Koppal News & Photos July-18

32 views
Skip to first unread message

KOPPAL VARTHE

unread,
Jul 18, 2019, 8:23:24 AM7/18/19
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani
ಬೆಳೆ ಅಂದಾಜು ಸಮೀಕ್ಷೆಗೆ ನೇಮಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಸೈಯಿದಾ ಅಯಿಷಾ
ಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಬೆಳೆ ಅಂದಾಜು ಸಮೀಕ್ಷೆ ಕಾರ್ಯಕ್ಕೆ ನೇಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಬೆಳೆ ಕಟಾವು ಕಾರ್ಯಕರ್ತರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  
ಅವರು ಇಂದು (ಜುಲೈ.18) ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ತಾಲ್ಲೂಕಾ ಮಟ್ಟ ಹಾಗೂ ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳಿಗೆ  ಹಮ್ಮಿಕೊಂಡಿದ್ದ ಬೇಳೆ ಕಟಾವು ಪ್ರಯೋಗಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
  ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆಹಾರ ಮತ್ತು ಆಹಾರೇತರ ಬೆಳೆಗಳ ಸರಾಸರಿ ಇಳುವರಿ ಭಿತ್ತನೆಗೆ ಬೆಳೆಗಳ ಆದ್ಯತೆ, ಬೆಳೆಗೆ ಬರುವ ಕೀಟ, ರೋಗ ಬಾಧೆಗಳು, ಬೆಳೆ ನಷ್ಟ ಮುಂತಾದವುಗಳನ್ನು ತಿಳಿಯಲು ಸರ್ಕಾರ ಬೆಳೆ ಸಮೀಕ್ಷೆಯನ್ನು ಆರಂಭಿಸಿದೆ.  ಇದಕ್ಕೆ ನೇಮಿಸಿದ ಮೂಲ ಕಾರ್ಯಕರ್ತರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು.  ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಹಂತ ಹಂತವಾಗಿ ಕಾರ್ಯನಿರ್ವಹಿಸುತ್ತಿವೆ. ಸಮೀಕ್ಷೆ ಕಾರ್ಯವು ರೈತರಿಗೆ ಬೆಳೆ ವಿಮೆ ಸೇರಿದಂತೆ ಸರ್ಕಾರದ ಇತರ ಯೋಜನೆಗಳಿಗೆ ಪೂರಕವಾಗಿರುವುದರಿಂದ ಈ ಕಾರ್ಯಕ್ಕೆ ನೇಮಿಸಿದ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು.  ಕೃಷಿ ಇಲಾಖೆಯಿಂದ ಬಿಡುಗಡೆಯಾದ ತಂತ್ರಾಂಶವನ್ನು ಬಳಸಿಕೊಂಡು ವಿಮಾ ಅಧಿಕಾರಿಗಳೊಂದಿಗೆ ನಿಯಮಾನುಸಾರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.  ಯಾವುದೇ ನಿರ್ಲಕ್ಷö್ಯ ತೋರಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಬೆಳೆ ಕಟಾವು ಕಾರ್ಯಕರ್ತರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನ ಎಂ. ಶೆಖ್‌ರವರು ಮಾತನಾಡಿ, 2016-17 ನೇ ಸಾಲಿನಿಂದ ತಂತ್ರಾಂಶ ಆಧಾರಿತ ಬೆಳೆ ಸಮೀಕ್ಷೆ ನಡೆಯುತ್ತಿದೆ.  ಅಧಿಕಾರಿಗಳು ಈ ತಂತ್ರಾಂಶದ ಕುರಿತು ಸಂಪೂರ್ಣ ತಿಳಿದುಕೊಂಡು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.  ಬೆಳೆ ಸಮೀಕ್ಷೆಯ ಎಲ್ಲ ಹಂತದ ಪ್ರಕ್ರಿಯೆ ಕುರಿತು ತಂತ್ರಾಂಶದಲ್ಲಿ ಮಾಹಿತಿ ಇದೆ.  ಅದರನುಸಾರ ಕಟಾವಿನ ಸಮಯದಲ್ಲಿ ವಿವಿಧ ಹಂತಗಳ ಛಾಯಾ ಚಿತ್ರಗಳನ್ನು ಮತ್ತು ವಿಡಿಯೋವನ್ನು ಮಾಡುವುದು ಕಡ್ಡಾಯ.  ಒಂದೇ ತೆರನಾದ ಛಾಯಚಿತ್ರ ಇರದಂತೆ ಎಚ್ಚರ ವಹಿಸಿ. ಇದರಿಂದ ವಿಮಾ ಕಂಪನೆಯವರ ಆಕ್ಷೆÃಪಣೆಗಳನ್ನು ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.  
