KOPPAL VARTHE
unread,Jul 19, 2019, 7:44:54 AM7/19/19Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani
ಪತ್ರಿಕಾ ಪ್ರಕಟಣೆ
ಶುದ್ಧ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಎಲ್ಲರೂ ಕೈಜೋಡಿಸಿ : ಪಿ. ಸುನೀಲ್ ಕುಮಾರ್
ಕೊಪ್ಪಳ ಜು. ೧೯ (ಕರ್ನಾಟಕ ವಾರ್ತೆ): ಶುಧ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಎಲ್ಲರೂ ಕೈ ಜೋಡಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಂಚಾಯತ್‌ರಾಜ್ ಇಂಜಿನೀಯರಿಂಗ್ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಇವರುಗಳು ತಮ್ಮ ವ್ಯಾಪ್ತಿಯ ಕೆರೆಗಳ ಹೂಳನ್ನು ಎತ್ತುವುದರಿಂದ ನೀರಿನ ಸಂಗ್ರಹತೆಗೆ ಅನುಕೂಲವಾಗುತ್ತದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆಯವರು ರೈತರ ಹೊಲಗಳಲ್ಲಿ ನೀರು ಸಂರಕ್ಷಣಾ ಕಾಮಗಾರಿಗಳನ್ನು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ತಮ್ಮ ವ್ಯಾಪ್ತಿಯ ಬೋರವೆಲ್‌ಗಳಿಗೆ ಮರು ಪೂರಣ ಘಟಕಗಳ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಜಲಾಮೃತ ಯೋಜನೆಯ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಜಲಾಮೃತ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮತ್ತು ಪ್ರಮುಖ ಅನುಷ್ಠಾನ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಲಾಮೃತ-೨೦೧೯ ಕಾರ್ಯಕ್ರಮವು ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಪ್ರಜ್ಞಾವಂತ ಬಳಕೆ ಹಾಗೂ ಹಸಿರುಕರಣಕ್ಕಾಗಿ “ಜಲಾಮೃತ” ಎಂಬ ಸಮುದಾಯ ಚಾಲಿತ ಸಮಗ್ರ ಚಳುವಳಿಯೊಂದನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಅದರಂತೆ ೨೦೧೯ನೇ ವರ್ಷವನ್ನು ಜಲ ವರ್ಷವೆಂದು ಘೋಷಿಸಲಾಗಿದ್ದು, ಜಲ ವರ್ಷದ ಆಚರಣೆಯನ್ನು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವಿವಿಧ ಚಟುವಟಿಕೆಗಳ ಮುಖಾಂತರ ಹಾಗೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು ಎಲ್ಲಾ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಇದರ ನಿಮಿತ್ಯ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಗ್ರಾಮಸ್ಥರು ಜೊತೆಗೂಡಿ ಶುದ್ಧ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಮಾಡೋಣವೆಂದು ಕರೆ ನೀಡಿದರು.
ಜಲಾಮೃತಯೋಜನೆಯ ಮಾರ್ಗಸೂಚಿಯನ್ವಯ ಕೆರೆಗಳ ಹೂಳೆತ್ತುವ ಕಾಮಗಾರಿ, ಹೊಸ ಕೆರೆ ನಿರ್ಮಾಣ, ಚೆಕ್‌ಡ್ಯಾಂ, ಗೋ-ಕಟ್ಟೆಗಳನ್ನು ನಿರ್ಮಾಣ ಮಾಡಲು ಸೂಚಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಮತ್ತು ಮಳೆಯ ಪ್ರಮಾಣವನ್ನು ಹೆಚ್ಚಿಸಲು ಗೋಮಾಳಾ, ಸ್ಮಶಾನ, ಹುಲ್ಲುಗಾವಲು, ರಸ್ತೆ ಬದಿ ನೀರಿನ ಕಾಲುವೆಗಳ ಅಕ್ಕ-ಪಕ್ಕ, ಶಾಲೆ-ಕಾಲೇಜುಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಕಛೇರಿಗಳು ಮತ್ತು ಮುಂತಾದ ಸ್ಥಳಗಳಲ್ಲಿ ಅರಣ್ಯಿÃಕರಣ ಮಾಡಲು ಸೂಚಿಸಿದರು.
