Koppal News & Photos August-26

21 views
Skip to first unread message

KOPPAL VARTHE

unread,
Aug 26, 2019, 7:36:12 AM8/26/19
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani
ಎಚ್‌ಐವಿ / ಏಡ್ಸ್ ಕುರಿತು ನಾಳೆಯಿಂದ ಜನ ಜಾಗೃತಿ ಆಂದೋಲನ ಆರಂಭ; ಸಿಇಒ ರಘುನಂದನ್ ಮೂರ್ತಿ
ಕೊಪ್ಪಳ ಆ.26 (ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಎಚ್‌ಐವಿ ಸೋಂಕಿನ ತಡೆಗಟ್ಟುವಿಕೆ, ನಿಯಂತ್ರಣ ಹಾಗೂ ಸೋಂಕಿತರಿಗೆ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ನೀಡಲು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಆಗಸ್ಟ್ 27 ಮತ್ತು 28 ರಂದು ಎರಡು ದಿನಗಳ ಕಾಲ ಮನೆ ಮನೆ ಜನ ಜಾಗೃತಿ ಆಂದೋಲನ-2019 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ಜಿಲ್ಲಾ ಪಂಚಾಯತನ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ  ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ , ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎಚ್‌ಐವಿ/ ಏಡ್ಸ್ ಕುರಿತಾದ ಮನೆ ಮನೆ ಜನ ಜಾಗೃತಿ ಆಂದೋಲನ-2019 ರ ಕುರಿತು ಇಂದು(ಆಗಸ್ಟ್ 26) ಆಯೋಜಿಸಿದ್ದ ಪತ್ರಿಕಾ ಗೋಷ್ಟಿ ಉದ್ದೆÃಶಿಸಿ ಅವರು ಮಾತನಾಡಿದರು.
ಜನರಲ್ಲಿ ಎಚ್‌ಐವಿ ಸೋಂಕಿತರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯ ಮನೋಭಾವನೆಯನ್ನು ಹೋಗಲಾಡಿಸುವುದು, ಸೋಂಕಿತರಲ್ಲಿ ಸೂಕ್ತ ಚಿಕಿತ್ಸೆ, ಚಿಕಿತ್ಸಾ ಕೇಂದ್ರಗಳು, ಸೋಂಕು ನಿಯಂತ್ರಣ ಹಾಗೂ ತಡೆಗಟ್ಟುವಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸುವುದು, ಎಚ್‌ಐವಿ ಸೋಂಕಿನ ತಡೆ ಮತ್ತು ನಿಯಂತ್ರಣದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೆÃಜಿಸುವುದು ಹಾಗೂ ಹೆಚ್ಚು ಹೆಚ್ಚು ಜನರು ಐ.ಸಿ.ಟಿ.ಸಿ ಕೇಂದ್ರಗಳಿಗೆ ಭೇಟಿ ನೀಡಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರೆÃರೇಪಿಸುವುದು,  ಸೋಂಕಿತರು ಲಭ್ಯವಿರುವ ಉಚಿತ ಎಆರ್‌ಟಿ ಚಿಕಿತ್ಸೆ ಮತ್ತು ಸಾಮಾಜಿಕ ಸವಲತ್ತುಗಳನ್ನು ಪಡೆಯುವಂತೆ ಪ್ರೆÃರೇಪಿಸುವುದು, ಜನ ಸಾಮಾನ್ಯರು, ಪ್ರತ್ಯೆÃಕವಾಗಿ ಮಹಿಳೆಯರು ಮತ್ತು ಯುವ ಜನರಿಗೆ ಸುರಕ್ಷಿತ ಲೈಂಗಿಕ ವರ್ತನೆ ಮತ್ತು ಆರೋಗ್ಯಕರ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಪ್ರೊÃತ್ಸಾಹಿಸುವುದು, ಎಲ್ಲಾ ಗರ್ಭಿಣಿಯರು ತಮ್ಮ ಮೊದಲನೇ ತ್ರೆöÊಮಾಸಿಕದಲ್ಲಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಂಡು ಸೋಂಕು ಕಂಡು ಬಂದಲ್ಲಿ ಎಆರ್‌ಟಿ ಚಿಕಿತ್ಸೆಯೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಉತ್ತೆÃಜಿಸುವುದು ಈ ಆಂದೋಲನದ ಪ್ರಮುಖ ಉದ್ದೆÃಶವಾಗಿದೆ ಎಂದು ಅವರು ಹೇಳಿದರು.
