ಈ ಊರಿನ ಹೆಸರು ಪಂಚಗಂಗಾವಲಿ ತೀರದಲ್ಲಿ ಕುಂದವರ್ಮನೆಂಬ ರಾಜನು ಕಟ್ಟಿಸಿದ ಕುಂದೇಶ್ವರ ದೇವಸ್ಥಾನದಿಂದ ಬಂದಿದೆಯೆಂದು ಪ್ರತೀತಿ. ಕುಂದಾಪುರವೆಂದರೆ "ಸೂರ್ಯನ ಊರು" ಎಂಬ ಅರ್ಥವೂ ಇದೆ. ಈ ಊರಿನಲ್ಲಿ "ಮಹಾಲಿಂಗೇಶ್ವರ" ದೇವರ ಇನ್ನೊಂದು ದೇವಸ್ಥಾನವೂ ಇದೆ.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ ಬೈಂದೂರಿನ ರಾಜರ ಪ್ರಮುಖವಾರ ಬಂದರು ಈ ಊರಿನಲ್ಲಿ ಇತ್ತು. ಪೋರ್ಚುಗೀಸರು ೧೬ನೇ ಶತಮಾನದಲ್ಲಿ ಇಲ್ಲಿ ಬಂದು ನೆಲೆಸಿದರು ಹಾಗೂ ಒಂದು ಕೋಟೆಯನ್ನು ಕಟ್ಟಿದರು. ೧೭೯೯ ರಲ್ಲಿ ಟೀಪು ಸುಲ್ತಾನನ ಕಾಲನಂತರ ಈ ಪಟ್ಟಣವನ್ನು ಬ್ರಿಟೀಷರು ವಶಪಡಿಸಿಕೊಂಡರು. ಒಂದು ಕಾಲದಲ್ಲಿ ಈ ಊರಿನ ಹತ್ತಿರದ ಒಂದು ಸ್ವಚ್ಚ ನೀರಿನ ಕೆರೆಯಲ್ಲಿ ಟೀಪು ಸುಲ್ತಾನನಿಗೆಂದೇ ಒಂದು ವಿಶೇಷ ತಳಿಯ ಮೀನುಗಳನ್ನು ಸಾಕಲಾಗುತ್ತಿತ್ತು.
ಈ ಊರಿನ ಸುತ್ತ ಮುತ್ತ ಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ) ಹೂವಿನಿಂದಾಗಿಯೂ ಬಂದಿದೆಯೆಂದು ಹೇಳುತ್ತಾರೆ. ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ (ಕುಂದ) ಎಂಬ ಪದದಿಂದಲೂ ಬಂದಿದೆಯೆಂದು ಹೇಳುತ್ತಾರೆ.
ಕುಂದಾಪುರದಿಂದ ೩೨ ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳವು ಹಿಂದೆ ಕ್ರೋಧ ಕ್ಷೇತ್ರವೆಂದು ಹೆಸರಾಗಿತ್ತು. ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ೭ ಪುಣ್ಯ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ.
ವಾರಾಹಿ ನದಿಯ ದಕ್ಷಿಣ ದಡದಲ್ಲಿರುವ ಈ ಊರು ಅನೇಕ ದೇವಾಲಯಗಳ ಬೀಡಾಗಿದೆ. ಮಧ್ವಾಚಾರ್ಯರ ನಂತರ ದ್ವೈತ ಸಿಧ್ಧಾಂತವನ್ನು ಭೋದಿಸಿದ ವಾದಿರಾಜರು ಜನಿಸಿದ್ದು ಇಲ್ಲೆ ಸಮೀಪದಲ್ಲಿರುವ ಹೂವಿನಕೆರೆ ಎಂಬಲ್ಲಿ. ಒಂದು ಕಾಲದಲ್ಲಿ ಬಹು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಇಂದಿಗೆ ವಾಣಿಜ್ಯ ಕೇಂದ್ರವಾಗಿ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆಯಾದರೂ, ಇಂದಿಗೆ ವಿವಿಧ ಧರ್ಮಗಳ ೪೦ ಸ್ಥಳಗಳು ಇಲ್ಲಿವೆ. ಗೌಡ ಸಾರಸ್ವತ ಬ್ರಾಹ್ಮಣರ ಧಾರ್ಮಿಕ ಕೇಂದ್ರ ಇದು. ಈ ಸಮುದಾಯದ ಜನರ ಭಕ್ತಿಪಾತ್ರವಾದ ಮಹಾಲಸಾ ನಾರಾಯಣಿ ದೇವಾಲಯವು ಇಲ್ಲಿದೆ. ಇತಿಹಾಸದ ಪ್ರಕಾರ ಈ ದೇವಾಲಯವು ಮೂಲಸ್ಥಾನವಾದ ಗೋವಾದ ಮಾರ್ದೋಲಿಯಲ್ಲಿರುವ ಶ್ರೀಮಹಾಲಸಾ ದೇವಸ್ಥಾನದಿಂದ ಸ್ಪೂರ್ತಿಯನ್ನು ಪಡೆದಿದೆ.
ಈ ಊರಿನಲ್ಲಿ ಸುಪ್ರಸಿಧ್ಧವಾದ ಕೋಟಿಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬಹು ದೊಡ್ಡ ಇತಿಹಾಸವಿದೆ. ಪುರಾಣಗಳ ಪ್ರಕಾರ ಇಲ್ಲಿ ಬ್ರಹ್ಮ ಆದಿಶಕ್ತಿಯು ಇಲ್ಲಿ ತಪಸ್ಸನ್ನು ಮಾಡಿದಾಗ ಮೊದಲನೆಯದಾಗಿ ಲಿಂಗಾಕೃತಿಯ ಒಂದು ಪ್ರಖರವಾದ ಜ್ಯೋತಿಯು ಕಾಣಿಸಿತು. ನಂತರ ಈ ಜ್ಯೋತಿಯು ಒಂದು ಕೋಟಿ ಲಿಂಗಗಳಾಗಿ ಮಾರ್ಪಟ್ಟಿತು. ಈ ಲಿಂಗಗಳಿಂದ ಗಂಗಾಜಲ ಹಾಗೂ ಅಮೃತವು ಬ್ರಹ್ಮಾ ನದಿಗೆ ಹರಿದು ಹೋಯಿತು. ಆದರೆ ಪ್ರಳಯದ ಸಂದರ್ಭದಲ್ಲಿ ಈ ದೇವಾಲಯವು ನಾಶವಾಯಿತು. ನಂತರ ಈ ದೇವಾಲಯದ ಪುನರ್ ನಿರ್ಮಾಣವಾಯಿತು. ಈ ದೇವಾಲಯವು ಪೂರ್ವ ದಿಕ್ಕಿಗೆ ಮುಖ ಮಾಡಿದೆ ಹಾಗೂ ಹಲವಾರು ಶಿಲ್ಪಾಕೃತಿಗಳ ಬೀಡಾಗಿದೆ. ಕೋಟಿ ಲಿಂಗಗಳು ದೇವಲಯದ ಒಳಗಿರುವ ಸುಂದರವಾದ ಬಾವಿಯಲ್ಲಿ ಹಾಗೂ ಪೀಠದಲ್ಲಿ ಇವೆ. ಆರು ಚಕ್ರವಿರುವ ಈ ದೇವಸ್ಥಾನದ ರಥ ಇಡೀ ಜಿಲ್ಲೆಯಲ್ಲೇ ದೊಡ್ದದು. "ಕೊಡಿಹಬ್ಬ"ಕ್ಕೆ ಈ ದೇವಸ್ಥಾನ ಬಹಳ ಪ್ರಸಿದ್ಧ. ಕೊಡಿ ಹಬ್ಬವು ಸಾಮಾನ್ಯವಾಗಿ ನವ೦ಬರ್ ಅಥವಾ ದಿಸೆ೦ಬರ್ ತಿ೦ಗಳಲ್ಲಿ ಬರುತ್ತದೆ.