ನೀರು ಅಮೃತಕ್ಕೂ ಮಿಗಿಲು, ನೀರು ಪ್ರಕೃತಿ ನೀಡಿರುವ ವರ. ಬೇಸಿಗೆಯ ದಿನಗಳಲ್ಲಿ ನೀರು ನಮ್ಮ ಕೈಜಾರಿ ಹೋಗದಂತೆ ಸಂರಕ್ಷಿಸುವುದು ಅವಶ್ಯಕ. ಇದು ಮನ ಪರಿವರ್ತನೆಯ ಕಾಲ. ನಮ್ಮ ಮನಸ್ಸು ಪರಿವರ್ತನೆಯಾದರೆ ಮಾತ್ರ ಈ ಪರಿಸ್ಥಿತಿ ಬದಲಾಗಲು ಸಾಧ್ಯವೆಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ರಘುನಂದನ್ ಮೂರ್ತಿ, ಉಪ ಕಾರ್ಯದರ್ಶಿ ಎನ್.ಕೆ.ತೊರವಿ, ಯೋಜನಾ ನಿರ್ದೇಶಕರು ರವಿ ಬಸರಿಹಳ್ಳಿ, ಪ್ರೊÃಬೇಷನರಿ ಅಧಿಕಾರಿ ನೇಹಾ ಜೈನ್, ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅನುಷ್ಠಾನ ಇಲಾಖೆ ಅಧಿಕಾರಿಗಳು ಮತ್ತು ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಎಲ್ಲಾ ಸಂಯೋಜಕರು ಮತ್ತು ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
======
ಸಹಕಾರ ಸಂಘ, ಸಹಕಾರ ಬ್ಯಾಂಕುಗಳಿಂದ ರೈತರಿಗೆ ಸೂಚನೆ
ಕೊಪ್ಪಳ ಜು. ೧೯ (ಕರ್ನಾಟಕ ವಾರ್ತೆ): ರಾಜ್ಯದ ರೈತರು ಸಹಕಾರ ಸಂಘ ಮತ್ತು ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ೨೦೧೮ ಜುಲೈ ೧೦ ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಟ ೧ ಲಕ್ಷದವರೆಗೆ ಸಾಲದ ಮೊತ್ತವನ್ನು ಮನ್ನಾ ಮಾಡುವ ಯೋಜನೆಯು ೨೦೧೯ ಜುಲೈ ೧೦ ಕ್ಕೆ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ಕೆಸಿಸಿ ಸಾಲ ಪಡೆದ ರೈತ ಸದಸ್ಯರುಗಳ ಸಾಲಗಳು ೨೦೧೮ ಜುಲೈ ೧೦ ಕ್ಕೆ ಸುಸ್ತಿಯಾಗಿರುವ ಹಾಗೂ ೨೦೧೮ ಜುಲೈ ೧೦ ಕ್ಕೆ ಸಾಲವು ಚಾಲ್ತಿ ಇದ್ದು, ೧ ಲಕ್ಷಗಳಿಗಿಂತ ಹೆಚ್ಚಿನ ಅಸಲನ್ನು ರೈತರು ಇದುವರೆಗೆ ಗಡುವು ದಿನಾಂಕದೊಳಗೆ ಪಾವತಿಸದ ರೈತರು ಸಾಲ ಪಡೆದ ದಿನಾಂಕದಿಂದ ಮರುಪಾವತಿ ದಿನಾಂಕದವರೆಗೆ ಸಂಪೂರ್ಣ ಬಡ್ಡಿ ಹಾಗೂ ೧ ಲಕ್ಷಗಳಿಗಿಂತ ಹೆಚ್ಚಿನ ಅಸಲನ್ನು ಜುಲೈ ೩೧ ರೊಳಗೆ ಮರುಪಾವತಿಸಿ ೧ ಲಕ್ಷಗಳವರೆಗಿನ ಸಾಲಮನ್ನಾ ಸೌಲಭ್ಯ ಪಡೆಯಬಹುದಗಿದೆ ಕಾರಣ ಎಲ್ಲಾ ಅರ್ಹ ರೈತ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
೩೫ ನೇ ರಾಜ್ಯ ಪತ್ರಕರ್ತರ ಸಮ್ಮೆÃಳನ: ಜು. ೨೦ ರಂದು ಪೂರ್ವಭಾವಿ ಸಭೆ
