KOPPAL VARTHE
unread,Nov 1, 2019, 1:22:35 AM11/1/19Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, Ravi.sa...@gmail.com, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani, sureshgut...@gmail.com, praja...@gmail.com, benki...@gmail.com, gavis...@gmail.com
ಕನ್ನಡ ರಾಜ್ಯೊÃತ್ಸವ-2019ರ ಕಾರ್ಯಕ್ರಮದ ನಿಮಿತ್ತ ಸನ್ಮಾನ್ಯ ಶ್ರಿÃ ಲಕ್ಷö್ಮಣ ಸಂಗಪ್ಪ ಸವದಿ ಮಾನ್ಯ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಇವರ ಭಾಷಣ
ಈ ಪವಿತ್ರ ದಿನದಂದು ಇಲ್ಲಿ ನೆರೆದಿರುವ ಆತ್ಮಿÃಯ ಕನ್ನಡ ಬಂಧು ಭಗಿನಿಯರೇ, ವೇದಿಕೆಯ ಮೇಲೆ ಆಸೀನರಾಗಿರುವ ಶಾಸಕರೇ, ಸಂಸದರೇ, ಜಿಲ್ಲಾ ಪಂಚಾಯತ್ ಅಧ್ಯಕ್ಷರೇ, ಜಿಲ್ಲಾಧಿಕಾರಿಗಳೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಹಾಗೂ ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಜನಪ್ರತಿನಿಧಿಗಳೇ ಹಾಗೂ ನಾಗರಿಕ ಬಂಧುಗಳೇ, ವಿದ್ಯಾರ್ಥಿಗಳೇ, ಅಧಿಕಾರಿ ವರ್ಗದವರೇ ಹಾಗೂ ಮಾಧ್ಯಮ ಮಿತ್ರರೆ, ತಮಗೆಲ್ಲರಿಗೂ 64ನೇ ಕನ್ನಡ ರಾಜ್ಯೊÃತ್ಸವದ ಹಾರ್ದಿಕ ಶುಭಾಶಯಗಳು.
• ಸ್ವಾತಂತ್ರö್ಯ ಪೂರ್ವದಿಂದಲೇ ಭಾಷಾವಾರು ಪ್ರಾಂತ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಯುತ್ತಲೇ ಇತ್ತು. ದಶಕಗಳ ಹೋರಾಟದ ಫಲವಾಗಿ 1956ನೇ ನವೆಂಬರ್ 1 ರಂದು ಅಖಂಡ ಕರ್ನಾಟಕದ ಚದುರಿದ ಪ್ರದೇಶಗಳೆಲ್ಲಾ ಒಗ್ಗೂಡಿದ “ಮೈಸೂರು ರಾಜ್ಯ” ಉದಯವಾಯಿತು.
• ಭಾಷಾವಾರು ಪ್ರಾಂತ್ಯ ರಚನೆಯಾಗಿ 63 ಸಂವತ್ಸರಗಳ ಸಾಧನೆಯ ನಂತರ ಇಂದು 64 ನೇ ಸಂಭ್ರಮದ ರಾಜ್ಯೊÃತ್ಸವವನ್ನು ಆಚರಿಸುತ್ತಿದ್ದೆÃವೆ. ಕನ್ನಡದ ಕುಲಪುರೋಹಿತ, ಏಕೀಕರಣದ ರೂವಾರಿ ಶ್ರಿÃ ಆಲೂರು ವೆಂಕಟರಾಯರು 1901 ರಲ್ಲಿಯೇ ಏಕೀಕರಣದ ಹೋರಾಟವನ್ನು ಆರಂಭಗೊಳಿಸಿದ್ದರು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ರಾಜ್ಯದ ಏಕೀಕರಣಕ್ಕೆ ದುಡಿದ ಅಸಂಖ್ಯಾತ ಹೋರಾಟಗಾರರಿಗೆ, ಮುತ್ಸದ್ಧಿಗಳಿಗೆ, ಲೇಖಕರು, ಕವಿಗಳು ಹಾಗೂ ನಾಡಿನ ಪ್ರಾಜ್ಞರೆಲ್ಲರಿಗೂ ಕೃತಜ್ಞತೆ ಅರ್ಪಿಸಲು ನವೆಂಬರ್ 1 ರಂದು ರಾಜ್ಯೊÃತ್ಸವವನ್ನು ಆಚರಿಸುತ್ತಾ ಬಂದಿದ್ದೆÃವೆ.
• ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯದ ರಾಜ ಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ “ಮೈಸೂರು ರಾಜ್ಯ” 1956 ರಲ್ಲಿ ಉದಯವಾಯಿತು. ರಾಜ್ಯದ ಸರ್ವಾಂಗೀಣ ಪ್ರಗತಿಗೆ ಭದ್ರ ಬುನಾದಿ ಹಾಕಿದ ಹಿಂದುಳಿದ ಜನ ವರ್ಗದ ಅಭ್ಯುದಯದ ಹರಿಕಾರ ಡಿ. ದೇವರಾಜ ಅರಸು ರವರು 01-11-1973 ರಲ್ಲಿ ಗಟ್ಟಿ ನಿರ್ಧಾರ ತಳೆದು ರಾಜ್ಯವನ್ನು “ಕರ್ನಾಟಕ” ಎಂದು ನಾಮಕರಣ ಮಾಡಿದರು.
• ಏಕೀಕರಣ ಹೋರಾಟಕ್ಕೆ ನಮ್ಮ ಕನ್ನಡ ನಾಡು, ನುಡಿ ಹಾಗೂ ಸಾಂಸ್ಕೃತಿಕ ಉಳಿವು ಬೆಳವಣಿಗೆಗಾಗಿ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿದೆ. ಸಾಹಿತ್ಯ ಕ್ಷೆÃತ್ರದಲ್ಲಿಯೂ ಕೂಡ ಕನ್ನಡ ಭಾಷೆಯ ಸಾಹಿತ್ಯ ಮುಂಚೂಣಿಯಲ್ಲಿದೆ. ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ್, ಶಿವರಾಮ ಕಾರಂತ, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರವರು ಕನ್ನಡಕ್ಕೆ ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಡಲು ಕಾರಣರಾಗಿದ್ದಾರೆ. ಪ್ರಾಚೀನ ಕವಿಗಳಾದ ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷಿö್ಮÃಶ ಕವಿಗಳು ಸರ್ವಮಾನ್ಯರಾಗಿದ್ದಾರೆ. ತಮ್ಮ ಹಾಡುಗಳ ಮೂಲಕ ಜನಮನ ಗೆದ್ದಿರುವ ಪುರಂದರದಾಸರು ಮತ್ತು ಕನಕದಾಸರನ್ನು ಮರೆಯಲು ಸಾಧ್ಯವಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ, ನಮ್ಮ ರಾಷ್ಟçಕವಿಗಳಾದ ಗೋವಿಂದ ಪೈ ರವರು, ಕುವೆಂಪು ರವರು ಮತ್ತು ಜಿ.ಎಸ್.ಶಿವರುದ್ರಪ್ಪನವರನ್ನು ಸ್ಮರಿಸಬೇಕಿದೆ.
• ಕರ್ನಾಟಕ ಏಕೀಕರಣದ ಇತಿಹಾಸವನ್ನು ಗಮನಿಸಿದರೆ ಕೊಪ್ಪಳ ಜಿಲ್ಲೆಯ ಅಳವಂಡಿ ಶಿವಮೂರ್ತಿಸ್ವಾಮಿರವರು, ಶಿರೂರು ವೀರಭದ್ರಪ್ಪ ತೆಗ್ಗಿನಮನಿರವರು, ಶಂಕರಗೌಡ್ರು, ಪ್ರಭುರಾಜ ಪಾಟೀಲ್ ಸಂಗನಾಳರವರು, ಪಂಚಾಕ್ಷರಿ ಹಿರೇಮಠ ರವರು, ಸೋಮಪ್ಪ ಡಂಬಳರವರು, ದೇವೇಂದ್ರಕುಮಾರ ಹಕಾರಿರವರು, ಭೀಮನಗೌಡ ಪಾಟೀಲ್‌ರವರು, ಹನುಮರಡ್ಡಿ ಕಲ್ಗುಡಿ ರವರು, ಪಂಚಪ್ಪ ಶೆಟ್ಟರು, ಹಂಜಿ ಕೊಟ್ರಪ್ಪ ಹಾಗೂ ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದನ್ನು ನಾವು ಸ್ಮರಿಸಬೇಕಾಗಿದೆ.
