ಕವನ

33 views
Skip to first unread message

Ramesh T.R

unread,
Oct 23, 2017, 12:42:25 AM10/23/17
to sahasp...@googlegroups.com
ವರುಣನಿಗೊಂದು ಮನವಿ

ಬಾ ವರುಣ ಬಾ
ಇದಿರು ನೋಡುತ್ತಿದ್ದಾಳೆ ಇಳೆ
ನಿನಗಾಗಿ.
ಕಂಗಳಲಿ ಹೊಂಗನಸು
ಮುದದೆ ಮನಸು.
 ನಲ್ಮೆಯ ನಿರೀಕ್ಷೆಗಳೊಂದಿಗೆ ಭುವಿಗಿಳಿ
ಪುಳಕದ ಅಪ್ಪುಗೆ
ಅಗಣಿತ ಮುತ್ತುಗಳ ಚುಂಬನ
ತೊಯ್ದು ತೊಪ್ಪೆಯಾಗಿಸುವ ಅನಂತ ಪ್ರೇಮ
ಮಿಡಿಯಿತು ಹೃದಯವೀಣೆ
ಹೊಮ್ಮಲಿ ಒಲುಮೆಯ ಗಾನ
ನಳನಳಿಸಲಿ ಇಳೆ ಬಿಮ್ಮನಸೆಯಂತೆ
ಹೊಸ ಹಸಿರ ಪತ್ತಲವುಟ್ಟು
ಇಳೆಯೆಂದೂ ಬಂಜೆಯಲ್ಲ
ಸದಾ ಫಲವತಿ
ಬಾ ಜೀವ ಚೈತನ್ಯವಾಗಿ

ಬಾರದಿರು ವರುಣ
ಇಳೆಯ ಇಂಗಿತವರಿಯದೆ
ಕನಸುಗಳ ಕತ್ತು ಹಿಸುಕಿ
ಬಯಕೆಗಳ ಹೊಸಕಿ
ಹೆಣ್ಣ ಕಂಡು ಕೆರಳುವ ಮೃಗದಂತೆ
ಹದ್ದಿನಂತೆರಗಿ ಓಡುವ ಅತ್ಯಾಚಾರಿಯಂತೆ
ಗುಡಿಸಿ ಗುಂಡಾಂತರಕ್ಕೆಳೆಯುವ
ಮೃತ್ಯುಮಳೆಯಾಗಿ ಬಾರದಿರು

ಅನಾಮಿಕ

Reply all
Reply to author
Forward
0 new messages