ಕೊಪ್ಪಳ ಜು. ೧೯ (ಕರ್ನಾಟಕ ವಾರ್ತೆ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಕೊಪ್ಪಳ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ೩೫ನೇ ರಾಜ್ಯ ಪತ್ರಕರ್ತರ ಸಮ್ಮೆÃಳನ ಕುರಿತು ಪೂರ್ವಭಾವಿ ಸಭೆಯನ್ನು ಜುಲೈ. ೨೦ ರಂದು ಮಧ್ಯಾಹ್ನ ೦೨-೩೦ ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸುವರು. ಸಂಸದ ಸಂಗಣ್ಣ ಕರಡಿ ಸಾಧಕ ಪತ್ರಕರ್ತರಿಗೆ ಸನ್ಮಾನಿಸುವರು. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕೆ.ಯು.ಡಬ್ಲೂö್ಯ.ಜೆ. ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರುರವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಜಿಲ್ಲಾ ವಾರ್ತಾಧಿಕಾರಿ ಧನಂಜಯ ಬಿ., ಕೆ.ಯು.ಡಬ್ಲೂö್ಯ.ಜೆ. ರಾಜ್ಯ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್ ಹಾಗೂ ಪುಂಡಲೀಕ ಬಾಳೋಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿಗಳಾದ ಸಂಜೀವರಾವ್ ಕುಲಕರ್ಣಿ ಹಾಗೂ ಬಂಗ್ಲೆ ಮಲ್ಲಿಕಾರ್ಜುನ, ಖಚಾಂಚಿ ಡಾ. ಕೆ.ಉಮೇಶ್ವರ ಪಾಲ್ಗೊಳ್ಳುವರು.
ದೆಹಲಿ ಐ.ಎಫ್.ಡಬ್ಲೂö್ಯ.ಜೆ. ಸದಸ್ಯ ವಿ.ಆರ್. ತಾಳಿಕೋಟಿ, ಕೆ.ಯು.ಡಬ್ಲೂö್ಯ.ಜೆ. ಜಿಲ್ಲಾಧ್ಯಕ್ಷ ಎಂ ಸಾದಿಕ್ ಅಲಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್. ಗೋನಾಳ, ರಾಜ್ಯ ನಾಮಕರಣ ಸದಸ್ಯ ಹರೀಶ ಹೆಚ್.ಎಸ್., ಸಮ್ಮೆÃಳನದ ಕಾರ್ಯನಿರ್ವಹಣಾ ಉಪಸಮಿತಿ ಅಧ್ಯಕ್ಷ ಸಿರಾಜ್ ಬಿಸರಳ್ಳಿ, ಪತ್ರಿಕಾ ಭವನ ನಿರ್ಮಾಣ ಉಪಸಮಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಸೇರಿದಂತೆ ಕೆ.ಯು.ಡಬ್ಲೂö್ಯ.ಜೆ. ಕೊಪ್ಪಳ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಣಿ ಸದಸ್ಯರು, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಹಾಗೂ ಕುಕನೂರ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
======
ತೋಟಗಾರಿಕೆ ಮಹಾವಿದ್ಯಾಲದಲ್ಲಿ ಗುಣಮಟ್ಟ ಭಾಗ್ಯ ತಳಿಯ ನುಗ್ಗೆ ಸಸಿಗಳು ಲಭ್ಯ
ಕೊಪ್ಪಳ ಜು. ೧೯ (ಕರ್ನಾಟಕ ವಾರ್ತೆ): ಮುನಿರಾಬಾದ್ ತೋಟಗಾರಿಗೆ ಮಹಾವಿದ್ಯಾಲದಲ್ಲಿ ಗುಣಮಟ್ಟದ ನುಗ್ಗೆ ಸಸಿಗಳ ಲಭ್ಯವಿರುತ್ತದೆ ಎಂದು ತಿಳಿಸಿಲಾಗಿದೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಮಹಾವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಭಾಗ್ಯ ತಳಿಯ ನುಗ್ಗೆ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು ಪ್ರತಿ ಸಸಿಯು ೧೨ ರೂಪಾಯಿಗಳಿಗೆ ನಿಗದಿಯಾಗಿದ್ದು ಆಸಕ್ತ ರೈತರು ಸಸಿಗಳನ್ನು ಖರೀದಿಸಬಹುದಾಗಿದೆ ಹೆಚ್ಚಿನಮಾಹಿತಿಗಾಗಿ ಮೊ.ಸಂ-೯೭೪೧೬೪೧೮೮೧ ಸಂಪರ್ಕಿಸಿ ಮುನಿರಾಬಾದ್ ಎಂದು ತೋಟಗಾರಿಕೆ ಮಹಾವಿದ್ಯಾಲದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
