[Omkar Youth Club] om beach

2 views
Skip to first unread message

Omkar Youth Club

unread,
Mar 21, 2011, 6:34:15 AM3/21/11
to omkaryo...@googlegroups.com
ಪ್ರವಾಸ ಪ್ರವಾಸ ಪ್ರವಾಸ 
ನಮ್ಮ ತಂಡವು 6 /3 /2011 ರಂದು  ಗೋಕರ್ಣ ಸಮೀಪದ ಓಂ ಬೀಚ್  ಮತ್ತು ಕುಡ್ಲೆ  ಪ್ರವಾಸ ಹೋಗಿತ್ತು







--
Posted By Omkar Youth Club to Omkar Youth Club at 3/12/2011 03:43:00 PM

Omkar Youth Club

unread,
Mar 22, 2011, 12:07:16 AM3/22/11
to omkaryo...@googlegroups.com
ಪ್ರವಾಸ ಪ್ರವಾಸ ಪ್ರವಾಸ 
ನಾವು  6 /3 /2011 ರಂದು  ಗೋಕರ್ಣ ಸಮೀಪದ  ಓಂ ಬೀಚ್ & ಕುಡ್ಲೆ ಬೀಚ್ ಪ್ರವಾಸ ಹೋಗಿದ್ದೆವು.  ಪ್ರವಾಸದ ದಿನ  ಊಟ ಮಾಡಲು ಹಿಂದಿನ ದಿವಸ ಕೋಳಿ ಪಲ್ಯ  ಮಾಡಿದೆವು.  ಭಾರಿ  ಉತ್ಸಾಹದಿಂದ  ತಂಡದ ಸದಸ್ಯರು ಪಾಲ್ದೊಂಡಿದ್ದರು. ಬೆಳಿಗ್ಗೆ 5 .30 ಗಂಟೆಗೆ  ಬಸ್ಸಿಂದ ಹೊರಟೆವು. ಬಸ್ಸಿನಲ್ಲಿ ಸದಸ್ಯರು ಅವರದ್ದೇ ಆದ ರೀತಿಯಲ್ಲಿ ಪ್ರವಾಸದ   ಆನಂದವನ್ನು     ಸವಿದರು.  ಸುಮಾರು  10.00pm ಗೆ  ಒಂದು  ಒಳ್ಳೆಯ  ಸ್ಥಳದಲ್ಲಿ  ಬಸ್ಸನ್ನು  ನಿಲ್ಲಿಸಿ ಉಪಹಾರವನ್ನು ಸೇವಿಸಿದೆವು. ನಂತರ ನಾವು 10 .00AM ಗೆ ಹೊರಟವರು ಓಂ ಬೀಚ್ ತಲುಪುವಾಗ 11.30PM ಆಗಿತ್ತು. ಅಲ್ಲಿ ಮೊದಲು ಓಂ ಬೀಚ್ ತಲುಪಿ ಅಲ್ಲಿನ ಬೋಟಿಂಗ್  ದೃಶ್ಯ  ನೋಡಿದೆವು. ನಂತರ ನಾವು ಕುಡ್ಲೆ ಬೀಚ್ ಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಸ್ನಾನ ಮಾಡಿ ನಂತರ ವಾಲಿಬಾಲ್ ಗೆ ಕಂಬವನ್ನು ಊರಿದೆವು. ನಂತರ ೩ ತಂಡವನ್ನು ಮಾಡಿ ಆಡಿದೆವು. ಬೀಚ್ ನಲ್ಲಿ ಆಡುವ ಮಜಾನೆ ಬೇರೆ.