Koppal News & Photos, Mar-03

30 views
Skip to first unread message

KOPPAL VARTHE

unread,
Mar 3, 2020, 6:54:00 AM3/3/20
to Somareddy Alavandi, nadanudi, infokoppal, lokadarshankpl, navodayadaily, enknbel, tspatil1001, editorsamarthavani, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, sudinakpl, Mounesh Badiger, eshanyatimes, Dist. Information Officer KOPPAL, varthabha...@googlegroups.com, suvarnagirikannada, Koppal News, nagarikkpl, Koppal Varthe, Dattu Kammar, murugesh b s, naabhiraj, ybjudi123, Rajasa Mullar, uv koppal, Bellary Belagayithu, kplskpaper, kakarlamallikarjun, pppgvt, janakoogu, Basavaraj Karugal, nugadoni, airhptco...@gmail.com, vasudev vasu, Kuber Majjigi, mahadevgouda patil, venkatesh kulkarni, Vartha Loka, Akshay BS, Raju Br, Information Department, shivakumar k, raichurvani, shukraj gangavati, suddimoola, suddimoola24, Shivakumar Pattar, Kranti KD, Basavaraj Basavaraj, sangameshchilly, basavaraja karkihalli, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, Ravi.sa...@gmail.com, bvenka...@yahoo.in, Nagaraj Y Priyanka nagaraj Y, Manjunath Gondbal, Anmol times3, rbadiger2, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, sharanappa kumbar, munjaneex...@gmail.com, koppal...@gmail.com, hinduka...@gmail.com, hndoddamani, praja...@gmail.com, sureshgut...@gmail.com, benki...@gmail.com, gavis...@gmail.com, gsg...@gmail.com, shivakuma...@gmail.com, rhn...@gmail.com, edi...@vartamitra.com, pannan...@gmail.com, koppa...@gmail.com, fag...@gmail.com, hkne...@gmail.com, aruna...@gmail.com, i.san...@gmail.com
ಕಾರ್ಮಿಕ ಇಲಾಖೆ ವತಿಯಿಂದ ಮೃತ ಕಟ್ಟಡ ಕಾರ್ಮಿಕನ ಕುಟುಂಬಕ್ಕೆ ಪರಿಹಾರ
ಕೊಪ್ಪಳ ಮಾ. 03 (ಕರ್ನಾಟಕ ವಾರ್ತೆ): ಮಂಗಳೂರು ನಗರದ ಬಾಲಕರ ವಸತಿ ನಿಲಯದ ಸಮೀಪದ
ಕರಂಗಲ್ ಪಾಡಿ ಜಂಕ್ಷನ್ ಬಿಲ್ಡಿಂಗ್ ಕಾರ್ಯದಲ್ಲಿ ಸಾವನ್ನಪ್ಪಿದ ಕೊಪ್ಪಳ ತಾಲ್ಲೂಕಿನ
ಹೊಸಮುದ್ಲಾಪುರ ಗ್ರಾಮದ ಭೀಮೇಶ ಮೈಸೂರಪ್ಪ ಗಡಾದ ಅವರ ಕುಟುಂಬಕ್ಕೆ ಕೊಪ್ಪಳ ಕಾರ್ಮಿಕ
ಇಲಾಖೆ ವತಿಯಿಂದ ಪರಿಹಾರ ನೀಡಲಾಯಿತು.
ಮೃತ ಕಾರ್ಮಿಕ ಭೀಮೇಶ ಪತ್ನಿ ಜ್ಯೋತಿಯವರ ಬ್ಯಾಂಕ್ ಖಾತೆಗೆ ಕಟ್ಟಡ ಮತ್ತು ಇತರೆ
ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ರೂ. 5 ಲಕ್ಷಗಳ ಪರಿಹಾರ ಬಿಡುಗಡೆಯಾಗಿದ್ದು,
ಇಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ರವರು ಮೃತ ಕಾರ್ಮಿಕನ ಪತ್ನಿಗೆ ಪರಿಹಾರ
ಬಿಡುಗಡೆ ಆದೇಶ ಪ್ರತಿ ನೀಡಿದರು. ಈ ಸಂದರ್ಭ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ
ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಹಾಗೂ ಮೃತ
ಕಾರ್ಮಿಕನ ಕುಟುಂಬ ವರ್ಗದವರು ಹಾಜರಿದ್ದರು.