ಈ ಅಭಿಯಾನವು 90:90:90 ಘೋಷಣೆಯೊಂದಿಗೆ ನಡೆಯುತ್ತಿದೆ. ಅಂದರೆ ಶೇ.90 ರಷ್ಟು ಎಚ್‌ಐವಿ ಸೋಂಕಿನ ಬಗ್ಗೆ ಅನುಮಾನವಿದ್ದವರು ತಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿಯುವುದು, ಶೇ. 90 ರಷ್ಟು ಎಚ್‌ಐವಿ ಸೋಂಕಿತರು ತಪ್ಪದೇ ಎಆರ್‌ಟಿ ಚಿಕಿತ್ಸೆಯನ್ನು ಪಡೆಯಬೇಕು ಮತ್ತು ಶೇ.90 ರಷ್ಟು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ವೈರಲ್ ಲೋಡ್ ಹೆಚ್ಚಾಗದಂತೆ ನಿಗಾ ವಹಿಸುವುದು. ಈ ಅಭಿಯಾನದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಭಿಯಾನ ಆರಂಭಗೊಳ್ಳುತ್ತದೆ. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ, ಜಿಲ್ಲಾ ಮೇಲ್ವಿಚಾರಕರು ಮತ್ತು ಆಪ್ತ ಸಮಾಲೋಚಕರು ಈ ಅಭಿಯಾನದ ಮೇಲ್ವಿಚಾರಣೆ ಮಾಡಲಿದ್ದಾರೆ. ವಿವಿಧ ಪ್ರಚಾರ ಮಾಧÀ್ಯಮಗಳನ್ನು ಬಳಸಿಕೊಂಡು ಈ ಕುರಿತು ಪ್ರಚಾರ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಒಟ್ಟಾರೆ 1,91,380 ಮನೆಗಳಿಗೆ ಮಾಹಿತಿಯನ್ನು ತಲುಪಿಸುವದು ಈ ಆಂದೋಲನದ  ಗುರಿಯಾಗಿದೆ. ಇಬ್ಬರು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ 684 ತಂಡಗಳು, 1367 ಸ್ವಯಂ ಸೇವಕರು, ಒಂದು ದಿನಕ್ಕೆ 95,690 ಮನೆಗಳನ್ನು ತಲುಪುವ ಗುರಿ ಇಟ್ಟುಕೊಂಡು ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲೆಯಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆ ಹಾಗೂ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರಗಳಿದ್ದು, ಇಲ್ಲಿ ಆಪ್ತ ಸಮಾಲೋಚನೆ, ಆರೋಗ್ಯ ತಪಾಸಣೆ ಹಾಗೂ ಸಿ.ಡಿ.-4 ಕಣಗಳ ಪರೀಕ್ಷೆ, ವೈರಲ್ ಲೋಡ್ ಪರೀಕ್ಷೆ, ಎಆರ್‌ಟಿ ಔಷಧವನ್ನು ನೀಡಿ ಸೋಂಕಿತರ ಆರೋಗ್ಯ ಮತ್ತು ಜೀವನವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಜಿಲ್ಲೆಯ ವಿವಿಧೆಡೆ 14 ಐಸಿಟಿಸಿ ಕೆಂದ್ರಗಳಿವೆ ಇಲ್ಲಿ ಉಚಿತ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತದೆ. ಒಟ್ಟು 46 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಯ್ದ 13 ಖಾಸಗಿ ಆಸ್ಪತ್ರೆಗಳಲ್ಲಿ (ಕೊಪ್ಪಳ-4, ಗಂಗಾವತಿ-9) ಎಚ್‌ಐವಿ / ಏಡ್ಸ್ ಕುರಿತು ಆಪ್ತ ಸಮಾಲೋಚನೆ, ಪರೀಕ್ಷೆ ಮಾಡಲಾಗುತ್ತದೆ. ಪ್ರಸ್ತುತ ಎಆರ್‌ಟಿ ಕೇಂದ್ರಗಳಿಂದ ಕ್ರೊÃಢೀಕರಿಸಿದ ಸಂಚಿತ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 5,859 ಜನ ಸೋಂಕಿತರು ಎಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ 7 ನೇ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಇದೇ ಸಂದರ್ಭ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ. ಜಿ, ಜಿಲ್ಲಾ ಆರ್. ಸಿ. ಎಚ್ ಅಧಿಕಾರಿ ಡಾ. ಲಿಂಗರಾಜ ಟಿ, ಡಾ. ಪ್ರಕಾಶ, ಡಾ. ಎಸ್. ಕೆ. ದೇಸಾಯಿ, ಡಾ. ರಾಮಾಂಜನೇಯ, ಡಾ. ಮಂಜುನಾಥ ಬಿ, ಕೆಎಸ್‌ಎಪಿಎಸ್ ನ ಅಧಿಕಾರಿ ನಂಜೇಗೌಡ ಸೇರಿದಂತೆ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
======

