KOPPAL VARTHE
unread,Jul 13, 2019, 7:52:28 AM7/13/19Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to Somareddy Alavandi, nadanudi Gangavati, Dist. Information Officer Information, Lokadarshan News Paper, navodayadaily, Veeru Veeru, tippanagouda malipatil, Girish Kulkarni, veerupatil143, Shreepada Ayachit, Gangadhar Bandihal, PRAJAVANI KOPPALA, samarthavani, Harsih HS Koppal, Mounesh Badiger, Eshanya Times, varthabha...@googlegroups.com, Suvarnagiri Gvt, VIJAYAVANI KPL, nagarikkpl, Koppal Varthe, Dattu Kammar, murugesh b s, Nabhiraj Dastenavar, Ybjudi Judi, Rajasa Mullar, uv koppal, Bellary Belagayithu, basavaraj binnal, kakarlamallikarjun, Manjunath H Irakal, janakoogu, Basavaraj Karugal, Shivaraj Nugadoni, airhptco...@gmail.com, vasudev vasu, Devu Tungasiri, mahadevgouda patil, venkatesh kulkarni, Vartha Loka, Akshay BS, Raju Br, Information Department, M. Ahiraj Ahiraj, shivakumar k, Arvind Last, shukraj gangavati, suddimoola24, suddimoola, Shivakumar Pattar, Kranti KD, Basavaraj Basavaraj, sangameshchilly, basavaraja karkihalli, sharanappa kumbar, Sharanabasava Gaddi, Moulahusain Buldiyar, pavan deshpande, kitturkarnatakagadag, vinaya...@gmail.com, Informationdep Informationdep, Gavisidd Hosamani, mohammedkh...@gmail.com, siraj bisaralli, Areef Ahmad, gururaj dambal, mavinashk8, rbadiger2, bvenka...@yahoo.in, Manjunath Gondbal, Anmol times3, Kalyana darshana, Karnatak Times, H.mallikarjuna Editor Kalyanasiri kannada Daily, K Sandyakala, Muttu won, mallu uppar, Doddesh Yaligar, munjaneex...@gmail.com, koppal...@gmail.com, hinduka...@gmail.com, hndoddamani
ಜುಲೈ. 16 ಕೊಪ್ಪಳದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ
ಕೊಪ್ಪಳ ಜು. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಜುಲೈ. 16 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಈ. ತುಕಾರಾಂ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಪರಣ್ಣ ಈಶ್ವರಪ್ಪ ಮುನವಳ್ಳಿ, ಹಾಲಪ್ಪ ಬಸಪ್ಪ ಆಚಾರ್ ಹಾಗೂ ಬಸವರಾಜ ದಢೇಸೂಗೂರು, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರ ಹಾಗೂ ಡಾ. ಚಂದ್ರಶೇಖರ ಬಿ. ಪಾಟೀಲ, ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಭಾಗವಹಿಸುವರು. ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ವಿ. ಡಾಣಿ ಅವರು ಶಿವಶರಣ ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸವನ್ನು ನೀಡುವರು. ಕಾರ್ಯಕ್ರಮದ ಅಂಗವಾಗಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದೊಂದಿಗೆ ಮೇರವಣಿಗೆಯು ಅಂದು ಬೆಳಿಗ್ಗೆ 09 ಗಂಟೆಗೆ ನಗರದ ಮಹೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.
======
ಕಡಿಮೆ ಪ್ರಮಾಣದ ಮುಂಗಾರು ಮಳೆ : ಬೇಸಾಯ ಕ್ರಮ ಅನುಸರಿಸಲು ರೈತರಿಗೆ ಮನವಿ
ಕೊಪ್ಪಳ ಜು. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಾದ್ಯಾಂತ ಪ್ರಸಕ್ತ ವರ್ಷದ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಾಗಿದ್ದು, ಕೆಲ ಬೇಸಾಯ ಕ್ರಮಗಳನ್ನು ಅನುಸರಿಸರಿದುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಶಬಾನ ಎಂ. ಶೇಖ್ ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ವಾಡಿಕೆ ಮಳೆ 174 ಮೀ.ಮೀ. ಇದ್ದು, ಇಲ್ಲಿಯವರೆಗೆ 133 ಮೀ.ಮೀ. ಮಳೆಯಾಗಿದ್ದು 23% ಮಳೆ ಕೊರತೆ ಆಗಿರುತ್ತದೆ. ಈ ಸಾಲಿನಲ್ಲಿ ಮುಂಗಾರು ಮಳೆ ಅವಲೋಕಿಸಿದಾಗ ವಾಡಿಕೆ ಮಳೆ 92 ಮೀ.ಮೀ. ಇದ್ದು, 87 ಮೀ.ಮೀ. ವಾಸ್ತವಿಕ ಮಳೆಯಾಗಿರುತ್ತದೆ. 5% ಮಳೆ ಕೊರತೆಯಾಗಿರುತ್ತದೆ. ಜಿಲ್ಲೆಯಾದ್ಯಾಂತ ಮುಂದಿನ ಕೆಲವು ದಿನಗಳಲ್ಲಿ ಮಳೆಯ ಆಗುವ ಸಂಭವನೆಗಳು ಕಡಿಮೆಯಿದ್ದು, ರೈತರು ಈ ಬೇಸಾಯ ಕ್ರಮಗಳನ್ನು ಅನುಸರಿಸಬೇಕಾಗಿದೆ.
