ಗಣಿತಕ್ಕೊಂದು ಒಗಟು...:''ಪರಮ ಸತ್ಯದ ಒಗಟುಗಳು''....!!

1,232 views
Skip to first unread message

Parameshwar Hegde

unread,
Jan 31, 2016, 9:13:15 AM1/31/16
to mstfma...@googlegroups.com, mathssciencestf

ಹೀಗೊಂದು ಯೋಚನೆ..
ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!!

   ಸ್ನೇಹಿತರೆ,
     ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ ತಾವೇ ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ  ಅಸ್ಪಷ್ಟ ಮಾಹಿತಿಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ .ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th) ಉಪಯೋಗವಾದೀತು...
ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸರಿಪಡಿಸುವಲ್ಲಿ ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ
               ನಿಮ್ಮವ,
                     ಪರಮೇಶ್ವರ ಹೆಗಡೆ.

      ''ಪರಮ ಸತ್ಯದ ಒಗಟುಗಳು''
   ಒಗಟು1:
   ''ಎಲ್ಲರನೂ ಬಾಗಿಪನು
ತಾನಾರಿಗೂ ತಲೆ ಬಾಗನು..
ವರ್ಗ,ಘನ,ಚತುರ್ಥ..
...ನೀವೆಷ್ಟೇ ಏರಿಸಿದರೂ 'ಘಾತ'
ಜಗ್ಗನಿವ ಭಂಡ...!
ಕೇಳಿದರೆ ಪ್ರಥ್ವಿಯೇ
ತಾನೆಂಬ ಪ್ರಚಂಡ..!!
ಹೇಳುವೆಯಾ ನೀ ಜಾಣ
ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!!
               ಕವಿಹೃದಯಿ,
             ಪರಮೇಶ್ವರ ಹೆಗಡೆ

Channaveeraswami Hiremath

unread,
Jan 31, 2016, 10:04:52 AM1/31/16
to mathssc...@googlegroups.com
Good effort sir. Good night.

From: Parameshwar Hegde
Sent: ‎31-‎01-‎2016 07:43 PM
To: mstfma...@googlegroups.com; mathssciencestf
Subject: [ms-stf '52671'] ಗಣಿತಕ್ಕೊಂದು ಒಗಟು...:''ಪರಮ ಸತ್ಯದ ಒಗಟುಗಳು''....!!

--
1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
2. For STF training, visit KOER - http://karnatakaeducation.org.in/KOER/en/index.php
4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Basavaraj Huded

unread,
Jan 31, 2016, 11:10:12 AM1/31/16
to mathssc...@googlegroups.com

Zero

--

Bheemesh Shetty

unread,
Jan 31, 2016, 12:24:36 PM1/31/16
to mathssc...@googlegroups.com
I think answer is 1.

From: Basavaraj Huded
Sent: ‎31-‎01-‎2016 09:40 PM
To: mathssc...@googlegroups.com
Subject: Re: [ms-stf '52682'] ಗಣಿತಕ್ಕೊಂದು ಒಗಟು...:''ಪರಮ ಸತ್ಯದ ಒಗಟುಗಳು''....!!

Geetha Koustubha

unread,
Jan 31, 2016, 8:49:54 PM1/31/16
to mathssc...@googlegroups.com

Good idea sir,All the best

Parameshwar Hegde

unread,
Jan 31, 2016, 9:37:49 PM1/31/16
to mathssciencestf, mstfma...@googlegroups.com

ಪರಮ ಸತ್ಯದ ಒಗಟುಗಳು..!!
ಒಗಟು 2

  ಕೆಲವೊಮ್ಮೆ ವಸ್ತು
ಮಗದೊಮ್ಮೆ ವಯಸ್ಸು.
ಮತ್ತೆ ಕೆಲವರಿಗೆ ಸಂಖ್ಯೆ..!

ಉದ್ದವೋ,ಎತ್ತರವೋ
ಅಗಲವೋ,..
ಒಟ್ಟಿನಲಿ ಬದಲಾಗುವೆ
ನನಗಿಲ್ಲ ಅಂಕೆ..!!

ಚರಾಚರರಿಗೆಲ್ಲ ಗೊತ್ತು,
ನಾ ಬೀಜಗಣಿತದ 'ಅಧಿಪ'
ಅಕ್ಷರವೂ ನಾ ಹೌದು
'X'ರೂಪದಲೇ
ನೋಡಿರುವಿರಿ ಅಧಿಕ....!!!


