ಶಿವಪ್ರಕಾಶ್ ಅವರ ಮಾರ್ಮಿಕ ಲೇಖನ

10 views
Skip to first unread message

Gananath

unread,
Oct 24, 2014, 5:06:25 AM10/24/14
to sahasp...@googlegroups.com
ಪ್ರಜಾವಾಣಿಯಲ್ಲಿ .................

ಸರಳ, ಸುಂದರ, ಅರ್ಥಗರ್ಭಿತ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ

ಗಣನಾಥ
H S Shivaprakash on happiness.pdf

Harish Amur

unread,
Oct 24, 2014, 7:13:21 AM10/24/14
to ಸಹಸ್ಪಂದನ
ಇದು ಇವತ್ತಿನ ಸತ್ಯ. ಸ್ವಂತದ ಅನುಭವದಲ್ಲಿ ಹೇಳಬೇಕೆಂದರೆ, ನಾನೂ ಕೂಡ ಆ ಜಗತ್ತನ್ನು ಹಲವು ವರ್ಷ ಅನುಭವಿಸಿ, ಸಾಕೆನಿಸಿದಾಗ ಈ ನೆಲೆಗೆ ಬಂದವನು. ನನ್ನ ಎಷ್ಟೋ ಗೆಳೆಯರು ನಮ್ಮನ್ನು (ನಾನು ಮತ್ತು ನನ್ನ ಪತ್ನಿ) ಭೇಟಿಯಾಗಲು ಬಂದಾಗ ಅವರಲ್ಲಿ ಆ ಜೀವನದ ಬವಣೆ ಕಂಡಿದ್ದೂ ನಿಜ, ಅವರು ಸ್ಪಷ್ಟವಾಗಿ ಅದನ್ನು ಪ್ರಸ್ತಾಪಿಸಿದ್ದೂ ನಿಜ.

ಲೇಖನ ಪ್ರಾರಂಭದಲ್ಲಿ ಅವರ ಗೆಳೆಯರ ಮನೆಯಲ್ಲಿ ನಡೆದ ವಿಷಯದ ಪ್ರಸ್ತಾಪದಲ್ಲಿ ಹೀಯಾಳಿಕೆ ಕಂಡುಬಂದಿತು. 'ನನ್ನ ಭಾಷಣ ಅವರಿಗೆ ಅರ್ಥವಾಗಲಿಲ್ಲ, ಅವರು ಸಿನೀಮಿಯ ಹಾಡುಗಳನ್ನು ಕೇಳತೊಡಗಿದರು'. ಸತ್ಯಕ್ಕೆ ಬೇರೆ ಬೇರೆ ಮುಖಗಳಿರುತ್ತವೆ. ಒಂದೇ ಮುಖವನ್ನು ಪರಿಚಯಿಸಿದರೆ, ಅದು ಸಂಪೂರ್ಣವಾಗದು ಎಂಬುದು ನನ್ನ ಅನಿಸಿಕೆ. ಇಂತಹ ಹಲವು ಮುಖಗಳನ್ನು ಅರಿಯಬೇಕೆಂದರೆ ಬೇರೆಯವರನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಬೇಕು.  ಯಾವತ್ತೂ ನಮ್ಮದೇ ಕನ್ನಡಕಗಳಿಂದ ನೋಡುವುದನ್ನು ನಿಲ್ಲಿಸಿದರೆ, ನಿಜ ವ್ಯಕ್ತಿ ಸ್ವಾತಂತ್ರ್ಯದತ್ತ ನಾವು ಸಾಗಬಹುದು ಎಂದು ನನಗನಿಸುತ್ತದೆ.

