KOPPAL VARTHE
unread,Jul 12, 2019, 7:39:09 AM7/12/19Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani
ಮಕ್ಕಳ ಚಲನಚಿತ್ರೊÃತ್ಸವ : ಜು. 17 ರಂದು ಪೂರ್ವಭಾವಿ ಸಭೆ
ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಮಕ್ಕಳ ಚಲನಚಿತ್ರೊÃತ್ಸವ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ಜುಲೈ.17 ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಗಂಣದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಕೊಪ್ಪಳ ಜಿಲ್ಲೆದಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಮಕ್ಕಳ ಚಲನಚಿತ್ರೊÃತ್ಸವ ನಡೆಸುವ ಸಂಬಂಧ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳುವ ಕುರಿತು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜುಲೈ. 17 ರಂದು ಮಧ್ಯಾಹ್ನ 04 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಗಂಣದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು. ಸಂಬಂಧಿಸಿದ ಇಲಾಖೆಗಲ ಅಧಿಕಾರಿಗಳು ಪ್ರತಿನಿಧಿಗಳನ್ನು ಕಳುಹಿಸದೆ ತಾವೇ ಖುದ್ದಾಗಿ ಸಭೆಗೆ ಹಾಜರಾಗುಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
ಸರ್ಕಾರದ ಸೌಲಭ್ಯಗಳ ಕುರಿತು ವಿಕಲಚೇತನರಲ್ಲಿ ಅರಿವು ಮೂಡಿಸಿ : ಪಿ. ಸುನೀಲ್ ಕುಮಾರ್
ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ವಿಕಲಚೇತನರ ವೈಯಕ್ತಿಕ ಅವಶ್ಯಕತೆಗಳನ್ನು ಗುರುತಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿಕಲಚೇತನರಿಗೆ ಜಾಗೃತಿ ಮತ್ತು ಅರಿವು ಮೂಡಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕರಿ ಪಿ. ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾ ನಗರಸಭೆ ಕಾರ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ), ಕೊಪ್ಪಳ ಆರ್.ಪಿ.ಡಿ ಟಾಸ್ಕ್ ಫೋರ್ಸ್, ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಯೋಗದಲ್ಲಿ ಸಾರ್ವಜನಿಕರ ಮೈದನದಲ್ಲಿ ಏರ್ಪಡಿಸಿದ್ದ ನಗರಸಭೆ ವ್ಯಾಪ್ತಿಯಲ್ಲಿ ವಿಕಲಚೇತನರ ಅಗತ್ಯತೆಗಳನ್ನು ಗುರುತಿಸುವ ಹಾಗೂ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ನಗರ ಸಭೆಯು ತಮ್ಮ ವ್ಯಾಪ್ತಿಯಲ್ಲಿ ಬರುವ ಒಟ್ಟು 31 ವಾರ್ಡ್ಗಳಲ್ಲಿ ಅಂಗವಿಕಲರ ಸಮೀಕ್ಷೆಯನ್ನು ಮಾಡಿದ್ದು, ನಗರದಲ್ಲಿ 1024 ಜನ ವಿಕಲಚೇತನರಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು 21 ರೀತಿಯ ವಿಕಲಚೇತನರಿದ್ದು ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಕುರಿತು ಶಿಬಿರದಲ್ಲಿ ಮಾಹಿತಿ ಪಡೆಯಬಹುದಾಗಿದೆ. ನಗರಸಭೆಯಿಂದ ವಿಕಲಚೇತರಿಗೆ ಅನೇಕ ರೀತಿಯ ಸೌಲಭ್ಯಗಳು ಇದ್ದು ಅವುಗಳನ್ನು ಹಂತ ಹಂತವಾಗಿ ನೀಡುತ್ತಿದ್ದಾರೆ. ವಿಕಲಚೇತನರು ಅನೇಕ ರೀತಿಯ ನ್ಯೂನ್ಯತೆಗಳಿಗೆ ಒಳಗಾಗಿರುತ್ತಾರೆ ಅಂತಹ ವಿಕಲಚೇತನರು