ಸ್ವಾತಂತ್ರ್ಯ ದಿನಾಚರಣೆ ವಿಶೇಷ ಲೇಖನ

1,491 views
Skip to first unread message

varthabha...@gmail.com

unread,
Aug 14, 2016, 7:33:55 AM8/14/16
to varthabha...@googlegroups.com, kakarlamallikarjun, thukar...@hotmail.com, siri. ayachit, suddimoola24, hdhallikerikpl, lokadarshankpl, Information Department, infokoppal, siraj bisaralli, zake...@gmail.com, navodayadaily, somareddykpl, rajasabairreporter, Gangadhar Bandihal, Mounesh Badiger, samarthavani, raichurvani, tippanagouda malipatil, nagarikkpl, nadanudi, ddinfo glb, Koppal News, nabhiraj dastenavar, sudinakpl, suvarnagirikannada, enknbel, basavara...@gmail.com, Santosh Patil, Basavaraj Karugal, nugadoni, janakoogu, airfm hospet, Raviraj Nayak, PRAJAVANI KOPPALA, murugesh b s, ybjudi123, Bellary Belagayithu, eshanyatimes, editorsamarthavani, thukaramraobv, Anita, somareddykpl, Dy. Director Belagavi, hasi...@gmail.com, Mandyavartha Bhavan, kplskpaper, kitturkarnatakagadag, SHARANAPPA Bachlapur, pppgvt, koppalka...@gmail.com

ಭಾರತದ ಸ್ವಾತಂತ್ರ್ಯ ಚಳಿವಳಿ ನೆನಪುಗಳು
*****""*******
ಕೊಪ್ಪಳ ಆ,14.(ಕ.ವಾ)- 1947ನೇ ಆಗಸ್ಟ್ 15 ರಂದು ಭಾರದ ದೇಶ ಸ್ವಾತಂತ್ರ್ಯ ಪಡೆಯಿತು ಬಂಧಿಯಾಗಿದ್ದ ಭಾರತ ಮಾತೆಯು ದಾಸ್ಯದಿಂದ ಬಿಡುಗಡೆಯಾದ ದಿನ 1947 ಆಗಸ್ಟ್ 14 ರ ಮಧ್ಯರಾತ್ರಿ ಜವಾಹರ್ ಲಾಲ್ ನೆಹರೂ ಅವರು ಭಾರತೀಯ ರಾಜ್ಯಾಂಗವನ್ನು ಕುರಿತು ಭವಿಷ್ಯದೊಂದಿಗೆ ಅನುಸಂದಾನ ಎನ್ನುವ ತಮ್ಮ ಐತಿಹಾಸಿಕ ಭಾಷಣದಲ್ಲಿ ಮಧ್ಯರಾತ್ರಿಯ ಗಂಟೆ ಬಾರಿಸುತ್ತಲೇ ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ ಭಾರತ ಎಚ್ಜತ್ತು ಜೀವ ತಳೆಯುತ್ತದೆ ಸ್ವತಂತ್ರವಾಗುತ್ತದೆ ಇತಿಹಾಸದಲ್ಲಿ ಎಂದಾದರೂ ಒಮ್ಮೆ ಬರುವ ಮಹತ್ವದ ಘಳಿಗೆಯೊಂದುಂಟು ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪಾದಾರ್ಪಣೆ ಮಾಡುತ್ತೇವೆ ಒಂದು ಯುಗ ಮುಕ್ತಾಯವಾಗುತ್ತದೆ ದೀರ್ಘಕಾಲದಿಂದ ಅದುಮಿ ಹಿಡಿಯಲ್ಪಟ್ಟ ರಾಷ್ಟ್ರವೊಂದರ ಚೇತನ ನುಡಿಯ ತೊಡಗುತ್ತದೆ ಎಂದು ಹೇಳಿದ ಮಾತು ಇಂದಿಗೂ ಅನುರಣಿಸುತ್ತಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದವು ಮಹಾತ್ಮ ಗಾಂಧೀಜಿಯವರು ಕೊಟ್ಟ ಸ್ವಾತಂತ್ರ್ಯ ಹೋರಾಟದ ಕೊನೆಯ ಕರೆ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಮಾಡು ಇಲ್ಲವೇ ಮಡಿಯಿರಿ
ಈ ಸ್ವಾತಂತ್ರ್ಯ ಕಹಳೆಯ ಕರೆ ದೇಶದಲ್ಲೇ ದೊಡ್ಡ ಆಂದೋಲನಕ್ಕೆ ಕಾರಣವಾಯಿತು. ಸುಂಟರಗಾಳಿ ಬೀಸಿತು. ದೊಡ್ಡ ಸಂಗ್ರಾಮವೇ ನಡೆಯಿತು. ಸ್ವಾತಂತ್ರ್ಯಕ್ಕಾಗಿ ದುಡಿದವರು, ಮಡಿದವರು, ಲಕ್ಷಾಂತರ ಮಂದಿ. ಅವರ ಹೋರಾಟದ ಫಲವೇ ಸ್ವಾತಂತ್ರ್ಯ ಈ ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ನಮ್ಮ ದೇಶದ ಪರಿಸ್ಥಿತಿಯ ಒಂದು ಇಣುಕು ನೋಟ ಹಾಕೋಣ.
ಭಾರತ ದೇಶ 18ನೇ ಶತಮಾನದ ಪ್ರಾರಂಭದಲ್ಲಿ ರಾಜ ಮಹಾರಾಜರ ನವಾಬರ ಒಳಜಗಳದಿಂದ ಛಿದ್ರ ಛಿದ್ರವಾಗಿ ಯುದ್ಧಗಳು ನಡೆಯತ್ತಲೇ ಇದ್ದವು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯವರು ಆ ವೇಳೆಗೆ ಸರಿಯಾಗಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು. ಇಲ್ಲಿನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ದೇಶದ ಆಡಳಿತವನ್ನು ವ್ಯಾಪಾರಕ್ಕಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾದರು ಆಡಳಿತಗಾರರಾದರು.
