ಇಂದಿನ ವಚನ

11 views
Skip to first unread message

Gananath

unread,
Dec 4, 2014, 9:19:23 AM12/4/14
to sahasp...@googlegroups.com
ಪಯ = ಹಾಲು. ಆದರೆ ದದ್ಥಿ ಎಂದರೆ?

ಗಣನಾಥ

ಇಂದಿನ ವಚನ

ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ
ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ
ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ?
ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ?
ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ
ಮನೋನಾಥನ ಅನುವ ವಿಚಾರಿಸಿ
ಮನ ಮನನೀಯ ಭಾವ ಭಾವನೆ
ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ.
ಇಂತಿವನೆಲ್ಲವನೂ ತೆರದರಿಶನದಿಂದರಿದು
ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ
ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ
ಕಮಠೇಶ್ವರಲಿಂಗವು ತಾನಾದ ಶರಣ.

--- ಬಾಲಸಂಗಣ್ಣ

Dhwani Trust

unread,
Dec 8, 2014, 1:49:30 AM12/8/14
to sahasp...@googlegroups.com
ದದ್ಥಿ ಅಂದರೂ ಹಾಲು ಎಂದು ಅರ್ಥ ಇದೆ!
-ಶಿಹೊಂ

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.--
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ                             Dhwani Educational Resource Centre        
 ಮನೆ ನಂ:
14,    3 ನೇ ಮುಖ್ಯರಸ್ತೆ,  7 ನೇ ಅಡ್ಡರಸ್ತೆ                     # 14,  3rd main, 7th Cross 
 
ಕಲ್ಯಾಣ ನಗರ, ಧಾರವಾಡ - 580007                                      Kalyana Nagara, Dharwad - 580007                                                                                                   
ಫೋನ್: 0836 - 2745684                                                       Ph: 0836 - 2745684                                    

                                       

Brinda Rao

unread,
Dec 8, 2014, 9:34:18 AM12/8/14
to sahasp...@googlegroups.com
ದಧಿ ಅಂದರೆ ಮೊಸರು ಅಂತಲೂ ಇರಬೇಕಲ್ಲವೇ?  ಪಂಚಾಮೃತ ಅಭಿಷೇಕ ಮಾಡುವಾಗ ದಧ್ಯಾಂ ಸ್ನಪಯಾಮಿ ಎಂದು ಹೇಳಿ  ಮೊಸರು ಹಾಕಿಸುತ್ತಾರೆ!
Reply all
Reply to author
Forward
0 new messages