ಈ ಶಿಬಿರದಲ್ಲಿ ಭಾಗವಹಿಸಿ ತಜ್ಞ ವೈದ್ಯರಿಂದ ಸಲಹೆಗಳನ್ನು ಪಡೆಯಬಹುದಾಗಿದೆ. ಹಾಗೂ ಶಸ್ತç ಚಿಕಿತ್ಸೆಗೆ ಸಂಬಂಧಿಸಿದಂತಹ ವಿಷಯಗಳ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ. ಈ ರೀತಿಯ ಶಿಬಿರುವು ರಾಜ್ಯದಲ್ಲೆ ಪ್ರಥಮ ಶಿಬಿರವಾಗಿದೆ. ವಿಕಲಚೇತನರ ವೈಯಕ್ತಿಕ ಅವಶ್ಯಕತೆಗಳನ್ನು ಗುರತಿಸಿ ಅವರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಸುನೀಲ್ ಪಿ ಪಾಟೀಲ್, ಜಿಲ್ಲಾ ಶಸ್ತç ಚಿಕಿಸ್ತಕರು ಡಾ.ದಾನರಡ್ಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಲಮ್ಮಾಣಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್ ಮೂಲಿಮನಿ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ವೀರಣ್ಣ ಹಾಗೂ ನಗರಸಭೆ ಸಿಬ್ಬಂದಿಗಳು ಸೇರಿದಂತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾಥಿನಿಯರು ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
======
ಮಾದರಿ ಗ್ರಾ.ಪಂ. ಮಾಡಲು ಎಲ್ಲರೂ ಅಗತ್ಯ ಸಹಕಾರ ನೀಡಿ : ಶರಣಯ್ಯ ಶಸಿಮಠ
ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ್‌ಗಳನ್ನು ಮಾದರಿ ಗ್ರಾಮ ಪಂಚಾಯತ್‌ಗಳನ್ನಾಗಿ ಮಾಡಲು ಎಲ್ಲರೂ ಅಗತ್ಯ ಸಹಕಾರ ನೀಡಬೇಕಾಗಿದೆ ಎಂದು ಕೊಪ್ಪಳ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶರಣಯ್ಯ ಶಸಿಮಠ ಹೇಳಿದರು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆ ಹಾಗೂ ಯುನಿಸೇಪ್ ಕೊಪ್ಪಳ ತಾಲೂಕಿನ ಆಯ್ದ ಗ್ರಾಮ ಪಂಚಾಯತ್‌ಗಳನ್ನು ಮಾದರಿ ಗ್ರಾಮ ಪಂಚಾಯತ್‌ಗಳನ್ನಾಗಿ ಮಾಡಬೇಕಾಗಿದ್ದು, ಉದ್ದೆÃಶದಿಂದ ಬುಧುವಾರದಂದು ರಂದು ಕೊಪ್ಪಳ ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರು, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು, ಸ್ವಚ್ಛಾಗ್ರಹಿಗಳು ಹಾಗೂ ಎಸ್.ಹೆಚ್.ಜಿ ಪ್ರತಿನಿಧಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾದರಿ ಗ್ರಾಮ ಪಂಚಾಯತ್‌ಗಳ ತಳಮಟ್ಟದ ಕಾರ್ಯಕರ್ತರಿಗೆ ಮತ್ತು ಸಮಿತಿಗಳ ಸಾಮರ್ಥ್ಯ ಅಭಿವೃದ್ಧಿ ಕುರಿತು ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾದರಿ ಗ್ರಾಮ ಪಂಚಾಯತಿಯ ಅನುಷ್ಠಾನ ಮಾಡುವಲ್ಲಿ ಪ್ರಮುಖ ಅಂಶಗಳಾದ ಎಲ್ಲರೂ ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಿರಬೇಕು ಹಾಗೂ ಅವುಗಳನ್ನು ಬಳಕೆ ಮತ್ತು ನಿರ್ವಹಣೆ ಮಾಡಬೇಕು ಮತ್ತು ಬಯಲು ಬಹಿರ್ದೆಸೆಗೆ ಹೋಗದಂತೆ ಮಾಡುವುದು, ಪ್ಲಾಸ್ಟಿಕ್ ಮುಕ್ತ, ಸುಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿ ಗ್ರಾಮ ಪಂಚಾಯತಿಯ ಉಪಸಮಿತಿಯ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಹಾಗೂ ಮಾದರಿ ಗ್ರಾಮ ಪಂಚಾಯತ್‌ಗಳನ್ನಾಗಿ ಮಾಡಲು ಎಲ್ಲರೂ ಅಗತ್ಯ ಸಹಕಾರ ನೀಡುವಂತೆ ಎಂದು ಕೊಪ್ಪಳ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶರಣಯ್ಯ ಶಸಿಮಠ ಹೇಳಿದರು.
