A Haiku

4 views
Skip to first unread message

Gananath

unread,
Jan 28, 2015, 1:26:23 AM1/28/15
to sahasp...@googlegroups.com
ನನಗೆ ಇಷ್ಟವಾದ ಒಂದು ಹೈಕು.

My house burned down

Now I can better see
The rising moon

ಇಂಥ ಅನುಭವ ನನಗೆ ಮೂರು ದಶಕಗಳ ಹಿಂದೆ ಆದಾಗ ಒಂದು ಕ್ಷಣ ರೋಮಾಂಚನವಾಗಿತ್ತು! ಇತ್ತೀಚೆಗೆ ಈ ಹೈಕುವನ್ನೋದಿದಾಗ ಒಬ್ಬ ಕವಿ ಅಂಥ ಸಂಕೀರ್ಣ, ಅನನ್ಯ ಭಾವವನ್ನು ಎಷ್ಟು ಸಮರ್ಥವಾಗಿ ಪುಟ್ಟದಾಗಿ ಹಿಡಿದಿಟ್ಟಿದ್ದಾನೆ ಎಂದು ಅಚ್ಚರಿಪಟ್ಟೆ..
ಹಾಗೆಯೇ ಅದನ್ನು ಕನ್ನಡಕ್ಕೆ ತರಲು ಪ್ರಯತ್ನಿಸಿದೆ.

ನನ್ನ ಗುಡಿಸಲು
ಕುಸಿದುಬಿದ್ದಿದೆ
ನಾನೀಗ ನಿಸೂರಾಗಿ
ಹುಣ್ಣಿಮೆಯ ಚಂದ್ರನನ್ನು
ನೋಡಬಹುದು

( ೧೧ ಪದಗಳು ಬರಲಿಲ್ಲ. ಕನ್ನಡಕ್ಕೆ ಈ ನಿಯಮ ಅನ್ವಯಿಸುವುದು ಕಷ್ಟ. :-( )

ಗಣನಾಥ


Brinda Rao

unread,
Jan 28, 2015, 7:25:28 PM1/28/15
to sahasp...@googlegroups.com
ವಾಹ್! ತುಂಬಾ ಚೆನ್ನಾಗಿದೆ. ಧನ್ಯವಾದಗಳು
ಬೃಂದಾ

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.

Jayarama Adiga

unread,
Jan 28, 2015, 8:40:45 PM1/28/15
to sahaspandana
ಸುಟ್ಟು ಬಿದ್ದಿದೆ ನನ್ನ ಮನೆ
ಚಂದ್ರನ ಹುಟ್ಟು ಕಾಣುತಿದೆ
ಈಗೆಷ್ಟು ಚೆನ್ನಾಗಿ !

ಜ.ಅ.

Sanjeev Kulkarni

unread,
Jan 28, 2015, 10:23:52 PM1/28/15
to sahasp...@googlegroups.com
ಗಣನಾಥಣ್ಣ ,
ಹೈಕು ಚೆನ್ನಾಗಿದೆ. ಸೋಜಿಗದ ಸಂಗತಿಯೆಂದರೆ ನಾಲ್ಕು ವರ್ಷಗಳ ಹಿಂದೆ ಹೊಸ ಮನೆ  ಮಾಡಿಕೊಂಡ  ಕೆಲವು ದಿನಗಳ ಬಳಿಕ ನಾನು ಒಂದು ಪುಟ್ಟ ಪದ್ಯ ಬರೆದಿದ್ದೆ. ಅದು ಹೀಗಿದೆ --

ಬಹಳ ದಿನಗಳ ಕನಸು ನನಸಾಯಿತು 
ತಲೆಯ ಮೇಲೊಂದು ಸೂರು ಬಂತು 
ಆದರೆ ಚುಕ್ಕೆ ಚಂದಿರ ಎಲ್ಲರನ್ನೂ 
ಕಳಕೊಂಡು ಬಿಟ್ಟೆ !

ಸಂಜೀವ ಕುಲಕರ್ಣಿ 

On Thu, Jan 29, 2015 at 7:10 AM, Jayarama Adiga <mja...@gmail.com> wrote:
Boxbe This message is eligible for Automatic Cleanup! (mja...@gmail.com) Add cleanup rule | More info

ಸುಟ್ಟು ಬಿದ್ದಿದೆ ನನ್ನ ಮನೆ
ಚಂದ್ರನ ಹುಟ್ಟು  ಕಾಣುತಿದೆ
ಈಗೆಷ್ಟು ಚೆನ್ನಾಗಿ !

ಜ.ಅ.

2015-01-29 5:55 GMT+05:30 Brinda Rao <brind...@gmail.com>:
>

Anupama Dhavale

unread,
Jan 28, 2015, 10:27:16 PM1/28/15
to sahasp...@googlegroups.com
ಸ್ಥಾವರದಿಂದ ಜಂಗಮ ಹೊರಹೊಮ್ಮುವ ಹೈಕು ಚೆನ್ನಾಗಿದೆ 

2015-01-28 11:56 GMT+05:30 Gananath <sngan...@gmail.com>:

Gananath

unread,
Jan 28, 2015, 10:52:30 PM1/28/15
to sahasp...@googlegroups.com
ಇದರಲ್ಲಿ ಸೋಜಿಗವೇನಿದೆ? Great men (and women) think alike. ಇದನ್ನು ಹಿಂದೆ ಓದಿದ್ದೆ. ಈಗ ಅದಕ್ಕೆ ಪುರಾವೆ ಸಿಕ್ಕಿತು!. ಆದರೆ ಅದರ converse ಸತ್ಯವೋ ಅಲ್ಲವೋ ತಿಳಿಯಲಿಲ್ಲ.

ಗಣನಾಥ

Gananath

unread,
Jan 28, 2015, 11:00:19 PM1/28/15
to sahasp...@googlegroups.com
ಜ. ಅ. ಅವರೇ,
ನಿಮ್ಮ ಅನುವಾದವು ಮೂಲಕ್ಕೆ ಹೆಚ್ಚು ನಿಷ್ಠವಾಗಿದೆ. ಸುಂದರವಾಗಿಯೂ ಇದೆ. ನಾನು ಒಮ್ಮೊಮ್ಮೆ
ಸ್ವಲ್ಪ ಸ್ವಾತಂತ್ರ್ಯ ತೆಗೆದುಕಳ್ಳುವುದುಂಟು .

ಬೇರೆ ಯಾರಾದರೂ ಪ್ರಯತ್ನ ಮಾಡಬಹುದಲ್ಲವೇ? ಹಿಂಜರಿಕೆಯ ಸೌಧವನ್ನು ಕೆಡವಿದರೆ ಅನುವಾದದ
ಚಂದ್ರಮನನ್ನು ಕಾಣಬಹುದು.

ಗಣನಾಥ
Reply all
Reply to author
Forward
0 new messages