ಹಾಸನದಲ್ಲಿ ಎಲ್ಲೇ ಹೋದರು...ಯಾರಾದರು ನೀನು ಯಾರು ಎಂದು ಕೇಳಿದರೆ ಹೇಳುತಿದ್ದದ್ದು
"ನಾನು ಪತಿ ಮೊಮ್ಮಗಳು"..
ಆ ಪುಟಾಣಿ ವಯಸ್ಸಿನಲ್ಲಿದ್ದಾಗಲೇ ಅಷ್ಟು ಧೈರ್ಯವಾಗಿ ಮಾತಾಡುತಿದ್ದಳು...!
ಕಣದ ಲಂಗ ಹಾಕು..."ಉಪಾದ್ರು ಮನೆಗೆ ಊಟಕ್ಕೆ ಹೋಗೋಣ...!"
ಅವರು ಬರುತ್ತಾರೆ ಎಂದು ಹೆದರಿಸಿದಾಗ ಹೋಗು ಮೂಲೆಯಲ್ಲಿ ನಿಂತು ."ಮಂಜಿ ಮಂಜಿ ಮಂಜಿ"ಮೂಲೆಯಲ್ಲಿ ನಿಂತು ಜಪಮಾಡುತಿದ್ದಳು!
ಕಾಲು ಚಾಚಿಕೊಂಡು ಮುಖವನ್ನು ಕುಂಬಳಕಾಯಿ ತರಹ ಮಾಡಿಕೊಂಡು ಇರುವ ಚಿತ್ರ...ಹಾಸನದಲ್ಲಿ ಎಲ್ಲೇ ಹೋದರು ನೆನಪಿಸಿಕೊಳ್ಳುತ್ತಾರೆ.
"ಇನ್ನೂ ಬೇಕು ಇನ್ನೂ ಬೇಕು" ಎನ್ನುತ್ತಿದ್ದ ಆ ಮಾತುಗಳನ್ನು ಮರೆಯಲಾಗದ ನೆಂಟರಿಷ್ಟರು ಅನೇಕ....
ಇಂತಹ ಧೈರ್ಯ ತುಂಬಿದ ಸಾಹಸಿ..ನಮ್ಮ ಅಕ್ಕನಾಗಿರುವುದು ನಾವು ಪಡೆದಕೊಂಡು ಬಂದ ಭಾಗ್ಯ
ನಲವತ್ತೊಂಭತ್ತು ವಸಂತಗಳನ್ನು ಮೆಟ್ಟಿ ..ಸುವರ್ಣ ಸಂಭ್ರಮದ ವಸಂತಕ್ಕೆ ಕಾಲಿಟ್ಟಿರುವ ಈ ಶುಭ ಘಳಿಗೆಯಲ್ಲಿ ನಮಗಿರುವ ಒಬ್ಬಳೇ ಅಕ್ಕಳಿಗೆ ಹುಟ್ಟು ಹಬ್ಬದ ಶುಭಾಶಯಗಳು...
ಮಂಜು-ವಿಶಾಲಾಕ್ಷಿ ಅನುಗ್ರಹ ಕುಟುಂಬ