ನಮ್ಮ ಒಳ ಜಗಳದಿಂದ ಈಸ್ವ್ ಇಂಡಿಯಾ ಕಂಪನಿಗೆ ಲಾಭವಾಯಿತು. ಭಾರತೀಯ ಅರಸರುಗಳನ್ನು ಸುಲಭವಾಗಿ ಗೆದ್ದರು. ಬ್ರಿಟಿಷರು ವ್ಯಾಪಾರಕ್ಕಾಗಿ ಬಂದವರು ಇಲ್ಲೇ ಉಳಿದರು.
ಬ್ರಿಟಿಷರ ರಾಜ್ಯ ವಿಸ್ತರಣಾ ನೀತಿಯನ್ನು ಭಾರತೀಯ ರಾಜರುಗಳು ವಿರೋಧಿಸಿದರು. ಹೈದರಾಲಿ, ಮೈಸೂರಿನ ಹುಲಿ ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ನಾನಾ ಸಾಹೇಬ್, ರಾಣಿ ಲಕ್ಷ್ಮೀಬಾಯಿ, ತಾಂತ್ಯಾಟೋಪಿ ಮುಂತಾದವರು ಬ್ರಿಟಿಷರೊಂದಿಗೆ ಹೋರಾಡಿ, ವೀರ ಸ್ವರ್ಗ ಪಡೆದರು. ಭಾರತದ ಕೈಗಾರಿಕೆಗಳು ನಾಶವಾದವು ಮತ ಭೇದಗಳು ಹೆಚ್ಚಾದವು ರೈತರ ಮೇಲೆ ಹೇರಿದ ತೆರಿಗೆ, ನೀಲಿ ಬೆಳೆಯ ಮೇಲೆ ನಿಗದಿ, ಹತ್ತಿ ರಫ್ತು, ಬಟ್ಟೆ ಅಮದು ಐಶ್ವರ್ಯ ದೋಚುವ ದಬ್ಬಾಳಿಕೆಯಿಂದ ಭಾರತ ದಾರಿದ್ರ್ಯದ ಬೀಡಾಯಿತು. ಭಾರತೀಯರು ಅತೃಪ್ತರಾದರು.
1857 ರಲ್ಲಿ ಬ್ರಿಟಿಷರ ವಿರುದ್ಧ ಮಹಾ ಪ್ರತಿರೋಧದ ಸಿಪಾಯಿ ದಂಗೆ ಆಯಿತು. ಇದೇ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕೆ ನಾಂದಿಯಾಯಿತು.
ಅನೇಕ ನಾಯಕರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಗಡೀಪಾರು ಮಾಡಿದರು. ಭಾರತೀಯರು ಒಗ್ಗಟ್ಟಾಗಿಲ್ಲವಾದ್ದರಿಂದ ಇದರಲ್ಲಿ ಅವರಿಗೆ ಗೆಲುವು ಸಿಗಲಿಲ್ಲ.
ಇದೇ ಸಂದರ್ಭದಲ್ಲಿ ನಮ್ಮ ದೇಶದ ಹಳೇ ಪದ್ಧತಿಗಳು, ನಂಬಿಕೆಗಳು ಭಾರತದ ಗುಲಾಮಗಿರಿಗೆ ಕಾರಣವೆಂದು, ಅನೇಕ ಸಾಮಾಜಿಕ ಸುಧಾರಣೆಗಳನ್ನು ತರಲು ಪ್ರಯತ್ನಿಸಿದ ರಾಜಾರಾಮ್ ಮೋಹನ್ ರಾಯ್‍ರವರು, ಭಾರತೀಯರನ್ನು ಎಚ್ಚರಿಸಿದರು. “ನಮ್ಮ ದೇಶಕ್ಕೆ ಉಕ್ಕಿನಂತಹ ಮನುಷ್ಯರು ಬೇಕು. ಅವರು ನಿರ್ಭೀರೂ, ಬಲಿಷ್ಠರೂ ಆಗಿರಬೇಕು. ದೌರ್ಬಲ್ಯ ಒಂದು ಪಾಪ” ಎಂಬ ಮಾತುಗಳಿಂದ ವಿವೇಕಾನಂದರು ಭಾರತೀಯರನ್ನು ಎಚ್ಚರಿಸಿದರು, ಚೇತನಗೊಳಿಸಿದರು.
ಮಹದೇವ ಗೋವಿಂದ ರಾನಡೆ, ಸ್ವಾಮಿ ದಯಾನಂದ, ಅನ್ನಿಬೆಸೆಂಟ್, ಈಶ್ವರಚಂದ್ರ ಸಾಗರರು ಸೇರಿದಂತೆ ಇನ್ನಿತರ ಸಮಾಜ ಸುಧಾರಣೆಯ ಅಗ್ರ ನಾಯಕರುಗಳು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಚಳವಳಿಗೆ ಒಂದು ರೀತಿಯ ಮುನ್ನುಡಿಗಳನ್ನು ನೀಡಿದರು.
ದೇಶದ ಹಿರಿಮೆಯನ್ನು ತಿಳಿಸಲು ಒಂದು ರಾಷ್ಟ್ರಧ್ವಜ, ಒಂದು ರಾಷ್ಟ್ರ ಭಾಷೆ, ಒಂದು ರಾಷ್ಟ್ರ ಗೀತೆ ಅಗತ್ಯವೆಂಬುದು ಅರಿವಾಯಿತು. ಆ ವೇಳೆಗೆ ಸರಿಯಾಗಿ ಬಂಗಾಳಿ ಭಾಷೆಯಲ್ಲಿ ಸ್ಫೂರ್ತಿದಾಯಕವಾದ “ಆನಂದ ಮಠ” ಕಾದಂಬರಿಯಲ್ಲಿ ಸ್ವಾತಂತ್ರ್ಯ ಸಮರಗೀತೆಯಾಗಿ “ವಂದೇ ಮಾತರಂ” ಮೊಳಗಿ ಜನರಲ್ಲಿ ದೇಶಭಕ್ತಿ ಮೂಡುವಂತೆ ಮಾಡಿತು. “ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಈ ಗೀತೆಯು “ಬಂಗಾರ್ ದರ್ಶನ್” ಎಂಬ ಪತ್ರಿಕೆಯಲ್ಲಿ 1876ರಲ್ಲಿ ಪ್ರಕಟವಾಯಿತು. ಇದು ಭರತ ಖಂಡದ ಚೆಲುವನ್ನು, ತಾಯ್ನಾಡಿನ ಪ್ರೇಮವನ್ನು ಅಭಿವ್ಯಕ್ತಿಸುತ್ತದೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನರು ಈ ಸಮರ ಗೀತೆಯನ್ನು ಹಾಡಿದರು. ಇದು ನಮ್ಮ ಜನರಲ್ಲಿ ದೇಶಭಕ್ತಿ ಮೂಡುವಂತೆ ಮಾಡಿತು. ದೇಶಪ್ರೇಮಿಗಳ ಮೆಚ್ಚಿನ ಮಂತ್ರವಾಯಿತು. 1896 ರಲ್ಲಿ ಕಾಂಗ್ರೇಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೂರ್‍ರವರು ಹಾಡಿದರು. ಎಲ್ಲರಿಗೂ ರೋಮಾಂಚನ. “ವಂದೇ ಮಾತರಂ” ಶಬ್ದ ಬ್ರಿಟಿಷರಿಗೆ ಕರ್ಣ ಕಠೋರವಾಯಿತು. ‘ವಂದೇ ಮಾತರಂ’ ಎಂದರೆ ಅಪರಾಧವಾಯಿತು. ಈ ಗೀತೆಯನ್ನು ಹಾಡಿದುದರಿಂದ ಅನೇಕ ನಾಯಕರು, ಯುವಕರು ಸೆರೆಮನೆಗೆ ಹೋದರು.
