ಸೂರ್ಯ ಉದಯವಾಗುವ ಸಮಯಕ್ಕೆ ಮುಂಚೆ ಆಕಾಶವು ಕೆಂಪಾಗಿ ರಾತ್ರಿ ಮತ್ತು ಹಗಲುಗಳ ಸುಸಂಧಿಯಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಿರುವ ನಕ್ಷತ್ರಗಳು ತುಂಬಿರುವ ಮನದ ಅಂಬರದಲ್ಲಿ ಹುಟ್ಟಿದ ಒಂದು ಯೋಚನೆ...ಯೋಜನೆಯಾಗಿ ನಿಮ್ಮೆಲ್ಲರ ಮುಂದೆ ನಿಂತಿದೆ..
ಶಂಖದ ದೇವರ ಭಟ್ಟರು ಹಾಗೂ ಕಿತ್ತಾನೆಯ ರಾಮಯ್ಯನವರು...ಈ ಎರಡು ಹೆಸರುಗಳೇ ಸಾಕು..ಹಾಸನದಲ್ಲಿ ಎಲ್ಲೇ ಹೋದರೂ ನಮ್ಮನ್ನು ಗುರುತಿಸೋಕೆ...ಈ ಮಹನೀಯರು ಕಟ್ಟಿದ ವಂಶ ವೃಕ್ಷದಲ್ಲಿ ನಾವುಗಳು ಈಗ ಅರಳುತ್ತಿರುವ ಮೊಗ್ಗುಗಳು. ಈ ಮಹನೀಯರನ್ನು ನೆನೆಸಿಕೊಳ್ಳುತ್ತಾ ಅವರ ಆಶೀರ್ವಾದದ ನೆರಳಲ್ಲಿ ಸದಾ ಸಂತಸದಿಂದಿರುವ ಪ್ರಯತ್ನವೇ ಅವರಿಗೆ ನಾವು ಸಲ್ಲಿಸುವ ಗೌರವ.
ಎಲ್ಲರನ್ನೂ ಒಂದೇ ಅಂಬರದಡಿ ನಿಲ್ಲಿಸೋಣ...ಕಲೆಯೋಣ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳೋಣ ಎನ್ನುವ ಆಶಾಭಾವದಿಂದ ಈ ಗುಂಪನ್ನು ಶುರು ಮಾಡಿದ್ದೇನೆ..ಮಿಕ್ಕವರನ್ನು ಕರೆ ತರೋಣ...ಗುಂಪನ್ನು ಬೆಳೆಸೋಣ...!
ಈ ಸಮೂಹದ ಹೆಸರು : ಶಂಖ-ಕಿತ್ತಾನೆ
With Regards
Srikanth
Enjoy the sharks in your life!!!