ಹುಟ್ಟು ಹಬ್ಬದ ಶುಭಾಶಯಗಳು ನಾಗರಾಜ ಚಿಕ್ಕಪ್ಪ... !!!

0 views
Skip to first unread message

Srikanth Manjunath

unread,
Jun 19, 2015, 9:55:32 PM6/19/15
to koravangala
ಇಡಿ ಮಹಾಭಾರತದಲ್ಲಿ ಅರ್ಜುನನಿಗೆ ಸಂದೇಹ ಬಂದಾಗಲೆಲ್ಲಾ ಶ್ರೀ ಕೃಷ್ಣ ಪರಮಾತ್ಮ ಅವನ ಸಂದೇಹವನ್ನು ಬಗೆ ಹರಿಸುತ್ತಿದ್ದ.. ಆಗ ದ್ವಾಪರ ಯುಗದ ಅಂತ್ಯದಲ್ಲಿ ಅರ್ಜುನನಿಗೆ ಸಂದೇಹ ಬಂತು.. 

"ಪರಮಾತ್ಮ.. ನನ್ನ ಮತ್ತು ನನ್ನಂತಹ ಇತರರ ಅನೇಕ ಸಂದೇಹಗಳನ್ನು ನೀ ಬಗೆ ಹರಿಸುತ್ತೀಯೇ.. ಆದರೆ ಮುಂದಿನ ಯುಗಯುಗಗಳಲ್ಲಿ ಹೇಗೆ ಸಾಧ್ಯ.. "
ನಗುತ್ತಾ ಶ್ರೀ ಕೃಷ್ಣ.. ಹೇಳಿದ ಪಾರ್ಥ 
೧) ನಾನು ನಿನಗೆ ಹೇಳಿದ ಭಗವದ್ಗೀತೆಯಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ 
೨) ಕಗ್ಗದ ಗುರುಗಳು ಡಿವಿಜಿ ಬರೆದ ಬಡವನ್ಗೀತೆ (ಮಂಕುತಿಮ್ಮನ ಕಗ್ಗ)ದಲ್ಲಿ ಉತ್ತರವಿದೆ 
೩) ನನ್ನ ಕಡೆಯಿಂದ ಇನ್ನೊಂದು ವರ ಎಂದರೆ "ಕೋರವಂಗಲದ ನಾಗರಾಜ.." 

ಅರ್ಜುನನಿಗೆ ಆಶ್ಚರ್ಯ.. "ವಾಸುದೇವ.. ಯಾರು ಇದು ನಾಗರಾಜ ಯಾವುದು ಕೋರಮಂಗಲ" ಎಂದಾಗ 

ವಾಸುದೇವ "ಕರುನಾಡಿನ ಹಾಸನದ ಕೋರವಂಗಲ ಗ್ರಾಮದ ರಂಗಸ್ವಾಮಿ-ಸುಬ್ಬನರಸಮ್ಮ ಸಂಜಾತ ನಾಗರಾಜ.. ಈತನ ಬಳಿ ಎಂತಹುದೇ ಸಮಸ್ಯೆ, ವಿಷಯ ತೆಗೆದುಕೊಂಡು ಹೋಗಿ.. ಅದಕ್ಕೆ ಸರಿಯಾದ ತೀರ್ಪು, ಸರಿಯಾದ ತಾರ್ಕಿಕ ಸಲಹೆ ಕೊಡುವ ಶಕ್ತಿ ನಾ ದಯಪಾಲಿಸಿದ್ದೇನೆ.. "

ನಾಗರಾಜ ಚಿಕ್ಕಪ್ಪ.. ನಿಮ್ಮ ಸಲಹೆಗಳು, ವಿಷಯವನ್ನು ಮಥಿಸುವ ನಿಮ್ಮ ಕಲಾ ಕೌಶಲತೆ, ಎಲ್ಲವನ್ನು ಹಗುರಾಗಿ ನೋಡಿ ಅದಕ್ಕೆ ತರ್ಕಬದ್ಧ ನ್ಯಾಯ ಒದಗಿಸುವ ನಿಮ್ಮ ಮಾತುಗಳು ನಮಗೆ ಎಂದಿಗೂ ಅಚ್ಚು ಮೆಚ್ಚು.. 

ಇಂದು ನಿಮ್ಮ ಜನುಮದಿನ.. ಇಂಥಹ ಶುಭಘಳಿಗೆಯಲ್ಲಿ ಶುಭ ಕೋರುವುದು ನಮಗೆ ಸಂತಸದಾಯಕ ವಿಷಯ.. 

ಹುಟ್ಟು ಹಬ್ಬದ ಶುಭಾಶಯಗಳು ಚಿಕ್ಕಪ್ಪ... !!!


With regards
Srikanth Manjunath
Enjoy the sharks in your life!!!

Reply all
Reply to author
Forward
0 new messages