ಬ್ರಿಟೀಷ್ ಆಡಳಿತಗಾರರು ಹಾಡನ್ನು ಕೇಳಲಾರದೆ ಹೋರಾಟಗಾರರನ್ನು ಸದೆಬಡಿದರು. ಇವರು ರಾಷ್ರ ಪ್ರೇಮಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಾಡುತ್ತಾ ತಮ್ಮ ಪ್ರಾಣವನ್ನು ಕೊಟ್ಟರು. ಕೊನೆ ಉಸಿರುವವರೆಗೆ ವಂದೇ ಮಾತರಂ ಹಾಡಿದರು.
ಈ ದಬ್ಬಾಳಿಕೆಗೆ ಬಂಗಾಳಿ ಯುವಕರು ರೊಚ್ಚಿಗೆದ್ದರು. ಬ್ರಿಟೀಷರನ್ನು ಕೊಲೆ ಮಾಡಲು ಪ್ರಯತ್ನಿಸಿದರು. ಪುದಿರಮ ಎಂಬ 15 ವರ್ಷದ ಹುಡುಗ ಮತ್ತು ಕನ್ನಯ್ಯಲಾಲ್ ಎಂಬ ಯುವಕನನ್ನು ಗಲ್ಲಿಗೇರಿಸಿದರು. ಈ ಹುಡುಗರು “ ವಂದೇ ಮಾತರಂ” ಎಂದು ಉಚ್ಚರಿಸುತ್ತಲೇ ಗಲ್ಲಿಗೇರಿದರು. ನಾಡಿನ ಜನರಿಗೆ ಇದು ಕೇವಲ ಗೀತೆ ಮಾತ್ರವಲ್ಲ, ಬೆಂಕಿಯ ಜ್ವಾಲೆಯಾಗಿತ್ತು. ಸಮರ್ಪಣ ಮಂತ್ರವಾಗಿತ್ತು.
ಬಂಗಾಳದಲ್ಲಿ 1906 ರಲ್ಲಿ ಬಿಪಿನ್ ಚಂದ್ರಪಾಲ್  “ವಂದೇ ಮಾತರಂ” ಪತ್ರಿಕೆ ಆರಂಭಿಸಿದರು. 1907 ರಲ್ಲಿ ಪತ್ರಿಕೆಯ ಮೇಲೆ ದೇಶದ್ರೋಹ ಅಪರಾಧ ಹೊರಿಸಿ ಬಂಧಿಸಿದರು. 1906 ರಲ್ಲಿ ಪ್ರಥಮ ಕಾಗ್ರೆಸ್‍ನಲ್ಲಿ ರೂಪಿಸಿದ ರಾಷ್ಟ್ರಧ್ವಜದ ಮಧ್ಯದಲ್ಲಿ “ವಂದೇ ಮಾತರಂ” ಎಂದು ಬರೆದಿತ್ತು. ತಮಿಳು ನಾಡಿನಲ್ಲಿ ಸುಬ್ರಹ್ಮಣ್ಯ ಭಾರತೀಯರು ತಮಿಳಿನಲ್ಲಿ ರಾಷ್ರಗೀತೆಯನ್ನು ರಚಿಸಿ ಜನರನ್ನು ಹುರಿದುಂಬಿಸಿದರು. ಭಾರತೀಯ ಭಾಷಾ ಫಲವಾಗಿ ಭಾಷಾ ಪತ್ರಿಕೆಗಳ ಪ್ರಕಟಣೆಯನ್ನು ರದ್ದುಗೊಳಿಸಿದರು. ಸಂಪಾದಕರುಗಳಿಗೆ ತೀವ್ರ ಶಿಕೆ, ಸೆರೆಮನೆ ವಾಸ ವಿಧಿಸಿದರು.
ಎ.ಓ. ಹ್ಯೂಮ್‍ರವರು ಜನಗಳಲ್ಲಿ ಅಸಮಾಧಾನ ಹೆಚ್ಚುವುದನ್ನು ತಪ್ಪಿಸಲು ಕುಂದುಕೊರತೇಗಳನ್ನು ಹೇಳಿಕೊಳ್ಳಲು ಅವಕಾಶ ಕೊಡಲು 1885 ರಲ್ಲಿ ನ್ಯಾಷನಲ್ ಕಾಂಗ್ರೆಸ್  ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರೇ ಅದರ ಮೊದಲ ಅಧ್ಯಕ್ಷರು. ದಾದಾಬಾಯಿ ನವರೋಜಿ, ಫೆರೂಜ್ ಷಾ ಮೆಹತಾ, ಗೋಖಲೆ, ಸುರೇಂದ್ರನಾಥ ಬ್ಯಾನರ್ಜಿ, ಬಿಪಿನ್ ಚಂದ್ರಪಾಲ್, ಲಾಲ ಲಜಪತರಾಯ್, ಬಾಲಗಂಗಾಧರ್ ತಿಲಕ್‍ರವರು ಕಾಂಗ್ರೆಸ್‍ನ ಈ ರಾಷ್ಟ್ರ ಸಂಗ್ರಾಮದಲ್ಲಿ ಧುಮುಕಿದರು. ಹಕ್ಕಿಗಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೊರಾಡುವ ಮನೋವೃತ್ತಿಯನ್ನು ಜನರಲ್ಲಿ ಮೂಡಿಸಿದರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಸ್ವಾತಂತ್ರ್ಯ ಆಕಾಂಕ್ಷೆ ಹೆಚ್ಚಿಸಲು “ಕೇಸರಿ” ಪತ್ರಿಕೆಯನ್ನು ಪ್ರಕಟಿಸಿ ಪ್ರಚೋದಕವಾದ ಲೇಖನಗಳನ್ನು ಬರೆದರು. “ಸ್ವರಾಜ್ಯ ನಮ್ಮ ಜನ್ಮ ಸಿದ್ಧ ಹಕ್ಕು” ಎಂದು ಸಾರಿದರು.
