ಯಾರು ಹೆಸರಿಟ್ಟರು ನಿನಗೆ ಗಡಿಯಾರವೆಂದು ನಾ ತಡವಾದರೂ ನೀ ತಡವಾಗಲಿಲ್ಲ ನಾ ತಡೆ ಎಂದರೂ ನೀ ತಡೆಯಲಿಲ್ಲ ಅರ್ಥವೇನು ನಿನ್ನ ಟಿಕ್ ಟಿಕ್ ಎಂಬ ಹಾಡಿಗೆ ಬೆರಗಾಗದವರಿಲ್ಲ ನಿನ್ನ ಸಮಯದ ಪಾಲನೆಗೆ ಸಂಜೆಯಾದರೆ ಸೂರ್ಯನಿಲ್ಲ ಬೆಳಕಾದರೆ ಚಂದ್ರನಿಲ್ಲ ನಿನಗೇಕಿಲ್ಲ ಅವರಂತೆ ರಾತ್ರಿ ಹಗಲು.... ಎನ್ನೊಳಗೆ ಕನಸುಗಳ ಭಂಡಾರವಿದೆ ನಿನ್ನ ಆಸೆಗಳ ಗಿರಿಯೇಕೆ ಬೋಳು..? ಚಿಕ್ಕ ಮುಳ್ಳು ನೀನು, ದೂಡ್ಡವಳು ನಿನ್ನವಳು ಮತ್ತೂಂದು ಚುರುಕುತನದು ನಿನ್ನ ಮಗನಲ್ಲವೇ..? ಸಂಜೆಗೆ ನನ್ನವಳು ಕರೆದಿಹಳು ಭೋಜನಕೆ ಈಗಲೇ ಹಸಿವಾಗಿದೆ ನೀ ಸ್ವಲ್ಪ ಬೇಗ ನಡೆ ಮತ್ತೆ ಸಿಗುವೆ ನಾ ನಿನಗೆ ಮತ್ತೊಂದು ಓಲೆಯಲಿ ದಣಿವಿರದ ನಿನ್ನ ಪಯಣಕೆ ಸದಾ ಶುಭವಿರಲಿ ಹಾಗೇ ತಿಳಿಸು ನಿನ್ನ