ಹಿಂದೂಳಿದ ವರ್ಗದ ವಿದ್ಯಾರ್ಥಿಗಳಿಗೆ ಸಹಾಯಧನ : ಅರ್ಜಿ ಆಹ್ವಾನ
ಕೊಪ್ಪಳ ಜು. ೧೯ (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ನಗರದ ಹಿಂದೂಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇ.೭.೨೫ರ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಉದ್ದೆÃಶದಿಂದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಲಾ ೩೦೦೦ ರಂತೆ ೧೫, ಪಿ.ಯು.ಸಿ./ಐ.ಟಿ.ಐ.ಮತ್ತು ಇತರೆ ವೃತ್ತಿಪರತರಗತಿಯ ವಿದ್ಯಾರ್ಥಿಗಳಿಗೆ ತಲಾ೪೫೦೦ ರಂತೆ ೧೦, ಪ್ಯಾರಾ ಮೆಡಿಕಲ್/ಡಿಪ್ಲೊÃಮಾ ವಿದ್ಯಾರ್ಥಿಗಳಿಗೆ ತಲಾ ೪೫೦೦ ರಂತೆ ೧೦, ಬಿ.ಎ/ಬಿ.ಎಸ್.ಸಿ./ಬಿ.ಕಾಂ.ಇತರೆ ವಿದ್ಯಾರ್ಥಿಗಳಿಗೆ ತಲಾ ೬೦೦೦ ರಂತೆ ೧೦, ಬಿ.ಎಡ್/ಬಿ.ಪಿ.ಎಡ್/ಸಿ.ಪಿ.ಎಡ್.ವಿದ್ಯಾರ್ಥಿಗಳಿಗೆ ತಲಾ ೬೦೦೦ ರಂತೆ ೦೪ ವಿದ್ಯಾರ್ಥಿಗಳಿಗೆ, ಎಂ.ಎ/ಎಂ.ಎಸ್.ಸಿ/ಎಂ.ಕಾಂ/ಎಂ.ಎಸ್.ಡಬ್ಲೂ/ಎಂ.ಸಿ.ಐ ವಿದ್ಯಾರ್ಥಿಗಳಿಗೆ ತಲಾ ೧೫೦೦೦ ರಂತೆ ೦೪ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಗುರಿ ಹೊಂದಿದ್ದು, ಆಸಕ್ತ ಅಭ್ಯರ್ಥಿಗಳು ಚಾಲ್ತಿ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಆಧಾರಕಾರ್ಡ, ರೇಷನ್‌ಕಾರ್ಡ, ಚುನಾವಣಾಗುರುತಿನಚೀಟಿ, ಚಾಲ್ತಿ ಸಾಲಿನ ಜಾತಿ ಮತ್ತುಆದಾಯ ಪ್ರಮಾಣ ಪತ್ರ, ಇತ್ತಿÃಚಿನ ಭಾವ೦೨ ಚಿತ್ರದೊಂದಿಗೆ ಜುಲೈ ೩೧ ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಅರ್ಜಿದಾರರು ಈ ಹಿಂದೆ ಈ ಸಹಾಯಧನದ ಸೌಲಭ್ಯಗಳನ್ನು ಪಡೆದಿರಬಾರದು. ಕೊಪ್ಪಳ ನಗರದ ಖಾಯಂ ನಿವಾಸಿಯಾಗಿರಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣ ದಾಖಲಾತಿಗಳನ್ನು ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
ಶಿಶುಕ್ಷÄ (ಅಪ್ರೆಂಟಿಶಿಫ್) ತರಬೇತಿ ಅರ್ಜಿ ಆಹ್ವಾನ
ಕೊಪ್ಪಳ ಜು. ೧೯ (ಕರ್ನಾಟಕ ವಾರ್ತೆ): ಬೆಂಗಳೂರು ಹಿಂದುಸ್ಥಾನ ಏರೋನಾಟಿಕ್ಸ ಲಿಮಿಟೆಡ್ ಸಂಸ್ಥೆಯವರು ಡಿಪ್ಲೊÃಮಾ ಪಾಸಾದ ಅಭ್ಯರ್ಥಿಗಳಿಗೆ ವಿವಿಧ ವೃತ್ತಿಗಳಲ್ಲಿ ಪ್ರಾರಂಭವಾಗಲಿರುವ ಶಿಶುಕ್ಷÄ (ಅಪ್ರೆಂಟಿಶಿಫ್) ತರಬೇತಿಗಾಗಿ ಅರ್ಜಿ ಆಹ್ವಾನಿಸಿದ್ದಾರೆ.