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದರವರು ಮಾತನಾಡಿ, ಬೆಳೆ ಸಮೀಕ್ಷೆ ತಂತ್ರಾಂಶವು ವರ್ಷದಿಂದ ವರ್ಷಕ್ಕೆ ಉನ್ನತೀಕರಣಗೊಳ್ಳುತ್ತಿದೆ.  ಅದಕ್ಕೆ ತಕ್ಕಂತೆ ಅಧಿಕಾರಿಗಳು ತಂತ್ರಾಂಶದ ಹೊಸ ಕಾರ್ಯಶೈಲಿಯನ್ನು ಅರಿತು ಬೆಳೆ ಅಂದಾಜು ವಿಮೆ ಸಮೀಕ್ಷೆಯನ್ನು ನಡೆಸಬೇಕು.  ಬೆಳೆ ವಿಮೆಯ ಲಾಭವನ್ನು ಜಿಲ್ಲೆಯ ರೈತರಿಗೆ ಒದಗಿಸಬೇಕು.  ಈಗಾಗಲೇ ಸಮೀಕ್ಷಾ ಅಧಿಕಾರಿಗಳಿಗೆ ಒದಗಿಸಲಾದ ಯೋಜನಾ ಪಟ್ಟಿಯಲ್ಲಿ ನೀಡಲಾದ ಬೆಳೆಗಳ ಸಮೀಕ್ಷೆಯನ್ನು ಮಾತ್ರ ಮಡಬೇಕು. ನೀರಾವರಿ ಮತ್ತು ಮಳೆ ಆಶ್ರಿತ ಬೆಳೆ ಇದ್ದರೆ ಆಯಾ ಬೆಳೆಗಳನ್ನೆÃ ಆಯ್ಕೆ ಮಾಡಿಕೊಳ್ಳಬೇಕು.  ಪ್ರತಿ ಪ್ರಯೋಗಕ್ಕೂ ಮೂಲ ಸರ್ವೇ ನಂಬರ್ ಸೇರಿದಂತೆ ಹೆಚ್ಚುವರಿಯಾಗಿ ಅದಕ್ಕೆ 4 ಸರ್ವೇ ನಂಬರ್‌ಗಳನ್ನು ಅಪಲೋಡ್ ಮಾಡಬೇಕು.  ಆಯ್ಕೆಯಾದ ಸರ್ವೇ ನಂಬರಿನ ರೈತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಟಾವಿನ ದಿನಾಂಕ ಮತ್ತು ಸಮಯವನ್ನು ಒಂದು ದಿನ ಮುಂಚಿತವಾಗಿ ವಿಮಾ ಕಂಪನಿಯ ಅಧಿಕಾರಿಗಳಿಗೆ ತಿಳಿಸಬೇಕು.  ಬೆಳೆ ಸಮೀಕ್ಷೆ ಕಾರ್ಯವನ್ನು ಸಿ.ಸಿ.ಇ ನಿಯಮದ ಪ್ರಕಾರವೇ ಕೈಗೊಳ್ಳಬೇಕು ಎಂದು ಬೆಳೆ ಸಮೀಕ್ಷೆಯ ವಿವಿಧ ಹಂತಗಳು ಹಾಗೂ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.  
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿರವರು ಮಾತನಾಡಿ, ಇಲಾಖೆ ತಂತ್ರಾಂಶವು ಸಂಪೂರ್ಣ ಕನ್ನಡ ಭಾಷೆಯಲ್ಲಿಯೇ ಇದ್ದು, ಸಮೀಕ್ಷೆ ಕಾರ್ಯಕ್ಕೆ ಸಹಕಾರಿಯಾಗಿದೆ.  ನಮುನೆ-1 ಮತ್ತು ನಮೂನೆ-2 ನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಕಡ್ಡಾಯವಾಗಿ ಸಮೀಕ್ಷೆಗೆ ನೇಮಿಸಿದ ಮೂಲಕಾರ್ಯಕರ್ತರೇ ತಂತ್ರಾಂಶದಲ್ಲಿ ಭರ್ತಿ ಮಾಡಬೇಕು ಹಾಗೂ ಕ್ಷೆÃತ್ರ ಭೇಟಿಗೆ ಮೂಲಕಾರ್ಯಕರ್ತರೆ ಖುದ್ದು ಹಾಜರಾಗಬೇಕು.  ಪ್ರಸಕ್ತ ವರ್ಷ ಏಐಸಿ ವಿಮಾ ಕಂಪನಿಯು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಆ ಕಂಪನಿ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ಬೆಳೆ ಕಟಾವು ದಿನ ಅವರನ್ನು ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕೃಷಿ ಇಲಾಖೆಯಿಂದ ಬೆಳೆ ಕಟಾವಿಗೆ ಸಂಬಂಧಿಸಿದ ಕಿಟ್‌ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.  ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ಆಗಮಿಸಿ ಬೆಳೆ ಕಟಾವು ಕಾರ್ಯಕರ್ತರಿಗೆ ಬೆಳೆ ಕಟಾವು ಕಿಟ್‌ಗಳನ್ನು ವಿತರಿಸಿದರು.  