ಈ ಲೇಖನದಲ್ಲಿ ಲೇಖಕರು ಬಡವರ ಬಗ್ಗೆ ಬರೆಯುತ್ತ ತೀರ ತೀವ್ರವಾದ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದೆನಿಸುತ್ತದೆ. ಆ ಭಾವನೆ ಏಕೆ? ನನಗೆ ಆರ್ಥಿಕ ಸಹಾಯದ ಅಗತ್ಯವಿದ್ದವರು ಕನಸು ಕಂಡರೆ ಯಾವ ತಪ್ಪಿಲ್ಲ ಎಂದೂ ಅನಿಸುತ್ತದೆ. ಅವರಿಗೆ ಆ ಅನುಭವ ಬೇಕಾಗಿದೆ. ಅವರು ಆ ದಾರಿ ಹಿಡಿಯಬಾರದು ಎಂಬ ಕಳಕಳಿ ನಮ್ಮಲ್ಲಿ ಇದ್ದರೆ, ಅಂತವರು ಆ ದಾರಿ ಹಿಡಿಯುವ ಆವಶ್ಯಕತೆಯನ್ನು ನಮ್ಮಂತವರು ಇಲ್ಲದಂತೆ ಮಾಡಬೇಕು. ಸಾಧ್ಯವೇ?

ಇತಿ,
ಹರೀಶ

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana+unsubscribe@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.

Anupama Dhavale

unread,
Oct 24, 2014, 10:40:07 AM10/24/14
to sahasp...@googlegroups.com
ನನ್ನ  ಮಗಳು ಪದವಿ ಓದುವ  ಹಂತಕ್ಕೆ ಬಂದಾಗಿನಿಂದ ನಂಗೆ ಈ ವಿಚಾರ ತುಂಬಾ ಕಾಡುತ್ತಿದೆ .ಯಶಸ್ಸಿನ ಪರಿಭಾಷೆಯ ಬಗ್ಗೆ ಯೊಚಿಸುತ್ತಿದ್ದೆನೆ.  ಅವಳಲ್ಲಿ ಯಶಸ್ಸಿನ ಯಾವ ಕನಸನ್ನು ನಾನು ಬಿತ್ತಬೇಕು? ಯಶಸ್ಸು ಎಂದರೆ ಅವಳ ಸಾಮರ್ಥ್ಯಕ್ಕೆ ತಕ್ಕ ಸಂಬಳವೇ? ತನ್ನೆಲ್ಲ ಸಾಮರ್ಥ್ಯವನ್ನು ಸರಿಯಾಗಿ ಉಪಯೋಗಿಸಲು ಅವಳ ಸ್ನೇಹಿತರು ಆಯ್ದುಕೊಳ್ಳುವ ದಾರಿಗಳು ಸರಿ ಅಲ್ಲ ಎನ್ನಲೇ? ಏನು ಹೇಳಿದರೆ, ಹೇಗೆ ಹೇಳಿದರೆಈ ವಯಸ್ಸಿನಲ್ಲಿ  ಅವಳು ತಿಳಿದುಕೊಳ್ಳಬಹುದು? ಯಾವ ಕನಸು ಸರಿ ?ಯಾವ ಕನಸು ತಪ್ಪು? ಯಾವ ಕನಸು ಅವಳನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ???
ಶಿವಪ್ರಕಾಶ್ ಹೇಳಿದ ಸ್ಥಿತಿ ಕೇವಲ ವಿದೆಶಕ್ಕ ಹೋದವರಲ್ಲಿ  ಸೀಮಿತವಾಗಿಲ್ಲ.  ಇಲ್ಲಿಯೂ ಇದೆ. ಅದರ ರೂಪ ಸ್ವಲ್ಪ್ ಬದಲಾಗಿದೆ ಅಷ್ಟೇ . 

