Corrected news 3rd round, January-22.doc

4 views
Skip to first unread message

KOPPAL VARTHE

unread,
Jan 22, 2021, 10:22:38 AM1/22/21
to Somareddy Alavandi, nadanudi, infokoppal, lokadarshankpl, navodayadaily, enknbel, tspatil1001, editorsamarthavani, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, sudinakpl, Mounesh Badiger, eshanyatimes, Dist. Information Officer KOPPAL, varthabha...@googlegroups.com, suvarnagirikannada, Koppal News, nagarikkpl, Koppal Varthe, Dattu Kammar, murugesh b s, naabhiraj, ybjudi123, Rajasa Mullar, uv koppal, Bellary Belagayithu, kplskpaper, kakarlamallikarjun, pppgvt, janakoogu, Basavaraj Karugal, nugadoni, airhptco...@gmail.com, vasudev vasu, Kuber Majjigi, mahadevgouda patil, venkatesh kulkarni, Vartha Loka, Akshay BS, Raju Br, Information Department, shivakumar k, raichurvani, shukraj gangavati, suddimoola, suddimoola24, Shivakumar Pattar, Kranti KD, Basavaraj Basavaraj, sangameshchilly, basavaraja karkihalli, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, Ravi.sa...@gmail.com, bvenka...@yahoo.in, Manjunath Gondbal, Anmol times3, rbadiger2, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, sharanappa kumbar, munjaneex...@gmail.com, koppal...@gmail.com, hinduka...@gmail.com, hndoddamani, praja...@gmail.com, sureshgut...@gmail.com, benki...@gmail.com, gavis...@gmail.com, gsg...@gmail.com, shivakuma...@gmail.com, rhn...@gmail.com, edi...@vartamitra.com, pannan...@gmail.com, koppa...@gmail.com, fag...@gmail.com, hkne...@gmail.com, aruna...@gmail.com, i.san...@gmail.com, mg.g...@gmail.com, gurur...@gmail.com, kasimn...@gmail.com, lokawa...@gmail.com, kknew...@gmail.com, deshado...@gmail.com, pushka...@gmail.com, agastyav...@gmai.com, vlkpres...@gmail.com, siri...@gmail.com, karanja...@yahoo.com, karanjex...@yahoo.com, dotcom...@gmail.com, swatantra...@gmail.com
ಕೃಷಿ ಸಂಜೀವಿನಿ ವಾಹನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯವನ್ನು ಅಳವಡಿಸಿ : ಸಂಗಣ್ಣ ಕರಡಿ
ಕೊಪ್ಪಳ, ಜ.22 (ಕರ್ನಾಟಕ ವಾರ್ತೆ): ಮಣ್ಣು ಪರೀಕ್ಷೆ, ಬೆಳೆಗಳ ರೋಗ ಪತ್ತೆ ಮುಂತಾದ ಉದ್ದೇಶಕ್ಕಾಗಿ ರೈತರಿಗೆ ಅನುಖೂಲ ಮಾಡಿಕೊಡಲು ಜಿಲ್ಲೆಯಲ್ಲಿ ಚಾಲನೆ ನೀಡಿರುವ ಕೃಷಿ ಸಂಜೀವಿನಿ ವಾಹನಗಳಲ್ಲಿ ರೈತರಿಗೆ ಪೂರಕವಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸಂಸದರು ಹಾಗೂ ದಿಶಾ ಸಮಿತಿ ಅಧ್ಯಕ್ಷರಾದ ಸಂಗಣ್ಣ ಕರಡಿ ಅವರು ಸೂಚನೆ ನೀಡಿದರು.
 ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರದಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಜಿಲ್ಲೆಯಲ್ಲಿ ಹೋಬಳಿಗೊಂದರAತೆ 20 ಕೃಷಿ ಸಂಜೀವಿನಿ ವಾಹನಗಳನ್ನು ನೀಡಲಾಗಿದೆ. ಪ್ರಸ್ತುತ ಮಣ್ಣು ಪರೀಕ್ಷೆ, ಬೆಳೆಗಳಿಗೆ ತಗುಲುವ ರೋಗಗಳ ಪತ್ತೆಗೆ ವಾಹನಗಳನ್ನು ಬಳಕೆ ಮಾಡುವ ಉದ್ದೇಶವಿದೆ. ಅದರೊಂದಿಗೆ ರೈತರಿಗೆ ಬೆಳೆ ವಿಮಾ ಯೋಜನೆ, ಕೃಷಿ ಇಲಾಖೆ ಸೌಲಭ್ಯಗಳು ಮುಂತಾದ ಮಾಹಿತಿಯನ್ನು ವಾಹನಗಳ ಮೂಲಕ ರೈತರಿಗೆ ತಲುಪಿಸಿ. ಏಕ ಕಾಲದಲ್ಲಿ ರೈತರಿಗೆ ಅನೇಕ ವಿಷಯಗಳು ತಿಳಿಯಲು ಅನುಕೂಲವಾಗುತ್ತದೆ. ಇದರಿಂದ ವಾಹನಗಳ ಸದುಪಯೋಗವೂ ಆಗುತ್ತದೆ ಎಂದು ಅವರು ಹೇಳಿದರು.
 ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ ಪೂರೈಸುವ ಏಜೆನ್ಸಿ ಅಥವಾ ಮಾರಾಟ ಮಾಡುವ ಅಂಗಡಿ ಪತ್ತೆಯಾದಲ್ಲಿ ಅಂತವರ ವಿರುದ್ಧ ಕಡ್ಡಾಯವಾಗಿ ಕಾನೂನು ಕ್ರಮ ತೆಗೆದುಕೊಂಡು, ಅಂಗಡಿಗಳ ಲೈಸೆನ್ಸ್ಗಳನ್ನು ರದ್ದು ಮಾಡಿ, ಅಗತ್ಯವಿದ್ದಲ್ಲಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಿ. ಮೆಕ್ಕೆ ಜೋಳ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆ ಕಂಡುಬAದಿದ್ದು ಅದರ ನಿಯಂತ್ರಣಕ್ಕೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಭತ್ತದಲ್ಲಿ ಕಾಣಿಸುವ ಕಣೆ ನೊಣದ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 ತೋಟಗಾರಿಕೆ ಬೆಳೆಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಒಂದು ಜಿಲ್ಲೆ ಒಂದು ಬೆಳೆ ಕಾರ್ಯಕ್ರಮದಡಿ ಜಿಲ್ಲೆಯಿಂದ ಪೇರಲ ಹಣ್ಣು ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 700 ರಿಂದ 800 ಎಕರೆ ಪ್ರದೇಶದಲ್ಲಿ ಪೇರಲ ಬೆಳೆ ಬೆಳೆಯಲಾಗುತ್ತದೆ. ಜಿಲ್ಲೆಯ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲು ರೈತರ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಿ. ಉತ್ಪಾದನೆ ಹೆಚ್ಚಾದಂತೆ ಅದನ್ನು ಸಂರಕ್ಷಿಸುವ ಅವಶ್ಯಕತೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲು ಜಿಲ್ಲಾ ಪಂಚಾಯತಿ ಸಿಇಒ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ತೋಟಗಾರಿಕೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
 ಗ್ರಾಮೀಣ ಬ್ಯಾಂಕುಗಳಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ನವರು ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಈ ಹಿಂದೆಯೇ ಸೂಚನೆ ನೀಡಲಾಗಿದೆ. ಆದರೆ ರೈತರಿಂದ ಈ ಕುರಿತು ದೂರುಗಳು ಪದೇ ಪದೇ ಬರುತ್ತಿವೆ. ಆದ್ದರಿಂದ ಇನ್ನುಮುಂದೆ ರೈತರಿಗೆ ಇಂತಹ ಸಮಸ್ಯೆಗಳು ಎದುರಾಗದಂತೆ ಅಗತ್ಯ ಕ್ರಮ ವಹಿಸಬೇಕು. ಹಾಗೂ ಮುದ್ರಾ ಯೋಜನೆಯಡಿ ಸಿಗುವ ಸಾಲ ಸೌಲಭ್ಯದ ಬಗ್ಗೆ ಪೋಸ್ಟರ್‌ಗಳ ಮೂಲಕ ಪ್ರಚಾರ ಮಾಡಬೇಕು. ಸಾಲಮೇಳಗಳನ್ನು ಆಯೋಜಿಸಬೇಕು ಹಾಗೂ ಜಿಲ್ಲೆಯಲ್ಲಿ ಇದುವರೆಗೂ ಮುದ್ರಾ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿಯನ್ನು ಒದಗಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
 ಬುಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮುಂಡರಗಿ ಮತ್ತು 43 ಹಳ್ಳಿಗಳ ಕಾಮಗಾರಿಯಲ್ಲಿ ಅಕ್ರಮ ಕಂಡುಬAದಿದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಲೋಕಾಯುಕ್ತಕ್ಕೆ ದೂರು ನೀಡುವಂತೆ ನಿರ್ದೇಶನ ನೀಡಿದ್ದರು. ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ. ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರದಿಂದ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಾರ್ವಜನಿಕರಿಂದ ಹಾನಿಯಾದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರಿಗೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂಬುದನ್ನು ಮನವರಿಕೆ ಮಾಡಿ. ಹಾನಿಯದ ಪೈಪ್‌ಲೈನ್‌ಗಳ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದರು.