ಸ್ವ ಉದ್ಯೊÃಗ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ ಆ.26 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟ್ ಸಂಸ್ಥೆ ವತಿಯಿಂದ ಸೆಪ್ಟಂಬರ್ ತಿಂಗಳಲ್ಲಿ ಪ್ರಾರಂಭವಾಗುವ 30 ದಿನಗಳ ಟಿ.ವಿ ಟೆಕ್ನಿಷಿಯನ್ ಹಾಗೂ 10 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೆಪ್ಟಂಬರ್ 11 ರಿಂದ ಟಿ.ವಿ ಟೆಕ್ನಿಷಿಯನ್ ಹಾಗೂ ಸೆಪ್ಟಂಬರ್ 16 ರಿಂದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿಯು ಪ್ರಾಂರಭಗೊಳ್ಳಲಿದೆ. ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತ 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೊÃಗಿ ಯುವಜನತೆ ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ತರಬೇತಿ ಪಡೆಯಲು ಇಚ್ಛಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟ್ ಸಂಸ್ಥೆ, ಉದ್ಯೊÃಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ  ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9483485489, 9482188780, 08284-220807 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
======

ಅಂಬೇಡ್ಕರ್ ಅನುಯಾಯಿಗಳಿಗೆ ಮಹಾರಾಷ್ಟçದ ನಾಗಪೂರದ ದೀಕ್ಷಾಭೂಮಿ ಯಾತ್ರೆ
ಕೊಪ್ಪಳ ಆ.26 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಇತರೆ ಸಮುದಾಯದ ಡಾ|| ಬಿ. ಆರ್. ಅಂಬೇಡ್ಕರ್ ಅನುಯಾಯಿಗಳಿಗೆ ಮಹಾರಾಷ್ಟçದ ನಾಗಪೂರದ ದೀಕ್ಷಾಭೂಮಿ ಯಾತ್ರೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇಲಾಖೆಯ ವೆಬ್‌ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನಲ್ಲಿ ದೀಕ್ಷಾ ಯಾತ್ರ ಎಂಬ ಹೆಸರಿನಲ್ಲಿ ಲಭ್ಯವಿದ್ದು, ಸೆ. 10 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಎಸ್.ಸಿ, ಎಸ್.ಟಿ ಸಮುದಾಯದವರಾಗಿರಬೇಕು. (ಇತರೆ ಸಮುದಾಯದ ಜನರು ಬಾಬಾಸಾಹೇಬ್ ಡಾ|| ಬಿ. ಆರ್. ಅಂಬೇಡ್ಕರ್ ಅನುಯಾಯಿಗಳು ಸಹ ಯಾತ್ರೆ ಕೈಗೊಳ್ಳಬಹುದಾಗಿದೆ), ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಡಾ|| ಬಿ. ಆರ್. ಅಂಬೇಡ್ಕರ್ ರವರ ಚಿಂತನೆಗಳ ಬಗ್ಗೆ ಅರಿವು ಹೊಂದಿದ್ದು, ಸಮಾಜ ಸೇವೆ ಮಾಡಿದ ಅನುಭವ ಹೊಂದಿರಬೇಕು, ಸರ್ಕಾರಿ ವೆಚ್ಚದಲ್ಲಿ ಒಮ್ಮೆ ನಾಗಪೂರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ಹಾಗೂ ಸರ್ಕಾರಿ ಮತ್ತು ಅಂಗಸಂಸ್ಥೆಗಳಲ್ಲಿ ಸೇವೆಯಲ್ಲಿರುವವರು ಯಾತ್ರೆಗೆ ಅರ್ಹರಲ್ಲ. ರಾಜ್ಯದಲ್ಲಿ ಆಯಾ ಜಿಲ್ಲೆಗಳಿಂದಲೇ ನಾಗಪೂರಕ್ಕೆ ಹೋಗಿಬರಲು ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವುದು. ವಸತಿ ಮತ್ತು ಭೋಜನ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು. ಕೊಪ್ಪಳ ಜಿಲ್ಲೆಗೆ 80 ಗುರಿ ನಿಗಧಿಪಡಿಸಿದ್ದು,  ನಿಗಧಿತ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವಿÃಕೃತಗೊಂಡಲ್ಲಿ ವಯಸ್ಸಿನ ಜೇಷ್ಠತೆ ಹಾಗೂ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಅಥವಾ ಸಹಾಯಕ ನಿರ್ದೇಶಕರು, ಅಥವಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