ಅನುಪಮಾ 

Gananath

unread,
Oct 25, 2014, 1:10:37 AM10/25/14
to sahasp...@googlegroups.com
ಅನುಪಮಾ ಅವರು ಹೇಳುವುದರಲ್ಲಿ ಅರ್ಥವಿದೆ. ಇದು ಅವರದ್ದು ಮಾತ್ರವಲ್ಲ , ನಮ್ಮೆಲ್ಲರ ತಲ್ಲಣಗಳು ಕೂಡಾ. ಇದು (ಈ ವಿದ್ಯಮಾನ) ಅನೇಕ ಬಗೆಯಲ್ಲಿ ಅಭಿವ್ಯಕ್ತಗೊಳ್ಳುತ್ತಿರುವುದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು. ಇಂಥ ಬೆಳವಣಿಗೆಗಳನ್ನು ಅಲಕ್ಷಿಸುವುದು ಹೇಗೆ? ಮಕ್ಕಳ ಭವಿಷ್ಯ ಇದರ ಜತೆ ಹಾಸುಹೊಕ್ಕಾಗಿ ಸೇರಿಕೊಂಡಿರುವಾಗ?

ಉಳಿದ ಸಂದರ್ಭಗಳಲ್ಲಿ ನಾವು ಪ್ರತಿಕ್ರಿಯಿಸುವ ರೀತಿಯಲ್ಲೇ ಇದಕ್ಕೂ ಪ್ರತಿಕ್ರಿಯಿಸಬೇಕೇ? ಗೊತ್ತಿಲ್ಲ. ಬಹುಶಃ ಇಲ್ಲ. ಇಲ್ಲಿ ಉಪಯುಕ್ತವಾಗಬಹುದು ಎಂದೆನ್ನಿಸಿದ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ  (
ಇಲ್ಲಿ  ಮತ್ತು  ಇಲ್ಲಿ   ಕ್ಲಿಕ್ ಮಾಡಿ ). ಶಾಲಾ ಮತ್ತು ಕಾಲೇಜಿನ ಮಕ್ಕಳಿಗೆ ಇದು ಕೊಂಡಿಗೆ ಉಪಯುಕ್ತವಾಗಬಹುದು.

ಧನ್ಯವಾದ.

ಗಣನಾಥ

On Friday 24 October 2014 08:10 PM, Anupama Dhavale wrote:
ನನ್ನ  ಮಗಳು ಪದವಿ ಓದುವ  ಹಂತಕ್ಕೆ ಬಂದಾಗಿನಿಂದ ನಂಗೆ ಈ ವಿಚಾರ ತುಂಬಾ ಕಾಡುತ್ತಿದೆ .ಯಶಸ್ಸಿನ ಪರಿಭಾಷೆಯ ಬಗ್ಗೆ ಯೊಚಿಸುತ್ತಿದ್ದೆನೆ.  ಅವಳಲ್ಲಿ ಯಶಸ್ಸಿನ ಯಾವ ಕನಸನ್ನು ನಾನು ಬಿತ್ತಬೇಕು? ಯಶಸ್ಸು ಎಂದರೆ ಅವಳ ಸಾಮರ್ಥ್ಯಕ್ಕೆ ತಕ್ಕ ಸಂಬಳವೇ? ತನ್ನೆಲ್ಲ ಸಾಮರ್ಥ್ಯವನ್ನು ಸರಿಯಾಗಿ ಉಪಯೋಗಿಸಲು ಅವಳ ಸ್ನೇಹಿತರು ಆಯ್ದುಕೊಳ್ಳುವ ದಾರಿಗಳು ಸರಿ ಅಲ್ಲ ಎನ್ನಲೇ? ಏನು ಹೇಳಿದರೆ, ಹೇಗೆ ಹೇಳಿದರೆಈ ವಯಸ್ಸಿನಲ್ಲಿ  ಅವಳು ತಿಳಿದುಕೊಳ್ಳಬಹುದು? ಯಾವ ಕನಸು ಸರಿ ?ಯಾವ ಕನಸು ತಪ್ಪು? ಯಾವ ಕನಸು ಅವಳನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ???
ಶಿವಪ್ರಕಾಶ್ ಹೇಳಿದ ಸ್ಥಿತಿ ಕೇವಲ ವಿದೆಶಕ್ಕ ಹೋದವರಲ್ಲಿ  ಸೀಮಿತವಾಗಿಲ್ಲ.  ಇಲ್ಲಿಯೂ ಇದೆ. ಅದರ ರೂಪ ಸ್ವಲ್ಪ್ ಬದಲಾಗಿದೆ ಅಷ್ಟೇ . 

