ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತೆ
ಕೆಲವರು ಕಲೆಯನ್ನೇ ಕೈ ಬೀಸಿ ಕರೆಯುತ್ತಾರೆ
ನಂತರ ತಮಗೆ ಬೇಕಾದ ಕಲೆಯನ್ನು ಕಲೆಯಿಂದ ಪಡೆದುಕೊಳ್ಳುತ್ತಾರೆ
ಅಂಥಹ ಕಲಾ ಪುಣ್ಯವಂತರು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ
ಒಬ್ಬರು ನಾ ದೇವಿ ಎಂದೇ ಕರೆಯುವ ಆಶಾ ಜ್ಞಾನೇಶ
ಕಲೆಯನ್ನು ನೋಡಬೇಕೆಂದರೆ ವಸ್ತು ಸಂಗ್ರಹಾಲಯ.. ಪ್ರದರ್ಶನ ಇಲ್ಲಿಗೆ ಹೋಗೋದೇ ಬೇಡ
ಇವರ ಮನೆಯ ಬಾಗಿಲಿಗೆ ಹೋಗಿ ನಿಂತರೆ ನಿಮಗೆ ಸ್ವಾಗತ ಕೋರುವುದು ಚಿತ್ತಾರದ ರಂಗವಲ್ಲಿ
ಆ ಕಲ್ಲಿನ ಪುಡಿಯಲ್ಲಿ ಗೆರೆಗಳ ಬ್ರಹ್ಮಾಂಡವನ್ನೇ ಸೃಷ್ಟಿಸುವ ಕಲೆ ಕರಗತವಾಗಿದೆ
ಹುಟ್ಟು ಹಬ್ಬದ ಶುಭಾಶಯಗಳು ದೇವಿ..
ಇನ್ನೊಬ್ಬ ನನ್ನ ಅಣ್ಣನಮಗ ..
ರವಿ ವರ್ಮನ ಕುಂಚದ ಕಲೆಯೋ ಬಲೆಯೋ ಸಾಕಾರವೋ ಎನ್ನುವಂತೆ.. ಇವನ ಕಣ್ಣಿಂದ ಕೈಯಿಂದ
ಅರಳದ ಚಿತ್ರಗಳಿಲ್ಲ.. ಏಕ ಸಂಧಿಗ್ರಾಹಿ ಇವನು.. ವಯಸ್ಸು ಹತ್ತು ದಾಟಿಲ್ಲ.. ಆದರೆ ಇವನು ಬರೆದ ಚಿತ್ರಗಳ ಸಂಖ್ಯೆ ಸಹಸ್ರ ದಾಟಿದೆ..
ನಮ್ಮ ವಂಶದ ಕಲಾಕಾರ್ ಇವನು.. ಹೆಸರು ವಿಷ್ಣು..
ದಶಾವತಾರ ಎತ್ತಿದಂತೆ ಇವನು ಬರೆಯುವ ಚಿತ್ರಗಳಲ್ಲಿ ದೇವರೇ ಓಡಿ ಬಂದು ನೆಲೆಸುತ್ತಾನೆ..
ಇವನ ಜೊತೆಯಲ್ಲಿ ನಾವಿರುವುದು ನಮ್ಮ ಪುಣ್ಯ..
ಹುಟ್ಟು ಹಬ್ಬದ ಶುಭಾಶಯಗಳು ವಿಷ್ಣು..
With regards
Srikanth Manjunath
Enjoy the sharks in your life!!!