.com, dnssbc_vijay@yahoo.com, eshanyatimes@yahoo.co.in, maapala@gmail.com, varthasoudhabengaluru@googlegroups.com, sivanandanck@mm.co.in, reporter202020@yahoo.co.in, vishukumarnr@gmail.com, unibangalore@gmail.com, uniblr@dataone.in, dinakaranblr@gmail.com, paramesh@asianetworld.tv, parmeshkerekeri@gmail.com, aleem.aleem2010@gmail.com, hunasavadisrikanth@gmail.com, srikanthhunasavadi@, Aleem M., PRESS NEWS, Manu Aiyappa, Haaiminchu Marvel, Sudhir Raina, beng...@youth4jobs.org, mu...@youthjobs.org, keerthi prasad, Manju C.R, Ravi Sisodia, ani...@rediffmail.com, Shantha Thammaiah, shrinath joshi, JEEVAN M, VARTHE JANAPADA, Suresha H L, DAMARUGA, Azmathulla Shariff, saral...@gmail.com, rudresha honnenahalli, Prakash C, Kumaran P, kuma...@timesgroup.com, Narayanan Venkatesan, prasad hegde, Gururaj Br, Sathya Shodha, in...@satyashodha.in, Prem Shekhar, Dhananjay Tk, Melbin Mathew, lakshmi...@suvarnanews.in, suj...@suvarnanews.in, Pressandnews Bangalore, Padmanabha Rao, Prasanna Kumar S, udayakala...@gmail.com, udayakala daily, karnatak...@gmail.com, kerekeriveerappa parmesh, Poornima Ravi, Srikanth Bhat, ಸಪ್ತಸ್ವರ TV, vino...@hindutamil.co.in, Ra Vinoth, Shivanand Tagadur, udaya...@gmail.com, T.K.MALAGOND EDITOR IN CHIEF, Vasudevrao Desai, SAMPATH KUMAR Y C, samayami...@gmail.com, kannada...@gmail.com, Supreetha Hebbar, kannada Kannada, smitha R, lankeshpat...@gmail.com, indiannewsa...@gmail.com, kiran k.n Kiran, mahanthesh kumar, rnu...@gmail.com, manjunath n, mohamed...@gmail.com, Venu Krishna, Ranjith H Ashwath, KAVERI TV, Kumara Raitha, fortunemed...@gmail.com, prasad rao, mayurak...@gmail.com, Bhagya Prakash, bengalu...@gmail.com, Arvind Last, Benki Belaku Raichur, K.R. Renu, ay...@indiangrapevine.com, hima...@indiangrapevine.com, bvenka...@yahoo.co.in, bvenkatsingh, chandrav...@gmail.com, henjar...@gmail.com, sanath...@indianexpress.com, UMA MEDIA CONSULTING UMC, Vilas Melagiri, Lakshman C.K, munjane...@gmail.com, Sridhara V, E RAVI, RAMALINGAPPA B.K, karnataka...@gmail.com, Gopika Mallesh, J Nagabhushan, palike...@gmail.com, prabhu natekar, ume...@htdigital.in, munjan...@gmail.com, munjan...@yahoo.in, munjanee...@gmail.com, pras...@vrlmedia.com, christin mathew philip, somash...@etvbharat.com, Somashekar kavachoor, Aparna As, kkpsv...@gmail.com, Antharagange DailyNewsPaper, Gummata Nagari Daily Newspaper BIJAPUR, Md Irfan Shaikh, nagar...@gmail.com, samyukt...@gmail.com, newsageh...@gmail.com, ESHANYA TIMES, vipnews...@gmail.com, Devitha cs16, punya vathi, khale...@prajavani.co.in, balakr...@prajavani.co.in, nel...@gmail.com, Manjunat Gvt, hkne...@gmail.com, harish kumar, Manjesha U, musanje...@gmail.com, newsofpol...@gamil.com, shrisha...@gmail.com, SANATH DESAI, yashas...@gmail.com, vinayak bhat, natara...@gmail.com, Nagesh Kn, Nandini .N, Dr. Indukant Dixit, indukan...@pti.in, hdnews...@gmail.com, Devalapalli N Girish Reddy, Raghuraj press reporter Journalist, Shodhavani News, dharidee...@gmail.com, mallam...@gmail.com, ashoka kote, karanja...@yahoo.com, Parvateesha Bilidaale, Bukanakere Manjunatha, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, Rakesh N S <rakesh.ans@gmail.com>, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani <janatavani@mac.com>, eemunjanedailykannada@gmail.com, kannadigaru@yahoo.com, msvaarthe@gmail.com, eemunjanedailykannada@yahoo.com, newsblr@vijayavani.in,, lokes...@gmail.com, siddamma jamadar, arvin...@gmail.com, dasaratha raman, suresh....@gmail.com, tamil5...@gmail.com, kalyana...@gmail.com, kkg...@gmail.com, N.MUNIYAPPA Kolar, Bhagyalakshmi Srinivasa, yuva...@gmail.com, Ramachandra Swamy, prasarbha...@gmail.com, abdul akram haq, deva sampathkumar, bharath...@gmail.com, venkat polali, mahesh somanna, sagar...@live.com, prajapa...@gmail.com, R Manjunath Kere Manju, Abdul Razak, kampi...@gmail.com, udayadhw...@gmail.com, janaraj...@gmail.com, samyuta...@gmail.com, maarda...@gmail.com, new...@bevarahani.com, prathini...@gmail.com, udayaka...@gamil.com, THEDAILY NEWS, anilsi...@gmail.com, Karunakara G, asho...@prasarbharati.gov.in, asho...@yahoo.co.in, avinash mr, n.ashw...@gmail.com, media man, mnwal...@gmail.com, Mohan Handrangi, Govind Gowda, mardhan...@gmail.com, anudinas...@gmail.com, ramanaga...@gmail.com, vijayakoogu, sanc...@gmail.com, Natesh Rajanna, kolara...@gmail.com

 SIR

PLEASE FIND ATTACHED STATE NEWS :

ಮಾಧ್ಯಮ ಆಮಂತ್ರಣ
MEDIA INVITE

1.ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27 ರಿಂದ ನವೆಂಬರ್ 2 ರವರೆಗೆ “ಜಾಗೃತಿ ಅರಿವು ಸಪ್ತಾಹ-2025” ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸಚಿವಾಲಯದ ಎಲ್ಲಾ ಇಲಾಖೆಗಳ ಅಧಿಕಾರಿ / ನೌಕರರಿಗೆ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ:


ಪ್ರತಿಜ್ಞಾ ವಿಧಿ ಬೋಧನೆ:
ಸಿದ್ದರಾಮಯ್ಯ
ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ


ದಿನಾಂಕ: 27-10-2025, ಸೋಮವಾರ

ಸಮಯ : ಬೆಳಿಗ್ಗೆ 11.00 ಗಂಟೆಗೆ  

ಸ್ಥಳ: ಕೊಠಡಿ ಸಂಖ್ಯೆ -334, ಸಮ್ಮೇಳನ ಸಭಾಂಗಣ, 3ನೇ ಮಹಡಿ, ವಿಧಾನಸೌಧ, ಬೆಂಗಳೂರು.