ಕುಂದಾಪುರದಿಂದ ಸುಮಾರು ೨೦ ಕಿಲೋಮೀಟರುಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ. ದೇವಳದ ಪಕ್ಕದಲ್ಲಿಯೇ ರುದ್ರರಮಣೀಯವಾಗಿ ಕುಬ್ಜಾ ನದಿ ಹರಿಯುತ್ತಿದ್ದು ಸಂಪ್ರದಾಯದಂತೆ ಪ್ರತೀ ವರ್ಷವೂ ದೇವಿಯ ವಿಗ್ರಹ ನದಿಯಿಂದ ತೋಯಲ್ಪಡುತ್ತದೆ. ದೇವಳದ ವಾಯುವ್ಯ ದಿಕ್ಕಿಗೆ ಎತ್ತರದ ಸ್ಥಳದಲ್ಲಿ ಸುಪಾರ್ಶ್ವ ಗುಹೆಯಿದೆ. ಇದು ನಾಗತೀರ್ಥದ ಮೂಲಸ್ಥಳವಾಗಿದೆ. ಗುಹೆಯಲ್ಲಿ ಕಾಳಿ, ಲಕ್ಷ್ಮೀ ಹಾಗೂ ಸರಸ್ವತಿಯ ಸಾನ್ನಿಧ್ಯವಿದೆ. ಗುಹೆಯ ಹೊರಗಡೆ ಹುಲಿಚಾವಡಿ ಎಂಬ ಸ್ಥಳವಿದೆ. ದೇವಿ ವ್ಯಾಘ್ರವಾಹಿನಿಯಾಗಿದ್ದು ಸಂಪ್ರದಾಯದ ಕಟ್ಟುಪಾಡುಗಳು ಮೀರಿ ಹೋದಲ್ಲಿ ಹುಲಿ ಬಂದು ಎಚ್ಚರಿಸುವ ಪರಿಪಾಠ ಇಂದಿಗೂ ಜಾರಿಯಲ್ಲಿದೆ. ವಾರ್ಷಿಕ ರಥೋತ್ಸವ ಸಂದರ್ಭಗಳಲ್ಲಿ ಹುಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ ಘರ್ಜಿಸುವುದರ ಮೂಲಕ ರಥೋತ್ಸವಕ್ಕೆ ಕರೆ ನೀಡುವ ಪರಿಪಾಠ ಇಂದಿಗೂ ಜೀವಂತವಾಗಿದೆ. ದೇವಳದಲ್ಲಿ ಪ್ರತೀ ಏಕಾದಶಿಯಂದು ದೇವಿಗೆ ಮೃತ್ತಿಕಾಷ್ಠಿ ಬಂಧವು ಜರುಗುತ್ತದೆ. ಇದಕ್ಕೆ ಬೇಕಾಗುವ ಮೃತ್ತಿಕೆ ಎದುರಿರುವ ಗುಡ್ಡದಿಂದ ತಂದು ಶಾಸ್ತ್ರೋಕ್ತವಾಗಿ ಹದ ಮಾಡಿ ಅಷ್ಟಬಂಧ ಮಾಡುತ್ತರೆ. ವಿಶೇಷವೆಂದರೆ ಅಷ್ಟಬಂಧವಾದ ಬಳಿಕ ಮೃತ್ತಿಕೆ ಎಷ್ಟು ನೀರು ಸುರಿದರೂ ಕರಗುವುದಿಲ್ಲ. ವಿಸರ್ಜಿಸಿದ ಮೃತ್ತಿಕೆಯನ್ನು ಭಕ್ತಾದಿಗಳು ಮೂಲಪ್ರಸಾದ ರೂಪದಲ್ಲಿ ಕೊಂಡೊಯ್ಯುತ್ತಾರೆ. ನವರಾತ್ರಿಯ ಸಂದರ್ಭ ಚಂಡಿಕಾಹವನ, ರಥೋತ್ಸವ, ಕುಂಕುಮಾರ್ಚನೆ, ಬೆಳ್ಳಿರಥ ಸೇವೆ, ಹಾಲಿನ ಪೂಜೆ ಮುಂತಾದ ಸೇವೆಗಳು ನಡೆಯುತ್ತವೆ.
೧೬೮೧ನೇ ಇಸವಿಯಲ್ಲಿ ಫಾದರ್ ಜೋಸೆಫ್ ವಾಸ್ರವರಿಂದ ಈ ಇಗರ್ಜಿಯು ಸ್ಥಾಪಿಸಲ್ಪಟ್ಟಿತು. ಉಡುಪಿ ಜಿಲ್ಲೆಯ ಪ್ರಮುಖ ಇಗರ್ಜಿಗಳಲ್ಲಿ ಇದೂ ಒಂದು.
ಹೆಸರೇ ಸೂಚಿಸುವಂತೆ ಈ ದ್ವೀಪವು ಕುಂದಾಪುರದಿಂದ ೬ ಕಿಲೋಮೀಟರ್ ಉತ್ತರಕ್ಕೆ ಇದೆ.
ಕುಂದಾಪುರದಿಂದ ೧೦ ಕಿಲೋಮೀಟರ್ ದೂರದಲ್ಲಿರುವ ಕೋಟಾದಲಿ ಅಮ್ರಥೇಶ್ವರಿ ದೇವಾಲಯ ಹಾಗೂ ಹೀರೇ ಮಹಾಲಿ೦ಗೇಶ್ವರ ದೇವಾಲಯಗಳಿವೆ.
ಕುಂದಾಪುರದಿಂದ ೧೫ ಕಿಲೋಮೀಟರ್ ದೂರದಲ್ಲಿರುವ ಸಾಲಿಗ್ರಾಮದಲ್ಲಿ ಉಗ್ರನರಸಿಂಹ ಹಾಗೂ ಆಂಜನೇಯ ದೇವಾಲಯಗಳಿವೆ. ಆಂಜನೇಯ ದೇವಲಯವು ಉಗ್ರನರಸಿಂಹ ದೇವಾಲಯಕ್ಕೆ ಮುಖ ಮಾಡಿ ನಿಂತಿದೆ. ಬಹಳ ಉಗ್ರನಾದ ಸರಸಿಂಹನ್ನು ಆಂಜನೇಯನು ಸಂತೈಸುತ್ತಾನೆ ಎಂದು ಪ್ರತೀತಿ. ಹಿಂದೆ ನರಸಿಂಹನ ಉಗ್ರ ಪ್ರತಾಪದಿಂದ ಆತನ ಎದುರಿನ ಪಾರಂಪಳ್ಳಿಯ ಹೊಲಗಳಲ್ಲಿ ಪೈರು ಸುಟ್ಟುಹೊಗುತ್ತಿತ್ತು. ಆಂಜನೆಯನ ಸ್ಥಾಪನೆಯ ನಂತರ ಅವನೆ ಆ ಉಗ್ರತೆಯನ್ನು ತೆಗೆದುಕೊಂಡು ಪೈರನ್ನು ಕಾಪಾಡುತ್ತಾನೆ. ಇದರಿಂದಾಗಿ ಆತನ ಮೈಮೇಲೆ ಬೊಬ್ಬೆಗಳಾಯಿತು. ಅದಕ್ಕಾಗಿ ಇಂದಿಗು ಆತನ ಮೈಮೇಲೆ ಚಂದ್ರವನ್ನು ಹಚ್ಚುತ್ತಾರೆ.
ಕುಂದಾಪುರದಿಂದ ೨೨ ಕಿಲೋಮೀಟರ್ ದೂರದಲ್ಲಿರುವ ಈ ಊರಿನಲ್ಲಿ, ಬಹಳ ಸುಂದರ ಪರಿಸರದ ನಡುವೆ ಕಿರಿಮಂಜೇಶ್ವರ ದೇವಾಲಯವಿದೆ. ಅಗಸ್ತ್ಯ ಮುನಿಗಳ ಹೆಸರಿನ, ಪುರಾತನ ಅಗಸ್ತ್ಯೇಶ್ವರ ದೇವಸ್ಥಾನವೂ ಇಲ್ಲಿದೆ.
ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನವು ಕುಂದಾಪುರದಿಂದ ೨೦ ಕಿಲೋಮೀಟರ್ ಗಳಷ್ಟು ದೂರದಲ್ಲಿದೆ. ಈಗ ಈ ದೇವಲಯದ ಜೀರ್ಣೋದ್ಧಾರವು ಭರದಿಂದ ಸಾಗಿದೆ.
ಕುಂದಾಪುರದಿಂದ ೪ ಕಿಲೋಮೀಟರ್ ದೂರದಲ್ಲಿರುವ ಕೋಡಿಯು ಅರಬ್ಬೀ ಸಮುದ್ರದ ತೀರದಲ್ಲಿದೆ. ಉಡುಪಿ ಜಿಲ್ಲೆಯ ನಯನ ಮನೋಹರ ಕಡಲತೀರಗಳಲ್ಲಿ ಇದೂ ಒಂದು. ಉಡುಪಿ ಜಿಲ್ಲೆಯಲ್ಲಿ ಕೋಡಿಯು ಸು೦ದರವಾದ ಪ್ರದೇಶವಾಗಿದೆ.