ಬೇಸಾಯ ಕ್ರಮಗಳು;
ಪ್ರತಿ ಎಕರೆ ಪ್ರದೇಶದಲ್ಲಿ ಸಸಿಗಳ ಸಂಖ್ಯೆ ಕಡಿಮೆ ಮಾಡುವುದು. ಮೇಲಿಂದ ಮೇಲೆ ಎಡೆಕುಂಟಿ ಹೊಡೆದು ನೀರಿನ ಸಂರಕ್ಷಣೆ ಮಾಡುವುದು. ಭೂಮಿಯ ಮೇಲೆ ಹೊದಿಕೆ ಮಾಡಿ ನೀರಿನ ಆವಿಯಾಗುವಿಕೆಯನ್ನು ತಡೆಗಟ್ಟುವುದು. ಸಾಧ್ಯವಾದಕಡೆ ಸಂರಕ್ಷಿÃತ ನೀರಾವರಿ ಒದಗಿಸುವುದು. ನಿಶಕ್ತ ಹಾಗೂ ಬಾಧೆಗೊಳಗಾದ ಸಸಿಗಳನ್ನು ಕಿತ್ತು ಭೂಮಿಯಲ್ಲಿ ಹರಡಿರಿ. ಬಿತ್ತನೆಯಾಗದೇ ಇರುವ ಭೂಮಿಯಲ್ಲಿ ಬರ ನಿಗೀಸಲು ಹಾಗೂ ಅಲ್ಪಾವಧಿ ಬೆಳೆಗಳಾದ ಸಜ್ಜೆ, ನವಣೆ, ಹಾರಕ ಹಾಗೂ ಇತರೆ ಸಿರಿಧಾನ್ಯಗಳನ್ನು ಬಿತ್ತನೆಮಾಡಬೇಕೆಂದು ರೈತರಲ್ಲಿ ಪ್ರಕಟಣೆ ಮನವಿ ಮಾಡಿದೆ.
======
ಜುಲೈ. 15 ರಂದು ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ ಜು. 13 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜುಲೈ. 15 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಗು.ವಿ.ಸ.ಕಂ.ನಿ. ಮುನಿರಾಬಾದ್‌ನ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
110 ಕೆ.ವಿ. ವಿದ್ಯುತ್ ವಿತರಣಾ ಉಪ ಕೇಂದ್ರ, ಗಿಣಗೇರಾದಲ್ಲಿ ಜುಲೈ. 15 ರಂದು ದುರಸ್ಥಿ ಕಾರ್ಯ ನಡೆಯುತ್ತಿದ್ದು, ಈ ಪ್ರಯುಕ್ತ ಗಿಣಗೇರಾ ವಿದ್ಯುತ್ ಉಪ ಕೇಂದ್ರದಿಂದ ಪೂರೈಕೆಯಾಗುವ ಗ್ರಾಮಗಳಾದ ಹಿರೇಬಗನಾಳ, ಚಿಕ್ಕ ಬಗನಾಳ, ಅಲ್ಲಾನಗರ, ಕರ್ಕಿಹಳ್ಳಿ, ಕುಣಿಕೇರಿ, ಕುಣಿಕೇರಿ ತಾಂಡ ಹಾಗೂ ಲಾಚನಕೇರಿ ಗ್ರಾಮಗಳಲ್ಲಿ ಜುಲೈ. 08 ರಂದು ಬೆಳಿಗ್ಗೆ 09 ರಿಂದ 04 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
======