ಪತ್ರಿಕಾ ಪ್ರಕಟಣೆ
PRESS NOTE


ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27 ರಿಂದ ನವೆಂಬರ್ 2 ರವರೆಗೆ “ಜಾಗೃತಿ ಅರಿವು ಸಪ್ತಾಹ-2025

ಬೆಂಗಳೂರು, ಅಕ್ಟೋಬರ್ 24 (ಕರ್ನಾಟಕ ವಾರ್ತೆ):

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27 ರಿಂದ ನವೆಂಬರ್ 2 ರವರೆಗೆ “ಜಾಗೃತಿ ಅರಿವು ಸಪ್ತಾಹ-2025” ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸಚಿವಾಲಯದ ಎಲ್ಲಾ ಇಲಾಖೆಗಳ ಅಧಿಕಾರಿ / ನೌಕರರಿಗೆ ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 334 ಸಮ್ಮೇಳನ ಸಭಾಂಗಣದಲ್ಲಿ ಬೆಳಿಗ್ಗೆ 11.00 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಈ ವರ್ಷದ ಜಾಗೃತಿ ಅರಿವು ಸಪ್ತಾಹದ ಆಚರಣೆಯ ವಿಷಯವು “Vigilance: Our Shared Responsibility” ಆಗಿದೆ. ಈ ಜಾಗೃತಿ ಅರಿವಿನ ಸಪ್ತಾಹವನ್ನು ಎಲ್ಲಾ ಇಲಾಖೆಗಳಲ್ಲಿ ತಪ್ಪದೇ ಆಚರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಯುವಜನತೆ ಸ್ವಾಮಿ ವಿವೇಕಾನಂದರ ಸಂದೇಶದಿಂದ ಪ್ರೇರಣೆಯನ್ನು ಪಡೆದು ದೇಶದ ಉನ್ನತಿಗೆ ಕೆಲಸ ಮಾಡಲಿ - ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಧಾರವಾಡ / ಬೆಂಗಳೂರು, ಅಕ್ಟೋಬರ್ 24 (ಕರ್ನಾಟಕ ವಾರ್ತೆ):

ಭಾರತವು ಆಧ್ಯಾತ್ಮಿಕವಾಗಿ ಜಾಗೃತಗೊಂಡು, ಸಾಂಸ್ಕøತಿಕವಾಗಿ ಬಲಿಷ್ಠ ಮತ್ತು ಆಧುನಿಕ ಪ್ರಗತಿಯಿಂದ ಸಮೃದ್ಧವಾಗಬೇಕೆಂದು ಸ್ವಾಮಿ ವಿವೇಕಾನಂದರು ಬಯಸಿದ್ದರು. ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಇಂದು ಧಾರವಾಡದ ವೀರಶೈವ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 11ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು  ಸ್ವಾಮಿ ವಿವೇಕಾನಂದರಂತೆ ಪ್ರತಿಯೊಬ್ಬ ಯುವಕರು ಆತ್ಮವಿಶ್ವಾಸ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಬೆಳಸಿಕೊಳ್ಳಬೇಕು ಮತ್ತು ಸಕಾರಾತ್ಮಕ ಕಾರ್ಯಗಳು, ನಾವೀನ್ಯತೆ ಮತ್ತು ರಾಷ್ಟ್ರೀಯ ಸೇವೆಗೆ ತಮ್ಮ ಶಕ್ತಿಯನ್ನು ವಿನಿಯೋಗಿಸಿದಲ್ಲಿ ಭಾರತ ಮತ್ತೊಮ್ಮೆ "ವಿಶ್ವಗುರು" ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಂಸ್ಕøತಿಯ ಅಡಿಪಾಯವು ಯಾವಾಗಲೂ ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳಾಗಿವೆ. ಇದನ್ನು ಸಂತರು, ಋಷಿಗಳು ಮತ್ತು ಸನ್ಯಾಸಿಗಳು ತಮ್ಮ ತಪಸ್ಸು, ಜ್ಞಾನ ಮತ್ತು ಯೋಗಾಭ್ಯಾಸಗಳ ಮೂಲಕ ಬಲಪಡಿಸಿದರು. ಜೀವನದ ಪ್ರತಿಯೊಂದು ಅಂಶವನ್ನು ಧರ್ಮ, ಕರುಣೆ ಮತ್ತು ನೈತಿಕತೆಯೊಂದಿಗೆ ಸಂಪರ್ಕಿಸಿದರು. ಮಹರ್ಷಿ ಪತಂಜಲಿ ಯೋಗವನ್ನು ವೈಜ್ಞಾನಿಕವಾಗಿ ರೂಪಿಸಿದರು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನಕ್ಕೆ ದಾರಿ ಮಾಡಿಕೊಟ್ಟರು. ಈ ನಾಡಿನ ಅನೇಕ ಸಂತರು ಸಮಾಜದಲ್ಲಿ ಪ್ರೀತಿ ಸಮಾನತೆ ಮತ್ತು ಏಕತೆಯ ಸಂದೇಶವನ್ನು ಸಾರಿದವರು.

