ಮೊನ್ನೆ-ನಿನ್ನೆ-ಇವತ್ತು
(ಪುಟ್ಟ ಕಥೆ)
ಡಾ.ನಿಖಿಲೇಶ್ ಮೊನ್ನೆ ತಾನೆ ಒಂದು ಅತ್ಯಾಧುನಿಕ ಡಿಜಿಟಲ್ ಮೂವಿ ಕೆಮರಾ ತಂದರು.
ನಿನ್ನೆ ತಾನೆ ಬೆಳ್ಳಂಬೆಳಿಗ್ಗೆ ಕಾಡಿಗೆ ಹೋಗಿ ಕೋಗಿಲೆಗಳ ಶೂಟಿಂಗ್ ಮಾಡಿದರು.
ನಿನ್ನೆನೇ ರಾತ್ರಿ ಇಡೀ ಕುಳಿತು, ಫಿಲ್ಮ್ ಎಡಿಟ್ ಮಾಡಿದರು.
ಇವತ್ತು ನಸುಕಿನಲ್ಲಿ ತಾನೆ ಫೆಸ್ ಬುಕ್, ಯುಟ್ಯೂಬ್, ಗೂಗಲ್ ಡ್ರೈವ್ ...ಹೀಗೆ ಎಲ್ಲಾ ಕಡೆ ಪಬ್ಲಿಷ್ ಮಾಡಿದರು. ಸ್ವಲ್ಪ ಸಮಯದಲ್ಲೇ ಪ್ರಶಂಸೆ ಪ್ರತಿಕ್ರಿಯೆಗಳ ಹೂಮಳೆಯಲ್ಲಿ ನೆನೆದು ಖುಷಿಯಿಂದ ಕುಣಿದಾಡಿದರು. ಕುಣಿತದ ಶಬ್ದಕ್ಕೆ ಮೂರು ವರುಷದ ಮಗಳು ಸಂದೇಶಿ ಎಚ್ಚರವಾದಳು
"ನೋಡಿಲ್ಲಿ ಪುಟ್ಟೀ, ಎಷ್ಟೊಂದು ಜನ ರಿಸ್ಪೊಂಡ್ ಮಾಡಿದ್ದಾರೆ, ನಾನು ಹಾಕಿದ ಕೋಗಿಲೆ ಫಿಲ್ಮ್ ಮತ್ತು ಅದರಲ್ಲಿನ ಕೋಗಿಲೆ ದನಿ ಕೇಳಿ!!" ಎಂದು ಫಿಲ್ಮ್ ತೋರಿಸಿದರು.
"ಅಪ್ಪಾ, ಫಿಲ್ಮ್ ಚೆನ್ನಾಗಿದೆ; ಆದರೆ, ಕೋಗಿಲೆ ಎಲ್ಲಪ್ಪಾ?!".
ಡಾ.ನಿಖಿಲೇಶ್ ಕುಳಿತು ಬಿಟ್ಟರು, ಕಂಗಾಲಾದಂತೆ. ಹೆಂಡತಿ ಶಿವಾನಿ ಮುಗುಳು ನಗುತ್ತಾ ಕಾಫಿ ಕಪ್ ಚಾಚಿದಳು.
--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana+unsubscribe@googlegroups.com.
To post to this group, send email to sahasp...@googlegroups.com.
Visit this group at https://groups.google.com/group/sahaspandana.
For more options, visit https://groups.google.com/d/optout.