ನಂತರ ನಾವು ಊಟ ಮಾಡಲು ಹೋದೆವು. ಒಂದು ಒಳ್ಳೆಯ ಪ್ರಶಾಂತವಾದ ಸ್ಥಳದಲ್ಲಿ ಕೂತು ಊಟ ಮಾಡಿದೆವು. ತದನಂತರ ಮತ್ತೊಮ್ಮೆ ಬೀಚ್ ಗೆ ಹೊಇಗಿ ಮರಳಿನ ರಾಶಿಯ ಮೇಲೆ ಮಲಗಿ ವಿಶ್ರಾಂತಿ ಪಡೆದೆವು. ಸ್ವಲ್ಪ ಹೊತ್ತಿನ ನಂತರ ಮತ್ತೊಮ್ಮೆ ನೀರಿನಲ್ಲಿ ಸ್ನಾನ ಮಾಡಲು ಹೋದೆವು. ಕೆಲವು ವಿದೇಶಿಯರು ನಮ್ಮ ಜೊತೆ ವಲ್ಲ್ಯ್ಬಾಲ್ ಆಡುತ್ತೇವೆ ಎಂದು ಬಂದರು. ನಾವು ಅವರ ಜೊತೆ ಆಡಿ ಸಂತೋಷ ಪಟ್ಟೆವು. ನಾವು ಒಂದು ಒಳ್ಳೆಯ ದೃಶ್ಯ ನೋಡಿ ಆಶ್ಚರ್ಯಚಕಿತರಾದೆವು. ಅದೇನೆಂದರೆ ಕೆಲವು ವಿದೇಶಿಯರು ಬೀಚ್ ನಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ಒಂದು ಕಡೆ ರಾಶಿ ಹಾಕಿ ಬೆಂಕಿ ಕೊಡುತ್ತಿದ್ದರು. ಅದೇ ಥರ ನಮ್ಮ ಭಾರತೀಯರು ಈ ಬುದ್ಧಿಯನ್ನು ಬೆಳೆಸಿದ್ದರೆ ಈಗ ಕಂಡ ಕಂಡಲ್ಲಿ ಕಸ ಕಾಣುತ್ತಿರಲಿಲ್ಲ. ನಾವು ಸಂಜೆ 7PM ತನಕ ಬೆಅಚ್ನಲ್ಲಿ ಆಡಿ ನಂತರ ಹೊರಟೆವು. ಮನೆಗೆ ತಲುಪುವಾಗ 12AM ಆಗಿತ್ತು. ನಾವು  ಮುಂದಿನ ವರ್ಷ ಗೋವಾ ಹೋಗುವ ನಿರ್ಧಾರ ಮಾಡಿದ್ದೇವೆ.              
ಸಾಂಬಾರು ಪದಾರ್ಥ ಕಡಿಯುದರಲ್ಲಿ ನಿರತನಾಗಿದ್ದ ನಂದುಭಾಯಿ 
ನೀರುಳ್ಳಿ ಮತ್ತು ಟೊಮೇಟೊಗಳನ್ನೂ  ಹೆಚ್ಚಿ  ನಿಂತಿರುವ ದಿಲೀಪ್ & ಉಮೇಶ್ . ಫೋಟೋಗೆ ಫೋಸ್ ಕೊಡುದನ್ನೇ ಕಾಯುತ್ತಿದ್ದ ಗಂಟು.  
ಅಡಿಗೆ ನೋಡದು ಮತ್ತು ಆ ದಿನದ ಊಟ ಸವಿಯಲು ಬಂದ ಸದಸ್ಯರು. ಅಡಿಗೆ ಬೇರೆಯವರು ಮಾಡಿದ್ದರೂ ತಾನೇ ಮಾಡುತ್ತಿದ್ದೇನೆ ಎಂದು ಫೋಸ್ ಕೊಡುತ್ತಿರುವ ದೀಪು (ಮೋಟು) 
ಎಡರಲ್ಲೋ ಅದೇ ಕಥೆ... ಕೋಳಿ ಸಾರನ್ನು ಕಲಕಿಸಿ ಫೋಸ್ ಕೊಟ್ಟ ಜೀವನ. ಮತ್ತು ಓಲೆ ಉರಿಸುತ್ತಿರುವ ನಂದುಭಾಯಿ 
ಆ ದಿನದ ಅಡಿಗೆ ತಾನೇ ಮಾಡುತ್ತೇನೆಂದು ಕೂತ ಗಣೇಶ್ (ಗಂಟು). ಕೋಳಿ ಸಾರು ಸವಿಯಲು ಬಂದ ತಂಡದ ಸದಸ್ಯರು.  
ಓಲೆ ಉರಿಸಲು ಸಹ್ಯ ಮಾಡಿದ ಆನಂದ (ಉಂಡ್ರಿ) 