• ಕೊಪ್ಪಳ ಐತಿಹಾಸಿಕ ಹಿರಿಮೆಯನ್ನು ಹೊಂದಿದ ನಾಡು, ``ತಿರುಳ್ಗನ್ನಡದ ನಾಡು'' ಎಂದೇ ಪ್ರಸಿದ್ಧವಾಗಿದೆ. ಕೊಪ್ಪಳವು ಕರ್ನಾಟಕದ ಪ್ರಮುಖ ರಾಜಮನೆತನಗಳ ಆಳ್ವಿಕೆಗೊಳಪಟ್ಟ, ರಾಜಕೀಯ, ಧಾರ್ಮಿಕ, ಸಾಮರಸ್ಯಕ್ಕೆ ಹೆಸರಾದ ಬೀಡು. ಇದು ಪರಧರ್ಮ ಸಹಿಷ್ಣುತೆಗೆ ಒಂದು ಮಾದರಿಯಾಗಿದೆ. ಈ ನಾಡನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಉನ್ನತ ಶಿಖರಕ್ಕೆ ತಲುಪಿಸಬೇಕಾದದ್ದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ.
• ಕಲಾ ಕ್ಷೆÃತ್ರಕ್ಕೂ ಕೊಪ್ಪಳ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ವೃತ್ತಿ ರಂಗಭೂಮಿ ಮಂಡಳಿಗಳು, ಪೌರಾಣಿಕ, ಸಾಮಾಜಿಕ, ಹವ್ಯಾಸಿ ನಾಟಕಗಳು, ಜಾನಪದ ಕಲೆಗಳು, ಬಯಲಾಟ, ಚಿತ್ರಕಲೆ, ಸಂಗೀತ-ಸಾಹಿತ್ಯ ಕ್ಷೆÃತ್ರಗಳಿಗೂ ಸಹ ಕೊಪ್ಪಳ ಜಿಲ್ಲೆ ಪ್ರಸಿದ್ಧಿಯಾಗಿದೆ. ಕಿನ್ನಾಳ ಕರಕುಶಲ ಕಲೆ, ಜಾನಪದ ಪ್ರದರ್ಶನ ಕಲೆಗಳು, ಶಿಲ್ಪಕಲೆಗಳಿಗೆ ಸಂಬಂಧಿಸಿದ ಕಲಾಪ್ರಕಾರಗಳು ಕೊಪ್ಪಳ ಜಿಲ್ಲೆಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ.
• ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅತ್ಯಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು. ಹೀಗಾಗಿ ಇಲ್ಲಿನ ಜನರ ಭಾವನೆಗೆ ಬೆಲೆಕೊಟ್ಟು ಹೈದ್ರಾಬಾದ್-ಕರ್ನಾಟಕ ಪ್ರದೇಶವನ್ನು “ಕಲ್ಯಾಣ ಕರ್ನಾಟಕ” ವೆಂದು ನಮ್ಮ ಸರಕಾರ ಮರುನಾಮಕರಣ ಮಾಡಿದೆ. ಅದರಂತೆ ಹೈದ್ರಾಬಾದ್–ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸಹ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಘೋಷಣೆ ಮಾಡಲಾಗಿದೆ. ಈ ಭಾಗದ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೆÃಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯೇ ನಮ್ಮ ಮುಂದಿನ ಗುರಿಯಾಗಿದೆ.
• ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದ ಶ್ರಿÃ ರಮೇಶ ವೈದ್ಯ, ಇವರಿಗೆ ಸಹಕಾರ ಕ್ಷೆÃತ್ರದ ಉತ್ತಮ ಸೇವೆಗಾಗಿ ಈ ವರ್ಷದ ರಾಜ್ಯಮಟ್ಟದ ``ಕನ್ನಡ ರಾಜ್ಯೊÃತ್ಸವ ಪ್ರಶಸ್ತಿ’’ ದೊರೆತಿದ್ದು, ಕೊಪ್ಪಳ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೆÃನೆ.