(ಫೋಟೋ ಕಳುಹಿಸಿದೆ)
==========
ತಾವರಗೇರಾ ಪಪಂ : ದರಗಳ ಅಂತಿಮ ಪಟ್ಟಿ ಪ್ರಕಟ
ಕೊಪ್ಪಳ ಮಾ. 03 (ಕರ್ನಾಟಕ ವಾರ್ತೆ): ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ
2020-21ನೇ ಸಾಲಿನ ಆಸ್ತಿ ಆಸ್ತಿ ತೆರಿಗೆ ದರಗಳನ್ನು ಅಂತಿಮಗೊಳಿಸಿ ಅಂತಿಮ ದರಗಳ
ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಸ್ತಿ ತೆರಿಗೆ ದರ ಪರಿಷ್ಕರಣೆ ಕುರಿತು ಪ.ಪಂ. ಕಾರ್ಯಾಲಯ ವತಿಯಿಂದ ಸಾರ್ವಜನಿಕರು
ಹಾಗೂ ಸಂಘ-ಸAಸ್ಥೆಗಳಿAದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು, ಆದರೆ
ಯಾವುದೇ ಅರ್ಜಿಗಳು ಹಾಗೂ ಆಕ್ಷೇಪಣೆಗಳು ಬಾರದೇ ಇರುವುದರಿಂದ ಕರ್ನಾಟಕ ಪುರಸಭೆಗಳ
ಕಾಯ್ದೆ ನಿಯಮ 102(ಎ) ಪ್ರಕಾರ ಮತ್ತು ಸರ್ಕಾರದ ಸುತ್ತೋಲೆಗಳ ಪ್ರಕಾರ ದರಗಳನ್ನು
ಅಂತಿಮಗೊಳಿಸಿ ಪ್ರಕಟಿಸಲಾಗಿದೆ. ಈ ದರಗಳು ಏಪ್ರಿಲ್ 01 ರಿಂದ ಜಾರಿಯಾಗಲಿವೆ ಎಂದು
ತಾವರಗೇರಾ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==========
ಕೊಪ್ಪಳ ನಗರಸಭೆ : ಫಲಾನುಭವಿಗಳಿಗೆ ಸೂಚನೆ
ಕೊಪ್ಪಳ ಮಾ. 03 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ವಸತಿ
ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮಾರ್ಚ್ 14 ರೊಳಗೆ ಮನೆ ನಿರ್ಮಾಣ ಕಾರ್ಯವನ್ನು
ಆರಂಭಿಸಿ, ಕಾರ್ಯಾಲಯದ ಸಿಬ್ಬಂದಿಯಿAದ ಜಿ.ಪಿ.ಎಸ್ ಮಾಡಿಸಿಕೊಂಡು, ಮನೆ ನಿರ್ಮಾಣದ
ವಂತಿಕೆ ಹಣವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಆಶ್ರಯ ಯೋಜನೆ ಅಡಿಯಲ್ಲಿ ಸನ್ 2015-16 ನೇ ಸಾಲಿನ ಅಂಬೇಡ್ಕರ್ ನಗರ ವಸತಿ ಯೋಜನೆ,
2016-17 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ, 2017-18 ನೇ ಸಾಲಿನ ಅಂಬೇಡ್ಕರ್
ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಹಾಗೂ 2017-18 ನೇ ಸಾಲಿನ ಹೆಚ್ಚುವರಿ