ಬಂಗಾಳ ವಿಭಜನೆ:
ಬ್ರಿಟಿಷರು ಬಂಗಾಳ ದೇಶವನ್ನೇ ಇಬ್ಭಾಗ ಮಾಡಿದರು. ಹಿಂದು ಮುಸ್ಲಿಂರ ಮಧ್ಯ ಜಗಳ ಹುಟ್ಟಿಸಲು ಪ್ರಯತ್ನಿಸಿದರು. ಇದರಿಂದ ದೇಶದಲ್ಲಿ ಒಂದು ಕ್ರಾಂತಿ ಉಂಟಾಯಿತು. ಸತ್ಯಾಗ್ರಹಿಗಳು ಎಲ್ಲಾ ಕಡೆ ವಂದೇ ಮಾತರಂ ಹಾಡಿದರು. ವಿದೇಶಿ ವಸ್ತು ಮತ್ತು ಬಟ್ಟೆ ಸುಟ್ಟರು. ಸ್ವದೇಶಿ ವಸ್ತುಗಳ ಉಪಯೋಗ ಪ್ರಾರಂಭವಾಯಿತು. ಸ್ವದೇಶಿ ಶಾಲೆಗಳು ಪ್ರಾರಂಭವಾದವು.
ಬಿಪಿನ್ ಚಂದ್ರಪಾಲ್, ಅರವಿಂದ್ ಘೋಷ್, ಲಾಲ ಲಜಪತ್ ರಾಯ್, ಭಗತ್‍ಸಿಂಗ್, ಸಾಹೋರ್ಕರ್ ಮುಂತಾದ ಅನೇಕ ನಾಯಕರುಗಳು ಸ್ವಯಾತಂತ್ರ್ಯಕ್ಕಾಗಿ ಬ್ರಟಿಷರ ಬಳಿ ಬೇಡುವುದು ಸರಿಯಲ್ಲವೆಂದು ಹಿಂಸಾ ಚಳವಳಿಯ ಕ್ರಾಂತಿ ಮಾರ್ಗ ಅನುಸರಿಸಿದರು. ಇದರಲ್ಲಿ ಜನಸಾಮಾನ್ಯರು ಭಾಗವಹಿಸಲು ಕಷ್ಟವಾಯಿತು. ಜನರಿಂದ ಹೆಚ್ಚು ಬೆಂಬಲ ಸಿಗಲಿಲ್ಲ. ಹಿಂಸಾತ್ಮಕ ಕ್ರಾಂತಿಕಾರಿ ಚಳವಳಿಗೆ ಹೆಚ್ಚು ಜನ ಆಕರ್ಷಿತರಾಗಲಿಲ್ಲ. ಈ ವೇಳೆಗೆ ಸರಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಮೋಹನದಾಸ ಕರಂಚಂದ್ ಗಾಂಧಿಯವರು ಭಾರತಕ್ಕೆ ಹಿಂದಿರುಗಿ ತಮ್ಮ ಅಹಿಂಸಾತ್ಮಕ ಚಳವಳಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆಯಾಗಿ ನೀಡಿದರು.
ಗಾಂಧೀಜಿಯವರು ಮೊದಲು ರಾಜಕೀಯಕ್ಕೆ ಪ್ರವೇಶಿಸದೆ ಭಾರತೀಯರ ಕಷ್ಟ ಕಾರ್ಪಣ್ಯಗಳನ್ನು ತನ್ನದೇ ಆದ ಸತ್ಯಾಗ್ರಹ ಮಾರ್ಗದಲ್ಲಿ” ನಾವು ಯಾರಿಗೂ ಅಪಾಯ ಉಂಟು ಮಾಡಬಾರದು. ಅನ್ಯಾಯದ ವಿರುದ್ಧ ಹೋರಾಡಿ, ಶತ್ರುಗಳನ್ನು ಪ್ರೀತಿಸಿ, ಯಾವತ್ತೂ ನಿಜವನ್ನೇ ನುಡಿಯಿರಿ. ಭೀತಿ ತ್ಯಜಿಸಿರಿ. ಒಗ್ಗಟ್ಟಾಗಿರಿ ಎಂಬ ಸಂದೇಶವನ್ನು ಇಡೀ ಭಾರತಕ್ಕೆ ನೀಡಿದರು. ಬಿಟಿಷ್ ಪ್ರಭುತ್ವದ ವಿರುದ್ಧ ಶಾಂತಿಯುತವಾದ ಅಸಹಕಾರ ಚಳವಳಿಯೇ ಉತ್ತಮಮಾರ್ಗ ಎಂಬುದೇ ಗಾಂಧಿಜಿ ಸಂದೇಶ.
