""ಇಂದಿಗೆ ಕಳೆಯಿತು ಒಂದು ವರುಷ,
ಇಲ್ಲ ಮನದಾಳದಲ್ಲಿ ಹರುಷ,
ನೆನಪಿನ ಲೋಕದಲ್ಲಿ ಚಿರಾಯು.
ಗಾನಗಾರುಡಿಯ ಗಾನ ಸುಧೆ,
ಅಭಿನಯ ಭಾರ್ಗವನ ಮೌನದ ಮುತ್ತು,
ಕಳಕೊಂಡ ಕೋಟಿ ಕನ್ನಡಿಗರೀಗ ಬಡವರು.
ಕನ್ನಡವೇ ಸತ್ಯ ಎಂದ ಅಶ್ವಥ್,
ಕನ್ನಡವೇ ನಮ್ಮಮ್ಮ ಎಂದ ವಿಷ್ಣು
ಕನ್ನಡಮ್ಮನ ಮಡಿಲೀಗ ಬರಿದು.
ಕನ್ನಡಮ್ಮನ ಕಂದರಿವರು, ಮನಸಿಗೆ
ತುಂಬಾ ಹತ್ತಿರವಾದರು, ಕನಸಿಗೆ
ನಾಯಕರಾದರು, ಭೌತಿಕವಾಗಿ ದೂರಾದರು.""
""ಇಂತಿ ನಿಮ್ಮ ನೆನಪಿನ ನೋವಿನಲ್ಲಿ
ನಿಮ್ಮ ಮನಸಿನಲ್ಲಿರೋ ಷಟ್'ಕೋಟಿ
ಕನ್ನಡಿಗರ ಮನಪೂರ್ವಕ ಶ್ರದ್ಧಾಂಜಲಿ.""