ಅನುಪಮಾ 
On Fri, Oct 24, 2014 at 2:36 PM, Gananath <sngan...@gmail.com> wrote:
ಪ್ರಜಾವಾಣಿಯಲ್ಲಿ .................

ಸರಳ, ಸುಂದರ, ಅರ್ಥಗರ್ಭಿತ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ

ಗಣನಾಥ

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.

To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.
--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.

Harish Amur

unread,
Oct 25, 2014, 2:05:21 AM10/25/14
to ಸಹಸ್ಪಂದನ
ಇದು ನನಗೆ ಅತಿ ಹತ್ತಿರದ ಪ್ರಶ್ನೆ. ಶಾಲೆಯಲ್ಲಿ ಪಾಲಕರಿಗೆ ನಾವು ಆಗಾಗ ಕೇಳುವ ಪ್ರಶ್ನೆ ಇದೇ 'ನಿಮ್ಮ ಮಗು ದೊಡ್ಡವನಾದ/ಳಾದ ಮೇಲೆ ಏನಾಗಬೇಕು ಎಂದು ನಿಮ್ಮ ಆಸೆ?' ಎಂದು. ಅವರು ಸಹಜವಾಗಿ ಇಂಜಿನಿಯರ ಮತ್ತು ಡಾಕ್ಟರ ಎಂಬ ಉತ್ತರವನ್ನೇ ಕೊಡುತ್ತಾರೆ. ಅದು ಅವರ ಮುಗ್ಧತೆ ಆಗಿರುತ್ತದೆ.

ಆ ಪ್ರಶ್ನೆ ನಾನು ಎಲ್ಲರಿಗೂ ಕೇಳುತ್ತೇನೆ? ಈ ಗುಂಪಿನವರಿಗೂ ಕೇಳುತ್ತೇನೆ. ಜೊತೆಗೆ ನನ್ನ ಅನಿಸಿಕೆಯನ್ನೂ ಹಂಚಿಕೊಳ್ಳುತ್ತೇನೆ. ನನ್ನ ಅನುಮಾನದಲ್ಲಿ ನಮ್ಮ ಭವಿಷ್ಯ ಅತ್ಯಂತ ಬೇರೆಯದಾಗಿರುತ್ತದೆ. ಇದಕ್ಕೆ ಸರಳ ಮತ್ತು ಗೋಚರ ಕಾರಣಗಳಿವೆ. ಮೊದಲನೇಯದಾಗಿ ನಮ್ಮ ಇವತ್ತಿನ ಇಂಜಿನಿಯರಿಂಗ ಮತ್ತು ವೈದ್ಯಕೀಯ ವೃತ್ತಿಗಳ ರೂಪ ಪೂರ್ತಿಯಾಗಿ ಬದಲಾಗುವುದರಲ್ಲಿದೆ. ಐಟಿ, ಈವತ್ತಿನ ರೂಪದಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಇದನ್ನು ನಾನು ಅತ್ಯಂತ ಖಚಿತವಾಗಿ ಹೇಳಬಲ್ಲೆ. ಹಾಗೆಯೇ ಇವತ್ತಿನ ವೈದ್ಯಕೀಯ ರೂಢಿಗಳು ಕೂಡ ಕೆಲವು ವರ್ಷಗಳಲ್ಲಿ ಬದಲಾಗುತ್ತವೆ. ಇವತ್ತು ಹಿಂದುಳಿದ ಕ್ಷೇತ್ರಗಳಾದ ಆಹಾರ ಉತ್ಪಾದನೆ, ಕೈಗಾರಿಕೆ ಇತ್ಯಾದಿ ಮುಂದೆ ಪ್ರಾಮುಖ್ಯತೆ ಪಡೆಯುತ್ತವೆ. ಆದರೆ ಅವೆಲ್ಲ ಈ ಹಿಂದೆ ಆಗಿಹೋದ ರೂಢಿಗಳ ಅನುಕರಣೆಗಳಾಗಿರುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಉಚ್ಚತರ 'ಪ್ರಜ್ಞೆ' ಕೆಲಸ ಮಾಡುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಪ್ರಪಂಚದಲ್ಲಿ 'ಪ್ರಜ್ಞೆಯ' ಬಗ್ಗೆ ಪ್ರಾಮಾಣಿಕ ಆಸಕ್ತಿ ಬೆಳೆಯುತ್ತಿದೆ. ಕೃಷಿಯಲ್ಲಿ 'ಸಹಜ' ಆಚರಣೆಗಳು, ಶಿಕ್ಷಣ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಎಚ್ಚರಿಕೆಗಳು, ಮನೆ ಶಿಕ್ಷಣ, ಆಹಾರದಲ್ಲಿ ಸಾವಯವ ಪದಾರ್ಥಗಳ ಬಳಕೆ, ಅವುಗಳಿಗೆ ಬೇಡಿಕೆ, occupy ಚಳುವಳಿಗಳು ಇತ್ಯಾದಿ - ಇವೆಲ್ಲವೂ ನಮ್ಮಲ್ಲಿ ಬದಲಾಗುತ್ತಿರು 'ಪ್ರಜ್ಞೆ'ಯ ಬಗ್ಗೆ ತಿಳಿಸುತ್ತದೆ. ನಾವೆಲ್ಲರೂ ಕೂಡಿ ಒಟ್ಟಿಗೆ ಪ್ರಜ್ಞಾವಂತರಾಗೋಣ ಎಂಬ ಕಳಕಳಿ, ವಿಚಾರಗಳೂ ಕೂಡ ಇವತ್ತು ನಮಗೆ ಬೇರೆಡೆ ಕಾಣಸಿಗುತ್ತವೆ.