ಹಾಸನ
ಹಾಸನ ಭಾರತದ ಕರ್ನಾಟಕ ರಾಜ್ಯದ ನಗರ ಮತ್ತು ಅದೇ ಹೆಸರಿನ ಜಿಲ್ಲೆ, ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರದ (ಇಸ್ರೋ) ಪ್ರಧಾನ ನಿಯಂತ್ರಣ ಕೇಂದ್ರ ಹಾಸನದಲ್ಲಿದೆ.
ಕನ್ನಡದ ಮೊದಲ ಶಾಸನವು ಹಾಸನ ಜಿಲ್ಲೆಯ ಬೇಲೂರು ತಾಲ್ಲೋಕಿನ ಹಲ್ಮಿಡಿ ಎಂಬ ಗ್ರಾಮದಲ್ಲಿ ದೊರೆತಿದೆ. ಇದು ಹಲ್ಮಿಡಿ ಶಾಸನ ಎಂದು ಪ್ರಸಿದ್ದ. ಈ ಜಿಲ್ಲೆಯ ಶ್ರವಣಬೆಳಗೊಳವು ಕರ್ನಾಟಕದಲ್ಲೇ ಅತಿ ಹೆಚ್ಚು ಶಿಲಾಶಾಸನಗಳು ದೊರೆತಿರುವ ಸ್ಥಳ. ಅತಿ ಹಳೆಯ ಮರಾಠಿ ಶಾಸನ ಕೂಡ ಶ್ರವಣಬೆಳಗೊಳದಲ್ಲೇ ದೊರೆತಿದೆ.ಯೆಳೇಶಪೂರ ೩ ಶಿಲಾಶಾಸನಗಳು ದೊರೆತಿರುವ ಸ್ಥಳ.
ಹಾಸನ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ:
ಹಾಸನದಿಂದ ೨೯ಕಿ.ವೀ, ತಾಲೂಕು ಕೇಂದ್ರ ಹೊಳೆನರಸೀಪುರದಿಂದ ೬ಕೀ.ವೀ ಅಂತರದಲ್ಲೀರಿವಂತಹ ಯಳ್ಳೇಶಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ. ಒಂದು ದಿನ ಭೂಮಿತಾಯಿಯನ್ನು ನಂಬಿ, ತನ್ನ ಜಮೀನಿಗೆ ಎಳ್ಳು ತುಂಬಿದ ಕುಕ್ಕೆಯನ್ನು ಹೊಲದಲ್ಲಿಟ್ಟು ಎಳ್ಳು ಬಿತ್ತಿ ಬರುವುದರೊಳಗೆ ಭೂಮಿಗೆ ಅಂಟಿ ಕೊಂಡಿರುವುದನ್ನು ನೋಡಿದಾಗ ಆ ಸ್ಥಳದಲ್ಲೇ ಲಿಂಗ ಉದ್ಭವಗೊಂಡಿರುವುದನ್ನು ಕಂಡು ಶ್ರೀ ಎಳ್ಳುಲಿಂಗೇಶ್ವರ ಎಂದು ನಾಮಕರಣ ಮಾಡಿದರಂತೆ ಆಂದಿನಿಂದ ಆ ಸ್ಥಳ್ಳಕ್ಕೆ ಎಳ್ಳು+ಲಿಂಗ+ಈಶ್ವರ=ಎಳ್ಳುಲಿಂಗೇಶ್ವರ>ಎಳ್ಳೇಶ್ವರ>ಎಳ್ಳೇಸ್ಪುರ>ಎಳ್ಳೇಶಪುರ>ಯಳ್ಳೇಶಪುರ ಆಗಿದೆ ಎಂದು ಜನ ಹೇಳುತ್ತಾರೆ. ೧೨ನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಊರಿನ ನಡುವೆ ಇತ್ತು. ಸುಮಾರು ೩೦೦-೩೫೦ ವರ್ಷಗಳಿಗಿಂತಲೂ ಹಿಂದೆ ತಾಯಿ ಹೇಮಾವತಿ ನದಿಯ ನೀರು ಗ್ರಾಮದೊಳಗೆ ಹರಿದು ಬರುತ್ತಿದ್ದರಿಂದ ಈಗಿರುವಾಂತಹ ಸ್ಥಳಕ್ಕೆ ಸ್ಥಳಾಂತರಗೊಂಡಿತ್ತು. ಯಳ್ಳೇಶಪುರದ ಊರಾಚೆಗೆ ಹೇಮಾವತಿ ನದಿಯ ದಂಡೆಯಲ್ಲಿ ಸುತ್ತಲೂ ಹಸಿರುತುಂಬಿದ ಗದ್ದೆಗಳ ನಡುವೆ ಮನಸೆಳೆಯುವ ಎಳ್ಳುಲಿಂಗೇಶ್ವರ ದೇವಾಲಯ ೪ಕೂಟವಗಿದು ಮೋದಲನೆಯ ಕೂಟದಲ್ಲಿ ಒಂದೇ ಕಲ್ಲಿನ ಮೇಲೆ ಸಪ್ತಮಾತ್ರಕೆಯರು ೨ಗಣಪತಿ; ೧ಪದ ಒಂದು ಖಡ್ಗ ಸಹ ಇಲ್ಲಿ ಇದೆ. ೨ನೆಯ ಕೂಟದಲ್ಲಿ ಕುದರೆ ಮೇಲೆ ವೀರಭದ್ರೇಶ್ವರ; ರುದ್ರೇಶ್ವರ ೪ ಕಂಬಗಳ ನಡುವೆ ೨ ನಂದಿ ವಿಗ್ರಹಗಳನ್ನು ತುಂಬ ಸೂಕ್ಷ್ಮ ಕುಸುರಿಯಿಂದ ಕೆತ್ತಲಾಗಿದೆ. ೩ನೆಯ ಕೂಟದಲ್ಲಿ ಯಾವ ವಿಗ್ರಹ ಸಹ ಇಲ್ಲ ೪ನೆಯ ಕೂಟದಲ್ಲಿ ಎಳ್ಳುಲಿಂಗೇಶ್ವರ ದೇವರು ಲಿಂಗದ ರೂಪದಲ್ಲಿ ಇದೆ. ದೇವಾಲಯದ ಮುಂಭಾಗದಲ್ಲಿ ಒಂದು ಮಸ್ತಿಕಲ್ಲು,೨ನಗರ ಕಲ್ಲು ಮತ್ತು ಒಂದು ಗರುಡ ಕಂಬವಿದೆ. ಯಳ್ಳೇಶಪುರದಲ್ಲಿ ಒಟ್ಟು ೬ ಶಾಸನಗಳು ಗೋಚರಿಸುತ್ತವೆಂದು ಎಫಿಗ್ರಾಫಿಯ ಆಫ್ ಕರ್ನಾಟಕದ ಸಂಪುಟ ೮ ರಲ್ಲಿ ತಿಳಿದು ಬರುತ್ತದೇ. ಕ್ರಿ.ಶ.12 ರಿಂದ 15 ನೆಯ ಶತಮಾನದ ನಡುವವಿನ ಭಾಗದಲ್ಲಿ ಇವುಗಾಳ ಇತಿಹಾಸ ಕಂಡುಬರುತ್ತದೆ. ಶಾಸನ ಹೊನ 69 ರಲ್ಲಿ "ಓಂ ನಾಮ ಶಿವಾಯ:" ಹೊನ.70,71 ಈ ಎರಡು ಶಾಸನ ಹೊಯ್ಸಳರ ಸೋಮೆಶ್ವರನ ಶಾಸನವಾಗಿದೆ ಎರಡು ಶಾಸನಗಳ ದಿನಾಂಕ ಒಂದೇ ಕ್ರಿ.ಶ. 1238ರಜನವರಿ 27ಆಗಿದೆ. ಆ ದಿನ ಅರಸ ವಿಜಯರಾಜೇಂದ್ರ ಪಟ್ಟಣದ ನೆಲೆವೀಡಿನಿಂದ ಆಲುತ್ತಿದ್ದ ಆತ ಕಟ್ಟಿಸಿದಂತೆ ತೋರುತ್ತದೆ. ಈ ಎರಡು ಶಾಸನಗಳ ಕುರಿತು ರಂಗ ಪಟ್ಟಣ ಸ್ವಾಮ ಸೋಮಣ್ಣ ೨ನೇ ಯಳ್ಳೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿದ ವಿಷಯವನ್ನು ಸಾರುತ್ತದೆ ಈ ದೇವತೆಗೆ ಬಾದಾಮಿಯಲ್ಲಿ ಆಲಯ ಹಾಗೂ ಕೆರೆ ರೂಪುಗೊಂಡಿದೆ. ಊಳಿದ ಶಾಸನಗಳಲ್ಲಿ ಎಳ್ಳುಲಿಂಗೇಶ್ವರ ದೇವಾರಿಗೆ ಭೂದಾನ ಮತ್ತು ಹೊತೋಟದಾನ ಮಾಡಿರುವ ವಿವರಗಳನ್ನು ಸಾರುತ್ತದೆ. ಭಕ್ತರು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿ, ಭಗವಂತನಲ್ಲಿ ತಮ್ಮ ಕಷ್ಟ ನಿವಾರಣೆಗೆ ಮೊರೆಮಾಡಿ ಕೊಳ್ಳುತ್ತಾರೆ. ಪ್ರತಿ ಕಡೆ ಕಾತಿಕ ಅಮಾವಸ್ಯೆಯಂದು ಇಡಿ ರಾತ್ರಿ ಉತ್ಸವ ನಡೆಯುತ್ತದೆ.
ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು.
ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ.
ಇದನ್ನು ಹಿ೦ದೆ 'ವೇಲುಪುರ'ಎ೦ದು ಕರೆಯುತ್ತಿದ್ದರು.ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಶುರುವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ ಆನೆ ಬಾಗಿಲು ಎಂದು ಕರೆಯುತ್ತಾರೆ.
ಗೋಪುರದ ಮೊಲಕ ಒಳಗೆ ಬಂದ ಕೂಡಲೆ ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತಿದರೆ ಕಾಣುವ ಮುಖ್ಯ ದೇವಸ್ಥಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. ಪ್ರಮುಖ ದೇವಸ್ಥಾನವಾದ ಚೆನ್ನಕೇಶವ ದೇವಸ್ಥಾನದ ವಿವರಣೆಯನ್ನು ಮುಂದಿನ ಭಾಗದಲ್ಲಿ ನೀಡಲಾಗಿದೆ. ಇಲ್ಲಿ ದೇವಸ್ಥಾನದ ಮಿಕ್ಕ ಆವರಣವನ್ನು ವಿವರಿಸಲಾಗಿದೆ.
ಈ ಗುಡಿಯು ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ/ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಅಮರಶಿಲ್ಪಿ ಜಕ್ಕಣಾಚಾರ್ಯರ ದಂತಕಥೆಯ ಮೂಲದಿಂದ ನಮಗೆ ಇದರ ಹಿನ್ನಲೆ ತಿಳಿದುಬರುತ್ತದೆ. ಹಿಂದೆ ಜಕ್ಕಣಾಚಾರ್ಯರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ.
ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ. ಚತುರ್ಭುಜಾಧಾರಿಯಾದಿ ಸೌಮ್ಯನಾಯಕಿ ಅಮ್ಮನವರು ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.
ಸೌಮ್ಯನಾಯಕಿ ಅಮ್ಮನವರ ದೇವಾಲಯದ ನಂತರ ಸಿಗುವುದೇ ಕಲ್ಯಾಣ ಮಂಟಪ. ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತೆ. ಇದರ ಜೊತೆಗೆ ಜಾತ್ರೆಯ ಸಮಯದಲ್ಲಿ ಹೋಮಯಾಗಾದಿಗಳು ನಡೆಯುತ್ತವೆ.
ಇದು ಕಲ್ಯಾಣ ಮಂಟಪದ ಒಳಭಾಗದಲ್ಲಿದೆ. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ
ವೀರನಾರಾಯಣ ದೇವಸ್ಥಾನದ ನಂತರ ಸಿಗುವುದು ಈ ದೇವಸ್ಥಾನ. ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಹೇಳಲಾಗುತ್ತದೆ.
ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಆಕರ್ಷಣೆಗಳಿವೆ. ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ,ಪುಷ್ಕರಣಿ ಇತ್ಯಾದಿಗಳ ವ್ಯವಸ್ಥೆ ಇದೆ. ಇವುಗಳನ್ನು ಈ ಕೆಳಗೆ ವಿವರಿಸಲಾಗಿದೆ.
ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರ್ಉ ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು. ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ ೪ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ - ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ. ಈ ಕಾರಣಾಂತರಗಳಿಂದ ಇದನ್ನು ಗುರುತ್ವಾಕೇಂದ್ರ ಕಂಬ(ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು.
ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ.
ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು ೪ ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂದು ಸ್ಥಳೀಯರಿಂದ ತಿಳಿಯುತ್ತದೆ.
ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿವಿಸವೂ ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.
ಯಾಗಶಾಲೆಯ
ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು
ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ
ಬಲಭಾಗದಲ್ಲಿರುವುದನ್ನು ಕಾಣಬಹುದು.
ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ
ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭
ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ,
ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ
ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ
ಊರಿನಲ್ಲಿ ಉತ್ಸವ ಮಾಡುತ್ತಾರೆ.
ಗೋಪುರದ ಬಲಭಾಗದಲ್ಲಿರುವ ಪುಷ್ಕರಣಿ/ಕಲ್ಯಾಣಿಗೆ ಗಜಾಗುಂಡ ಎಂದು ಹೆಸರು. ಇದನ್ನು ವಾಸುದೇವತೀರ್ಥ ಎಂದೂ ಕರೆಯುತ್ತಾರೆ. ಈ ಕಲ್ಯಾಣಿಯಲ್ಲಿ ಅನೇಕರೀತಿಯ ಮೀನುಗಳನ್ನು ಬಿಟ್ಟಿರುತ್ತಾರೆ. ಈ ಕಲ್ಯಾಣಿಯ ಬಾಗಿಲನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ನೀರಿನ ಹತ್ತಿರ ಹೋಗುವ ಪ್ರವೇಶವಿರುವುದಿಲ್ಲ.
ಹಿರೇಕಡಲೂರು
ಹಿರೇಕಡಲೂರು ಹಾಸನ ಜಿಲ್ಲೆಯ ದುದ್ದ ಹೋಬಳಿಯ ಒಂದು ಗ್ರಾಮ. ಹಿರೇಕಡಲೂರು ಗ್ರಾಮದ ಹಿಂದಿನ ಹೆಸರು ಅರುಂಧತಿಪುರ ಎಂದು. ಹೊಯ್ಸಳರ ಸಹಜ ವಾಸ್ತು ಶಿಲ್ಪದಂತೆ ನಕ್ಷತ್ರಾಕಾರದಲ್ಲಿ ದೇವಾಲಯ ಇದೆ. ದೇವಾಲಯಕ್ಕೆ ಸಂಬಂಧಿಸಿದ ಒಟ್ಟು ೪ ಶಾಸನಗಳು ಲಭ್ಯವಿದೆ. ಶಾಸನಗಳ ಪ್ರಕಾರ ಕ್ರಿ.ಶ.೧೨ನೆಯ ಶತಮಾನದ ಹೊಯ್ಸಳರ ದೊರೆ ೨ನೆಯ ವೀರ ಸಿಂಹನ ಕಾಲದಲ್ಲಿ ಈ ದೇವಾಲಯ ಕಟ್ಟಲಾಗಿದೆ. ಇಲ್ಲಿಯ ಒಳ ಕೆತ್ತನೆಗಳು ಹಾಗು ಅದ್ಬುತ ಚನ್ನಕೇಶವನ ವಿಗ್ರಹ ಭಗ್ನವಾಗಿದೆ ಹಾಗು ದೇವಾಲಯ ಕಾಡಿನಿಂದ ಅವೃತವಾಗಿದೆ. ಚನ್ನಕೇಶವ ದೇವಾಲಯದ ಮೂಲ ಇಲ್ಲಿರುವ ವಿಗ್ರಹವಾದ ಚನ್ನಕೇಶವ ವಿಗ್ರಹ 6 ಅಡಿ ಎತ್ತರ ಹಾಗು 2 ಅಡಿ ಪಾಣಿ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇದು ಸೂಕ್ಷ್ಮ ಕೆತ್ತನೆಯಿಂದ ಎಲ್ಲಾರ ಕಣ್ಣನ್ನು ಸೆಳೆಯುತ್ತದೆ ಇಲ್ಲಿ ರಂಗನಾಥ ಸ್ವಾಮಿಯ ವಿಗ್ರವು ಇತ್ತೆಂಬ ಉಲ್ಲೇಖವಿದ್ದು ಅದು ಈಗ ಕಾಣಸಿಗುದಿಲ್ಲ.
ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ.
ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.
ಸಾಮಾನ್ಯ ಶಕವರ್ಷ ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿ ಹಾಳುಗೆಡವಿದರು (೨). ಸಾಮ್ರಾಜ್ಯದಲ್ಲಿ ಅರಾಜಕತೆ ಮೂಡಿತು. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ಪುನರ್ಘಟಿಸಿದ. ಸಾ.ಶ ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನನ್ನು ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ (೧). ಅಲ್ಲಿಗೆ ಬಾದಾಮಿಯು ಚರಿತ್ರೆಯ ಮುಖಪುಟದಿಂದ ಮರೆಯಾಯಿತು. ಮುಂದೆ ಚಾಲುಕ್ಯ ವಂಶದವರು ಮತ್ತೆ ರಾಜ್ಯಕ್ಕೆ ಬಂದಾಗ ಕಲ್ಯಾಣ ರಾಜಧಾನಿಯಾಯಿತು.
ಇಡಿಯ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ.
ಬಾದಾಮಿಗೆ ಬೆಂಗಳೂರು, ಬಾಗಲಕೋಟೆ, ಬಿಜಾಪುರ, ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದೆಡೆಗಳಿಂದ ಬಸ್ ಸಂಪರ್ಕವಿದೆ. ಗದಗ-ಸೊಲ್ಲಾಪುರ ರೈಲು ಮಾರ್ಗವು ಬಾದಾಮಿಯನ್ನು ಹಾಯ್ದು ಹೋಗುತ್ತದೆ. ವಸತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (KSTDC) ನಡೆಸುವ ಹೊಟೆಲ್ ಅನುಕೂಲವಾಗಿದೆ.
ಐಹೊಳೆ | |
ಐಹೊಳೆಯ ದುರ್ಗಾ ದೇವಾಲಯ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟೆ |
ನಿರ್ದೇಶಾಂಕಗಳು | 16.019167° N 75.881944° E |
ವಿಸ್ತಾರ | {{{area_total}}} km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- {{{population_density}}}/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 587138 - +08351 - |
ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ.
ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ* | |
---|---|
UNESCO ವಿಶ್ವ ಪರಂಪರೆಯ ತಾಣ | |
|
|
ರಾಷ್ಟ್ರ | ![]() |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | iii, iv |
ಆಕರ | 239 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1987 (11ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ೦ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ೦ಶದ ಅರಸರು ಏಳನೇ ಮತ್ತು ಎ೦ಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒ೦ದು ಜೈನ ಬಸದಿ ಇವೆ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ಆ ಕಾಲದ ಚಾಲುಕ್ಯ ರಾಜನ ದ೦ಡಯಾತ್ರೆಯ ನ೦ತರ ಕಟ್ಟಿಸಲಾಯಿತು. ಇಲ್ಲಿರುವ ಇತರ ಮುಖ್ಯ ದೇವಾಲಯಗಳೆ೦ದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.
ಇಲ್ಲಿರುವ ಸ್ಮಾರಕಗಳ ಗು೦ಪನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎ೦ದು ಘೋಷಿಸಿದೆ.
ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಶಿರಸಿ ತಾಲೂಕಿನಲ್ಲಿದೆ. ಬನವಾಸಿಯ ಅಕ್ಷಾಂಶ : ೧೪೦ ೩೨’ ೧೦’’ (ಉ) ಹಾಗು ರೇಖಾಂಶ : ೭೫೦ ೦೦’ ೫೮”(ಪಶ್ಚಿಮ) . ಸಮುದ್ರ ಮಟ್ಟದಿಂದ ಎತ್ತರ : ೫೭೦.೮೯ ಮೀಟರುಗಳು. ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ೩೦ ಕಿ.ಮಿ.ಅಂತರದಲ್ಲಿದೆ.
ಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣುವು ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು.
ಧರ್ಮರಾಜನ ಅಶ್ವಮೇಧಯಾಗದ ಸಂದರ್ಭದಲ್ಲಿ ಸಹದೇವನು ದಕ್ಷಿಣ ಭಾರತದ ದಿಗ್ವಿಜಯ ಸಮಯದಲ್ಲಿ ವನವಾಸಿಕಾ ಎಂದರೆ ಬನವಾಸಿ ನಗರವನ್ನು ಗೆದ್ದನೆಂದು ಮಹಾಭಾರತದಲ್ಲಿ ಉಲ್ಲೇಖವಿದೆ.
ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ.
ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ.
ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.
ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ.
ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ.
ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ.
ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ಯ ವರ್ಷದ ಸುಮಾರಿಗೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ. ಪಂಪ ವರ್ಣಿಸಿದ ಬನವಾಸಿಯ ನಿಸರ್ಗಸಿರಿ ತಕ್ಕಮಟ್ಟಿಗೆ ಉಳಿದುಕೊಂಡಿದೆ.
ಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.
ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಶಿರಸಿ ವಿಭಾಗ, ಲೋಕೋಪಯೋಗಿ ಇಲಾಖೆ, ಶಿರಸಿ ಇವರ ಮುಖಾಂತರ ವಸತಿಗೆ ರಿಜರ್ವೇಶನ್ ಪಡೆಯಬಹುದು.
ಹಂಪೆಯ ಸ್ಮಾರಕಗಳ ಸಮೂಹ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ![]() |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | (i)(iii)(iv) |
ಆಕರ | 241 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1986 (10 ಮತ್ತು 15ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ವಿಜಯನಗರ ಸಾಮ್ರಾಜ್ಯದ ಅತೀ ಯೆಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೊಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.
ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.
ಕನ್ನಡ ವಿಶ್ವವಿದ್ಯಾಲಯ ಇರುವುದು ಹಂಪಿಯಲ್ಲಿ.
ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಕೈಗಾರಿಕೆಗಳು. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು(ಹಂಪಿ ಉತ್ಸವ) ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.
ಹಂಪೆ ಗ್ರಾಮದಿಂದ ಪೂರ್ವಕ್ಕೆ ಮಾತಂಗ ಪರ್ವತದ ವರೆಗೆ ಹಬ್ಬಿರುವ ಪ್ರದೇಶಕ್ಕೆ ಈ ಹೆಸರು. ಕೆಲವರ ಅಭಿಪ್ರಾಯದಂತೆ ವಿಠ್ಠಲ ದೇವಸ್ಥಾನದ ಪ್ರದೇಶವೂ ಇದಕ್ಕೆ ಸೇರುತ್ತದೆ.
ಈ ದೇವಸ್ಥಾನ ಇಂದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪಂಪಾ ಎಂಬ ಸ್ಥಳೀಯ ದೇವತೆಯ ದೇವಾಲಯ ಇದು.
ಇದು ಹಂಪೆಯ ದಕ್ಷಿಣದಲ್ಲಿ ಈಗ ಪಾಳು ಬಿದ್ದಿರುವ ದೇವಸ್ಥಾನ. ಒರಿಸ್ಸಾದಲ್ಲಿ ದಂಡಯಾತ್ರೆಯ ನಂತರ ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ. ಇದರ ಕೆಲವು ಭಾಗಗಳು ಮತ್ತು ಆವರಣ ಈಗ ಕುಸಿದಿವೆ.
ಹಂಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿಂಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ ಪುನಶ್ಚೇತನಗೊಳಿಸಲಾಗಿದೆ; ಮೂರ್ತಿಯ ಮಂಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿಂದ ಅಥವಾ ಅದೇ ಕಾಲದ ಓರ್ವ ಶ್ರೀಮಂತ ವರ್ತಕರಿಂದ ಸಂದ ಧನಸಹಾಯದಿಂದ ಆದದ್ದೆಂದು ನಂಬಲಾಗಿದೆ.
ಕಟ್ಟಿದಾಗ ಮೂರ್ತಿಯ ಮಂಡಿಯ ಮೇಲೆ ಒಂದು ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು; ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇದೆ.
ಇದು ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮಂತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎಂಬ ನಂಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.
ಹಂಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇಂದ್ರದ ನಡುವೆ ತುಂಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆಂಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ. ಇಲ್ಲಿರುವ ಶ್ರೀರಾಮನ ವಿಗ್ರಹ ಸುಮಾರು ೧೮ ಅಡಿ ಎತ್ತರವಿದೆ,ಜೊತೆಗೆ ಸೀತ,ಲಕ್ಶ್ಮಣ ಮತ್ತು ಹನುಮಂತನ ವಿಹಗ್ರಹಗಳಿವೆ.
ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂಡಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆಂದು ನಂಬಲಾಗಿದೆ.
ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ. ಇದೇ ಒಂದು ಪುಟ್ಟ ದೇವಸ್ಥಾನವೂ ಹೌದು, ಒಂದೇ ಕಲ್ಲಿನಲ್ಲಿ ಕಡೆಯಲಾಗಿದೆ, ಮತ್ತು ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ.
ಈ ವಿಶಾಲ ಪ್ರದೇಶ ಹಂಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರಂಭವಾಗಿ ಸುಮಾರು ಕಮಲಾಪುರಮ್ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ ಹೆಚ್ಚು ಅವಶೇಷಗಳು ಉಳಿದಿಲ್ಲ - ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿಂದ ಕಟ್ಟಲ್ಪಟ್ಟಿದ್ದರಿಂದ. ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಉಳಿದಿವೆ, ಸುತ್ತಲ ಕೋಟೆ ಗೋಡೆಗಳೊಂದಿಗೆ.
ರಾಮನ ಅನೇಕ ಪ್ರತಿಮೆಗಳು ಕಂಡುಬರುವುದರಿಂದ ಇದಕ್ಕೆ ಹಜಾರರಾಮ ದೇವಸ್ಥಾನ ಎಂದೂ ಹೆಸರು (ಸಾವಿರ ರಾಮರ ದೇವಸ್ಥಾನ).ಇದು ಹಂಪೆಯ ದಕ್ಷಿಣಪೂರ್ವದಲ್ಲಿ ರಾಜಕೇಂದ್ರದಲ್ಲಿ ಇದೆ.
ಇದಕ್ಕೆ ಸಹ ವಿರೂಪಾಕ್ಷ ದೇವಾಲಯ ಎಂದು ಹೆಸರು. ಈ ವಿಶಾಲ ದೇಗುಲ ಉತ್ಖನನ ನಡೆಸಿದ ಪ್ರದೇಶದಲ್ಲಿ ನಿಂತಿದೆ, ಮಣ್ಣಿನ ಗೋಡೆಗಳಿಂದ ಸುತ್ತುವರಿದು.
ಇದು ಮಹಾರಾಣಿಯವರ ಅರಮನೆಯಾಗಿತ್ತು. ಇದರಲ್ಲಿ ಹರಿಯುವ ನೀರಿನ ಸೌಕರ್ಯವನ್ನೊಳಗೊಂಡಂತೆ ಅನೇಕ ವಿಶೇಷ ಪರಿಸರ ನಿಯಂತ್ರಣ ಉಪಕರಣಗಳಿವೆ.
ಇದು ಒಂದು ಮೆಟ್ಟಲುಗಳುಳ್ಳ ವಿಶಾಲವಾದ ಬಾವಿ, ಸ್ನಾನ ಮಾಡುವುದಕ್ಕೆ ರಚಿಸಲಾದದ್ದು. ಹಗಲಿನ ಬಿಸಿಲಿನ ಬೇಗೆಯಿಂದ ಇ ರೀತಿಯ ಬಾವಿಗಳು ಆರಾಮವನ್ನು ತರುತ್ತಿದ್ದವು. ನಗರದಲ್ಲಿ ಜನವಸತಿಯಿದ್ದಾಗ ಪ್ರಾಯಶಃ ಈ ಬಾವಿ ಶಾಮಿಯಾನಗಳಿಂದ ಆವೃತವಾಗಿರುತ್ತಿತ್ತು. ಇದನ್ನು ನಕ್ಶತ್ರ ಬಾವಿ ಎಂದೂ ಕರೆಯತ್ತಾರೆ
ವಿಶಾಲವಾದ ಆನೆಲಾಯಗಳ ಗುಂಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು.ಇದನ್ನು ಆನೆ ಸಾಲು ಎಂದೂ ಕರೆಯುತ್ತಾರೆ
ಹೊಸಪೇಟೆ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಳ್ಳಾರಿ |
ನಿರ್ದೇಶಾಂಕಗಳು | 15.2667° N 76.4° E |
ವಿಸ್ತಾರ - ಎತ್ತರ |
50.92 km² - 479 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೧೬೪೨೪೦ - ೩೨೨೫.೪೫/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 583 201 - +08394 - KA-35 |
ಕನಕಗಿರಿ ಜೈನ ಕ್ಷೇತ್ರವು ಚಾಮರಾಜನಗರ ಜಿಲ್ಲೆಯಲ್ಲಿದೆ. ಇಲ್ಲಿ ಅತಿ ಪ್ರಾಚೀನವಾದ ವಿಜಯ ಪಾರ್ಶ್ವನಾಥ ತೀರ್ಥಂಕರರ ಜಿನಾಲಯವಿದೆ. ಜೊತೆಗೆ ಶ್ರೀ ಪದ್ಮಾವತಿ ದೇವಿ ಹಾಗೂ ಕೂಷ್ಮಾಂಡಿನೀ ದೇವಿಯವರ ವಿಗ್ರಹವನ್ನು ಎದುರು ಬದುರು ಪ್ರತಿಷ್ಠಾಪಿಸಿರುವುದು ಇಲ್ಲಿನ ವೈಶಿಷ್ಠ್ಯ. ಕಾಳಸರ್ಪದೋಷ ಹೊಂದಿರುವವರು ಇಲ್ಲಿ ಪೂಜೆ ಮಾಡಿಸುವುದರಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಜಿನಾಲಯದ ದರ್ಶನಕ್ಕೆ ಬೆಟ್ಟವನ್ನು ಹತ್ತಿ ಹೋಗಬೇಕಾಗುತ್ತದೆ. ಬೆಟ್ಟದಲ್ಲಿಯೇ ೨೪ ತೀರ್ಥಂಕರರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಜೈನಮಠವೂ ಸಹ ಇದ್ದು, ಈಗಿನ ಪೀಠಾಧಿಪತಿಗಳು ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು. ಇವರು ವಿದ್ವತ್‌ಪೂರ್ಣರಾಗಿದ್ದು, ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನೂ,ಅನಾಥಾಲಯವನ್ನು ನಡೆಸುತ್ತಿದ್ದಾರೆ. ಜೈನಮಠದಲ್ಲಿ ತಂಗಲು ವಸತಿಯ ವ್ಯವಸ್ಥೆಯೂ ಸಹ ಇದೆ.
ಕನಕಗಿರಿಯನ್ನು ಜಿಲ್ಲಾ ಕೇಂದ್ರವಾದ ಚಾಮರಾಜನಗರದಿಂದ ಹಾಗೂ ಮೈಸೂರಿನಿಂದಲೂ ತಲುಪಬಹುದು. ಹರವೆ-ಮಲೆಯೂರು ಎನ್ನುವುದು ಕನಕಗಿರಿ ಕ್ಷೇತ್ರದ ಊರಿನ ಹೆಸರು. ಹಿಂದೆ ಯಾವುದೇ ವ್ಯವಸ್ಥೆಯಿಲ್ಲದೇ ಶಿಥಿಲಾವಸ್ಥೆಯಲ್ಲಿದ್ದ ಕ್ಷೇತ್ರವು, ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪೀಠಾಧಿಪತಿಗಳಾದನಂತರ ಯಶಸ್ಸನ್ನು ಕಾಣುತ್ತಿದೆ.
ತಾವರಗೇರಾ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿರುವ ಊರು. ಇಲ್ಲಿ ಪುರಾತನ ಕಾಲದ ಸೋಮೇಶ್ವರ ದೇವಸ್ತಾನವಿದೆ.
ಕುಷ್ಟಗಿ ತಾಲೂಕಿನಲ್ಲಿ ತಾವರಗೇರಾದಿಂದ 5 ಮೈಲಿ ದೂರದಲ್ಲಿರುವ ಊರು ಪುರ. ಇಲ್ಲಿ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಕೋಟಿ ಲಿಂಗಗಳಿದ್ದು, ಶ್ರಾವಣ ಮಾಸದಲ್ಲಿ ಜಾತ್ರೆ ನೆಡೆಯುತ್ತದೆ.