ವಾಜಪೇಯಿ ನಗರ ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾದಂತಹ ಫಲಾನುಭವಿಗಳು ಮನೆಯನ್ನು
ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ
ಮನೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವAತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಅವಧಿ
ಮುಗಿದ ನಂತರ ನಿಗಮದ ತಂತ್ರಾAಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳದ ಫಲಾನುಭವಿಗಳ
ಹೆಸರುಗಳು ಬ್ಲಾಕ್ ಆದಲ್ಲಿ ಅದಕ್ಕೆ ನಗರಸಭೆ ಜವಾಬ್ದಾರಿಯಾಗಿರುವುದಿಲ್ಲ. ಆದ್ದರಿಂದ
ನಿಗದಿತ ಅವಧಿಯೊಳಗೆ ಮನೆ ನಿರ್ಮಿಸಿಕೊಂಡು ಸಹಾಯಧನದ ಮೊತ್ತವನ್ನು ಪಡೆದುಕೊಳ್ಳವಂತೆ
ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸೂಚನಾ ಫಲಕದಲ್ಲಿ ಫಲಾನುಭವಿಗಳ ಯಾದಿಯನ್ನು
ಪರಿಶೀಲಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==========
ಕೃಷಿ ಇಲಾಖೆ: ಯಂತ್ರಚಾಲಿತ ಎಣ್ಣೆ ಗಾಣಗಳಿಗೆ ರೈತರಿಂದ ಅರ್ಜಿ ಆಹ್ವಾನ
ಕೊಪ್ಪಳ ಮಾ. 03 (ಕರ್ನಾಟಕ ವಾರ್ತೆ): ಕೃಷಿ ಇಲಾಖೆ ವತಿಯಿಂದ 2019-20ನೇ ಸಾಲಿನಲ್ಲಿ
ರೈತರಿಗೆ ಸಣ್ಣ ಯಂತ್ರಚಾಲಿತ ಎಣ್ಣೆ ಗಾಣಗಳನ್ನು ನೀಡಿ ಪರಿಶುದ್ದ ಹಾಗೂ ಆರೋಗ್ಯ
ಪೂರ್ಣ ಎಣ್ಣೆ ಉತ್ಪಾದನೆ ಮಾಡಲು ಪ್ರೋತ್ಸಾಹಧನ ನೀಡಲಾಗುತ್ತಿದ್ದು, ರೈತರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಸಣ್ಣ ಯಂತ್ರಚಾಲಿತ ಎಣ್ಣೆ ಗಾಣಗಳನ್ನು ರೈತರಿಗೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ, ರೈತ
ಗುಂಪುಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಸಾಮಾನ್ಯ ಯೋಜನೆಯಡಿ ಶೇ.75 ಕ್ಕೆ ಮೀರದಂತೆ
ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರಷ್ಟು
ಸಹಾಯಧನವನ್ನು ಗರಿಷ್ಟ ಮಿತಿ ರೂ. 1 ಲಕ್ಷ ಮೀರದಂತೆ ನೀಡಲಾಗುವುದು.
