ಕಿತ್ತಾನೆ ಎನ್ನುವ ಒಂದು ಗ್ರಾಮದಲ್ಲಿ ಮಾನವೀಯತೆ ಕಾಣುವ ಎಷ್ಟೋ ಕುಟುಂಬಗಳು ನೆಲೆಸಿವೆ. ಮಾನವ ಜನ್ಮ ದೊಡ್ಡದು ಎಂದು ನಂಬಿರುವ ಕುಟುಂಬಗಳು ತಮ್ಮ ಕುಟುಂಬದ ಹಿತಾಸಕ್ತಿಗಳನ್ನು ಬದಿಗೊತ್ತಿ ಇನ್ನೊಂದು ಕುಟುಂಬಕ್ಕೆ ಹೆಗಲಾಗಿ ನಿಂತಿರುವ ಎಷ್ಟೋ ಉದಾಹರಣೆಗಳನ್ನು ನನ್ನ ಅಮ್ಮನ ಬಾಯಿಂದ ಕೇಳಿದ್ದೇನೆ. ಅಂಥಹ ಒಂದು ಹಿರಿಯ ಕುಟುಂಬದಿಂದ ಬಂದ ಅಮ್ಮನ ದೊಡ್ಡ ಸೋದರಮಾವನ ಮಗನ (ಕಿತ್ತನೆಯ ಉಮೇಶ ಮಾವ ಅವರ ಕುಡಿ) ಮಗ ರಾಜೇಶ್ ತನ್ನ ಜನುಮ ದಿನವನ್ನು ಎರಡು ದಿನದ ಹಿಂದೆ ಆಚರಿಸಿಕೊಂಡ.
ಹುಟ್ಟು ಹಬ್ಬದ ಸಂಭ್ರಮ ಮನದಲ್ಲಿ ಅರಳಿರುವಾಗ ಪದಗಳಲ್ಲಿ ಹೊರ ಬರುವುದು ತುಸು ನಿಧಾನವಾಯಿತು.
ರಾಜೇಶ ತಡವಾಗಿಯಾದರೂ ಸರಿ ಹುಟ್ಟು ಹಬ್ಬದ ಶುಭಾಶಯಗಳು ನಮ್ಮೆಲ್ಲರಿಂದ ನಿನಗಾಗಿ!
With regards
Srikanth
Enjoy the sharks in your life!!!