ಹೊಸನೀರು ಬಂದಾಗ ಹಳೆ ನೀರು ಅವಕಾಶ ಮಾಡಿಕೊಡುತ್ತದೆ
ಹಳೆನೀರು ಹೊಸತನ ಕಂಡಾಗ ಹೊಸ ನೀರು ಹಳೆತನಕ್ಕೆ ದಾರಿ ಕೊಡುತ್ತದೆ
ಹೀಗೆ ಹೊಸದು ಹಳೆಯದು ಮಿಶ್ರಣವೆ ಈ ನಮ್ಮ ಜೀವನ
ಶ್ರೀಕಾಂತ .. "ಸ್ಪೆಷಲ್ ಕ್ಲಾಸ್ ಅಂದ್ರೆ.. ಕಾಲೇಜ್ ಮುಗಿಸಿ ಒಂದು ಸಣ್ಣ ರೌಂಡ್ ಹೊಡೆದು ಸಿನಿಮಾ ನೋಡಿಕೊಂಡು ಬರಬೇಕು ಕಣೋ" ಎಂದು ಹೇಳಿದಾಗ ಅರೆ ಇದು ನಮ್ಮ ಚಿಕ್ಕಮ್ಮನ ಹೇಳಿದ ಮಾತು ಎಂದು ಒಂದು ಸಾರಿ ಗಾಬರಿ ಆಯಿತು.. ಆದರೆ ಆಮೇಲೆ ಅರಿವಾಯಿತು..
ಹೌದು ಹೊಸತನಕ್ಕೆ ಹಳೆ ತಲೆಮಾರು ಜೊತೆಯಲ್ಲಿ ನಿಂತಾಗ ಎರಡು ತಲೆಮಾರಿಗೆ ಸಿಗುವ ಆನಂದವೇ ಆನಂದ ಎಂದು..
ನಮ್ಮ ಉಷಾ ಚಿಕ್ಕಮ್ಮ ಹಾಗೆ.. ಹೊಸದಕ್ಕೂ ಸೈ ಹಳೆಯದಕ್ಕೂ ಸೈ..
ಪದಬಂಧ ಬಿಡಿಸೋಕು ಸೈ.. cryptic puzzle ಬಿಡಿಸೋದು ಸೈ
ಇಂಥಹ ಸುಂದರ ವ್ಯಕ್ತಿತ್ವದ ಚಿಕ್ಕಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು