ಭಾಗವಹಿಸಿ - ಮಾಹಿತಿ ತಂತ್ರಜ್ಞಾನದ ಸುತ್ತ ಕನ್ನಡ - ವಿಚಾರ ವಿನಿಮಯ ಮತ್ತು ಕಾರ್ಯಾಗಾರ - ಒಂದು ಸಮೀಕ್ಷೆ

8 views
Skip to first unread message

omshiva...@gmail.com

unread,
Nov 26, 2011, 3:13:52 PM11/26/11
to null

ಕನ್ನಡಕ್ಕಾಗಿ ಏನನ್ನಾದರೂ ಮಾಡಬೇಕು ಎಂಬುದು ಎಲ್ಲ ಕನ್ನಡಿಗನ ಆಸೆ. ಮಾಹಿತಿ ತಂತ್ರಜ್ಞಾನದ ಸಿಲಿಕಾನ್ ನಗರಿ ಕೂಡ ಕನ್ನಡದ ಮಡಿಲಲ್ಲಿಯೇ ಇದೆ. ಕನ್ನಡದ ಕಂಪೆನಿಗಳು ಅದೆಷ್ಟೋ ದೇಶಗಳಿಗೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುತ್ತಿವೆ. ಆದರೆ ಕನ್ನಡದ ಭಾಷೆ ಮಾಹಿತಿ ತಂತ್ರಜ್ಞಾನದ ಜೊತೆಗೆ ಬೆಳವಣಿಗೆ ಹೊಂದಿದೆಯೇ ಎಂಬ ವಿಚಾರವನ್ನು ಎತ್ತಿದಲ್ಲಿ - ಉತ್ತರ 'ಇಲ್ಲ' ಎಂದು ಎಲ್ಲರೂ ಹೇಳಬಹುದು. ಭಾಷೆಯ ಬೆಳವಣಿಗೆ ಅದರ ಬಳಕೆದಾರರ ಕೈಯಲ್ಲಿಯೇ ಇದೆ. ಭಾಷೆಯ ತಂತ್ರಜ್ಞಾನದ ಬೆಳವಣಿಗೆ ಕೂಡಾ. ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುವ, ಮಾಡಲಿಚ್ಚಿಸುವ ಅನೇಕರಿಗೆ ಕನ್ನಡದ ತಾಂತ್ರಿಕ ಬೆಳವಣಿಗೆ, ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ, ಕನ್ನಡ ತಂತ್ರಜ್ಞಾನ, ತಂತ್ರಾಂಶಗಳು ನೆಡಯಬೇಕಿರುವ ಹಾದಿಯ ಕಿರು ಪರಿಚಯ, ಸಮುದಾಯ ಅಭಿವೃದ್ದಿಯ ಪರಿಕಲ್ಪನೆ, ಈಗಾಗಲೇ ಅನೇಕ ಆಸಕ್ತರು ಪ್ರಾರಂಭಿಸಿರುವ ಯೋಜನೆಗಳು ಇತ್ಯಾದಿ ಮಾಹಿತಿಗಳ ವಿನಿಮಯ, ಹಂಚಿಕೆ ಜೊತೆಗೆ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುವ ಯೋಜನೆಯೊಂದಿದ್ದರೆ? ಅದರ ರೂಪರೇಷೆ, ನೀವು ಅದರಲ್ಲಿ ಹೇಗೆ ಭಾಗವಹಿಸಲಿಚ್ಚಿಸುವಿರಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಿರು ಉತ್ತರ ಕೊಡುವಿರಾ? ಭಾಷಾ ತಂತ್ರಜ್ಞಾನಕ್ಕೆ ಮತ್ತಷ್ಟು ಹೆಜ್ಜೆಗಳನ್ನಿಡಲು ಸಹಕರಿಸಿ ಎಂದು ಕೋರುತ್ತಾ...


-- -- 
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

Blog : http://platonic.techfiz.info
Phone: 91- 9902026518

Reply all
Reply to author
Forward
0 new messages