http://www.kannadaprabha.com/top-news/ಕೆಎಸ್ಇಇಬಿಗೆ-ಕ್ಯಾಮೆರಾ-ಕಣ್ಗಾವಲು/171023.html
ಕೆಎಸ್ಇಇಬಿಗೆ ಕ್ಯಾಮೆರಾ ಕಣ್ಗಾವಲು
First Published: 03 Feb 2014
02:00:00 AM IST
ಬೆಂಗಳೂರು: ಇನ್ನು ಮುಂದೆ ಕರ್ನಾಟಕ ಪ್ರೌಢ
ಶಿಕ್ಷಣ ಪರೀಕ್ಷಾ ಮಂಡಳಿ(ಕೆಎಸ್ಇಇಬಿ)
ಆವರಣದಲ್ಲಿ
ಯಾರಾದರೂ ಅನುಮಾನಸ್ಪದವಾಗಿ
ಓಡಾಡಿದರೆ, ಅಂಕಪಟ್ಟಿಯಲ್ಲಿ
ಅಕ್ರಮವೆಸಗಲು ಮುಂದಾದರೇ ಸಿಕ್ಕಿ
ಬೀಳುವುದು ಖಚಿತ..!
ಏಕೆಂದರೆ, ಅನುಮಾನಸ್ಪದ ವ್ಯಕ್ತಿಗಳ ಓಡಾಟ
ಹಾಗೂ ಅಂಕಗಳ ಪಟ್ಟಿಗಳಲ್ಲಿ ಅಂಕಗಳ
ಬದಲಾವಣೆಗೆ ಪ್ರಯತ್ನಿಸುವ ವ್ಯಕ್ತಿಗಳಿಗೆ
ಬ್ರೇಕ್ ಹಾಕುವ ಉದ್ದೇಶದಿಂದ ಕರ್ನಾಟಕ
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಕೆಎಸ್ಇಇಬಿ)
ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮುಂದಾಗಿದೆ.
ಕಳೆದವಾರ ಮಂಡಳಿ 8 ಸಿಸಿ ಟಿವಿ
ಅಳವಡಿಸಿಕೊಂಡಿದೆ. ಮಂಡಳಿಯ ಮುಂಭಾಗದ
ಆವರಣ, ನಿರ್ದೇಶಕರ ಕಚೇರಿ ಬಳಿ ಹಾಗೂ ಎಲ್ಲ
ಮಹಡಿ ಮುಖ್ಯ ಭಾಗಗಳಲ್ಲಿ ಸಿಸಿ ಟಿವಿ
ಅಳವಡಿಸಿದೆ. ಮೊದಲಿಗೆ ಸಿಸಿ ಟಿವಿ
ಕಾರ್ಯಾಚರಣೆ ನೋಡಿ ಅವಶ್ಯವಿದ್ದಲ್ಲಿ
ಮತ್ತಷ್ಟು ಕ್ಯಾಮೆರಾ ಅಳವಡಿಸಲು ಮಂಡಳಿ
ಚಿಂತಿಸಿದೆ. ಎಂಟು ಸಿಸಿ ಕ್ಯಾಮೆರಾ ಅಳವಡಿಕೆಗೆ
ವೆಚ್ಚವಾಗಿರುವುದು 1ಲಕ್ಷವಾಗಿರವುದರಿಂದ
ಯಾವುದೇ ಟೆಂಡರ್ ಕರೆದಿಲ್ಲ.
ಅನುಮಾನ್ಪದ ವ್ಯಕ್ತಿಗಳ ಸೆರೆ: ಜನವರಿಯಿಂದ
ಜೂನ್ವರೆಗೆ ಮಂಡಳಿ ಪರೀಕ್ಷಾ ಸಿದ್ಧತೆಯಲ್ಲಿ
ತೊಡಗಿರುತ್ತದೆ. ಪ್ರವೇಶ ಪತ್ರ,
ಪರೀಕ್ಷಾ ಕೇಂದ್ರ, ಮೌಲ್ಯಮಾಪನ ಕೇಂದ್ರ,
ಮೌಲ್ಯಮಾಪನದಿಂದ ಬಂದ ಅಂಕಗಳ
ಕ್ರೋಡೀಕರಣ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ
ವಿತರಣೆವರೆಗೆ ಎಲ್ಲ ಕೆಲಸಗಳ ನಿರ್ವಹಣೆ
ಮಂಡಳಿಯಲ್ಲೇ ನಡೆಯುತ್ತದೆ. ಈ
ಸಂದರ್ಭದಲ್ಲಿ ಕೆಲವು ಅನುಮಾನಸ್ಪದ
ವ್ಯಕ್ತಿಗಳು ಮಂಡಳಿ ಮುಂಭಾಗದಲ್ಲಿ
ಓಡಾಡುತ್ತಾ ತಾವು ಮಂಡಳಿಯ
ಅಧಿಕಾರಿಗಳೆಂದು ಹೇಳಿಕೊಂಡು ಮತ್ತು ಹೆಚ್ಚಿನ
ಅಂಕ ದೊರಕಿಸಿ ಕೊಡುವುದಾಗಿ ಅಮಾಯಕರಿಗೆ
ಬಲೆ ಬೀಸುತ್ತಾರೆ. ಇಂತಹ
ವ್ಯಕ್ತಿಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ
ಸಿಸಿಟಿವಿ ಅಳವಡಿಸಲಾಗಿದೆ ಎನ್ನುತ್ತಾರೆ
ಮಂಡಳಿ ಅಧಿಕಾರಿಗಳು.