ನಂತರ ಮಾತನಾಡಿ ಬೆಳೆ ಕಟಾವು ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಿ.  ಕರ್ತವ್ಯದಲ್ಲಿ ಯಾವುದೇ ಲೋಪದೋಷಗಳು ಇರಬಾರದು.  ತಮಗೆ ನೀಡಲಾದ ಕ್ಷೆÃತ್ರಗಳಿಗೆ ಭೇಟಿ ನೀಡಿ ಸರಿಯಾಗಿ ನಿಯಮಾನುಸಾರವಾಗಿ ಸಮೀಕ್ಷೆಯನ್ನು ಮಾಡಲೆಬೇಕು.  ತಪ್ಪಿದಲ್ಲಿ ನಿರ್ಧಾಕ್ಷಿÃಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
======
ಜು. 20 ರಂದು ಪತ್ರಿಕಾ ದಿನಾಚರಣೆ ಹಾಗೂ 35ನೇ ರಾಜ್ಯ ಪತ್ರಕರ್ತರ ಸಮ್ಮೆÃಳದ ಪೂರ್ವಭಾವಿ ಸಭೆ
ಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಕೊಪ್ಪಳ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಾಗೂ 35ನೇ ರಾಜ್ಯ ಪತ್ರಕರ್ತರ ಸಮ್ಮೆÃಳನ ಕುರಿತು ಪೂರ್ವಭಾವಿ ಸಭೆಯನ್ನು ಜುಲೈ. 20 ರಂದು ಮಧ್ಯಾಹ್ನ 02-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸುವರು.  ಸಂಸದ ಸಂಗಣ್ಣ ಕರಡಿ ಸಾಧಕ ಪತ್ರಕರ್ತರಿಗೆ ಸನ್ಮಾನಿಸುವರು.  ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕೆ.ಯು.ಡಬ್ಲೂö್ಯ.ಜೆ. ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರುರವರು ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಜಿಲ್ಲಾ ವಾರ್ತಾಧಿಕಾರಿ ಧನಂಜಯ ಬಿ., ಕೆ.ಯು.ಡಬ್ಲೂö್ಯ.ಜೆ. ರಾಜ್ಯ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್ ಹಾಗೂ ಪುಂಡಲೀಕ ಬಾಳೋಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿಗಳಾದ ಸಂಜೀವರಾವ್ ಕುಲಕರ್ಣಿ ಹಾಗೂ ಬಂಗ್ಲೆ ಮಲ್ಲಿಕಾರ್ಜುನ, ಖಚಾಂಚಿ ಡಾ. ಕೆ.ಉಮೇಶ್ವರ ಪಾಲ್ಗೊಳ್ಳುವರು.  
ದೆಹಲಿ ಐ.ಎಫ್.ಡಬ್ಲೂö್ಯ.ಜೆ. ಸದಸ್ಯ ವಿ.ಆರ್. ತಾಳಿಕೋಟಿ, ಕೆ.ಯು.ಡಬ್ಲೂö್ಯ.ಜೆ. ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್. ಗೋನಾಳ, ರಾಜ್ಯ ನಾಮಕರಣ ಸದಸ್ಯ ಹರೀಶ ಹೆಚ್.ಎಸ್., ಸಮ್ಮೆÃಳನದ ಕಾರ್ಯನಿರ್ವಹಣಾ ಉಪಸಮಿತಿ ಅಧ್ಯಕ್ಷ ಸಿರಾಜ್ ಬಿಸರಳ್ಳಿ, ಪತ್ರಿಕಾ ಭವನ ನಿರ್ಮಾಣ ಉಪಸಮಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಸೇರಿದಂತೆ ಕೆ.ಯು.ಡಬ್ಲೂö್ಯ.ಜೆ. ಕೊಪ್ಪಳ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಣಿ ಸದಸ್ಯರು, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಹಾಗೂ ಕುಕನೂರ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.    