ಜಲಿಯನ್ ವಾಲಾಬಾಗ್:
1919 ರಲ್ಲಿ ದೇಶಾದ್ಯಂತ ಹರತಾಳ ಆಚರಣೆ ನಡೆಯಿತು. ಅಮೃತಸರದಲ್ಲಿ ಜನಪ್ರಿಯರಾಗಿದ್ದ ಡಾ: ಕಿಟ್ಲು ಮತ್ತು ಸತ್ಯಪಾಲ್ ಅವರ ಬಂಧನ ಮತ್ತು ಗಡೀಪಾರು ಆಯಿತು. ಇದನ್ನು ಪ್ರತಿಭಟಿಸಲು ಸಾರ್ವಜನಿಕರು “ಜಲಿಯನ್ ವಾಲಾಬಾಗ್” ಎಂಬ ಮೈದಾನದಲ್ಲಿ ಪ್ರತಿಭಟನಾ ಸಭೆ ಸೇರಿದ್ದರು. ಬ್ರಿಟಿಷ್ ಸೈನಿಕರು ಗುಂಡು ಹಾರಿಸಿ ಜನ ತಪ್ಪಿಸಿಕೊಂಡು ಹೋಗಲು ಅವಕಾಶ ಕೊಡದೆ ಅಮಾನುಷ ರೀತಿಯಲ್ಲಿ ಕೊಲೆ ಮಾಡಿದರು. “ಜಲಿಯನ್ ವಾಲಾಬಾಗ್” ಹತ್ಯಾಕಾಂಡ, ನಮ್ಮ ಸ್ವಾತಂತ್ರ್ಯ ಸಮರದ ಮುಖ್ಯ ಘಟನೆ.
ಗಾಂಧೀಜಿಯವರು ಸತ್ಯಾಗ್ರಹ, ಅಹಿಂಸಾತ್ಮಕ ಅಸಹಕಾರ ಚಳವಳಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಹೊಸ ತಿರುವನ್ನೇ ಕೊಟ್ಟರು. “ ನಾವು ನ್ಯಾಯಾಲಯಗಳು, ಕಚೇರಿಗಳು, ಶಾಲೆಗಳಿಗೆ ಹೋಗದೆ ಅವರೊಂದಿಗೆ ಸಹಕರಿಸದಿದ್ದರೆ, ಅವರ ಸರಕುಗಳನ್ನು ಕೊಳ್ಳದಿದ್ದರೆ ಸ್ವಾವಲಂಬನಾ ಬುದ್ಧಿ ಹೆಚ್ಚಿಸಿಕೊಂಡರೆ, ಒಂದೇ ವರ್ಷದಲ್ಲಿ ಸ್ವರಾಜ್ಯ ಸಿಕ್ಕೇ ಸಿಗುತ್ತದೆ” ಎಂದರು ಗಾಂಧೀಜಿ. ದೇಶದ ಸಮಸ್ಯೆಗಳನ್ನು ಬಿಡಿಸಲು ರಚನಾತ್ಮಕ ಕಾರ್ಯಗಳನ್ನು ರೂಪಿಸಿ ಸ್ವಾತಂತ್ರವಾಗಿ ಜೀವಿಸುವ ಮಾರ್ಗ ನೀಡಿ ಸಾಮಾನ್ಯರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು.
ಜನಸಾಮಾನ್ಯರೂ ಸಾಮೂಹಿಕವಾಗಿ ಆಚರಿಸುವ ಚಳವಳಿಯಾದ್ದರಿಂದ ಇದು ದೇಶದ ಎಲ್ಲಾ ಹಳ್ಳಿ ಹಳ್ಳಿಗಳಿಗೂ ಹರಡಿತು. ಜನತೆ ಸ್ವಾಗತಿಸಿದರು. ಹೆಮ್ಮೆಯಿಂದ ಭಾಗವಹಿಸಿದರು. ತ್ಯಾಗಕ್ಕೆ ಸಿದ್ಧರಾದರು. ಕಂದಾಯ ಕೊಡುವುದನ್ನು ಬಹಿಷ್ಕರಿಸುವ ಚಳವಳಿಯಿಂದ ರೈತರಿಗೆ ಅಸಹಕಾರ ಚಳವಳಿಯಲ್ಲಿ ಅಪಾರ ನಂಬಿಕೆ ಬಂದಿತು. ಭಾಗವಹಿಸಲು ಪ್ರಾರಂಭಿಸಿದರು. ಜನತೆಯಿಂದ ದೊರೆತ ಬೆಂಬಲದಿಂದ ಗಾಂಧಿಯವರು ಅಂಹಿಸೆಯ ಮಂತ್ರವಾದ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಆಂಗ್ಲರು ಅಸಹಕಾರ ಚಳವಳಿಗೆ ಮಣಿಯಲಿಲ್ಲ. ಹೀಗಾಗಿ, ಗಾಂಧೀಜಿಯವರು 1942 ರ ಆಗಸ್ಟ್ 9 ರಂದು “ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಎಂಬ ಘೋಷಣೆಯನ್ನು ಮೊಳಗಿಸಿದರು. ಇದೇ “ಕ್ವಿಟ್ ಇಂಡಿಯಾ ಚಳವಳಿ”, ‘ಮಾಡು ಇಲ್ಲವೆ ಮಡಿ’ ಎಂಬ ಸಂದೇಶದೇಶದಲ್ಲೆಲ್ಲಾ ಹರಡಿ ಜನ ಬೀದಿಗಿಳಿದು ಹೋರಾಡಲು ಆರಂಭಿಸಿದರು. ದೇಶಾದ್ಯಂತ ಎಲ್ಲಾ ನಾಯಕರ ಬಂಧನ ಆಯಿತು. ಕ್ಯಾಂತಿಯ ವಾತಾವರಣ ಹುಟ್ಟಿತು. ನಾಯಕರೆಲ್ಲಾ ಜೈಲಿನಲ್ಲಿ ಇದ್ದುದರಿಂದ ಯುವಕರು ಮತ್ತು ವಿದ್ಯಾರ್ಥಿಗಳೇ ಚಳವಳಿಯ ಮುಂದಾಳುಗಳಾಗಿ ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದರು.