ಋಷಿಗಳು, ಸನ್ಯಾಸಿಗಳು ಮತ್ತು ಆಚಾರ್ಯರು ಮಾನವೀಯತೆಯನ್ನು "ವಸುಧೈವ ಕುಟುಂಬಕಂ" ಎಂಬ ಮನೋಭಾವದಿಂದ ಒಂದುಗೂಡಿಸುವ ಮೂಲಕ ವಿಶ್ವ ಕಲ್ಯಾಣದ ಸಂದೇಶವನ್ನು ಹರಡಿದರು. ಅವರು ಭಾರತೀಯ ಸಂಸ್ಕøತಿಗೆ ಆಧ್ಯಾತ್ಮಿಕತೆ, ನೈತಿಕತೆ ಮತ್ತು ಸಾಮರಸ್ಯದ ನಿರ್ದೇಶನವನ್ನು ನೀಡಿದರು ಮತ್ತು ವಿಶ್ವ ವೇದಿಕೆಯಲ್ಲಿ ಧರ್ಮ, ಆಧ್ಯಾತ್ಮಿಕತೆ ಮತ್ತು ಸಂಸ್ಕøತಿಯ ಧ್ವಜವನ್ನು ಹಾರಿಸಿದರು ಎಂದು ಹೇಳುವ ಮೂಲಕ ಮಾನವೀಯ ಮೌಲ್ಯಗಳ ಅರಿವನ್ನು ತುಂಬಿದ ಈ ಮಾಹಾನ್ ವ್ಯಕ್ತಿಗಳನ್ನು ರಾಜ್ಯಪಾಲರು ಸ್ಮರಿಸಿದರು.
 
ಶ್ರೀ ರಾಮಕೃಷ್ಣ ಪರಮಹಂಸರು ಒಬ್ಬ ಮಹಾನ್ ಸಂತ, ಯೋಗಿ ಮತ್ತು ಆಧ್ಯಾತ್ಮಿಕ ಗುರುಗಳಾಗಿದ್ದರು. ದೇವರ ಮೇಲಿನ ಅವರ ಆಳವಾದ ಭಕ್ತಿ ಮತ್ತು ಆಧ್ಯಾತ್ಮಿಕ ಅಭ್ಯಾಸವು ಅವರಿಗೆ "ಪರಮಹಂಸ" ಎಂಬ ಬಿರುದನ್ನು ಗಳಿಸಿತು. ಅವರು ತಾಯಿ ಕಾಳಿಯ ಆರಾಧನೆಯ ಮೂಲಕ ಅಂತಿಮ ಸತ್ಯವನ್ನು ಅರಿತುಕೊಂಡರು ಮತ್ತು ಎಲ್ಲಾ ಧರ್ಮಗಳು ಒಂದೇ ಪರಮಾತ್ಮನ ಮಾರ್ಗಗಳಾಗಿವೆ, ಪ್ರತಿಯೊಂದು ಧರ್ಮದ ಸಾರವು ಪ್ರೀತಿ, ಕರುಣೆ ಮತ್ತು ಸತ್ಯ ಎಂದು ಅರಿತುಕೊಂಡರು. ಶ್ರೀ ರಾಮಕೃಷ್ಣ ಪರಮಹಂಸರು ವಿವಿಧ ನಂಬಿಕೆಗಳ ಮೂಲಕ ದೇವರ ಸಾಕ್ಷಾತ್ಕಾರವನ್ನು ಅನುಭವಿಸಿದರು ಮತ್ತು "ಜಾತೋ ಮತ್ ತತೋ ಮಾರ್ಗ" - "ಎಷ್ಟು ನಂಬಿಕೆಗಳು, ಹಲವು ಮಾರ್ಗಗಳು" ಎಂಬ ಅದ್ಭುತ ಸಂದೇಶವನ್ನು ನೀಡಿದರು. "ಶ್ರೀ ರಾಮಕೃಷ್ಣರು ಪ್ರಾಚೀನ ಮತ್ತು ಆಧುನಿಕ ಆಧ್ಯಾತ್ಮಿಕತೆಯ ನಡುವಿನ ಸೇತುವೆ” ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿದ್ದರು. ಅವರ ಈ ಹೇಳಿಕೆ ಅತ್ಯಂತ ಅರ್ಥಪೂರ್ಣವಾಗಿದೆ” ಎಂದು ತಿಳಿಸಿದರು.

“ಶ್ರೀ ರಾಮಕೃಷ್ಣರು ಆತ್ಮಸಾಕ್ಷಾತ್ಕಾರದ ಪ್ರಕಾಶಮಾನವಾದ ಸೂರ್ಯನಾಗಿದ್ದರು. ಅವರು ತಮ್ಮ ಜೀವನದ ಮೂಲಕ, ಶುದ್ಧತೆ, ತಾಳ್ಮೆ ಮತ್ತು ನಿಸ್ವಾರ್ಥ ಪ್ರೀತಿ ನಿಜವಾದ ಧರ್ಮವನ್ನು ರೂಪಿಸುತ್ತದೆ ಎಂದು ಕಲಿಸಿದರು. "ನೀವು ಶಾಂತಿಯನ್ನು ಬಯಸಿದರೆ, ಇತರರಲ್ಲಿ ತಪ್ಪುಗಳನ್ನು ಕಂಡು ಹಿಡಿಯಬೇಡಿ" ಎಂಬ ಅವರ ಮಾತುಗಳು ಇಂದಿಗೂ ಅμÉ್ಟೀ ಪ್ರಸ್ತುತವಾಗಿವೆ. ತಮ್ಮ ಮಾತೃ ಪ್ರೀತಿ ಮತ್ತು ಮೌನ ಸೇವೆಯ ಮೂಲಕ, ಅವರು ಅಸಂಖ್ಯಾತ ಜನರ ಪ್ರಗತಿಗೆ ದಾರಿ ಮಾಡಿಕೊಟ್ಟರು. ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ತತ್ವಜ್ಞಾನಿ, ಸಂತ ಮತ್ತು ಯುವ ಸ್ಫೂರ್ತಿಯಾಗಿದ್ದರು. ಅವರು ತಮ್ಮ ಗುರುಗಳ ಸಂದೇಶವನ್ನು ದಕ್ಷಿಣೇಶ್ವರದ ಸಣ್ಣ ದೇವಾಲಯದಿಂದ ಚಿಕಾಗೋದ ವಿಶ್ವ ಧರ್ಮ ಸಂಸತ್ತಿನ ವೇದಿಕೆಗೆ ಕೊಂಡೊಯ್ದರು. ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಅವರ ಪ್ರಬಲ ಭಾಷಣವು ಇಡೀ ಜಗತ್ತಿಗೆ ಭಾರತದ ಶ್ರೇಷ್ಠತೆಯನ್ನು ಅರಿತುಕೊಳ್ಳುವಂತೆ ಮಾಡಿತು ಮತ್ತು ಅವರ ಆಲೋಚನೆಗಳ ಮೂಲಕ ಭಾರತ ಮತ್ತು ಇಡೀ ಜಗತ್ತಿಗೆ ಜೀವನದ ನಿಜವಾದ ಮಾರ್ಗವನ್ನು ತೋರಿಸಿತು” ಎಂದು ಹೇಳಿದರು.