ವೀಕ್ಷಣಾ ಕೇಂದ್ರ: ಮಂಡಳಿ ಸುತ್ತಮುತ್ತ
ಅಳವಡಿಸಿರುವ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗುವ
ದೃಶ್ಯಾವಳಿಗಳ ವೀಕ್ಷಣೆಗೆ ಮಂಡಳಿ
ನಿರ್ದೇಶಕರು ಹಾಗೂ ಕಾರ್ಯದರ್ಶಿ ಅವರ
ಕಚೇರಿಯಲ್ಲಿ ಟಿವಿ ಅಳವಡಿಸಲಾಗಿದೆ.
ಅನವ್ಯಶಕವಾಗಿ ಯಾವುದೇ ವ್ಯಕ್ತಿ
ಓಡಾಡುವುದನ್ನು ನೋಡುತ್ತಿರುತ್ತೇವೆ.
ವ್ಯಕ್ತಿ 15 ನಿಮಿಷಕ್ಕಿಂತ
ಹೆಚ್ಚು ಅದೇ ಸ್ಥಳದಲ್ಲೇ ಓಡಾಡುತ್ತಾ ಅನುಮ
ಾಸ್ಪದವಾಗಿ ನಡೆದುಕೊಂಡರೆ ಈ ವ್ಯಕ್ತಿಯ
ವಿರುದ್ಧ ತಕ್ಷಣ ತನಿಖೆ ಪ್ರಾರಂಭಿಸುತ್ತೇವೆ
ಎನ್ನುತ್ತಾರೆ ಕರ್ನಾಟಕ ಪ್ರೌಢಶಿಕ್ಷಣ
ಪರೀಕ್ಷಾ ಮಂಡಳಿ ನಿರ್ದೇಶಕರಾದ ಎ.
ದೇವಪ್ರಕಾಶ್.
ಆಂತರಿಕ ಕೈವಾಡ: ಕೆಲವೊಂದು ಬಾರಿ
ಮೌಲ್ಯಮಾಪನ ಮಾಡಿದ ಅಂಕಗಳ
ಕಂಪ್ಯೂಟೀಕರಣ
ಮಂಡಳಿಯಲ್ಲೇ ಆಗುವುದರಿಂದ ಆ
ಸಂದರ್ಭದಲ್ಲಿ ಕೆಲವೊಮ್ಮೆ ಆಂತರಿಕ
ಅಧಿಕಾರಿಗಳು ಹೆಚ್ಚಿನ
ಅಂಕಗಳನ್ನು ಹಾಕಿಸಿಕೊಳ್ಳಲು ಮುಂದಾಗುತ್ತಾ
ರೆ. ಆ ವಿಷಯ ತಿಳಿಯಲು ಕಂಪ್ಯೂಟರ್
ವಿಭಾಗದಲ್ಲಿಯೂ ಸಿಸಿ
ಕ್ಯಾಮೆರಾ ಅಳವಡಿಸಲಾಗಿದೆ. ಅಂಕಗಳ
ಬದಲಾವಣೆಗೆ ಅಧಿಕಾರಿಗಳು ಕೈ ಹಾಕಿದರೆ ಸಿಕ್ಕಿ
ಬೀಳುವುದು ಗ್ಯಾರಂಟಿ ಎನ್ನುತ್ತಾರೆ
ಮಂಡಳಿಯ ಅಧಿಕಾರಿಗಳು.
ನಾವು ಅನುಮಾಸ್ಪದ ವ್ಯಕ್ತಿಗಳ ವಿಚಾರಣೆ
ಮಾಡಲು ಸಿಸಿ ಟಿವಿ
ಕ್ಯಾಮೆರಾ ಅಳವಡಿಸಿದ್ದೇವೆ.
ಅವಶ್ಯವಿದ್ದಲ್ಲಿ
ಮತ್ತಷ್ಟು ಕ್ಯಾಮೆರಾ ಅಳವಡಿಸುತ್ತೇವೆ.
ಟಿ ಎ. ದೇವ ಪ್ರಕಾಶ್, ನಿರ್ದೇಶಕರು, ಕರ್ನಾಟಕ
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
Hareeshkumar K
GHS Huskuru
Malavalli TQ
Mandya DT 571475
Ph.9880328224