ಶಾಲಾ ಕಾಲೇಜುಳನ್ನು ಮುಚ್ಚಬೇಕಾಯಿತು. ಜನರು ಕಾನೂನು ಉಲ್ಲಂಘಿಸಿ ಜೈಲಿಗೆ ಹೋದರು. ಧ್ವಜ ಹಾರಿಸುವುದು, ಸ್ವಾತಂತ್ರ್ಯಗೀತೆಗಳನ್ನು ಹಾಡುವುದು, ಹರತಾಳ ನಡೆಸುವುದು ಮಾಮೂಲಾಯಿತು. ಗೀತೆಗಳನ್ನು ಹಾಡುತ್ತಾ ಮೆರವಣಿಗೆ ಹೊರಟರೆ ಲಾಟಿ ಛಾರ್ಜು, ಗ್ಯಾಸ್ ಸಿಡಿತ, ಕೊನೆಗೆ ಗುಂಡಿನ ಏಟು, ಇದು ನಿತ್ಯದ ಕಾರ್ಯಕ್ರಮ. ಒಂದು ಊರಿನಲ್ಲಿ ಅಲ್ಲ ದೇಶಾದ್ಯಂತ ಜೈಲುಗಳು ಭರ್ತಿಯಾದವು. ಕೆಲವು ಕಡೆ ವಿಧ್ವಂಸಕ ಜೈಲುಗಳು ಭರ್ತಿಯಾದವು. ಕೆಲವು ಕಡೆ ವಿಧ್ವಂಸಕ ಕೃತ್ಯಗಳೂ ನಡೆದವು. ಅನೇಕ ಕಡೆ ಅಂಚೆ ಕಚೇರಿ, ಸರ್ಕಾರಿ ಕಚೇರಿಗಳಿಗೆ ಬೆಂಕಿ ಇಟ್ಟರು. ನಿತ್ಯವು ಒಂದಲ್ಲ ಒಂದು ಕಡೆ ಗೋಲಿಬಾರ್, ಒಬ್ಬರೋ ಇಬ್ಬರೋ ಸಾಯುತ್ತಿದ್ದರು. ಆದರೂ ಜನರಲ್ಲಿ ಛಲ ಹೋಗಲಿಲ್ಲ. ಪ್ರಾಣ ಕೊಡಲು ಸಿದ್ಧರಾಗಿದ್ದರು. ಎಷ್ಟೋ ಜನ ಗುಪ್ತವಾಗಿ ಕಾರ್ಯಾಚರಣೆ ನಡೆಸಿ ಯಾರಿಗೂ ತಿಳಿಯದಂತೆ ಪೊಲೀಸರ ಗುಂಡಿನ ಏಟಿಗೆ ಬಲಯಾಗಿದ್ದಾರೆ.
ಸುಭಾಷ್‍ಚಂದ್ರ ಬೋಸರು ಭಾರತದಿಂದ ಜರ್ಮನಿಕಗೆ ಹೋಗಿ, ಅಲ್ಲಿಂದ ಜಪಾನ್ಗೆ ಹೋಗಿ ಅಲ್ಲಿ “ಅಜಾದ್ ಹಿಂದ್ ಫೌಜ್’ ಸೈನ್ಯ ಕಟ್ಟಿ ಭಾರತದ ಸ್ವಾತಂತ್ರ್ಯಕ್ಕಾಗಿ ನಾಡಿನ ಹೊರಗಡೆಯಿಂದ ಬಿಟಿಷರ ಮೇಲೆ ಯುದ್ಧ ಘೋಷಿಸಿದರು.
ಆಡಳಿತಗಾರರಿಗೆ ಹೊರಗಡೆ ಮಹಾಯುದ್ಧ, ಒಳಗಡೆ ಚಳವಳಿ. ಲಕ್ಷಾಂತರ ಜನ ಜೈಲಿಗೆ ಹೋದರು. ಲಾಟಿ ಏಟು ಗುಂಡಿನ ಏಟು ತಿಂದರು. ರೈಲು ಕಂಬಿ ಕಿತ್ತರು. ಸೇತುವೆಗಳಿಗೆ ಬಾಂಬು ಇಟ್ಟು ನಾಶಪಡಿಸಿದರು. ಸರ್ಕಾರ ನಡೆಸುವುದೇ ಕಷ್ಟವಾಯಿತು.
ಯುದ್ಧ ಮುಗಿದ ಮೇಲೆ ಬ್ರಿಟನ್‍ನಲ್ಲಿ ಕನ್ಸರೆಟಿವ್ ಪಕ್ಷ ಹೋಗಿ, ಲೇಬರ್ ಪಕ್ಷ ಆಟಳಿತಕ್ಕೆ ಬಂದ ಮೇಲೆ, ಭಾರತೀಯರು ಶಾಶ್ವತ ಶತ್ರುಗಳಾಗಬಾರದೆಂದು, ಮಾತು ಕತೆ ನಡೆಸಿ, ಭಾರತಕ್ಕೆ ಸ್ವಾತಂತ್ರ್ಯ ಆಡಳಿತಕೊಡಲು ತೀರ್ಮಾನಿಸಿದಾಗ ಜಿನ್ನಾರವರ ಹಟದಿಂದ ದೇಶ ಇಬ್ಭಾಗವಾಯಿತು.
ಬ್ರಿಟಿಷರ ಆಡಳಿತ ಕೊನೆಯಾಯಿತು. ಭಾರತೀಯರು ಕಂಡ ಕನಸು ನನಸಾಯತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಇದರೊಂದಿಗೆ ಸ್ವಾತಂತ್ರ್ಯ ಸಂಗ್ರಾಮವು ಮುಕ್ತಾಯವಾಯಿತು.
ಭಾರತದಲ್ಲಿ 1947 ನೇ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಆಚರಿಸುವಾಗ ಗಾಂಧೀಜಿಯವರು “ನೌಖಾಲಿ”ಯಲ್ಲಿ ಹಿಂದು ಮುಸಲ್ಮಾನರ ಏಕತೆಗೆ ಕಾಲು ನಡಿಗೆಯಲ್ಲಿ ಸುತ್ತಾಡುತ್ತಿದ್ದರು. 1948 ರ ಜನವರಿ 30 ಗಾಂಧೀಜಿಯವರು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿ ಹುತಾತ್ಮರಾದರು.
                   ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕುರುಹುಗಳು
ರಾಯಚೂರು,ಆ,14.(ಕ.ವಾ)- ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಮೊದಲ ಕುರುಹು ಮೈಸೂರು ಸಂಸ್ಥಾನದಲ್ಲಿದೆ. ಬ್ರಿಟಿಷರ ವಿರುದ್ಧ ಕರ್ನಾಟಕದಲ್ಲಿ ಮೊಟ್ಟ ಮೊದಲನೆಯದಾಗಿ ಹೈದರಾಲಿ ಮತ್ತು ಮೈಸೂರಿನ ಹುಲಿ ಎಂದೇ ಖ್ಯಾತರಾಗಿರುವ ಟಿಪ್ಪು ಸುಲ್ತಾನ್ ರವರು ಹೊರಾಟ ಆರಂಭಿಸುತ್ತಾರೆ.
