Koppal News & Photos July-11

27 views
Skip to first unread message

KOPPAL VARTHE

unread,
Jul 11, 2019, 7:06:17 AM7/11/19
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani
ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಕುರಿ ಹಾಗೂ ದನದ ಸಂತೆ ನಡೆಸಲು ಜಿಲ್ಲಾಧಿಕಾರಿ ಆದೇಶ
ಕೊಪ್ಪಳ ಜು. 11 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಕುರಿ ಹಾಗೂ ದನದ ಸಂತೆಯನ್ನು ನಡೆಸಲು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.  
2014ರ ಮೇ. 16 ರಂದು ಚುನಾವಣೆ ಫಲಿತಾಂಶದ ನಂತರ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಹಾಗೂ ವನಬಳ್ಳಾರಿ ಗ್ರಾಮಸ್ಥರ ನಡುವೆ ಆಗಿರುವ ಗಲಭೆಯ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಆದಾರದ ಮೇರೆಗೆ ಕಾನೂನು ಮತ್ತು ಸೂವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಶುಕ್ರವಾರದ ಬೂದಗುಂಪಾ ಗ್ರಾಮದಲ್ಲಿ ಹಾಗೂ ಪ್ರತಿ ಬುಧವಾರ ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಹಾಗೂ ದನದ ಸಂತೆಯನ್ನು ನಡೆಸಲು ಆದೇಶವನ್ನು ಹೊರಡಿಸಲಾಗಿತ್ತು.  2018ರ ಸೆಪ್ಟೆಂಬರ್. 17 ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಸಚಿವರ ಅಧ್ಯಕ್ಷತೆಯಲ್ಲಿ ಸಂಭೆಯನ್ನು ಕೈಗೊಂಡು ಸದ್ಯ ಕೂಕನಪಳ್ಳಿ ಹಾಗೂ ವನಬಳ್ಳಾರಿ ಈ ಎರಡು ಗ್ರಾಮಗಳಲ್ಲಿ ಶಾಂತಿಯುತ ವಾತಾವರಣ ಇರುವುದರಿಂದ ಕುರಿ ಹಾಗೂ ದನದ ಸಂತೆಯನ್ನು ಕೂಕನಪಳ್ಳಿ ಹಾಗೂ ಬುದಗುಂಪಾ ಕ್ರಾಸ್ ಎರಡು ಗ್ರಾಮಗಳಲ್ಲಿ ಒಂದೇ ದಿನ ಅಂದರೆ ಪ್ರತಿ ಶುಕ್ರವಾರ ಸಂತೆಯನ್ನು ನಡೆಸಲು ನಿರ್ಣಯಿಸಲಾಗಿರುತ್ತದೆ. ಹಾಗೂ ಈ ಕುರಿತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕೊಪ್ಪಳ ಮತ್ತು ಗಂಗಾವತಿ ಶಾಸಕರೊಂದಿಗೆ ಸ್ಥಳ ತನಿಖೆ ನಡೆಸಿ ಕೂಕನಪಳ್ಳಿ ಹಾಗೂ ಬುದಗುಂಪಾ ಕ್ರಾಸ್ ಎರಡು ಕಡೆ ಒಂದೇ ದಿನ ಅಂದರೆ ಪ್ರತಿ ಶುಕ್ರವಾರ ಸಂತೆಯನ್ನು ನಡೆಸಲು ಅಭಿಪ್ರಾಯ ವ್ಯಕ್ತವಾಗಿದೆ.  
2018ರ ಸೆಪ್ಟೆಂಬರ್. 17 ರಂದು ನಡೆದ ಸಭೆಯ ನಿರ್ಣಯದಂತೆ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಕೂಕನಪಳ್ಳಿ ಹಾಗೂ ಬುದಗುಂಪಾ ಕ್ರಾಸ್ ಎರಡು ಗ್ರಾಮಗಳಲ್ಲಿ ಒಂದೇ ದಿನ (ಪ್ರತಿ ಶುಕ್ರವಾರ) ಕುರಿ ಹಾಗೂ ದನದ ಸಂತೆಯನ್ನು ನಡೆಸುವುದು ಸೂಕ್ತವೆಂದು ಕಂಡುಬಂದ ಪ್ರಯುಕ್ತ ಈ ಆದೇಶ ಹೊರಡಿಸಲಾಗಿದೆ.