ಯುವಕರು ದೇಶದ ಶಕ್ತಿ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಯುವಜನರಿಗೆ ಆತ್ಮ ವಿಶ್ವಾಸ, ಕಠಿಣ ಪರಿಶ್ರಮ ಮತ್ತು ದೇಶಭಕ್ತಿ ತುಂಬಿದರೆ, ಅವರು ಯಶಸ್ವಿಯಾಗುವುದರ ಜೊತೆಗೆ ಇಚ್ಛಾಶಕ್ತಿ ಇದ್ದರೆ, ಯಾವುದೇ ಗುರಿ ಅಸಾಧ್ಯವಲ್ಲ ಎಂದು ನಿರೂಪಿಸುತ್ತಾರೆ. ನಿಜವಾದ ಶಿಕ್ಷಣವು ಒಳಗಿನ ಶಕ್ತಿಯನ್ನು ಜಾಗೃತಗೊಳಿಸಿ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸುವುದಾಗಿದೆ ಎಂದು ವಿವೇಕಾನಂದರು ನಂಬಿದ್ದರು. "ಶಿಕ್ಷಣದ ಉದ್ದೇಶ ಕೇವಲ ಜ್ಞಾನವನ್ನು ಗಳಿಸುವುದಲ್ಲ, ಮಾನವೀಯತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು" "ಶಕ್ತಿಯೇ ಜೀವನ, ಮತ್ತು ದೌರ್ಬಲ್ಯವೇ ಸಾವು" ಎಂದು ಅವರು ಕಲಿಸಿದರು. ಅವರ ಧ್ಯೇಯವಾಕ್ಯ "ಶಿವ-ಜ್ಞಾನದ ಮೂಲಕ ಜೀವಿಗಳಿಗೆ ಸೇವೆ ಸಲ್ಲಿಸುವುದು" ವಿವೇಕಾನಂದರು, "ಭಾರತವನ್ನು ಪರಿವರ್ತಿಸಬಲ್ಲ ನೂರು ಯುವಕರು ನನಗೆ ಬೇಕು" ಎಂದಿದ್ದ ಸ್ವಾಮಿ ವಿವೇಕಾನಂದರ ಮಾತುಗಳ ಬಗ್ಗೆ ಪ್ರಸ್ತಾಪಿಸಿದ ರಾಜ್ಯಪಾಲರು, ಯುವಕರು ತಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿ ಸಮಾಜ ಮತ್ತು ರಾಷ್ಟ್ರದ ಉನ್ನತಿಗಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಪ್ರಸ್ತುತ ಯುವಕರಿಗೆ ಜ್ಞಾನ, ತಂತ್ರಜ್ಞಾನ ಮತ್ತು ಅವಕಾಶಗಳ ಕೊರತೆಯಿಲ್ಲ. ಅವರು ವಿವೇಕಾನಂದರ ಆದರ್ಶಗಳಿಂದ ಸ್ಫೂರ್ತಿ ಪಡೆಯಬೇಕು ಮತ್ತು ಜೀವನದಲ್ಲಿ ಉತ್ತಮ ವ್ಯಕ್ತಿತ್ವ, ಶಿಸ್ತು ಮತ್ತು ಸಮಗ್ರತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಭೌತಿಕ ಪ್ರಗತಿಯ ಜೊತೆಗೆ ಮಾನಸಿಕ ಅಶಾಂತಿ ಹೆಚ್ಚುತ್ತಿರುವಾಗ, ಈ ಮಹಾನ್ ವ್ಯಕ್ತಿಗಳ ಸಂದೇಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಈ ಸಮ್ಮೇಳನವು ಆಧುನಿಕ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಜೀವನಕ್ಕೆ ಹೊಸ ದಿಕ್ಕನ್ನು ನೀಡಿದ ಪರಮಪೂಜ್ಯ ಶ್ರೀ ರಾಮಕೃಷ್ಣ ಪರಮಹಂಸ, ತಾಯಿ ಶ್ರೀ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಸಮರ್ಪಿತವಾಗಿದೆ. ಕಳೆದ ಒಂದು ದಶಕದಿಂದ, ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇಂತಹ ಸಮ್ಮೇಳನಗಳ ಮೂಲಕ ಮಹಾನ್ ಸಂತರಾದ ಶ್ರೀ ರಾಮಕೃಷ್ಣ ಪರಮಹಂಸ, ತಾಯಿ ಶ್ರೀ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಜೀವನ, ಚಿಂತನೆಗಳು ಮತ್ತು ಆದರ್ಶಗಳನ್ನು ಪ್ರಚಾರ ಮಾಡುತ್ತಿರುವುದು ಸಂತಸದ ವಿಚಾರ. ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತು ಕೇವಲ ಒಂದು ಸಂಸ್ಥೆ ಮಾತ್ರವಲ್ಲದೆ ಪ್ರಜ್ಞೆ ಮತ್ತು ಜಾಗೃತಿಯ ಚಳುವಳಿಯಾಗಿದ್ದು, ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಮತ್ತು ದ್ವೇಷದಿಂದ ಪ್ರೀತಿ ಮತ್ತು ಅಮರತ್ವದೆಡೆಗೆ ಕರೆದೊಯ್ಯಲು ಕೆಲಸ ಮಾಡುತ್ತದೆ. ಈ ಸಂಸ್ಥೆಯು ಶಿಕ್ಷಣ, ಆರೋಗ್ಯ, ಗ್ರಾಮೀಣ ಸೇವೆ ಮತ್ತು ವಿಪತ್ತು ಪರಿಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದೆ. ಈ ಕಾರ್ಯಗಳಿಗಾಗಿ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ಪ್ರತಿಯೊಬ್ಬ ಸದಸ್ಯರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಮುಕ್ತಿದಾನಂದ ಮಹಾರಾಜ್, ರಾಮಕೃಷ್ಣ ಆಶ್ರಮ ಗದಗ-ವಿಜಯಪುರದ ಸ್ವಾಮಿ ನಿರ್ಭಯಾನಂದ ಸರಸ್ವತಿ, ಶ್ರೀ ಜಗದ್ಗುರು ಮೂರುಸೇವೀರ ಮಠದ ಪರಮಪೂಜ್ಯ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.