ರೈತರು ಸಹಾಯಧನ ಅಡಿ ಸವಲತ್ತು ಪಡೆಯಲು ಕಡ್ಡಾಯವಾಗಿ ಫ್ರುಟ್ಸ್ ಪೋರ್ಟಲ್ (Fruits
Portal) ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋದಾಯಿತ ರೈತರು ಮಾತ್ರ
ಸವಲತ್ತನ್ನು ಪಡೆಯಲು ಅರ್ಹರಾಗಿರುತ್ತಾರೆ. ರೈತರು ನಿಗದಿತ ನಮೂನೆಯಲ್ಲಿ ಸಂಬAಧಿಸಿದ
ದಾಖಲೆಗಳೊಂದಿಗೆ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಪಹಣಿ/ಹಿಡುವಳಿ ಪತ್ರ,
ಚಕ್‌ಬಂದಿ, ಆಧಾರ್ ಕಾರ್ಡ್ ಪ್ರತಿ (ಆಧಾರ್ ಕಾರ್ಡ್ನ ಪ್ರತಿಯನ್ನು ಪಡೆಯುವಾಗ
ರೈತರಿಂದ ತಪ್ಪದೇ ಒಪ್ಪಿಗೆ ಪತ್ರ ಪಡೆಯಬೇಕು). ಮತದಾರರ ಗುರುತಿನ ಚೀಟಿ, ಭಾವ ಚಿತ್ರ,
ಬ್ಯಾಂಕ್ ಖಾತೆ ವಿವರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಮಾತ್ರ)ವನ್ನು ಪಡೆಯಬೇಕು. ರೈತರು ರೂ. 20 ರ
ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ಹಾಗೂ ಘಟಕಕ್ಕೆ ಇತರೆ ಇಲಾಖೆಗಳಾದ ತೋಟಗಾರಿಕೆ
ಅಥವಾ ರೇಷ್ಮೆ ಇಲಾಖೆಯಿಂದ ಯಾವುದೇ ರೀತಿಯ ಸಹಾಯಧನ ಪಡೆದಿರುವುದಿಲ್ಲ ಎಂಬ ದೃಢೀಕರಣ
ಪತ್ರದ ದಾಖಲಾತಿ, ಘಟಕದ ಖರೀದಿಗೆ ಬ್ಯಾಂಕನಿAದ ಸಾಲ ಪಡೆದಿದ್ದಲ್ಲಿ, ಬ್ಯಾಂಕ್ ಸಾಲದ
ಖಾತೆ ವಿವರಗಳು ಇವುಗಳೊಂದಿಗೆ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಅರ್ಜಿಯನ್ನು
ಮಾರ್ಚ್ 10 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ
ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ರೈತ ಸಂಪರ್ಕ ಕೇಂದ್ರದಲ್ಲಿ ಸ್ವೀಕೃತವಾದ ಎಲ್ಲಾ ಅರ್ಜಿಗಳ ವಿವರಗಳನ್ನು
(ಫಲಾನುಭವಿಗಳ ಹೆಸರು, ವಿಳಾಸ, ಅರ್ಜಿ ನೀಡಿದ ದಿನಾಂಕ) ಜೇಷ್ಠತೆಯಲ್ಲಿ ಒಂದು
ಪ್ರತ್ಯೇಕ ವಹಿಯಲ್ಲಿ ದಾಖಲಿಸಬೇಕು. ಉಳಿದಂತೆ ಸಣ್ಣ ಯಂತ್ರಚಾಲಿತ ಎಣ್ಣೆ ಗಾಣಗಳ
ವಿತರಣೆ ಯೋಜನೆಯನ್ನು ಕೃಷಿ ಯಾಂತ್ರೀಕರಣ ಯೋಜನೆಯ ಮಾರ್ಗಸೂಚಿಯನ್ವಯ ಕಾರ್ಯಕ್ರಮವನ್ನು
ಅನುಷ್ಟಾನ ಮಾಡಲಾಗುವುದು. ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
==========
ಜಿಲ್ಲಾ ಪಂಚಾಯತ್‌ನಲ್ಲಿ ಇ-ಆಫೀಸ್ ಉದ್ಘಾಟನೆ
ಕೊಪ್ಪಳ ಮಾ. 03 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತ ವತಿಯಿಂದ ಆಡಳಿತ ಸುಧಾರಣೆ
ಮತ್ತು ಸರಳೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕಡತಗಳನ್ನು ಕಾಲ
ಮಿತಿಯಲ್ಲಿ ವಿಲೇವಾರಿಗೊಳಿಸುವ ಉದ್ದೇಶದಿಂದ ಇ-ಆಫೀಸ್ ಆಡಳಿತವನ್ನು ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಉದ್ಘಾಟಿಸಿದರು.