ಹೇಳುವೆಯಾ ನೀ ಜಾಣ

ಸುಳ್ಳಲ್ಲ-ಗಣಿತವಿದು
ಪರಮ ಸತ್ಯ....!!
     ......ಕವಿಹೃದಯಿ,


           ಪರಮೇಶ್ವರ ಹೆಗಡೆ

Lingaraj

unread,
Jan 31, 2016, 9:58:01 PM1/31/16
to mathssciencestf
ಚಾರಾಕ್ಷರ
--

Shaila Js

unread,
Jan 31, 2016, 10:02:53 PM1/31/16
to mathssc...@googlegroups.com
U r good poet and maths teacher also sir .....good effort...
--

Lalita K.H

unread,
Jan 31, 2016, 10:19:45 PM1/31/16
to mathssc...@googlegroups.com

GOOD thought .,nice sir

lalita

Nagesh Einstein

unread,
Feb 1, 2016, 6:58:41 AM2/1/16
to mathssc...@googlegroups.com
SUPER SIR

Nagesh Einstein
9743884602

Madhu chandrashekar

unread,
Feb 1, 2016, 7:38:30 AM2/1/16
to mathssc...@googlegroups.com

Nice sir.....

Veena Shanbhag

unread,
Feb 1, 2016, 10:56:30 AM2/1/16
to mathssc...@googlegroups.com
Super. Continue
Veena Shanbhag
G.H.S. Halepete, Ujire
Belthangady Taluk

Sharath Kumar Tulupule

unread,
Feb 1, 2016, 11:37:57 AM2/1/16
to mathssciencestf

Nice hegde.keep it up

Parameshwar Hegde

unread,
Feb 1, 2016, 10:13:03 PM2/1/16
to mathssciencestf, mstfma...@googlegroups.com

ಪರಮ ಸತ್ಯದ ಒಗಟುಗಳು..!!
  
  ಒಗಟು---3

ಸಂಖ್ಯೆಗಳ ಹಳಿಯಲ್ಲಿ
ಇವ ಚತುರ ,'1'ರಾ ಮಿತ್ರ..!
ಅಷ್ಟಕೂ ಇವ ಬಲು ದೊಡ್ಡ
ಎಣಿಸದಿರಿ,ನೋಡಿದರೆ
ಚಿಕ್ಕ ಇಲಿಮರಿಯ ಗಾತ್ರ...!!

ಯಾರೊಡನೆ ಭೇದವೆಣಿಪ
ಭಾಗಿಪರೆ ಹಂಚುವನು ಅರ್ಧ..!!
ಕರುಣಾಳು ತಾ ದಯದಿ
ಗುಣಿಸಿದರೆ ಖಾತೆಯೊಳು
'ದುಪ್ಪಟ್ಟು ' ಭದ್ರ...!!

ಸಮರೊಳಗೆ ಅಸಮಾನ್ಯನಿವ
ಜಗದೊಳಗೆ ಅವಿಭಾಜ್ಯ..!
ವರ್ಗಮೂಲವನೇ ಹೊಂದಿಲ್ಲ
ಇದು ಇವನ ದೌರ್ಭಾಗ್ಯ...!!
          ---ಕವಿಹೃದಯಿ,
              ಪರಮೇಶ್ವರ ಹೆಗಡೆ.

Shaila Js

unread,
Feb 1, 2016, 10:16:58 PM2/1/16
to mathssc...@googlegroups.com
Answer 2 sir
--

sujatha balachandra

unread,
Feb 1, 2016, 10:53:27 PM2/1/16
to mathssc...@googlegroups.com

Thumba interesting sir....nave first answer helbeku annostrolage answer madi agirthade....everyday waiting for ur riddles sir..

--

Shivabasappa Angadi

unread,
Feb 5, 2016, 1:02:01 AM2/5/16
to mathssc...@googlegroups.com
very nice sir continue

ಫೆಬ್ರವರಿ 2, 2016 09:23 ಪೂರ್ವಾಹ್ನ ರಂದು, sujatha balachandra <sujathaba...@gmail.com> ಬರೆದಿದ್ದಾರೆ:

sumithrak61

unread,
Feb 5, 2016, 3:34:09 AM2/5/16
to mstfma...@googlegroups.com, mathssc...@googlegroups.com, pheg...@gmail.com
intrestng sir.ಇ ನ್ನು  ಓ ಗ ಟುಗ ಳಿ ಗಾ ಗಿ ಕಾ ಯು ತಿ ದೇ ವೆ



Sent from my Mi phone
--

Shambhu Haveri

unread,
Feb 5, 2016, 5:10:53 AM2/5/16
to mathssc...@googlegroups.com
👌sir

nayanaraj shankarraj

unread,
Feb 6, 2016, 9:41:27 AM2/6/16
to mathssciencestf
nice sir,we are very proud of you sir
NAYANA KUMARI K
NSB GOVT HIGH SCHOOL
DERALAKATTE


Parameshwar Hegde

unread,
Feb 8, 2016, 12:59:06 PM2/8/16
to mathssciencestf, mstfma...@googlegroups.com

4.ಪರಮ ಸತ್ಯದ ಒಗಟುಗಳು..!!