ಯುನಿಸೇಫ್ ನ ತಾಲೂಕು ಸಂಯೋಜಕರಾದ ಬಸವರಾಜ ಸೂಡಿ ಮಾತನಾಡಿ ಮಾದರಿ ಗ್ರಾಮ ಪಂಚಾಯತ್‌ಗಳ ಪರಿಕಲ್ಪನೆಯಡಿಲ್ಲಿ ನಮ್ಮ ಕೊಪ್ಪಳ ತಾಲೂಕಿಗೆ 5 ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಂಬಂಧಿಸಿದ ಗ್ರಾಮ ಪಂಚಾಯತ್‌ಗಳ ಅಡಿಯಲ್ಲಿ ಬರುವ ಗ್ರಾಮಗಳಲ್ಲಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಪರಿಣಾಮಾಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶಿಭಿರಾರ್ಥಿಗಳಿಗೆ ಹೇಳಿದರು. ಹಾಗೂ ಶಿಕ್ಷಣ ಸಂಸ್ಥೆಗಳಾದ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪರ್ತೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ ಹೊಂದಿರಬೇಕು ಹಾಗೂ ಶಾಲೆಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಋತುಚಕ್ರ ನಿರ್ವಹಣೆಗೆ ಪ್ರತ್ಯೆÃಕ ಕೊಠಡಿ ಮತ್ತು ಸಾಮಗ್ರಿಗಳನ್ನು ಹೊಂದಿರುವಂತೆ ನೋಡಿಕೊಳ್ಳಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರಾದ ರಾಮಣ್ಣ ಬಂಡಿಹಾಳ, ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ, ಕ್ಷೆÃತ್ರ ಆರೋಗ್ಯ ಶಿಕ್ಷಣಾಧಿಕಾರಿ, ಆರೋಗ್ಯ ಇಲಾಖೆ ಗಂಗಮ್ಮ, ಕಾರ್ಯಾಗಾರದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ ಹೆಚ್ ಹಾಗೂ ಸಹಾಯಕ ನಿರ್ದೇಶಕರು ಎನ್.ಆರ್.ಇ.ಜಿ.ಎ, ಮಾನವ ಸಂಪನ್ಮೂಲ ಸಮಾಲೋಚಕರು, ಯುನಿಸೆಫ್ ಸಂಯೋಜಕರು ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
======
ಜು.16 ರಂದು ಬೆಳಿಗ್ಗೆ 06 ರಿಂದ ಸಂಜೆ 06 ರವರೆಗೆ ಮಾತ್ರ ಹುಲಿಗೆಮ್ಮ ದೇವಿ ದರ್ಶನ
ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಶ್ರಿÃ ಹುಲಿಗೇಮ್ಮ ದೇವಿ ದೇವಸ್ಥಾನದಲ್ಲಿ ಜುಲೈ. 16 ರ ಮಂಗಳವಾರದಂದು ಬೆಳಿಗ್ಗೆ 06 ರಿಂದ ಸಾಯಂಕಾಲ 06 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ.