ಈ ಸಂದರ್ಭ ಜಿ.ಪಂ. ಉಪ ಕಾರ್ಯದರ್ಶಿಗಳು, ಜಿ.ಪಂ. ಯೋಜನಾ ನಿರ್ದೇಶಕರು, ಮುಖ್ಯ
ಯೋಜನಾಧಿಕಾರಿಗಳು ಹಾಗೂ ಎನ್.ಐ.ಸಿ ಅಧಿಕಾರಿಗಳು ಮತ್ತು ಕಾರ್ಯಾಲಯದ ವ್ಯವಸ್ಥಾಪಕರು
ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
==========
ಅಗ್ನಿ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಗ್ನಿಶಾಮಕ ಠಾಣೆ ಸಂಪರ್ಕಿಸಲು ಸೂಚನೆ
ಕೊಪ್ಪಳ ಮಾ. 03 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾಗಿದ್ದು,
ಮಾರ್ಚ್ನಿಂದ ಜೂನ್ ತಿಂಗಳ ವರೆಗೆ ಅತಿ ಹೆಚ್ಚು ಅಗ್ನಿ ಅವಘಡಗಳು ನಡೆಯುವ ಸಂಭವ
ಇರುತ್ತದೆ. ಅಗ್ನಿ ದುರಂತಗಳಿAದ ಸಾರ್ವಜನಿಕರ ಅಪಾರ ಪ್ರಮಾಣದ ಆಸ್ತಿ ನಷ್ಟವಾಗುವ
ಸಾಧ್ಯತೆ ಇರುವುದರಿಂದ, ಜಿಲ್ಲೆಯಾದ್ಯಂತ ಬರುವ ಸೂಕ್ಷö್ಮ, ಅತಿಸೂಕ್ಷö್ಮ ಸ್ಥಳಗಳಾದ
ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಘಟಕಗಳು, ಟೈರ್ ಕಾರ್ಖಾನೆಗಳು, ಪಿಠೋಪಕರಣಗಳ
ಮಳಿಗೆಗಳು, ಗೋದಾಮುಗಳು, ತೈಲ ಸಂಗ್ರಹಗಾರಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು,
ಬಹುಮಹಡಿ ಕಟ್ಟಡಗಳು ಮತ್ತು ವಾಣಿಜ್ಯ ಮಳಿಗೆಗಳು ಇತ್ಯಾದಿ ಇಂತಹ ಆವರಣಗಳಲ್ಲಿ ಅಗ್ನಿ
ಅನಾಹುತಗಳನ್ನು ತಡೆಯಲು ಅಗ್ನಿಶಾಮಕ ಉಪಕರಣಗಳನ್ನು ಮತ್ತು ಸಾಕಷ್ಟು ನೀರಿನ
ಸಂಗ್ರಹಗಾರಗಳನ್ನು ಹೊಂದುವುದು ಅತಿ ಅವಶ್ಯಕವಾಗಿರುತ್ತದೆ.
ಆದ್ದರಿಂದ ಜಿಲ್ಲಾ ಅಗ್ನಿಶಾಮಕ ದಳದ ವತಿಯಿಂದ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ
ಸೂಕ್ಷö್ಮ ಮತ್ತು ಅತಿಸೂಕ್ಷö್ಮ ಸ್ಥಳಗಳಲ್ಲಿ ಉಂಟಾಗಬಹುದಾದ ಅಗ್ನಿ ಅನಾಹುತಗಳನ್ನು
ತಡೆಯುವ ಸಲುವಾಗಿ ಸಾರ್ವಜನಿಕರಲ್ಲಿ ಅಗ್ನಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ
ಉಪನ್ಯಾಸ, ಅಣಕು ಪ್ರದರ್ಶನ, ಅರಿವು ಮೂಡಿಸುವ ಬಗ್ಗೆ ಉಚಿತವಾಗಿ ಮಾಹಿತಿ
ನೀಡಲಾಗುತ್ತಿದ್ದು, ಆಸಕ್ತರು ಜಿಲ್ಲಾ ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸುವAತೆ
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==========
IMG-20200302-WA0013.jpg
IMG-20200302-WA0012.jpg
IMG-20200302-WA0014.jpg
Koppal News & Photos, Mar-03.docx
IMG_1149.JPG
IMG_1150.JPG
Reply all
Reply to author
Forward
0 new messages