ಸುಗಂಧರಾಜ ಬೆಳೆದು ಆರ್ಥಿಕ ಸ್ವಾವಲಂಬನೆ ಹೊಂದಿದ ರೈತ
ಕೊಪ್ಪಳ ಜು. 20 (ಕರ್ನಾಟಕ ವಾರ್ತೆ): ನಾನು ಮಲ್ಲಿಗೆ (ಕಾಕಡ) ಬೆಳೆಯುತ್ತಿದ್ದೆ. ಶ್ರಿÃ ವಾಮನಮೂರ್ತಿಯವರ ಪ್ರೆÃರಣೆಯಿಂದ ಸುಗಂಧರಾಜ ಬೆಳೆಯಲು ಆರಂಭಿಸಿ ಒಳ್ಳೆಯ ಲಾಭ ಕಂಡುಕೊಂಡಿದ್ದೆÃನೆ ಹಾಗೇ ಪ್ರಸ್ತುತ ಸಾಲಿನಲ್ಲಿ ಉದ್ಯೊÃಗ ಖಾತ್ರಿ ಯೋಜನೆಯಡಿ 1 ಎಕರೆ ನುಗ್ಗೆಕಾಯಿ ಬೆಳೆಯನ್ನು ಶಿವಕುಮಾರ ಗಾಂಜಿ ರವರ ಮಾರ್ಗದರ್ಶನದಲ್ಲಿ ನಾಟಿ ಮಾಡಿದ್ದೆÃನೆ. ಒಟ್ಟಾರೆ ತೋಟಗಾರಿಕೆ ಇಲಾಖೆಯ ಸಹಕಾರದಿಂದ ನಾನು ಒಳ್ಳೆಯ ಆದಾಯ ಪಡೆಯುತ್ತಿದ್ದೆÃನೆ. ಅವರಿಗೆಲ್ಲ ನಾಣು ಋಣಿ” ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ನವಲಿ ಗ್ರಾಮದ ಪಂಪಾಪತಿ ಅಮಾಜಪ್ಪ ಹಚ್ಚೊಳ್ಳಿ ಎಂಬ ರೈತನ ಹೆಮ್ಮೆ ಹಾಗೂ ಆತ್ಮ ವಿಶ್ವಾಸದ ನುಡಿ.
ಏಪ್ರಿಲ್ 2018ರಲ್ಲಿ ತಮ್ಮ ಸಂಬಂಧಿಕರಿಂದ ಸುಮಾರು 50 ಸಾವಿರ ಸುಗಂಧರಾಜ ಗಡ್ಡೆಗಳನ್ನು ಖರೀದಿಸಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮಾಡಿ ಸುಗಂಧರಾಜ ಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಹೊಂದಿದ್ದಾರೆ., ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪುಷ್ಪ ಕೃಷಿ ಮಾಡಲು ಮುಂದಾಗಿ ಜೂನ್ ತಿಂಗಳಿನಲ್ಲಿ ಹನಿ ನೀರಾವರಿ ಅಳವಡಿಸಿದ್ದು ಇಲಾಖೆಯಿಂದ ಶೇ.90 ರಷ್ಟು ಸಹಾಯಧನ ಪಡೆದಿದ್ದಾರೆ. ಅಲ್ಲದೇ 2017-18 ನೇ ಸಾಲಿನಲ್ಲಿ ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೂ. 12000.00 ಸಹಾಯಧನ ಪಡೆದಿದ್ದಾರೆÉ. ಕಳೆದ ವರ್ಷ ಜುಲೈನಿಂದ ಇಳುವರಿ ಆರಂಭವಾಗಿದ್ದು ಪ್ರತಿ ದಿನ ಸರಾಸರಿ 10 ಕಿ.ಗ್ರಾಂ ಇಳುವರಿ ಪಡೆಯುತ್ತಾರೆ. ಪ್ರತಿ ಕಿ.ಗ್ರಾಂ.ಗೆ ರೂ. 60 ರಂತೆ ಮಾರಾಟ ಮಾಡುತ್ತಾರೆ.
ಕಳೆದ ವರ್ಷ ಜುಲೈನಿಂದ ನವೆಂಬರ್ ವರೆಗೂ ಸರಾಸರಿ 12 ಕಿ.ಗ್ರಾಂ. ಇಳುವರಿ ಬಂದಿದ್ದು ಇತ್ತಿÃಚೆಗೆ ಮಳೆ ಕೊರತೆಯಿಂದ ಇಳುವರಿ ಸ್ವಲ್ಪ ಕಡಿಮೆಯಾಗಿತ್ತು. ಇನ್ನು ಮೇಲೆ ಮತ್ತೆ ಇಳುವರಿ ಜಾಸ್ತಿಯಾಗುವ ನಿರೀಕ್ಷೆ ಅವರಲ್ಲಿ ಇದೆ. ಖರ್ಚೆಲ್ಲಾ ಹೋಗಿ ಪ್ರತಿ ತಿಂಗಳೂ ರೂ.10-12 ಸಾವಿರ ನಿವ್ವಳ ಲಾಭ ಪಡೆಯುತ್ತಿದ್ದಾರೆ. “ಸುಗಂಧರಾಜ 6 ತಿಂಗಳು ಚೆನ್ನಾಗಿ ಇಳುವರಿ ಕೊಡುತ್ತದೆ. ನಂತರ ಇಳುವರಿ ಕಡಿಮೆಯಾಗುತ್ತದೆ. ಆದರೂ ದಿನಾಲೂ ಕೈಯಲ್ಲಿ ಹಣ ದೊರೆಯುವ ನಿರಂತರ ಆದಾಯ ಕೊಡುವ ಬೆಳೆಯಾಗಿದೆ” ಎನ್ನುತ್ತಾರೆ ಪ್ರಗತಿಪರ ರೈತ ಪಂಪಾಪತಿ.