• 2019-20ನೇ ಸಾಲಿನಲ್ಲಿ ಕಲ್ಯಾಣ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೊÃ ವಲಯದಲ್ಲಿ 104.7 ಕೋಟಿ ಮತ್ತು ಮ್ಯಾಕ್ರೊÃ ವಲಯದಲ್ಲಿ 44.60 ಕೋಟಿ ಅನುದಾನ ಜಿಲ್ಲೆಗೆ ನಿಗದಿಪಡಿಸಲಾಗಿದ್ದು, ಇದರಲ್ಲಿ ಈಗಾಗಲೇ 556 ಕಾಮಗಾರಿಗಳು ಅಂದಾಜು ಮೊತ್ತ ರೂ. 145.30 ಕೋಟಿಗಳಿಗೆ ಕ್ರಿಯಾ ಯೋಜನೆ ಅನುಮೋದನೆಗೊಂಡಿರುತ್ತವೆ.
• ಭಾರತ ಸರ್ಕಾರದ “ಜಲಶಕ್ತಿ ಅಭಿಯಾನ” ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ತಾಲ್ಲೂಕನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಅದರಂತೆ ಈಗಾಗಲೇ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಜಿಲ್ಲೆಯ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಸಮರೋಪಾದಿಯಲ್ಲಿ ಜಲ ಸಂರಕ್ಷಣಾ ಕಾಮಗಾರಿಗಳು, ಅರಣ್ಯಿÃಕರಣ, ಜಲ ಸಾಕ್ಷರತೆ, ಮಳೆ ನೀರಿನ ಕೊಯ್ಲು, ಕೊಳವೆ ಭಾವಿ ಮರುಪೂರಣ ಘಟಕಗಳು, ಕೃಷಿ ಹೊಂಡ, ಸಮಪಾತಳಿ ಬದು ನಿರ್ಮಾಣ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ ಮುಂತಾದ ಕಾಮಗಾರಿಗಳಿಗೆ 2019-20ನೇ ಸಾಲಿಗೆ ಅಂದಾಜು ಮೊತ್ತ ರೂ. 45.65 ಕೋಟಿಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ.
• ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೊÃಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 2,35,835 ಕುಟುಂಬಗಳನ್ನು ನೋಂದಾಯಿಸಿ ಉದ್ಯೊÃಗ ಚೀಟಿಗಳನ್ನು ನವೀಕರಿಸಿ ದೃಢೀಕರಣಗೊಳಿಸಲಾಗಿದೆ. ಜಿಲ್ಲೆಗೆ ರೂ. 203.50 ಕೋಟಿ ಕ್ರಿಯಾ ಯೋಜನೆಯನ್ನು ಗ್ರಾ.ಪಂ. ಮಟ್ಟದಲ್ಲಿ ತಯಾರಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ ದಿನಾಂಕ:25-10-2019 ರ ಅಂತ್ಯದವರೆಗೆ ಕೂಲಿ ಕಾರ್ಮಿಕರಿಗೆ ಉದ್ಯೊÃಗ ನೀಡಿ 37.58 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಹಾಗೂ ರೂ.171.55 ಕೋಟಿಗಳ ಅನುದಾನ ಬಳಕೆ ಮಾಡಲಾಗಿದೆ.
• ‘ಸಂಜೀವಿನಿ’ ಎನ್.ಆರ್.ಎಲ್.ಎಂ ಯೋಜನೆಯಡಿ 2019-20ನೇ ಸಾಲಿನಲ್ಲಿ ಒಟ್ಟು 184 ಹೊಸ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿರುತ್ತದೆ. ಹಾಗೂ ಅಸ್ತಿತ್ವದಲ್ಲಿ ಇರುವಂತಹ ಸ್ವಸಹಾಯ ಗುಂಪುಗಳಲ್ಲಿ 589 ಗುಂಪುಗಳಿಗೆ ವಿವಿಧ ಮಾದರಿಗಳಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ.