ಕೂಡಿ ಸಾಗೋಣ ಎಂಬ ಭಾವ ನಮ್ಮಲ್ಲಿ ಮೊದಲಿಂದಲೂ ಇತ್ತು ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ನಮ್ಮಲ್ಲಿ ಎಷ್ಟೋ ಜನ ಇದನ್ನು ದಿನವೂ ಪಠಿಸುತ್ತೇವೆ.

ಲೇಖನದಲ್ಲಿ ಬೊಟ್ಟು ಮಾಡಿದ್ದು ನನಗೆ ಇಷ್ಟವಾಗಲಿಲ್ಲ. ಇದೆಲ್ಲದರಲ್ಲಿ ನಾವು ಇದ್ದೇವೆ, ನಾವೂ ಇದರಲ್ಲಿ ತೊಡಗಿಕೊಂಡಿದ್ದೇವೆ. ಅವರು ಬೇರೆ ನಾವು ಬೇರೆ ಎಂಬ ಧೋರಣೆ ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ.

ಇತಿ,
ಹರೀಶ

1. http://www.collective-evolution.com/
2. https://www.youtube.com/watch?v=mJMygG28weU&list=PLWaDVcIBRPsu0ODfjiU59SC4nhjlqZ0Ep
3. https://www.youtube.com/watch?v=y0xmEDq3NIs
4. http://noosphere.princeton.edu/
5. https://www.youtube.com/watch?v=HAHZTDQOj2I

Hanuamantappa Byalyal

unread,
Nov 11, 2014, 2:30:34 AM11/11/14
to sahasp...@googlegroups.com
nija sir indina yuva janangakke intha lekanada tiluvalike beke beku

On Fri, Oct 24, 2014 at 2:36 PM, Gananath <sngan...@gmail.com> wrote:
--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana+unsubscribe@googlegroups.com.
Reply all
Reply to author
Forward
0 new messages