ಸಡಗರ ಸಂಭ್ರಮ ತುಂಬಿತ್ತು..
ಮಾಡಿದ ಅಡಿಗೆ ಒಂದು ಅನ್ನದ ಕಾಳು ಸಹಿತ ಮಿಗದ ಹಾಗೆ ಖಾಲಿಯಾಗಿತ್ತು
ಬಂಧು ಬಾಂಧವರು ಬಸ್ಸಿನಲ್ಲಿ ಕೂರಲು ಸಿದ್ಧವಾಗುತ್ತಿದ್ದರು
ಅಪ್ಪನ ಕಣ್ಣಲ್ಲಿ ಏನೋ ಒಂದು ರೀತಿ ಸಡಗರ
ಹಾಡು ಸಂಗೀತ ಅಂತ್ಯಾಕ್ಷರಿ ಎಲ್ಲವೂ ಸರಾಗವಾಗಿ ಸಾಗಿತ್ತು..
ಮಧ್ಯೆ ಕಾಫೀಗೆ ನಿಲ್ಲಿಸಿದಾಗ ಕೂಡ ಆ ಸಂಭ್ರಮ ಸಾಗಿತ್ತು
ನಮ್ಮ ಮನೆಯಲ್ಲಿ ನಡೆದ ಅನೇಕ ಸುಂದರ ಸಮಾರಂಭಗಳಲ್ಲಿ ಇದೂ ಕೂಡ ಒಂದು
ಚಿಕಮಗಳೂರಿನ ರಂಗಣ್ಣ ಮದುವೆ ಮಂಟಪದ ಮುಂದೆ ನಿಂತಾಗ ಒಮ್ಮೆ ನನಗೆ ಆಶ್ಚರ್ಯ
ಅರೆ ಇದೇನೂ ಮದುವೆ ಮನೆಯೋ ಅಥವಾ ಹಳ್ಳಿಯ ಭವ್ಯವಾದ ತೊಟ್ಟಿ ಮನೆಯೋ ಎಂದು
ಯಾಕೆಂದರೆ ಹಳ್ಳಿಯ ವಾತಾವರಣ ಮತ್ತು ನಗರದ ಸಿರಿತನ ಎರಡೂ ತುಂಬಿದ್ದ ಮದುವೆ ಛತ್ರ ಅದಾಗಿತ್ತು
ಅಲ್ಲಿಂದ ಮೂರು ದಿನ ಹೇಗೆ ಕಳೆಯಿತೂ ಅರಿವಿಲ್ಲ..
ಗಡಿಯಾರದ ಮುಳ್ಳು ಚಕ ಚಕ ಎಂದು ಮೂರು ದಿನ ದಾಟಿತ್ತು..
ಹೌದು ಹೌದು ಅಣ್ಣನ ಬಾಳಲ್ಲಿ ಅತ್ತಿಗೆ ಕಾಲಿಟ್ಟ ಮಧುರ ಕ್ಷಣ ಅದಾಗಿತ್ತು.
ಇದು ನೆಡೆದು ೧೮ ವರ್ಷಗಳು ದಾಟಿವೆ.. .. ಆದರೂ ಇದು ಇಂದೋ ನಿನ್ನೆಯೋ ನಡೆದ ಹಾಗಿದೆ..
ಇಂದಿಗೂ ಮದುವೆ, ಚಿಕಮಗಳೂರು, ರಂಗಣ್ಣ ಮದುವೆ ಛತ್ರ ಎಂದರೆ ಹಾಗೆ ಆ ಸಮಾರಂಭ ಕಣ್ಣ ಮುಂದೆ ಬರುತ್ತದೆ
ಅಣ್ಣ ಅತ್ತಿಗೆ ವಿವಾಹ ದಿನದ ಸುಂದರ ಶುಭಾಶಯಗಳು..
With regards
Srikanth Manjunath
Enjoy the sharks in your life!!!