29 ರಂದು ಸದೃಢ ಭಾರತ-ಫಿಟ್ ಇಂಡಿಯಾ  ಆಂದೋಲನ ಮತ್ತು ಫಿಟ್ನೆಸ್ ಪ್ರತಿಜ್ಞೆ
ಕೊಪ್ಪಳ ಆ.26 (ಕರ್ನಾಟಕ ವಾರ್ತೆ): ಭಾರತ ಸರಕಾರದ ಆದೇಶದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 29 ರಂದು  ಫಿಟ್ ಇಂಡಿಯಾ ಆಂದೋಲನ ಮತ್ತು ಫಿಟ್ನೆಸ್ ಪ್ರತಿಜ್ಞೆಯನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೆÃಶ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯು ದಿನ ನಿತ್ಯ ಯಾವುದಾದರೊಂದು ಕ್ರಿÃಡೆ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕÀ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು ಎಂಬುದಾಗಿದೆ. ಪ್ರಧಾನ ಮಂತ್ರಿಗಳ ಫಿಟ್ನೆಸ್ ಪ್ರತಿಜ್ಞೆಯನ್ನು ಪ್ರತಿಯೊಬ್ಬರು ಸ್ವಿÃಕರಿಸಿದ ನಂತರ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಆ ದಿನದ ಕಾರ್ಯಕ್ರಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನೆಹರು ಯುವ ಕೇಂದ್ರ,  ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳ ಕಾರ್ಯಾಲಯ, ಬನ್ನಿಕಟ್ಟಿ, ರಾಮಕೃಷ್ಣ ಆಶ್ರಮದ ಹತ್ತಿರ, ದೂ. ಸಂ: 08539-230116 ಗೆ ಸಂಪರ್ಕಿಸಬಹುದೆಂದು ಕೊಪ್ಪಳ  ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಡಿ. ದಯಾನಂದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
ಪರಿಸರ ಸ್ನೆÃಹಿ ಗೌರಿ ಗಣೇಶ ಹಬ್ಬವನ್ನು ಆಚರಿಸಲು ಸೂಚನೆ
ಕೊಪ್ಪಳ ಆ.26 (ಕರ್ನಾಟಕ ವಾರ್ತೆ): ಮುಂಬರುವ ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೆÃಹಿಯಾಗಿ ಆಚರಿಸುವಂತೆ ಯಲಬುರ್ಗಾ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾರ್ವಜನಿಕರಿಗೆ ತಿಳಿಸಿದ್ದಾರೆ.
    2016 ಜೂ. 20 ರ  ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪಿ.ಓ.ಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಸ್ಥಳೀಯ ಸಂಸ್ಥೆಗಳು ನಿಗಧಿಪಡಿಸಿರುವ ಸ್ಥಳಗಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು. ಮಣ್ಣಿನ ಗಣೇಶ ಮೂರ್ತಿಗಳ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕರ್‌ಗಳಲ್ಲಿ, ಕಲ್ಯಾಣಿಗಳಲ್ಲಿ ಹಸಿ ಕಸ (ಹೂವು ಹಣ್ಣು, ಬಾಳೆ ಕಂಬ, ಮಾವಿನ ತೋರಣ, ಇತ್ಯಾದಿ) ಸಮೇತ ಮೂರ್ತಿಗಳನ್ನು ನೀರಿಗೆ ವಿಸರ್ಜಿಸದೆ, ಪ್ರತ್ಯೆÃಕವಾಗಿ ವಿಲೇವಾರಿ ಮಾಡಬೇಕು. ಗರಿಷ್ಠ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಬೇಕು ಎಂದು ಯಲಬುರ್ಗಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಷಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

======

DSC_0212.JPG
IMG-20190826-WA0007.jpg
DSC_0201.JPG
DSC_0216.JPG
DSC_0202.JPG
DSC_0213.JPG
Koppal News & Photos August-26.doc
Reply all
Reply to author
Forward
0 new messages