ಕೋಳಿ ಸಾರು ಬಸ್ಸಿಗೆ ಸಾಗಿಸುತ್ತಿರುವ ವಿಷ್ಣು & ಪ್ರೇಮಾನಂದ(ಫುಗ್ಗಾನಂದ) 

ಬಸ್ಸಿನ ಮೇಲೆ ವಾಲಿಬಾಲ್ ಕಂಬ ಹಾಕಿದ ನಂತರ ಫೋಸ್ ಕೊಟ್ಟು ನಿಂತ ಆನಂದ (ಉಂಡ್ರಿ)

ಹೊರಡುವ ಮೊದಲು ತಾಣದ ಸದಸ್ಯರು (ಎಡದಿಂದ ಬಲಕ್ಕೆ)
ಪುನಿತ್(ಪುಂಡ), ಉದಯ, ನಂದುಭಾಯಿ , ಸಂದೀಪ್, ಅಕ್ಷಯ್ , ಗಣೇಶ್(ಗಂಟು), ವಿಷ್ಣು, ಪ್ರೇಮಾನಂದ, ಉಮೇಶ್ ಕಾಮತ್   
,ಉಮೇಶ್ ನಾಯಕ್, ದೇವೇಂದ್ರ, ಮಾಧವ, ಸಂತೋಷ್,
ಕುಳಿತವರು-ನಿತೀಶ್(ಮೋಟು), ನಾಗೇಶ್, ಸಂದೀಪ್(ಮಂಡು). 
ಮರವಂತೆ ಬೀಚ್ ನಲ್ಲಿ ಫೋಸ್ ಕೋಟು ನಿಂತ ಸಂದೀಪ್ 
ಮರವಂತೆಯಲ್ಲಿ ಪ್ರೇಮಾನಂದ 
ಮರವಂತೆಯಲ್ಲಿ ಫೋಸ್ ಕೊಟ್ಟು ನಿಂತ ಸದಸ್ಯರು. 
ಓಸಿ ಕನ್ನಡಕ ಹಾಕಿ ಫೋಸ್ ಕೊಟ್ಟ ವಿಷ್ಣು 

ಬೀಚ್ ನಲ್ಲಿ ಹೋಗಿ ವಾಲಿಬಾಲ್ ಆಡುತ್ತಿದ್ದೇವೆ ಎಂದು ಮನದಲ್ಲೇ ಖುಷಿ ಪಡುತ್ತಿರುವ ನಂದು 
ನಮ್ಮ ಬಸ್ ಚಾಲಕ ರವಿ 
ಓಂ  ಬೀಚ್ ನ  ವಿಹಂಗಮ  ನೋಟ  
ಓಂ ಬೀಚ್ 
ಓಂ ಬೀಚ್ 
ಬೋಟಿಂಗ್ ಮಾಡಲು ಅಣಿಯಾದ ವಿದೇಶಿಯರು 
ಊಟ ಮಾಡಿ ವಿಶ್ರಾಂತಿ ಪಡೆದ ಸದಸ್ಯರು & ಬೀಚ್ ಬಂದ ಖುಷಿಯಲ್ಲಿ ತನ್ನನ್ನು ತಾನೇ ಮರೆತ ನಂದು 
Reply all
Reply to author
Forward
0 new messages