• ಲೋಕೋಪಯೋಗಿ ಇಲಾಖೆ ಕೊಪ್ಪಳ ವಿಭಾಗ ವ್ಯಾಪ್ತಿಯಲ್ಲಿ 2019-20ನೇ ಸಾಲಿಗೆ ರೂ. 20.57 ಕೋಟಿ ಅನುದಾನದಲ್ಲಿ 42.00 ಕಿ.ಮೀ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ/ ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈವರೆಗೂ 4.00 ಕಿ.ಮೀ ರಾಜ್ಯ ಹೆದ್ದಾರಿ/ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
• ಸಿಮೆಂಟ್ ಕಾಂಕ್ರಿÃಟ್ ರಸ್ತೆ ಕಾಮಗಾರಿಗಳಡಿ ಪ್ರಸಕ್ತ ಸಾಲಿನಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ರೂ. 31.41 ಕೋಟಿಗಳ ಅನುದಾನದಲ್ಲಿ 23.50 ಕಿ.ಮೀ ಕಾಂಕ್ರಿÃಟ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಈವರೆಗೂ 4.63 ಕಿ.ಮೀ ಅಭಿವೃದ್ಧಿಪಡಿಸಲಾಗಿದೆ.
• ಜಿಲ್ಲೆಯಲ್ಲಿ ನಬಾರ್ಡ ರಸ್ತೆ ಮತ್ತು ಸೇತುವೆ ಕಾಮಗಾರಿ ಯೋಜನೆ ಅಡಿಯಲ್ಲಿ ರೂ. 4.78 ಕೋಟಿಗಳ ಅನುದಾನದಲ್ಲಿ 10.00 ಕಿ.ಮೀ ರಸ್ತೆ ಸುಧಾರಣೆ ಮಾಡಲು ಹಾಗೂ 1 ಸೇತುವೆಯನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈವರೆಗೂ 11.00 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. 1 ಸೇತುವೆ ಕಾಮಗಾರಿ ಪೂರ್ಣಗೊಂಡಿದೆ.
• ಉನ್ನತ ಶಿಕ್ಷಣ ಹಾಗೂ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಕೊಪ್ಪಳ ಜಿಲ್ಲೆಯ ತಳಕಲ್ ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯು ರೂ. 100 ಕೋಟಿಗಳ ಅನುದಾನ ಮಂಜೂರಾಗಿರುತ್ತದೆ. ಸದರಿ ಕಾಮಗಾರಿ ಪೂರ್ಣಗೊಂಡಿರುತ್ತದೆ. ತಳಕಲ್ ಗ್ರಾಮದಲ್ಲಿ ವಿಶ್ವೆÃಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ. 85 ಕೋಟಿಗಳ ಅನುದಾನ ಮಂಜೂರಾಗಿರುತ್ತದೆ. ಸದರಿ ಕಾಮಗಾರಿ ಪ್ರಗತಿ ಹಂತದಲ್ಲಿರುತ್ತದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯು ರೂ. 18.50 ಕೋಟಿಗಳ ಅನುದಾನ ಮಂಜೂರಾಗಿದ್ದು, ಸದರಿ ಕಾಮಗಾರಿ ಪ್ರಗತಿ ಹಂತದಲ್ಲಿರುತ್ತದೆ.
• ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pಒ-ಏISಂಓ)” ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ರೂ 6,000/- ಗಳನ್ನು ನೀಡಲು ಉದ್ದೆÃಶಿಸಿದ್ದು, ಈ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,63,413ರ ಗುರಿ ಪೈಕಿ 1,54,186 ರೈತರಿಗೆ ನೋಂದಣಿ ಮಾಡಲಾಗಿದ್ದು, ಶೇ.95%ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ 1ನೇ ಕಂತಿನಲ್ಲಿ 78,608, 2ನೇ ಕಂತಿನಲ್ಲಿ 66,853 ಹಾಗೂ 3ನೇ ಕಂತಿನಲ್ಲಿ 11,561 ರೈತರಿಗೆ ಹಣ ಜಮೆ ಮಾಡಲಾಗುತ್ತಿದೆ. ಇದಲ್ಲದೇ ರಾಜ್ಯ ಸರ್ಕಾರದಿಂದಲೂ ಸಹ ರೂ.4,000/- ಹೆಚ್ಚಿನ ಪ್ರೊÃತ್ಸಾಹಧನ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 85,954 ರೈತರಿಗೆ ಮೊದಲನೇ ಕಂತಿನ ಹಣ ಜಮೆ ಮಾಡಲಾಗಿದೆ.