ನಂತರದಲ್ಲಿ ಬಳ್ಳಾರಿ ರಾಯದುರ್ಗದ ಪಾಳೆಯಗಾರರು, ಆನೆಗೊಂದಿಯ ಪಾಳೇಗಾರರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮುಧೋಳ ಸಂಸ್ಥಾನದ ಬೇಡರು, ಬಾಬಾಜಿ, ಮುಂತಾದವರು ಬ್ರಿಟಿಷರ ವಿರುದ್ಧ ಹೊರಾಡಿದರು.
ಗಾಂಧೀಜಿಯವರು ಕರ್ನಾಟಕ್ಕೆ ಅನೇಕ ಸಲ ಭೆಟಿ ನಿಡಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದರಿಂದ, ಇಲ್ಲಿನ ಹೋರಾಟಕ್ಕೆ ಒಂದು ಹೊಸ ವಾತಾವರಣವನ್ನು ಕಲ್ಪಿಸಿತು. ಕಾನೂನು ಭಂಗ ಚಲವಳಿ, ಉಪ್ಪಿನ ಸತ್ಯಾಗ್ರಹ, ಅರಣ್ಯ ಚಲುವಳಿ, ಭೂಕಂದಾಯ ನಿರಾಕರಣೆಗಳು ಕರ್ನಾಟಕದಲ್ಲಿ ಬಲವಾಗಿ ನಡೆದವು.
ಸಂಸ್ಥಾನ ಪ್ರದೇಶಗಳಲ್ಲಿ ಚಳವಳಿ ನಡೆಸಲು, ಅನುಮತಿ ಇಲ್ಲದಿದ್ದರೂ ಸಂಘಟನೆಯು ಉದ್ದೇಶದಿಂದ ಮುಂತಾದ ರಚನಾತ್ಮಕ ಕಾರ್ಯಕ್ರಮಗಳಿಂದ ಕರ್ನಾಟಕದಾದ್ಯಂತ, ಹಳ್ಳಿ ಹಳ್ಳಿಗಳಲ್ಲೂ ಸ್ವಾತಂತ್ರ್ಯ ಚಳವಳಿಯ ವಾತಾವರಣ ಉಂಟಾಗಿತ್ತು.
ಶಿವಪುರ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥದಲ್ಲಿ ನಡೆದ ಗೋಲಿಬಾರು ಮತ್ತು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅಪೂರ್ವ ಜಾಗೃತಿ ಉಂಟು ಮಾಡಿತು.
1920 ರಲ್ಲಿ ಗಾಂಧೀಜಿಯ ದಂಡಿಯಾತ್ರೆಯಲ್ಲಿ ಗಾಂಧೀಜಿ ಜೊತೆಗೆ ಹೋದ ಏಕೈಕ ಕರ್ನಾಟಕ ಪುತ್ರ “ಮೈಲಾರ ಮಹಾದೇವ”. 1942 ರ ಚಳವಳಿಯಲ್ಲಿ ಸುಮಾರು 8 ತಿಂಗಳ ಕಾಲ ಬ್ರಿಟಿಷ್ ಆಡಳಿತಗಾರರಿಗೆ ಕಾಡಿ ಸಿಂಹಸ್ವಪ್ನವಾಗಿದ್ದ. 1943 ರಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ಗಾಂಧೀಜಿಗೆ ಸುದ್ದಿ ತಿಳಿದಾಗ “ಮಹಾದೇವ ನನ್ನ ಶಿಷ್ಯ ಮಾಡಿ ಮಡಿದ ವೀರ ಸತ್ಯಾಗ್ರಹಿ” ಎಂದರು.
ಚಳವಳಿ ಉಗ್ರವಾಗಿದ್ದ ಬೆಳಗಾವಿ ಜಿಲ್ಲೆಯ ಗಣ್ಯ ಹೋರಾಟಗಾರ ರಾಮರಾವ್ ಬಿದಿರಿಯವರ ನಾಯಕತ್ವದಲ್ಲಿ 17 ಸಂಗ್ರಾಮ ಕೇಂದ್ರಗಳು ಸ್ಥಾಪಿತವಾದ್ದವು. ಇವರೆಲ್ಲರೂ ಚಳವಳಿಯನ್ನು ಯಶಸ್ವಿಯಾಗಿದ್ದವು. ಇವರೆಲ್ಲರೂ ಚಳವಳಿಯನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿ ಒಗ್ಗಟ್ಟಿನಿಂದ ಹೋರಾಟ ನಡೆಸಿದರು.
ರಾಜ್ಯದಲ್ಲಿ ಸ್ವಾತಂತ್ರ್ಯ ಚಳವಳಿ ನಾನಾ ರೂಪ ಪಡೆದಿತ್ತು. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಒಂದು ಚಳವಳಿ ಆಯಿತು. ಸಭೆ ಸೇರುತ್ತದೆ ಎಂದು ಸುಳ್ಳು ಪತ್ರ ಪ್ರಕಟಿಸಿ, ಪೊಲೀಸರಿಗೆ ಚಳ್ಳೆ ಹಣ್ಣ ತಿನ್ನಿಸುತ್ತಿದ್ದರು. ಅದೇ ಒಂದು ತಮಾಷೆ ಆಯಿತು.
ಬೆಳಗಾವಿಯ ಗಂಗಾಧರರಾವ್ ದೇಶಪಾಂಡೆ ಎಂಬ ತರುಣ ದೇಶಪ್ರೇಮಿ ಗಾಂಧೀಜಿಯವರ ಜೊತೆ ಸೇರಿ ಕೆಲಸ ಮಾಡಿ “ಕರ್ನಾಟಕದ ಸಿಂಹ” ಅನ್ನಿಸಿಕೊಂಡಿದ್ದ. ಹಾಸನ, ಶ್ರವಣಬೆಳಗೊಳ, ಮೈಸೂರು, ತುಮಕೂರು, ಶಿಕಾರಿಪುರ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ಎಲ್ಲಾ ಊರು, ಪ್ರದೇಶಗಳಲ್ಲೂ ಚಳವಳಿ ನಡೆಯುತ್ತಲೇ ಇತ್ತು.