======
ಜುಲೈ. 12 ರಂದು ಕನಕಗಿರಿ ಮತ್ತು ಕುಷ್ಟಗಿಯಲ್ಲಿ ಜನಸಂಪರ್ಕ ಸಭೆ
ಕೊಪ್ಪಳ ಜು. 11 (ಕರ್ನಾಟಕ ವಾರ್ತೆ): ಆರಕ್ಷಕ  ಉಪಾಧೀಕ್ಷಕರು ಹಾಗೂ ಆರಕ್ಷಕ ನಿರೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಕೊಪ್ಪಳ ರವರು ಜುಲೈ. 12 ರಂದು ಜಿಲ್ಲೆಯ ಕನಕಗಿರಿ ಮತ್ತು ಕುಷ್ಟಗಿಯಲ್ಲಿ ಜನಸಂಪರ್ಕ ಸಭೆ ಕೈಗೊಳ್ಳಲಿದ್ದಾರೆ.
ಆರಕ್ಷಕ  ಉಪಾಧೀಕ್ಷಕರು ಹಾಗೂ ಆರಕ್ಷಕ ನಿರೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಕೊಪ್ಪಳ ರವರು ಜುಲೈ. 12 ರಂದು ಬೆಳಿಗ್ಗೆ 11 ಗಂಟೆಯಿಂದ ಕನಕಗಿರಿಯ ತಹಶೀಲ್ ಕಛೇರಿ ಆವರಣದಲ್ಲಿ ಮತ್ತು ಮಧ್ಯಾಹ್ನ 04 ಗಂಟೆಯಿಂದ ಕುಷ್ಟಗಿಯ ತಹಶೀಲ್ ಕಛೇರಿ ಆವರಣದಲ್ಲಿ ಸಾರ್ವಜನಿಕ ಅಹವಾಲು ಸಭೆ ಕೈಕೊಂಡು ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಹಾಗೂ ಅಹವಾಲುಗಳನ್ನು ಸ್ವಿÃಕರಿಸಲಿದ್ದು, ಈ ಎರಡು ತಾಲೂಕುಗಳ ಸಾರ್ವಜನಿಕರು ಜನಸಂಪರ್ಕ/ ಅಹವಾಲು ಸಭೆಗೆ ಹಾಜರಾಗಿ ತಮ್ಮ ಕುಂದುಕೊರತೆಗಳ ಬಗ್ಗೆ ದೂರು ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಲು ಸಾರ್ವಜನಿಕರಲ್ಲಿ ಈ ಮೂಲಕ ಕೋರಲಾಗಿದೆ.  
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿ.ಡಬ್ಲುö್ಯ.ಡಿ. ಕ್ವಾಟ್ರಸ್ ನಂ-5, ಈಶ್ವರ ಗುಡಿ ಹಿಂದುಗಡೆ, ಕೊಪ್ಪಳ ರವರ  ದೂರವಾಣಿ ಸಂಖ್ಯೆ. 08539-221833, ಮೊಬೈಲ್ ನಂಬರ್-9480806244, 9480806319, 9480806320, ಇ-ಮೇಲ್ ಜsಠಿಞಠಿಟ.ಚಿಛಿb@ಞಚಿಡಿಟಿಚಿಣಚಿಞಚಿ.gov.iಟಿ ಕ್ಕೆ ಸಂರ್ಪಕಿಸಬಹುದು.  
======
3 ವರ್ಷದೊಳಗಿನ ಮಕ್ಕಳಿಗೆ ಮನೆಗೆ ನೀಡುವ ಪುಷ್ಠಿ ಆಹಾರ ಪುಡಿ ರೂಪದಲ್ಲಿ ವಿತರಣೆ
ಕೊಪ್ಪಳ ಜು. 11 (ಕರ್ನಾಟಕ ವಾರ್ತೆ): ಕೊಪ್ಪಳ ಅಂಗನವಾಡಿ ಕೇಂದ್ರಗಳ ಮೂಲಕ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಮನೆಗೆ ನೀಡುವ ಪುಷ್ಠಿ ಆಹಾರವನ್ನು ಪುಡಿ ರೂಪ ಮಾಡಿ ಪ್ಯಾಕ್‌ನಲ್ಲಿ ನೀಡಲಾಗುತ್ತಿದೆ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್‌ರವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಾದ 6 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳಿಗೆ ಮನೆಗೆ ಪೂರಕ ಪೌಷ್ಠಿಕ ಆಹಾರವನ್ನು ಪ್ರತ್ಯೆÃಕವಾಗಿ ಅಂದರೆ ಗೋಧಿ ರವಾ, ಅಕ್ಕಿ ರವಾ, ಹೆಸರು ಕಾಳು, ಬೆಲ್ಲ, ಹೀಗೆ ಬೇರೆ ಬೇರೆಯಾಗಿ ನೀಡಲಾಗುತ್ತಿತ್ತು.  ಇದರಿಂದ ಮನೆಯಲ್ಲಿ ಆ ಮಗುವಿಗೆ ಸಂಪೂರ್ಣವಾಗಿ ಆಹಾರ ದೊರೆಯುವ ಸಂಭವ ಕಡಿಮೆಯಾಗುತ್ತಿತ್ತು.  ಹಾಗೂ ಇದನ್ನು ತಿಂಗಳಿಗೊಂದು ಬಾರಿ ಅಂಗನವಾಡಿ ಕೇಂದ್ರಗಳಿಂದ ಪಾಲಕರಿಗೆ ನೀಡುತ್ತಿರುವುದರಿಂದ ಅದನ್ನು ಒಂದು ಅಥವಾ ಎರಡು ಬಾರಿ ಮನೆಯ ಸದಸ್ಯರೇ ಬಳಸುತ್ತಿದ್ದರಿಂದ ನಿಜವಾದ ಮಕ್ಕಳಿಗೆ ಅವರ ಪೌಷ್ಠಿಕತೆಗನುಗುಣವಾಗಿ ಆಹಾರ ದೊರೆಯದ ಕಾರಣ ಮಕ್ಕಳಿಗೆ ಅಪೌಷ್ಠಿಕತೆ ಉಂಟಾಗುತ್ತಿತ್ತು.  