• ಕೊಪ್ಪಳ ಜಿಲ್ಲೆಯ 7 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಶೇ.99 ರಷ್ಟು ಬಿತ್ತನೆಯಾಗಿದ್ದು ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿರುತ್ತದೆ. ಜಿಲ್ಲೆಯಲ್ಲಿ 1,21,000 ಹೆಕ್ಟೆÃರ್ ಹಿಂಗಾರು ಬೆಳೆ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಪೈಕಿ 1,02000 ರೈತರಿಗೆ ರೂ. 84.00 ಕೋಟಿ ಅನುದಾನ ಪ್ರಸ್ತಾಪಿಸಿದ್ದು, 35000 ರೈತರಿಗೆ ರೂ.24.00 ಕೋಟಿ ಪಾವತಿಸಲಾಗಿದೆ.
• ಈ ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 376 ಮೀ.ಮೀ. ಇದ್ದು, 352 ಮೀ.ಮೀ. ವಾಸ್ತವಿಕ ಮಳೆಯಾಗಿರುತ್ತದೆ. 6% ಮಳೆ ಕೊರತೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ 2,52,500 ಹೆಕ್ಟರ್ ಇದ್ದು, ಇದರಲ್ಲಿ 2,49,485 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 99% ಬಿತ್ತನೆ ಕಾರ್ಯ ಮುಗಿದಿರುತ್ತದೆ. ಹಿಂಗಾರು ಹಂಗಾಮಿನಲ್ಲಿ ಅಕ್ಟೊÃಬರ್ ತಿಂಗಳಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 106 ಮೀ.ಮೀ. ಇದ್ದು, ವಾಸ್ತವಿಕ 206 ಮೀ.ಮೀ. ಮಳೆಯಾಗಿದ್ದು, 95% ಹೆಚ್ಚು ಮಳೆ ಬಂದಿರುತ್ತದೆ. ಹಿಂಗಾರು ಹಂಗಾಮಿನ ಬಿತ್ತನೆ ಗುರಿ 1,55,200 ಹೆಕ್ಟರ್ ಇದ್ದು, 1,28,378 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಂದುವರೆದಿರುತ್ತದೆ. ಈ ವರ್ಷ ಹಿಂಗಾರು ಹಂಗಾಮು ಜಿಲ್ಲೆಗೆ ಆಶಾದಾಯಕವಾಗಿರುತ್ತದೆ.
• ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 2,73,227.82 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದರಲ್ಲಿ 1,97,163.01 ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, 1,81,768.41 ಹೆಕ್ಟರ್ ಪ್ರದೇಶದಲ್ಲಿ 50% ಕ್ಕಿಂತ ಹೆಚ್ಚಿನ ಹಾನಿಯಾಗಿದ್ದು, ಹಾನಿಯಾದ ಕ್ಷೆÃತ್ರಕ್ಕೆ ಸಣ್ಣ ರೈತರಿಗೆ ರೂ 83.99/- ಕೋಟಿ ಹಾಗೂ ದೊಡ್ಡ ರೈತರಿಗೆ ರೂ 36.08 ಕೋಟಿ ಒಟ್ಟು ರೂ 120.07/- ಕೋಟಿ ಬೆಳೆಹಾನಿ ಪರಿಹಾರ ಅಂದಾಜಿಸಲಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಬೆಳೆಗಳಿಗೆ ಇದುವರೆಗೆ 27,890 ಫಲಾನುಭವಿಗಳಿಗೆ ರೂ 23.34 ಕೋಟಿ ಪರಿಹಾರವನ್ನು ಆರ್.ಟಿ.ಜಿ.ಎಸ್. ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
• ಕಳೆದ ವರ್ಷ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,31,475 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, 1,21,608 ಹೆಕ್ಟರ್ ಪ್ರದೇಶದಲ್ಲಿ 50% ಕ್ಕಿಂತ ಹೆಚ್ಚಿನ ಹಾನಿಯಾಗಿದ್ದು, ಸಣ್ಣ ರೈತರಿಗೆ ರೂ 5,832.56/- ಲಕ್ಷ, ದೊಡ್ಡ ರೈತರಿಗೆ ರೂ 2,238.02/- ಲಕ್ಷ, ಒಟ್ಟು ರೂ 8,070.58/- ಲಕ್ಷ ಪರಿಹಾರ ಅಂದಾಜಿಸಲಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈಗಾಗಲೇ ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗುತ್ತಿದ್ದು, ಇದುವರೆಗೂ 43,865 ಫಲಾನುಭವಿಗಳಿಗೆ ರೂ 29.70/- ಕೋಟಿ ಪರಿಹಾರವನ್ನು ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತಾರೆ.