Youth Must Draw Inspiration from Vivekananda to Shape a Progressive India: Governor


Dharwad / Bangalore, October 24 (Karnataka Information):

Swami Vivekananda envisioned an India that is spiritually awakened, culturally strong, and prosperous while embracing modern progress. The youth should adopt Swami Vivekananda’s ideals as their guiding principles and actively contribute to the nation’s development, said Thaawarchand Gehlot, Honorable Governor of Karnataka.

 
He made these remarks while inaugurating the 11th Annual Conference of the Karnataka Ramakrishna-Vivekananda Bhavaprachar Parishad at Veerashaiva Lingayat Bhavan, Dharwad. The Governor emphasized, “If every young individual embraces self-confidence, sacrifice, and service like Swami Vivekananda, dedicating their energy to innovation, positive action, and national service, India can reclaim its position as a ‘Vishvaguru’.

 Highlighting the spiritual foundation of Indian culture, Shri Gehlot said, Our civilization has always been rooted in spirituality and human values, strengthened over centuries by saints, sages, and monks. They integrated religion, compassion, and morality into every aspect of life. Maharishi Patanjali codified yoga scientifically, promoting physical, mental, and spiritual balance. Saints such as Kabir, Guru Nanak, Tulsidas, Mirabai, Ravidas, Basaveshwara, Purandar, Kanakadasa, and Akka Mahadevi propagated messages of love, equality, and unity, while acharyas and monks promoted global welfare through the spirit of Vasudhaiva Kutumbakam.

 Recalling the contributions of Sri Ramakrishna Paramahamsa, the Governor noted, He was a great saint, yogi, and spiritual master whose devotion earned him the title of ‘Paramahamsa.’ Through worship of Mother Kali and understanding of multiple faiths, he realized that all religions lead to the same Supreme Being, emphasizing love, compassion, and truth. His famous teaching, ‘Jato Mat Tato Marga’ – ‘As many faiths, so many paths,’ bridges ancient and modern spirituality, quoting Rabindranath Tagore.
 
Speaking on Swami Vivekananda, Shri Gehlot added, He was India’s greatest philosopher, saint, and youth inspiration. From the small temple of Dakshineshwar, he carried his Guru’s message to the World Parliament of Religions in Chicago, where his powerful speech showcased India’s greatness and conveyed the true path of life to the world. Vivekananda believed in the transformative power of youth, self-confidence, hard work, and patriotism. He taught that true education awakens inner strength, develops character, and builds humanity. His guiding principle, ‘Strength is life, weakness is death,’ continues to inspire generations.

The Governor urged today’s youth to embrace knowledge, technology, and opportunities while upholding good character, discipline, and integrity, noting that the messages of great spiritual leaders are vital in addressing mental unrest alongside material progress.

He further praised the Ramakrishna-Vivekananda Bhavaprachar Parishad, stating, For over a decade, the Parishad has been propagating the life, thoughts, and ideals of Sri Ramakrishna Paramahamsa, Mother Sri Sharada Devi, and Swami Vivekananda across Karnataka. It is more than an organization; it is a movement fostering consciousness, awareness, and societal transformation-from darkness to light, ignorance to knowledge, hatred to love. Its contributions in education, health, rural service, and disaster relief are commendable. I congratulate every member for their dedication and service.

The ceremony was graced by Venerable Swami Muktidananda Maharaj, President of Ramakrishna Ashram, Mysore; Swami Nirbhayananda Saraswati, Ramakrishna Ashram, Gadag-Vijayapura; and His Holiness Dr. Gurusiddha Rajayogindra Mahaswami, Sri Jagadguru Murusevira Math.

ಕೆ.ಎಸ್.ಡಿ.ಎಲ್ ನಿಂದ ಸರ್ಕಾರಕ್ಕೆ ರೂ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

ಬೆಂಗಳೂರು, ಅಕ್ಟೋಬರ್ 24 (ಕರ್ನಾಟಕ ವಾರ್ತೆ):

ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್‍ಡಿಎಲ್) 2024-25ನೇ ಸಾಲಿನ ಲಾಭದಲ್ಲಿ ರೂ 135 ಕೋಟಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿತು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಕೆ.ಎಸ್.ಡಿ.ಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.

ಸಚಿವ ಎಂ.ಬಿ.ಪಾಟೀಲ ಅವರು ಮಾತನಾಡಿ, ಕೆ.ಎಸ್.ಡಿ.ಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ ರೂ 1,700 ಕೋಟಿ ವಹಿವಾಟು ನಡೆಸಿ, ರೂ. 451 ಕೋಟಿ ಲಾಭವನ್ನು ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ ಎಂದಿದ್ದಾರೆ.

2022-23 ರಲ್ಲಿ ಹಿಂದಿನ ಸರ್ಕಾರÀವಿದ್ದಾಗ ಸಂಸ್ಥೆಯ ವತಿಯಿಂದ ಸರಕಾರಕ್ಕೆ ರೂ. 54 ಕೋಟಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ ರೂ. 108 ಕೋಟಿ ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ ರೂ. 27 ಕೋಟಿ ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ.ಸುಧಾಕರ್, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ್ ಉಪಸ್ಥಿತರಿದ್ದರು.

ಪಿಡಿಪಿಎಸ್ ಅಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ

ಬೆಂಗಳೂರು, ಅಕ್ಟೋಬರ್ 24 (ಕರ್ನಾಟಕ ವಾರ್ತೆ):

ಈರುಳ್ಳಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಪಿಡಿಪಿಎಸ್ (ಪ್ರೈಸ್ ಡಿಪಿಷಿಯನ್ಸಿ ಪ್ರೊಕ್ಯೂರ್‍ಮೆಂಟ್ ಸ್ಕೀಂ) ಅಡಿಯಲ್ಲಿ ಖರೀದಿಸುವ ಪ್ರಯತ್ನ ನಡೆದಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ಕಟಾವಿಗೆ ಬಂದಿರುವ ಈರುಳ್ಳಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಸಾಲಿನ ಸರಾಸರಿ ಈರುಳ್ಳಿ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪಿಡಿಪಿಎಸ್ ಅಡಿಯಲ್ಲಿ ಈರುಳ್ಳಿ ಖರೀದಿ ಮಾಡಲು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ವಾರ್ಷೀಕ ಉತ್ಪನ್ನ 27.00 ಲಕ್ಷ ಮೆಟ್ರಿಕ್ ಟನ್‍ಗಳಾಗಿದೆ. ಪ್ರಮುಖವಾಗಿ ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ವಿಜಯ ನಗರ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.