    ಒಗಟು-4
ಮಹಾಮೇಧಾವಿ
ಹುಟ್ಟೂರು 'ಭಿನ್ನಾಲಿ'
ಈಗಿನ ರಾಜಸ್ಥಾನ..!
ಇವರಿಂದ ದೊರಕಿದ್ದು
'ಶೂನ್ಯ'ಕ್ಕೆ ಜಗದೊಳಗೆ ಸ್ಥಾನ..!!

ಗಣಿತಕ್ಕೆ ಬೊಮ್ಮನಿವ
ಬರಹದಲಿ 'ಸ್ಫುಟ-ಸಿದ್ಧಾಂತ'..!
ಖಂಡ,ಖಂಡಾಯತ,ಕರುಣ ಎಂಬಿತ್ಯಾದಿಗಳಲಿ ಪ್ರಖ್ಯಾತ..!!

ಚಕ್ರೀಯ ಚತುರ್ಭುಜದಲ್ಲೂ
ಇವರ ಸಾಧನೆಯ ನೋಡ..!
ಒಂದೋ-ಎರಡೋ..ಅಬ್ಬಬ್ಬ!!!
ತಪ್ಪಿಲ್ಲ ಸ್ತುತಿಸಿದರೆ ಪ್ರತಿನಿತ್ಯ
             ಇವರದ್ದೇ ಹಾಡ...!!

ಹೇಳುವೆಯ ಜಾಣ ,ಸುಳ್ಳಲ್ಲ
ಗಣಿತವಿದು ಪರಮ ಸತ್ಯ...!!!
                      ----ಕವಿಹೃದಯಿ


                           ಪರಮೇಶ್ವರ ಹೆಗಡೆ

Nagesh Einstein

unread,
Feb 8, 2016, 6:52:56 PM2/8/16
to mathssc...@googlegroups.com
Answer : Bramhagupta

--
1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
2. For STF training, visit KOER - http://karnatakaeducation.org.in/KOER/en/index.php
4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.



--
Nagesh Einstein
9743884602

Nagesh Einstein

unread,
Feb 8, 2016, 6:56:13 PM2/8/16
to mathssc...@googlegroups.com
Sir, place name is Bhinmal. not Bhinnali...

--
Nagesh Einstein
9743884602

Parameshwar Hegde

unread,
Feb 9, 2016, 12:07:31 PM2/9/16
to mathssciencestf, mstfma...@googlegroups.com

ಪರಮ ಸತ್ಯದ ಒಗಟುಗಳು...!!

ಒಗಟು -5
''ಪರಮಾತ್ಮನ ಸೃಷ್ಟಿಯಿದು
ತಲುಪುವುದು ಪರಮಾತ್ಮನೆಡೆಗೆ''
ಹೇಳಿದ್ದು ನಾನಲ್ಲ ....
ಗಣಿತಜ್ಞ ...'ಭಾಸ್ಕರ'..!
ಬೃಹತ್ ಮೌಲ್ಯವಿದಕೆ
ಇನ್ನೊಂದು ಹೆಸರುಂಟು,
ಕೇಳಿಲ್ಲಿ...'ಖಹರ'..!!

ಇದರೊಳಗೆ ಇದ ಕಳೆಯೆ
ಅನಿರ್ದಿಷ್ಟ ರೂಪ...!
ಗೊತ್ತೇನು ನಿಮಗೆ?
'ಜಾರ್ಜ ಕ್ಯಾಂಟರ್'
ನೀಡಿದ್ದು ಇದಕ್ಕೆ
ಸ್ಪಷ್ಟ-ಸ್ವರೂಪ..!!

ಎಂಟಕ್ಕೂ-ಇದಕ್ಕೂ
ಸಂಬಂಧ ಉಂಟು..!
ಹುಡುಕಿ ಹೊರಟರೆ
ಕರಗೀತು
ಆಯುಷ್ಯದಾಗಂಟು...!!