• ಕೇಂದ್ರ ಸರ್ಕಾರದ ರಾಷ್ಟಿçÃಯ ಕೃತಕ ಗರ್ಭದಾರಣೆ ಕಾರ್ಯಕ್ರಮದಡಿ 2019-20ನೇ ಸಾಲಿನಲ್ಲಿ ಗೋ ತಳಿ ಉನ್ನತೀಕರಣದ ಉದ್ದೆÃಶದೊಂದಿಗೆ ಕೃತಕ ಗರ್ಭಧಾರಣೆ ಕೈಗೊಳ್ಳಲು ಕೊಪ್ಪಳ ಜಿಲ್ಲೆಯು ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ 100 ಗ್ರಾಮ/ ಗುಚ್ಚಗ್ರಾಮಗಳನ್ನು ಆಯ್ಕೆ ಮಾಡಿ ಅಂದಾಜು 60,000 ಕೃತಕ ಗರ್ಭಧಾರಣೆ ಮಾಡಲಾಗುವುದು.
• ರಾಷ್ಟಿçÃಯ ರೋಗ ನಿಯಂತ್ರಣ (ಎನ್.ಎ.ಡಿ.ಸಿ.ಪಿ) ಈ ಕಾರ್ಯಕ್ರಮವು ಭಾರತ ಸರ್ಕಾರದ ನೂತನ ಕಾರ್ಯಕ್ರಮವಾಗಿದ್ದು, ಇದರಡಿ ಜಾನುವಾರು ರೋಗ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಪ್ರಸ್ತುತ ಈ ಕಾರ್ಯಕ್ರಮದಡಿ ದಿನಾಂಕ : 14-10-2019 ರಿಂದ 04-11-2019 ರವರೆಗೆ ಕಾಲು ಬಾಯಿ ರೋಗದ ವಿರುದ್ಧ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅಭಿಯಾನ ಜಾರಿಯಲ್ಲಿದೆ.
• ರೈತ ಸದಸ್ಯರುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆಯಡಿ ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ: 31-03-2019 ಕ್ಕೆ ಒಟ್ಟು 766 ಸಹಕಾರ ಸಂಘಗಳಿದ್ದು, ಅವುಗಳ ಪೈಕಿ 573 ಕಾರ್ಯನಿರತ, 119 ಸ್ಥಗಿತ ಮತ್ತು 74 ಸಮಾಪನೆಗೊಂಡ ಸಹಕಾರ ಸಂಘಗಳಿರುತ್ತವೆ. ಒಟ್ಟು ಕಾರ್ಯನಿರತ 115 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತ ಸದಸ್ಯರುಗಳಿಗೆ 2019-20 ನೇ ಸಾಲಿನಲ್ಲಿ (ದಿನಾಂಕ 30-09-2019 ರವರೆಗೆ) ಶೂನ್ಯ ಬಡ್ಡಿ ದರದಲ್ಲಿ ಒಟ್ಟು 19,976 ಸದಸ್ಯರುಗಳಿಗೆ ರೂ. 8,429.55 ಲಕ್ಷ ಅಲ್ಪಾವಧಿ ಸಾಲ ವಿತರಣೆ ಮಾಡಲಾಗಿದೆ.