ಹುಲಿಗಿಯ ಶ್ರಿÃ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರದಂದು ಹುಣ್ಣಿಮೆ ದಿವಸ ಖಗ್ರಾಸ ಚಂದ್ರಗ್ರಹಣ ಇದ್ದ ಕಾರಣ ಶ್ರಿÃ ದೇವಿಯವರ ದರ್ಶನವನ್ನು ಬೆಳಿಗ್ಗೆ 06 ಗಂಟೆಯಿಂದ ಸಾಯಂಕಾಲ 06 ಗಂಟೆಯವರೆಗೆ ಮಾತ್ರ ಇರುತ್ತದೆ. ಆದ ಕಾರಣ ಭಕ್ತಾದಿಗಳು ಸಾಯಂಕಾಲ 06 ಗಂಟೆಯ ಒಳಗಾಗಿ ಶ್ರಿÃ ದೇವಿಯವರ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ. ಹುಣ್ಣಿಮೆ ದಿನ ರಾತ್ರಿ ರಥೋತ್ಸವದ ಸೇವೆ ಇರುವುದಿಲ್ಲ ಎಂದು ಶ್ರಿÃ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
ಡಿಪ್ಲೊÃಮಾ ಪ್ರವೇಶಕ್ಕೆ ಖಾಲಿ ಉಳಿದಿರುವ ಸೀಟುಗಳಿಗೆ ಆಫ್ ಲೈನ್ ಮುಖಾಂತರ ಅರ್ಜಿ ಆಹ್ವಾನ
ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಕೊಪ್ಪಳ ಸರ್ಕಾರಿ ಪಾಲಿಟೆಕ್ನಿನ್ ಪ್ರಥಮ ಸೆಮಿಸ್ಟರ್ ಡಿಪ್ಲೊÃಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಲಿ ಉಳಿದಿರುವ ಸೀಟುಗಳಿಗೆ ಆಫ್-ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೊÃಮಾ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಖಾಲಿ ಉಳಿದಿರುವ ಸೀಟುಗಳಿಗೆ ಅಫ್‌ಲೈನ್ ಮುಖಾಂತರ ಡಿಪ್ಲೊÃಮಾ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು. ಅರ್ಜಿ ಸಲ್ಲಿಸಲು ಜು. 15 ರಿಂದ 19 ರ ಸಂಜೆ 5.30ರ ವರೆಗೆ ನಿಗದಿಯಾಗಿದು ಆಸಕ್ತರು . ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ. 35 ರಷ್ಟು ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳು ಪ್ರಥಮ ವರ್ಷದ ಡಿಪ್ಲೊÃಮಾ ಪ್ರವೇಶಕ್ಕೆ ಅರ್ಹರಾಗಿತ್ತಾರೆ. ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕವನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ ತಿತಿತಿ.ಜಣe.ಞಚಿಡಿ.ಟಿiಛಿ.iಟಿ ನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಮೂಲ ದಾಖಲಾತಿಗಳು ಮತ್ತು ಅವುಗಳ ದೃಡೀಕರಿಸಿದ ನಕಲು ಪ್ರತಿಗಳೊಂದಿಗೆ ಹಾಜರಾಗಿ ಅರ್ಜಿ ನೋಂದಣಿ ಶುಲ್ಕವನ್ನು ಜಿ-ಎಂ, 2-ಎ, 2-ಬಿ 3-ಬಿ ರೂ.100 ಹಾಗೂ ಎಸ್ಸಿ-ಎಸ್ಟಿ ಪ್ರವರ್ಗ-1 ರೂ.50 ನಗದು ರೂಪದಲ್ಲಿ ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಸಂಸ್ಥೆಯಲ್ಲಿ ಪಾವತಿಸಿ ಆಫ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿಗೆಯ ದೂ.ಸಂ-9448715325, 9481466097ಕ್ಕೆ ಸಂಪರ್ಕಿಸಿ ಎಂದು ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ಪ್ರಿನ್ಸಿಪಾಲ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======
ಜು. 15 ರಂದು ವಸತಿ ಶಾಲೆಗಳ 7, 8 & 9ನೇ ತರಗತಿ ಪ್ರವೇಶಕ್ಕೆ ಕೌನ್ಸ್ಲಿಂಗ್
ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಜುಲೈ.15 ರಂದು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಗಳ 7ನೇ, 8ನೇ ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ಕೌನ್ಸ್ಲಿಂಗ್ ನೆಡೆಸಲಾಗುವುದು ಎಂದು ತಿಳಿಸಿದ್ದಾರೆ
ಕೊಪ್ಪಳ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಶ್ರಿÃಮತಿ ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆಗಳ 7ನೇ, 8ನೇ ಮತ್ತು 9ನೇ ತರಗತಿಗೆ ಜೂ.30 ರಂದು ಪ್ರವೇಶ ಪರೀಕ್ಷೆ ಜರುಗಿಸಲಾಗಿದ್ದು, ಪರೀಕ್ಷಾ ಫಲಿತಾಂಶವನ್ನು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ, ಉಪನಿರ್ದೇಶಕರ P್ಪಛೇರಿಯಲ್ಲಿ ಪ್ರಕಟಿಸಲಾಗಿದ್ದು.