ಬಿಜಾಪುರ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಿಜಾಪುರ |
ನಿರ್ದೇಶಾಂಕಗಳು | 16.82° N 75.72° E |
ವಿಸ್ತಾರ - ಎತ್ತರ |
10541 km² - 770 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
1808863 - 172/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 586101-105 - +08352 - KA-28 |
ಕಿ. ಶ. ೧೫೧೮ ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಾಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕಿ. ಶ. ೧೬೮೬ ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕಿ. ಶ. ೧೭೨೪ರಲ್ಲಿ ವಿಜಾಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ವಳಪಟ್ಟಿತು. ಕಿ. ಶ. ೧೭೬೦ ರಲ್ಲಿ ಮರಾಠರಿಂದ ನಿಜಾಮರು ಸೊಲಲ್ಪಟ್ಟಾಗ ವಿಜಾಪುರ ನಿಜಾಮರಿಂದ ಮರಾಠ ಪೆಶಾವರ ಅಳ್ವಿಕೆಗೆವಳಪಟ್ಟಿತ್ತು. ನಂತರ ಕಿ. ಶ. ೧೮೧೮ ರ ೩ ನೆ ಆಂಗ್ಲ್-ಮರಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೊಲಲ್ಪಟ್ಟಾಗ ವಿಜಾಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆವಳಪಟ್ಟಿತ್ತು. ನಂತರ ವಿಜಾಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕಿ. ಶ. ೧೮೪೮ ರಲ್ಲಿ ಸಾತಾರಾ ಮತ್ತು ವಿಜಾಪುರನ್ನು ಮುಂಬಾಯಿ ಪ್ರಾಂತ್ಯಕ್ಕೆ ಸೆರಿಸಲಾಯಿತು. ಬ್ರಿಟಿಷರಿಂದ ನಿರೂಪಿಸ್ಲ್ಪಟ್ಟ ಕಲದಗಿ ಜಿಲ್ಲೆಗೆ ಈಗಿನ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೆರಿಸ್ಲ್ಪಟ್ಟವು. ಕಿ. ಶ. ೧೮೮೫ ರಲ್ಲಿ ವಿಜಾಪುರನ್ನು ಜಿಲ್ಲಾಡಳಿತ ಪ್ರದೆಶವಾಗಿ ಮಾಡಲಾಯಿತು ಮತ್ತು ವಿಜಾಪುರನ್ನು ಆಗಿನ ಮುಂಬಯಿ (ಬಾಂಬೆ) ರಾಜ್ಯಕ್ಕೆ ಸೆರಿಸಲಾಯಿತು. ತದನಂತರ ಕಿ.ಶ. ೧೯೫೬ ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೆರಿಸಲಾಯಿತು.
ವಿಜಾಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಾಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ.
ಇದು ಬಿಜಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕೃಷಿ ಈ ತಾಲೂಕಿನ ಪ್ರಮುಖ ಉದ್ಯೋಗ.ಉತ್ತರದಲ್ಲಿ ಭೀಮಾ ನದಿ ಮತ್ತು ದಕ್ಷಿಣದಲ್ಲಿ ಕೃಷ್ಣಾ ನದಿಗಳು ಹರಿಯುತ್ತದೆ. ಇಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಯೋಜನೆ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದು.
ಈ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳೂ ಇವೆ. 'ದೇವರನಾವದಗಿ' ಸಿಂದಗಿ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ದೇವರನಾವದಗಿ ಗ್ರಾಮ ಕೂಡ ಒಂದು. ಇದು ಭೀಮಾನದಿಯಿಂದ ೩ ಕಿ.ಮೀ.ದೂರದಲ್ಲಿದೆ. ಈ ಗ್ರಾಮದ ಮುಖ್ಯ ಆಕರ್ಷಣೆ ಮಲ್ಲಿಕಾರ್ಜುನ ದೇವಾಲಯ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪಡಖೇ ಈ ದೇವಾಲಯದಲ್ಲೇ ಶೆರೆ ಸಿಕ್ಕರು.
ಗದಗ | |
ವೀರನಾರಾಯಣ ದೇವಸ್ಥಾನ , ಗದಗ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಗದಗ |
ನಿರ್ದೇಶಾಂಕಗಳು | 15.4167° N 75.6167° E |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೧೫೪೮೪೯ - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೨ ೧೦೧/೧೦೨/೧೦೩ - +೯೧ (೦) ೮೩೭೨ - ಕೆಎ-೨೬ |
|
ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ.
ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.
ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಪ್ರಸಿದ್ದ. ಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು. ಅಷ್ಟೊಂದು ಮುದ್ರಣಾಲಯಗಳು ಗದಗನಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ "ಕೃತಪುರ" ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
ಗದಗ ಮತ್ತು ಬೆಟಗೇರಿ ಅವಳಿ ನಗರಗಳು.
ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ.
ವೀರನಾರಾಯಣ ದೇವಸ್ಥಾನ ಗದಗನಲ್ಲಿದೆ. ಚತುರಶಿಲ್ಪಿ ಜಕಣಾಚಾರಿ ಕೆತ್ತಿದನೆಂದು ಹೇಳಲಾಗುವ ಈ ದೇವಸ್ಥಾನದ ಗೋಪುರ ನೋಡುಗರ ಕಣ್ಮನ ಸೆಳೆಯುತ್ತದೆ. ಗದುಗಿನ ಮಹಾಭಾರತ ಅಥವಾ ಕರ್ಣಾಟ ಭಾರತ ಕಥಾಮಂಜರಿ ರಚಿಸಿದ ಕುಮಾರವ್ಯಾಸ ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ರಚಿಸಿದನೆಂದು ಹೇಳಲಾಗುತ್ತದೆ. ಆತ ದೇವಸ್ಥಾನದ ಯಾವ ಕಂಬದ ಕೆಳಗೆ ಕುಳಿತು ಪ್ರತಿದಿನ ಮಹಾಭಾರತ ಬರೆಯುತ್ತಿದ್ದನೋ ಇವತ್ತಿಗೂ ಅದು ಕುಮಾರವ್ಯಾಸ ಕಂಬವೆಂದೇ ಪ್ರಸಿದ್ದಿಯಾಗಿದೆ.
ಇಲಾಖೆಯವರು ಬಹಳ ಸಿಥಿಲಗೊಂಡ ಆ ಪುರಾತನ ಕಟ್ಟಡಗಳ ಜೀರ್ಣೋದ್ಧಾರಕ್ಕೆ ೧೯೯೨ರಲ್ಲಿ ಐದಾರು ಲಕ್ಷ ರೂಪಾಯಿ ವ್ಯಯಿಸಿದ್ದರೂ ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ. ಈ ಹಂತದಲ್ಲಿ ನಾಗೇಶ್ವರ ದೇವಸ್ಥಾನ (ಜೋಡು ಕಳಸದ ಗುಡಿ), ಈಶ್ವರ, ನಂದಿಮಂಟಪ, ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿಯ ದೇವಾಲಯ ಮತ್ತು ಎಂಬತ್ತು ಅಡಿ ಸುತ್ತಳತೆಯ ಐವತ್ತು ಅಡಿ ಆಳದ ಬೃಹತ್ ನಾಗಕುoಡ ಭಾವಿ (ರಸ್ತ ಭಾವಿ) ಜೀರ್ಣೋದ್ಧಾರಗೊಂಡು ನೋಡುವಂತಾಗಿವೆ. ಜೋಡು ಕಳಸದ ದೇವಸ್ಥಾನವನ್ನು ಬಿಚ್ಚಿ ಪುನರ್ ಜೋಡಿಸಲಾಗಿದೆ.
