ಬೆಂಗಳೂರಿಗೆ ಹಾರ್ಟ್ ಅಟ್ಯಾಕ್

4 views
Skip to first unread message

Prabhakara H R

unread,
Aug 8, 2016, 12:27:57 AM8/8/16
to sahasp...@googlegroups.com

ಬೆಂಗಳೂರಿಗೆ ಹಾರ್ಟ್ ಅಟ್ಯಾಕ್


ಹಳ್ಳಿ ಮಹಾಸ್ವಾಮಿಗೂ ಪೇಟೆಯ ಪ್ರಸಿಧ್ಧ ವೈದ್ಯರಿಗೂ ದೊಡ್ಡ ವಾಗ್ವಾದ.

ಡಾಕ್ಟ್ರೇ, ನಮ್ಮ ದೇಹಕ್ಕೆ ಬೇಡ ಕಾಯಿಲೆ ಭಯ,

ಅಂತಃ ಶಕ್ತಿಯಲ್ಲಿದೆ ಎಲ್ಲಾ ಜಯ,

ಆಹಾರ, ವಿಚಾರ, ಮುದ್ರೆ, ಯೋಗ,

ಸರಿ ಇದ್ದರೆ ತೀರಿತು, ಏನಿದೆ ಭಂಗ?”


ಸ್ವಾಮಿಗಳೇ, ನಿಮ್ಮದೇನಿದು ಮೌಢ್ಯ?

ಮಾಡಿಸಿ ತಪಾಸಣೆ, ತಿಳಿಯಿರಿ ದೇಹ ಧಾರ್ಢ್ಯ.

ವಿಜ್ಞಾನ ಕಂಡಿಲ್ಲ ಯಾವ ಶಕ್ತಿ,
ಪರೀಕ್ಷೆ,ಚಿಕಿತ್ಸೆ, ಟಾನಿಕ್ ನಿಂದ ಮಾತ್ರ ಮುಕ್ತಿ"

ವಾದದ ನಂತರ ಮಹಾಸ್ವಾಮಿಗಳಿಗೆ ಅಂಟಿತು ಸಂಶಯ,
ಏನಕ್ಕೂ ಇರಲೆಂದು ಮಾಡಿಸಿದರು ತಪಾಸಣೆಯ,
ಇತ್ತು ಹೃದಯದಲ್ಲಿ ಎರಡು-ಮೂರು ಬ್ಲಾಕು,
ಅಂಜಿಯೋಪ್ಲಾಸ್ಟಿಯಿಂದಾಯಿತು, ಎಲ್ಲಾ ಟೀಕು.

ವೈದ್ಯರಿಗೆ ಆಯಿತು ಮಹಾಸ್ವಾಮಿಗಳ ವಾದ ಪ್ರಭಾವ,
ತಪಾಸಣೆ ಬಿಟ್ಟು ಮಾಡಿದರು ಮುದ್ರೆ ಯೋಗವ,
ಒಮ್ಮೆ ಎದೆನೋವು ಬಂದು ಸೇರಿದರು ಆಸ್ಪತ್ರೆ,
ಮನೆಯವರು ಮಾಡಬೇಕಾಯಿತು, ಶವ ಯಾತ್ರೆ
        ***
"ಬೆಂಗಳೂರಿನಲ್ಲಿ ಕೆರೆ ನೀರು ಕಟ್ಟಿ ಬಂತು ದುಃಸ್ಥಿತಿ
ಕೆರೆಕೋಡಿ ಚೊಕ್ಕ ಮಾಡದಿದ್ದರೆ ನಮಗೂ ಅದೇ ಗತಿ"
ಹೀಗೆಂದು ಹಳ್ಳಿಯಲ್ಲಿ ಮರ-ಗಿಡ ಕಡಿದು ಕೋಡಿ ಮಾಡಿದರು,
ಇನ್ನು ನೀರು ಹರಿವುದು, ಭಯವಿಲ್ಲ ಎದುರು ಬದುರು.


ಈಗ ಮಹಾಸ್ವಾಮಿಗಳಿಗೊಂದು ಸಂಶಯ:
"ಬೆಂಗಳೂರಿನಕೆರೆ ಕೋಡಿ ಬ್ಲಾಕೂ ಒಂದು ಹಾರ್ಟ್ ಅಟ್ಯಾಕೇ,
ಆದರೆ ಅಲ್ಲಿ ಅಡ್ಡ ಬಂದಿದ್ದು ಮರಗಳಲ್ಲ ಅಕ್ರಮ ಕಾಂಕ್ರೀಟ್ ಬ್ಲಾಕೇ,
ಹೌದು ಅದನ್ನು ಸರಿ ಮಾಡಲು ಬುಲ್ಡೋಜರ್ ರೇ ಬೇಕು,
ಹಳ್ಳಿಯ ಕೋಡಿಗೇನೂ ಬೇಡ, ಸುಮ್ಮನೆ ಬಿಟ್ಟರೂ ಸಾಕು,

   
ಬಹುಶಃ ಡಾಕ್ಟರಿಗೆ ಬೇಕಾಗಿತ್ತು ಅಂಜಿಯೋಪ್ಲಾಸ್ಟಿ,
ನಮ್ಮೂರ ಕೋಡಿಯ ಮರ ಕಡಿದು ಆಗುವುದೀಗ ಕಾಂಕ್ರೀಟ್ ಸೃಷ್ಠಿ!

Harish Amur

unread,
Aug 8, 2016, 6:32:50 AM8/8/16
to ಸಹಸ್ಪಂದನ
ಅದ್ಭುತ! ತುಂಬಾ ಚೆನ್ನಾಗಿದೆ.

ನವ್ಯದಲ್ಲಿ ಪ್ರಾಸಕ್ಕೂ ಆದ್ಯತೆ!

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana+unsubscribe@googlegroups.com.
To post to this group, send email to sahasp...@googlegroups.com.
Visit this group at https://groups.google.com/group/sahaspandana.
For more options, visit https://groups.google.com/d/optout.

Prabhakara H R

unread,
Aug 8, 2016, 11:48:58 AM8/8/16
to sahasp...@googlegroups.com

ಧನ್ಯವಾದಗಳು. ಓದುಗರ ತ್ರಾಸ ನೆನೆದು, ಕರುಣೆಯಿಂದ ಸ್ವಲ್ಪ ಪ್ರಾಸ ಹಾಕಿದೆ!

To unsubscribe from this group and stop receiving emails from it, send an email to sahaspandana...@googlegroups.com.
Reply all
Reply to author
Forward
0 new messages