KOPPAL VARTHE
unread,Dec 26, 2020, 7:55:19 AM12/26/20Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to Somareddy Alavandi, nadanudi, infokoppal, lokadarshankpl, navodayadaily, enknbel, tspatil1001, editorsamarthavani, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, sudinakpl, Mounesh Badiger, eshanyatimes, Dist. Information Officer KOPPAL, varthabha...@googlegroups.com, suvarnagirikannada, Koppal News, nagarikkpl, Koppal Varthe, Dattu Kammar, murugesh b s, naabhiraj, ybjudi123, Rajasa Mullar, uv koppal, Bellary Belagayithu, kplskpaper, kakarlamallikarjun, pppgvt, janakoogu, Basavaraj Karugal, nugadoni, airhptco...@gmail.com, vasudev vasu, Kuber Majjigi, mahadevgouda patil, venkatesh kulkarni, Vartha Loka, Akshay BS, Raju Br, Information Department, shivakumar k, raichurvani, shukraj gangavati, suddimoola, suddimoola24, Shivakumar Pattar, Kranti KD, Basavaraj Basavaraj, sangameshchilly, basavaraja karkihalli, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, Ravi.sa...@gmail.com, bvenka...@yahoo.in, Manjunath Gondbal, Anmol times3, rbadiger2, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, sharanappa kumbar, munjaneex...@gmail.com, koppal...@gmail.com, hinduka...@gmail.com, hndoddamani, praja...@gmail.com, sureshgut...@gmail.com, benki...@gmail.com, gavis...@gmail.com, gsg...@gmail.com, shivakuma...@gmail.com, rhn...@gmail.com, edi...@vartamitra.com, pannan...@gmail.com, koppa...@gmail.com, fag...@gmail.com, hkne...@gmail.com, aruna...@gmail.com, i.san...@gmail.com, mg.g...@gmail.com, gurur...@gmail.com, kasimn...@gmail.com, lokawa...@gmail.com, kknew...@gmail.com, deshado...@gmail.com, pushka...@gmail.com, agastyav...@gmai.com, vlkpres...@gmail.com, siri...@gmail.com, karanja...@yahoo.com, karanjex...@yahoo.com, dotcom...@gmail.com, swatantra...@gmail.com
ಡಿ. 27ರಂದು ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ
ಮಸ್ಟರಿಂಗ್ ಕಾರ್ಯ ಮುಗಿಸಿ ಮತಗಟ್ಟೆಗಳತ್ತ ತೆರಳಿದ ಮತಗಟ್ಟೆ ಸಿಬ್ಬಂದಿ
ಕೊಪ್ಪಳ, ಡಿ.26 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಡಿಸೆಂಬರ್. 26ರಂದು ಎರಡನೇ ಹಂತದಲ್ಲಿ ಮತದಾನ ಜರುಗಲಿದ್ದು, ವಿವಿಧ ಭೂತ್‌ಗಳಿಗೆ ನೇಮಕಗೊಂಡ ಸಿಬ್ಬಂದಿಗಳಿಗೆ ಮತಗಟ್ಟೆಯ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿಯಲ್ಲಿ ಶನಿವಾರದಂದು (ಡಿ.26) ಅಚ್ಚುಕಟ್ಟಾಗಿ ನೆರವೇರಿತು.
ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮಸ್ಟರಿಂಗ್ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಅಲ್ಲದೇ ಮತಗಟ್ಟೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಹಾಗೂ ಮತಗಟ್ಟೆಯ ಸಾಮಾಗ್ರಿಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ, ಜಾಗೃತಿಯಿಂದ ಚುನಾವಣಾ ಕಾರ್ಯವನ್ನು ನಿರ್ವಹಿಸಬೇಕು. ಚುನಾವಣೆಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ರಾಜ್ಯ ಚುನಾವಣಾ ಆಯೋಗದಿಂದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಕೊಪ್ಪಳ ಜಿಲ್ಲೆಯ ಎರಡನೇ ಹಂತದ ಚುನಾವಣೆ ನಡೆಯುವ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ 76 ಗ್ರಾಮ ಪಂಚಾಯತಿಗಳ 645 ಮತಗಟ್ಟೆಗಳಿಗೆ ನಿಯೋಜನೆಗೊಂಡ 710 ಪ್ರಿಸೈಡಿಂಗ್ ಅಧಿಕಾರಿಗಳು, 780 ಮೊದಲನೇ ಪೋಲಿಂಗ್ ಅಧಿಕಾರಿಗಳು, 858 ಎರಡನೇ ಪೋಲಿಂಗ್ ಅಧಿಕಾರಿಗಳು, 944 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 645 ಡಿ-ದರ್ಜೆ ನೌಕರರು ಸೇರಿದಂತೆ ಒಟ್ಟು 3,938 ಸಿಬ್ಬಂದಿಗಳು ಮತಗಟ್ಟೆಯ ಸಾಮಾಗ್ರಿಗಳ ಸಮೇತರಾಗಿ ಬಸ್ ಮೂಲಕವಾಗಿ ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು.
ತಾಲ್ಲೂಕುವಾರು ವಿವರ:
ಎರಡನೇ ಹಂತದ ಚುಣಾವಣೆ ನಡೆಯುವ ಗಂಗಾವತಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ 159 ಮತಗಟ್ಟೆಗಳಿಗೆ 175 ಪ್ರಿಸೈಡಿಂಗ್ ಅಧಿಕಾರಿಗಳು, 192 ಮೊದಲನೇ ಪೋಲಿಂಗ್ ಅಧಿಕಾರಿಗಳು, 212 ಎರಡನೇ ಪೋಲಿಂಗ್ ಅಧಿಕಾರಿಗಳು, 233 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 159 ಡಿ-ದರ್ಜೆ ನೌಕರರು ಒಟ್ಟು 921 ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳಿದರು. 2 ಸೆಕ್ಟರ್ ಅಧಿಕಾರಿಗಳೂ ಕೂಡಾ ಕಾರ್ಯಪ್ರವೃತ್ತರಾದರು.
ಕಾರಟಗಿ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳ 97 ಮತಗಟ್ಟೆಗಳಿಗೆ 107 ಪ್ರಿಸೈಡಿಂಗ್ ಅಧಿಕಾರಿಗಳು, 117 ಮೊದಲನೇ ಪೋಲಿಂಗ್ ಅಧಿಕಾರಿಗಳು, 129 ಎರಡನೇ ಪೋಲಿಂಗ್ ಅಧಿಕಾರಿಗಳು, 142 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 97 ಡಿ-ದರ್ಜೆ ನೌಕರರು ಒಟ್ಟು 592 ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯುಕ್ತಿಗೊಂಡರು. 11 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕನಕಗಿರಿ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳ 89 ಮತಗಟ್ಟೆಗಳಿಗೆ 98 ಪ್ರಿಸೈಡಿಂಗ್ ಅಧಿಕಾರಿಗಳು, 108 ಮೊದಲನೇ ಪೋಲಿಂಗ್ ಅಧಿಕಾರಿಗಳು, 118 ಎರಡನೇ ಪೋಲಿಂಗ್ ಅಧಿಕಾರಿಗಳು, 130 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 89 ಡಿ-ದರ್ಜೆ ನೌಕರರು ಒಟ್ಟು 543 ಸಿಬ್ಬಂದಿಗಳು ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ಅಲ್ಲದೇ 12 ಸೆಕ್ಟರ್ ಅಧಿಕಾರಿಗಳು ನಿಯೋಜನೆಗೊಂಡರು.