• ಅಲ್ಪಾವಧಿ ಸಾಲ ಮನ್ನಾದಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಗೂ ಪಿಕಾರ್ಡ್ ಬ್ಯಾಂಕುಗಳ ಮೂಲಕ ಅಲ್ಪಾವಧಿ ಬೆಳೆಸಾಲ ಪಡೆದು ದಿನಾಂಕ 10-7-2018 ಕ್ಕೆ ಹೊರಬಾಕಿ ಇದ್ದಂತಹ ರೈತರ ಅಲ್ಪಾವಧಿ ಸಾಲವನ್ನು ಸರ್ಕಾರವು ಮನ್ನಾ ಮಾಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 23,976 ರೈತರು ರೂ.104.25 ಕೋಟಿ ಸಾಲ ಮನ್ನಾ ಪ್ರಯೋಜನ ಪಡೆಯುವರು. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ 20,048 ರೈತ ಸದಸ್ಯರುಗಳಿಗೆ ರೂ.80.46 ಕೋಟಿ ಸಾಲಮನ್ನಾ ಮೊತ್ತವು ಬಿಡುಗಡೆಯಾಗಿರುತ್ತದೆ.
• ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿವರದನ್ವಯ 2018-19ನೇ ಸಾಲಿನಲ್ಲಿ ನೇಮಕಾತಿಗಾಗಿ ಅಧಿಸೂಚಿಸಲಾದ 6 ರಿಂದ 8 ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 600 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಿ.ಇ.ಟಿ ಪರೀಕ್ಷೆ ಮುಕ್ತಾಯಗೊಂಡಿದೆ ಫಲಿತಾಂಶ ಪ್ರಕಟಗೊಂಡಿದ್ದು, ದಾಖಲಾತಿ ಪರಿಶೀಲನೆ ಪ್ರಕ್ರಿಯೆಯನ್ನು ಕೊಡಲೇ ಪ್ರಾರಂಭಿಸಲಾಗುತ್ತದೆ.
• ಕೊಪ್ಪಳ ಜಿಲ್ಲೆಗೆ ಅಲ್ಪಸಂಖ್ಯಾತರ ಸಮುದಾಯದವರಿಗೆ ಬಿದಾಯಿ ಯೋಜನೆಯಡಿ 2019-20ನೇ ಸಾಲಿಗಾಗಿ ಮುಸ್ಲಿಂ ಫಲಾನುಭವಿಗಳಿಗೆ ರೂ. 77.00 ಲಕ್ಷ ಹಾಗೂ ಕ್ರಿಶ್ಚಿಯನ್ ಫಲಾನುಭವಿಗಳಿಗೆ 4.00 ಲಕ್ಷ ಬಿಡುಗಡೆಯಾಗಿದ್ದು, 162 ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಿದೆ.
• ಮಾನ್ಯ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ 2018-19 ನೇ ಸಾಲಿಗಾಗಿ ಮಂಜೂರಾಗಿದ್ದ ಒಟ್ಟು 1,825.00 ಲಕ್ಷ ಅನುದಾನದಲ್ಲಿ 2018-19 ನೇ ಸಾಲಿನಲ್ಲಿ 550 ಲಕ್ಷ ಬಿಡುಗಡೆಯಾಗಿದ್ದು, ಬಾಕಿ ಅನುದಾನದಲ್ಲಿ ರೂ.750.00 ಲಕ್ಷ 2019-20ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 2019-20 ನೇ ಸಾಲಿಗಾಗಿ 1 ಸಮುದಾಯಭವನ ಹಾಗೂ 10 ಚರ್ಚ್ಗಳ ನವೀಕರಣಕ್ಕಾಗಿ ಒಟ್ಟು ರೂ. 64.38 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.
ಈ ಸುಸಂದರ್ಭದಲ್ಲಿ, ಕನ್ನಡ ನಾಡು ನುಡಿ ಬಗ್ಗೆ ಮಾನ್ಯ ಕುವೆಂಪುರವರು ರಚಿಸಿದ “ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಗೀತೆಯನ್ನು ನೆನಪಿಸುತ್ತಾ, ಕನ್ನಡ ರಾಜ್ಯೊÃತ್ಸವದ ಈ ಸಂದರ್ಭದಲ್ಲಿ ನಾನು ತಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಕೋರುತ್ತಾ, ನನ್ನ ಭಾಷಣವನ್ನು ಮುಗಿಸುತ್ತೆÃನೆ.
~: ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಕರ್ನಾಟಕ :~