ಹೇಳುವೆಯಾ ನೀ ಜಾಣ
ಸುಳ್ಳಲ್ಲ ಗಣಿತವಿದು -

ಪರಮಸತ್ಯ...!!
    ----ಕವಿಹೃದಯಿ


         ಪರಮೇಶ್ವರ ಹೆಗಡೆ.

On Jan 31, 2016 7:42 PM, "Parameshwar Hegde" <pheg...@gmail.com> wrote:

sumithrak61

unread,
Feb 10, 2016, 1:31:18 AM2/10/16
to mstfma...@googlegroups.com, mathssc...@googlegroups.com, pheg...@gmail.com
ಉತ್ತರ ಅನಂತ.  ನಿಮ್ಮ ಕೆಲ ಸ  ಶ್ಲಾಘನೀಯ . ನಿಮ್ಮ  ಓಗಟಿಗಾಗಿ  ಕಾಯುತಿರುವ.ೆ  Please continue ಮಾಡಿ .



Sent from my Mi phone
--

Veerendra Thotagar

unread,
Feb 10, 2016, 2:06:13 AM2/10/16
to mathssc...@googlegroups.com

Wow super hegde different way of maths approach. Please continue don't stop. I will file all
Your friend

Veerendra Thotagar
GHS Kadabagere
Harapanahalli Tq
Davanagere Dist
9986984995
   

--

anivar235

unread,
Feb 10, 2016, 3:57:05 AM2/10/16
to mathssciencestf, mstfma...@googlegroups.com, pheg...@gmail.com
Pls sir
If anybody have 10th science notes
Send me


Sent from Samsung Mobile


-------- Original message --------
From: sumithrak61
Date:02/10/2016 12:00 PM (GMT+05:30)
To: mstfma...@googlegroups.com,mathssc...@googlegroups.com,pheg...@gmail.com
Subject: Re:[ms-stf '53486'] Re: ಗಣಿತಕ್ಕೊಂದು ಒಗಟು...:''ಪರಮ ಸತ್ಯದ ಒಗಟುಗಳು''....!!

ಉತ್ತರ ಅನಂತ.  ನಿಮ್ಮ ಕೆಲ ಸ  ಶ್ಲಾಘನೀಯ . ನಿಮ್ಮ  ಓಗಟಿಗಾಗಿ  ಕಾಯುತಿರುವ.ೆ  Please continue ಮಾಡಿ .



Sent from my Mi phone

Parameshwar Hegde

unread,
Feb 10, 2016, 1:29:52 PM2/10/16
to mathssciencestf

ನಿಮ್ಮ ಮಾಹಿತಿಗೆ ಧನ್ಯವಾದಗಳು ಪರಿಶೀಲಿಸುತ್ತೇನೆ

Parameshwar Hegde

unread,
Feb 10, 2016, 1:32:23 PM2/10/16
to mathssciencestf, mstfma...@googlegroups.com

ಪರಮಸತ್ಯದ ಒಗಟುಗಳು...!!

  ಒಗಟು-6
======
ನಾನಿದ್ದರೂ..ಇಲ್ಲ
ನಾನಿಲ್ಲದೇ ಏನಿಲ್ಲ ..
ನನ್ನೋಡನೆ
ಸಂಕಲನವೇ?
ನಂದಿಲ್ಲ
ತಕರಾರು..!
ಬನ್ನಿ ಗುಣಿಸಿರೆಂದರೂ
ಬರುತಿಲ್ಲ ಯಾರು...‌‌!!

ನಭ,ಪೂರ್ಣ,
ಅಂಬರ,ಆಕಾಶ
ಹೀಗೆ ,ಉಂಟು ಸಾಕಷ್ಟು
ಹೆಸರು...!
ಬಲು ಹೆಮ್ಮೆ ನನಗೆ
ಬ್ರಹ್ಮಗುಪ್ತರೆ ಪಿತ,
ಭವ್ಯ ಭಾರತವೆನ್ನ ತವರು..!!

ಆದಿಯೊಳು ನಾನು,
ಅಂತ್ಯದೊಳು ನಾನು
ನನ್ನೊಳಗೆ ನನ್ನನು
ಕಳೆದರೂ ಉಳಿಯುವೆನು ನಾನು..!
ಬಲುಚಂದ ರೂಪ,
ವೃತ್ತಕ್ಕೆ ಸಮೀಪ ಆದರೆ
ಬಲು ದುಃಖ ಛೇದಕ್ಕೆ ಶಾಪ
ವ್ಯವಹಾರದಳು
ನಡೆಯದು ನನ್ನಹೊರತು ಏನು...!!