ಅತಿಯಾದ ಮಳೆಗೆ ಕಟಾವಿಗೆ ಬಂದ ಈರುಳ್ಳಿ ಬೆಳೆ ಹಾನಿಯಾಗಿ, ದಿಡೀರ್ ಬೆಲೆ ಕುಸಿತಗೊಂಡಿದ್ದು, ಜಮೀನಿನಲ್ಲೇ ಈರುಳ್ಳಿ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆ ಸೇರಿ ಚರ್ಚೆ ಮಾಡಿದ್ದು, ಎಂಐಎಸ್ (ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ) ಅಡಿಯಲ್ಲಿ ಖರೀದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು.

ಆದರೆ ಪಿಡಿಪಿಎಸ್‍ಅಡಿ ಈರುಳ್ಳಿ ಖರೀದಿ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ  ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

51 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ : ಶೋಭಾ ಕರಂದ್ಲಾಜೆ

ಬೆಂಗಳೂರು ಅಕ್ಟೋಬರ್ 24  (ಕರ್ನಾಟಕ ವಾರ್ತೆ):

ದೇಶದಾದ್ಯಂತ ಕೇಂದ್ರ ಸರ್ಕಾರದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಇಂದು ವಿತರಣೆ ಮಾಡಲಾಯಿತು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ತಿಳಿಸಿದರು.

ಭಾರತೀಯ ಅಂಚೆ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳ ಸಹಭಾಗಿತ್ವದೊಂದಿಗೆ ಎನ್‍ಜಿಓ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ನೇಮಕಾತಿ ಅಭಿಯಾನದ  ರಾಷ್ಟ್ರೀಯ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ 17ನೇ ಉದ್ಯೋಗ ಮೇಳವು ದೇಶದ 40 ಕಡೆಗಳಲ್ಲಿ ಇಂದು ಏಕ ಕಾಲದಲ್ಲಿ ನಡೆಯುತ್ತಿದೆ ಎಂದರು.

ನಮ್ಮ ರಾಜ್ಯದಲ್ಲಿ ಈ ಮೇಳವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಇಂದು ಬೆಂಗಳೂರಿನಲ್ಲಿ 120 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಹೊಸದಾಗಿ ನೇಮಕವಾದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಇಲಾಖೆ, ರೈಲ್ವೆ ಇಲಾಖೆ, ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ವಿವಿಧÀ ಸಂಸ್ಥೆಗಳ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ ಎಂದರು.

ಭಾರತದ ಯುವಕರು ತಂತ್ರಜ್ಞಾನ, ಶಿಕ್ಷಣ, ಕೌಶಲ್ಯ, ರಕ್ಷಣೆ, ಕೌಶಲ್ಯಾಭಿವೃದ್ಧಿ ಮುಂತಾದ  ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರವನ್ನು ಗುರುತಿಸಿ ಪ್ರಧಾನಮಂತ್ರಿಗಳು ಅಕ್ಟೋಬರ್ 2022 ರಂದು ರೋಜ್‍ಗಾರ್ ಮೇಳವನ್ನು ಪ್ರಾರಂಭಿಸಿದರು. ಈ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಮೂಲಕ ಯುವಕರ ಸಬಲೀಕರಣ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಭಾಗವಹಿಸುವ ಅವಕಾಶವನ್ನು ಒದಗಿಸಲಿದೆ ಎಂದರು.
ಹೊಸದಾಗಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಪೋಷಕರು ಕಷ್ಟಪಟ್ಟು ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪೋಷಕರ ಶ್ರಮದ ಜೊತೆ ನೀವು ಶಿಕ್ಷಣ ಪಡೆದು, ಇಂದು ಉದ್ಯೋಗ ಪಡೆದಿದ್ದೀರಿ. ನಮ್ಮ ದೇಶದ ಸಲುವಾಗಿ ಕೆಲಸ ಮಾಡಬೇಕು. ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ನೇಮಕಾತಿ ಪಡೆದ ಅಭ್ಯರ್ಥಿಗಳಿಗೆ ಶುಭಾಷಯ ಕೋರಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ಮುಖ್ಯ ಅಂಚೆ ಇಲಾಖೆಯ  ನಿರ್ದೇಶಕರಾದ ಸಂದೇಶ ಮಹದೇವಪ್ಪ, ರೈಲ್ವೆ ಇಲಾಖೆಯ ಅಧಿಕಾರಿ ಶ್ರೀಮತಿ ಉಮಾ ಶರ್ಮಾ, ಗೃಹ ಮಂತ್ರಾಲಯದ ಕಮಾಂಡೆಂಟ್ ಅನಿಲ್ ಕುಮಾರ್ ಮೀನಾ, ಅಂಚೆ ಇಲಾಖೆಯ ಅಧಿಕಾರಿಗಳು, ಹೊಸದಾಗಿ ನೇಮಕಾತಿ ಪಡೆದ ಅಭ್ಯರ್ಥಿಗಳು ಉಪಸ್ಥಿತರಿದ್ದರು.


ನವೆಂಬರ್ 6 ಮತ್ತು 7 ರಂದು ಬೆಂಗಳೂರಿನಲ್ಲಿ ಶುದ್ದೀಕರಿಸಿದ ನೀರಿನ ಮರುಬಳಕೆಯ ಬಗ್ಗೆ ನೀತಿ ಆಯೋಗದ ರಾಷ್ಟ್ರೀಯ ಕಾರ್ಯಾಗಾರ
-ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆತಿಥ್ಯ
-ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಉದ್ಘಾಟನೆ


ಬೆಂಗಳೂರು, ಅಕ್ಟೋಬರ್ 24, (ಕರ್ನಾಟಕ ವಾರ್ತೆ):

ದೇಶದ ಪ್ರಮುಖ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗವು, ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಜಲಮಂಡಳಿ ಸಹಯೋಗದಲ್ಲಿ ‘ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆ' ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ. ನವೆಂಬರ್ 6 ಮತ್ತು 7 ರಂದು ಈ ಎರಡು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ.