ಈ ಗುಡಿಯು ಮೊದಲು ಗಿಡಮರ, ಮುಳ್ಳುಕಂಟಿಗಳಲ್ಲಿ ಮುಚ್ಚಿ ಹೋಗಿತ್ತು. ಈಗ ಗುಡಿಯ ಹತ್ತಿರ ಶ್ರೀ ಗುರು ಮಹಾಂತೇಶ ಪ್ರೌಢಶಾಲೆಯ ಕ್ರೀಡಾಂಗಣ ಮತ್ತು ಕಟ್ಟಡಗಳ ವಿದ್ಯಾಕೇಂದ್ರವು ರಾಜ್ಯ ಹೆದ್ದಾರಿಯಲ್ಲಿಯೇ ಇರುವದರಿಂದ ಗುಡಿಯು ಕಾಣುವಂತಾಗಿದೆ. ಈ ದೇವಾಲಯವು ಎರಡು ಗೋಪುರಗಳನ್ನು ಹೊಂದಿದ್ದು ಅವು ಪೂರ್ವ ಮತ್ತು ಪಶ್ಚಿಮ ಮುಖವಾಗಿವೆ. ಗುಡಿಯು ಏಕ ನವರಂಗ, ಮುಖ ಮಂಟಪ, ಎರಡು ಗರ್ಭಗೃಹ ಒಳಗೊಂಡು ದ್ವಿಕೂಟಾಚಲ ಮಾದರಿಯಲ್ಲಿದೆ. ಪೂರ್ವಾಭಿಮುಖಿ ಗರ್ಭಗುಡಿಯಲ್ಲಿ ಅಪೂರ್ವ ಕೆತ್ತನೆಯ ಈಶ್ವರನ ಉಬ್ಬು ಶಿಲ್ಪವಿದೆ. ಸೂರ್ಯನ ಉಬ್ಬು ವಿಗ್ರಹ ಲಲಾಟಬಿಂದುವಿನಲ್ಲಿ ಇದ್ದು ಇದು ಇಲ್ಲಿಯ ಇನ್ನೊಂದು ವೈಶಿಷ್ಟ್ಯವಾಗಿದೆ. ಹನ್ನೆರಡು ಕಂಬಗಳನ್ನು ಹೊಂದಿ ವೃತ್ತಾಕಾರವಾಗಿರುವ ನವರಂಗದಲ್ಲಿ ಸುಂದರ ನಂದಿಯ ವಿಗ್ರಹವಿದೆ. ಇಡೀ ದೇವಾಲಯದ ಒಳಗೆ ಮತ್ತು ಹೊರಗೆ ಮತ್ತು ನಾಗಕುಂಡ ಭಾವಿಯ ಒಳಗೋಡೆಯಲ್ಲಿ ಉಬ್ಬುಕಂಬದ ಗೋಪುರ ಮಾದರಿಯ ಕೆತ್ತನೆ ಸಹ ಬೆರಗುಗೊಳಿಸುವಂತೆ ಇದೆ. ಭಾವಿಯ ತಳಭಾಗದಲ್ಲಿ ಸುತ್ತಲೂ ಮೆಟ್ಟಲುಗಳಿದ್ದು ನಡುವೆ ದ್ವಾರಮಂಟಪವಿದೆ. ಈ ಎಲ್ಲ ಶಿಲ್ಪ ಕಲಾವೈಭವ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇವೆ. ಈ ಪುಷ್ಕರಣಿ ಕಲ್ಯಾಣ ಚಾಲುಕ್ಯರ ಅತಿ ವೈಭವದ ಕೊಳ ಎಂಬುದಕ್ಕೆ ಐತಿಹಾಸಿಕ ದಾಖಲೆ ಇದೆ.
ಶಿಲಾಮಂಟಪದಲ್ಲಿ ಇರುವ, ಸೂಕ್ಷ್ಮ ಕೆತ್ತನೆಯ ಗೆಜ್ಜೆ ಸರಗಳಿಂದ ಅಲಂಕರಿಸಿದ ಬೃಹದಾಕಾರದ ನಂದಿಯ ವಿಗ್ರಹ ಮತ್ತು ವೇದಿಕೆ, ಗುಡಿಯಲ್ಲಿರುವ ನಂದಿ ವಿಗ್ರಹಗಳನ್ನು ನುಣುಪಾದ ಕಪ್ಪು ಏಕಶಿಲಾ ಬಂಡೆಗಳಲ್ಲಿಯೇ ನಿರ್ಮಿಸಲಾಗಿದೆ. ಎಲ್ಲ ಕಡೆಗೂ ಸೂಕ್ಷ್ಮ ಕುಸುರಿ ಕೆಲಸವನ್ನು ಕಾಣಬಹುದು. ಮಹಾಸಾಮಂತಾಧಿಪತಿ ನಾಗದೇವನು ಹನ್ನೊಂದನೆ ಶತಮಾನದಲ್ಲಿ ಕಟ್ಟಿಸಿದನು. ಊರೊಳಗಿರುವ ಮಲ್ಲಿಕಾರ್ಜುನ (ಶಾಸನಗಳಲ್ಲಿ ಅಚಲೇಶ್ವರ ಗುಡಿ) ದೇವಾಲಯ ಜೀರ್ಣೋದ್ಧಾರ ಆಗಬೇಕಾಗಿದೆ. ಈ ಗುಡಿಯಲ್ಲಿ ಗರ್ಭಗುಡಿಯ ಎಡ ಬಲಗಳಲ್ಲಿ ಸುಂದರ ಶಿಲ್ಪಕಲೆಯ ಶಿವ ಪಾರ್ವತಿ ವಿಗ್ರಹ ಮತ್ತು ಅನಂತಶಯನ ವಿಗ್ರಹಗಳು ಏಕಶಿಲೆಯಲ್ಲಿವೆ. ಈ ಶಿಲ್ಪಕಲೆಗಳು ದ್ವಿಕೂಟಾಚಲ ಮಾದರಿಯಲ್ಲಿವೆ. ಈ ದೇವಸ್ಥಾನದ ಹತ್ತಿರ ಶ್ರೀ ಮೈಸೂರು ಮಠದ ಪುರಾತನ ಕಟ್ಟಡ ಮತ್ತು ಶಿಕ್ಷಣ ಸಂಸ್ಥೆಯ ಹೊಸ ಕಟ್ಟಡಗಳಿದ್ದು ನಾಲ್ವತ್ತು ವರ್ಷಗಳ ಹಿಂದೆ ಈ ಗ್ರಾಮೀಣ ಭಾಗದ ಶಿಕ್ಷಣ ಕ್ರಾಂತಿಗಾಗಿ ಬಡಮಕ್ಕಳಿಗಾಗಿ ಪ್ರಸಾದ ನಿಲಯವನ್ನೂ, ಶಿಕ್ಷಣ ಸಂಸ್ಥೆಗಳನ್ನೂ ಪ್ರಾರಂಭಿಸಿದ ಪೂಜ್ಯ ಜಗದ್ಗುರು ಗುರುಮಹಾಂತೇಶ್ವರ ಸ್ವಾಮಿಗಳ ಗದ್ದಿಗೆಯ ಭವ್ಯಮಂದಿರವು ನಿರ್ಮಾಣಗೊಳ್ಳುತ್ತಾ ಇದೆ. ಈ ಸಂಸ್ಥೆಯ ಇಂದಿನ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ವಿಜಯ ಮಹಾಂತ ಶಿವಯೋಗಿಗಳು ಹೊಸ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿರುವರು.
ಈ ಎಲ್ಲ ದೇವಸ್ಥಾನಗಳ ಹತ್ತಿರವೇ ಹೊಸ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡಗಳು, ಶ್ರೀ ಅನ್ನದಾನೇಶ್ವರ ಕಲ್ಯಾಣಮಂಟಪ (ಸಮುದಾಯ ಭವನ)ಮತ್ತು ಚಿದಂಬರೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಈಗ ಈ ಪುರಾತನ ಮಂದಿರಗಳ ಸುತ್ತಲೂ ಸುಂದರ ಪರಿಸರವಿದ್ದು ಪ್ರವಾಸಿಗರನ್ನು ಆಕರ್ಷಿಸುವಂತಾಗಿದೆ.
ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.
ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್, ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.
ಹರಿಹರದ ತುಂಗಭದ್ರೆ ಮತ್ತು ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ದೇವಾಲಯಗಳು, ಸಂತೇಬೆನ್ನೂರಿನ ಪುಷ್ಕರಿಣಿ.ದೊಡ್ಡಬಾತಿ ಪವಿತ್ರವನ. ಕುಂದವಾಡ ಕೆರೆ
--
Please join to this mathssc...@googlegroups.com for your valuable suggestions and your new ideas to the forum.
Please provide your name and school name with phone number below your mail.
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
Are you using pirated Khasagi Tantramsha? Adopt Sarvajanika Tantramsha. For Sarvajanika Tantramsha free download, visit http://public-software.in/FOSS-applications
---
You received this message because you are subscribed to the Google Groups "Maths & Science Secondary School Karnataka Teachers Forum" group.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.
Visit this group at http://groups.google.com/group/mathssciencestf.
For more options, visit https://groups.google.com/groups/opt_out.