ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಎಂದರು ಮಲ್ಲಿಗೆ ಕವಿಗಳು
ಜ್ಯೋತಿಯು ನನ್ನದು ಮಾರುತ ನನ್ನದು ಬೆಳಗುತಿರಲಿ ಬದುಕಿ ಎಂದರು ಲೋಕ ಕಂಡ ಕವಿಗಳು
ಇರುವುದನ್ನು ಸರಳವಾಗಿ ಹೇಳುವವರು ಒಂದು ಕಡೆ
ಸರಳವಾದುದ್ದನ್ನು ಇನ್ನಷ್ಟು ಸರಳವಾಗಿ ಹೇಳುವವರು ಇನ್ನೊಂದು ಕಡೆ
ಇಂಥಹವರಲ್ಲಿ ಚಿಕ್ಕಪ್ಪ ಕೂಡ ಒಬ್ಬರು
ಕ್ಲಿಷ್ಠ ಅನ್ನಿಸಿದ್ದನ್ನ ಬಿಡಿ ಬಿಡಿಯಾಗಿ ವಿವರವಾಗಿ ಹೇಳುವ ಇವರ ಮಾತುಗಳು ತರ್ಕ ಬದ್ಧ
ಅವರ ಇಷ್ಟವಾದ ಸಂಖ್ಯೆ ಒಂಭತ್ತು, ಜೀವನದುದ್ದಕ್ಕೂ
ಒಂಭತ್ತರ ನಂಟು ಹೊಂದಿರುವ ಇವರ ಜನುಮದ ದಿನ ಕೂಡ ಒಂಭತ್ತನೇ ತಾರೀಕು ವಿಶೇಷ
ಹುಟ್ಟು ಹಬ್ಬದ ಶುಭಾಶಯಗಳು ಚಿಕ್ಕಪ್ಪ