ಈ ಮಹತ್ವದ ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಉನ್ನತ ಅಧಿಕಾರಿಗಳು, ಜಲ ತಜ್ಞರು ಮತ್ತು ಕೈಗಾರಿಕಾ ಮುಖಂಡರು ಭಾಗವಹಿಸಲಿದ್ದು, ಶುದ್ಧೀಕರಿಸಿದ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಮರುಬಳಕೆ ಮಾಡಲು ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.

ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಬ್ರಾಂಡ್ ಬೆಂಗಳೂರು ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡಲಾಗಿದೆ. ಈ ಮೂಲಕ ತ್ಯಾಜ್ಯ ನೀರಿನ ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಏμÁ್ಯ ಖಂಡಕ್ಕೆ ಬೆಂಗಳೂರು ಜಲಮಂಡಳಿ ಮಾದರಿಯಾಗಿದೆ. ಸಕ್ರ್ಯೂಲರ್ ವಾಟರ್ ಎಕಾಮನಿಯನ್ನು ಅಳವಡಿಸಿಕೊಂಡಿರುವ ಮಹಾನಗರಗಳ ಪೈಕಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಬೆಂಗಳೂರು ನಗರದಲ್ಲಿ ಶೇಕಡಾ 90 ರಷ್ಟು ಒಳಚರಂಡಿ ಶುದ್ದೀಕರಣ ಸಾಮಥ್ರ್ಯವನ್ನು ಹೊಂದಿದ್ದು, 1,348 ಎಂ.ಎಲ್.ಡಿ ಯಷ್ಟು ನೀರನ್ನು ಶುದ್ದೀಕರಿಸಲಾಗುತ್ತಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಅಲ್ಲದೇ, ಪಾರ್ಕ್ ಮತ್ತು ಉದ್ಯಾನವಗಳ ನಿರ್ವಹಣೆ ಜೊತೆಯಲ್ಲಿಯೇ ಕೈಗಾರಿಕೆಗಳಿಗೂ ಪೂರೈಸಲಾಗುತ್ತಿದೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ಕಾರಣದಿಂದ ಬೆಂಗಳೂರು ತ್ಯಾಜ್ಯ ನೀರನ್ನು ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುμÁ್ಠನಗೊಳಿಸಲಾಗಿದೆ. ಶುದ್ಧೀಕರಿಸಿದ ನೀರು ತ್ಯಾಜ್ಯವಲ್ಲ, ಇದು ನಗರದ ಸುಸ್ಥಿರತೆಯನ್ನು ಬಲಪಡಿಸುವ ಸಂಪನ್ಮೂಲ ಎಂದು ನಮ್ಮ ನಗರದ ಯಶಸ್ಸು ಸಾಬೀತು ಪಡಿಸಿದೆ.

ನೀತಿ ಆಯೋಗದ ಕಾರ್ಯಾಗಾರಕ್ಕೆ ಆತಿಥ್ಯ ವಹಿಸುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ತ್ಯಾಜ್ಯ ನೀರು ಶುದ್ದೀಕರಣದಲ್ಲಿ ನಮ್ಮ ಬೆಂಗಳೂರು ಪ್ರಗತಿಯನ್ನು ಪ್ರದರ್ಶಿಸಲು ಮತ್ತು ಅನುಭವಗಳನ್ನು ದೇಶದೊಂದಿಗೆ ಹಂಚಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಬ್ರಾಂಡ್ ಬೆಂಗಳೂರು ಅಭಿಯಾನದ ಅಡಿಯಲ್ಲಿ ಬೆಂಗಳೂರು ನಗರ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಕೈಗೊಂಡಿರುವಂತಹ ಯೋಜನೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಇದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‍ಪ್ರಸಾತ್ ಮನೋಹರ್ ಹೇಳಿದರು.

ಈ ವಿಧಾನದಿಂದ ಬೆಂಗಳೂರಿನಂತಹ ದೊಡ್ಡ ನಗರಗಳು ಕಾವೇರಿಯಂತಹ ಸಿಹಿನೀರಿನ ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಭವಿಷ್ಯದ ಬೆಳವಣಿಗೆಗೆ ನೆರವಾಗಲು ಸಾಧ್ಯ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಜಲ-ಸುಭದ್ರ ಭಾರತಕ್ಕಾಗಿ ಮಾರ್ಗಸೂಚಿ:
ಮರುಬಳಕೆಯ ರಾಷ್ಟ್ರೀಯ ಯೋಜನೆಯನ್ನು ರೂಪಿಸಲು ಕಾರ್ಯಾಗಾರದಲ್ಲಿ ಈ ಮೂರು ಮುಖ್ಯ ವಿಷಯಗಳ ಮೇಲೆ ಗಮನ ಹರಿಸಲಾಗುತ್ತದೆ:

1.ನೀತಿ ನಿಯಮಗಳು (Policy Frameworks)
2.ಹಣಕಾಸು ಮಾದರಿಗಳು (Financing Models)
3.ನೂತನ ತಂತ್ರಜ್ಞಾನದ ಅಳವಡಿಕೆ (Technology Integration)
ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆಯನ್ನು ಭಾರತದಾದ್ಯಂತ ಕಡ್ಡಾಯಗೊಳಿಸಲು ಒಂದು ಸಮಗ್ರ ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದು ಈ ಕಾರ್ಯಾಗಾರದ ಮುಖ್ಯ ಗುರಿಯಾಗಿದೆ.

BWSSB joins Global Smart Water Networks Forum (SWAN) - Becomes India’s First Water Utility to Earn Membership

Bengaluru, October 24, (Karnataka Information):
 
In a landmark achievement, the Bangalore Water Supply and Sewerage Board (BWSSB) has become the first Indian water utility to be inducted as a member of the Smart Water Networks Forum (SWAN) - a globally renowned body dedicated to advancing digital and data-driven water management.