ಬೇರೆ ರೈತರು ಕೂಡ ವೈವಿಧ್ಯಮಯ ಬೆಳೆ ಬೆಳೆದು ಆದಾಯ ಮಾಡಿಕೊಳ್ಳಬೇಕೆಂದು ಅವರು ಸಲಹೆ ನೀಡುತ್ತಾರೆ. ಇವರ ಸಲಹೆಯಂತೆ ಇವರ ಸಂಬಂಧಿ ಶ್ರಿÃ ಬಸವರಾಜ ಕುಣಿಕೇರಿ, ಚಿಲವಾಡಗಿರವರು ಸುಗಂಧರಾಜ ಬೆಳೆಯಲು ಆಸಕ್ತರಾಗಿದ್ದು, 1/2 ಎಕರೆ ಜಾಗದಲ್ಲಿ ಸುಗಂಧರಾಜ ಬೆಳೆಯಲು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಬೇಸಾಯ ಕ್ರಮಗಳ ಬಗ್ಗೆ ತಿಳಿದುಕೊಂಡು ಗಡ್ಡೆಗಳನ್ನು ಇದೇ ತಿಂಗಳು ನಾಟಿ ಮಾಡಲು ಸಿದ್ದರಾಗಿದ್ದಾರೆ.
ಒಟ್ಟಾರೆ ತೋಟಗಾರಿಕೆ ಬೆಳೆಗಳಿಂದ ಉತ್ತಮ ಆದಾಯ ನಿರೀಕ್ಷಿಸಿರುವ ಇವರು ತರಕಾರಿ, ತೆಂಗು ಬೆಳೆಯುತ್ತಿದ್ದಾರೆ. “ತೋಟಗಾರಿಕೆ ಬೆಳೆಗಳಿಂದ ಬರಗಾಲದಲ್ಲೂ ಉತ್ತಮ ಆದಾಯ ಮಾಡಿಕೊಳ್ಳುವ ಅವಕಾಶವಿದ್ದು, ರೈತರು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಬರಗಾಲದಲ್ಲಿಯೂ ಉತ್ತಮ ಬೆಳೆ ಬೆಳೆದು ಆದಾಯ ಮಾಡಿಕೊಂಡಿರುವ ಸದರಿ ರೈತರು ಒಬ್ಬ ಮಾದರಿ ರೈತರಾಗಿದ್ದಾರೆ” ಎನ್ನುತ್ತಾರೆ ನವಲಿ ರೈತ ಸಂಘದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ ರವರು.
ಹೆಚ್ಚಿನ ಮಾಹಿತಿಗಾಗಿ ನವಲಿ ಗ್ರಾಮದ ಪಂಪಾಪತಿ, ಅಮಾಜಪ್ಪ ಹಚ್ಚೊಳ್ಳಿ ಮೊ.ಸಂ-9901467655 ಹಾಗೂ ನವಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ ಗಾಂಜಿ ಮೊ.ಸಂ-
8147397531 ಇವರನ್ನು ಸಂಪರ್ಕಿಸಬಹುದು.
======
35ನೇ ರಾಜ್ಯ ಪತ್ರಕರ್ತರ ಸಮ್ಮೆÃಳನಕ್ಕೆ ಜಿಲ್ಲಾಡಳಿತದಿಂದ ಸಹಕಾರ : ಪಿ.ಸುನೀಲ್ ಕುಮಾರ್
ಕೊಪ್ಪಳ ಜು. 20 (ಕರ್ನಾಟಕ ವಾರ್ತೆ):
ಬರುವ ಸಪ್ಟಂಬರ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ 35ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ಹೇಳಿದರು.