 ಬೇಸಿಗೆ ಆರಂಭವಾಗುತ್ತಿದ್ದು ಮುಂದಿನ ದಿನಗಳಲ್ಲಿ ಹಸುಗಳನ್ನು ಸಾಕಲು ರೈತರಿಗೆ ತೋಮದರೆಯಾಗಬಹುದು. ಅದಕ್ಕಾಗಿ ಪ್ರತಿ ತಾಲ್ಲೂಕಿಗೆ ಎರಡು ಗೋಶಾಲೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಗೋಶಾಲೆ ಸ್ಥಾಪಿಸಲು ನಿವೇಶನಗಳ ಗುರುತಿಸುವಿಕೆಗೆ ಕ್ರಮ ಕೈಗೊಳ್ಳಿ. ಜಿಲ್ಲೆಯಲ್ಲಿ ಈಗಾಗಲೇ ತೋಟಗಾರಿಕೆ ಮಹಾವಿದ್ಯಾಲಯವಿದೆ ಅದರಂತೆ ಪಶುವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ಯೋಜನೆಯಿದೆ. ಇದಕ್ಕಾಗಿ ಇಲಾಖೆಯ ಉಪನಿರ್ದೇಶಕರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅವರು ಹೇಳಿದರು.
 ಶಿಕ್ಷಣ ಇಲಾಖೆಯ ಪ್ರಮುಖ ಕಾರ್ಯಕ್ರಮವಾದ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಕೆಯಾಗುತ್ತಿರುವ ಕುರಿತು ದೂರುಗಳು ಕೇಳಿ ಬಂದಿತ್ತು. ಈ ಬಗ್ಗೆ ಅಕ್ಷರ ದಾಸೋಹ ಅಧಿಕಾರಿ ನೀಡಿರುವ ಉತ್ತರ ಸಮರ್ಪಕವಾಗಿಲ್ಲ. ಆದರೆ ಇನ್ನುಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು. ವಿದ್ಯಾರ್ಥಿಗಳಿಗೆ ಆರೋಗ್ಯಕರ, ಗುಣಮಟ್ಟದ ಆಹಾರವನ್ನು ನೀಡಬೇಕಾದ್ದು ಇಲಾಖೆಯ ಕರ್ತವ್ಯ. ಅದನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ ಎಂದು ಅವರು ಅಧಿಕಾರಿಗೆ ಸೂಚನೆ ನೀಡಿದರು.
 ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಸರ್ವಿಸ್ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಅವುಗಳ ದುರಸ್ಥಿಗೆ ಶೀಘ್ರ ಕ್ರಮ ಕೈಗೊಳ್ಳಿ. ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬಗ್ಗೆ ಜಂಟಿ ಕೈಗಾರಿಕಾ ನಿರ್ದೇಶಕರು ಪರಿಶೀಲಿಸುತ್ತಿರಬೇಕು ಎಂದು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಲಸಿಕೆ ಪಡೆದ ಯಾರಲ್ಲೂ ಗಂಭೀರ ಪರಿಣಾಮಗಳಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
 ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ರಘುನಂದನ್ ಮೂರ್ತಿ, ಉಪಕಾರ್ಯದರ್ಶಿ ಶರಣಬಸವರಾಜ ಸೇರಿದಂತೆ ಸಮಿತಿಯ ನಾಮ ನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ.)
===============

 
3rd round News & Photos, January-22.doc
Reply all
Reply to author
Forward
0 new messages