ಮಾತೃಪೂರ್ಣ ಯೋಜನೆಯಡಿ ಹೇಗೆ ಗರ್ಭಿಣಿ ಮತ್ತು ಬಾಣಂತಿಯರು ಖುದ್ದಾಗಿ ಅಂಗನವಾಡಿ ಕೇಂದ್ರಕ್ಕೆ ಬಂದು ಬಿಸಿ ಊಟ ಸೇವಿಸುವುದರಿಂದ ಅವರಿಗೆ ತಲುಪಬೇಕಾದ ಪೌಷ್ಠಿಕ ಆಹಾರ ತಲುಪುತ್ತದೆಯೋ ಹಾಗೆಯೇ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಆಹಾರ ಖಚಿತವಾಗಿ ಪುಡಿ ರೂಪದಲ್ಲಿ ನೀಡಿದರೆ ಸೂಕ್ತವೆಂದು ರಾಜ್ಯಾದ್ಯಂತ 3 ವರ್ಷದೊಳಗಿನ ಮಕ್ಕಳಿಗೆ ಪುಷ್ಠಿ ಆಹಾರ ನೀಡಲು ಸೂಚಿಸಿದ ಪ್ರಯುಕ್ತ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪುಷ್ಠಿ ರೂಪದಲ್ಲಿ ಆಹಾರ ನೀಡಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಕಳೆದ ನಾಲ್ಕು ತಿಂಗಳಿಂದ ಈ ಪುಷ್ಠಿ ಆಹಾರ ನೀಡಲಾಗುತ್ತಿದೆ.  
ಜಿಲ್ಲೆಯಲ್ಲಿ ಆಹಾರ ಪೂರೈಕೆ ಮತ್ತು ಮೊಟ್ಟೆ ಪೂರೈಕೆ ಟೆಂಡರ್ ಮೂಲಕ ನಡೆಸಲಾಗುತ್ತಿತ್ತು.  ಆದರೆ ಈಗ ಸುಪ್ರಿಂ ಕೋರ್ಟ್ನ ಆದೇಶದ ಪ್ರಕಾರ ಟೆಂಡರ್‌ನ್ನು ರದ್ದು ಮಾಡಿ ಎಂ.ಎಸ್.ಪಿ.ಟಿ.ಸಿ ಗಳು ನೇರವಾಗಿ ಆಹಾರ ಸಾಮಗ್ರಿಗಳನ್ನು ಖರೀದಿ ಮಾಡಿ ಪೂರಕ ಪೌಷ್ಠಿಕ ಆಹಾರ ತಯಾರಿಸಿ ನೀಡಲಾಗುತ್ತಿದೆ.  ಮೊಟ್ಟೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಸ್ಥಳಿಯವಾಗಿ ಖರೀದಿಸುತ್ತಿದ್ದು, ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.  ಹೀಗೆ ಜಿಲ್ಲೆಯಲ್ಲಿ ಹೊಸ ಸುಧಾರಣೆಗಳನ್ನು ಮಾಡಲಾಗುತ್ತಿದೆ.  
