ಜುಲೈ ಮಾಸದ ದಿನಸೂಚಿ ಮುಖಕ್ಕೆ ರಾಚುತ್ತಿತ್ತು
ನಾನು ಆಷಾಡ ಮಾಸದ ಗಾಳಿಗೆ ಎಂದು ಸುಮ್ಮನಿದ್ದೆ
ಬಿಡುತ್ತಲೇ ಇಲ್ಲ.. ದಿನವೂ, ಪ್ರತಿ ಕ್ಷಣವೂ ಪಟ ಪಟ ಹೊಡೆದುಕೊಳ್ಳುತ್ತಲೇ ಇತ್ತು..
ಏನಾಯಿತು ನನ್ನ ದಿನಸೂಚಿಗೆ ಎಂದು ನಿಧಾನವಾಗಿ ಇಂದು ಮುಂಜಾನೆ ಕಣ್ಣು ತೆರೆದು ನೋಡಿದೆ..
ಅರೆ ಅರೆ ಎಂಥಹ ಪ್ರಮಾದವಾಯಿತು..
ಇರಲಿ ಪ್ರತಿ ತಪ್ಪಿಗೂ ಪ್ರಾಯಶ್ಚಿತ್ತ ಇದ್ದೆ ಇದೆ.. ತಪ್ಪು ಕಾಣಿಕೆ ಅಂದ್ರೆ ಮೂವತ್ತೆರೆಡು ಹಲ್ಲುಗಳನ್ನು ಬಿಡುವುದು..
ನಾಲ್ಕೈದು ಬೆರಳುಗಳಿಂದ ನೀಟಾದ ತಲೆಗೂದಲನ್ನು ಕೆರೆದುಕೊಳ್ಳುವುದು.. ಇದೆರೆಡು ಅದೇ ಪ್ರಾಯಶ್ಚಿತ್ತ..
ಜುಲೈ ೧೧ : ನಮ್ಮ ಕೋರವಂಗಲದ ಸುರಸುಂದರಾಂಗ, ಹಿತ ಮಿತ ಭಾಷಿ, ಸಹನಾಶೀಲ ನರೇಂದ್ರನ ಹುಟ್ಟು ಹಬ್ಬ.. ದೇಶದ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿರುವ ಇವನ ಪ್ರತಿ ಸಂದೇಶಗಳೂ ಅದರ ಸುತ್ತಲೇ ಇರುತ್ತವೆ. ಎರಡು ಮುದ್ದು ಪುಟಾಣಿಗಳ ಮುದ್ದಿನ ಅಪ್ಪ.. ಸುಂದರ ನಗೆ ಹೊತ್ತ ಮಡದಿಯ ಪತಿರಾಯ.. ನರೇಂದ್ರ ತಡವಾಗಿ ಶುಭಾಷಯ ತಲುಪಿಸುತ್ತಿದ್ದೇನೆ
ಜುಲೈ ೧೮: ದೊಡ್ಡಪ್ಪನ ಸೊಸೆ.. ಪೂರ್ಣ ಚಂದ್ರನ ಮನದನ್ನೆ.. ಸುಮುಖನ ಜನುಮದಾತೆ.. ಹಸನುಮುಖಿ.. ವೀಣಾ ಅತ್ತಿಗೆ ನಿಮಗೆ ಸುಂದರ ಶುಭಾಶಯಗಳು..
ಜುಲೈ ೨೨: ಇವಳು ನಮ್ಮೆತ್ತರಕ್ಕೆ, ನಮ್ಮಗಲಕ್ಕೆ ಬೆಳೆದಿದ್ದರೂ ಇನ್ನೂ ಇವಳು ನಮಗೆಲ್ಲ ಪುಟ್ಟಿಯೇ.. ದೊಡ್ಡಪ್ಪನ ಮುದ್ದಿನ ಮಗಳು, ದೊಡ್ಡಮ್ಮನ ಕಾರ್ಬನ್ ಕಾಪಿ.. ಪುಟ್ಟಿ ಅಲಿಯಾಸ್ ನಾಗವೇಣಿ ಹುಟ್ಟು ಹಬ್ಬದ ಶುಭಾಶಯಗಳು..
With regards
Srikanth Manjunath
Enjoy the sharks in your life!!!