ಡಿಪ್ಲೊÃಮಾ ಪರೀಕ್ಷೆಯನ್ನು ಡಿಪ್ಲೊÃಮಾ ಇನ್ ಏರೋನ್ಯಾಟಿಕಲ್ ಇಂಜೀನಿಯರಿಂಗ್, .ಡಿಪ್ಲೊÃಮಾ ಮೆಕ್ಯಾನಿಕಲ್ ಇಂಜೀನಿಯರಿಂಗ್, ಡಿಪ್ಲೊÃಮಾ ಇನ್ ಎಲೇಕ್ಟಿç್ಟಕಲ್ ಆಂಡ್ ಎಲೇಕ್ಟಾçನಿಕ್ ಇಂಜೀನಿಯರಿಂಗ್, ಡಿಪ್ಲೊÃಮಾ ಇನ್ ಎಲೇಕ್ಟಾçನಿಕ್ ಆಂಡ್ ಕಮ್ಯೂನಿಕೇಷನ್ ಇಂಜೀನಿಯರಿಂಗ್ ೫ ಡಿಪ್ಲೊÃಮಾ ಇನ್ ಸಿವಿಲ್ ಇಂಜೀನಿಯರಿಂಗ್, ಡಿಪ್ಲೊÃಮಾ ಕಂಪ್ಯೂಟರ್ ಸೈನ್ಸ ಆಂಡ್ ಇಂಜೀನಿಯರಿಂಗ್/ಇನ್ ಫಾರಮೇಷನ್ ಸೈನ್ಸ ಆಂಡ್ ಇಂಜೀನಿಯರಿಂಗ್, ಡಿಪ್ಲೊÃಮಾ ಇನ್ ಮೆಟಲರ್ಜಿ, ಡಿಪ್ಲೊÃಮಾ ಇನ್ ಕಮರ್ಷಿಯಲ್ ಪ್ರಾಕ್ಟಿÃಸ್ ವೃತ್ತಿಯಲ್ಲಿ ಉತ್ತಿÃರ್ಣರಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಡಿಪ್ಲೊÃಮಾ ಪರೀಕ್ಷೆಯಲ್ಲಿ ಉತ್ತಿÃರ್ಣಗೊಂಡು ತಾತ್ಕಾಲಿಕ ಡಿಪ್ಲೊÃಮಾ ಪ್ರಮಾಣ ಪತ್ರ ಅಥವಾ ಅಂತಿಮ ಡಿಪ್ಲೊÃಮಾ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸದರಿ ಪ್ರಮಾಣ ಪತ್ರವನ್ನು ಡಿಪ್ಲೊÃಮಾ ಉತ್ತಿÃರ್ಣ ಹೊಂದಿದ ೦೩ ವರ್ಷಗಳ ಒಳಗೆ ಪಡೆದಿರಬೇಕು. ಈಗಾಗಲೇ ಶಿಶುಕ್ಷÄ ತರಬೇತಿ ಪಡೆದಿರುವ ಮತ್ತು ತರಬೇತಿ ಪಡೆಯಲು ನೊಂದಾಯಿಸಿರುವ ಅಭ್ಯರ್ಥಿಗಳು ಹಾಗೂ ೧ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಉದ್ಯೊÃಗ ವಿನಿಮಯ ಕೇಂದ್ರ ಕಛೇರಿಯಲ್ಲಿ ದೊರೆಯುವ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಅಂಗವಿಕಲ ಅಭ್ಯರ್ಥಿಗಳು ಅಂಗವಿಕಲ ಪ್ರಮಾಣ ಪತ್ರ ಹಾಗೂ ಪಾಸಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅಗಸ್ಟ್ ೦೭ ರೊಳಗಾಗಿ ಜಿಲ್ಲಾ ಉದ್ಯೊÃಗ ವಿನಿಮಯ ಕಛೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಉದ್ಯೊÃಗ ವಿನಿಮಯ ಕೇಂದ್ರ ದೂ.ಸಂ ೦೮೫೩೯-೨೨೦೮೫೯ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೊÃಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.