ಪುಷ್ಠಿ ಆಹಾರವು ಪುಡಿ ರೂಪದಲ್ಲಿ ಇರುವ ಕಾರಣ ಈ ಮುಂಚೆ ಬೆಲ್ಲ, ಹೆಸರುಕಾಳು, ಗೋಧಿರವಾ, ಅಕ್ಕಿರವವನ್ನು ಬೇರೆ ಕಾರಣಗಳಿಗೆ ಉಪಯೋಗಿಸುತ್ತಿದ್ದದನ್ನು ತಡೆಯಲಾಗಿದೆ.  ನಾವು ಪ್ರತಿ ಮಾಸಿಕ ಸಭೆಯಲ್ಲಿ ಮೇಲ್ವಿಚಾರಕಿಯರಿಂದ, ಅಂಗನವಾಡಿ ಕಾರ್ಯಕರ್ತೆಯರಿಂದ, ಸಹಾಯಕಿಯರಿಂದ ಹಾಗೂ ಬಾಲವಿಕಾಸ ಸಮಿತಿ ಸದಸ್ಯರಿಂದ ಪುಷ್ಠಿ ಆಹಾರದ ಬಗ್ಗೆ ಅಭಿಪ್ರಾಯ ಪಡೆಯಲಾಗಿ, ಯಾವುದೇ ಸಮಸ್ಯೆಗಳು ಇರುವುದಿಲ್ಲ. ಪುಷ್ಠಿ ಆಹಾರದಲ್ಲಿ ನಾವು ಮನೆಗೆ ಕೊಡುವ ಆಹಾರ ಪದಾರ್ಥಗಳನ್ನೆÃ ಪುಡಿ ರೂಪ ಮಾಡಿ ಪ್ಯಾಕ್‌ನಲ್ಲಿ ನೀಡಿರುತ್ತೆÃವೆ. ಇದು ಈ ಹಿಂದಿನಂತೆಯೇ ಉತ್ತಮ ಗುಣಮಟ್ಟದ್ದು ಪ್ರೊÃಟೀನ್ ಹಾಗೂ ಕ್ಯಾಲರಿ ಹೊಂದಿರುತ್ತದೆ. ಇದನ್ನು ಇನ್ನೂ ಸುಧಾರಿಸಲು ಕ್ರಮಕೈಗೊಳ್ಳಲಗುತ್ತಿದೆ ಎಂದು ಈ ಮೂಲಕ ಪ್ರಕಟಣೆ ಸ್ಪಷ್ಟಡಿಸಿದೆ.
======
ಬಾಲ ಶಕ್ತಿ ಹಾಗೂ ಬಾಲ ಕಲ್ಯಾಣ ಪುರಸ್ಕಾರ ಪ್ರಶಸ್ತಿ : ಅರ್ಜಿ ಆಹ್ವಾನ
ಕೊಪ್ಪಳ ಜು. 11 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ``ಬಾಲ ಶಕ್ತಿ ಪುರಸ್ಕಾರ'' ಮತ್ತು ``ಬಾಲ ಕಲ್ಯಾಣ  ಪುರಸ್ಕಾರ'' ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ವಯ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ``ಬಾಲ ಶಕ್ತಿ ಪುರಸ್ಕಾರ'' ಮತ್ತು ಮಕ್ಕಳ ಕಲ್ಯಾಣ ಕ್ಷೆÃತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ``ಬಾಲ ಕಲ್ಯಾಣ  ಪುರಸ್ಕಾರ'' ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.  ಅರ್ಹ ಮಕ್ಕಳು, ವ್ಯಕ್ತಿ ಹಾಗೂ ಸಂಸ್ಥೆಗಳು ಮುಕ್ತ ನಾಮಪತ್ರಗಳನ್ನು ಭಾರತ ಸರ್ಕಾರದ ವೆಬ್‌ಸೈಟ್ ತಿತಿತಿ.ಟಿಛಿಚಿ-ತಿಛಿಜ.ಟಿiಛಿ.iಟಿ ನಲ್ಲಿ ಆಗಸ್ಟ್. 31 ರೊಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್‌ರವರು ತಿಳಿಸಿದ್ದಾರೆ.
======
 “ಮೀನು ಕೃಷಿಕರ ದಿನಾಚರಣೆ” ಕಾರ್ಯಕ್ರಮ ಯಶಸ್ವಿ
ಕೊಪ್ಪಳ ಜು. 11 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆ ಸಾಲಿಗೆ ರಾಜ್ಯ ವಲಯ ಯೋಜನೆಯಡಿ ವತಿಯಿಂದ ಹಮ್ಮಿಕೊಳ್ಳಲಾದ “ಮೀನು ಕೃಷಿಕರ ದಿನಾಚರಣೆ” ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.  