ಅವರು ಇಂದು (ಜುಲೈ.20) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಕೊಪ್ಪಳ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 35ನೇ ರಾಜ್ಯ ಪತ್ರಕರ್ತರ ಸಮ್ಮೆÃಳನ ಕುರಿತು ಪೂರ್ವಭಾವಿ ಸಭೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 35ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಆಚರಿಸಲು ನಿರ್ಧರಿಸಿದ್ದು, ಇದು ಜಿಲ್ಲೆಗೆ ಜವಾಬ್ದಾರಿಯಾಗಿದೆ. ಈ ಸಮ್ಮೆÃಳನವನ್ನು ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸಹಕರಿಸಲಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹಾಗೂ ಅಪೌಷ್ಠಿಕತೆ ವರದಿಗಳು ತುಂಬಾ ಹೆಚ್ಚಿವೆ. ಆದ್ದರಿಂದ ಬಾಲ್ಯ ವಿವಾಹ ಪದ್ಧತಿಯನ್ನು ಹೋಗಲಾಡಿಸಲು ಮತ್ತು ಅಪೌಷ್ಠಿಕತೆಯನ್ನು ನಿವಾರಿಸಲು ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿ. ಬಾಲ್ಯ ವಿವಾಹ ತಡೆಗೆ ಹಾಗೂ ಅಪೌಷ್ಠಿಕತೆ ನಿವಾರಿಸಲು ಜನರಿಗೆ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದ್ದು, ಸಮ್ಮೆÃಳನದಲ್ಲಿ ಈ ಕುರಿತು ಗೋಷ್ಠಿಗಳನ್ನು ಆಯೋಜಿಸಿ. ಸಮ್ಮೆÃಳನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಿ ಸಮ್ಮೆÃಳನವನ್ನು ಯಶಸ್ವಿಗೊಳಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಯು.ಡಬ್ಲೂö್ಯ.ಜೆ. ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರುರವರು ಮಾತನಾಡಿ, 35ನೇ ರಾಜ್ಯ ಮಟ್ಟದ ಸಮ್ಮೇಳನವನ್ನು ಕೊಪ್ಪಳ ಜಿಲ್ಲೆಯಲ್ಲಿ ನಡೆಸಲು ಕೆಯುಡಬ್ಲ್ಯುಜೆ ತೀರ್ಮಾನಿಸಿದೆ. ಸಮ್ಮೆÃಳನದ ಉದ್ಘಾಟನೆಯು ಮುಖ್ಯ ಮಂತ್ರಿಗಳಿಂದ ನಡೆಯಲಿದೆ. ರಾಜ್ಯ ವಿವಿಧ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಅನೇಕ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ವಿವಿಧ ಜಿಲ್ಲೆ, ದೇಶದ ವಿವಿಧ ರಾಜ್ಯಗಳಿಂದ ಮತ್ತು ವಿದೇಶದಿಂದ ಪತ್ರಕರ್ತರು ಹಾಗೂ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳು ತಿಳಿಸಿದ ಹಾಗೆಯೇ ಸಮ್ಮೆÃಳನದಲ್ಲಿ ಬಾಲ್ಯ ವಿವಾಹ ತಡೆಗೆ ಹಾಗೂ ಅಪೌಷ್ಠಿಕತೆ ನಿವಾರಿಸಲು ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಯಾವುದೇ ನೂನ್ಯತೆಗಳು ಆಗದಂತೆ ಎಲ್ಲರು ಒಟ್ಟುಗೂಡಿ ಈ ಸಮ್ಮೇಳನವನ್ನು ಯಶಸ್ವಗೋಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ರಘನಂದನ್‌ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಧನಂಜಯ ಬಿ., ಕೆ.ಯು.ಡಬ್ಲೂö್ಯ.ಜೆ. ರಾಜ್ಯ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್ ಹಾಗೂ ಪುಂಡಲೀಕ ಬಾಳೋಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿಗಳಾದ ಸಂಜೀವರಾವ್ ಕುಲಕರ್ಣಿ ಹಾಗೂ ಬಂಗ್ಲೆ ಮಲ್ಲಿಕಾರ್ಜುನ, ಖಚಾಂಚಿ ಡಾ. ಕೆ.ಉಮೇಶ್ವರ, ದೆಹಲಿ ಐ.ಎಫ್.ಡಬ್ಲೂö್ಯ.ಜೆ. ಸದಸ್ಯ ವಿ.ಆರ್. ತಾಳಿಕೋಟಿ, ಕೆ.ಯು.ಡಬ್ಲೂö್ಯ.ಜೆ. ಜಿಲ್ಲಾಧ್ಯಕ್ಷ ಎಂ ಸಾದಿಕ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್. ಗೋನಾಳ, ರಾಜ್ಯ ನಾಮಕರಣ ಸದಸ್ಯ ಹರೀಶ ಹೆಚ್.ಎಸ್., ಸಮ್ಮೆÃಳನದ ಕಾರ್ಯನಿರ್ವಹಣಾ ಉಪಸಮಿತಿ ಅಧ್ಯಕ್ಷ ಸಿರಾಜ್ ಬಿಸರಳ್ಳಿ, ಪತ್ರಿಕಾ ಭವನ ನಿರ್ಮಾಣ ಉಪಸಮಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಸೇರಿದಂತೆ ಕೆ.ಯು.ಡಬ್ಲೂö್ಯ.ಜೆ. ಕೊಪ್ಪಳ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಣಿ ಸದಸ್ಯರು, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಹಾಗೂ ಕುಕನೂರ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
======