======
ನವ ವೃಂದಾವನ ಗಡ್ಡಿ ಪ್ರಕರಣ : ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದಿರಿ
ಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ಠಾಣಾ ವ್ಯಾಪ್ತಿಯಲ್ಲಿ ಬರುವ ಆನೆಗುಂದಿ ಸಿಮಾದ ನವ ವೃಂದಾವನ ಗಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಠಾಣಾ ವ್ಯಾಪ್ತಿಯಲ್ಲಿ ಬರುವ ಆನೆಗುಂದಿ ಸಿಮಾದ ನವ ವೃಂದಾವನ ಗಡ್ಡಿಯಲ್ಲಿ ಪೂಜ್ಯರ ವೃಂದಾವನವನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಈ ಮಾಹಿತಿ ಮೇರೆಗೆ ಕೂಡಲೇ ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ತಳವಾರ, ಪಿಎಸ್‌ಐ ಪ್ರಕಾಶ ಮಾಳಿ ಹಾಗೂ ಜಿಲ್ಲೆಯ ವೈಜ್ಞಾನಿಕ ತಂಡದವರು (ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸೇರಿದಂತೆ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆರೋಪಿತರ ಪತ್ತೆಗೆ ಸಿಪಿಐ ಸುರೇಶ ತಳವಾರು ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ವೈಜ್ಞಾನಿಕ ತಳಹದಿಯ ಮೇಲೆ ತನಿಖೆಯನ್ನು ಕೈಗೊಂಡಿದ್ದು, ಶ್ರಿÃಘ್ರವಾಗಿ ಆರೋಪಿತರನ್ನು ಪತ್ತೆಮಾಡಿ ಪ್ರಕರಣವನ್ನು ಬೇಧಿಸಲಾಗುವುದು.  ಈ ವಿಷಯವಾಗಿ ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೇ ಶಾಂತತೆ ಕಾಪಾಡಲು ಪ್ರಕಟಣೆ ಮನವಿ ಮಾಡಿದೆ.
======
ಖಾಸಗಿ ಆರೋಗ್ಯ ಸಂಸ್ಥೆಗಳು ಕೆ.ಪಿ.ಎಂ.ಇ ಕಾಯ್ದೆಯಡಿ ನೋಂದಣಿ/ ನವೀಕರಣ ಕಡ್ಡಾಯ
ಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ವೃತ್ತಿಮಾಡುವ ಖಾಸಗಿ ಆರೋಗ್ಯ ಸಂಸ್ಥೆಗಳು ಕೆ.ಪಿ.ಎಂ.ಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ/ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಪಿ.ಎಂ.ಇ ಕಾಯ್ದೆಯಡಿ ಈಗಾಗಲೇ ನೋಂದಣಿಮಾಡಿಸಿಕೊಂಡಿರುವ ಲ್ಯಾಬ್, ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಮ್ ಹಾಗೂ ಇತರೇ ಖಾಸಗಿ ಆರೋಗ್ಯ ಸಂಸ್ಥೆಗಳು ನೋಂದಣಿಮಾಡಿಸಿದ್ದು, ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಂತೆ ಎಚ್ಚರಿಕೆ ನೋಟಿಸ್ ಹಾಗೂ ದಿನಪತ್ರಿಕೆಗಳ ಮೂಲಕ ಸಾಕಷ್ಟು ಬಾರಿ ಮಾಹಿತಿ ನೀಡಲಾಗಿರುತ್ತದೆ.  ಆದರೂ ಸಹ ಈ ಕಾರ್ಯಾಲಯಕ್ಕೆ ನೋಂದಣಿ/ ನವೀಕರಣಕ್ಕಾಗಿ ಯಾರೂ ಅರ್ಜಿ ಸಲ್ಲಿಸಿರುವುದಿಲ್ಲ.  ಕಾರಣ ಕೂಡಲೇ ಅರ್ಜಿಸಲ್ಲಿಸಲು ಸೂಚಿಸಿದೆ.
ಹೊಸನೋಂದಣಿ ಅಥವಾ ನವೀಕರಣಕ್ಕಾಗಿ ಅರ್ಜಿಸಲ್ಲಿಸದೇ ಇದ್ದಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ನಿಯಮಾನುಸಾಗರ ಕ್ರಮವಹಿಸಲಾಗುವುದು.  ಈಗಾಗಲೇ ನೋಂದಣಿಮಾಡಿ ಅವಧಿ ಮುಗಿದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳ ಕಾರ್ಯಾಲಯ ಕೊಪ್ಪಳಕ್ಕೆ ಅರ್ಜಿ ಸಲ್ಲಿಸದೇ ಇರುವ ಖಾಸಗಿ ಆರೋಗ್ಯ ಸಂಸ್ಥೆಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      
======
DSC_0371.JPG
DSC_0381.JPG
DSC_0373.JPG
DSC_0378.JPG
DSC_0390.JPG
Koppal News & Photos July-18.doc
IMG_6952.JPG
IMG_6958.JPG
Reply all
Reply to author
Forward
0 new messages