ಕುಷ್ಟಗಿ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ 300 ಮತಗಟ್ಟೆಗಳಿಗೆ 330 ಪ್ರಿಸೈಡಿಂಗ್ ಅಧಿಕಾರಿಗಳು, 363 ಮೊದಲನೇ ಪೋಲಿಂಗ್ ಅಧಿಕಾರಿಗಳು, 399 ಎರಡನೇ ಪೋಲಿಂಗ್ ಅಧಿಕಾರಿಗಳು, 439 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 300 ಡಿ-ದರ್ಜೆ ನೌಕರರು ಒಟ್ಟು 1,832 ಸಿಬ್ಬಂದಿಗಳು ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ಅಲ್ಲದೇ 40 ಸೆಕ್ಟರ್ ಅಧಿಕಾರಿಗಳು ನಿಯೋಜನೆಗೊಂಡರು.
ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್;
ಎರಡನೇ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಯುವ ಮತಗಟ್ಟೆಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ ಒಟ್ಟು 645 ಮತಗಟ್ಟೆಗಳಿಗೆ 3 ಡಿಎಸ್ಪಿ, 10 ಜನ ಸಿಪಿಐ, 20 ಜನ ಪಿಎಸ್‌ಐ, 41 ಜನ ಎಎಸ್‌ಐ, 422 ಜನ ಮುಖ್ಯ ಪೇದೆಗಳು ಹಾಗೂ ಪೊಲೀಸ್ ಪೇದೆಗಳು ಮತ್ತು 290 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 786 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ 8 ಡಿಎಆರ್ ತುಕಡಿ ಹಾಗೂ 3 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾಹಿತಿ ನೀಡಿದರು.
ತಾಲ್ಲೂಕುವಾರು ವಿವರ ;
ಈ ಪೈಕಿ ಗಂಗಾವತಿ ತಾಲ್ಲೂಕಿನ 159 ಮತಗಟ್ಟೆಗಳಿಗೆ 1 ಡಿಎಸ್ಪಿ, 3 ಜನ ಸಿಪಿಐ, 6 ಜನ ಪಿಎಸ್‌ಐ, 10 ಜನ ಎಎಸ್‌ಐ, 112 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 78 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 210 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 1 ಕೆ.ಎಸ್.ಆರ್.ಪಿ ಹಾಗೂ 2 ಡಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ.
ಕನಕಗಿರಿ ತಾಲ್ಲೂಕಿನ 89 ಮತಗಟ್ಟೆಗಳಿಗೆ 1 ಡಿಎಸ್ಪಿ, 2 ಜನ ಸಿಪಿಐ, 4 ಜನ ಪಿಎಸ್‌ಐ, 7 ಜನ ಎಎಸ್‌ಐ, 43 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 24 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 81 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.1 ಕೆ.ಎಸ್.ಆರ್.ಪಿ ಹಾಗೂ 1 ಡಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ.
ಕಾರಟಗಿ ತಾಲ್ಲೂಕಿನ 97 ಮತಗಟ್ಟೆಗಳಿಗೆ 2 ಜನ ಸಿಪಿಐ, 4 ಜನ ಪಿಎಸ್‌ಐ, 7 ಜನ ಎಎಸ್‌ಐ, 63 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 45 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 121 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 1 ಡಿಎಆರ್ ತುಕುಡಿಯನ್ನು ನಿಯೋಜಿಸಲಾಗಿದೆ.
ಕುಷ್ಟಗಿ ತಾಲ್ಲೂಕಿನ 300 ಮತಗಟ್ಟೆಗಳಿಗೆ 1 ಡಿಎಸ್ಪಿ, 3 ಜನ ಸಿಪಿಐ, 6 ಜನ ಪಿಎಸ್‌ಐ, 17 ಜನ ಎಎಸ್‌ಐ, 204 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 143 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 374 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ 1 ಕೆಎಸ್ಆರ್.ಪಿ ಹಾಗೂ 2 ಡಿಎಆರ್ ತುಕುಡಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದರು.
(ಫೋಟೋ ಕಳುಹಿಸಿದೆ)
===========