Koppal News Nov-01

24 views
Skip to first unread message

KOPPAL VARTHE

unread,
Nov 1, 2019, 2:14:31 AM11/1/19
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, Ravi.sa...@gmail.com, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani, sureshgut...@gmail.com, praja...@gmail.com, benki...@gmail.com, gavis...@gmail.com
ಭಾಷೆಯ ಬಳಕೆಯಿಂದ ಮಾತ್ರ ಭಾಷೆ ಜೀವಂತವಾಗಿರಲು ಸಾಧ್ಯ : ಲಕ್ಷö್ಮಣ ಸವದಿ
ಕೊಪ್ಪಳ ನ. 01 (ಕರ್ನಾಟಕ ವಾರ್ತೆ): ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಬೇಕು. ಭಾಷೆಯ ಬಳಕೆಯಿಂದ ಮಾತ್ರ ಭಾಷೆ ಜೀವಂತವಾಗಿರಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ, ಸಾರಿಗೆ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಕರ್ನಾಟಕ ರಾಜ್ಯೊÃತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರಿÃಡಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕೊಪ್ಪಳ ಐತಿಹಾಸಿಕ ಹಿರಿಮೆಯನ್ನು ಹೊಂದಿದ ನಾಡಾಗಿದ್ದು, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಸಾಮರಸ್ಯದ ಬೀಡಾಗಿ ಪರಧರ್ಮ ಸಹಿಷ್ಣುತೆಗೆ ಮಾದರಿಯಾಗಿದೆ. ಕಲಾ ಕ್ಷೆÃತ್ರಕ್ಕೂ ಕೊಪ್ಪಳ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ವೃತ್ತಿ ರಂಗಭೂಮಿ ಮಂಡಳಿಗಳು, ಪೌರಾಣಿಕ, ಸಾಮಾಜಿಕ, ಹವ್ಯಾಸಿ ನಾಟಕಗಳು, ಜಾನಪದ ಕಲೆಗಳು, ಬಯಲಾಟ, ಚಿತ್ರಕಲೆ, ಸಂಗೀತ-ಸಾಹಿತ್ಯ ಕ್ಷೆÃತ್ರಗಳಿಗೂ ಸಹ ಕೊಪ್ಪಳ ಜಿಲ್ಲೆ ಪ್ರಸಿದ್ಧಿಯಾಗಿದೆ. ಕಿನ್ನಾಳ ಕರಕುಶಲ ಕಲೆ, ಜಾನಪದ ಪ್ರದರ್ಶನ ಕಲೆಗಳು, ಶಿಲ್ಪಕಲೆಗಳಿಗೆ ಸಂಬಂಧಿಸಿದ ಕಲಾಪ್ರಕಾರಗಳು ಕೊಪ್ಪಳ ಜಿಲ್ಲೆಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಕಲ್ಯಾಣ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಪ್ರಮಾಣದ ಅನುದಾನವನ್ನು ನೀಡಲಾಗುತ್ತಿದ್ದು, ಜಿಲ್ಲೆಯನ್ನು ಎಲ್ಲ ವಿಧದಲ್ಲೂ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮದಾಗಿದೆ. ಈ ಭಾಗದ ಸಮಗ್ರ ಕಲ್ಯಾಣ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯೇ ನಮ್ಮ ಮುಂದಿನ ಗುರಿಯಾಗಿದ್ದು, ಈ ಕುರಿತು ಹೆಚ್ಚು ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಸಹಕಾರ ಕ್ಷೆÃತ್ರದಲ್ಲಿನ ಸಾಧನೆಗಾಗಿ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜ್ಯೊÃತ್ಸವ ಪ್ರಶಸ್ತಿ ಪಡೆದಿರುವ ಜಿಲ್ಲೆಯ ಹಿಟ್ನಾಳ ಗ್ರಾಮದ ರಮೇಶ ವೈದ್ಯ ಅವರನ್ನು ಅಭಿನಂದಿಸಿದರು.
ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಗೃಹ ರಕ್ಷಕ ದಳದಿಂದ ಪಥಸಂಚಲನ, ಗೌರವ ರಕ್ಷೆ ಸ್ವಿÃಕಾರ ಕಾರ್ಯಕ್ರಮ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆದವು.  ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು.  ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಪ್ರೊಬೇಷನರಿ ಅಧಿಕಾರಿ ನೇಹಾ ಜೈನ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಉಪ ವಿಭಾಗಾಧಿಕಾರಿ ಸಿ. ಡಿ. ಗೀತಾ, ಡಿಎಫ್‌ಒ ಯಶ್‌ಪಾಲ್ ಕ್ಷಿÃರಸಾಗರ್, ಜಿಲ್ಲಾ ಪಂಚಾಯತ ಅಧ್ಯಕ್ಷ ಎಚ್. ವಿಶ್ವನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಯುವ ಸಬಲೀಕರಣ ಮತ್ತು ಕ್ರಿÃಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ ನಾಡಗೀರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಾಜ್ಯೊÃತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೊÃತ್ಸವ ಪ್ರಶಸ್ತಿಗೆ ಆಯ್ಕೆಯಾದ ಚಿಲಕಮುಖಿ ಗ್ರಾಮದ ದಾಲ್ ಪಟ ಹಾಗೂ ಮೋಜಿನ ಗೊಂಬೆ ಕಲಾವಿದರಾದ ಸಣ್ಣ ಹನುಮಂತಪ್ಪ ಬಬ್ಬಲ್, ಕೊಪ್ಪಳದ ಹಾರ್ಮೋನಿಯಂ, ತಬಲಾ, ಕೊಳಲು ವಾದ್ಯ ಸಂಗೀತಗಾರರಾದ ಅಂಧ ಕಲಾವಿದ ಅಂಬಣ್ಣ ಕೊಪ್ಪರದ, ಸಮಾಜ ಸೇವಾ ಕ್ಷೆÃತ್ರದ ಸಾಧನೆಗಾಗಿ ಕೊಪ್ಪಳದ ಕೋಮಲಾ ಕುದುರಿಮೋತಿ, ಜಾನಪದ ಸಂಗೀತ ಹಾಗೂ ಕರಡಿ ಮಜಲು ಕ್ಷೆÃತ್ರದ ಕಲಾವಿದರಾದ ಗೊರ್ಲೆಕೊಪ್ಪದ ವೀರಯ್ಯ ಮಲ್ಲಯ್ಯ ಹಿರೇಮಠ, ರಂಗಭೂಮಿ ಕಲಾವಿದೆ ಯಲಬುರ್ಗಾದ ಶಾಂತಮ್ಮ ಪುಟ್ಟಪ್ಪ ಪೂಜಾರ, ವಿಶ್ರಾಂತ ಶಿಕ್ಷಕರಾಗಿ ಸಮಾಜ ಸೇವಾ ಕ್ಷೆÃತ್ರದಲ್ಲಿ ಸಾಧನೆ ಮಾಡಿದ ಕಂದಕೂರದ ಮಳಿಯಪ್ಪ ಮಾನಪ್ಪ ಪತ್ತಾರ, ಡಪ್ಪಿನಾಟ (ಸಣ್ಣಾಟ) ಕಲಾವಿದರಾದ ಹುಲಿಹೈದರ್‌ನ ಕರಿಯಪ್ಪ ಮಾಸ್ತರ, ತಬಲಾ ವಾದಕರಾದ ಗಂಗಾವತಿಯ ರಾಜಾಸಾಬ ಮುದ್ದಾಬಳ್ಳಿ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು.
ಮೆರವಣಿಗೆ : ಕರ್ನಾಟಕ ರಾಜ್ಯೊÃತ್ಸವ ಅಂಗವಾಗಿ ನಾಡದೇವತೆ ಭುವನೇಶ್ವರಿದೇವಿಯ ಭಾವಚಿತ್ರ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಸ್ತಬ್ಧ ಚಿತ್ರಗಳ ಮೆರವಣಿಗೆಯು ನಗರದ ತಹಶೀಲ್ದಾರ್ ಕಾರ್ಯಾಲಯ ಆವರಣದಿಂದ ಪ್ರಾರಂಭಗೊಂಡು ಜಿಲ್ಲಾ ಕ್ರಿÃಡಾಂಗಣದವರೆಗೆ ವಿಜೃಂಭಣೆಯಿಂದ ಜರುಗಿತು.
  
======
Koppal News Nov-01.doc
Reply all
Reply to author
Forward
0 new messages