The membership places BWSSB alongside leading international utilities and technology innovators that are shaping the future of sustainable water management. By joining SWAN, BWSSB gains access to cutting-edge global best practices, research collaborations, and smart water technologies, reinforcing its commitment to digital transformation under the “Utility of the Future 2026” vision.

Speaking at the event, Dr. Ram Prasath Manohar, IAS, Chairman, BWSSB, said “This membership marks a new chapter for Bengaluru’s water story. It’s not just a recognition of our progress - it’s an opportunity to learn, collaborate, and lead India’s transition to smarter, more resilient water systems. Under the Brand Bengaluru initiative, our focus is on building global partnerships and adopting world-class service standards, which has been the vision and mission set by our Hon’ble Deputy Chief Minister, D. K. Shivakumar.

The announcement was made IFAT India 2025, where key officials, experts, and stakeholders discussed Bengaluru’s roadmap toward integrated water management and digital utility transformation.
BWSSB has already taken pioneering steps in smart metering, real-time monitoring, wastewater reuse, and citizen engagement platforms - initiatives that align with SWAN’s mission to leverage data for a sustainable water future.

With this partnership, BWSSB aims to strengthen collaborations with global utilities, adopt emerging technologies, and scale up its vision of making Bengaluru a water-secure city by 2026.

About SWAN:
The Smart Water Networks Forum (SWAN) is a leading global non-profit dedicated to accelerating the digital transformation of the water sector. Its members include utilities, technology providers, researchers, and regulators from over 50 countries working together to build smarter and more sustainable water systems.


50 ದಿನಗಳ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ತರಬೇತಿ


ಬೆಂಗಳೂರು ಅಕ್ಟೋಬರ್ 24  (ಕರ್ನಾಟಕ ವಾರ್ತೆ);

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ವು ಅಕ್ಟೋಬರ್ 29 ರಂದು  ಬೆಳಿಗ್ಗೆ 11:30 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ 50 ದಿನಗಳ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ತರಬೇತಿ ಶಿಬಿರದ ಉದ್ಘಾಟನೆಯನ್ನು ನಿವೃತ್ತ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಶಂಕರ್ ಬಿದರಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಮೈಸೂರು ನಗರ ಪೆÇಲೀಸ್ ಉಪ ಆಯುಕ್ತರಾದ ಆರ್.ಎನ್. ಬಿಂದುಮಣಿ ಮುಖ್ಯ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಪ್ರೊ. ಎಸ್.ಕೆ ನವೀನ್ ಕುಮಾರ್ ಉಪಸ್ಥಿತರಿರುವರು.

ಈಗಲೂ ತರಬೇತಿಗೆ ಪ್ರವೇಶಾತಿ ಪಡೆಯಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ 0821-2515944 / 9964760090 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯ ನಾರಾಯಣಗೌಡ ತಿಳಿಸಿದ್ದಾರೆ.

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಅವಧಿ ಡಿಸೆಂಬರ್ 31 ರವರೆಗೆ ವಿಸ್ತರಣೆ

ಬೆಂಗಳೂರು ಅಕ್ಟೋಬರ್ 24  (ಕರ್ನಾಟಕ ವಾರ್ತೆ):

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಅವಧಿಯನ್ನು ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.

ಸಮೀಕ್ಷೆಯನ್ನು 15 ಜಿಲ್ಲೆಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುತ್ತಿದೆ. ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಅಕ್ಟೋಬರ್ 15 ರಂದು ನಡೆದ ಸಭೆಯಲ್ಲಿ ವಿವಿಧ ಕಾರಣಗಳಿಂದ ಸಮೀಕ್ಷೆಯ ಅವಧಿಯನ್ನು ಹೆಚ್ಚಿಸಲು ಅವರು ಕೋರಿದ್ದು, ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಅನುಮೋದಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಕಾರ್ಯ ಕಲಾಪಗಳು ಪ್ರಾರಂಭ

ಬೆಂಗಳೂರು ಅಕ್ಟೋಬರ್ 24  (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರನ್ನಾಗಿ ಡಾ.ಮೂರ್ತಿ ಎಲ್. ಬಿನ್ ಲಿಂಗಯ್ಯ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ. ಅದರಂತೆ, ಅಕ್ಟೋಬರ್ 16 ರಿಂದ ಆಯೋಗದಲ್ಲಿ ನ್ಯಾಯಾಲಯದ ಕಾರ್ಯ ಕಲಾಪಗಳು ಪ್ರಾರಂಭಗೊಂಡಿವೆ ಎಂದು ಆಯೋಗದ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


THANKS




DIRECTOR,
DEPARTMENT OF INFORMATION AND PUBLIC RELATIONS,
GOVERNMENT OF KARNATAKA,
VARTHA SOUDHA,
No. 17, BHAGAWAN MAHAVEER ROAD, 
BENGALURU - 560 001

TELEPHONE : 080-2202 8032, 080-2202 8034, 080-2202 8037

FAX No 080-2202 8041, 080-2286 3794


ಉದ್ಯೋಗ ಮೇಳ ನೇಮಕಾತಿ ಅಭಿಯಾನ (1).jpg
Governor (7).jpeg
Governor (1).jpeg
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಕಾರ್ಯ ಕಲಾಪಗಳು ಪ್ರಾರಂಭ (4).jpg
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಕಾರ್ಯ ಕಲಾಪಗಳು ಪ್ರಾರಂಭ (2).jpg
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಕಾರ್ಯ ಕಲಾಪಗಳು ಪ್ರಾರಂಭ (1).jpg
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಕಾರ್ಯ ಕಲಾಪಗಳು ಪ್ರಾರಂಭ (3).jpg
DIPR NEWS - 24-10-2025.pdf
DIPR NEWS - 24-10-2025.docx
ಉದ್ಯೋಗ ಮೇಳ ನೇಮಕಾತಿ ಅಭಿಯಾನ (2).jpg
ಕೆ.ಎಸ್.ಡಿ.ಎಲ್ ರಿಂದ ಸರ್ಕಾರಕ್ಕೆ ರೂ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ (2).jpg
Governor (2).jpeg
ಕೆ.ಎಸ್.ಡಿ.ಎಲ್ ರಿಂದ ಸರ್ಕಾರಕ್ಕೆ ರೂ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ (1).jpg
Governor (3).jpeg
Governor (4).jpeg
Governor (6).jpeg
Governor (5).jpeg
Reply all
Reply to author
Forward
0 new messages