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ತಾಲೂಕಿನ ಶಿವಪುರ ಮೀನುಮರಿ ಉತ್ಪದಾನಾ ಕೇಂದ್ರದಲ್ಲಿ ರಾಷ್ಟಿçÃಯ ಮೀನುಕೃಷಿಕರ ದಿನಾಚರಣೆಯನ್ನು ಬುಧವಾರದಂದು (ಜು.10 ರಂದು) ಆಚರಿಸಲಾಯಿತು.  
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ ಅರ್ಹ ಮೀನುಗಾರರು ಮೀನುಗಾರಿಕೆ ಇಲಾಖೆಯ ವಿವಿದ ಯೋಜನೆಗಳಡಿ ಇರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು.  ಇಲಾಖೆಯವರು ಸರ್ಕಾರದ ಸೌಲಭ್ಯಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಬೇಕು ಎಂದರು.  
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ .ಪಿ.ಬಸವರಾಜ ಅವರು ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ, ಮೀನುಮರಿ ಉತ್ಪಾದನೆ ಹಾಗೂ ಕೆರೆ ವಿಲೇವಾರಿ ಪ್ರಕ್ರಿಯೆ ಕುರಿತು ಮೀನುಗಾರರಿಗೆ ಮಾಹಿತಿ ನೀಡಿದರು.
ಮೀನುಗಾರಿಕೆ ಸಹಾಯಕ ನಿರ್ದೇಶಕ ಕೆ. ಚಂದ್ರಶೇಖರ ಮಾತನಾಡಿ, ಮೀನುಕೃಷಿಕರ ದಿನಾಚರಣೆಯನ್ನು 1957 ಜುಲೈ. 10 ರಂದು ಡಾ. ಹಿರಾಲಾಲ್ ಚೌಧರಿ ಮತ್ತು ಡಾ. ಆಲಿಕುನಿ ಎಂಬ ಮೀನುಗಾರಿಕೆ ವಿಜ್ಞಾನಿಗಳ ಪರಿಶ್ರಮದಿಂದಾಗಿ ಏಶಿಯಾದಲ್ಲಿಯೇ ಪ್ರಪ್ರಥಮ ಬಾರಿಗೆ ನಿಂತ ನೀರಿನಲ್ಲಿ ಓವಾಪ್ರಿಮ್ ಮತ್ತು ಓವಾಟೈಡ್ ಎಂಬ ಹಾರ್ಮೋನ್‌ಗಳನ್ನು ಬಳಸಿ ಮೀನುಮರಿ ಸಂತಾನೋತ್ಪತ್ತಿಯನ್ನು ಪ್ರಾರಂಭ ಮಾಡಿ ಅಂದಿನಿಂದ ಪ್ರಾರಂಭವಾಗಿದೆ.  ಮೀನುಗಾರಿಕೆ ಕ್ರಾಂತಿಯಲ್ಲಿ ನಮ್ಮ ದೇಶ ವಿಶ್ವದಲ್ಲೆÃ ಎರಡನೇ ಅತೀ ಹೆಚ್ಚು ಮೀನು ಉತ್ಪಾದಿಸುವ ದೇಶವಾಗಿ ನೀಲಿಕ್ರಾಂತಿನ್ನೆÃ ಪ್ರಾರಂಭ ಮಾಡಿತು.  ನಮ್ಮ ದೇಶದಲ್ಲಿ 40 ಲಕ್ಷ ಮೀನುಗಾರರಿದ್ದು 2017-18ನೇ ಸಾಲಿನ ಅಂದಾಜು ಪ್ರಕಾರ ಇಂದು ದೇಶದಲ್ಲಿ 12.60 ಮಿ.ಮೆ.ಟನ್ ನಷ್ಟು ಮೀನು ಉತ್ಪಾದನೆಯಾಗುತ್ತಿದೆ.  ಅದರಲ್ಲಿ 13.37 ಲಕ್ಷ ಟನ್ ಮೀನು ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದ್ದು, ಇದರಿಂದ 45.106.89 ಕೋಟಿ ಆದಾಯ ಸರ್ಕಾರಕ್ಕೆ ಬರುತ್ತಿದೆ.  ಮೀನುಗಾರಿಕೆ ಕ್ಷೆÃತ್ರವು ದೇಶದ ಒಟ್ಟು ಜಿ.ಡಿ.ಪಿಯ 0.91% ಮತ್ತು ಕೃಷಿ ಜಿ.ಡಿ.ಪಿಯ 5.22% ರಷ್ಟು ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.  
ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೆÃಣಿ-2) ಶಿವಪುರ ರಜಿನೀಶ್, ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೆÃಣಿ-2) ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

DSC08651.JPG
DSC08668.JPG
Koppal News & Photos July-11.doc
Reply all
Reply to author
Forward
0 new messages