ರಂಗನಾಥ ದಿವಾಕರ, ಸರ್ದಾರ್ ವೆಂಕಟರಾಮಯ್ಯ ಮುಂತಾದವರು ಭೂಗತರಾಗಿ ಚಳವಳಿ ಮುಂದುವರಿಸಲು ಊರು ಊರು ತಿರುಗಿ ಉತ್ತೇಜಿಸಿದ್ದರು. ಚಳವಳಿ ಉಗ್ರವಾಗಿ 7000 ಜನ ಜೈಲಿನಲ್ಲಿ ಇದ್ದರು. ಕೊಡಗು, ಹೈದರಾಬಾದ್ ಕರ್ನಾಟಕದವರೂ ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಕಂದಾಯ ವಸೂಲಿ ವಿರುದ್ಧ ಪ್ರತಿಭಟನೆ ನಡೆಸಿ ಗ್ರಾಮವನ್ನು ಸ್ವತಂತ್ರ ಹಳ್ಳಿ ಎಂಬುದಾಗಿ ಸಾರಿದರು. ತಮ್ಮದೇ ಆದ ಸರ್ಕಾರ ರಚಿಸಿಕೊಂಡು ಗ್ರಾಮ ಆಡಳಿತ ನಡೆಸಿದರು ನಿರಪರಾಧಿಗಳ ಮೇಲೆ ಲಾಠಿ ಪ್ರಹಾರ ನಡೆಯಿತು. ರೊಚ್ಚಿಗೆದ್ದ ಜನರ ಏಟಿನಿಂದ ಅಮಲ್ದಾರ ಮತ್ತೆ ಪೊಲೀಸ್ ಅಧಿಕಾರಿ ಸತ್ತರು ಇದರಿಂದ ಆ ಹಳ್ಳಿಯವರು ಪೊಲೀಸರ ದೌರ್ಜನ್ಯಕ್ಕೆ ಒಳಗಾದರು ಬ್ರಿಟಿಷ್ ಆಡಳಿತಗಾರರು 5 ಮಂದಿಯನ್ನು ಗಲ್ಲಿಗೇರಿಸಿ ಸೇಡು ತೀರಿಸಿಕೊಂಡರು.
ಚಳವಳಿ ಹೊರಗಡೆ ಒಂದು ರೀತಿಯಾಗಿ ನಡೆಯಿತು ವಿದ್ಯಾರ್ಥಿಗಳು, ಯುವ ಸಮುದಾಯ, ಸತ್ಯಾಗ್ರಹಿಗಳು ಸಾವಿರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ಅನೇಕರು ಭೂಗತರಾಗಿ ಚಳವಳಿಗೆ ಜೀವ ತುಂಬಲು ಭೂಗತ ಪತ್ರಿಕೆಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ಕೈಯಿಂದ ಒತ್ತಿ ಕಲ್ಲಚ್ಚು ಮಾಡಲಾಗುತ್ತಿತ್ತು ಯಂತ್ರಗಳಿರಲಿಲ್ಲ ಬೆಂಗಳೂರಿನ ಬಸವನಗುಡಿ ಕಡೆಯಿಂದ ಡಾ: ನರಸಿಂಹಯ್ಯನವರು, ಮಲ್ಲೇಶ್ವರದ ಕಡೆಯಿಂದ ಹೊ. ಶ್ರೀನಿವಾಸಯ್ಯ ಪತ್ರಿಕೆಗಳನ್ನು ಬೆರಳಚ್ಚು ಮಾಡಿ ಕಳ್ಳತನದಲ್ಲಿ ಮನೆಮನೆಗೆ ಹಂಚುತ್ತಿದ್ದರು. ಕಂಬದ ಮೇಲೆ ಅಚಿಟಿಸುತ್ತಿದ್ದರು  ರಬ್ಬರ್ ಸ್ಟಾಂಪ್‍ನ್ನು ತಂದು ಸರ್ಕಾರದ ಲಕೋಟೆಯ ತರಹವೇ ಮಾಡಿ ಅಂಚೆ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿತ್ತು ಪತ್ರಿಕೆ ಮನೆಯಲ್ಲಿ ಸಿಕ್ಕಿದರೆ 3 ವರ್ಷ ಜೈಲುವಾಸ ಅನುಭವಿಸಬೇಕಾಗಿತ್ತು ಅನೇಕ ಮನೆಗಳನ್ನು ಇದಕ್ಕಾಗಿ ಶೋಧನೆ ಮಾಡಿದರೂ ಏನು ಸಿಕ್ಕದಿದ್ದರೂ ಅನುಮಾನದ ಮೇಲೆ ಜೈಲಿಗೆ ಹಾಕಿದರು. ಪತ್ರಿಕೆಗಳ ಹೆಸರು  ಆಜಾದ್, ಕ್ರಾಂತ್ರಿ, ಲಿಬರ್ಟಿ, ಜ್ವಾಲಾಮುಖಿ, ಪ್ರಜಾಶಕ್ತಿ, ಇಂಕಿಲಾಬ್, ಮೈಸೂರು ಗೆಜೆಟ್, ಆಹಿತಿ ಹೀಗೆ ಅನೇಕ ಹೆಸರುಗಳು ಈ ಪತ್ರಿಕೆಗಳಲ್ಲಿ ಚಳವಳಿಯ ಸುದ್ದಿ ಜೊತೆಗೆ ಸಂದೇಶಗಳನ್ನು ಕಳುಹಿಸಿ ಕೊಡಲಾಗುತ್ತಿತ್ತು.
ಒಂದು ಗುಪ್ತ ರೇಡಿಯೋ ಸ್ಟೇಷನ್ ಸಹ ಸ್ಥಾಪಿಸಿ ಸಂಗ್ರಾಮ ಸುದ್ದಿ ಗೀತೆಗಳನ್ನು ಹಾಡಿ ಚಳವಳಿ ಮುಂದುವರಿಸಲು ಉತ್ತೇಜಿಸಲಾಯಿತು. ಹೀಗೆ ರಾಜ್ಯದಲ್ಲಿ ನಾನಾ ರೀತಿಯಲ್ಲಿ ಚಳವಳಿಗಳು ನಡೆದವು ಅಂತಿಮವಾಗಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಒಟ್ಟಿನಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ.

Reply all
Reply to author
Forward
0 new messages