ಪರೀಕ್ಷೆಯಲ್ಲಿ ಖಾಲಿ ಇರುವ ಸೀಟುಗಳಿಗೆ ಅನುಗುಣವಾಗಿ ಮೆರಿಟ್ ಆಧಾರಿತ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜು.15 ರಂದು ಬೆಳಿಗ್ಗೆ 11 ಘಂಟೆಗೆ ಕೊಪ್ಪಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ (ಎಸ್.ಪಿ ಆಫೀಸ್ ಎದುರುಗಡೆ) ಜರುಗಿಸಲಿದ್ದು,
ಕಟ್‌ಆಫ್ ಅಂಕಗಳ ವಿವರ;
7ನೇ ತರಗತಿಯ ಪ.ಜಾತಿ ಹೆಣ್ಣು-39 ಅಂಕ, ಪ.ಪಂಗಡ ಗಂಡು-56, ಹೆಣ್ಣು-41, ಪ್ರವರ್ಗ-1 ಗಂಡು 58 ಅಂಕ, ಹೆಣ್ಣು-60 ಅಂಕ, 2ಎ ಗಂಡು-61 ಅಂಕ, ಹೆಣ್ಣು-7 ಅಂಕ. 8ನೇ ತರಗತಿಯ ಸಾಮಾನ್ಯ ಗಂಡು-79 ಅಂಕ, ಹೆಣ್ಣು-64, ಪ.ಜಾತಿ ಗಂಡು-76 ಅಂಕ, ಹೆಣ್ಣು-35 ಅಂಕ, ಪ.ಪಂಗಡ ಗಂಡು-42 ಅಂಕ, ಪ್ರವರ್ಗ-1 ಗಂಡು-57 ಅಂಕ, ಹೆಣ್ಣು-43 ಅಂಕ, 2ಎ ಹೆಣ್ಣು-51 ಅಂಕ, 3ಎ ಗಂಡು-50 ಅಂಕ, ಹೆಣ್ಣು-31 ಅಂಕ. 9ನೇ ತರಗತಿಯ ಸಾಮಾನ್ಯ ಹೆಣ್ಣು-52 ಅಂಕ, ಪ.ಜಾತಿ ಗಂಡು-40 ಅಂಕ, ಹೆಣ್ಣು-21 ಅಂಕ, ಪ.ಪಂಗಡ ಗಂಡು-32 ಅಂಕ, ಹೆಣ್ಣು-35 ಅಂಕ, ಪ್ರವರ್ಗ-1 ಗಂಡು-56 ಅಂಕ, ಹೆಣ್ಣು-52 ಅಂಕ, 2ಎ ಗಂಡು-59 ಅಂಕ, ಹೆಣ್ಣು-43 ಅಂಕ, 2ಬಿ ಹೆಣ್ಣು-41 ಅಂಕ, 3ಬಿ ಗಂಡು-49 ಅಂಕ, ಹೆಣ್ಣು-33 ಅಂಕ.
ಈ ಮೇಲಕಂಡ ಕಟ್‌ಆಫ್ ಅಂಕ ಹೊಂದಿರುವ ವಿದ್ಯಾರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಕೊಪ್ಪಳ ಪ್ರವೇಶ ಪರೀಕ್ಷಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಕಲ್ಲೆÃಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======