ಹೇಳುವೆಯ ಬಲುಜಾಣ


ಸುಳ್ಳಲ್ಲ ಗಣಿತವಿದು

ಪರಮ ಸತ್ಯ...!!
       ......ಕವಿಹೃದಯಿ


             ಪರಮೇಶ್ವರ ಹೆಗಡೆ

Lalita K.H

unread,
Feb 11, 2016, 7:51:54 AM2/11/16
to mathssc...@googlegroups.com

ಉತ್ತರ  ,,,,,�ಅನಂತ,,,,,,,correct sir

lalita

--

Parameshwar Hegde

unread,
Feb 11, 2016, 10:30:09 AM2/11/16
to mathssciencestf

ಲಲಿತ ಮೇಡಮ್...ಒಗಟು 6 ಇದರ ಉತ್ತರ ಅನಂತವಲ್ಲ...ಒಗಟು5 ಕ್ಕೆ ಸರಿ

sujatha balachandra

unread,
Feb 11, 2016, 10:35:56 AM2/11/16
to mathssc...@googlegroups.com

ಶೂನ್ಯ.. ಸರಿನಾ ಸರ್?

--

Parameshwar Hegde

unread,
Feb 13, 2016, 6:19:08 AM2/13/16
to mathssciencestf, mstfma...@googlegroups.com

7.ಪರಮ ಸತ್ಯದ ಒಗಟುಗಳು....

    ಒಗಟು..7
  =====
'ಸೊನ್ನೆ'ಯನು 'ಸೊನ್ನೆ'ಯಲಿ
ಭಾಗಿಸಿದರೆ ಉಳಿಯುವುದು
                        ಎಷ್ಟು,?..!
'ಬೆಳೆವ ಸಿರಿ ಮೊಳಕೆಯಲೆ'..
ತರಗತಿಯಲ್ಲೆ ಕೇಳಿದ್ದು
ಈ ಪುಟ್ಟ ಮನಸ್ಸು...!!

ಹುಟ್ಟೂರು ಅತಿದೂರವೆನಲ್ಲ
ಹತ್ತಿರ,ತಮಿಳುನಾಡಿನ 'ಈರೊಡ್'..!
'ಶ್ರೀನಿವಾಸ-ಕೊಮಲತ್ತಮ್ಮಾಳ'ರ
ಮುದ್ದು ಮಗುವಿದು ನೋಡು...!!

ಗಣಿತದಲಿ ಅತೀ ಆಸಕ್ತಿ
'ಮಾಯಾಚೌಕ'ವ ರಚಿಸಿ
ಮಾಡಿದರು ಜಗದೊಳಗೆ ಮೋಡಿ..!
ಹಾಸಿಗೆಯಾಳಾದರೇನು?
ಗಣಿತವೆ ಉಸಿರು ,ನುಡಿದರು
ಸಂಖ್ಯೆ 1729,,,.ಕೇಳಿ ಅಚ್ಚರಿ
ಪಟ್ಟಿದ್ದು ಗಣಿತ ಗುರು 'ಹಾರ್ಡಿ'..!!

Conjucture,prime,identities....
ಎಲ್ಲದರಲೂ ಮೂಡಿಸಿದರು
ಇವರ ಜ್ಞಾನದ 'ಛಾಪು'...!
ಛೆ..!,
ದೇವರಿಗೆ ಅಸೂಯೆ ,32ರಲೆ
ಇಹಲೋಕ ತ್ಯಜಿಸಿದರೇನು?
ಸ್ವಲ್ಪವೂ ಕಳೆಗುಂದಿಲ್ಲ ಈಗಲೂ,
ಮಾಡಿರುವ ಸಾಧನೆಗಳ ಹೊಳಪು..!!

ಹೇಳುವೆಯ ನೀ ಜಾಣ
ಸುಳ್ಳಲ್ಲ ಗಣಿತವಿದು

'ಪರಮ ಸತ್ಯ'.....!!

               .....ಕವಿಹೃದಯಿ
                    ಪರಮೇಶ್ವರಹೆಗಡೆ.


sumithrak61

unread,
Feb 13, 2016, 7:55:09 AM2/13/16
to mstfma...@googlegroups.com, mathssc...@googlegroups.com, pheg...@gmail.com
ಚೆನ್ನಾಗಿದೆ ಮು ಂದಿ ನ  ಗಣಿತ  ದಿನಾಚರಣೆ  ದಿವ ಸ  ಬ ಳ ಸಿ ಕೊ ಳ್ಳು ತ್ತೇವೆ  ಧ ನ್ಯ ವಾ ದ ಗಳು



Sent from my Mi phone
--
Reply all
Reply to author
Forward
0 new messages